ಶುಕ್ರವಾರ, ಮೇ 31, 2013

ಬಾರ್ಕೂರಿನ ಆಶಾರ ಕೈಚಳಕ !ಭತ್ತದ ತೆನೆಯಲಿ ಮೂಡಿದ ಸುಂದರ ಕಲಾಕೃತಿಗಳು:

asha 1
ಕುಂದಾಪುರ: ಚಿತ್ರಕಲೆ ಕಲಾತ್ಮಕತೆಗೆ ಮಿಗಿಲಾದುದು. ಸಹಜತೆ, ಸರಳತೆ ಹಾಗೂ ಮೋಹಕತೆಯಿಂದ ಯಾರನ್ನೂ ಸೆಳೆಯುವಂಥದು. ಹಳೆಯ ಬಟ್ಟೆಗಳನ್ನು ಕಲಾತ್ಮಕವಾಗಿ ಕತ್ತರಿಸಿ, ವಿಶಿಷ್ಟ ಹೆಣಿಕೆಯ ಮೂಲಕ ಮೋಹಕ ಕಲೆಯನ್ನು ಎಳೆಗಳ ಮೂಲಕ ಬಿಡಿಸುವ, ಬಟ್ಟೆಯ ಮೇಲೆ ಸೂಜಿ ಬಳಸಿ ದಾರಗಳಿಂದ ಬಿಡಿಸುವ ಅಲಂಕಾರಿಕ ಕಲೆಗಳ್ಲಲದೇ ಅನೇಕ ಕಲೆಗಳನ್ನು ಇಂದು ನಾವು ಕಾಣುತ್ತ್ದಿದೇವೆ.
asha 5
ಆದರೆ ಇವ್ಲೆಲವುಕ್ಕಿಂತ ಮಿಗಿಲಾದ ಕಲೆಯ್ಲಲಿ ಬಾರ್ಕೂರಿನ ಆಶಾ ಪ್ರವೀಣೆ. ಭತ್ತದ ತೆನೆಯಿಂದ ಗೂಡು, ಭತ್ತದ ತಟ್ಟು ಹಾಗೂ ಬಾಗಿಲು ತೋರಣಗಳನ್ನು ಮಾಡುವುದು ಇವರ ಹವ್ಯಾಸ.
ಪ್ರೌಢಶಾಲಾ ವಿದ್ಯಾರ್ಥಿನಿಯಾಗ್ದಿದಾಗ ತನ್ನ ಸ್ನೇಹಿತೆಯರಿಂದ ಕಲಿತ ವಿದ್ಯೆಯನ್ನು ಹವ್ಯಾಸವಾಗಿ ಮುಂದುವರಿಸಿಕೊಂಡು ಬರುತ್ತಿರುವ ಇವರು ಇತರೆ ಕಲಾತ್ಮಕ ವಸ್ತುಗಳನ್ನೂ ತಯಾರಿಸುತ್ತಾರೆ. ಮದುವೆಯ ನಂತರ ತನ್ನ ಬಿಡುವಿನ ಸಮಯದ್ಲಲಿ ಭತ್ತದ ತೆನೆಯ್ಲಲಿ ಸುಂದರ ಗೂಡಾಕೃತಿ, ತಟ್ಟು, ತೋರಣಗಳನ್ನು ತಯಾರಿಸುತ್ತಾರ್‍ಲಲದೇ ಉಲನ್ ಶಾಲ್, ಟೊಪ್ಪಿ, ಮ್ಯಾಟ್ ಇನ್ನಿತರ ಕರಕುಶಲ ವಸ್ತುಗಳನ್ನು ಮಾಡುವ ಹವ್ಯಾಸ ಬೆಳೆಸಿಕೊಂಡವರು.
asha 3
ಭತ್ತದ ತೆನೆಯ ಗೂಡು: ಕಲಾಕೃತಿ ತಯಾರಿಕೆಗೆ ಪ್ರಮುಖ ವಸ್ತು ಒಣಗಲು ತಯಾರಾದ ಭತ್ತದ ಸಂಪೂರ್ಣ ತೆನೆ. ಅದರ್‍ಲಲೂ ಎಂ.