ಮಂಗಳವಾರ, ಏಪ್ರಿಲ್ 30, 2013

‘ಜಿ.ಡಿ.ಪಿ’ ಹೆಚ್ಚಿಸಿದ ಯು.ಪಿ.ಎ : ಮಹೇಶ್ ಠಾಕೂರ್ ವಾಗ್ದಾಳಿ

mahesh thakoorಉಡುಪಿ : ಅಂದಿನ ವಿತ್ತ ಸಚಿವರಾಗಿದ್ದ ಪ್ರಣಬ್ ಮುಖರ್ಜಿ ಅವರು ಇನ್ನು ಕೆಲದಿನಗಳಲ್ಲಿ ದೇಶದ ಜಿಡಿಪಿ ಏರಲಿದೆ ಎಂದು ಹೇಳಿದ್ದರು. ಅದನ್ನು ಕಾಂಗ್ರೆಸ್ ನೇತೃತ್ವದ ಯುಪಿ‌ಎ ಸರಕಾರ ಹೇಗೆ ಅರ್ಥ ಮಾಡಿಕೊಂಡಿತೋ ತಿಳಿದಿಲ್ಲ. ಸತತವಾಗಿ ಗ್ಯಾಸ್ (ಜಿ) ಡೀಸೆಲ್ (ಡಿ) ಹಾಗೂ ಪೆಟ್ರೋಲ್ (ಪಿ) ಬೆಲೆ ಏರುತ್ತಲೇ ಹೋಗಿದ್ದು, ಅನಿಲ ಜಾಡಿಗೂ ಮಿತಿ ಹೇರಿದ ಯುಪಿ‌ಎ ಸರಕಾರದ ಸರ್ವತೋಮುಖ ವಿನಾಶಕಾರಿ ನೀತಿಯಿಂದಾಗಿ ರೋಸಿ ಹೋದ ಕರ್ನಾಟಕ ಹಾಗೂ ದೇಶದ ಜನರು ಎಲ್ಲೆಡೆ ಕಾಂಗ್ರೆಸ್‌ಗೆ ಪಾಠ ಕಲಿಸಲು ಅವಕಾಶ ನಿರೀಕ್ಷಿಸುತ್ತಿದ್ದಾರೆ. ಕರ್ನಾಟಕದ ವಿಧಾನಸಭಾ ಚುನಾವಣೆ ಒಂದು ಸುವರ್ಣಾವಕಾಶವಾಗಿದ್ದು, ಸರ್ವರಂಗಗಳಲ್ಲಿ ವಿಫಲವಾದ ಕಾಂಗ್ರೆಸ್ ಸೋಲಿಸಲು ಮತದಾರರು ತುದಿಗಾಲಿನಲ್ಲಿ ನಿಂತಿದ್ದಾರೆ ಎಂದು ಉಡುಪಿ ನಗರಸಭಾ ಸದಸ್ಯ ಮಹೇಶ್ ಠಾಕೂರ್ ಹೇಳಿದರು.
ಮಣಿಪಾಲದ ಟೈಗರ್ ಸರ್ಕಲ್‌ನಲ್ಲಿ ಜರುಗಿದ ಉಡುಪಿ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿ       ಬಿ. ಸುಧಾಕರ ಶೆಟ್ಟಿ ಅವರ ಪರವಾಗಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಹೇಶ್ ಠಾಕೂರ್, ಚುನಾವಣೆಯ ವರೆಗೂ ದಾನ ಮಾಡುವವರನ್ನು ಕೈ ಬಿಟ್ಟು ಸರಕಾರದ ಅನುದಾನ ತಂದು ಉಡುಪಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಂಕಲ್ಪ ಮಾಡಿರುವ ಬಿ.ಜೆ.ಪಿ. ಅಭ್ಯರ್ಥಿ ಬಿ. ಸುಧಾಕರ ಶೆಟ್ಟಿ ಅವರನ್ನು ಬೆಂಬಲಿಸಿ, ಬಿ.ಜೆ.ಪಿ.ಯ ಅಭಿವೃದ್ಧಿ ರಾಜಕಾರಣಕ್ಕೆ ಮರುಸಮರ್ಥನೆ ನೀಡಿ ಎಂದು ವಿನಂತಿಸಿದರು.
ಸಭೆಯಲ್ಲಿ ಶಾಸಕ ರಘುಪತಿ ಭಟ್, ಬಿ.ಜೆ.ಪಿ. ಅಭ್ಯರ್ಥಿ ಬಿ. ಸುಧಾಕರ ಶೆಟ್ಟಿ, ಮಣಿಪಾಲದ ನಗರಸಭಾ ಸದಸ್ಯ ನರಸಿಂಹ ನಾಯಕ್, ಮಣಿಪಾಲ ಸ್ಥಾನೀಯ ಸಮಿತಿ ಅಧ್ಯಕ್ಷ ಪ್ರೋ. ದಯಾನಂದ ನಾಯಕ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್, ಜಿಲ್ಲಾ ಬಿ.ಜೆ.ಪಿ. ಪ್ರಧಾನ ಕಾರ್ಯದರ್ಶಿ ಶ್ಯಾಮಲಾ ಎಸ್. ಕುಂದರ್, ವಾಗ್ಮಿ ವಾಸುದೇವ ಭಟ್ ಪೆರಂಪಳ್ಳಿ, ನಗರಸಭಾ ಮಾಜಿ ಅಧ್ಯಕ್ಷರುಗಳಾದ ದಿನಕರ ಶೆಟ್ಟಿ ಹೆರ್ಗ, ಕಿರಣ್‌ಕುಮಾರ್ ಕೆ. ರಾಘವೇಂದ್ರ ಕಿಣಿ ಮತ್ತಿತರರು ಉಪಸ್ಥಿತರಿದ್ದರು.

ಶಾಸಕ ಕೆ. ರಘುಪತಿ ಭಟ್ ಹಾಗೂ ಅಭ್ಯರ್ಥಿ ಬಿ. ಸುಧಾಕರ ಶೆಟ್ಟಿಕೆಂಜೂರು-ಕಳ್ತೂರು ಎಸ್. ಸಿ. ಕಾಲನಿಗೆ ಭೇಟಿ ನೀಡಿ ಮತಯಾಚನೆ

Kenjoor SC Colony"ಶಾಸಕ ಕೆ. ರಘುಪತಿ ಭಟ್ ಹಾಗೂ ಅಭ್ಯರ್ಥಿ ಬಿ. ಸುಧಾಕರ ಶೆಟ್ಟಿ ೩೮ನೇ ಕಳ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಂಜೂರು-ಕಳ್ತೂರು ಎಸ್. ಸಿ. ಕಾಲನಿಗೆ ಭೇಟಿ ನೀಡಿ ಮತಯಾಚನೆ ನಡೆಸಿದರು. ಅವರೊಂದಿಗೆ ಪಕ್ಷದ ಮುಖಂಡರಾದ ಹರಿಮಕ್ಕಿ ರತ್ನಾಕರ ಶೆಟ್ಟಿ, ಕೃಷ್ಣ ಶೆಟ್ಟಿ, ಬಾಬು ಪೂಜಾರಿ, ವಿಜಯ ಹೆಗ್ಡೆ, ಆದರ್ಶ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು."

ಬಿ.ಜೆ.ಪಿ ಮೀನುಗಾರರ ಬಂಧು: ಯಶಪಾಲ್ ಸುವರ್ಣ


 yashpal
ಉಡುಪಿ : ‘ಈ ಪರಿಯ ಸೊಬಗು ಇನ್ನಾವ ದೇವರಲಿ ಕಾಣೆ’ ಎಂದು ದಾಸರು ಕೃಷ್ಣನನ್ನು ಕುರಿತು ಹಾಡಿದ್ದಾರೆ, ಈ ಪರಿಯ ನೆರವು ಇನ್ನಾವ ಆಡಳಿತದಲಿ ಕಾಣೆ ಎಂದು ಕರಾವಳಿಯ ಮೀನುಗಾರರು ಬಿ.ಜೆ.ಪಿ.ಯ ಆಡಳಿತವನ್ನು ಮನಃ ಪೂರ್ತಿ ಕೊಂಡಾಡುತ್ತಿದ್ದಾರೆ. ೨೦೦೫ ರವರೆಗೆ ೫೫,೦೦೦ ಕಿ.ಲೋ ಲೀಟರ್ ಇದ್ದ ಡೀಸೆಲ್ ಸಬ್ಸಿಡಿ ಈಗ ೧,೩೦,೦೦೦ ಕಿ.ಲೋ. ಲೀಟರ್‌ಗಳಿಗೇರಿದೆ. ೨೫,೦೦೦ ಇದ್ದ ಮತ್ಸ್ಯಾಶ್ರಯ ಅನುದಾನ ಈಗ ೬೦,೦೦೦ ರೂ. ಗಳಿಗೆ ಏರಿದೆ. ಹಾಗೆಯೇ ಉಡುಪಿ ವಿಧಾನಸಭಾ ಕ್ಷೇತ್ರದ ೭೦೦ ಮೀನುಗಾರ ಕುಟುಂಬಗಳು ಮತ್ಸ್ಯಾಶ್ರಯ ಅನುದಾನದ ಫಲಾನುಭವಿಗಳಾಗಿವೆ. ಮತ್ಸ್ಯೋದ್ಯಮದಲ್ಲಿ ತೊಡಗಿರುವ ಎಲ್ಲರಿಗೂ ಮೀನುಗಾರರ ಬಂಧು ಬಿ.ಜೆ.ಪಿ. ಎಂಬ ವಾಸ್ತವ ತಿಳಿದಿದೆ ಎಂದು ದಕ್ಷಿಣ ಕನ್ನಡ ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್‌ನ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಅಭಿಪ್ರಾಯಪಟ್ಟರು.
ಉಡುಪಿಯ ಸಿಟಿ ಬಸ್‌ಸ್ಟ್ಯಾಂಡ್‌ನಲ್ಲಿ ಜರುಗಿದ ಉಡುಪಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬಿ. ಸುಧಾಕರ ಶೆಟ್ಟಿ ಅವರ ಪರವಾಗಿ ಮತಯಾಚನಾ ಸಭೆಯಲ್ಲಿ ಮಾತನಾಡಿದ ಯಶಪಾಲ್ ಸುವರ್ಣ, ಮೀನುಗಾರರ ಬಹುಕಾಲದ ಬೇಡಿಕೆ ಈಡೇರಿಸಿದ ಬಿ.ಜೆ.ಪಿ.ಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಿ. ಸುಧಾಕರ ಶೆಟ್ಟಿ ಅವರನ್ನು ಪ್ರಚಂಡ ಬಹುಮತದಿಂದ ಆರಿಸುವಂತೆ ಮತದಾರರಲ್ಲಿ ಕೇಳಿಕೊಂಡರು.
ಶಾಸಕ ರಘುಪತಿ ಭಟ್, ಬಿ.ಜೆ.ಪಿ. ಅಭ್ಯರ್ಥಿ ಬಿ. ಸುಧಾಕರ ಶೆಟ್ಟಿ, ಕೆ ರಾಘವೇಂದ್ರ ಕಿಣಿ, ವಾಗ್ಮಿ ವಾಸುದೇವ ಭಟ್ ಪೆರಂಪಳ್ಳಿ, ಕಿರಣ್ ಕುಮಾರ್ ಮೊದಲಾದವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಶಿರಿಬೀಡು ವಾರ್ಡಿನ ನಗರಸಭಾ ಸದಸ್ಯರಾದ ಡಾ. ಎಂ. ಆರ್. ಪೈ, ದಿನಕರ ಶೆಟ್ಟಿ ಹೆರ್ಗ, ಶಿರಿಬೀಡು ಬಿ.ಜೆ.ಪಿ. ಸ್ಥಾನೀಯ ಸಮಿತಿ ಅಧ್ಯಕ್ಷ ಟಿ. ಜಿ. ಹೆಗ್ಡೆ, ಬಿ.ಜೆ.ಪಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ರವಿ ಅಮೀನ್, ಜಿಲ್ಲಾ ಬಿ.ಜೆ.ಪಿ. ಪ್ರಧಾನ ಕಾರ್ಯದರ್ಶಿ ಶ್ಯಾಮಲಾ ಎಸ್. ಕುಂದರ್, ವಿಠಲ ಶೆಟ್ಟಿ ಉಪಸ್ಥಿತರಿದ್ದರು.

ಕೊಕ್ಕರ್ಣೆಯ ಪ್ರಮುಖ ಬೀದಿಗಳಲ್ಲಿ ಶಾಸಕ ಕೆ. ರಘುಪತಿ ಭಟ್ ಅವರ ಬಿರುಸಿನ ಪ್ರಚಾರ

kokkarne2"ಕೊಕ್ಕರ್ಣೆ ಗ್ರಾಮ ಪಂಚಾಯತ್‌ನ ಪ್ರಮುಖ ಬೀದಿಗಳಲ್ಲಿ ಶಾಸಕ ಕೆ. ರಘುಪತಿ ಭಟ್ ಹಾಗೂ ಅಭ್ಯರ್ಥಿ ಬಿ. ಸುಧಾಕರ ಶೆಟ್ಟಿಯವರು ಮನೆ-ಮನೆಗೆ ಭೇಟಿ ನೀಡಿ ಬಿರುಸಿನ ಮತಯಾಚನೆ ನಡೆಸಿದರು. ಅವರೊಂದಿಗೆ ಪಕ್ಷದ ಮುಖಂಡರುಗಳಾದ ಬಿ. ಎನ್. ಶಂಕರ ಪೂಜಾರಿ, ಹರಿಮಕ್ಕಿ ರತ್ನಾಕರ ಶೆಟ್ಟಿ, ರಘುಪತಿ ಬ್ರಹ್ಮಾವರ, ಹರೀಶ ಶ್ಯಾನುಭಾಗ್, ಬೇಬಿ ಪೂಜಾರಿ, ಕೃಷ್ಣ ಶೆಟ್ಟಿ, ಆದರ್ಶ ಶೆಟ್ಟಿ, ಶಂಕರ ಕಾಮತ್, ಪ್ರಶಾಂತ ಕೊಕ್ಕರ್ಣೆ, ಸಂಜೀವ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಗುಡ್ಡೆಯಂಗಡಿ, ಶಶಿಧರ ಶೆಟ್ಟಿ ಹೊರ್ಲಾಳಿ, ಸುಗುಣ, ಲೀಲಾವತಿ, ಲಲಿತಾ ಮೊದಲಾದವರು ಉಪಸ್ಥಿತರಿದ್ದರು."

ಕೋಟ: ಶಾರ್ಟ್ ಸರ್ಕ್ಯೂಟ್ ನಿಂದ ಬಟ್ಟೆ ಅಂಗಡಿಗೆ ಬೆಂಕಿ- ಅಪಾರ ಪ್ರಮಾಣದ ವಸ್ತು ಹಾನಿ: ೨ ಲಕ್ಷ ಅಂದಾಜು ನಷ್ಟ

ಕುಂದಾಪುರ: ಬಟ್ಟೆ ಅಂಗಡಿಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಅಪಾರ ಪ್ರಮಾಣದ ವಸ್ತು ಹಾನಿ ಸಂಭವಿಸಿ ಅಂದಾಜು ೨ ಕಲ್ಷ ರೂಪಾಯಿ ನಷ್ಟ ಸಂಭವಿಸಿದ ಘಟನೆ ಕೋಟದ ಸಿಟಿ ಮೆಡಿಕಲ್ ಎದುರಿನ ದೇವಿಕಿರಣ್ ಕಾಂಪ್ಲೆಕ್ಸ್ ನ ಸೆಲೆಕ್ಷನ್ ಸೆಂಟರ್ ಬಟ್ಟೆ ನ್ಮಳಿಗೆಯೊಂದರಲ್ಲಿ ಸೋಮವಾರ ತಡ ರಾತ್ರಿ ೧೦ ಗಂಟೆ ಸುಮಾರಿಗೆ ಸಂಭವಿಸಿದೆ.
kots-fire complaint (25)
ಉತ್ತರ ಪ್ರದೇಶ ಮೂಲದ ವಿಜಯ ಬಹದ್ದೂರ್ ಎನ್ನುವವರ ಮಾಲಿಕತ್ವದ ಈ ಮಳಿಗೆಯಲ್ಲಿ ಲಕ್ಷಾಂತರ ಮೌಲ್ಯದ ಬಟ್ಟೆಗಳ ದಾಸ್ತಾನು ಇಡಲಾಗಿತ್ತು ಎನ್ನಲಾಗಿದೆ.
ಈ ಮಳಿಗೆಯಲ್ಲಿ ೩ ಮಂದಿ ಕೆಲಸಗಾರರಿದ್ದು ನಿತ್ಯ ೮.೩೦ ಕ್ಕೆ ಅವರು ಅಂಗಡಿಯನ್ನು ಮುಚ್ಚುತ್ತಿದ್ದರು. ಆದರೆ ಇಂದು ಗಿರಾಕಿಗಳು ಇದ್ದ ಕಾರಣ ೯ ಗಂಟೆ ನಂತರ ಅಂಗಡಿ ಮುಚ್ಚಿ ಸಾಲಿಗ್ರಾಮದ ಕಾರ್ಕಡ ಬಾಡಿಗೆ ನಿವಾಸಕ್ಕೆ ತೆರಳಿದ್ದಾರೆ.
kots-fire complaint (19)
ತಡ ರಾತ್ರಿ ಸುಮಾರಿಗೆ ಅಳವಡಿಸಲಾಗಿದ್ದ ಇನವರ್ಟರ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು ಬೆಂಕಿ ಹತ್ತಿ ಉರಿದ ಪರಿಣಾಮ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
ಅಂಗಡಿಯಲಿದ್ದ ಕಂಪ್ಯೂಟರ್, ಬ್ಯಾಟರಿ, ಇನ್ವರ್ಟರ್, ಯು.ಪಿ.ಎಸ್., ೨ ಟೇಬಲ್ ಹಾಗೂ ಬಟ್ಟೆಗಳು ಸೇರಿದಂತೆ ಅಂದಾಜು ೨ ಲಕ್ಷ ಮೌಲ್ಯದ ವಸ್ತುಗಳ ನಷ್ಟ ಸಂಭವಿಸಿದೆ ಎನ್ನಲಾಗಿದೆ.
ಅಗ್ನಿ ಆಕಸ್ಮಿಕ ಸಂಭವಿಸುತ್ತಿದ್ದಂತೆ ಕುಂದಾಪುರ ಅಗ್ನಿಶಾಮಕ ಠಾಣೆಗೆ ಪೋನಾಯಿಸಿದ ಸ್ಥಳೀಯರು ಅಗ್ನಿ ನಂದಿಸುವಲ್ಲಿ ಹರಸಾಹಸ ಮಾಡಿದರು.
ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂಧಿಗಳು ಹಾಗೂ ಉಪನಿರೀಕ್ಷಕರು ಬೆಂಕಿಯನ್ನು ಸಂಪೂರ್ಣ ನಂದಿಸುವಲ್ಲಿ ಯಶಸ್ವಿಯಾದರು.
ಈ ಸಂದರ್ಭದಲ್ಲಿ ಕೋಟ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು.  kots-fire complaint (22)
kots-fire complaint (7)    
kots-fire complaint (24) 
kots-fire complaint (16)

