ಶನಿವಾರ, ಜೂನ್ 29, 2013

ಕೊಳಚೆ ಮುಕ್ತ ನಗರಕ್ಕೆ ಪಣ : ಸಚಿವ ಸೊರಕೆ.

ಉಡುಪಿ: ನಗರಾಭಿವೃದ್ದಿ ಯೋಜನೆಯ ಮೂಲಕ ಮುಂದಿನ ಐದು ವರ್ಷದಲ್ಲಿ ಕೊಳಚೆ ನಿರ್ಮೂಲನೆ ಪ್ರದೇಶವನ್ನು ಪರಿವರ್ತಿಸಿ ಅಲ್ಲಿಯ ನಿವಾಸಿಗಳಿಗೆ ವಸತಿ ನಿರ್ಮಾಣ ವವಸ್ಥೆಯನ್ನು ಕಲ್ಪಿಸಲಾಗುವುದು ಎಂದು ನಗರಾಭಿವೃದ್ದಿ ಸಚಿವ ವಿನಯ್‌ಕುಮಾರ್ ಸೊರಕೆ ತಿಳಿಸಿದ್ದಾರೆ.
[youtuber youtube='http://www.youtube.com/watch?v=JhxF5V5h8Ng']
ಜಿ.ಪಂ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರಸಭೆ ಉಡುಪಿ ಇವರ ಆಶ್ರಯದಲ್ಲಿ ರಜತಾದ್ರಿ ಅಟಲ್ ಬಿಹಾರಿ ಸಭಾಂಗಣದಲ್ಲಿ ನೆಡೆದ ಮಲೇರಿಯಾ ವಿರೋಧಿ ಮಾಸಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಪೋರೇಶನ್ ವಲಯದ ಕೊಳಚೆ ಪ್ರದೇಶದಲ್ಲಿ ವಾಸಿಸುವ ನಿವಾಸಿಗಳಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ, ನಗಾಭಿವೃದ್ದಿ ಯೋಜನೆಯಲ್ಲಿ ಕೊಳಚೆ ಪ್ರದೇಶದ ನಿರ್ಮೂಲನೆ ಕ್ರಮ ಕೈಗೊಳ್ಳಲಾಗುವುದು, ಮುಂದಿನ ಐದು ವರ್ಷದಲ್ಲಿ ಕೊಳಚೆ ಪ್ರದೇಶ ಮುಕ್ತ ನಗರವನ್ನಾಗಿ ಮಾರ್ಪಡಿಸಲು ಸರ್ವ ಪ್ರಯತ್ನ ಮಾಡುದ್ದಾಗಿ ಸಚಿವ ಹೇಳಿದರು.
ಉಡುಪಿ ಚಿಕ್ಕಮಂಗಳೂರು ಜಿಲ್ಲೆಗಳು ಇಲ್ಲಿಯ ಹವಮಾನ, ಮಳೆಯ ಪರಿಣಾಮದಿಂದ ಸೊಳ್ಳೆಗಳು ಅತೀ ಹೆಚ್ಚು ಉತ್ಪತ್ತಿಯಾಗುತ್ತದೆ, ಇದರಿಂದ ಮಲೇರಿಯಾದಂತಹ ರೋಗಗಳು ಬರುತ್ತದೆ, ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಮುಂಜಾಗ್ರತೆಯ ಕ್ರಮಗಳನ್ನು ಅನುಸರಿಸಬೇಕು.
ನಮ್ಮ ಜಿಲ್ಲೆಯಲ್ಲಿ ನೆಡೆಯುವ ಕಾನೂನು ಬಾಹಿರ ಚಟುವಟಿಕೆಗಳ ಹಿಡಿತಕ್ಕೆ ಗೃಹ ಸಚಿವರು ನಿರ್ದೇಶನ ನೀಡಿದ್ದು, ಇನ್ನೂ ಮುಂದೆ ಯಾವೂದೇ ಅನೈತಿಕ ಚಟುವಟಿಕೆಗಳು ನೆಡೆಯದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಪೋಲಿಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು. ಜಿ.ಪಂ ಅಧ್ಯಕ್ಷ ಉಪೇಂದ್ರ ನಾಯಕ್, ಉಪಾಧ್ಯಕ್ಷೆ ಮಮತಾ ಆರ್ ಶೆಟ್ಟಿ, ಗಣಪತಿ ಆರ್ ಶ್ರೀಯಾನ್, ಜಿ.ಪಂ ಸಿ‌ಇ‌ಒ ಪ್ರಭಾಕರ್ ಶರ್ಮ, ಗೋಕುಲ್‌ದಾಸ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
 udupi_maleria_mascharane 005

ಮಾದಕ ವ್ಯಸನಗಳಿಗೆ ಬಲಿಬಿದ್ದು ಗೋಲ್ಡನ್ ಲೈಫ್‌ನ್ನು ಮಿಸ್ ಮಾಡ್ಕೊಳ್‌ಬೇಡಿ: ವಿದ್ಯಾರ್ಥಿಗಳಿಗೆ ಮಾರುತಿ ನಾಯಕ್ ಕರೆ

ಉಡುಪಿ:ವಿದ್ಯಾರ್ಥಿ ಜೀವನವೆಂಬುವುದು ಗೋಲ್ಡನ್ ಲೈಫ್ ಇದ್ದ ಹಾಗೇ. ಚಂಚಲ ಮನಸ್ಸಿನ ಈ ಘಟ್ಟದಲ್ಲಿ ಮಾದಕ ವ್ಯಸನಗಳಿಗೆ ಬಲಿ ಬೀಳದೆ ಉತ್ತಮ ಜೀವನವನ್ನು ರೂಪಿಸುಕೊಳ್ಳುವಲ್ಲಿ ಗಮನಹರಿಸಿ ಅಂತಾ ಉಡುಪಿ ನಗರ ಠಾಣೆಯ ವೃತ್ತ ನಿರೀಕ್ಷಕ ಮಾರುತಿ ನಾಯಕ್ ಹೇಳಿದ್ದಾರೆ.
[youtuber youtube='http://www.youtube.com/watch?v=rk2NYQkxP7E']
ಉಡುಪಿ ಎಂಜಿ‌ಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ನಡೆದ ಅಂತರಾಷ್ಟ್ರೀಯ ಮಾದಕ ದೃವ್ಯ ವಿರೋಧಿ ದಿನಾಚರಣೆಯಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳನ್ನು ಅಡ್ಡ ದಾರಿಯತ್ತ ಕೊಂಡಯ್ಯಲು ಗಾಂಜಾ, ಡ್ರಗ್ಸ್‌ನಂತಹ ಮಾದಕ ದೃವ್ಯಜಾಲಗಳು ವ್ಯವಸ್ಥಿತವಾಗಿ ಕಾಲೇಜ್ ಕ್ಯಾಂಪ್‌ಸ್‌ಗಳಲ್ಲಿ ಕಾರ್ಯಾಚರಿಸುತ್ತಿವೆ. ಈ ಜಾಲವನ್ನು ಮಟ್ಟಹಾಕಲು ಪೋಲಿಸ್ ಕಾರ್ಯಪಡೆ ಅವಿರತವಾಗಿ ಶ್ರಮಿಸುತ್ತಿದೆ. ಪೋಲಿಸ್ ಇಲಾಖೆ ಜೊತೆಗೆ ವಿದ್ಯಾರ್ಥಿಗಳು ಕೂಡಾ ಸಾಥ್ ನೀಡಿದರೆ ಮಾದಕದೃವ್ಯವನ್ನು ತಡೆಗಟ್ಟುವಲ್ಲಿ ಸುಲಭದಾರಿ ಸಿಕ್ಕಂತಾಗುತ್ತದೆ. ಮಾದಕೃದೃವ್ಯದಂತಹ ಚಟಗಳಿಗೆ ಬಲಿಬಿದ್ದು ಅಪರಾಧ ಜಗತ್ತಿನಲ್ಲಿ ಗುರುತಿಸಿಕೊಂಡು ಸಮಾಜ ಘಾತುಕ ಚುಟುವಟಿಕೆಯಲ್ಲಿ ತೊಡಗಿಸಿಕೊಳ್ಳದೆ ಸಮಾಜದಲ್ಲಿ ಉತ್ತಮ ಜೀವನವನ್ನು ರೂಪಿಸಿಕೊಳ್ಳುವಲ್ಲಿ ದಾಪುಗಾಲಿಡಿ ಎಂದು ಅವರು ತಿಳಿಸಿದರು.ಉಡುಪಿ ಟ್ರಾಫಿಕ್ ಇನ್ಸ್‌ಪೆಕ್ಟರ್ ಅಮಾನುಲ್ಲಾ, ಲಿಂಗರಾಜು ಹನುಮಂತಪ್ಪ, ಕಾಲೇಜಿನ ಪ್ರಾಂಶುಪಾಲ ಹಾಲಾ ನಾಯಕ್  ಉಪಸ್ಥಿತರಿದ್ದರು.

 udupi_madka_drayvya_virodi_day 001

ವಿಶ್ವಾಸದ ಮನೆಯಲ್ಲಿ ಮತ್ತೇ ಐವರು ಗುಣಮುಖ:ಸುನೀಲ್ ಡಿ’ಸೋಜ.

ಉಡುಪಿ: ಶಂಕರಪುರದ ವಿಶ್ವಾಸದಮನೆಯು ಇದೀಗ ಎಲ್ಲರಿಗೂ ಚಿರಪರಿಚಿತ, ಸತತ ೧೩ ವರ್ಷಗಳಿಂದ ಮಾನಸಿಕ ಅಸ್ವಸ್ಥರನ್ನು ಆರೈಕೆ ಮಾಡಿ, ೩೦೦ಕ್ಕೂ ಅಧಿಕ ಮಂದಿ ಇಲ್ಲಿ ಚೇತರಿಸಿಕೊಂಡಿದ್ದಾರೆ, ಇದೀಗ ಮತ್ತೆ ಐವರು ಚೇತರಿಕೊಂಡು ಮನೆಗೆ ಹಿಂದಿರುಗಲಿದ್ದಾರೆ.
[youtuber youtube='http://www.youtube.com/watch?v=i1XjSK0qL5U']
ಒರಿಸ್ಸಾದಿಂದ ನಿರ್ಗತಿಕರಾಗಿ ವಿಶ್ವಾಸದ ಮನೆಗೆ ಬಂದ ಪಾರ್‌ದೇಯ್, ಕೃಪಾಸಿಂಗ್, ಸರೋವರ್, ದುಃಖಿ ಮತ್ತು ಉದಯ್ ಜಾದವ್ ಈ ಐವರು ಚೇತರಿಸಿಕೊಂಡವರು, ಇವರನ್ನು ಸಂಸ್ಥೆಯಿಂದ ಮನೆಗೆ ಕಳುಹಿಸಿಕೊಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಪಾ.ಸುನೀಲ್ ಡಿ’ಸೋಜ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಸ್ತೆ ಬದಿಯಲ್ಲಿ, ಸಮಾಜದಿಂದ ಹೊರಕ್ಕೆ ತಮ್ಮದೇ ಲೋಕದಲ್ಲಿ ನಿರ್ಗತಿಕರಾಗಿ ಜೀವಿಸುವ ಮಾನಸಿಕರನ್ನು ತಂದು ನಿಸ್ವಾರ್ಥರಾಗಿ ಸೇವೆ ಮಾಡುವ ವಿಶ್ವಾಸದ ಮನೆಯಲ್ಲಿ ಇದೀಗ ೧೨೫ಮಂದಿ ಮಾನಸಿಕರು ಚಿಕಿಸ್ಸೆ ಪಡೆಯುತ್ತಿದ್ದಾರೆ, ವಿವಿಧ ಸಂಘಸಂಸ್ಥೆಗಳ, ದಾನಿಗಳ ನೆರವಿನಿಂದ ಸಂಸ್ಥೆಯನ್ನು ಮುನ್ನೆಡಿಸಿಕೊಂಡು ಬರುತ್ತಿದ್ದು, ಸರಕಾರ ಯಾವೂದೇ ಸೌಲಭ್ಯಗಳು ಸಂಸ್ಥೆಗೆ ದೊರಕದಿರುವುದು ವಿಷಾದೀನಿಯವೆಂದರು.
udupi_vishwasada_mane 008