ಒ ೪ ಹಾಗೂ ಗೌರಿ ತಳಿಯ ಭತ್ತದ ತೆನೆ ಉತ್ತಮ. ಸಾಧಾರಣವಾಗಿ ಅಕ್ಟೋಬರ್, ನವೆಂಬರ್(ಕೊಯಿಲು ದಿನಗಳು) ತಿಂಗಳಿನ್ಲಲಿ ಬರುವ ಭತ್ತದ ಎಳೆಯ ತೆನೆಗಳಿಂದ ಮಾತ್ರ ಸಾಧ್ಯ. ಪರಿಕರಗಳನ್ನು ಸಂಗ್ರಹಿಸಿದ ನಂತರ ಒಂದು ಆಕೃತಿ ತಯಾರಿಸಲು ಕನಿಷ್ಠ ಒಂದೆರಡು ಗಂಟೆ ಬೇಕು. ಏಕಾಗ್ರತೆಯಿಂದ ತಾಳ್ಮೆ ವಹಿಸಿ ಮಾತ್ರ ಮನೆಯನ್ನು ಸುಂದರಗೊಳಿಸುವ ವಸ್ತುಗಳು ತಯಾರಾಗುತ್ತವೆ. ಹೊಸತನದ ಆವಿಷ್ಕಾರದಿಂದ ಬಂದ ಗಾಜಿನ ಅಲಂಕಾರಿಕ ವಸ್ತುಗಳು, ಬಟ್ಟೆಯ ವಿನ್ಯಾಸಗಳು ಇದರೂ ಸಮ್ದೃದಿ, ಸಂಸ್ಕಾರ, ಸಂಪ್ರದಾಯದ ಪ್ರತೀಕವಾದ ಭತ್ತದ ತೆನೆಯಿಂದ ತಯಾರಿಸಿದ ಇಂತಹ ಆಕೃತಿಗಳಿಗೆ ಉತ್ತಮ ಬೇಡಿಕೆಯಿದೆ.
asha 2
ಹಲವು ವರ್ಷಗಳಿಂದ ದೇವಾಲಯ ಸೇರಿದಂತೆ ವಿಶೇಷ ಸ್ಥಳಗಳಿಗೆ ಸೇವಾ ರೂಪದ್ಲಲಿ ನೀಡುತ್ತಾ ಬಂದ್ದಿದಾರೆ. ಇದನ್ನು ಇದುವರೆಗೆ ಮಾರಾಟ ಮಾಡ್ಲಿಲ ಎನ್ನುವ ಇವರು ಪ್ರಾರಂಭದ್ಲಲಿ ತೆನೆಯನ್ನು ಸ್ವಲ್ಪ ಒಣಗಿಸಿ ಗೂಡು ತಯಾರಿಸುವುದು ಉತ್ತಮ. ಹೊಗೆಯಾಡದ ಸ್ಥಳದ್ಲಲಿ ಜೋಪಾನವಾಗಿ ಇರಿಸಿದರೆ ೩ರಿಂದ ೪ ವರ್ಷ ಬಾಳಿಕೆ ಬರುತ್ತದೆ ಎಂದು ಹೇಳುತ್ತಾರೆ. ಇಂದು ಭತ್ತದ ಕೃಷಿಯೇ ವಿನಾಶದ ಅಂಚಿನ್ಲಲಿದೆ. ಇರುವ ಭತ್ತದ ಗ್ದದೆಗಳ್ಲಲಿ ತೆನೆಗಳನ್ನು ತೆಗೆಯಲು ಬಿಡುವುದ್ಲಿಲ. ಆದರಿಂದ ಇಂತಹ ತೆನೆಗಳಿಂದ ಮಾಡುವ ಆಕೃತಿಗಳಿಗೆ ಬೇಡಿಕೆಯ್ದಿದರೂ ಕಚ್ಚಾವಸ್ತುಗಳು ದೊರಕುತ್ತ್ಲಿಲ ಎಂದು ಬೇಸರದಿಂದ ಹೇಳುತ್ತಾರೆ.ಕಚ್ಚಾವಸ್ತುಗಳನ್ನು ತಂದ್ಲಲಿ ಇತರರಿಗೂ ಈ ಕಲೆಯ ಬಗ್ಗೆ ತರಬೇತಿ ನೀಡುವ ಇಚ್ಛೆ ಕೂಡಾ ಇದೆ.
asha krishna
ಉಲನ್ ಶಾಲ್, ಟೊಪ್ಪಿ ಇನ್ನಿತರ ಕಸೂತಿ ಕಲೆಯ್ಲಲೂ ಪ್ರವೀಣರಾದ ಇವರಿಗೆ ಕೊಂಕಣ ರೈಲ್ವೆಯ್ಲಲಿ ಉದ್ಯೋಗಿಯಾಗಿರುವ ಪತಿ ಕೃಷ್ಣ ಮತ್ತು ಕುಂದಾಪುರದ್ಲಲಿರುವ ತಂದೆಯೂ ಇಂತಹ ಕಲೆಗಳನ್ನು ಮಾಡಲು ಪ್ರೋತ್ಸಾಹಿಸುತ್ತ್ದಿದಾರೆ.