ಬಿಜೆಪಿ ಸರಕಾರದ ಸಾಧನೆಗಳನ್ನು ಸಹಿಸದೆ ಕಾಂಗ್ರೆಸ್ ಅಪಪ್ರಚಾರ : ಶಾಸಕ ಕೆ. ರಘುಪತಿ ಭಟ್parkala


ಉಡುಪಿ: ಕರ್ನಾಟಕ ರಾಜ್ಯದಲ್ಲಿ ಪೂರ್ಣ ಬಹುಮತದಿಂದ ಕಳೆದ ೫ ವರ್ಷಗಳಲ್ಲಿ ಆಡಳಿತ ನಡೆಸಿದ ಬಿಜೆಪಿ ಸರಕಾರ ಅಭಿವೃದ್ಧಿಯ ಶಖೆಯನ್ನು ಮಾದರಿಯಾಗಿ ತೋರಿಸಿದೆ. ಬಿಜೆಪಿ ಸರಕಾರದ ಸಾಧನೆಗಳನ್ನು ಸಹಿಸದೇ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಹೇಳಿದ್ದಾರೆ.
ಅವರು ಶುಕ್ರವಾರ ಪರ್ಕಳ ಗಾಂಧಿ ಮೈದಾನದಲ್ಲಿ ಆಯೋಜಿಸಲಾದ ಬಿ.ಜೆ.ಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಬಿ. ಸುಧಾಕರ ಶೆಟ್ಟಿಯವರು, ಕಳೆದ ೭-೮ ವಾರ್ಷಗಳಲ್ಲಿ ಉಡುಪಿ ಕ್ಷೇತ್ರದಲ್ಲಿ ಡಾ| ವಿ. ಎಸ್. ಆಚಾರ್ಯರ ದೂರದೃಷ್ಟಿ ಮತ್ತು ಶಾಸಕರಾದ     ಕೆ. ರಘುಪತಿ ಭಟ್ ಅವರ ವೇಗದ ಕೆಲಸ ಕಾರ್ಯಗಳಿಂದ ಹಿಂದೆಂದೂ ಕಾಣದ ಅಭಿವೃದ್ಧಿ ಕಂಡಿದೆ. ಜನತೆ ಆಶೀರ್ವದಿಸಿದರೆ ಅವರು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ಮುನ್ನಡೆಯುತ್ತೇನೆ ಎಂದರು.
ಉಡುಪಿ ನಗರ ಸಭೆಯ ಮಾಜಿ ಅಧ್ಯಕ್ಷ ಕಿರಣ್ ಕುಮಾರ್, ವಾಗ್ಮಿ ವಾಸುದೇವ ಭಟ್ ಪೆರಂಪಳ್ಳಿ ಮತ್ತು ಕೆ. ರಾಘವೇಂದ್ರ ಕಿಣಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ನಗರ ಸಭೆಯ ಮಾಜಿ ಅಧ್ಯಕ್ಷರಾದ ದಿನಕರ ಶೆಟ್ಟಿ ಹೆರ್ಗ, ಬಿಜೆಪಿ ಮುಖಂಡ ದಿಲೀಪ್‌ರಾಜ್ ಹೆಗ್ಡೆ, ನಗರಸಭಾ ಸದಸ್ಯರಾದ ಸುಮಿತ್ರಾ ಆರ್. ನಾಯಕ್, ಮಹೇಶ್ ಠಾಕೂರ್, ಸೆಟ್ಟಿಬೆಟ್ಟು ಸ್ಥಾನೀಯ ಸಮಿತಿ ಅಧ್ಯಕ್ಷ ರಾಮದಾಸ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ಯಾಮಲಾ ಎಸ್. ಕುಂದರ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್, ಈಶ್ವರನಗರ ಸ್ಥಾನೀಯ ಸಮಿತಿ ಅಧ್ಯಕ್ಷ ಜಯರಾಮ ಶೆಟ್ಟಿಗಾರ್, ಸರಳೇಬೆಟ್ಟು ಸ್ಥಾನೀಯ ಸಮಿತಿ ಪ್ರಧಾನ ಕಾರ್ಯದರ್ಶಿ ರಮಾನಂದ ಸಾಮಂತ್,    ಹೆರ್ಗ ಶಕ್ತಿಕೇಂದ್ರದ ಅಧ್ಯಕ್ಷ ದಿವಾಕರ ಶೆಟ್ಟಿ, ಹಿರಿಯರಾದ ಕಾಂತಪ್ಪ ಶೆಟ್ಟಿಗಾರ್ ಪರ್ಕಳ ಮೊದಲಾದವರು ಉಪಸ್ಥಿತರಿದ್ದರು.

ಮತದಾರರು ಮತ ಚಲಾಯಿಸಲು ಹಾಜರುಪಡಿಸಬೇಕಾದ ದಾಖಲೆಗಳು

ಭಾರತ ಚುನಾವಣಾ ಆಯೋಗದ ಆದೇಶದಂತೆ ಮತದಾರರ ಮೇ ೫ ರಂದು ಮತದಾನ ಮಾಡಲು ಬರುವಾಗ ಭಾರತ ಚುನಾವಣಾ ಆಯೋಗ ನೀಡಿರುವ ಮತದಾರರ ಭಾವಚಿತ್ರ ಗುರುತಿನ ಚೀಟಿ  ಅಥವಾ ಈ ಕೆಳಕಾಣಿಸಿದ ದಾಖಲೆಗಳಲ್ಲಿ ಯಾವುದಾದರು ಒಂದನ್ನು ಹಾಜರು ಪಡಿಸುವಂತೆ ಕೋರಿದೆ.
ಅಧಿಕೃತ ಫೋಟೋ ಸಹಿತ ಓಟರ್ ಸ್ಲೀಪ್, ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಆದಾಯ ತೆರಿಗೆ ಗುರುತಿನ ಚೀಟಿ (Pಚಿಟಿ), ರಾಜ್ಯ/ಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕ ಉದ್ದಿಮೆಗಳು ಅಥವಾ ಇತರೆ ಖಾಸಗಿ ಔದ್ಯಮಿಕ ಸಂಸ್ಥೆಗಳು ಅವರ ಕೆಲಸಗಾರರಿಗೆ ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು, ಸಾರ್ವಜನಿಕ ವಲಯದ ಬ್ಯಾಂಕ್/ಕಿಸಾನ್ ಮತ್ತು ಅಂಚೆ ಕಚೇರಿ ನೀಡಿರುವ ಭಾವಚಿತ್ರವಿರುವ ಪಾಸ್ ಪುಸ್ತಕ, ಮಾನ್ಯತೆ ಪಡೆದ ನೋಂದಾಯಿತ ವಿದ್ಯಾ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಕೊಟ್ಟಿರುವ ಗುರುತಿನ ಚೀಟಿಗಳು, ಭಾವಚಿತ್ರವಿರುವ ನೋಂದಾಯಿತ ಡೀಡ್‌ಗಳು/ ಪಟ್ಟಾಗಳು ಮುಂತಾದ ಆಸ್ತಿ ದಾಖಲೆಗಳು, ಭಾವಚಿತ್ರವಿರುವ ಪರಿತರ ಚೀಟಿಗಳು (ಖಚಿಣioಟಿ ಅಚಿಡಿಜ), ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಪ್ರಮಾಣ ಪತ್ರಗಳು, ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಪಿಂಚಣಿ ಪಾವತಿ ಆದೇಶಗಳು ಅಥವಾ ಮಾಜಿ ಯೋಧರ ಪಿಂಚಣಿ ಪುಸ್ತಕ/ ಪಿಂಚಣಿ ಸಂದಾಯ ಆದೇಶಗಳಂತಹ ಪಿಂಚಣಿ ದಾಖಲೆಗಳು, ವೃದ್ಧಾಪ್ಯ ವೇತನ ಆದೇಶಗಳು, ವಿಧವಾ ವೇತನ ಆದೇಶಗಳು, ಭಾವಚಿತ್ರವಿರುವ ಸ್ವಾತಂತ್ರ್ಯ ಯೋಧರ ಗುರುತಿನ ಚೀಟಿಗಳು, ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಶಸ್ತ್ರ ಪರವಾನಿಗೆ, ಅಂಗವಿಕಲರಿಗೆ ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಗುರುತಿನ ಚೀಟಿಗಳು, ಮಾಜಿ ಯೋಧರ ಭಾವಚಿತ್ರವಿರುವ ಸಿ.ಎಸ್.ಡಿ ಕ್ಯಾಂಟೀನ್ ಕಾರ್ಡ್, ಸಂಧ್ಯಾ ಸುರಕ್ಷಾ ಯೋಜನೆಯ ಭಾವಚಿತ್ರವಿರುವ ಗುರುತಿನ ಚೀಟಿ, ಓಖ‌ಇ‌ಉ ಯೋಜನೆಯ ಅಡಿಯಲ್ಲಿ ನೀಡಿರುವ ಭಾವಚಿತ್ರವಿರುವ ಉದ್ಯೋಗ ಕಾರ್ಡ್, ಭಾವಚಿತ್ರವಿರುವ ಯಶಸ್ವಿನಿ ಕಾರ್ಡ್, ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಗ್ರಾಮ ಪಂಚಾಯತಿಗಳು ಇತ್ಯಾದಿ ಸ್ಥಳೀಯ ಸಂಸ್ಥೆಗಳು ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು, ಸರ್ಕಾರಿ ಇಲಾಖೆ ನೀಡಿರುವ ಭಾವಚಿತ್ರವಿರುವ ಹಿರಿಯ ನಾಗರಿಕರ ಗುರುತಿನ ಚೀಟಿ, ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ನೀಡಿರುವ ಕುಟುಂಬದ ಸದಸ್ಯರ ಹೆಸರು ಮತ್ತು ವಯಸ್ಸು ಹಾಗೂ ಕುಟುಂಬದ ಯಜಮಾನನೊಂದಿಗೆ ಹೊಂದಿರುವ ಸದಸ್ಯರ ಸಂಬಂಧ ಒಳಗೊಂಡ ಭಾವಚಿತ್ರ ಇರುವ ತಾತ್ಕಾಲಿಕ / ಮೂಲ ಪಡಿತರ ಚೀಟಿ, ಭಾವಚಿತ್ರವಿರುವ ಆರೋಗ್ಯ ವಿಮಾ ಯೋಜನೆ ಸ್ಮಾರ್ಟ್ ಕಾರ್ಡ್‌ಗಳು (ಕಾರ್ಮಿಕ ಮಂತ್ರಾಲಯ ಯೋಜನೆ), ಭಾರತ ಚುನಾವಣಾ ಆಯೋಗದಿಂದ ನೀಡಿದ ಆಧಾರ್ ಕಾರ್ಡ್ ಯೆಂದು ಉಡುಪಿ ಜಿಲ್ಲಾ ಚುನಾವಣಾಧಿಕಾರಿ ಡಾ|| ಎಂ.ಟಿ.ರೇಜು ರವರು ತಿಳಿಸಿರುತ್ತಾರೆ.

“ಆಸರೆ ವಿಶೇಷ ಮಕ್ಕಳ ವತಿಯಿಂದ ಮತದಾರರಿಗೆ ಮನವಿ”

“ಆಸರೆ” ವಿಶೇಷ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಮಣಿಪಾಲ ಕೆ.ಎಂ.ಸಿ ಯ ಹೊರರೋಗಿ ವಿಭಾಗದಲ್ಲಿ ಮತದಾನ ಜಾಗೃತಿಯ ಜಾಥಾ ನಡೆಸಿದರು. ಜಿಲ್ಲಾಧಿಕಾರಿ ಡಾ|| ಎಂ.ಟಿ.ರೇಜು, ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎ.ಪ್ರಭಾಕರ ಶರ್ಮ, ಜಿಲ್ಲಾ ವಾರ್ತಾಧಿಕಾರಿ ಎಂ.ಜುಂಜಣ್ಣ, ಶಿಕ್ಷಣಾಧಿಕಾರಿ ಶ್ರೀ ಅಶೋಕ್ ಕಾಮತ್ ಉಪಸ್ಥಿತರಿದ್ದರು.
ಮಾರ್ಕೆಟಿಂಗ್ ಆಫೀಸರ್ ಶೈಜಾ ಮ್ಯಾಥ್ಯೂ ಹಾಗೂ ದಯಾನಂದ ಉಪಸ್ಥಿತರಿದ್ದರು. ಸರತಿಯ ಸಾಲಿನಲ್ಲಿದ್ದ ಸನಿಹದ ಜಿಲ್ಲೆಗಳ ಸಾವಿರಾರು ಹೊರರೋಗಿಗಳು ವಿಶೇಷ ಮಕ್ಕಳ ಈ ಮನವಿಗೆ ಸ್ಪಂದಿಸಿದರು.
ಎಸ್ಟೇಟ್ ಆಫೀಸರ್ ಶ್ರೀ ಜೈವಿಠಲ್ ರವರು ಸ್ವಾಗತಿಸಿದರು, ಮೆಡಿಕಲ್ ಸೂಪರಿಡೆಂಟ್ ಶ್ರೀ ದಯಾನಂದ ವಂದಿಸಿದರು.
Manipal Photo

ಸೋಮವಾರ, ಏಪ್ರಿಲ್ 29, 2013

ಬೈಂದೂರು ಕ್ಷೇತ್ರದಲ್ಲಿ ಸಿಪಿ‌ಐ‌ಎಂಗೆ ಉತ್ತಮ ಬೆಂಬಲ

cpmಉಡುಪಿ : ಭಾರತೀಯ ಮಾರ್ಕ್ಸ್‌ವಾದಿ ಕಮ್ಯೂನಿಷ್ಟ್ ಪಕ್ಷದಿಂದ ಬೈಂದೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕೆ.ಶಂಕರ್ ಸ್ವರ್ದಾ ಕಣದಲ್ಲಿದ್ದು, ರಾಜ್ಯದಲ್ಲಿ ಒಟ್ಟು ೧೬ ಕ್ಷೇತ್ರಗಳಲ್ಲಿ ಸಿಪಿ‌ಐ‌ಎಂ ಸ್ವರ್ದಿಸಲಿದೆ ಎಂದು ಪಕ್ಷದ ಮುಖಂಡ ನಿತ್ಯಾನಂದ ಸ್ವಾಮಿ ತಿಳಿಸಿದ್ದಾರೆ.ಉಡುಪಿಯಲ್ಲಿ ನೆಡೆದ ಪತ್ರೀಕಾಗೋಷ್ಠಿಯಲ್ಲಿ ಮಾತನಾಡಿ. ಗ್ರಾಮೀಣ ಭಾಗದಲ್ಲಿ ಕಾರ್ಮಿಕರನ್ನು ಸಂಘಟಿಸುವ ಮೂಲಕ ಅಲ್ಲಿಯ ಸಮಸ್ಯೆಯ ವಿರುದ್ದ ಹೋರಾಟ ಮಾಡುವ ಮೂಲಕ ಜನಮೆಚ್ಚುಗೆಯನ್ನು ಪಡೆದುಕೊಂಡ ಕೆ.ಶಂಕರ್ ಬೈಂದೂರು ಕ್ಷೇತ್ರದಿಂದ ಚುನಾವಣೆಯನ್ನು ಎದುರಿಸಲಿದ್ದಾರೆ. ಬೈಂದೂರು ಕ್ಷೇತ್ರದಲ್ಲಿ ಈಗಾಗಲೇ ರಾಜ್ಯ ಮುಖಂಡರುಗಳು ಪ್ರಚಾರ ನೆಡೆಸಿದ್ದು ಉತ್ತಮ ಬೆಂಬಲ ವ್ಯಕ್ತವಾಗಿದೆ.

ಬಿಜೆಪಿ ಸರಕಾರದ ವಸತಿ ಯೋಜನೆ ಸ

ragupathi-bhat1ಉಡುಪಿ: ರಾಜ್ಯದ ಬಿಜೆಪಿ ಸರಕಾರದ ವಸತಿ ಯೋಜನೆಯಡಿ ಘಟಕ ವೆಚ್ಚವನ್ನು ರೂ. ೫೦ ಸಾವಿರದಿಂದ ರೂ. ೭೫ ಸಾವಿರಕ್ಕೆ ಹೆಚ್ಚಳ ಮಾಡಿದೆ. ನಗರ ಪ್ರದೇಶದಲ್ಲಿ ವಾಸಿಸುವ ವಸತಿ ರಹಿತ ಬಡವರಿಗೆ ಮೊತ್ತ ಮೊದಲ ಬಾರಿಗೆ ‘ವಾಜಪೇಯಿ ನಗರ ವಸತಿ ಯೋಜನೆ’ ಜಾರಿ ಮಾಡಿ ರೂ. ೭೫ ಸಾವಿರ ಸಹಾಯ ಧನ ನಿಗದಿಪಡಿಸಿದೆ. ಹೀಗೆ ಬಡವರಿಗೆ ಸೂರು ಒದಗಿಸುವ ನಿಟ್ಟಿನಲ್ಲಿ ದೇಶಕ್ಕೆ ಮಾದರಿ ಎನಿಸಿದೆ. ಉಡುಪಿ ಸಹಿತ ಜಿಲ್ಲೆಯಲ್ಲಿ ಸಾವಿರಾರು ಫಲಾನುಭವಿಗಳು ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಮತದಾರರು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ. ಉಡುಪಿ ಅಭ್ಯರ್ಥಿ ಬಿ. ಸುಧಾಕರ ಶೆಟ್ಟಿಯವರು ಭಾರೀ ಅಂತರದಲ್ಲಿ ಗೆದ್ದು ಬರಲಿದ್ದಾರೆ ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಹೇಳಿದರು. ಅವರು ಶುಕ್ರವಾರ ಕಲ್ಮಾಡಿ ಡಾ| ಆಚಾರ್ಯ ಕ್ಲಿನಿಕ್ ಬಳಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಅಭ್ಯರ್ಥಿ ಬಿ. ಸುಧಾಕರ ಶೆಟ್ಟಿ ಯವರು ಶಾಸಕ ಕೆ. ರಘುಪತಿ ಭಟ್ ಅವರು ತನ್ನ ಎರಡು ಅವಧಿಯಲ್ಲಿ ಕೈಗೊಂಡಂತಹ ದಾಖಲೆ ಅಭಿವೃದ್ಧಿ ಕೆಲಸಗಳನ್ನು ಜನತೆ ಈಗಾಗಲೇ ಮೆಚ್ಚಿಕೊಂಡಿದ್ದು, ಮತದಾರರ ಒಲವು ಬಿಜೆಪಿ ಮೇಲಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದ್ದು, ಬಿಜೆಪಿ ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ತಿಳಿಸಿ ಮತದಾರರಲ್ಲಿ ಬೆಂಬಲ ಯಾಚಿಸಿದರು. ನಗರಸಭೆಯ ಮಾಜಿ ಅಧ್ಯಕ್ಷ ಕಿರಣ್ ಕುಮಾರ್, ಬಿಜೆಪಿ ಮುಖಂಡರಾದ ರಾಘವೇಂದ್ರ ಕಿಣಿ, ವಾಸುದೇವ ಭಟ್ ಪೆರಂಪಳ್ಳಿ, ಯುವಮೋರ್ಚಾ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್ ಮತ್ತು ಜಿಲ್ಲಾ ಕಮಲ್ ಕ್ಲಬ್‌ನ ಅಧ್ಯಕ್ಷ ಶಶಾಂಕ ಶಿವತ್ತಾಯ ಮೊದಲಾದವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಭೆಯಲ್ಲಿ ಬಿಜೆಪಿ ಪಕ್ಷದ ಮುಂದಾಳುಗಳಾದ ಕುಯಿಲಾಡಿ ಸುರೇಶ ನಾಯಕ್, ಎಂ. ಲಕ್ಷ್ಮೀಶ ಬಂಗೇರ, ಎಂ. ಸುರೇಶ್ ಮಲ್ಪೆ, ಇಂದಿರಾ ಶೇಖರ್, ಸುಂದರ ಕಲ್ಮಾಡಿ, ಚಂದ್ರಾವತಿ ಎಸ್. ಕೋಟ್ಯಾನ್, ಫ್ರಾನ್ಸಿಸ್ ಮೆನೇಜಸ್ ಮೊದಲಾದವರಿದ್ದರು.