ಸಚಿವರ ಯಶಸ್ವಿ ಗ್ರಾ.ಪಂ. ಬೇಟಿ ಕಾರ್ಯಕ್ರಮ... ಜನರಿಂದ ಉತ್ತಮ ಸ್ಪಂಧನೆ...

ವರದಿ-ಸುರೇಶ್ ಎರ್ಮಾಳ್
ಕೆಲವೊಂದು ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸುವ ಮೂಲಕ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಲ್ಲಿ ಜನರಿಗೆ ವಿಶ್ವಾಸ ವೃದ್ಧಿಯಾಗುವುದರೊಂದಿಗೆ ಗ್ರಾಮಾಭಿವೃದ್ಧಿಗೆ ಈ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂಬುದಾಗಿ ಕಾಪು ಶಾಸಕರೂ, ನಗರಾಭಿವೃದ್ಧಿ ಸಚಿವರೂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
[youtuber youtube='http://www.youtube.com/watch?v=AIa26BVg8dA']
ಅವರು ಗ್ರಾಮ ಪಂಚಾಯತ್ ಭೇಟಿ ಕಾರ್ಯಕ್ರಮದ ಅಂಗವಾಗಿ ಪಲಿಮಾರು ಗ್ರಾ.ಪಂ.ಗೆ ಭೇಟಿ ಮಾಡಿ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಧಿಕಾರಿಗಳು-ಜನಪ್ರತಿನಿಧಿಗಳು-ಜನರು ಈ ಮೂರು ಸರಪಣಿ ಇದ್ದಂತ್ತೆ ಇದು ಒಂದಕೊಂದು ಹೊಂದಿಕೊಂಡಿದ್ದರೆ ಗ್ರಾಮ ಸುಭಿಕ್ಷೆಯಾಗಿರುಲು ಸಾಧ್ಯ, ಸರ್ಕಾರದಿಂದ ದೊರಕುವ ಅನುದಾನ ಸಹಿತ ಸ್ಥಳೀಯವಾಗಿ ಕಾರ್ಯಚರಿಸುತ್ತಿರುವ ಉದ್ಧಿಮೆಗಳು ಗ್ರಾಮಾಭಿವೃದ್ಧಿಗೆ ನೀಡಲೇ ಬೇಕಾದ ಸವಲತ್ತುಗಳನ್ನು ದೊರಕಿಸಿ ಕೊಡುವ ಜವಾಬ್ದಾರಿ ಕೂಡಾ ಜನಪ್ರತಿನಿಧಿಗಳಾದ್ದಾಗಿದೆ, ಮುಂದಿನ ದಿನದಲ್ಲಿ ಕಾಪು ಕ್ಷೇತ್ರದ ೨೯ ಗ್ರಾಮ ಪಂಚಾಯತ್‌ಗಳಿಗೆ ಅಧಿಕಾರಿಗಳ ಸಹಿತ ಭೇಟಿ ಮಾಡಿ ಅಲ್ಲಿನ ಕುಂದು ಕೊರತೆಗಳನ್ನು ಆಲಿಸಿ ಸಾಧ್ಯವಾದರೇ ಸ್ಥಳದಲ್ಲೇ ಪರಿಹಾರ ಮಾಡಲಿದ್ದು. ಅಲ್ಲದೆ ಈ ಕಾರ್ಯಕ್ರಮವನ್ನು ಮೂರು ತಿಂಗಳಿಗೊಮ್ಮೆ ನಿರಂತರವಾಗಿ ನಡೆಸಲಿದ್ದೇವೆ ಎಂದಿದ್ದಾರೆ.
ಇದೇ ಸಂದರ್ಭ ಗ್ರಾಮಸ್ಥರಿಂದ ಅರ್ಜಿಗಳನ್ನು ಸ್ವೀಕರಿಸಿ ಕೆಲವೊಂದನ್ನು ಸ್ಥಳದಲ್ಲೇ ಅಧಿಕಾರಿಗಳ ಮೂಲಕ ಪರಿಹರಿಸಲಾಯಿತು. ಉಳಿದವುಗಳನ್ನು ನಿಗದಿತ ಸಮಯದಲ್ಲಿ ಪರಿಹಾರ ಮಾಡುವ ಭರವಸೆ ನೀಡಿದ್ದಾರೆ.
ಈ ವೇಳೆ ಗ್ರಾ.ಪಂ. ಗ್ರಾಮಾಭಿವೃದ್ಧಿಯ ಸಲುವಾಗಿ ಮನವಿಯೊಂದನ್ನು ನೀಡಿದ್ದು, ಅದರಲ್ಲಿ ಸುಜ್ಲಾನ್ ಕಂಪನಿಯಿಂದಾಗಿ ತೊಂದರೆಗೊಳಗಾದ ರಸ್ತೆ ದುರಸ್ಥಿ, ಹೆಜಮಾಡಿ-ಪಲಿಮಾರು ಸಂಪರ್ಕ ಸೇತುವೆ ಹಾಗೂ ರಸ್ತೆ, ಅಡ್ವೆ-ಪಲಿಮಾರು ರಸ್ತೆ ಅಗಲೀಕರಣ, ಸಂಪರ್ಕ ರಸ್ತೆಯೇ ಇಲ್ಲದ ನಂದಿಕೂರು ರೈಲ್ವೆ ನಿಲ್ದಾಣಕ್ಕೆ ಒಂದುವರೆ ಕೀ.ಮೀ.ಗಳ ಸಂಪರ್ಕ ರಸ್ತೆ ನಿರ್ಮಾಣ, ೪೦೦ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮುಂತಾದವು ಬೇಡಿಕೆಗಳನ್ನೊತ್ತ ಮನವಿಯನ್ನು ಸಚಿವರಿಗೆ ನೀಡಲಾಯಿತು.ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷ ಗಿರಿಯಪ್ಪ ಪೂಜಾರಿ, ಜಿ.ಪಂ. ಸದಸ್ಯೆ ಗೀತಾಂಜಲಿ, ತಾ.ಪಂ. ಸದಸ್ಯೆ ಅಮಿತಾ ಪೂಜಾರಿ, ದ್ವೀತಿಯ ದರ್ಜೆ ತಹಶೀಲ್ದಾರ್ ಗುರುಪ್ರಸಾದ್, ತಾ.ಪಂ. ಮುಖ್ಯ ಕಾರ್ಯ ನಿರ್ವಾಹನಾಧಿಕಾರಿ ಡಿ. ಮಂಜುನಾಥಯ್ಯ ವೇದಿಕೆಯಲ್ಲಿದ್ದರು.ಪಲಿಮಾರು ಮಾಜಿ ಗ್ರಾ.ಪಂ. ಅಧ್ಯಕ್ಷ ನವೀನ್‌ಚಂದ್ರ ಸುವರ್ಣ ಸ್ವಾಗತಿಸಿದ್ದು, ಮಾಜಿ ಉಪಾಧ್ಯಕ್ಷ ಜೀತೇಂದ್ರ ಪೊರ್ಟಾಡೋ ನಿರೂಪಿಸಿ ವಂದಿಸಿದರು.
 29palmar