ಶೋಕಿಗಾಗಿ ತಂಬಾಕು ಸೇವನೆ, ೧೭ರಿಂದ ೧೮ ಪ್ರಾಯದವರೇ ಮುಂದೆ: ರಾಮಚಂದ್ರ ಬಾಯರಿ

ಉಡುಪಿ : ಯುವಕರು ಶೋಕಿಗಾಗಿ ತಂಬಾಕು ವ್ಯಸನಿಗಳಾಗುತ್ತಿದ್ದಾರೆ, ಮೂವರು ಯುವಕರಲ್ಲಿ ಇಬ್ಬರು ತಂಬಾಕು ಸೇವನೆ ಮಾಡುವುದನ್ನು ಸಮೀಕ್ಷೇಯಲ್ಲಿ ದೃಡಪಟ್ಟಿದೆ, ೨೦೧೦-೧೧ರ ಸಮಿಕ್ಷೇ ಪ್ರಕಾರ ರಾಜ್ಯದಲ್ಲಿ ೩೦ಲಕ್ಷ ಮಂದಿ ತಂಬಾಕು ಸೇವನೆಯಿಂದ ಅಕಾಲಿಕ ಮರಣ ಹೊಂದಿದ್ದಾರೆ ಎಂದು ಜಿಲ್ಲಾ ವೈದ್ಯಾದಿಕಾರಿ ರಾಮಚಂದ್ರ ಬಾಯರಿ ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯ ತಂಬಾಕು ನಿಯಂತ್ರಣ ಘಟಕದ ಆಶ್ರಯದಲ್ಲಿ ಜಿಲ್ಲಾ ಮಟ್ಟದ ವಿಶ್ವ ತಂಬಾಕು ರಹಿತ ದಿನಾಚರಣೆಯು ಮಣಿಪಾಲ ವಿಶ್ವವಿದ್ಯಾನಿಲಯದ ಇಂಟರ್‍ಯಾಕ್ಟ್ ಸಭಾಂಗಣದಲ್ಲಿ ನೆಡೆಯಿತು.
ಸಮಾರಂಭದಲ್ಲಿ ಮಾತನಾಡಿದ ಅವರು ಜನರನ್ನು ಬಲಿ ತೆಗೆದುಕೊಳ್ಳುವ ತಂಬಾಕನ್ನು ಯುವಕರು ಶೋಕಿಗಾಗಿ ಸೇವನೆಯನ್ನು ಪ್ರಾರಂಭಿಸುತ್ತಿದ್ದಾರೆ, ಸುಮಾರು ೧೭ರಿಂದ ೧೮ ವರ್ಷದ ಪ್ರಾಯದಲ್ಲೇ ಯುವಕರು ವ್ಯಸನಿ ಗಳಾಗುತ್ತಿದ್ದಾರೆ, ರಾಜ್ಯದಲ್ಲಿ ಎರಡು ಕೋಟಿ ಜನ ತಂಬಾಕು ಸೇವನೆ ಮಾಡುತ್ತಿದ್ದು ಅದರಲ್ಲಿ ೩೦ಲಕ್ಷ ಮಂದಿ ಅಕಾಲಿಕ ಮರಣ ಹೊಂದಿದ್ದಾರೆ. ೨೦೧೦-೧೧ ಸಮೀಕ್ಷೆಯ ಪ್ರಕಾರ ಮೂವರಲ್ಲಿ ಎರಡು ಮಂದಿ ತಂಬಾಕು ಸೇವನೆ ಮಾಡುತ್ತಾರೆ ಎಂದರು.
ಜಿಲ್ಲಾ ಮಟ್ಟದ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ಜಿಲ್ಲಾಧಿಕಾರಿ ಎಮ್.ಟಿ ರೇಜು ಉದ್ಘಾಟಿಸಿದರು. ಕಾರ್‍ಯಕ್ರಮದಲ್ಲಿ ಜಿ.ಪಂ ಅಧ್ಯಕ್ಷ ಉಪೇಂದ್ರ ನಾಯಕ್, ಪ್ರೊ ನಾಗರಾಜ ಹೈಕಾಡಿ, ಎಂ ಜುಂಜಣ್ಣ, ಡಾ.ಮುರಳೀಧರ್ ವರ್ಮಾ ಮೊದಲಾದವರು ಉಪಸ್ಥಿತರಿದ್ದರು.