ಗಂಗೊಳ್ಳಿಯಲ್ಲಿ ಸರ್ವಧರ್ಮ ಸಾಮೂಹಿಕ ವಿವಾಹ

mariage2ಕುಂದಾಪುರ : ಗಂಗೊಳ್ಳಿಯ ಸರ್ವಧರ್ಮ ಸೌಹಾರ್ದ ಸಮ್ಮಿಲನ ವೇದಿಕೆ ವತಿಯಿಂದ ಗ‌ಂಗೊಳ್ಳಿಯ ಎಸ್‌.ವಿ. ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ರವಿವಾರ ಸರ್ವಧರ್ಮ ಮಹಾ ಸಮ್ಮೇಳನ ಮತ್ತು ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಜರಗಿತು.
ಸುಮಾರು 44 ನವ ಜೋಡಿಗಳು ಹಸೆ ಮಣೆಯೇರಿದರು. ಈ ಜೋಡಿಗಳಲ್ಲಿ 40 ಹಿಂದೂ ಜೋಡಿಗಳು, ಎರಡು ಕ್ರೈಸ್ತ¤ ಜೋಡಿಗಳು ಹಾಗೂ ಎರಡು ಮುಸ್ಲಿಂ ಜೋಡಿಗಳು ವೈವಾಹಿಕ ಬಾಳಿಗೆ ಪಾದಾರ್ಪಣೆಗೈದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿಯ ಜ್ಯೋತಿಷಿ ವಿದ್ವಾನ್‌ ಕಬಿಯಾಡಿ ಜಯರಾಮ ಆಚಾರ್ಯ ನೆರವೇರಿಸಿ ಮಾತನಾಡಿ, ನಾವು ಮಕ್ಕಳಲ್ಲಿ ಸಮನ್ವಯ ಹಾಗೂ ಧರ್ಮ ಸಹಿಷ್ಣುತೆಯನ್ನು ಚಿಕ್ಕಂದಿನಿಂದಲೇ ಬೆಳಸಬೇಕು, ಪೊಷಕರಾದವರೂ ಈ ಬಗ್ಗೆ ಗಮನಹರಿಸಬೇಕು. ಒಳ್ಳೆಯದನ್ನು ಸ್ವೀಕರಿಸಿ ಕೆಟ್ಟದನ್ನು ತಿರಸ್ಕರಿಸಿ ಎಂಬ ಧ್ಯೇಯ ಹಾಗೂ ಮನಸ್ಸಿನಿಂದ ದೇಶದಲ್ಲಿ ನಾವೆಲ್ಲಾ ಒಂದಾಗಿ ಬದುಕಬೇಕು. ಗಂಗೊಳ್ಳಿಯಲ್ಲಿ ಸರ್ವಧರ್ಮದವರು ಒಂದಾಗಿ ಇಂತಹ ಒಂದು ಕಾರ್ಯವನ್ನು ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಬೆಳಗಾವಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ವಂ| ಬಿಷಪ್‌ ಪೀಟರ್‌ ಮಚಾದೊ, ತೊಕ್ಕಟ್ಟು ಜುಮ್ಮಾ ಮಸೀದಿಯ ಖತೀಬರಾದ ಜನಾಬ್‌ ಮಹಮ್ಮದ್‌ ಕುಂಞ ಆಶೀರ್ವಚನ ನೀಡಿದರು.
ಉದ್ಯಮಿ ಜನಾಬ್‌ ಎಂ.ಎಂ. ಇಬ್ರಾಹಿಂ ಹಾಗೂ ಗಾಂನ್‌ ಬೌಂಟಿ ಗೋವಾದ ನರಸಿಂಹ ಪೂಜಾರಿ ಅವರಿಗೆ ಹುಟ್ಟೂರ ಸಮ್ಮಾನ ನೆರವೇರಿಸಲಾಯಿತು.
ಯುಎಇ ಪಾರ್ಚೂನ್‌ ಗ್ರೂಪ್‌ ಆಫ್‌ ಹೊಟೇಲ್ಸ್‌ ಚೆಯರ್‌ಮನ್‌ ಪ್ರವೀಣ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಿರಿಮಂಜೇಶ್ವರ ಹಕ್ಕೇಬೈಲು ಮಹಮ್ಮದೀಯ ಜುಮ್ಮಾ ಮಸೀದಿ ಖತೀಬ ಜನಾಬ್‌ ಹಾಜಿ ಕೆ. ಇಸ್ಮಾಯಿಲ್‌ ಮುಸ್ಲಿಯಾರ್‌, ಉಡುಪಿ ಧರ್ಮಪ್ರಾಂತದ ಅಂತರ್‌ ಧರ್ಮೀಯ ಸೌಹಾರ್ದ ಸಮಿತಿ ಸಂಚಾಲಕ ವಂದನೀಯ ವಿಲಿಯಂ ಮಾರ್ಟಿಸ್‌, ಉದ್ಯಮಿ ಆನಂದ ಸಿ. ಕುಂದರ್‌, ಗೋವಾ ಉದ್ಯಮಿ ನರಸಿಂಹ ಪೂಜಾರಿ, ದುಬಾೖ ಉದ್ಯಮಿ ಶೀನ ದೇವಾಡಿಗ, ಉಡುಪಿ ಜಿಲ್ಲಾ ಸಂಯುಕ್ತ ಜಮಾತ್‌ ಅಧ್ಯಕ್ಷ ಜನಾಬ್‌ ಹಾಜಿ ಎನ್‌. ಅಬ್ದುಲ್ಲಾ, ಗಂಗೊಳ್ಳಿ ಇಗರ್ಜಿಯ ಧರ್ಮಗುರು ವಂ| ಎ. ಡಿ'ಲೀಮಾ, ಗಂಗೊಳ್ಳಿ ವಿರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಭಟ್‌, ಮುಂಬಯಿ ಉದ್ಯಮಿ ಎಂ. ಸುರೇಶ್‌ ಶೆಟ್ಟಿ, ಉಡುಪಿ ಡಯಾನ ಥಿಯೇಟರ್‌ ಗ್ರೂಪ್‌ ಚೆಯರ್‌ಮನ್‌ ರವೀಂದ್ರ ಎಂ. ಪೈ, ಉದ್ಯಮಿ ಕಾಂತು ಮಂಜುನಾಥ ಖಾರ್ವಿ, ಪ್ರಭಾಕರ ಉಗ್ರಾಣಿ, ವಿ.ಕೆ. ಮೋಹನ್‌, ಸುಬ್ರಹ್ಮಣ್ಯ ಶೆರಿಗಾರ, ಜಿ.ಎಂ. ರಫಿಕ್‌, ಗಂಗೊಳ್ಳಿಯ ಜನಾಬ್‌ ಖಲೀಫ್ ಯೂನುಸ್‌, ಕೆ. ಅಬ್ದುಲ್‌ ರೆಹಮಾನ್‌ ಮೊದಲಾದವರು ಉಪಸ್ಥಿತರಿದ್ದರು.
ಎಂ.ಎಂ. ಇಬ್ರಾಹಿಂ ಪ್ರಸ್ತಾವನೆಗೈದರು. ಸರ್ವಧರ್ಮ ಸೌಹಾರ್ದ ವೇದಿಕೆಯ ಪ್ರಧಾನ ಕಾರ್ಯದರ್ಶಿ ದಿನಕರ ಎಂ. ಖಾರ್ವಿ ಸ್ವಾಗತಿಸಿದರು. ವಸಂತ ಕುಮಾರ್‌ ಕಾರ್ಯಕ್ರಮ ನಿರೂಪಿಸಿದರು.

ತಾ-ಪೂಜಾಮೋದಿ ಮೊಡಿ ನಡೆಯಲ್ಲ-ಬಿಜೆಪಿಗೆ ೨೫ ಸೀಟ್ ಖೋರಿ


B.-Janardhana-Poojary-1
ಮೋದಿ ಮೋಡಿ ರಾಜ್ಯದಲ್ಲಿ ನಡೆಯಲ್ಲ ಅಂತ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಹೇಳಿದ್ದಾರೆ. ಉಡುಪಿ ಜಿಲ್ಲೆ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಅವರು, ಮೋದಿಯ ಮೋಡಿ ನಡೆಯಲು ಇದು ಗುಜರಾಥ್ ಅಲ್ಲ, ಕರ್ನಾಟಕದ ಮತದಾರರು ಬುದ್ದಿವಂತರಿದ್ದಾರೆ; ಮೋದಿ ಪ್ರಚಾರದಿಂದ ಬಿಜೆಪಿಗೆ ಇಪ್ಪತ್ತೈದು ಸೀಟು ನಷ್ಟವಾಗುತ್ತೆ ಎಂದು ಭವಿಷ್ಯ ನುಡಿದರು. ಡಿಸಿ‌ಎಂ ಈಶ್ವರಪ್ಪ ಯಡ್ಯೂರಪ್ಪ ಗಿಂತಲೂ ದೊಡ್ಡ ಭೃಷ್ಟ ಅನ್ನೋದು ಸಾಬೀತಾಗಿದೆ, ಬಿಜೆಪಿ ಸ್ವಚ್ಛವಾಗಿದೆ ಎಂದು ಭೀಗುತ್ತಿರುವ ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ, ಬಿಜೆಪಿ ನಾಯಕರ ಕುರಿತಾದ ಭೃಷ್ಟಾಚಾರದ ಬಗ್ಗೆ ಉತ್ತರ ಕೊಡಬೇಕು ಅಂತ ಸವಾಲು ಹಾಕಿದರು.
ಬಡವರಿಗೆ ಒಂದು ರುಪಾಯಿಗೆ ಅಕ್ಕಿ ಕೊಡುವುದಾಗಿ ಹೇಳಿದ ಸೋನಿಯಾ ಗಾಂಧಿಯನ್ನು ಅನ್ನಪೂರ್ಣೇಶ್ವರಿ ಎಂದು ಬಣ್ಣಿಸಿದ ಪೂಜಾರಿ ಕರ್ನಾಟಕದಾದ್ಯಂತ ಕಾಂಗ್ರೆಸ್ ಪರ ಅಲೆ ಎದ್ದಿದೆ. ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಖಚಿತ . ಇದರಿಂದ ಹತಾಶಗೊಂಡ ಬಿಜೆಪಿ ಸ್ಪರ್ಧೆಯಿಂದಲೇ ಹಿಂದೆ ಸರಿದಂತೆ ಕಾಣುತ್ತಿದೆ. ಈ ಭೀತಿಯಿಂದಲೇ ಬಿಜೆಪಿಯ ಕೇಂದ್ರ ವರಿಷ್ಟರು ಅಸಂಬದ್ದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಅಂದ್ರು.
ಮಾತೃದೇವೋ ಭವ ಅನ್ನುವ ಬಿಜೆಪಿಯು ನೈತಿಕವಾಗಿ ದಿವಾಳಿಯಾಗಿದೆ ಅಂದ ಪೂಜಾರಿ ಉಡುಪಿಯಲ್ಲಿ ನಡೆದ ರೇವ್ ಪಾರ್ಟಿ ಮತ್ತು ಬಿಜೆಪಿ ಶಾಸಕರ ಸೆಕ್ಸ್ ಸಿಡಿ ಪ್ರಕರಣವನ್ನು ಉಲ್ಲೇಖಿಸಿದರು. ಈ ಘಟನೆಗಳಿಂದ ರಾಷ್ಟ್ರ ಮಾತ್ರವಲ್ಲ ವಿದೇಶಗಳಲ್ಲೂ ಕರ್ನಾಟಕದ ಮಾನ ಹರಾಜಾಗಿದೆ ಎಂದರು.
ಸಾಲ್ಯಾನ್ ವಂಚನೆ-ಮೊದಲ ಬಾರಿ ಕಾಂಗ್ರೆಸ್ ನಿಂದ ಕಾಪು ಕ್ಷೇತ್ರಕ್ಕೆ ಸಾಲ್ಯಾನ್ ಗೆ ಟಿಕೆಟ್‌ಕೊಡಿಸಿದ್ದು ನಾನೇ. ಆದರೆ ಸಾಲ್ಯಾನ್ ಅದನ್ನು ಮರೆತುಬಿಟ್ಟಿದ್ದಾರೆ. ಐದು ಬಾರಿ ಶಾಸಕರಾದ್ರು, ಮಂತ್ರಿಯೂ ಆದ್ರು. ಆದರೆ ತಾಯಿಂತಿರುವ ಪಕ್ಷಕ್ಕೆ ವಂಚಿಸಿ ಜೆಡಿ‌ಎಸ್ ಗೆ ಸೇರ್ಪಡೆ ಹೊಂದಿದರು. ಪಕ್ಷಕ್ಕೆ ಮೋಸ ಮಾಡೋದು ಅಂದ್ರೆ ತಾಯಿಗೆ ಮೋಸ ಮಾಡಿದಂತೆ ಎಂದು ಖಾರವಾಗಿ ಟೀಕಿಸಿದರು.
ಇದೇ ವೇಳೆ ಕಾಪು ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಪರ ಕಟಪಾಡಿ, ಉದ್ಯಾವರ ಮತ್ತು ಅಲೆವೂರಿನಲ್ಲಿ ಬಹಿರಂಗಸಭೆ ನಡೆಸಿ ಮತಯಾಚಿಸಿದರು.

ಉಪ್ಪುಂದದಲ್ಲಿ ಕೆಜೆಪಿ ಪರ ನಟಿ ಶೃತಿ ಪ್ರಚಾರ

 sruthi1

ಉಡುಪಿಯಲ್ಲಿ ವಿಧಾನಸಭಾ ಚುನಾವಣಾ ಕಾವು ಜೋರಾಗಿದೆ. ರಾಷ್ಟ್ರೀಯ ಪಕ್ಷಗಳು ಪ್ರಚಾರದ ಅಬ್ಬರ ನಡೆಸಿದ್ರೆ ಇತ್ತ ಹೊಸ ಪಕ್ಷ ಕೆಜೆಪಿ ಬೈಂದೂರಿನಲ್ಲಿ ಶಕ್ತಿ ಪ್ರದರ್ಶನ ನಡೆಸಿತು. ಪಕ್ಷದ ತಾರಾ ಪ್ರಚಾರಕಿ ನಟಿ ಶೃತಿ ಒಂದೆಡೆ ಹೈಕಮಾಂಡ್‌ಗಳ ಕಾಲೆಳೆದ್ರೆ, ಇನ್ನೊಂದೆಡೆ ವಿವಿಧ ಪಕ್ಷಗಳ ಸ್ಟಾರ್ ಪ್ರಚಾರಕರಿಗೆ ಟಾಂಗ್ ಕೊಟ್ರು.
ಕರಾವಳಿ ಜಿಲ್ಲೆ ಉಡುಪಿಯಲ್ಲಿ ಚುನಾವಣಾ ಬಿಸಿ ಜೋರಾಗಿದೆ. ಕರ್ನಾಟಕ ಜನತಾ ಪಾರ್ಟಿ ಜಿಲ್ಲೆಯಲ್ಲಿ ಎರಡು ಕಡೆ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಈ ಪೈಕಿ ಬೈಂದೂರಿನಲ್ಲಿ ಕೆಜೆಪಿ ಶಕ್ತಿಪ್ರದರ್ಶನ ಮಾಡಿತು. ನಟಿ ಶೃತಿ ಅಭ್ಯರ್ಥಿ ನವೀನ್‌ಚಂದ್ರ ಉಪ್ಪುಂದ ಪರ ಮತಯಾಚನೆಗೆ ಬೈಂದೂರಿಗೆ ಬಂದಿದ್ದರು. ವಿವಿಧ ರಾಜಕೀಯ ಪಕ್ಷಗಳ ಸ್ಟಾರ್ ಕ್ಯಾಂಪೈನರ್‌ಗಳಿಗೆ ನಟಿ ಶೃತಿ ಟಾಂಗ್ ಕೊಟ್ಟರು. ನಾನು ಸ್ಟಾರ್ ಕ್ಯಾಂಪೈನರ್ ಅಲ್ಲ. ಕೈ ಬೀಸಿ.., ಆಕರ್ಶಿಸಿ, ಮತ ಸೆಳೆಯಲು ಬಂದವಳೂ ಅಲ್ಲ ಅಂತ ಹೇಳಿದ್ರು. ಮಾಧ್ಯಮಗಳ ಜೊತೆ ಮಾತನಾಡಿದ ಶೃತಿ ನಾನು ಮಾಜಿ ಸಿ‌ಎಂ ಯಡಿಯೂರಪ್ಪ ಅವರ ಅಭಿವೃದ್ಧಿ ಕಾರ್ಯ ಜನತೆಗೆ ಹೇಳಿ ಮತಯಾಚನೆ ಮಾಡಲು ಬಂದಿರುವುದಾಗಿ ಸುದ್ದಿಗಾರರೊಡನೆ ಮಾತನಾಡುತ್ತ ಹೇಳಿದ್ರು.
sruthi2
ನಂತರ ಬಹಿರಂಗ ಪ್ರಚಾರ ಕಾರ್ಯಕ್ರಮ ಉಪ್ಪುಂದ ಮೀನು ಮಾರುಕಟ್ಟೆ ಪರಿಸರದಲ್ಲಿ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಕೆಜೆಪಿ ನಾಯಕಿ ಶೃತಿ ಎಲ್ಲಾ ರಾಜಕೀಯ ಪಕ್ಷಗಳ ಹೈಕಮಾಂಡನ್ನು ವೇದಿಯಲ್ಲಿ ಲೇವಡಿ ಮಾಡಿದ್ರು. ಕಾಂಗ್ರೆಸ್ ಮತ್ತು ಬಿಜೆಪಿಯ ಹೈಕಮಾಂಡ್ ಡೆಲ್ಲಿಯಲ್ಲಿದೆ. ಯಾವ ಕೆಲಸ ಮಾಡಬೇಕಾದ್ರೂ ಅಲ್ಲಿಗೆ ಓಡಬೇಕು ಎಂದರು. ಜೆಡಿ‌ಎಸ್ ಹೈಕಮಾಂಡ್ ಮನೆಯಲ್ಲಿದೆ. ಬಿ‌ಎಸ್‌ಆರ್ ಹೈಕಮಾಂಡ್ ಜೈಲಿನಲ್ಲಿದೆ ಅಂತ ವ್ಯಂಗ್ಯವಾಡಿದ್ರು. ಆದ್ರೆ ಬಿ‌ಎಸ್‌ವೈ ನೇತೃತ್ವದ ಕೆಜೆಪಿಗೆ ಆರೂವರೆ ಕೋಟಿ ಕನ್ನಡಿಗರೇ ಹೈಕಮಾಂಡ್ ಅಂತ ಹೇಳಿದ್ರು.
ಕೆಜೆಪಿ ಬಹಿರಂಗ ಪ್ರಚಾರಕ್ಕೆ ಮಾಜಿ ಸಂಸದ ಬಿ.ವೈ ರಾಘವೇಂದ್ರ, ಕೆಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಕುಮಾರ್ ಪಾಲ್ಗೊಳ್ಳಬೇಕಿತ್ತು. ಆದ್ರೆ ಕೊನೆಯ ಕ್ಷಣದಲ್ಲಿ ಈ ಇಬ್ಬರು ಬರೋದು ರದ್ದಾಯಿತು. ಒಟ್ಟಿನಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಕೆಜೆಪಿ ತನ್ನ ಶಕ್ತಿಪ್ರದರ್ಶನ ಮಾಡಿತು.