ಅಧಿಕಾರಿಗಳೊಂದಿಗೆ ಗ್ರಾಮ ಪಂಚಾಯತಿಗಳ ಬೇಟಿ ಸಚಿವ ಸೊರಕೆಯವರಿಂದ ವಿನೂತನ ಕಾರ್ಯಕ್ರಮ

ವರದಿ-ಸುರೇಶ್ ಎರ್ಮಾಳ್
“ಗ್ರಾಮ ಪಂಚಾಯಿತಿಗಳಿಗೆ ಬೇಟಿ” ಈ ಕಾರ್ಯಕ್ರಮ ಬಹಳ ತುರ್ತಾಗಿ ನಿಗದಿ ಪಡಿಸಿಕೊಂಡ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮದ ಮೂಲಕ ಜನಪ್ರತಿನಿಧಿಗಳು-ಅಧಿಕಾರಿಗಳು ಹಾಗೂ ಜನರ ಮಧ್ಯೆ ವಿಶ್ವಾಸವೆಂಬ ಕೊಂಡಿ ಗಟ್ಟಿಯಾಗಲಿದೆ ಎಂಬುದಾಗಿ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಶುಕ್ರವಾರ ಹೆಜಮಾಡಿ ಗ್ರಾಮ ಪಂಚಾಯತ್‌ಗೆ ಭೇಟಿ ನೀಡಿ ಸಾರ್ವಜನಿಕರ ಅಹಾವಾಲು ಸ್ವೀಕಾರ ಮಾತನಾಡಿದರು. ಜನರ ಬಲು ದೊಡ್ಡ ಸಮಸ್ಯೆ ಯಾಗಿರುವ ರೇಷನ್‌ಕಾರ್ಡ್ ನವೀಕರಣದ ಬಗ್ಗೆ ಎಲ್ಲಾ ಪಿಡಿ‌ಒಗಳ ಸಭೆ ನಡೆಸಿ ಸೂಕ್ತತಿಳುವಳಿಕೆ ನೀಡಿ ಸಮಸ್ಯೆ ಸರಿಪಡಿಸುವಂತೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ತಾಲೂಕ್ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹನಾಧಿಕಾರಿ ಡಿ.ಮಂಜುನಾಥಯ್ಯನವರಿಗೆ ಸೂಚಿಸಿದ್ದಾರೆ.
[youtuber youtube='http://www.youtube.com/watch?v=u8Lffk8LoDw']
ಹಳೇಮನೆ ಕೆಡವಿ ಹೊಸ ಮನೆ ನಿರ್ಮಾಣ ಸಂದರ್ಭ ಕನ್ವರ್ಷನ್ ಅಗತ್ಯತೆ ಬಗ್ಗೆ ಸ್ಥಳೀಯಡಳಿತ ಸತಾಯಿಸುವ ಬಗ್ಗೆ ಗಮನ ಸೆಳೆದಾಗ ಹೆಜಮಾಡಿ ಪಿಡಿ‌ಓರವರನ್ನು ಸಚಿವರು ತರಾಟೆಗೆ ತೆಗೆದುಕೊಂಡು , ಕನ್ವರ್ಷನ್ ಅಗತ್ಯವಿಲ್ಲ ಎಂದರು.ಹೆಜಮಾಡಿಯ ಮಹತ್ವಾಕಾಂಕ್ಷೆಯ ಹೆಜಮಾಡಿ ಬಂದರು ಯೋಜನೆ ಗೆ ಮುಂದಿನ ಬಜೆಟ್‌ನಲ್ಲಿ ೨೫೦ ಕೋಟಿ ರೂಪಾಯಿ ಮೀಸಲಿಡಲಾಗುವುದು ಎಂದು ಪ್ರೆಶ್ನೆಯೊಂದಕ್ಕೆ ಸಚಿವರು ತಿಳಿಸಿದರು. ಕೇರಳ ಹಾಗು ಗೋವದಲ್ಲಿ ಸಿ‌ಆರ್‌ಝಡ್ ೫೦ಮೀಟರ್‌ಗೆ ಸೀಮಿತವಿದ್ದು, ರಾಜ್ಯದಲ್ಲಿ ೨೦೦ ಮೀಟರ್ ಇದೆ. ಇಲ್ಲೂ ನಿಯಮ ಜಾರಿಗೆ ಆಗ್ರಹಿಸಲಾಯಿತು. ಪ್ರ್ರವಾಸೊದ್ಯಮ ಕಾರಣ ಕೇರಳ , ಗೋವಾದಲ್ಲಿ ೫೦ಮೀಟರ್ ಇದ್ದು ರಾಜ್ಯದಲ್ಲೂ ಪ್ರವಾಸೋದ್ಯಮಕ್ಕೆ ಒತ್ತು ನೀಡಿ , ಕಾನೂನು ಬದಲಾವಣೆಗಾಗಿ ಕೇಂದ್ರಕ್ಕೆ ಸಲ್ಲಿಸುವುದಾಗಿ ಹೇಳಿದ ಅವರು ತಾಲೂಕಿನ ಅತೀದೊಡ್ಡ ಕ್ರೀಡಾಂಗಣವಾದ ಬಸ್ತಿಪಡ್ಪು ಕ್ರೀಡಾಂಗಣವನ್ನು ಅಭಿವೃದ್ದಿ ಪಡಿಸಲು ಕ್ರೀಡಾ ಇಲಾಖೆ ಹಸ್ತಂತರಿಸಲು ಕ್ರಮ ಕೈ ಗೊಳ್ಳುವುದಾಗಿ ಹೇಳಿದರು.ಗ್ರಾಮ ಪಂಚಾಯತ್ ವತಿಯಿಂದ ಗ್ರಾಮದ ಹಲವು ಬೇಡಿಕೆಗಳ ಬಗ್ಗೆ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ವಾಮನ್ ಕೋಟ್ಯಾನ್ ನಡಿಕುದ್ರು ಅಧ್ಯಕ್ಷತೆ ವಹಿಸಿದ್ದು , ಉಪಾಧ್ಯಕ್ಷೆ ಆಶಾ, ಪಿಡಿ‌ಒ ಪ್ರತಿಭಾ ಕುಡ್ತಡ್ಕ, ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ , ತಾಲೂಕು ಪಂಚಾಯತ್ ಸದಸ್ಯ ಸಚಿನ್ ನಾಯಕ್ , ತಾಲೂಕು ಪಂಚಾಯತ್ ಇ‌ಓ ಮಂಜುನಾಥಯ್ಯ , ಗ್ರೇಡ್ ೨ ತಹಶಿಲ್ದಾರ್ ಗುರು ಪ್ರಸಾದ್ , ತಾಲೂಕ್ ವೈದ್ಯಧಿಕಾರಿ ಡಾ. ನಾಗರತ್ನ ,ವಿವಿದ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
 29hejmadi

ಉಪ್ಪಿನಕುದ್ರು: ಬಿಲ್ವ ಆಂದೋಲನ ಉದ್ಘಾಟನೆ

ಕುಂದಾಪುರ: ಗ್ರೀನ್ ಇಂಡಿಯಾ ಮೂವ್‌ಮೆಂಟ್ (ರಿ) ಆಶ್ರಯದಲ್ಲಿ ಆರಂಭವಾಗಿರುವ ಸಾವಿರ ಬಿಲ್ವ ವೃಕ್ಷ ಆಂದೋಲನದ ಉದ್ಘಾಟನೆ ಶುಕ್ರವಾರ ಉಪ್ಪಿನಕುದ್ರು ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಜರುಗಿತು. ಬೆಂಗಳೂರು ಹೋಟೇಲ್ ಉದ್ಯಮಿ ಯು. ರಮೇಶ ಕಾರಂತ ಬಿಲ್ವ ಸಸಿಯನ್ನು ದೇವಸ್ಥಾನದ ವಠಾರದಲ್ಲಿ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಅಳಿವಿನಂಚಿನ ಸಸ್ಯ ಪ್ರಭೇದಗಳ ರಕ್ಷಣೆಯನ್ನು ಮಾಡುವುದರೊಂದಿಗೆ ಔಷದೀಯ ಸಸ್ಯಗಳನ್ನು ಗುರುತಿಸಿ ಬೆಳಸುವ ಕಾರ್ಯ ಮಾಡುತ್ತಿರುವ ಹಸೀರು ಭಾರತ ಆಂದೋಲನ (ಗ್ರೀನ್ ಇಂಡಿಯಾ ಮೂವ್‌ಮೆಂಟ್) ಕಾರ್ಯ ನಿಜಕ್ಕೂ ಶ್ಲಾಘನೀಯವಾದುದು ಎಂದರು.
ತಲ್ಲೂರು ಗ್ರಾಮಪಂಚಾಯತ್ ಉಪಾಧ್ಯಕ್ಷ ಉಮೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
bilva aandholana udghatane (3)
ಈ ಸಂದರ್ಭದಲ್ಲಿ ಗ್ರೀನ್ ಇಂಡಿಯಾ ಮೂವ್‌ಮೆಂಟ್ (ರಿ) ಅಧ್ಯಕ್ಷ ಮುನಿಯಾಲು ಗಣೇಶ ಶೈಣೈ, ಸಂಚಾಲಕ ಮೋಹನ ಆಚಾರ್ಯ ಕೋಟೇಶ್ವರ, ಸಂಗೀತ ಭಾರತ್ ಟ್ರಸ್ಟ್‌ನ ನಾರಾಯಣ ಕೆ., ಶಿಕ್ಷಕ ಗೋಪಾಲಕೃಷ್ಣ, ತಲ್ಲೂರು ಕುಂತಿಯಮ್ಮ ದೇವಸ್ಥಾನದ ಅಧ್ಯಕ್ಷ ಶ್ರೀಧರ ಹೆಗ್ಡೆ, ಸ್ಥಳೀಯರಾದ ಗೋವಿಂದ ದೇವಾಡಿಗ, ಅಮ್ಮಯ್ಯ ದೇವಾಡಿಗ, ರಾಘವೇಂದ್ರ ಮಯ್ಯ ಮೊದಲಾದವರು ಉಪಸ್ಥಿತರಿದ್ದರು.ಸುದ್ದಿಮನೆ ಪತ್ರಿಕೆಯ ಸಂಪಾದಕ ಸಂತೋಷ ಕೋಣಿ ಸ್ವಾಗತಿಸಿ, ಕೂಟ ಮಹಾಜಗತ್ತು ಕುಂದಾಪುರದ ಅಂಗಸಂಸ್ಥೆ ಅಧ್ಯಕ್ಷ ಉಪ್ಪಿನಕುದ್ರು ವೆಂಕಟರಮಣ ಹೊಳ್ಳ ಕಾ‌ಅರ್ಯಕ್ರಮ ನಿರೂಪಿಸಿ ವಂದಿಸಿದರು.
bilva aandholana udghatane (4)
bilva aandholana udghatane (6)
bilva aandholana udghatane (7)