 

ಲಿಟ್ಲ್ ರಾಕ್ ವಿದ್ಯಾರ್ಥಿಗಳಿಂದ ಸಿ.ಬಿ.ಎಸ್.ಇ ಪರೀಕ್ಷೆಯಲ್ಲಿ ಹೊಸ ದಾಖಲೆ


Ramyaಬ್ರಹ್ಮವರ :ಸಿ.ಬಿ.ಎಸ್.ಇ ಪ್ರಕಟಿಸಿದ ಪರೀಕ್ಷಾ ಫಲಿತಾಂಶದಲ್ಲಿ ಹತ್ತನೇ ತರಗತಿಯಲ್ಲಿನ ಎಲ್ಲಾ ೨೪೪ ವಿದ್ಯಾರ್ಥಿಗಳು ಹಾಗೂ ಹನ್ನೆರಡನೆಯ ತರಗತಿಯಲ್ಲಿನ ಎಲ್ಲಾ ೬೮ ವಿದ್ಯಾರ್ಥಿಗಳು ತೇರ್ಗಡೆಗೊಳ್ಳುವುದರ ಮೂಲಕ ಲಿಟ್ಲ್ ರಾಕ್ ತನ್ನ ಹೊಸ ಶೈಕ್ಷಣಿಕ ವರ್ಷದ ಆರಂಭಕ್ಕೆ ಶುಭಮುನ್ನುಡಿಯನ್ನು ಬರೆದಿದೆ.
ಹನ್ನೆರಡನೆ ತರಗತಿಯ ಸಚಿನ್ ಹೊಳ್ಳ ಶೇಕಡಾ ೯೭.೬೦ ಅಂಕಗಳೊಂದಿಗೆ ಕಂಪ್ಯೂಟರ್ ವಿಜ್ಞಾನ ವಿಭಾಗದಲ್ಲಿ ಮತ್ತು ರಮ್ಯ ರವೀಂದ್ರ ಕಾಮತ್ ಶೇಕಡಾ ೯೬.೬೦ ಅಂಕಗಳೊಂದಿಗೆ ಜೀವಶಾಸ್ತ್ರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪದೆದಿರುತ್ತಾರೆ.  ೫೪ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, ೧೪ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳು ಸಹ ಅತ್ಯುತ್ತಮ ಸಾಧನೆಯನ್ನು ಮಾಡಿರುತ್ತಾರೆ.  ೨೩ ವಿದ್ಯಾರ್ಥಿಗಳು ೧೦ ಪಾಯಿಂಟ್ ಮತ್ತು ೧೦೧ ವಿದ್ಯಾರ್ಥಿಗಳು ೯ ಹಾಗೂ ಅದಕ್ಕಿಂತ ಹೆಚ್ಚಿನ ಪಾಯಿಂಟ್ ಗಳನ್ನು ಪಡೆದಿರುತ್ತಾರೆ. ಲಿಟ್ಲ್ ರಾಕ್ ಶಾಲಾ ಆಡಳಿತ ಮಂಡಳಿಯು ಈ ದಾಖಲೆಯ ಸಾಧನೆಗಾಗಿ ವಿದ್ಯಾರ್ಥಿಗಳನ್ನು ಮತ್ತು ಅಧ್ಯಾಪಕರುಗಳನ್ನು ಅಭಿನಂದಿಸಿದೆ. ಅಧ್ಯಾಪಕರುಗಳ ಗುಣಮಟ್ಟ ಮತ್ತು ಉತ್ತಮ ಶಾಲಾ ವಾತಾವರಣವು ವಿದ್ಯಾರ್ಥಿಗಳ ಸಾಧನೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎನ್ನುವುದು ಮತ್ತೊಮ್ಮೆ ಮನವರಿಕೆಯಾಗಿದೆ ಎಂದು ಶಾಲಾ ಪ್ರಾಂಶುಪಾಲರಾದ ಪ್ರೊ. ಮ್ಯಾಥ್ಯೂ ಸಿ. ನೈನಾನ್ ತಿಳಿಸಿರುತ್ತಾರೆ.