ಕುಂದಾಪುರ ಪೊಲೀಸರ ಕಾರ್ಯಾಚರಣೆ- ಅಂತರ್ ಜಿಲ್ಲಾ ದರೋಡೆಕೋರರ ಬಂಧನ


darode

ಕುಂದಾಪುರ: ಜನಸಂಚಾರ ಕಡಿಮೆ ಇರುವ ಬೀದಿಗಳಲ್ಲಿ ವಾಹನಗಳನ್ನು ಅಡ್ಡಗಟ್ಟಿ ದರೋಡೆಗೈಯುತ್ತಿದ್ದ ಅಂತರ್ ಜಿಲ್ಲಾ ದರೋಡೆ ಕೋರರ ತಂಡವನ್ನು ತಮ್ಮ ಬಲೆಗೆ ಬೀಳಿಸುವುದರಲ್ಲಿ ಕುಂದಾಪುರ ಪೋಲಿಸರು ಯಶಸ್ವಿಯಾಗಿದ್ದಾರೆ.
ಪೊಲೀಸರ ಪ್ರಕಾರ 26 ರಂದು ಸಂಜೆ ಕುಂದಾಪುರ ವಡೇರಹೋಬಳಿ ಗ್ರಾಮದ ಹನುಮಾನ್ ಪೆಟ್ರೋಲ್ ಬಂಕ್ ಬಳಿ ಆರೋಪಿಗಳಾದ ಭಟ್ಕಳದ ಮಹ್ಮದ್ ಗೌಸ್, ಜಾಫರ್ ಸಾದಿಕ್, ಮಹ್ಮದ್ ಮಾರೂಫ್, ಸೊರಬದ ಅಕ್ಬರ್ ಆಲಿ, ಮಲ್ಲಾರು ಕಾಪುವಿನ ಮಹ್ಮದ್ ಸಮೀರ್ ಕೆಲವು ವಾಹನಗಳನ್ನು ಅಡ್ಡಗಟ್ಟಿ ದರೋಡೆಗೆ ಯತ್ನಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೋಲಿಸರು ಎಸ್.ಪಿ. ಡಾ.ಬೋರಲಿಂಗಯ್ಯ ಅವರ ಮಾರ್ಗದರ್ಶನಹಾಗೂ ಡಿವೈಎಸ್ಪಿ ಯಶೋದಾ ಒಂಟಿಗೊಡಿ,ವೃತ್ತ ನೀರಿಕ್ಷಕ ಮಂಜುನಾಥ ಕೌರಿ ನಿರ್ದೇಶನದಲ್ಲಿ ಕುಂದಾಪುರ ಕ್ರೈಮ್ ಎಸ್.ಐ.ರೇವತಿ, ಮಹಿಳಾ ಠಾಣಾ ಪಿಎಸ್ ಐ ಫೆಮೀನಾ, ಸಿಬ್ಬಂದಿಯರಾದ ಅಗಸ್ಟಿನ್, ವೆಂಕಟರಮಣ, ರಾಮು ಹೆಗ್ಡೆ, ಸುಧಾಕರ್, ಅಶೋಕ್ ಹೇರಿಕುದ್ರು,ಯುವರಾಜ್, ಮೋಹನ್ ಬೈಂದೂರು, ಗೋಪಾಲ ಕೃಷ್ಣ, ನವೀನ, ವಿಜಯ ಕುಮಾರ್, ರಾಘವೇಂದ್ರ, ಹಾಗೂ ಉಪ್ಪುಂದ ರಾಘವೇಂದ್ರ ಮುಂತಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಿಂದ 123.80 ಗ್ರಾಮ್ ಚಿನ್ನಾಭರಣಗಳುಮತ್ತು 2 ಮೋಟಾರ್ ಸೈಕಲ್ ಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಆರೋಪಿಗಳು ಇನ್ನೂ ಹಲವೆಡೆ ಕುಕ್ರತ್ಯ ನಡೆಸಿದ ಅನುಮಾನಗಳಿದ್ದು ಪೋಲೀಸ್ ತನಿಖೆ ಮುಂದುವರಿದಿದೆ.

ತೆಕ್ಕಟ್ಟೆಯಲ್ಲಿ ದ್ವಿಚಕ್ರ ವಾಹನ ಹಾಗೂ ಕಾರು ಡಿಕ್ಕಿ- ತಂದೆ, ಮಗ ಸಾವುaccidentಕುಂದಾಪುರ: ತೆಕ್ಕಟ್ಟೆ ಸಮೀಪ ರಾಷ್ಟ್ರೀಯ ಹೆದ್ದಾರಿ ೬೬ ರ ಪೆಟ್ರೋಲ್ ಬಂಕ್ ಸಮೀಪದಲ್ಲಿ ದ್ವಿಚಕ್ರವಾಹನ ಕೈನೆಟಿಕ್ ಹೋಂಡಾಕ್ಕೆ ಕಾರೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ದಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ತಂದೆ ಹಾಗೂ ಮಗ ಸ್ಥಳದಲ್ಲೇ ಮ್ರತಪಟ್ಟ ಘಟನೆ ಶನಿವಾರ ಮದ್ಯಾಹ್ನ ಸಂಭವಿಸಿದೆ.
ಮ್ರತರು ಕೆದೂರಿನ ಹೈಸ್ಕೂಲ್ ಸಮೀಪದ ನಿವಾಸಿ ರಾಜೇಶ ಆಚಾರ್ಯ(೩೮) ಹಾಗೂ ಅವರ ದ್ವಿತೀಯ ಪುತ್ರ ಶರಣ್ (೧೧).ಮಹಾರಾಷ್ಟ್ರ ಮೂಲದ ಮುಂಬೈನ ದೈನರಿನಿಂದ ಪಡುಬಿದ್ರಿ ಸಮೀಪದ ಕಾಪುವಿಗೆ ಧಾರ್ಮಿಕ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ಈ ಬಾಡಿಗೆ ಕಾರಿನಲ್ಲಿ ನಾಲ್ವರು ಪ್ರಾಯಣಿಸುತ್ತಿದ್ದರು.  ಕುಂದಾಪುರದಿಂದ ತನ್ನ ಮನೆ ಕೆದೂರಿಗೆ ಹೊರಟಿದ್ದ ರಾಜೇಶ ಹಾಗೂ ಅವರ ಮಗ ಹೊರಟಿದ್ದ ಈ ಸಂದರ್ಭದಲ್ಲಿ ವೇಗವಾಗಿ ಅಜಾಗರುಕತೆಯಿಂದ ಬಂದ ಕಾರು ಕೈನೆಟಿಕ್ ಹೊಂಡಾಕ್ಕೆ ಹಿಂಬಂದಿಯಿಂದ ಡಿಕ್ಕಿ ಹೊಡೆದಿದ್ದು ಬಹಳಷ್ಟು ದೂರ ತಳ್ಳಲ್ಪಟ್ಟು ಮುಂದೆ ಸಾಗಿತು. ಅಪಘಾತದಿಂದ ರಕ್ತಗಾಯವಾಗಿ ತಂದೆ ರಾಜೇಶ ಹಾಗೂ ಮಗ ಶರಣ ಸ್ಥಳದಲ್ಲೇ ಮ್ರತರಾದರು. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಮ್ರತ ರಾಜೇಶ್ ಆಚಾರ್ಯ ಸೆಟ್ರಿಂಗ್ ವ್ರತ್ತಿ ಮಾಡುತ್ತಿದ್ದು ಮಗ ಶರಣ ೪ ನೇ ತರಗತಿ ಓದುತ್ತಿದ್ದ ಎನ್ನಲಾಗಿದೆ. ರಾಜೇಶ ಆಚಾರ್ಯ ಪತ್ನಿ ತಾಯಿ ಹಾಗೂ ಇನ್ನೋರ್ವ ಪುತ್ರನನ್ನು ಅಗಲಿದ್ದಾರೆ.
ಕಾರು ಚಾಲಕ ಸಂಜಯ ಕುಲಕರ್ಣಿಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಜೆಪಿ ವಾಮ ಮಾರ್ಗದಿಂದ ಕಾಂಗ್ರೇಸ್ ಅಭ್ಯರ್ಥಿಯನ್ನು ಮಣಿಸಲು ಯತ್ನಿಸುತ್ತಿದೆ: ಉಡುಪಿ ಬ್ಲಾಕ್ ಕಾಂಗ್ರೇಸ್ ಆರೋಪ.

ವರದಿ:ಸ್ಪರ್ಶ,ಉಡುಪಿ
ಉಡುಪಿ: ಬಿಜೆಪಿ ಪಕ್ಷವು ನೇರವಾಗಿ ಚುನಾವಣೆಯನ್ನು ಎದುರಿಸಲಾಗದೆ ವಾಮ ಮಾರ್ಗದಿಂದ ಕಾಂಗ್ರೇಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್‌ರನ್ನು ಮಣಿಸಲು ಯತ್ನಿಸುತ್ತಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೇಸ್ ಆರೋಪಿಸಿದೆ.udupi_congress_aropa 001ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೇಸ್ ಮುಖಂಡ ಜನಾರ್ದನ್ ಭಂರ್ಡಾಕರ್, ಕಾಂಗ್ರೇಸ್ ಪಕ್ಷದವರು ಸೃಷ್ಠಿಸಿದ ರೀತಿಯ ಪ್ರತಿಗಳನ್ನು ಬಿಜೆಪಿ ಪಕ್ಷದಿಂದಲೇ ಅವರ ಕಾರ್‍ಯಕರ್ತರು ಸೃಷ್ಠಿಸಿ ಕಾಂಗ್ರೇಸ್ ಸಮಾವೇಶ ಮತ್ತು  ಸಾರ್ವಜನಿಕ ಸ್ಥಳಗಳಲ್ಲಿ ಹಂಚುತ್ತಿದ್ದಾರೆ. ಈ ಮೂಲಕ ಕಾಂಗ್ರೇಸ್ ಇಲ್ಲಸಲ್ಲದ ವಿನಾಃ ಕಾರಣ ಆರೋಪ ಮಾಡುತ್ತಿದೆ ಎನ್ನುವ ಕೆಟ್ಟ ಹೆಸರು ಮತದಾರರಲ್ಲಿ ಮೂಡಲಿ ವೆನ್ನುವ ಉದ್ದೇಶದಿಂದ ಬಿಜೆಪಿ ಪಕ್ಷದ ಅಭ್ಯರ್ಥಿ ಕುತಂತ್ರದ ಮೂಲಕ ರಾಜ್ಯಕೀಯ ಲಾಭ ಪಡೆಯಲು ಉದ್ದೇಶಿಸಿದ್ದಾರೆ. ಈಗಾಗಲೇ ಕಾಂಗ್ರೇಸ್ ಸಮಾವೇಶ ಅಲ್ಲದೆ ಉಡುಪಿಯ ಚಿತ್ತರಂಜನ್ ಸರ್ಕಲ್ ಬಳಿ ಬಿಜೆಪಿ ಕಾರ್‍ಯಕರ್ತನೊಬ್ಬ ಪ್ರತಿಗಳನ್ನು ಹಂಚುತ್ತಿದ್ದು ಕಂಡುಬಂದಿದ್ದು ಅವನನ್ನು ಪೋಲಿಸರಿಗೆ ಒಪ್ಪಿಸಲಾಗಿದೆ ಎಂದು ಅವರು ತಿಳಿಸಿದ್ದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಭುಜಂಗ ಶೆಟ್ಟಿ, ಭಾಸ್ಕರ್‌ರಾವ್ ಕಿದಿಯೂರ್, ಯತೀಶ್ ಶೆಟ್ಟಿ, ರಮೇಶ್ ಕಾಂಚನ್ ಉಪಸ್ಥಿತರಿದ್ದರು

ಉಡುಪಿ ಜಿಲ್ಲೆಯಲ್ಲಿ ೧೯ ಸಾವಿರ ಹೊಸ ಮತದಾರರ ಸೇರ್ಪಡೆ: ಡಿಸಿ ಹೇಳಿಕೆ


 27_udupi_dc_pressmeet 001
ವರದಿ:ಸ್ಪರ್ಶ,ಉಡುಪಿ
ಉಡುಪಿ:
ಉಡುಪಿ ಜಿಲ್ಲೆಯಲ್ಲಿ ಈ ಬಾರಿ ೧೯ ಸಾವಿರ ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ ಅಂತಾ ಜಿಲ್ಲಾಧಿಕಾರಿ ಟಿ. ಎಂ. ರೇಜು ಹೇಳಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಈ ಹಿಂದೆ ೮ ಲಕ್ಷದ ೫೪ ಲಕ್ಷ ಮತದಾರರು ಇದ್ದಿದ್ದು ಇದೀಗ ೮ ಲಕ್ಷದ ೭೩ ಸಾವಿರ ಮತದಾರರು ಮತ ಚಲಾವಣೆ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.ಹೆಚ್ಚಿದ ಮತದಾರರ ಸಂಖ್ಯೆಯಲ್ಲಿ ಮತ್ತೆ ಮಹಿಳೆಯರೇ ಪಾರುಪತ್ಯ ಮೆರೆದಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಚುನಾವಣಾ ಸೇವೆಯಲ್ಲಿರುವ ೪ ಸಾವಿರ ಸರಕಾರಿ ನೌಕರರಲ್ಲಿ ೩೫೦ ನೌಕರರು  ಆಯೋಗದ ಆದೇಶದಂತೆ ಈಗಾಗಲೇ ಪೋಸ್ಟಲ್ ಬ್ಯಾಲೆಟ್ ಮತ ಚಲಾಯಿಸಿದ್ದು ಉಳಿದ ನೌಕರರು ಚುನಾವಣೆಯೊಳಗೆ ಮತ ಚಲಾಯಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು. ಆಯಾಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕಾರ್ಯ ನಡೆಯಲಿದ್ದು ಮತ ಎಣೆಕೆ ಕಾರ್ಯವು ಉಡುಪಿ ಜಿಲ್ಲೆಯ ಕುಂಜಿಬೆಟ್ಟು ಟಿ. ಎಂ. ಪೈ  ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ. ಪತ್ರಿಕಾ ಗೋಷ್ಟಿಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್ ಉಪಸ್ಥಿತರಿದ್ದರು.

ಕೊಂಕಣಿ ಟೆಲಿ ಪಿಲ್ಮ್ ಅಂಜೆಲಿನಾ ತೆರೆಗೆ

udupi_anjeleena_telefilm_pressmeet 002ವರದಿ:ಸ್ಪರ್ಶ,ಉಡುಪಿ
ಉಡುಪಿ : ಕೊಂಕಣಿ ಭಾಷೇಯನ್ನು ಉಳಿಸಿ ಬೆಳೆಸಬೇಕೆಂಬ ಆಕಾಂಕ್ಷೆಯಿಂದ ವಾಸ್ಥವ ಸತ್ಯಾಂಶಗಳ್ನೊಂಡ ಕೊಂಕಣಿ ಟೆಲಿ ಪಿಲ್ಮ್ ಆಂಜೆಲಿನಾ ಚಲನಚಿತ್ರವು ಸದ್ಯದಲ್ಲೆ ತೆರೆಕಾಣಲಿದೆ ಎಂದು ಜೋಸೆಫ್ ರೆಬೆಲ್ಲೊ  ತಿಳಿಸಿದ್ದಾರೆ.ಎಜೆ ಪ್ರೋಡಕ್ಷನ್ ಅರ್ಪಿಸುವ ಕೊಂಕಣಿ ಭಾಷೆಯ ಟೆಲಿ ಚಲನಚಿತ್ರ ಆಂಜೆಲಿನಾ ಚಿತ್ರದ ಮೇ ೧೨ರಂದು ಆಡಿಯೋ ಬಿಡುಗಡೆಯಾಗಲಿದ್ದು ೧೯ರಂದು ಪ್ರಥಮ ಶೋ ಬ್ರಹ್ಮಾವರ ಎಸ್‌ಎಮ್‌ಎಸ್ ಚರ್ಚ್ ಸಬಾಂಗಣದಲ್ಲಿ ಪ್ರದರ್ಶನಗೊಳ್ಳಲಿದೆ,
ನೈಜ್ಯ ಘಟನೆಗಳನ್ನು ಆಧರಿಸಿದ ಕೊಂಕಣಿ ಟೆಲಿ ಚಿತ್ರ ಇದಾಗಿದ್ದು, ತಂದೆ ಮಗಳ ಸಬಂಧದ ಮಹತ್ವವನ್ನು ನೈಜ್ಯವಾಗಿ ಬಿಂಬಿಸಲಾಗಿದೆ, ಚಿತ್ರದಲ್ಲಿ ಐದು ಹಾಡುಗಳಿದ್ದು ಚಿತ್ರವನ್ನು ಸಂಪೂರ್ಣವಾಗಿ ನಮ್ಮ ಜಿಲ್ಲೆಯಲ್ಲಿಯೇ ಚಿತ್ರಿಕರಿಸಲಾಗಿದೆ ಎಂದು ಜೋಸೆಫ್ ರೆಬೆಲ್ಲೊ ಉಡುಪಿಯಲ್ಲಿ ಪ್ರತಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಚಿತ್ರದ ನಟಿ ಸ್ನೇಹಾ ಮೆಲ್ತಾಯಸ್, ನಿರ್ದೇಶಕ ವಿನೋದ್ ಗಂಗೊಳ್ಳಿ, ಎಡೆಲ್ ಡಿ’ಸೋಜ ಉಪಸ್ಥಿತರಿದ್ದರು.