ಬಾಲಕನ ಹೃದಯ ಚಿಕಿತ್ಸೆಯ ನೆರವಿಗಾಗಿ ಮನವಿ

ಕುಂದಾಪುರ: ತಂದೆ ತಾಯಿಗಳಿಲ್ಲದ ತಬ್ಬಲಿ ಗುಲ್ವಾಡಿಯ ನವೀನ ಎನ್ನುವ ಬಡ ಬಾಲಕ ಹೃದಯ ತೊಂದರೆಯಿಂದ ಬಳಲುತ್ತಿದ್ದಾನೆ. ಕುಂದಾಪುರ ತಾಲೂಕು ಗುಲ್ವಾಡಿ ಗ್ರಾಮದ ಸೌಕೂರು ರುಕ್ಕಮ್ಮ ನಿಲಯದ ದಿ| ಸರೋಜ ಹಾಗೂ ಭರತ್ ಎನ್ನುವವರ ಮಗ ನವೀನ್ ಎನ್ನುವ ಒಂಭತ್ತನೇ ತರಗತಿಯ ವಿದ್ಯಾರ್ಥಿಗೆ ಇತ್ತೀಚೆಗೆ ಕಾಣಿಸಿಕೊಂಡ ಹೃದಯ ರಂದ್ರದ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಈತನ ಅನಾರೋಗ್ಯ ಕುಟುಂಬದ ನೆಮ್ಮದಿಯನ್ನೇ ಕಿತ್ತುಕೊಂಡಿದೆ.
28- nervu -(1)-2
ಸೌಕೂರು ಶಿವಶಂಕರಿ ಭಜನಾ ಮಂದಿರ ಹತ್ತಿರವಿರುವ ರುಕ್ಕಮ್ಮ ನಿಲಯ ಎನ್ನುವ ಪುಟ್ಟ ಮನೆಯಲ್ಲಿ ಅಜ್ಜಿ ರುಕ್ಕಮ್ಮ, ಮಾವ ಸಂತೋಷರವರ ಜೊತೆಗೆ ನವೀನನ ವಾಸ. ನವೀನನ ತಾಯಿ ತೀರಿಕೊಂಡಾಗ ನವೀನ ಹಾಗೂ ೩ ತಿಂಗಳ ಹೆಣ್ಣು ಮಗು ನಯನಳ ಜವಾಬ್ದಾರಿಯನ್ನು ಅಜ್ಜಿ ಹಾಗೂ ನವೀನನ ತಾಯಿಯ ತಮ್ಮ ಮಂಜುನಾಥ ಹೊತ್ತಿದ್ದರು. ಅಜ್ಜಿ ಕೂಲಿ ಮಾಡಿದರೆ, ಸಂತೋಷ್ ಹಂಚಿನ ಕಾರ್ಖಾನೆಯಲ್ಲಿ ಕೆಲಸ ಮಾಡಿ ಮಕ್ಕಳಿಬ್ಬರನ್ನು ಬೆಳೆಸುತ್ತಿದ್ದಾರೆ. ಕಿತು ತಿನ್ನುವ ಬಡತನವಿದ್ದರೂ ಮಕ್ಕಳಿಗೆ ಸಮಸ್ಯೆ ಗೊತ್ತಾಗಬಾರದು, ಶಿಕ್ಷಣದಿಂದ ವಂಚಿತರಾಗಬಾರದು ಎಂದು ಶಾಲೆಗೆ ಸೇರಿಸಿದ್ದರು. ನವೀನ ಈಗ ಮಾವಿನಕಟ್ಟೆ ಕೊಲ್ಲೂರು ಮೂಕಾಂಬಿಕ ದೇವಳ ಪ್ರೌಢಶಾಲೆಯಲ್ಲಿ ೯ನೇ ತರಗತಿಯಲ್ಲಿ ಓದುತ್ತಿದ್ದರೆ, ನಯನ ೭ನೇ ತರಗತಿಯಲ್ಲಿ ಓದುತ್ತಿದ್ದಾಳೆ.
ನವೀನನಿಗೆ ಇತ್ತೀಚೆಗಿನ ದಿನಗಳಲ್ಲಿ ಶ್ವಾಸ ತಗೆಯುವಾಗ ಎದೆ ನೋವು ಕಾಣಿಸಿಕೊಳ್ಳುತ್ತಿತ್ತು. ನಡೆಯುವಾಗ,  ಕುಳಿತುಕೊಳ್ಳುವಾಗ  ಎದೆನೋವು ಬಾಲಕನನ್ನು ಬಾಧಿಸುತ್ತಿತ್ತು. ನೇರವಾಗಿ ಕುಳಿತುಕೊಳ್ಳಲು ಕಷ್ಟವಾಗುತ್ತಿತ್ತು. ಸಾಕಷ್ಟು ನೋವನ್ನು ನುಂಗಿಕೊಂಡು ಬಂದ ಬಾಲಕ ನೋವನ್ನು ಅರಗಿಸಿಕೊಂಡು ಶಾಲೆಗೂ ಹೋಗುತ್ತಿದ್ದ. ಕಳೆದ ವಾರ ಎದೆನೋವು ಜಾಸ್ತಿಯಾಯಿತು. ತಕ್ಷಣ ಕುಂದಾಪುರದ ಆಸ್ಪತೆಗೆ ಕರೆ ತಂದಾಗ ಮಣಿಪಾಲಕ್ಕೆ  ಹೋಗುವಂತೆ ವೈದ್ಯರು ಸೂಚಿಸಿದರು. ಮಣಿಪಾಲದ ಕೆ.ಎಂ.ಸಿಯಲ್ಲಿ ಪರೀಕ್ಷಿಸಿದ ವೈದ್ಯರು ಕೂಡಲೆ ಮೇಜರ್ ಓಪನ್ ಹಾರ್ಟ್ ಸರ್ಜರಿ ಆಗಬೇಕು ಎಂದಾಗ ವೃದ್ದ ಅಜ್ಜಿ ಹಾಗೂ ಸಂತೋಷ್ ಕಂಗೆಟ್ಟಿದ್ದಾರೆ. ಈ ಸರ್ಜರಿಗೆ ೧,೩೦,೦೦೦ ರೂ. ಬೇಕಾಗಿದ್ದು ಎರಡು ಹೊತ್ತಿನ ಊಟಕ್ಕೆ ಆಗುವ ದುಡಿಮೆಯಿಂದ ಅಷ್ಟು ಹಣವನ್ನು ಹೊಂದಿಸುವುದು ಹೇಗೆಂದು ಅವರು ದಿಕ್ಕು ತೋಚದಾಗಿದ್ದಾರೆ.
ಬಾಲಕನ ಬದುಕನ್ನು ಅರಳಿಸಲು ಸಹೃದಯರ ಸಹಾಯಹಸ್ತ ಅಗತ್ಯವಾಗಿ ಬೇಕಾಗಿದೆ. ಅರಳಿ ನಳನಳಿಸಬೇಕಾದ ಬಾಲಕನಿಗೆ ಮತ್ತೆ ಅದೇ ಉತ್ಸಾಹ ತುಂಬಬೇಕಾಗಿರುವುದು ಸಮಾಜದ ಸಹೃದಯಿ ಮಾನವೀಯ ಕೊಂಡಿಗಳು. ಮಾನವೀಯ ಸಂವೇದನೆಯಿಂದ ನೀಡುವ ಕಿಂಚಿತ್ ಸಹಾಯ ಕೂಡಾ ಇಲ್ಲಿ ಬಾಲಕನ ಬದುಕಿಗೆ ಆಸರೆ ಆಗುತ್ತದೆ. ಬಾಲಕನ ಚಿಕಿತ್ಸೆಗೆ ಸಹಕರಿಸುವ ದಾನಿಗಳು ವಿಜಯ ಬ್ಯಾಂಕ್ ಶಾಖೆ ಗುಲ್ವಾಡಿ ಖಾತೆ ಸಂಖ್ಯೆ: ೧೨೪೧೦೧೧೧೧೦೦೦೧೩೮ ಕ್ಕೆ ಸಲ್ಲಿಸಬಹುದಾಗಿದೆ. ಮಾಹಿತಿಗೆ ದೂರವಾಣಿ ಸಂಖ್ಯೆ:೯೯೮೦೩೨೦೮೪೩ ಸಂಪರ್ಕಿಸಬಹುದಾಗಿದೆ.

ಸೈಕಲಲ್ಲಿ ರಾಜ್ಯ ಪ್ರವಾಸ- ಇಂಜಿನಿಯರಿಂಗ್ ಪದವೀದರರಿಬ್ಬರ ಸೈಕಲ್ ಯಾತ್ರೆ

ಕುಂದಾಪುರ: ಅವರಿಬ್ಬರೂ ಬೆಂಗಳೂರಿನ ಪೆಸಿಟ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದರು. ಶಿಕ್ಷಣ ಮುಗಿಯುತ್ತಿದ್ದಂತೆ ಉತ್ತಮ ನೌಕರಿಯೂ ಸಿಕ್ಕಿತು. ಕೆಲಸಕ್ಕೆ ಸೇರುವ ಮುನ್ನ ಸೈಕಲಲ್ಲಿ ಒಮ್ಮೆ ಕರ್ನಾಟಕ ರಾಜ್ಯ ಪ್ರವಾಸ ಮಾಡಬೇಕೆಂಬ ಹಂಬಲವನ್ನು ಹೊಂದಿದ್ದ  ಇಬ್ಬರಿಗೂ ಕಾಲೇಜಿನವರೂ ಪ್ರೋತ್ಸಾಹ ನೀಡುವುದರೊಂದಿಗೆ ಹಣದ ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದೇ ಇಬ್ಬರೂ ಸೈಕಲ್ ಏರಿ ರಾಜ್ಯ ಪರ್ಯಟನೆಗೆ ಹೊರಟರು.
adarsh and gupta
ಹರಿಯಾಣದ ನಿಹಾರ್ ದಾಸ್ ಗುಪ್ತಾ ಹಾಗೂ ನಿಲದಾಸ್ ಗುಪ್ತಾ ಅವರ ಪುತ್ರ ಶಿಲ್ಲಾಂಗ್‌ನ ಜಯಂತದಾಸ ಗುಪ್ತಾ (೨೨), ಪುತ್ತೂರು ಉಪ್ಪಿನಂಗಡಿಯ ಇಳಂತಿಲದ ಕೆ. ಗಣಪತಿ ಭಟ್ ಹಾಗೂ ಮಹಾಲಕ್ಷ್ಮೀ ಜಿ. ಭಟ್ ಅವರ ಪುತ್ರ ಆದರ್ಶ ಭಟ್ (೨೨.) ಈ ರೀತಿಯ ಸೈಕಲ್ ಯಾತ್ರೆಗೆ ಕೈ ಹಾಕಿದ್ದು ಬೆಂಗಳೂರಿನಿಂದ ಜೂನ್ ೬ಕ್ಕೆ ಹೊರಟು ಮೈಸೂರಿಗೆ ಹೋಗಿ ಅಲ್ಲಿಂದ ಉತ್ತರ ಕರ್ನಾಟಕಕ್ಕೆ ಸುತ್ತಿ ಅವರು ಕರಾವಳಿ ಜಿಲ್ಲೆಗಳನ್ನು ತಿರುಗಿದ್ದಾರೆ, ದಿನವೊಂದಕ್ಕೆ ೧೦೦ ಕಿ.ಮೀ. ಸೈಕಲ್‌ನಲ್ಲಿ ಪ್ರಯಾಣಿಸುವುದರೊಂದಿಗೆ ೨೧ ದಿನಗಳಲ್ಲಿ ಈವರೆಗೂ ಸುಮಾರು ೨,೦೬೦ ಕಿ.ಮೀ. ಸಾಗಿರುವ ಇವರು ದಿ.೨೮ (ಇಂದು ಶುಕ್ರವಾರ) ರಂದು ಧರ್ಮಸ್ಥಳ ಕ್ಷೇತ್ರದಲ್ಲಿ ಸೈಕಲ್ ಯಾತ್ರೆಗೆ ಪೂರ್ಣವಿರಾಮ ಹಾಕಲಿದ್ದಾರೆ.
aadarsh and gupta
ಸ್ನೇಹಿತನ ತಂದೆ ಸ್ಫೂರ್ತಿ: ಜಯಂತದಾಸ ಗುಪ್ತಾ ಹಾಗೂ ಆದರ್ಶ ಭಟ್ ಸೈಕಲ್ ಏರಿ ರಾಜ್ಯದ್ಯಂತ ಸವಾರಿ ಹೊರಡಲು ಪ್ರೇರಕ ಸ್ಫೂರ್ತಿಯಾದವರು ಇವರಿಬ್ಬರ ಸಹಪಾಠಿ ಕುಂದಾಪುರ ಮೂಲದ ವಿವೇಕ್ ಕಾಮತ್ ಅವರ ತಂದೆ. ಅವರು ತಮ್ಮ ನಿವೃತ್ತಿ ಬದುಕಿನಲ್ಲಿ ಕುಂದಾಪುರದಿಂದ ತಿರುಪತಿಗೆ ಪಾದಯಾತ್ರೆ ಮಾಡಿದ್ದು ಕೇಳಿದ ಈ ಯುವಕರು ತಾವೂ ಇಂತಹದೊಂದು ಸಾಧನೆ ಮಾಡಬೇಕೆಂದು ಹಂಬಲಿಸಿದ್ದಾರೆ. ಆಗ ಅವರಿಗೆ ತೋಚಿದ್ದು ಸೈಕಲ್ ಸವಾರಿ ಮೂಲಕ ರಾಜ್ಯ ಪರ್ಯಟನೆ ಮಾಡುವುದು. ಈ ವಿಷಯವನ್ನೂ ಕಾಲೇಜಿನವರಲ್ಲಿ ತಿಳಿಸಿದಾಗ ಸಂತಸದಿಂದಲೇ ಒಪ್ಪಿ ರಾಜ್ಯ ಪರ್ಯಟನೆಗೆ ತಗಲುವ ವೆಚ್ಚವನ್ನು ಬರಿಸುವುದಾಗಿ ತಿಳಿಸಿದ್ದು, ಇಬ್ಬರ ಮನೆಯವರೂ ಇದಕ್ಕೆ ಸಂತಸದಿಂದಲೇ ಒಪ್ಪಿದ್ದು ಇವರಿಗೆ ಉತ್ತಮ ಸ್ಫಂಧನೆ ನೀಡಿದ್ದಾರೆ. ಈವರೆಗೂ ಇವರ ಸೈಕಲ್, ಕ್ಯಾಮೇರಾ ಇತರೆ ಖರ್ಚುಗಳೂ ಸೇರಿ ೧ ಲಕ್ಷದ ೨೫ ಸಾವಿರಕ್ಕೂ ಅಧಿಕ ವೆಚ್ಚವಾಗಿದೆ ಎಂದು ಯುವಕರು `ಹೊಸದಿಗಂತ’ಕ್ಕೆ ತಿಳಿಸಿದ್ದಾರೆ.
ಉತ್ತಮ ಅನುಭವ ಸಿಕ್ಕಿದೆ: ಕರ್ನಾಟಕ ರಾಜ್ಯದ ಪ್ರವಾಸದುದ್ದಕ್ಕೂ ವಿಶೇಷ ಗುಡಿಗಳು, ಚರ್ಚ್, ಮಸೀದಿಗಳೂ ಸೇರಿದಂತೆ ಆಕರ್ಷಣೀಯ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ವಿಶೇಷತೆಗಳನ್ನು ತಿಳಿಯುವ ಕೆಲಸ ಯುವಕರು ಮಾಡಿದ್ದಾರೆ. ಹೊದಲ್ಲೆಲ್ಲಾ ಜನರು ಬಹಳ ಪ್ರೀತಿಯಿಂದ ಮಾತನಾಡಿಸಿ ನಮಗೆ ಸ್ಫೂರ್ತಿ ತುಂಬಿದರು ಈ ಸೈಕಲ್ ಸವಾರಿ ನಮ್ಮ ಬದುಕಿಗೆ ಅನುಭವ ಪಾಠವನ್ನು ಕಲಿಸಿದೆ, ಸೈಕಲ್ ಸವಾರಿಯಿಂದ ದೈಹಿಕವಾಗಿ ದೃಡತೆಯನ್ನು ಹೊಂದಿದ್ದೇವೆ ಅಲ್ಲದೇ ವಿವಿಧ ಜಿಲ್ಲೆಗಳಲ್ಲಿನ ಜನರ ಜೀವನ ಕ್ರಮ, ಆಹಾರ ಪದ್ದತಿ, ಜಾತಿ-ಧರ್ಮಗಳ ಬಗೆಗಿನ ಪಕ್ಷಿನೋಟ, ಜಿಲ್ಲೆಯ ವಿಶೇಷತೆಗಳು ಮೊದಲಾದವುಗಳನ್ನು ಛಾಯಾಚಿತ್ರ ಹಾಗೂ ವಿಡಿಯೋ ಚಿತ್ರೀಕರಣ ಮಾಡಿದ್ದು ಅದನ್ನು ದಾಖಲಾತಿಗಾಗಿ ಇಡುತ್ತೇವೆ ಎಂದು ಇಬ್ಬರೂ ಯುವಕರು ಪತ್ರಿಕೆಗೆ ತಿಳಿಸಿದ್ದಾರೆ.
ತಾ.೨೬ರಂದು ಮಧ್ಯಾಹ್ನ ಕುಂದಾಪುರಕ್ಕೆ ಆಗಮಿಸಿದ ಈ ಇಬ್ಬರೂ ಉತ್ಸಾಹಿ ಯುವಕರನ್ನು ಕುಂದಾಪುರದ ಶಾಸ್ತ್ರಿ ವೃತ್ತದಲ್ಲಿ ಕುಂದಪ್ರಭ ಸಂಸ್ಥೆ, ಹಾಸ್ಯಸಂಘ ಕುಂದಾಪುರದ ವತಿಯಿಂದ ಕುಂದಪ್ರಭ ಸಂಸ್ಥೆಯ ಅಧ್ಯಕ್ಷ ಯು.ಎಸ್.ಶೆಣೈ, ಅಂಕಣಗಾರ ಕೊ.ಶಿವಾನಂದ ಕಾರಂತ, ಹಾಸ್ಯ  ಸಂಘದ  ಅಧ್ಯಕ್ಷ  ಕೆ.ರಮಾನಂದ  ಕಾಮತ್, ಸಂಗೀತ  ಭಾರತಿ  ಕಾರ್ಯದರ್ಶಿ  ಕೆ.ನಾರಾಯಣ್, ರಾಷ್ಟ್ರಪ್ರಶಸ್ತಿ  ಪುರಸ್ಕೃತ  ಶಿಕ್ಷಕ ಹಂದಕುಂದ  ಸೋಮಶೇಖರ  ಶೆಟ್ಟಿ, ಉಪನ್ಯಾಸಕ  ವಿಶ್ವನಾಥ  ಕರಬ, ಕವಿ ರಾಜೀವ  ನಾಯ್ಕ, ಲೇಖಕ ಪಿ.ಜಯವಂತ  ಪೈ, ಆರ್.ಕೆ. ಪುಂಡಲೀಕ ಶ್ಯಾನುಭಾಗ್, ಸಹಪಾಠಿ ಕೆ.ವಿವೇಕ ಕಾಮತ್ ಸ್ವಾಗತಿಸಿದರು.
ಸಹಪಾಠಿ ವಿವೇಕ್ ತಂದೆ ಮಾಡಿದ ಪಾದಯಾತ್ರೆಯಿಂದ ಸ್ಫೂರ್ತಿಗೊಂಡು ರಾಜ್ಯದ್ಯಂತ ಸೈಕಲ್ ಸವಾರಿ ಮೂಲಕ ಯಾತ್ರೆ ನಡೆಸಿದ್ದೇವೆ, ನಮ್ಮ ಮನೆಯವರೂ ನಮಗೆ ಉತ್ತೇಜನ ನೀಡಿದ್ದು ನಾವು ಓದಿದ ಬೆಂಗಳೂರಿನ ಪೆಸಿಟ್ ಇಂಜಿನಿಯರಿಂಗ್ ಕಾಲೇಜಿನವರು ಆರ್ಥಿಕ ಸಹಕಾರ ನೀಡಿದ್ದಾರೆ. ಈ ಯಾತ್ರೆ ನಮಗೆ ಜೀವನ ಪಾಠವನ್ನು ಕಲಿಸಿದೆ, ಹಾಗೂ ವಿವಿಧತೆಯಲ್ಲಿರುವ ಏಕತೆಯನ್ನು ನಾವು ಕಂಡಿದ್ದೇವೆ.

ಸಾಸ್ತಾನ: ಕುಂದಾಪುರ ವಲಯ ಮಟ್ಟದ ಸ್ತ್ರೀ ಸಮ್ಮೇಳನ

ಕುಂದಾಪುರ : ಕುಂದಾಪುರ ವಲಯ ಮಟ್ಟದ ಕಥೋಲಿಕ್ ಸ್ತ್ರೀ ಸಂಘಟನೇಯ ಸಮ್ಮೇಳನ ಇತ್ತೀಚೆಗೆ ಸಾಸ್ತಾನ ಇಗರ್ಜಿಯ ಮೈತ್ರಿ ಸಭಾಂಗಣದಲ್ಲಿ ನೆಡೆಯಿತು. ಸಮ್ಮೇಳನದ ಮೊದಲು ಸಮ್ಮೇಳನದ ಅಧ್ಯಕ್ಷರಾದ ಉಡುಪಿ ಧರ್ಮ ಪ್ರ್ಯಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಬಿಶಪ್ ಜೆರಾಲ್ಡ್ ಐಸಾಕ್ ಲೋಬೊ, ಉಡುಪಿ ಧರ್ಮಪ್ರ್ಯಾಂತ್ಯದ ಸ್ತ್ರೀ ಸಂಘಟನೇಯ ಧಾರ್ಮಿಕ ನಿರ್ದೇಶಕಾರಾದ ವಂದನೀಯ ಧರ್ಮಗುರು ಫ್ರೆಡ್ ಮಸ್ಕರೇನಸ್ ಮತ್ತು ಇತರ ಧರ್ಮ ಗುರುಗಳೊಂದಿಗೆ ಹಾಗೂ ಪ್ರತಿನಿಧಿಗಳೊಂದಿಗೆ ಸಾಸ್ತಾನ ಇಗರ್ಜಿಯಲ್ಲಿ ದಿವ್ಯ ಬಲಿ ಪೂಜೆ ಅರ್ಪಿಸಿದರು.
ಈ ಸಂದರ್ಭದಲ್ಲಿ ವಲಯ ಪ್ರಧಾನ ಅತೀ ವಂದನೀಯ ಧರ್ಮಗುರು ಅನಿಲ್ ಡಿಸೋಜಾ, ಧರ್ಮಗುರು ಅಲ್ಬೋನ್ಸ್ ಡಿಲೀಮಾ ಮತ್ತು ವಂದನೀಯ ಧರ್ಮಗುರು ಸುನಿಲ್ ವೇಗಸ್, ಸಂಘಟನೆಯ ಧಾರ್ಮಿಕ ನಿರ್ದೇಶಕರಾದ ಅತೀ ವಂದನೀಯ ಧರ್ಮಗುರು ವಿಶಾಲ್ ಲೋಬೊ, ಉಡುಪಿ ಧರ್ಮ ಪ್ರ್ಯಾಂತ್ಯದ ಸ್ತ್ರೀ ಸಂಘಟನೇಯ ಅಧ್ಯಕ್ಶೆ ಲೀನಾ ರೋಚ್ ಸಾಸ್ತಾನ ಇಗರ್ಜಿಯ ಧರ್ಮಗುರು ವಂದನೀಯ ವಲೇರಿಯನ್ ಫೆರ್ನಾಂಡಿಸ್ ಇದ್ದರು.ಕಾರ್ಯದರ್ಶಿ ಜೆನೆಟ್ ಬಾಂಜ್ ವರದಿ ವಾಚಿಸಿದರು, ಖಚಾಂಚಿ ವಿನಯಾ ಡಿಕೋಸ್ತಾ ಲೆಕ್ಕ ಪತ್ರವನ್ನು ಮಂಡಿಸಿದರು. ವಲಯದ ಅಧ್ಯಕ್ಶೆ ಸಿಂತಿಯಾ ಡಿಸೋಜಾ ಸ್ವಾಗತಿಸಿದರು. ಕಾರ್ಯಕ್ರಮವನ್ನು ಲೀನಾ ತಾವ್ರೊ ಮತ್ತು ಮೇಬಲ್ ಡಿಸೋಜಾ ನಿರ್ವಹಿಸಿ ಪತ್ರಿಕಾ ಪ್ರತಿನಿಧಿ ವೀರಾ ಪಿಂಟೊ ವಂದಿಸಿದರು
 27- stri sammelana-(4)