ಉಡುಪಿ : ಜೆಡಿ‌ಎಸ್ ಪ್ರಣಾಳಿಕೆ ಬಿಡುಗಡೆ

udupi_jds_pranalike_1 001ವರದಿ:ಸ್ಪರ್ಶ,ಉಡುಪಿ
ಉಡುಪಿ:ಕಾರ್ಯಕರ್ತರ ಮನೆ ಮನೆ ಭೇಟಿ ಇಲ್ಲ, ಹಣ ಹೆಂಡ, ಸಾಮಾಗ್ರಿ ಆಮೀಷ ನೀಡುವುದಿಲ್ಲ, ಆಶ್ವಾಸನೆಯ ಬಗ್ಗೆ ನಂಬಿಕೆ ಇಲ್ಲ. ಪ್ರಯತ್ನ, ಹೋರಾಟ, ಕೆಲಸದ ಬಗ್ಗೆ ನನ್ನ ನಂಬಿಕೆ ಮತ್ತು ಅಭಿವೃದ್ಧಿ ಹೀಗೆ ಹೇಳಿದವರು ಉಡುಪಿ ವಿಧಾನಸಭಾ ಕ್ಷೇತ್ರದ ಜೆಡಿ‌ಎಸ್ ಅಭ್ಯರ್ಥಿ ಬಾರಕೂರು ಸತೀಶ್ ಪೂಜಾರಿ. ಈ  ಬಾರಿ ನನ್ನ ಪ್ರಚಾರದ ವೈಖರಿ ಸ್ಪೆಶಲ್ ಇದೆ ಎಂದ ಅವರು ಜೆಡಿ‌ಎಸ್ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು.ಉಡುಪಿ ಪ್ರೆಸ್ ಕ್ಲಬ್ ಪ್ರಣಾಳಿಕೆ ಬಿಡಗುಡೆಗೊಳಿಸಿ ಮಾತನಾಡಿದ ಅವರು ಪ್ರತೀ ಪಕ್ಷಗಳು ಚುನಾವಣೆಯಲ್ಲಿ  ದುಂದುವೆಚ್ಚ ಮಾಡಿದರೆ  ಪತ್ರಿಕೆ, ಸಾಮಾಜಿಕ ಜಾಲ ತಾಣಗಳು ಮತ್ತು ಸಂಘ ಸಂಸ್ಥೆಗಳ ಮುಖಂಡರ ಭೇಟಿಯ ಮೂಲಕ ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಪ್ರಚಾರವನ್ನು ಆರಂಭಿಸಿದ್ದೇನೆ ಅಂತಾ ಸತೀಶ್ ಪೂಜಾರಿ ತಿಳಿಸಿದ್ದಾರೆ. ಹಣ -ಹೆಂಡ ಸಾಮಾಗ್ರಿ ಆಮೀಷ ನೀಡುವ ಮತದಾರರನ್ನು ಓಲೈಸುವ ಕ್ರಮಕ್ಕೆ ಕಡಿವಾಣ ಹಾಕಬೇಕು. ಜನರು ಸ್ವತಂತ್ರರಾಗಿ ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು ಎಂಬ ಆಶಯವನ್ನು ಇರಿಸಿಕೊಂಡು ಮತವನ್ನು ಕೇಳುವ ಮೂಲಕ ಸೋತರೂ ಜನರ ಮನಸ್ಸಿನಲ್ಲಿ ಉಳಿಯುವ ಕಾರ್ಯವನ್ನು ಚುನಾವಣಾ ಅಭ್ಯರ್ಥ ಮಾಡಬೇಕು ಎಂದು ಅವರು ತಿಳಿಸಿದರು.
ಪತ್ರಿಕಾ ಗೋಷ್ಟಿಯಲ್ಲಿ ಜೆಡಿ‌ಎಸ್ ಮುಖಂಡರಾದ ಅಣ್ಣಯ್ಯ ನಾಯಕ್, ದಿವಾಕರ ಸಾಲ್ಯಾನ್, ರಾಧಾಕೃಷ್ಣ ಶೆಟ್ಟಿ, ಅಬ್ದುಲ್ ಖಾದರ್ ಮೊದಲಾದವರು ಉಪಸ್ಥಿತರಿದ್ದರು.

ಬಿಜೆಪಿ ಸರಕಾರದಿಂದ ಅಲ್ಪ ಸಂಖ್ಯಾತರಿಗೆ ಅನುದಾನದ ಮಹಾಪೂರ: ಅಬೂಬಕ್ಕರ್.

27_udupi_abubakkar_pressmeetರೆ.ವರದಿ:ಸ್ಪರ್ಶ,ಉಡುಪಿ
ಉಡುಪಿ: ರಾಜ್ಯ ಬಿಜೆಪಿ ಸರಕಾರವು ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಗೆ ಐದು ವರ್ಷದಲ್ಲಿ ೧೩೧೩.೯೬ ಕೋಟಿ ಅನುದಾನವನ್ನು ನೀಡಿದ್ದು ಸುಮಾರು ೧೪ ಲಕ್ಷ ಫಲಾನುಭವಿಗಳು ವಿವಿಧ ಯೋಜನೆಗಳ ಮುಖಾಂತರ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಬಿಜೆಪಿ ಮೈನಾರಿಟಿ ಮೋರ್ಚಾದ ಅಧ್ಯಕ್ಷ ಅಬೂಬಕ್ಕರ್ ಎನ್.ಬಿ ತಿಳಿಸಿದ್ದಾ

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಕೇಂದ್ರದಲ್ಲೂ ಬಿಜೆಪಿ ಅಲೆ ಏಳಲಿದೆ: ವರುಣ್ ಗಾಂಧಿಉಡುಪಿ:ಬೆಂಕಿಯ ಉಂಡೆ ಎಂದೇ ಪ್ರಖ್ಯಾತಿ ಪಡೆದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವರುಣ್ ಗಾಂಧಿ ಸೈಲೆಂಟಾಗಿ ಪ್ರಚಾರ ಮುಗಿಸಿದ್ದಾರೆ. ಉಡುಪಿ ಜಿಲ್ಲೆಯ ಕಾಪು ವಿಧಾಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಲಾಲಾಜಿ ಮೆಂಡನ್ ಮರ ವರುಣ್ ಗಾಂಧಿ ಪ್ರಚಾರ ಸಭೆಯಲ್ಲಿ ಭಾಗವಹಿಸಿದರು. ಉಡುಪಿ ಜಿಲ್ಲೆಯ ಕಾಪು, ಉಡುಪಿ, ಹೆಬ್ರಿ ಹಾಗೂ ಕುಂದಾಪುರದ ಪ್ರಚಾರ ಸಭೆಗಳಲ್ಲಿ ಭಾಗವಹಿಸಬೇಕಿದ್ದ ವರುಣ್ ಗಾಂಧಿ ಕಾಪುವಿನಲ್ಲಿ ಬರೀ ಆರೇ ನಿಮಿಷಕ್ಕೆ ಭಾವಾವೇಷಗಳಿಲ್ಲದ ಭಾಷಣ ಮುಗಿಸಿಬಿಟ್ರು. ಲಾಲಾಜಿ ಮೆಂಡನ್ ಪರ ಮತ ಯಾಚಿಸಿದ ವರುಣ್ ಗಾಂಧಿ ಈ ಬಾರಿ ಕರ್ನಾಟಕ ಚುನಾವಣೆಯಲ್ಲಿ ಇಡೀ ದೇಶವೇ ಗಮನಿಸುತ್ತಿದೆ. ಈ ಚುನಾವಣೆ ರಾಷ್ಟ್ರ ರಾಜಕಾರಣದಲ್ಲಿ ದೂರಗಾಮಿ ಪರಿಣಾಮ ಬೀರಲಿದೆ ಎಂದರು. ಹೀಗಾಗಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕೇಂದ್ರದಲ್ಲೂ ಬಿಜೆಪಿ ಅಲೆ ಏಳಲಿದೆ ಎಂದರು.ಪ್ರಚಾರ ಸಭೆಯಲ್ಲಿ ಕಾಪು ವಿಧಾನ ಸಭಾ ಅಭ್ಯರ್ಥಿ ಲಾಲಾಜಿ ಮೆಂಡನ್ ಭಾಗವಹಿಸಿ ಈ ಬಾರಿ ಮತ್ತೆ ಬಿಜೆಪಿಯನ್ನು ಗೆಲ್ಲಿಸಬೇಕೆಂದು ವಿನಂತಿಸಿಕೊಂಡ್ರು.
ಕಾಂಗ್ರೆಸ್‌ನ ಹಲವಾರು ಕಾರ್ಯಕರ್ತರು ಈ ಸಂದರ್ಭ ಬಿಜೆಪಿಗೆ ಸೇರ್ಪಡೆಗೊಂಡ್ರು.
ಸಂಸದ ನಳಿನ್‌ಕುಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ, ಕುತ್ಯಾರು ನವೀನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ವರದಿ:ಸ್ಪರ್ಶ,ಉಡುಪಿ.

ಬಿಲ್ಲಾಡಿಯಲ್ಲಿ ಒಣಮರಕ್ಕೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಭಸ್ಮ

ಕುಂದಾಪುರ:  ಬಿಲ್ಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೂದಾಡಿ  ಬನ್ನೆರಳಕಟ್ಟೆ ನಿವಾಸಿ ಸಾಕು ಶೆಡ್ತಿ ಎಂಬುವವರ ಮನೆ ಸಮೀಪದ್  ಕಳೆದ ಮಳೆಗಾಲದಲ್ಲಿ ದರೆಗುರುಳಿದ್ದ ಅಶ್ವಥ್ಥ ಮರವೊಂದಕ್ಕೆ ಶುಕ್ರವಾರ ಮದ್ಯಾಹ್ನದ ಸುಮಾರಿಗೆತಗುಲಿದ ಆಕಸ್ಮಿಕ ಬೆಂಕಿಯಿಂದ ಸಂಪೂರ್ಣ ಮರ ಭಸ್ಮಗೊಂಡಿದ್ದು ಹತ್ತಿರದ ಕೆಲ ಮರಗಳು ಹಾಗೂ ಪೊದೆಗಳು ಬೆಂಕಿಗಾಹುತಿಯಾದ ಘಟನೆ ಸಂಭವಿಸಿದೆ.
DSCN0627
ಮದ್ಯಾಹ್ನದ ಸುಮಾರಿಗೆ ಕಾಣಿಸಿಕೊಂಡ ಆಕಸ್ಮಿಕ ಬೆಂಕಿ ಬೆಂಕಿ ಕ್ರಮೇಣ ಜಾಸ್ಥಿಯಾಗಿದ್ದು ಸಂಪೂರ್ಣ ಅಶ್ವಥ್ಥ ಮರ ಹತ್ತಿ ಉರಿದಿದೆ. .ಸ್ಥಳೀಯರು ಬೆಂಕಿ ನಂದಿಸುವಲ್ಲಿ ಪ್ರಯತ್ನಿಸಿದರಾದರೂ ಬೆಂಕಿ ತೀವ್ರತೆ ಜಾಸ್ಥಿಯಿದ್ದು ಒಣ ಮರವಾದ್ದರಿಂದ ವಿಫಲರಾಗಿ ಅಗ್ನಿಶಾಮಕಕ್ಕೆ ಪೋನಾಯಿಸಿದರು ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಸಂಪೂರ್ಣ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
DSCN0625
DSCN0624
DSCN0623
DSCN0621
DSCN0619
DSCN0618
DSCN0610
DSCN0612
DSCN0611

ಮತದಾರರಲ್ಲಿ ಜಾಗೃತಿ ಆಂದೋಲನ ಜಾಥ: ಡಿಸಿ ಚಾಲನೆ

ಉಡುಪಿ : ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಜಿಲ್ಲಾಡಳಿತದ ಸಹಬಾಗಿತ್ವದಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಜಾಥವು ಉಡುಪಿಯಲ್ಲಿ ನೆಡೆಯಿತು. ಜೋಡುಕಟ್ಟೆಯಿಂದ ಪ್ರಾರಂಭವಾದ ಜಾಥವು ಮೈನ್ ರೋಡ್ ಮೂಲಕ ಸಾಗಿ ಸರ್ವೀಸ್ ಬಸ್ಸ್ ನಿಲ್ದಾಣದ ಬಳಿ ಸಮಾಪನಗೊಂಡಿತು.ಮತದಾನದ ಅರಿವು ಮೂಡಿಸುವ ಜಿಲ್ಲಾಮಟ್ಟದ ಅಧಿಕಾರಿಗಳ ಜಾಥಕ್ಕೆ ಜಿಲ್ಲಾಧಿಕಾರಿ ಎಂ.ಟಿ ರೇಜು ಚಾಲನೆ ನೀಡಿದರು. ಗ್ರಾಮೀಣ ಪ್ರದೇಶದ ಮತದಾರರಿಗಿಂತ ನಗರಪ್ರದೇಶದ ಮತದಾರರು ಮತದಾನದಿಂದ ದೂರ ಸರಿಯುತ್ತಿದ್ದಾರೆ, ಪ್ರತಿಯೊಬ್ಬ ಮತದಾರರು ತಮ್ಮ ಹಕ್ಕನ್ನು ಚಲಾಯಿಸಬೇಕು, ಸರಕಾರಿ ಅಧಿಕಾರಿಗಳು ಅಂಚೆಯ ಮೂಲಕ ಮತದಾನ ಮಾಡಬೇಕೆಂದು ಮತದಾರರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ.ಪಂ ಕಾರ್‍ಯನಿರ್ವಹಣಾಧಿಕಾರಿ ಪ್ರಭಾಕರ್ ಶರ್ಮ, ನಾಗೇಂದ್ರ ಮಧ್ಯಸ್ಥ, ವಾರ್ತಾಧಿಕಾರಿ ಕೆ.ಜುಂಜಣ್ಣ, ಸೀತಾನದಿ ವಿಠಲ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ರಾಹುಲ್, ಸೋನಿಯಾ ಕರ್ನಾಟಕಕ್ಕೆ ಇನ್ನಷ್ಟು ಬರಲಿ: ಸಿ‌ಎಂ ಶೆಟ್ಟರ್ ಲೇವಡಿ.ವರದಿ:ಸ್ಪರ್ಶ,ಉಡುಪಿ
ಉಡುಪಿ:ರಾಹುಲ್ ಗಾಂಧಿ ಕರ್ನಾಟಕಕ್ಕೆ ಬಂದು ಅಂಕಿ ಅಂಶ ಇಟ್ಟುಕೊಂಡು ಮಾತನಾಡಿದರೆ ಒಳ್ಳೆಯದು. ಅದು ಬಿಟ್ಟು ಯಾರೋ ಬರೆದುಕೊಟ್ಟ ಭಾಷಣವನ್ನು ಓದುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರಲ್ಲ ಅಂತಾ ಸಿ‌ಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಉಡುಪಿಯ ಉಪ್ಪುಂದದಲ್ಲಿ ಬೈಂದೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಕುಮಾರ್ ಶೆಟ್ಟಿ ಪರ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ರಾಹುಲ್ ಮತ್ತು ಸೋನಿಯಾ ಗಾಂಧಿ ಹೋದ ಕಡೆಯಲ್ಲಾ ಕಾಂಗ್ರೆಸ್ ದಿವಾಳಿಯಾಗಿದೆ.ಗುಜರಾತ್ ಮತ್ತು ಉತ್ತರಪ್ರದೇಶದಲ್ಲಿ ಇದು ಸಾಬೀತಾಗಿದೆ. ಹೀಗಾಗಿ ಕರ್ನಾಟಕದಲ್ಲೂ ಕಾಂಗ್ರೆಸ್ ಮತ್ತೆ ಸೋಲು ಕಾಣಲಿದೆ ಎಂದು ಲೇವಡಿ ಮಾಡಿದ್ದಾರೆ. ರಾಹುಲ್ ಮತ್ತು ಸೋನಿಯಾಗಾಂಧಿ ಇಬ್ಬರೂ ರಾಜ್ಯಕ್ಕೆ ಹೆಚ್ಚು ಹೆಚ್ಚು ಬರುತ್ತಿರಲಿ ಅಂತಾ ಸಿ‌ಎಂ ಕಾಂಗ್ರೆಸ್ ನಾಯಕರನ್ನು ಚುಚ್ಚಿ ಮಾತನಾಡಿದರು. ಇದೇ ಸಂದರ್ಭ ೫೦೦ ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಸಿ‌ಎಂ ಸಮ್ಮುಖ ಬಿಜೆಪಿ ಸೇರ್ಪಡೆಗೊಂಡರು.

ಚುನಾವಣಾ ಸಂದರ್ಭದಲ್ಲಿ ಕೆಜೆಪಿಯಿಂದ ಚಾರಿತ್ರ್ಯ ವಧೆ: ಸಿ‌ಎಂ ಶೆಟ್ಟರ್ ಗುಡುಗು

ಉಡುಪಿ ಉಡುಪಿ:ಈ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಗೆ ೧೨೫ ರಿಂದ ೧೩೦ ಸ್ಥಾನ ಬರಲಿದೆ ಅಂತಾ ಸಿ‌ಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಉಡುಪಿಯಲ್ಲಿ ಚುನಾವಣೆ ಪ್ರಚಾರದಲ್ಲಿರುವ ಸಿ‌ಎಂ ಮಾಧ್ಯಮದೊಂದಿಗೆ ಮಾತನಾಡಿ ಈ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದ್ದು ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಲಿದೆ .ಕರಾವಳಿ ಸಹಿತ ಎಲ್ಲೆಡೆ ಪಕ್ಷದ ನಾಯಕರು ಒಟ್ಟಾಗಿದ್ದು ಮತ್ತೆ ಬಿಜೆಪಿ ಅಧಿಕಾರ ಗದ್ದುಗೆ ಏರಲಿದೆ ಎಂದರು. ಡಿವಿ‌ಎಸ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ೫ ಕೋಟಿ ರೂಪಾಯಿ ನೀಡುವಂತೆ ಚೀಟಿ ಕಳಿಸಿದ್ದಾಗಿ ಎಂದು ವಿಜಯ್ ಸಂಕೇಶ್ವರ್ ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿ‌ಎಂ ಕೆಜೆಪಿ ಚುನಾವಣೆ ಸಂದರ್ಭ ಚಾರಿತ್ರ್ಯ ವಧೆ ಮಾಡುವ ಕೆಲಸ ಮಾಡುತ್ತಿದೆ. ಸೋಲುವ ಭೀತಿಯಲ್ಲಿರುವ ಕೆಜೆಪಿ ನಾಯಕರು ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಸಿ‌ಎಂ ಗುಡುಗಿದ್ದಾರೆ

ಗಂಗೊಳ್ಳಿಯಲ್ಲಿ ಸರ್ವಧರ್ಮ ಸೌಹಾರ್ದ ಸಮ್ಮಿಲನ,ಸಾಮೂಹಿಕ ವಿವಾಹ:


ಉಡುಪಿ: ಕೋಮು ಗಲಭೆಯ ಸೂಕ್ಷ್ಮ ತಾಣವಾಗಿದ ಉಡುಪಿ ಜಿಲ್ಲೆಯ ಗಂಗೊಳ್ಳಿಯಲ್ಲಿ ಸರ್ವಧರ್ಮ ಸೌಹಾರ್ದ ಸಮ್ಮಿಲನದ ಮಂತ್ರವು ಮೊಣಗುತ್ತಿದೆ, ಇಲ್ಲಿಯ ವೇದಿಕೆಯೊಂದು ಸರ್ವಧರ್ಮ ಮಹಾ ಸಮ್ಮೇಳನ ಹಾಗೂ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಮಾಡುವುದರ ಮೂಲಕ ಸರ್ವಧರ್ಮದ ಒಗ್ಗಟ್ಟಿಗೆ ನಾಂದಿ ಹಾಡುತ್ತಿದೆ.ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿಯ ಸರ್ವಧರ್ಮ ಸೌಹಾರ್ದ ಸಮ್ಮಿಲನ ವೇದಿಕೆಯ ಆಶ್ರಯದಲ್ಲಿ ಸರ್ವಧರ್ಮ ಮಹಾ ಸಮ್ಮೇಳನ, ಸಾಮೂಹಿಕ ವಿವಾಹ ಎಪ್ರಿಲ್ ೨೮ರಂದು ಎಸ್.ವಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನೆಡೆಯಲಿದೆ. ೪೦ ಹಿಂದು ಜೋಡಿ ಮತ್ತು ತಲಾ ಎರಡು ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದವರು ವೈವಾಹಿಕ ಜೀವನಕ್ಕೆ ಕಾಲಿಯಿರಿಸಲಿದ್ದಾರೆ. ಕಾರ್‍ಯಕ್ರಮವನ್ನು ಶಿರೂರು ಸ್ವಾಮೀಜಿ ಉದ್ಘಾಟಿಸಲಿದ್ದಾರೆ, ವೇದಿಕೆಯ ವತಿಯಿಂದ ಸಾರ್ವಜನಿಕರಿಗಾಗಿ ಅಂಬ್ಯುಲೆನ್ಸ್‌ನ್ನು ಕೂಡುಗೆಯಾಗಿ ನೀಡಿದ್ದು ಜಿಲ್ಲಾಧಿಕಾರಿ ಎಂ.ಟಿ ರೇಜು ಉದ್ಘಾಟಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎಂ.ಎಂ ಇಬ್ರಾಹಿಂ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ದಿವಾಕರ್ ಎನ್ ಖಾರ್ವಿ, ಕೆ.ಅಬ್ದುಲ್ ರೆಹಮಾನ್, ಸುಬ್ರಮಣ್ಯ ಉಪಸ್ಥಿತರಿದ್ದರು.