ಕೋಟತಟ್ಟು-ಪಡುಕೆರೆ: ಸಮುದ್ರದ ಉಪ್ಪು ನೀರಿನ ಹಾವಳಿ- ಕೃಷಿಕರು ದಿವಾಳಿ

ಕುಂದಾಪುರ: ಪ್ರತಿ ವರ್ಷ ಮಳೆಗಾಲ ಬಂತೆಂದರೆ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಟತಟ್ಟು-ಪಡುಕೆರೆ ನಿವಾಸಿಗಳಿಗೆ ಆತಂಕ ಆರಂಭವಾಗುತ್ತದೆ. ಹತ್ತಾರು ವರ್ಷಗಳಿಂದ ಇಲ್ಲಿನ ಜನ ಕೃಷಿ ಮಾಡುತ್ತಿಲ್ಲ, ಇನ್ನು ಧೈರ್ಯ ಮಾಡಿ ಕೃಷಿ ಮಾಡಲು ಹೊರಟರೆ ಸಮುದ್ರದ ಉಪ್ಪು ನೀರಿನ ಹಾವಳಿಯಿಂದ ಸಂಪೂರ್ಣ ಕೃಷಿ ಹಾನಿಯಾಗುವುದಂತೂ ಗ್ಯಾರೆಂಟಿ.
26- kotatattu- padukere-(3)-2
ಮಳೆ ನೀರು ಹರಿದು ಹೋಗಲು ಮಾಡಿದ ಬ್ರಹತ್ ಕಾಲುವೆ(ತೋಡು)ಯಲ್ಲಿ ಸಮುದ್ರದ ಉಪ್ಪು ನೀರು ಹರಿದು ಬಂದು ಈ ಪರಿಸರದ ೧೫ ಎಕ್ರೆಗೂ ಅಧಿಕ ಕೃಷಿ ಭೂಮಿಗೆ ನುಗ್ಗುತ್ತದೆ. ಪ್ರತಿ ವರ್ಷ ಮಳೆಗಾಲದಲ್ಲಿ ಈ ಸಮಸ್ಯೆ ಆರಂಭಾವಾದರೆ ಸಂಪೂರ್ಣ ಮಳೆ ಹಿನ್ನೆಡೆಯಾಗುವರೆಗೂ ನಿತ್ಯದ ಸಮಸ್ಯೆ ಇದೇ ಆಗಿದೆ. ಸ್ಥಳಿಯ ನಿವಾಸಿಗಳಾದ ಬಸವ ಕುಂದರ್, ಮಹಾಬಲ ಪೂಜಾರಿ, ಕೃಷ್ಣ ಪೂಜಾರಿ, ರಾಮ ಪೂಜಾರಿ, ದೂಮ ಪೂಜಾರಿ, ಹೂವ ಮರಕಾಲ, ಪಣಿಯ ಪೂಜಾರಿ, ಮಾಸ್ತಿ ಪೂಜಾರಿಯವರ ೩೦ ಕ್ಕೂ ಅಧಿಕ ಕೃಷಿ ಭೂಮಿಗಳು ಇಲ್ಲಿದ್ದು ಸುಮಾರು ೧೫ ಎಕ್ರೆಗೂ ಅಧಿಕ ಕೃಷಿ ಭೂಮಿಯಲ್ಲಿ ಕೃಷಿ ಮಾಡಲು ಆಗುತ್ತಿಲ್ಲ. ಇನ್ನು ಉತ್ಸಾಹದಿಂದ ಕೃಷಿ ಮಾಡಿದಲ್ಲಿ ಮಳೆಗಾಲದಲ್ಲಿ ಉಪ್ಪುನೀರು ಸಮುದ್ರದಿಂದ ಈ ಕಾಲುವೆಯಲ್ಲಿ ಹರಿದು ಬಂದು ಕೃಷಿ ಭೂಮಿಗೆ ನುಗ್ಗುತ್ತದೆ. ಉಪ್ಪು ನೀರಿನ ಪರಿಣಾಮ ಸಂಪೂರ್ಣ ಕೃಷಿ ಕೊಳೆತು ನಾಶವಾಗಿ ಕೃಷಿಕರು ನಷ್ಟ ಅನುಭವಿಸುವಂತಾಗುತ್ತಿದೆ. ಇನ್ನೂ ತೆಂಗಿನ ಮರಗಳನ್ನು ಇಲ್ಲಿನ ಉಪ್ಪು ನೀರು ಬಿಟ್ಟಿಲ್ಲ. ಪರಿಸರದ ತೋಟದಲ್ಲಿನ ನೂರಾರು ತೆಂಗಿನ ಮರಗಳು ಬುಡಸಮೇತ ಕೊಳೆಯಲಾರಂಭಿಸಿದೆ.
ತಡೆಗೋಡೆ ಬೇಕು: ಸಮುದ್ರದ ಅಬ್ಬರದ ತೆರೆಗಳಿಂದ ಬರುವ ಉಪ್ಪು ನೀರು ಈ ಕಾಲುವೆಯಲ್ಲಿ ಹರಿಯುವುದರಿಂದ ಇಲ್ಲಿನ ಜನರು ಸಂಕಷ್ಟ ಅನುಭವಿಸುವಂತಾಗಿದೆ. ಇದಕ್ಕೆ ಶಾಶ್ವತ ಪರಿಹಾರವೆಂದರೆ ಉಪ್ಪು ನೀರಿನ ತಡೆಗೋಡೆ ನಿರ್ಮಿಸುವುದು. ಈ ತಡೆಗೋಡೆಯಿಂದ ಸಮುದ್ರ ನೀರಿನ ಇಳಿತದ ಸಂದರ್ಭದಲ್ಲಿ ನೀರು ಸಮುದ್ರಕ್ಕೆ ಹರಿಯಲು ಹಲಗೆಯನ್ನು ತೆಗೆಯಬೇಕು ಸಮುದ್ರದ ನೀರಿನ ಅಬ್ಬರ ಜಾಸ್ಥಿ ಇರುವಾಗ ಹಲಗೆ ಮುಚ್ಚುವುದರಿಂದ ಸಮುದ್ರ ನೀರು ಕಾಲುವೆಗೆ ಪುನಃ ಹರಿದು ಕೃಷಿ ಭೂಮಿಗೆ ನುಗ್ಗುವುದನ್ನು ತಪ್ಪಿಸಲು ಸಾಧ್ಯವಿದೆ.
ಜನಪ್ರತಿನಿಧಿಗಳು ಸ್ಪಂಧಿಸುತ್ತಿಲ್ಲ: ವರ್ಷಗಳಿಂದ ಇಲ್ಲಿನ ಸಮಸ್ಯೆಯ ಬಗ್ಗೆ ಹಾಗೂ ಸ್ಥಳದಲ್ಲಿ ಉಪ್ಪುನೀರಿನ ತಡೆಗೋಡೆ ನಿರ್ಮಿಸಿಕೊಡುವಂತೆ ಸ್ಥಳೀಯ ನಿವಾಸಿಗಳು ಹಲವು ಬಾರಿ ಸರಕಾರಕ್ಕೆ ಮನವಿ ನೀಡಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಸುಮಾರು ೧೫ ವರ್ಷಗಳಿಂದಲೂ ಹಲವು ಜನಪ್ರತಿನಿಧಿಗಳಿಗೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರೂ ಯಾರು ಕೂಡ ಇವರ ಸಮಸ್ಯೆಗೆ ಸ್ಪಂಧಿಸಿಲ್ಲ. ಶೀಘ್ರ ಸಂಭಂದಪಟ್ಟ ಇಲಾಖೆಯೂ ಈ ಬಗ್ಗೆ ಗಮನ ಹರಿಸದೇ ಈ ಸಮಸ್ಯೆಗೆ ಪರಿಹಾರ ಒದಗಿಸಿಕೊಡದಿದ್ದಲ್ಲಿ ಸಾರ್ವಜನಿಕರು ಉಗ್ರ ಹೋರಾಟದ ಹಾದಿಯನ್ನು ಹಿಡಿಯಬೇಕಾಗುತ್ತದೆಂದು ಸ್ಥಳಿಯ ಮೀನುಗಾರ ಹಾಗೂ ಕೃಷಿಕರಾದ ರತ್ನಾಕರ ಶ್ರೀಯಾನ್, ರಾಘವೇಂದ್ರ ದಳಮನೆ, ಗೋಪಾಲ ದಳಮನೆ ಹಾಗೂ ವಿಜಯ ಪೂಜಾರಿ ಆಗ್ರಹಿಸಿದ್ದಾರೆ.ಹಲವು ವರ್ಷಗಳಿಂದ ನಾವಿಲ್ಲಿ ಸಮಸ್ಯೆ ಅನುಭವಿಸುತ್ತಿದ್ದೇವೆ, ನಮ್ಮ ಕಷ್ಟಕ್ಕೆ ಯಾರೂ ಸ್ಪಂಧಿಸುತ್ತಿಲ್ಲ, ನಮಗಿಲ್ಲಿ ಕೃಷಿ ಮಾಡಲು ಆಗುತ್ತಿಲ್ಲ ಇನ್ನು ತೆಂಗು ಮೊದಲಾದ ಮರಗಳು ಉಪ್ಪುನೀರಿನ ಪ್ರಭಾವದಿಂದ ಹಾನಿಗೊಳಗಾಗುತ್ತಿದೆ. ಇಲಾಖೆ ಈ ಪ್ರದೇಶಕ್ಕೊಂದು ಉಪ್ಪುನೀರಿನ ತಡೆಗೋಡೆ ನಿರ್ಮಿಸಿಕೊಡಬೇಕು.

ವಿಶಿಷ್ಟ ಶಿಕ್ಷಣ ಕ್ರಮದ ಮೂಲಕ ಖಾಸಗಿ ಶಾಲೆಗೆ ಸೆಡ್ಡು ಹೊಡಿತಿದೆ ಹೆಸಕುತ್ತೂರು ಸರಕಾರಿ ಶಾಲೆ

ಕುಂದಾಪುರ:೧೦ ವರ್ಷದಿಂದ ಬರುವ ಮಕ್ಕಳ ಸಂಖ್ಯೆ ಸ್ಥಿರ ಜಿಲ್ಲೆಯಲ್ಲೇ ಹೆಸರು ಮಾಡಿದ ಸರಕಾರಿ ಶಾಲೆ ಯಿದು ,ಇತ್ತೀಚೆಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಖಾಸಗಿ ಶಾಲೆಗಳು ಮಕ್ಕಳು ಹಾಗೂ ಪೋಷಕರನ್ನು ಆಕರ್ಷಿಸುತ್ತಿದ್ದು ಸರಕಾರಿ ಶಾಲೆಗೆ ಬರುವ ಮಕ್ಕಳ ಸಂಖ್ಯೆಯಲ್ಲಿಯೂ ಗಣನೀಯ ಇಳಿಕೆ ಕಂಡುಬರುತ್ತಿದೆಯೆಂಬ ಆತಂಕದ ನಡುವೆಯೇ ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಯೊಂದು ಗುಣಾತ್ಮಕ ಶಿಕ್ಷಣದೊಂದಿಗೆ ತನ್ನ ವಿಭಿನ್ನತೆಯಲ್ಲಿ ಖಾಸಗಿ ಶಾಲೆಗೆ ಸೆಡ್ಡು ಹೊಡೆದು ನಿಂತಿದೆ.
25-hesakuttooru shale-(3)-4
ಕುಂದಾಪುರ ತಾಲೂಕಿನ ಕಾಳಾವರ ಗ್ರಾಮಪಂಚಾಯತ್ ವ್ಯಾಪ್ತಿಯ ಹೆಸಕುತ್ತೂರು ಎಂಬ ಪುಟ್ಟ ಹಳ್ಳಿಯೊಂದರಲ್ಲಿ ಈ ಸರಕಾರಿ ಪ್ರಾಥಮಿಕ ಶಾಲೆಯಿದ್ದು ಸ್ಥಳೀಯ ಮಕ್ಕಳು ಸೇರಿದಂತೆ ನಾಲ್ಕಾರು ದೂರದ ಗ್ರಾಮಗಳ ಮಕ್ಕಳು ಇಲ್ಲಿಗೆ ವಿದ್ಯಾರ್ಜನೆಗಾಗಿ ಬರುವುದು ಶಾಲೆ ಮಕ್ಕಳನ್ನು ಹಾಗೂ ಪೋಷಕರನ್ನು ಆಕರ್ಷಿಸುತ್ತಿರುವುದಕ್ಕೊಂದು ಉದಾಹರಣೆ.
25-hesakuttooru shale-(3)-1
೧೯೫೭ ರಲ್ಲಿ ಆರಂಭಗೊಂಡ ಹೆಸಕುತ್ತೂರು ಶಾಲೆಯಲ್ಲಿ ಕಲಿತವರು ಸಮಾಜದ ಹಲವು ಉನ್ನತ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ೧ನೇ ತರಗತಿಯಿಂದ ೭ ನೇ ತರಗತಿಯವರೆಗೂ ಇಲ್ಲಿ ಪ್ರಸಕ್ತ ವರ್ಷದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ೧೩೧. ಕಳೆದ ೧೦ ವರ್ಷಗಳಿಂದ ಶಾಲೆಗೆ ಬರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಕಡಿಮೆಯಾಗಿಲ್ಲ ಎನ್ನುವುದು ಶಾಲೆಯ ಈ ಸರಕಾರಿ ಶಾಲೆಯ ಬಗ್ಗೆ ಜನರಿಟ್ಟಿರುವ ವಿಶ್ವಾಸವನ್ನು ತೋರಿಸುತ್ತದೆ. ಅಲ್ಲದೇ ಈ ಶಾಲೆ ಗುಣಾತ್ಮಕ ಶಿಕ್ಷಣ ನೀಡುವುದರೊಂದಿಗೆ ಪ್ರತಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಅವಕಾಶ ನೀಡಿ ವಿಶಿಷ್ಟ ಹಾಗೂ ಸಮರ್ಥ ರೀತಿಯಲ್ಲಿ ಮಕ್ಕಳನ್ನು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಮುಂಚೂಣಿಯತ್ತ ಕೊಂಡೊಯ್ದಿದೆ. ೫ ರಿಂದ ೭ ನೇ ತರಗತಿಯ ಮಕ್ಕಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪ್ರತ್ಯೇಕ ಅವಧಿಯಲ್ಲಿ ಇಂಗ್ಲೀಷ್, ವಿಜ್ಞಾನ ಹಾಗೂ ಗಣಿತ ಪಾಠಗಳು ನಡೆಯುತ್ತದೆ. ಇದರಿಂದ ಮಕ್ಕಳು ತರಗತಿಯಿಂದ ತರಗತಿಗೆ ಒಂದೊಂದು ಅವಧಿಗೆ ತೆರಳುವುದರಿಂದ ಲವಲವಿಕೆ ಹಾಗೂ ಪಾಠ ಪ್ರವಚನದ ಮೇಲೆ ಏಕಾಗ್ರತೆ ಜಾಸ್ಥಿ ಇರುತ್ತದೆ ಮತ್ತು ಈ ವಿಭಿನ್ನ ಕ್ರಮದಿಂದ ಮಕ್ಕಳಿಗೆ ತುಂಬಾ ಉಪಯೋಗವಾಗಿದ್ದು ಇದು ಉಡುಪಿ ಜಿಲ್ಲೆಯಲ್ಲಿಯೇ ಪ್ರಥಮವಾಗಿದೆ .
25-hesakuttooru shale-(3)-3
ಶಾಲೆಯಲ್ಲಿ ಮುಖ್ಯಶಿಕ್ಷಕ ಶೇಖರ ಕುಮಾರ್, ಸಹಶಿಕ್ಷಕರಾಗಿ ೧೫ ವರ್ಷದಿಂದ ಇದೇ ಶಾಲೆಯಲ್ಲಿ ಸೇವೆ ಸಲ್ಲಿಸಿದ ಜಯರಾಂ ಶೆಟ್ಟಿ, ೧೪ ವರ್ಷ ಸೇವೆ ಸಲ್ಲಿಸಿದ ಜಯಲಕ್ಷ್ಮೀ ಬಿ., ಅಶೋಕ ತೆಕ್ಕಟ್ಟೆ, ವಿಜಯ ಶೆಟ್ಟಿ ಮತ್ತು ವಿಜಯಾ ಈ ಶಾಲೆಯಲ್ಲಿ ಮಕ್ಕಳಿಗೆ ವಿದ್ಯೆ ಕಲಿಸುವ ಕಾರ್ಯದಲ್ಲಿ ತೊಡಗಿದ್ದು ಮಕ್ಕಳೊಂದಿಗೆ ಸ್ನೆಹಿತರಂತೆ ಬೆರೆತು ಅವರ ಭಾವನೆಗಳಿಗೆ ಸ್ಪಂಧಿಸುತ್ತಿದ್ದಾರೆ. ಶಾಲೆಯ ಅಭಿವ್ರದ್ಧಿ ಸಮೀತಿಯ ಅಧ್ಯಕ್ಷರಾಗಿ ನಾಗಶ್ರೀ ಕೆದ್ಲಾಯ ಹಾಗೂ ಉಪಾಧ್ಯಕ್ಷರಾಗಿ ಮಂಜುನಾಥ ಮೊಗವೀರ ಮತ್ತು ಸದಸ್ಯರುಗಳು ಶಾಲೆಯ ಅಭಿವ್ರದ್ಧಿ ಕಾರ್ಯದ ಬಗ್ಗೆ ಅಹರ್ನಿಶಿ ದುಡಿಯುತ್ತಿದ್ದಾರೆ.
ಪುಟಾಣಿಗಳಿಲ್ಲಿ ಪತ್ರಕರ್ತರು: ಹೆಸಕುತ್ತೂರು ಶಾಲೆ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಎಂಬಂತೆ ಶಾಲೆಯಿಂದ ಮನೆಗೊಂದು ಪತ್ರಿಕೆ `ನಮ್ಮ ಇಂಚರ'ವನ್ನು ಹೊರತಂದಿದ್ದು ಈ ಪತ್ರಿಕೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ಪತ್ರಕರ್ತರಾಗಿ ಬರೆಯುತ್ತಾರೆ. ಅವರೊಂದಿಗೆ ಶಿಕ್ಷಕರು ಹಾಗೂ ಪೋಷಕರ ಚಾವಡಿ ಅಂಕಣದಲ್ಲಿ ಪೋಷಕರು ತಮ್ಮ ಅಭಿಪ್ರಾಯ ಇತ್ಯಾದಿಗಳನ್ನು ಬರೆಯುತ್ತಾರೆ. ಸಹ ಶಿಕ್ಷಕ ಅಶೋಕ ತೆಕ್ಕಟ್ಟೆ ಈ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡಿದುವುದಲ್ಲದೇ ಮಕ್ಕಳು ಬರೆದ ಲೇಖನಗಳನ್ನು ಕೈಬರಹದೊಂದಿಗೆ ಜೆರಾಕ್ಸ್ ಪ್ರತಿ ಮಾಡಿ ಸುಮಾರು ೧೦೦೦ ದಷ್ಟು ಪತ್ರಿಕೆಯನ್ನು ಹೊರತರಲು ಸಹಕರಿಸುತ್ತಿದ್ದಾರೆ. ಪ್ರತಿ ತಿಂಗಳು ಶಾಲೆಯ ಹಳೆ ವಿದ್ಯಾರ್ಥಿಗಳು ಅಥವಾ ಶಾಲೆಯ ಅಭಿಮಾನಿಗಳು ಪತ್ರಿಕೆಗೆ ತಗುಲುವ ವೆಚ್ಚವನ್ನು ಬರಿಸುತ್ತಾರೆ. ಇನ್ನು ೨೦೧೧ರ ಆಗಸ್ಟ್‌ನಲ್ಲಿ ಮಕ್ಕಳೇ ಸಂಪಾದಕರಾಗಿ ತರಗತಿವಾರು ಪತ್ರಿಕೆಯನ್ನು ಆರಂಭಿಸಿದ್ದು ಈಗಲೂ ನಲಿಕಲಿ-ಚಿಲಿಪಿಲಿ, ಚಿತ್ತಾರ, ಚಿಣ್ಣರಲೋಕ, ಬಾಲರಪ್ರಪಂಚ, ಮಳೆ ಹನಿ, ನಮ್ಮಶಾಲೆ ಹೆಸರಿನಲ್ಲಿ ಪ್ರತಿ ತಿಂಗಳು ಮುದ್ರಣಗೊಳ್ಳುತ್ತಿದೆ.