ಉಡುಪಿಯಲ್ಲಿ ಬೀಡಿಕಾರ್ಮಿಕರಿಂದ ಪ್ರತಿಭಟನೆ.ಉಡುಪಿ: ಬೀಡಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ ವತಿಯಿಂದ ಉಡುಪಿ ತಾಲೂಕು ಕಚೇರಿ ಬಳಿ ಪ್ರತಿಭಟನೆ ನೆಡೆಸಲಾಯಿತು.ಬೀಡಿ ಕಾರ್ಮಿಕರಿಗೆ ರಾಷ್ಟ್ರೀಯ ಸಾಮಾನ್ಯ ಕನಿಷ್ಠ ಕೂಲಿ ೧೦೦೦ ಬೀಡಿಗೆ ರೂ ೨೦೦ ಹಾಗೂ ತುಟ್ಟಿಭತ್ಯೆಯನ್ನು ೨೦೧೧ಬೆಲೆ ಏರಿಕೆ ಸೂಚ್ಯಂಕ ಆಧಾರದಲ್ಲಿ ಪ್ರತಿ ಅಂಕ ಒಂದಕ್ಕೆ ೫ಪೈಸೆ ಮತ್ತು ಸುಪ್ರಿಂಕೋರ್ಟ್ ನಿರ್ದೇಶನ ಪ್ರಕಾರ ಹೆಚ್ಚುವರಿ ಒಳಗೊಂಡು ಕನಿಷ್ಠ ಕೂಲಿ ನಿಗದಿಗೊಳಿಸಬೇಕು, ಎಲ್ಲಾ ಬೀಡಿ ಕಾರ್ಮಿಕರಿಗೂ ಲಾಗ್ ಪುಸ್ತಕ ಮತ್ತು ಗುರುತಿನ ಚೀಟಿ ನೀಡಬೇಕು, ಮನೆಕಟ್ಟಲು ನೀಡುವ ಸಹಾಯಧನವನ್ನು ೧.೫ಲಕ್ಷಕ್ಕೆ ಹೆಚ್ಚಿಸಬೇಕು, ಬೀಡಿ ಹಾಗೂ ಸಿಗಾರ್ ಕಾರ್ಮಿಕ ಸೇವಾ ಷರತ್ತುಗಳ ಕಾಯ್ದೆ ೧೯೯೬ನ್ನು ಸೂಕ್ತ ತಿದ್ದುಪಡಿ ಮಾಡಬೇಕು. ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನೆಡೆಸಿದ್ದರು.
ಪ್ರತಿಭಟನೆಯಲ್ಲಿ ಬೋಜ ಸುವರ್ಣ, ಕೆ. ಲಕ್ಷ್ಮಣ್, ಪುಷ್ಪ, ಲಲಿತಾ ಮೊದಲಾದವರು ಉಪಸ್ಥಿತರಿದ್ದರು.

ಉಪ್ಪುಂದ ಹಾಗೂ ಕೋಟೇಶ್ವರಕ್ಕೆ ಇಂದು ಕೋಟೇಶ್ವರದಲ್ಲಿ ಸಿ.ಎಂ. ಕಾರ್ಯಕ್ರಮಕ್ಕೆ ಭರ್ಜರಿ ತಯಾರಿ

ಕುಂದಾಪುರ: ವಿಧಾನಸಭಾ ಚುನಾವನೆಯ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯ ಹಾಗೂ ಬಹಿರಂಗ ಸಭೆಯನ್ನು ನಡೆಸುವ ನಿಟ್ಟಿನಲ್ಲಿ ಉಡುಪಿಯ ಕುಂದಾಪುರದ ಆಗಮಿಸುತ್ತಿರುವ ಮುಖ್ಯಮಂತ್ರಿ ಜಗದೀಶ ಶೆಟ್ಟರವರ ಕೋಟೇಶ್ವರ ಕಾರ್ಯಕ್ರಮಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ.
ಇಲ್ಲಿನ ಕುರುಕ್ಷೇತ್ರ ಮೈದಾನದಲ್ಲಿ ವೇದಿಕೆ ಸಿದ್ದಗೊಂಡಿದ್ದು ಅಂತಿಮ ಹಂತದ ತಯಾರಿ ಕಾರ್ಯಗಳು ಭರದಿಂದ ಸಾಗುತ್ತಿದೆ.
cm-programme (1)
ಭದ್ರತೆ ದ್ರಷ್ಟಿಯಿಂದ ಕೆ.ಎಸ್.ಆರ್.ಪಿ. ತುಕಡಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದ್ದು, ಕುಂದಾಪುರ ಡಿ.ವೈ.ಎಸ್.ಪಿ. ಯಶೋಧಾ ಎಸ್.ಒಂಟಗೋಡಿ, ವ್ರತ್ತನಿರೀಕ್ಷಕ ಮಂಜುನಾಥ ಕವರಿ ಹಾಗೂ ಗುಪ್ತಚರದಳ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕುಂದಾಪುರ ಠಾಣಾದಿಕಾರಿ ಜಯರಾಮ ಡಿ.ಗೌಡ ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಸಂಜೆ ೭.೩೦ ರ ಸುಮಾರಿಗೆ ಆರಂಭವಾಗುವ ಕಾರ್ಯಕ್ರಮಕ್ಕೆ ಸಾವಿರಾರು ಜನರು ಸೇರುವ ನಿರೀಕ್ಷೆ ಇದೆ.

ಯುಪಿಸಿಎಲ್ ಫಲಾನುಭವಿಯಲ್ಲ- ಕಾಪು ಕ್ಷೇತ್ರದ ಅಭ್ಯರ್ಥಿಯಿಂದ ಪ್ರಮಾಣ

ಕಾಫು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ವಿಜಯ ಕುಮಾರ್ ಹೆಗ್ಡೆಯವರು ಇಂದು ಯುಪಿಸಿಎಲ್ ನಿಂದ ಹಣ ಪಡೆದಿಲ್ಲ ಎಂದು ಪ್ರಮಾಣ ಮಾಡುವ ಮೂಲಕ ಪ್ರಚಾರ ಆರಂಭಿಸಿದ್ದಾರೆ. ಕಾಪು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ವಿಜಯಕುಮಾರ್ ಹೆಗ್ಡೆಯವರು ಕಳೆದ ಹಲವಾರು ವರ್ಷಗಳಿಂದ ನಾಗರ್ಜುನ ವಿರೋಧಿ ಹೋರಾಟದಲ್ಲಿ ಗುರುತಿಸಿಕೊಂಡಿದ್ದಾರೆ. ಯುಪಿಸಿಎಲ್ ವಿರೋಧಿ ಹೋರಾಟಗಾರರಾದ ವಿಜಯ್ ಕುಮಾರ್ ಹೆಗ್ಡೆಯವರು ಇದೀಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ತಮ್ಮ ಪ್ರಚಾರಕ್ಕೆ ಮುನ್ನ ಪಡುಬಿದ್ರೆಯ ಖಡ್ಗೇಶ್ವರಿ ದೇವಾಲಯದಲ್ಲಿ ಪ್ರಮಾಣ ಮಾಡಿದರು. ಈ ಸಂಧರ್ಭದಲ್ಲಿ ಮಾತನಾಡಿದ ವಿಜಯ್ ಕುಮಾರ್ ಹೆಗ್ಡೆ ನಾನು ಹಣ ಪಡೆದಿಲ್ಲ ವೆಂದು ಪ್ರಮಾಣ ಮಾಡಿದ್ದು ಇತರ ಪಕ್ಷದವರು ಪ್ರಮಾಣ ಮಾಡುವಂತ ಸಾರ್ವಜನಿಕರು ಆಗ್ರಹಿಸಬೇಕೆಂದು ಒತ್ತಾಯಿಸಿದರುVIJAY2

ಏಪ್ರಿಲ್ ೨೮: ಗಂಗೊಳ್ಳಿಯಲ್ಲಿ ಸರ್ವಧರ್ಮ ಸಮ್ಮೇಳನ ಮತ್ತು ಸರ್ವಧರ್ಮ ಸಾಮೂಹಿಕ ವಿವಾಹ

ವರದಿ:ಸ್ಪರ್ಶ ಉಡುಪಿ.
ಕುಂದಾಪುರ: ಎರಡು ಜೀವಗಳನ್ನು ಬೆಸೆದು ಹೊಸ ಜೀವನವನ್ನು ರೂಪಿಸುವ ಮಧುರ ಬಂಧನ ಮದುವೆ. ಪ್ರತಿಯೊಬ್ಬರ ಬದುಕಿನಲ್ಲೂ ಮರೆಯಲಾಗದ ಅನುಭೂತಿಯ ಪ್ರಮುಖ ಘಟ್ಟ ವಿವಾಹ ಬಂಧನ.  ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರ ಪಾಲಿಗೆ ಮದುವೆ ಎನ್ನುವುದು ಆಡಂಬರದ ಸಮಾರಂಭವಾಗುತ್ತಿದೆ. ಬಡವರ ಪಾಲಿಗಂತೂ ಬದುಕಿನುದ್ದಕ್ಕೂ ಸಾಲದ ಹೊರೆಯನ್ನು ಹೊರಿಸುವ ಮದುವೆಂಬ ಪವಿತ್ರ ಬಂಧನ ಗಗನ ಕುಸುಮವಾಗುತ್ತಿದೆ. ಇದೆಲ್ಲದ್ದಕ್ಕೂ ಪರಿಹಾರವೇ ಸಾಮೂಹಿಕ ವಿವಾಹದ ಕಲ್ಪನೆ.
ಸಾಮೂಹಿಕ ವಿವಾಹವೆನ್ನುವುದು ಹೊಸಕಲ್ಪನೆಯೇನಲ್ಲ. ಹಲವಾರು ಸಂಘ ಸಂಸ್ಥೆಗಳು, ಧಾರ್ಮಿಕ ಕ್ಷೇತ್ರಗಳು ಸಾಮೂಹಿಕ ವಿವಾಹವನ್ನು ವರ್ಷಂಪ್ರತಿ ನಡೆಸಿಕೊಂಡು ಬರುತ್ತಿದೆ.  ಆದರೆ ಸರ್ವಧರ್ಮ ಸಾಮೂಹಿಕ ವಿವಾಹದ ಪರಿಕಲ್ಪನೆಯು ಸಂಘ ಸಂಸ್ಥೆಗಳನ್ನು ನಡೆಯುವುದು ಬಹಳ ಕಡಿಮೆ. ಆದರೆ ಉಡುಪಿ ಜಿಲ್ಲೆಯ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ ಪಂಚಗಂಗಾವಳಿ ತೀರದ ಗಂಗೊಳ್ಳಿಯಲ್ಲಿ ಹುಟ್ಟಿಕೊಂಡ ಸರ್ವಧರ್ಮ ಸೌಹಾರ್ದ ಸಮ್ಮೀಲನ ವೇದಿಕೆ ಏಪ್ರಿಲ್ ೨೮ ರಂದು ಸರ್ವಧರ್ಮ ಸಮ್ಮೇಳನದೊಂದಿಗೆ ಸರ್ವಧರ್ಮ ಸಾಮೂಹಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಮೂಲತಹ ಗಂಗೊಳ್ಳಿಯ ನಿವಾಸಿ ಗೋವಾದ ಕ್ವಾಲಿಟಿ ಫುಡ್ಸ್ ನ ಮಾಲಿಕ ಎಂ. ಎಂ.ಇಬ್ರಾಹಿಂ ಈ ಐತಿಹಾಸಿಕ ಕಾರ್ಯಕ್ರಮದ ಮುಖ್ಯ ಸೃಷ್ಟಕರ್ತರು. ಗಂಗೊಳ್ಳಿಯಲ್ಲಿ ರಕ್ತದಾನ ಕ್ರಾಂತಿ ಸೃಷ್ಟಿಸಿದ ದಿವಾಕರ ಖಾರ್ವಿ ಮತ್ತು ಸಮಾಜ ಸೇವಕ ಅಬ್ದುಲ್ ರೆಹಮಾನ್‌ಅವರು  ಇಬ್ರಾಹಿಂ ಅವರಿಗೆ ಸಾಥ್ ನೀಡಿದ್ದಾರೆ.
ಗಂಗೊಳ್ಳಿಯ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ  ಊರಿನ ಜನತೆಯ ಸಹಕಾರದೊಂದಿಗೆ ವಿವಿಧ ಧರ್ಮಗಳ ಮನಸ್ಸುಗಳ ನಡುವೆ ಸ್ನೇಹ ಸೇತುವೆ ಕಟ್ಟಲು ಸೌಹಾರ್ದ ಸಮ್ಮೀಲನ ವೇದಿಕೆ ಸಜ್ಜಾಗಿದೆ.
ಏಪ್ರಿಲ್ ೨೮ ರಂದು ನಡೆಯುವ ಈ ಕಾರ್ಯಕ್ರಮದಲ್ಲಿ ಸರ್ವಧರ್ಮೀಯರು ಪಾಲ್ಗೊಳ್ಳಲಿದ್ದು ಹಿಂದೂ, ಮುಸ್ಲಿಂ, ಕ್ರೈಸ್ತರ ಸಹಿತ ೪೯ ಜೋಡಿ ಹಸೆಮಣೇಯೇರಲಿದೆ. ಈ ವಿಶಿಷ್ಟ ಕಾರ್ಯಕ್ರಮಕ್ಕೆ ಮಿಸ್ ಮಾಡದೆ ಪಾಲ್ಗೊಳ್ಳಿ.

ವರುಣದಲ್ಲಿ ಸಿದ್ಧು ಸೋಲ್ತಾರೆ: ಕಾರ್ಕಳದಲ್ಲಿ ಡಿವಿ‌ಎಸ್ ಭವಿಷ್ಯ


ಉಡುಪಿ:ಮೂವತ್ತು ರೂಪಾಯಿಗೆ ಮೂವತ್ತು ಕೆಜಿ ಅಕ್ಕಿ ನೀಡುವ ಕಾಂಗ್ರೆಸ್ ಪ್ರಣಾಳಿಕೆ ಬಡವರ ಬಗ್ಗೆ ಕಾಳಜಿ ಇಲ್ಲದ ಬರೀ ನಾಟಕ ಅಂತಾ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಡಿ. ವಿ. ಸದಾನಂದ ಗೌಡ ಲೇವಡಿ ಮಾಡಿದ್ದಾರೆ. ಬಿಜೆಪಿ ಎರಡು ರೂಪಾಯಿಗೆ ಅಕ್ಕಿ ನೀಡುವ ಯೋಜನೆ ತಂದಾಗ ಚುನಾವಣಾ ಆಯೋಗದ ಮುಂದೆ ದೂರು ದಾಖಲಿಸಿದ್ದ ಕಾಂಗ್ರೇಸ್ ಈಗ ನಾಟಕವಾಡುತ್ತಿದೆ ಅಂತ ಡಿವಿ‌ಎಸ್ ಕಿಡಿಕಾರಿದರು. ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಕಲ್ಯದಲ್ಲಿ ಸುನೀಲ್ ಕುಮಾರ್ ಮತಯಾಚನೆ ಮಾಡಿದ ಸದಾನಂದ ಗೌಡ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲು ಸಾದ್ಯವಾಗದ ಕಾಂಗ್ರೆಸ್ ಸಮರ್ಥ ನಾಯಕತ್ವದ ಮಾತನಾಡುವುದರಲ್ಲಿ ಅರ್ಥವಿಲ್ಲ , ಸಿದ್ಧರಾಮಯ್ಯನವರನ್ನು ಕಾಂಗ್ರೆಸ್‌ನವರೇ ಸೋಲಿಸುತ್ತಾರೆ.  ಸಿದ್ಧರಾಮಯ್ಯ ಅವರಿಗೆ ಪರಿಶಿಷ್ಟ ಜಾತಿಯವರೇ ಮತ ಹಾಕುವುದಿಲ್ಲ ಅಂತಾ ಡಿವಿ‌ಎಸ್ ವ್ಯಂಗ್ಯವಾಡಿದರು. ಬಿಜೆಪಿ ಜಗದೀಶ್ ಶೆಟ್ಟರ್ ಮುಂದಿನ ಮುಖ್ಯಮಂತ್ರಿ ಅಂತಾ ಘೋಷಿಸಿದ್ದೇವೆ ಆದರೆ ಕಾಂಗ್ರೆಸ್ ಮಾತ್ರ ಎಲ್ಲರೂ ಸಿ‌ಎಂ ಎಂಬ ಕಚ್ಚಾಟದಲ್ಲಿ ತೊಡಗಿದೆ. ಕೋಟಿ ಕೋಟಿ ಹಗರಣದಲ್ಲಿ ಯುಪಿ‌ಎ ಸರ್ಕಾರ ರಾಜ್ಯದ ಹಗರಣದ ಬಗ್ಗೆ ಮಾತನಾಡುವ ನೈತಿಕತೆಯನ್ನು ಕಳಕೊಂಡಿದೆ ಎಂದು ಸದಾ ರಾಹುಲ್‌ಗೆ ಟಾಂಗ್ ನೀಡಿದರು. ಆಡ್ವಾಣೆಯನ್ನು ಟೀಕಿಸಿದ ಧನಂಜಯ್ ಕುಮಾರ್ ಹೇಳಿಕೆ ಪ್ರತಿಕ್ರಯಿಸಿದ ಡಿವಿ‌ಎಸ್ ಅವರ ಹೇಳಿಕೆಗೆ ಯಾವುದೇ ಮಹತ್ವವಿಲ್ಲ. ಎಲ್ಲವನ್ನೂ ಕಳೆದುಕೊಂಡ ಮನುಷ್ಯ ಹೇಗೆ ತನ್ನ ಮಾನಸಿಕ ಸ್ಥಿಮಿತ ಕಳೆದಕೊಳ್ಳುತ್ತಾನೋ ಅದೇ ಸ್ಥಿತಿ ಧನಂಜಯರದ್ದಾಗಿದೆ ಎಂದು ಡಿವಿ‌ಎಸ್ ಲೇವಡಿ ಮಾಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ಕಾರ್ಕಳ ವಿಧಾನ ಸಭಾ ಅಭ್ಯರ್ಥಿ ಸುನೀಲ್ ಕುಮಾರ್ ಉಪಸ್ಥಿತರಿದ್ದರು

ಕುಂಭಾಸಿಯಲ್ಲಿ ವ್ಯಕ್ತಿಯೋರ್ವ ಅನುಮಾನಾಸ್ಪದವಾಗಿ ಸಾವು

ಕುಂದಾಪುರ: ವ್ಯಕ್ತಿಯೋರ್ವ ಅನುಮಾನಾಸ್ಪದವಾಗಿ ಮ್ರತಪಟ್ಟಿರುವ ಘಟನೆ ಇಲ್ಲಿನ ಆನೆಗುಡ್ಡೆ ಗೋಪುರದ ಸಮೀಪದ ಗಿರಿಜನ ಕಾಲೋನಿಯ ಬಳಿ ಸಂಭವಿಸಿದೆ.
ಮೃತಪಟ್ಟ ವ್ಯಕ್ತಿಯನ್ನು ಕೊರವಡಿ ನಿವಾಸಿ ಕೃಷ್ಣ ಮೊಗವೀರ ಹಾಗೂ ರಾಧಾ ಅವರ ಪುತ್ರ ಗಣೇಶ ಮೊಗವೀರ (೩೭)ಎಂದು ಗುರುತಿಸಲಾಗಿದೆ.
ಕೂಲಿ ಕೆಲಸ ಮಾಡಿಕೊಂಡಿದ್ದ ಗಣೇಶ ಬುಧವಾರ ಬೆಳಿಗ್ಗಿನಿಂದಲೇ ಈ ಪ್ರದೇಶದಲ್ಲಿ ಒದ್ದಾಡುತ್ತಿದ್ದ ಸ್ಥಿತಲ್ಲಿದ್ದ ಹಾಗೂ ಸ್ಥಳೀಯರೋರ್ವರಲ್ಲಿ ದಾಹ ತಣಿಸಲು ನೀರು ಕೇಳಿ ಪಡೆದಿದ್ದ ಎನ್ನಲಾಗಿದೆ. ವಿಪರೀತ ಮದ್ಯಪಾನ ಚಟಹೊಂದಿದ್ದ್ದ ಈತ ಮನೆಗೂ ಸರಿಯಾಗಿ ಹೋಗದೇ ದುಶ್ಚಟಗಳ ದಾಸನಾಗಿದ್ದ ಎನ್ನಲಾಗಿದೆ.
ಸಂಜೆ ಸುಮಾರಿಗೆ ಸ್ಥಳಿಯರೋರ್ವರು ವ್ಯಕ್ತಿ ಬಿದ್ದಿರುವುದು ಗಮನಿಸಿ ಪರೀಕ್ಷಿಸಿದಾಗ ಗಣೇಶ ಮೊಗವೀರ ಮ್ರತಪಟ್ಟಿರುವುದು ತಿಳಿದುಬಂದಿದೆ. ಆತ ಬಿದ್ದ ಕೆಲವು ಅಡಿ ದೂರದಲ್ಲಿ ನಾಣ್ಯಗಳು ಬಿದ್ದಿದ್ದವು.. ಹಾಗೂ ಆತ ಹೊರಳಾಡಿದ ಪರಿಣಾಮ ಗಿಡ-ಗಂಟಿಗಳು ಚದುರಿದ್ದು ಗೋಚರಿಸುತ್ತಿತ್ತು.
ಅವಿವಾಹಿತನಾದ ಗಣೆಶ ಮೊಗವೀರ ಕೃಷ್ಣ ಹಾಗೂ ರಾಧಾ ದಂಪತಿಗಳ ಏಳು ಜನ ಮಕ್ಕಳಲ್ಲ್ಲಿ ೩ ನೇಯವನಾಗಿದ್ದ.
ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿನ ರಹಸ್ಯ ಬಯಲಾಗಲಿದೆ. ಸದ್ಯ ಕುಂದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಉಡುಪಿ ನಗರದಲ್ಲಿ ಪ್ರಮೋದ್ ಮಧ್ವರಾಜ್ ರೋಡ್ ಶೋ

ವರದಿ:ಸ್ಪರ್ಶ ಉಡುಪಿ
pramod
ಉಡುಪಿ:ಉಡುಪಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರಿಂದ ರೋಡ್ ಶೋ ಮತ್ತು ಚುನಾವಣೆ ಪ್ರಚಾರ ಉಡುಪಿ ನಗರದಲ್ಲಿ ನಡೆಯಿತು. ಜೋಡುಕಟ್ಟೆಯಿಂದ ಆರಂಭವಾದ ಪಾದಯಾತ್ರೆಯಲ್ಲಿ ಪ್ರಮೋದ್ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ನಂತರ ನಡೆದ ಸಭೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫೆರ್ನಾಂಡೀಸ್ ಕಾಂಗ್ರೆಸ್ ಅಭಿವೃದ್ಧಿ ಯೋಜನೆಗಳ ಕುರಿತು ಮಾತನಾಡಿದರು.ದೇಶದಲ್ಲಿನ ಬಡಜನತೆಯ ಉದ್ಧಾರಕ್ಕಾಗಿ ಕಾಂಗ್ರೆಸ್ ಪಕ್ಷ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡವರ ಏಳಿಗೆಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ಪ್ರಣಾಳಿಕೆಯಲ್ಲಿ ಈ ಎಲ್ಲಾ ಯೋಜನೆಗಳನ್ನು ಅಡಕಗೊಳಿಸಿದೆ. ರಾಜ್ಯದಲ್ಲಿ ಅನೇಕ ಸಾಂಪ್ರದಾಯಿಕ ಕಸುಬುಗಳು ಅವನತಿ ಅಂಚಿನತ್ತ ಸಾಗುತ್ತಿದ್ದು ಎಲ್ಲಾ ಕಸುಬುಗಳನ್ನು ಮತ್ತೆ ಜೀವ ನೀಡಲು ನಿಗಮ ಮಂಡಳಿಯನ್ನು ಸ್ಥಾಪಿಸಲಾಗುವುದು ಎಂದು ಕಾಂಗ್ರೆಸ್ ಕೇಂದ್ರ ನಾಯಕ ಆಸ್ಕರ್ ಫೆರ್ನಾಂಡೀಸ್ ಹೇಳಿದರು.
ಉಡುಪಿ ಮತ್ತು ಮಂಗಳೂರು ನಗರಕ್ಕೆ ವಿಶಿಷ್ಟ ಯೋಜನೆಯ ರೂಪುರೇಶೆಯನ್ನು ಸಿದ್ಧಪಡಿಸಲಾಗಿದೆ ಎಂದ ಆಸ್ಕರ್ ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಇನ್ನಷ್ಟು ಉತ್ತೇಜನ ನೀಡುವುದರ ಜೊತೆಗೆ ಬಡವರ ಆರೋಗ್ಯ ಸ್ಥಿರತೆಗಾಗಿ ಹೈಟೆಕ್ ಆಸ್ಪತ್ರೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದರು.
ಕಾಂಗ್ರೆಸ್ ನಾಯಕರಾದ ಅಮೃತ್ ಶೆಣೈ, ಯತೀಶ್ ಕರ್ಕೇರ, ಬಿರ್ತಿ ರಾಜೇಶ್ ಶೆಟ್ಟಿ, ಕೇಶವ ಕೋಟ್ಯಾನ್, ಎಂ. ಎ. ಗಫೂರ್, ವೆರೋನಿಕಾ ಕರ್ನೇಲಿಯೋ ಮೊದಲಾದವರು ಉಪಸ್ಥಿತರಿದ್ದರು.

ಉತ್ಸವಮೂರ್ತಿ ಶೆಟ್ರು-ಗರ್ಭ ಗುಡಿಯ ದೇವರು ಭಟ್ರು / ಉಡುಪಿಯಲ್ಲಿ ಬಿಜೆಪಿ ಜೋಡಿ ಪ್ರಚಾರ

ಕಾಲಚಕ್ರ ತಿರುಗಿದ್ದು ನೋಡಿದ್ರಾ? ಯಾವ ಸುಧಾಕರ ಶೆಟ್ಟರ ಬಿಜೆಪಿ ಟಿಕೆಟ್ ಕಿತ್ತು ರಘುಪತಿ ಭಟ್ಟರಿಗೆ ಕೊಡಲಾಗಿತ್ತೋ, ಅದೇ ಟಿಕೆಟ್ ಈಗ ಶೆಟ್ರ ಕಾಲ್ಬುಡಕ್ಕೆ ಬಂದು ಬಿದ್ದಿದೆ. ಶೆಟ್ರು ಮತ್ತು ಭಟ್ರ ಜೋಡಿ ಪ್ರಚಾರ ಸದ್ಯ ಉಡುಪಿ ಕ್ಷೇತ್ರದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಸೀಡಿ ಪ್ರಕರಣ ನಡೆದ ಬಳಿಕ ಶಾಸಕ ರಘುಪತಿ ಭಟ್ ಸೈಲೆಂಟಾಗ್ತಾರೆ ಅಂತಾನೆ ಭಾವಿಸಲಾಗಿತ್ತು. ಆದ್ರೆ ಯಾರಿಗೆ ಗೊತ್ತಿತ್ತು ಅದನ್ನೇ ಸಹಾನುಭೂತಿಯ ದಾಳ ಮಾಡ್ಕೊಂಡು ಬಿಜೆಪಿ ಪ್ರಚಾರ ತಂತ್ರ ಹೆಣೆಯುತ್ತೆ ಅಂತ. ತಂತ್ರಗಾರಿಕೆ ಏನೋ ಚನ್ನಾಗಿದೆ. ರಘುಪತಿ ಭಟ್ ಅಭ್ಯರ್ಥಿ ಆಗಿಲ್ಲ ಅಂದ್ರೆ ಪ್ರಚಾರದಲ್ಲಿ ಭಾಗವಹಿಸಲ್ಲ ಅಂತ ಕಾರ್ಯಕರ್ತರು ಅಬ್ಬರಿಸೋದು, ಮೂರು ದಿನದ ಹೈಡ್ರಾಮಾದ ಬಳಿಕ ಶಾಸಕರೇ ಸುಧಾಕರ ಶೆಟ್ರ ಹೆಸರು ಸೂಚಿಸೋದು. ಹಳೇ ಎದುರಾಳಿಗಳು ಜಂಟಿಯಾಗಿ ಮತಯಾಚನೆ ಮಾಡೋದು. ಸೂಪರ್ ಐಡಿಯಾ! ಶೆಟ್ರು ಉತ್ಸವಮೂರ್ತಿ, ಸದ್ಯಕ್ಕಂತೂ ಭಟ್ರೇ ಗರ್ಭಗುಡಿಯ ದೇವರು.
raghupathi sudhakar2
ಕಾಂಗ್ರೆಸ್ ನವರಿಗಂತೂ ಸೀಡಿ ಪ್ರಕರಣ ನಿಭಾಯಿಸೋದು ಹೇಗೆ ಅಂಥ ಇವತ್ತಿಗೂ ಅರ್ಥವಾಗಿಲ್ಲ. ಸೀಡಿ ಬಗ್ಗೆ ಪ್ರಚಾರ ಮಾಡಿದ್ರೆ ತಾವೇ ಮಾಡಿಸಿದ್ದು ಅನ್ನೋ ಆರೋಪದ ಭೀತಿ. ಅದರ ಬಗ್ಗೆ ಮಾತಾಡಿಲ್ಲ ಅಂದ್ರೆ, ಬಿಜೆಪಿಯ ಸಹಾನುಭೂತಿಯ ರಣತಂತ್ರಕ್ಕೆ ಬಲಿಯಾಗುವ ಆತಂಕ. ಒಟ್ಟಾರೆ ಗೊಂದಲ!?
ಸೀಡಿ ಪ್ರಕರಣ, ರಘುಪತಿ ಭಟ್ಟರ ಅಭ್ಯರ್ಥಿತನಕ್ಕೆ ಕುತ್ತು ತರೋಕೆ ವಿರೋಧಿಗಳು ಹೂಡಿದ ಷಡ್ಯಂತ್ರ ಅನ್ನೋದನ್ನೇ ಸದ್ಯ ಜೋಡಿ ಪ್ರಚಾರದಲ್ಲಿ ಬಿಜೆಪಿ ಹೈಲೈಟ್ ಮಾಡ್ತಿದೆ. ಪಕ್ಷದ ಕಾರ್ಯಕರ್ತರ ಒಲವು ಉಳಿಸಿಕೊಳ್ಳೋಕೆ ಇದು ಓಕೆ. ಮೊದಲ ಹಂತದ ಪ್ರಚಾರದಲ್ಲಿ ಕಾರ್ಯಕರ್ತರಿಗೆ ಈ ವಿಚಾರ ಮನವರಿಕೆ ಮಾಡೋಕೆ ಬಿಜೆಪಿ ಸ್ವಲ್ಪ ಯಶಸ್ವಿಯೂ ಆಗಿದೆ. ಇನ್ನು ಮತದಾರರನ್ನು ಬೇಟಿ ಮಾಡೋ ಸಂದರ್ಭ ಈ ರಣತಂತ್ರ ವರ್ಕ್‌ಔಟ್ ಆಗುತ್ತೋ ಗೊತ್ತಿಲ್ಲ!
ರಾಜಕೀಯದಲ್ಲಿ ಯಾರೂ ಶತ್ರುಗಳಿಲ್ಲ, ಮಿತ್ರರೂ ಇಲ್ಲ ಅಂತಾರಲ್ಲ, ಅದಂತೂ ಪರಮಸತ್ಯ. ಯಾವತ್ತೋ ಶಾಸಕರಾಗಬೇಕಿದ್ದ ಸುಧಾಕರ ಶೆಟ್ರು, ಸಂಕಟ ಬಂದಾಗ ವೆಂಕಟರಮಣನ ಪಾತ್ರ ನಿಭಾಯಿಸ್ತಿರೋದು, ಶಾಸಕ ಭಟ್ರ ಜೊತೆಗೂಡಿ ಪ್ರಚಾರ ಮಾಡೋದು ಎಲ್ಲವೂ ಮಜವಾಗಿದೆ. ಆ ದಿನ ಟಿಕೆಟ್ ತಪ್ಪಿದಾಗ ಯಾವ ಶಾರದಾ ಹೊಟೇಲ್ ನಲ್ಲಿ ಬಂಡಾಯದ ಬಾವುಟ ಹಾರಿತ್ತೋ ಅಲ್ಲೇ ಇವತ್ತು, ಬಿಜೆಪಿಯ ರಣತಂತ್ರ ರೂಪಪಡೆದುಕೊಳ್ಳುತ್ತಿದೆ.
ಸುಧಾಕರ ಶೆಟ್ರ ಹಳೇ ವೋಟ್ ಬ್ಯಾಂಕ್, ಬಂಟ ಫ್ಯಾಕ್ಟರ್, ಬಿಜೆಪಿಯ ಮೂಲಮತ, ಶಾಸಕರ ಅಭಿವೃದ್ಧಿಕಾರ್ಯ ಪ್ಲಸ್......ಸೀಡಿ ಷಡ್ಯಂತ್ರದ ಸಹಾನುಭೂತಿ ಎಲ್ಲವನ್ನೂ ಗುಣಿಸಿ, ಕೂಡಿಸಿ, ಅಳೆದು, ತೂಗಿ ನೋಡಿದಾಗ, ಕಾಂಗ್ರೆಸ್ ನವರು ವಿನ್ನಿಂಗ್ ಮಾರ್ಜಿನ್ ಲೆಕ್ಕ ಹಾಕೋದು ಬಿಟ್ಟು, ಸ್ವಲ್ಪ ಎಚ್ಚರಿಕೆವಹಿಸೋದು ಒಳ್ಳೇದು.. ಅಲ್ವಾ

ಕಾಪು ಕ್ಷೇತ್ರದ ಅಭ್ಯರ್ಥಿ ಶಾಸಕ ಲಾಲಾಜಿ ಮೆಂಡನ್ ನಾಮಪತ್ರ ಸಲ್ಲಿಕೆ.
ಉಡುಪಿ:ಶಾಸಕ ಲಾಲಾಜಿ ಮೆಂಡನ್ ಕಾಪು ಕ್ಷೇತ್ರದ ಉಮೇದುವಾರಿಕೆಗೆ ನಾಮಪತ್ರ ಸಲ್ಲಿಸಿದರು. ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ ಕಾಪು ಶಾಸಕ ಲಾಲಾಜಿ ಮೆಂಡನ್ ಉಡುಪಿ ತಾಲೂಕು ಕಚೇರಿಯಲ್ಲಿ ಕಾಪು ವಿಧಾನ ಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಲಾಲಾಜಿ ಪತ್ನಿ ಇಂದಿರಾ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಉಪೇಂದ್ರ ನಾಯಕ್, ಬಿಜೆಪಿ ಮುಖಂಡರಾದ ಕಟಪಾಡಿ ಶಂಕರ ಪೂಜಾರಿ, ಕುತ್ಯಾರು ನವೀನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಕಳ: ಬಿಜೆಪಿ ಅಭ್ಯರ್ಥಿ ಸುನೀಲ್ ಕುಮಾರ್ ನಾಮಪತ್ರ ಸಲ್ಲಿಕೆಉಡುಪಿ:ಮಾಜಿ ಶಾಸಕ ಸುನೀಲ್ ಕುಮಾರ್ ಕಾರ್ಕಳ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಕಾರ್ಕಳ ಕ್ಷೇತ್ರದಿಂದ ಮೂರನೇ ಬಾರಿಗೆ ಸ್ಪರ್ಧಿಸುತ್ತಿರುವ ಸುನೀಲ್ ಕುಮಾರ್ ಕಳೆದ ಕಾಂಗ್ರೆಸ್ ಅಭ್ಯರ್ಥಿ ಗೋಪಾಲ್ ಭಂಡಾರಿ ಅವರಿಂದ ಅಲ್ಪಮತದಿಂದ ಸೋಲು ಕಂಡಿದ್ದರು. ಕಳೆದ ಬಾರಿ  ಸದಾನಂದ ಗೌಡರಿಂದ ತೆರವಾಗಿದ್ದ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣಾ ಅಭ್ಯರ್ಥಿಯಾಗಿ ಸ್ಫರ್ಧಿಸಿ ಸೋಲು ಕಂಡಿದ್ದರು. ಈ ಬಾರಿ ಮತ್ತೆ ತಮ್ಮ ಅದೃಷ್ಟವನ್ನು ಪರೀಕ್ಷೆಗೊಡ್ಡಿದ್ದಾರೆ.

ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ನಾಮಪತ್ರ ಸಲ್ಲಿಕೆ,ಬೈಕ್ ರ್‍ಯಾಲಿಯಲ್ಲಿ ನೂರಾರು ಕಾರ್ಯಕರ್ತರು ಬಾಗಿ

ಯೋಗೀಶ್ ರೈ, ಸುಧಾಮ ಶೆಟ್ಟಿ ಮಲ್ಲಾರು ಹಾಗೂ ನೂರಾರು ಕಾರ್ಯಕರ್ತರು ಬಾಗಿಯಾಗಿದ್ದಾರೆಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯಾರ್ಥಿಯಾಗಿ ಶಾಸಕ ಲಾಲಾಜಿ ಆರ್. ಮೆಂಡನ್ ಸೋಮವಾರ ನೂರಾರು ಕಾರ್ಯಕರ್ತರೊಂದಿಗೆ ಬೈಕ್ ರ್‍ಯಾಲಿಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.
ಬೈಕ್‌ರ್‍ಯಾಲಿಗೆ ಮುನ್ನ ಕಾಪು ಶ್ರೀಲಕ್ಷ್ಮೀ ಜನಾರ್ದನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ತದ ನಂತರ ಪಕ್ಷದ ಮುಖಂಡರೊಂದಿಗೆ ಬೈಕ್ ರ್‍ಯಾಲಿಗೆ ಚಾಲನೆ ನೀಡಿ ತಾನು ಕೂಡಾ ಬೈಕ್‌ನಲ್ಲೇ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.
ಈ ಸಂದರ್ಭ ಪಕ್ಷದ ಪ್ರಮುಖರಾದ ಬಿಜೆಪಿ ಕಾಪು ಕ್ಷೇತ್ರಧ್ಯಾಕ್ಷ ನವೀನ್ ಶೆಟ್ಟಿ ಕುತ್ಯಾರು, ಜಿಲ್ಲಾ ಪಂಚಾಯತ್ ಅಧ್ಯಕ್ಷ ಉಪೇಂದ್ರ ನಾಯಕ್, ಜಿ.ಪಂ. ಮಾಜಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ, ಜಿ.ಪಂ. ಸದಸ್ಯ ಅರುಣ್ ಶೆಟ್ಟಿ ಪಾದೂರು, ರವೀಂದ್ರ ಶೆಟ್ಟಿ ಕೊಲ್ಲಬೆಟ್ಟು, ವಿಜಯ ಕರ್ಕೇರ, ಶಿವಪ್ರಸಾದ್ ಶೆಟ್ಟಿ, ಜಗದೀಶ ಆಚಾರ್ಯ, ಸಂತೋಷ್ ಸುವರ್ಣ ಬೊಳ್ಜೆ ಉದ್ಯಾವರ, ಚಂದ್ರಶೇಖರ ಶೆಟ್ಟಿ ಉಚ್ಚಿಲ,

ಕಾಫು ಕಾಂಗ್ರೆಸ್ ಅಭ್ಯರ್ಥಿ- ಮತ್ತೆ ಬಾಕಿಯಿರಿಸಿದ ಕಾಂಗ್ರೆಸ್


ಕಾಫು ವಿಧಾನಸಭ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಆಯ್ಕೆ ಇಂದು ಘೋಷಣೆಯಾಗಬಹುದೆಂದು ನಿರೀಕ್ಷಿಸಲಾಗಿತ್ತಾದರೂ ಕಾಂಗ್ರೆಸ್ ಪಟ್ಟಿಯಲ್ಲಿ ಕಾಪು ಕ್ಷೇತ್ರದ ಅಭ್ಯರ್ಥಿಯ ಘೋಷಣೆಯನ್ನು ಇನ್ನು ಮಾಡಿಲ್ಲ. ಕಾಪು ಕ್ಷೇತ್ರ ಸೇರಿದಂತೆ ಆಕಾಂಕ್ಷಿಗಳ ತೀವೃ ಒತ್ತಡವಿದ್ದ ಕ್ಷೇತ್ರಗಳ ಪಟ್ಟಿಯನ್ನು ಇಂದು ಘೋಷಣೆ ಮಾಡುವ ನಿಟ್ಟಿನಲ್ಲಿ ಆಸ್ಕರ್ ಫೆರ್ನಾಂಡಿಸ್ ನೇತೃತ್ವದಲ್ಲಿ ಸುಮಾರು ಮೂರು ಗಂಟೆಗಳ ಚರ್ಚೆ ನಡೆದರೂ ಕಾಫು ಕ್ಷೇತ್ರದ ಹೆಸರನ್ನು ಘೋಷಣೆ ಮಾಡುವಲ್ಲಿ ಕಾಂಗ್ರೆಸ್ ಮುಖಂಡರಿಗೆ ಇನ್ನು ಸಾಧ್ಯವಾಗಿಲ್ಲ.
ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಗಳಾಗಿರುವ ವಿನಯಕುಮಾರ್ ಸೊರಕೆ ಮತ್ತು ವಸಂತ ಸಾಲ್ಯಾನ ನಡುವೆ ಇರುವ ಪೈಪೋಟಿಯಿಂದ ಟಿಕೇಟ್ ಘೋಷಣೆ ಮಾಡಲು ಹೈಕಮಾಂಡ್ ಗೆ ಸಾಧ್ಯವಾಗುತ್ತಿಲ್ಲ. ಇನ್ನು ನಾಮಪತ್ರ ಸಲ್ಲಿಸಲು ಎಪ್ರಿಲ್ 17 ರಂದು ಕೊನೆ ದಿನಾಂಕವಾಗಿರುವುದರಿಂದ ಶೀಘ್ರದಲ್ಲಿಯೆ ಕಾಂಗ್ರೆಸ್ ಕಾಫು ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ

ಕುಂದಾಪುರದಲ್ಲಿ ಅಂತಿಮದಿನವಾದ ಬುಧವಾರ ನಾಮಪತ್ರ ಸಲ್ಲಿಕೆ ಭರಾಟೆ

ಕುಂದಾಪುರ: ಮೆ.೫ ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧಿಸುತ್ತಿರುವ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಬುಧವಾರ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿದ್ದು ಬೈಂದೂರು ಬಿಜೆಪಿ ಅಭ್ಯರ್ಥೀ ಸುಕುಮಾರ ಶೆಟ್ಟಿ, ಕೆಜೆಪಿಯಿಂದ ನವೀನ್ ಚಂದ್ರ ,ಜೆಡಿ‌ಎಸ್ ಅಭ್ಯರ್ಥಿ ಸುರಯಾ ಭಾನು,ಪಕ್ಷೇತರ ಅಭ್ಯರ್ಥಿ ಸುರೇಶ್ ಪೂಜಾರಿ, ಅಬ್ದುಲ ಅಜೀಜ್ ನಾಮಪತ್ರ ಸಲ್ಲಿಸಿದರೆ ಕುಂದಾಪುರ ಬಿ‌ಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ಕೋಟಾ ಇಬ್ರಾಹಿಂ ನಾಮಪತ್ರ ಸಲ್ಲಿಸಿದರು.
ಬೈಂದೂರು ಕೆಜೆಪಿಯಿಂದ ನವೀನ್ ಚಂದ್ರ ಉಪ್ಪುಂದ ನಾಮಪತ್ರ ಸಲ್ಲಿಕೆ
ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಕೆಜೆಪಿ ಪಕ್ಷದ ಅಭ್ಯರ್ಥಿ ನವೀನ್ ಚಂದ್ರ ಉಪ್ಪುಂದ ಬುಧವಾರ ಮದ್ಯಹ್ನದ ಸುಮಾರಿಗೆ ಕುಂದಾಪುರ ತಾಲೂಕು ಕಛೇರಿಯಲ್ಲಿ ಬೈಂದೂರು ಚುನಾವಣಾಧಿಕಾರಿ ಡಾ.ಡಿ. ಪ್ರಭುಲಿಂಗರವರಿಗೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೆಜೆಪಿ ಜಿಲ್ಲಾಧ್ಯಕ್ಷ ಅಶೋಕ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ವಿಜಯಕುಮಾರ್ ಗುಂಡ್ಮಿ, ತಾಲೂಕು ಪ್ಂಚಾಯ್ತ್ ಸದಸ್ಯರಾದ ಗೌರಿ ದೇವಾಡಿಗ,ಪ್ರಸನ್ನ ಕುಮಾರ್ ಇದ್ದರು.
ಬೈಂದೂರು ಜೆಡಿ‌ಎಸ್ ಅಭ್ಯರ್ಥಿ ಸುರಯಾ ಭಾನು ನಾಮಪತ್ರ ಸಲ್ಲಿಕೆ
ಕುಂದಾಪುರ: ಬೈಂದೂರು ವಿಧಾನಸಭ ಅಕ್ಷೇತ್ರದಿಂದ ಪಕ್ಷೆತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಬೈಂದೂರು ಸುರಾಯಾ ಭಾನು ಬುಧವಾರ ನಾಮಪತ್ರವನ್ನು ಬೈಂದೂರು ಕ್ಷೇತ್ರ ಚುನಾವಣಾಧಿಕಾರಿ ಡಾ.ಡಿ.ಪ್ರಭುಲಿಂಗುರವರಿಗೆ ಸಲ್ಲಿಸಿದರು.
ಬೈಂದೂರು ಪಕ್ಷೇತರ ಅಭ್ಯರ್ಥಿ ಸುರೇಶ್ ಪೂಜಾರಿ ನಾಮಪತ್ರ ಸಲ್ಲಿಕೆ
ಕುಂದಾಪುರ: ಬೈಂದೂರು ವಿಧಾನಸಭ ಅಕ್ಷೇತ್ರದಿಂದ ಪಕ್ಷೆತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಉಪ್ಪುಂದ ಸುರೇಶ್ ಪೂಜಾರಿ ಬುಧವಾರ ನಾಮಪತ್ರವನ್ನು ಬೈಂದೂರು ಕ್ಷೇತ್ರ ಚುನಾವಣಾಧಿಕಾರಿ ಡಾ.ಡಿ.ಪ್ರಭುಲಿಂಗುರವರಿಗೆ ಸಲ್ಲಿಸಿದರು.
ಬೈಂದೂರು ಪಕ್ಷೇತರ ಅಭ್ಯರ್ಥಿ ಅಬ್ದುಲ್ ಅಜೀಜ್ ನಾಮಪತ್ರ ಸಲ್ಲಿಕೆ
ಕುಂದಾಪುರ: ಬೈಂದೂರು ವಿಧಾನಸಭ ಅಕ್ಷೇತ್ರದಿಂದ ಪಕ್ಷೆತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಗಂಗೊಳ್ಳಿ ಅಬ್ದುಲ್ ಅಜೀಜ್ ಬುಧವಾರ ನಾಮಪತ್ರವನ್ನು ಬೈಂದೂರು ಕ್ಷೇತ್ರ ಚುನಾವಣಾಧಿಕಾರಿ ಡಾ.ಡಿ.ಪ್ರಭುಲಿಂಗುರವರಿಗೆ ಸಲ್ಲಿಸಿದರು.
ಕುಂದಾಪುರ ಬಿ‌ಎಸ್ ಆರ್ ಕಾಂಗ್ರೆಸ್ ಪಕ್ಷದಿಂದ ಕೋಟಾ ಇಬ್ರಾಹಿಂ ನಾಮಪತ್ರ ಸಲ್ಲಿಕೆ
ಕುಂದಾಪುರ: ಕುಂದಾಪುರ ವಿದಾನಸಭಾ ಕ್ಷೇತ್ರದ ಬಿ.ಎಸ್.ಆರ್. ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕೋಟದ ಇಬ್ರಾಹಿಂ ಅವರು ಬುಧವಾರ ಕುಂದಾಪುರ ಉಪವಿಭಾಗಾಧಿಕಾರಿ ಕಛೇರಿಯಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಯೋಗೀಶ್ವರ್ ಅವರಿಗೆ ನಾಮಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ದಿನೇಶ್ ಕೆ., ರತ್ನಾಕರ್ ಶ್ರೀಯಾನ್, ಗಿರೀಶ್ ಹಂದೆ,ಮೊಹಮ್ಮದ್ ಆಸೀಪ್, ಮಂಜುನಾಥ್ ಬಳ್ಕೂರು ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪುರ ಶಾಸ್ತ್ರೀ ವ್ರತ್ತದಿಂದ ಬ್ರಹತ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಕೆ ಸ್ಥಳಕ್ಕೆ ತೆರಳಿದರು.

ಕಾಪು ಕ್ಷೇತ್ರ- ಗಫೂರ್ ಗೆ ಕೊನೆ ಕ್ಷಣದಲ್ಲಿ ಕೈಕೊಟ್ಟ ಕಾಂಗ್ರೆಸ್ — ಸೊರಕೆ, ಸಾಲ್ಯಾನ್ ಅಂತಿಮಪಟ್ಟಿಯಲ್ಲಿ

ಉಡುಪಿ: ಕಾಪು ವಿಧಾನಸಭ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯೆಂದು ಅಂತಿಮಗೊಂಡಿದ್ದ ಎಂ ಎ ಗಫೂರ್ ಗೆ ಕಾಂಗ್ರೆಸ್ ಹೈಕಮಾಂಡ್ ಕೊನೆ ಕ್ಷಣದಲ್ಲಿ ಕೈಕೊಟ್ಟಿದೆ. ಕಾಂಗ್ರೆಸ್ ಹೈಕಮಾಮಡ್ ಕಾಪು ಕ್ಷೇತ್ರಕ್ಕೆ ಇಂದು ಎರಡನೆ ಪಟ್ಟಿ ಬಿಡುಗಡೆ ಮಾಡುವಾಗ  ಎಂ ಎ ಗಫೂರ್ ಗೆ ಟಿಕೇಟ್ ನೀಡುವುದೆಂದು ಹೇಳಲಾಗಿತ್ತು. ಆದರೆ ಲಾಬಿಯ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದ ಕಾಂಗ್ರೆಸ್ ಇಂದು ಬಿಡುಗಡೆ ಮಾಡಿದ ಎರಡನೆ ಪಟ್ಟಿಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಿಸಲು ಹಿಂದೇಟು ಹಾಕಿದೆ.ಮುಸ್ಲಿಂ ಅಭ್ಯರ್ಥಿಯೊಬ್ಬರಿಗೆ ಕಾಪು ಕ್ಷೇತ್ರದ ಟಿಕೇಟ್ ನೀಡುವ ಬಗ್ಗೆ ಒಲವು ಹೊಂದಿದ ಕಾಂಗ್ರೆಸ್ ಪಕ್ಷದ ವರಿಷ್ಟರು ಗಫೂರ್ ಟಿಕೆಟ್ ನೀಡಲು ಒಲವು ಹೊಂದಿದ್ದರು.
ಆದರೆ ಇದೀಗ ಪಕ್ಕದ ಸುರತ್ಕಲ್ ಕ್ಷೇತ್ರಕ್ಕೆ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿರುವುದರಿಂದ ಕಾಪು ಕ್ಷೇತ್ರಕ್ಕೆ ಬಿಲ್ಲವರಿಗೆ ನೀಡುವ ಯೋಜನೆ ಕಾಂಗ್ರೆಸ್ ಹೈಕಮಾಮಡ್ ನದ್ದು. ಈ ಹಿನ್ನೆಲೆಯಲ್ಲಿ ಗಫೂರ್ ಗೆ ಸಿಗಬೇಕಿದ್ದ ಟಿಕೆಟ್ ಕೊನೆ ಕ್ಷಣದಲ್ಲಿ ರದ್ದಾಗಿದೆ.ವಿನಯಕುಮಾರ್ ಸೊರಕೆಯವರಿಗೆ ಪುತ್ತೂರು ಕ್ಷೇತ್ರಕ್ಕೆ ಟಿಕೇಟ್ ನೀಡಲು ನಿರ್ಧರಿಸಲಾಗಿತ್ತಾದರೂ ಸೊರಕೆಯವರು ಪುತ್ತೂರು ಕ್ಷೇತ್ರದ ಟಿಕೇಟನ್ನು ನಿರಾಕರಿಸಿದ್ದರೆನ್ನಲಾಗಿದೆ.
ಇದೀಗ ಕಾಫು ಕ್ಷೇತ್ರಕ್ಕೆ ಸೊರಕೆ ಮತ್ತು ಮಾಜಿ ಸಚಿವ ವಸಂತ ಸಾಲ್ಯಾನ್ ಹೆಸರು ಹೈಕಮಾಂಡ್ ಪರಿಗಣನೆಯಲ್ಲಿದ್ದು ನಾಳೆ ಘೋಷಣೆಯಾಗುವ ಸಾಧ್ಯತೆಯಿದೆ

ಕೃಷಿಗೆ ಸೂಕ್ತವಾದ ಸ್ಥಾನಮಾನ ಸಿಗುತ್ತಿಲ್ಲ -ಪೇಜಾವರಶ್ರೀಉಡುಪಿ : ಯಾವ ಸರಕಾರವು ಕೂಡ ರೈತರ ಮತ್ತು ಕೃಷಿಯ ಅಭಿವೃದ್ದಿಗೆ ಪ್ರಾಮಾಣಿಕವಾದ ಪ್ರಯತ್ನ ಮಾಡುತ್ತಿಲ್ಲ, ಉದ್ದಿಮೆಗಳ ಉನ್ನತೀಕರಣದ ಹೆಸರಿನಲ್ಲಿ ಕೃಷಿಯ ಮೇಲೆ ಆಕ್ರಮಣವಾಗುತ್ತಿದೆ ಎಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ.
ಭಾರತೀಯ ಕಿಸಾನ್ ಸಂಘದ ಆಶಯದಲ್ಲಿ ಉಡುಪಿ ಜಿಲ್ಲಾ ರೈತ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಉದ್ದಿಮೆಗಳ ಉನ್ನತೀಕರಣದ ಹೆಸರಿನಲ್ಲಿ ಕೃಷಿ ಭೂಮಿಗಳು ನಾಶವಾಗುತ್ತಿದೆ, ಅಲ್ಲದೆ ರೈತರಿಗೆ ಸೂಕ್ತವಾಗಿ ಕಾಲ ಕಾಲಕ್ಕೆ  ಸಿಗಬೇಕಾಗಿದ್ದ ಕೃಷಿ ಉತ್ಫನ್ನಗಳನ್ನು ಸರಕಾರದಿಂದ ದೊರಕುತ್ತಿಲ್ಲ. ಸರಕಾರವು ಕೃಷಿಯ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು.
ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಕೃಷಿಗೆ ಮತ್ತು ರೈತರಿಗೆ ವಿಶಿಷ್ಠವಾದ ಉನ್ನತ ಸ್ಥಾನ ಮಾನವನ್ನು ಕೊಟ್ಟಿದೆ. ರೈತ ಸಮುದಾಯದವರ ಹಿತ ಸಂರಕ್ಷಣೆಗಾಗಿ ರಾಜ್ಯಕೀಯ ರಹಿತವಾಗಿ ದುಡಿಯುತ್ತಿರುವ ಇಂತಹ ಸಂಘಟನೆಗಳು ಶಾಘ್ಲನೀಯವೆಂದರು.
ಸಮಾರಂಭದಲ್ಲಿ ದ.ಕ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ, ಜಿಲ್ಲಾ ಕಿಸಾನ್ ಸಂಘದ ಅಧ್ಯಕ್ಷ ಬಿ.ವಿ ಪೂಜಾರಿ, ದಿನೇಶ್ ಕುಲಕರ್ಣಿ, ಐ ಎನ್ ಬಸವೇಗೌಡ ಮೊದಲಾದವರು ಉಪಸ್ಥಿತರಿದ್ದರು.