ಶಾಲೆಯ ವಿಶೇಷತೆಗಳು: ವಿದ್ಯಾರ್ಥಿಗಳ ಸಂಖ್ಯೆಯಾದಾರದದಿಯಲ್ಲಿ ದೈಹಿಕ ಶಿಕ್ಷಕರ ಕೊರತೆ ಇದ್ದರೂ ಕೂಡ ಮಕ್ಕಳಿಗೆ ಕ್ರೀಡಾ ಕಲಿಕೆಗೆ ಯಾವ ಸಮಸ್ಯೆಯೂ ಆಗಿಲ್ಲ, ವಿಷಯವಾರು ತರಗತಿಗಳನ್ನು ನಡೆಸುವುದರ ಮೂಲಕ ಮಕ್ಕಳ ಏಕಾಗ್ರತೆ ಹೆಚ್ಚಿಸುವ ಕೆಲಸ, ಪ್ರತಿ ತರಗತಿಗೊಂದು ತೆರೆದ ಗ್ರಂಥಾಲಯ, ಕಲಿಕಾ ಉಪಕರಣಗಳು ಮಕ್ಕಳ ಕೈಗೆ ಸುಲಭವಾಗಿ ಸಿಗಲು `ಕಲಿಕಾ ಮನೆ' ಹೆಸರಿನಲ್ಲಿ ಉಪಕರನಗಳನ್ನಿಡುವ ವ್ಯವಸ್ಥೆ, `ಕಲಿಕಾ ಚಪ್ಪರ'ದ ಹೆಸರಿನಲ್ಲಿ ಮಕ್ಕಳು ಬರೆದ ಪಠ್ಯ ವಿಷಯಗಳು ಹಾಗೂ ಕಥೆ-ಕವನಗಳನ್ನಿಡಲು ವ್ಯವಸ್ಥೆ, ಪ್ರತಿ ತರಗತಿಗೊಂದು ಡಿಸಿಪ್ಲೈ ಬೋರ್ಡ್, ಹಾಗೂ ಶಾಲೆಗೊಂದು ಸೌಕರ್ಯಯುತ ವಾಚನಾಲಯ, ಇನ್ನು ಇಂಗ್ಲೀಷ್ ತರಗತಿ ನಡೆಯುವ ಕೊಠಡಿಗೆ ಬಂದರೆ ಸಂಪೂರ್ಣ ಇಂಗ್ಲೀಷ್.. ವಿಜ್ಞಾನ ತರಗತಿಗೆ ಬಂದರೆ ಸರ್ವಂ ವಿಜ್ಞಾನಮಯಂ. ಹಾಗೆಯೇ ಗಂಡು-ಹೆಣ್ಣು ಪ್ರತ್ಯೇಕ ಸುಸಜ್ಜಿತವಾದ ಆಧುನಿಕ ಶೈಲಿಯ ಶೌಚಾಲಯ ವ್ಯವಸ್ಥೆ ಇದೆ.
ದಾನಿಗಳ ಸಹಕಾರ: `ನಮ್ಮ ಶಾಲೆಗೆ ನನ್ನ ಕೊಡುಗೆ ಏನು' ಎಂಬ ಪರಿಕಲ್ಪನೆಯಡಿಯಲ್ಲಿ ದಾನಿಗಳನ್ನು ಆಕರ್ಷಿಸಿ ಶಾಲೆಗೆ ಬೇಕಾಗಿರುವ ಅಗತ್ಯ ಕೊಡುಗೆಗಳ ಬಗ್ಗೆ ತಿಳಿಹೇಳುವುದರ ಮೂಲಕ ಶಾಲೆಗೆ ಬೇಕಾಗಿರುವ ಹತ್ತು ಹಲವು ಸೌಕರ್ಯಗಳನ್ನು ಪಡೆಯಲಾಗಿದೆ. ಸರಕಾರಿ ಶಾಲೆಗೆ ಸರಕಾರದಿಂದ ಅನುದಾನ ಹಾಗೂ ಕೊಡುಗೆಗಳೂ ಸಿಕ್ಕಿವೆಯಾದರೂ ಹೆಸಕುತ್ತೂರು ಶಾಲೆಯ ಅಭಿವ್ರದ್ಧಿಗೆ ದಾನಿಗಳ ಸಹಕಾರವೂ ಅಪಾರವಾಗಿ ಸಿಕ್ಕಿದೆ. ಧ್ವನಿವರ್ಧಕ, ವಾಚನಾಲಯ ಪೀಠೋಪಕರಣ, ಶೌಚಾಲಯ, ಪ್ರತಿವರ್ಷ ಎಲ್ಲಾ ಮಕ್ಕಳಿಗೂ ಕೊಡೆ, ಸಮವಸ್ತ್ರ, ಶಾಲಾ ಪ್ರವೇಶದ್ವಾರ, ಎಜ್ಯುಸ್ಯಾಟ್ ,ಕಂಪ್ಯೂಟರ್ ಹೀಗೆ ಹತ್ತು ಹಲವು ಕೊಡುಗೆಗಳನ್ನು ಶಾಲೆಗೆ ನೀಡುವ ಮುಲಕ ಸರಕಾರಿ ಶಾಲೆಯನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ದಾನಿಗಳು ಮುಂಚೂಣಿಯಲ್ಲಿದ್ದಾರೆ.
ಶಾಲೆಗೆ ಆಗಬೇಕಾಗಿರುವುದು: ಸುಮಾರು ೧ ಎಕ್ರೆ ೩೫ ಸೆಂಟ್ಸ್ ವಿಸ್ತೀರ್ಣದಲ್ಲಿ ಈ ಶಾಲೆಯಿದ್ದು ಒಂದು ಬದಿಯ ಕಾಪೌಂಡ್ ಗೋಡೆಯ ಕೆಲಸ ಬಾಕಿ ಇದೆ, ಇದು ನಿರ್ಮಾಣವಾದಲ್ಲಿ ಶಾಲೆಗೆ ಇನ್ನಷ್ಟು ಮೆರಗು ಬರುವುದಲ್ಲದೇ ಭದ್ರತೆಯೂ ಜಾಸ್ಥಿಯಾಗಲಿದೆ. ಶಾಲೆಯಲ್ಲಿ ವಿಶಾಲವಾದ ಕ್ರೀಡಾಂಗಣವಿದೆ. ಆದರೆ ಇದನ್ನು ಸಮತಟ್ಟುಗೊಳಿಸಬೆಕಾದ ಅನಿವಾರ್ಯತೆ ಇದ್ದು ಈ ಕೆಲಸವಾದಲ್ಲಿ ಮಕ್ಕಳ ಕ್ರೀಡಾ ಚಟುವಟಿಗೆ ಇನ್ನಷ್ಟು ಪಕ್ವತೆ ಸಿಗುತ್ತದೆ. ತರಗತಿ ಕೋಣೆಯೊಂದರಲ್ಲಿಯೇ ಶಾಲೆಯ ಎಲ್ಲಾ ಕಾರ್ಯಕ್ರಮಗಳನ್ನು ಮಾಡಬೆಕಾಗಿದ್ದು ಹೆಸಕುತ್ತೂರು ಶಾಲೆಗೊಂದು ಉತ್ತಮ ಒಳಸಭಾಂಗಣದ ವ್ಯವಸ್ಥೆ ಬೇಕಾಗಿದೆ. ಈ ಬಗ್ಗೆ ಜಿಲ್ಲಾ ಪಂಚಾಯತ್‌ಗೆ ಮನವಿಯನ್ನೂ ಸಲ್ಲಿಸಲಾಗಿದೆ.
ಸಾಧಕ ವಿದ್ಯಾರ್ಥಿಗಳು: ಕಳೆದ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಅಶ್ವಿನಿ ಕೆದ್ಲಾಯ ಕಥೆ ಹೇಳುವ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ, ಪ್ರವೀಣ ಎಸ್. ಕ್ಲೇ ಮಾಡಲಿಂಗ್‌ನಲ್ಲಿ ರಾಜ್ಯ ಮಟ್ಟದಲ್ಲಿ ಭಾಗವಹಿಸಿದ್ದಾನೆ, ನಯನಾ ಬಿ. ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದು ಹೆಸಕುತ್ತೂರು ಶಾಲೆಯ ಮಕ್ಕಳು ಕೇವಲ ಪಠ್ಯಚಟುವಟಿಕೆಯಲ್ಲೂ ಮಾತ್ರವಲ್ಲದೇ ಪಠ್ಯೇತರ ಹಾಗೂ ಕ್ರೀಡಾ ಚಟುವಟಿಕೆಯಲ್ಲೂ ಯಾರಿಗೇನೂ ಕಮ್ಮಿ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಜರ್ಮನ್ ಯುವಕನಿಗೆ ಕನ್ನಡ ಕಲಿಸಿದರು: ಕಳೆದ ವರ್ಷ ಸಾಮಾಜಿಕ ಸೇವಾ ಸಂಸ್ಥೆಯೊಂದರಿಂದ ಒಂದು ವರ್ಷಗಳ ಕಾಲ ಇಂಗ್ಲೀಷ್ ಶಿಕ್ಷಕ ವೃತ್ತಿ ನಿಬಾಯಿಸಲು ಹೆಸಕುತ್ತೂರು ಶಾಲೆಗೆ ಬಂದ ಜರ್ಮನ್ ಯುವಕ ಯನೆಕ್ ಕರಿಮ್ ಆದಮ್ಸ್ (೧೯.) ಇಲ್ಲಿನ ಮಕ್ಕಳೊಂದಿಗೆ ಬೆರೆತು ಕನ್ನಡ ಮಾತನಾಡಲು ಹಾಗೂ ಬರೆಯಲು ಸ್ಫುಟವಾಗಿ ಕಲಿತು ತಿಂಗಳಿನ ಹಿಂದಷ್ಟೇ ತನ್ನ ದೇಶಕ್ಕೆ ವಾಪಾಸ್ಸಾಗಿದ್ದಾನೆ.ಗುಣಾತ್ಮಕ ಶಿಕ್ಷಣವನ್ನು ನೀಡುವುದರ ಮೂಲಕ ಪ್ರತಿ ಮಗುವೂ ತನ್ನದೇ ಆದ ವಿಶಿಷ್ಟ ಹಾಗೂ ಸಮರ್ಥ ವ್ಯಕ್ತಿತ್ವವನ್ನು ಬೆಳಸಿಕೊಳ್ಳಲು ಬೇಕಾದ ಪೂರಕ ವಾತಾವರಣವನ್ನು ಶಾಲೆಯಲ್ಲಿ ಕಲ್ಪಿಸಿದ್ದೇವೆ.  ಯಾವುದೇ ಖಾಸಗಿ ಶಾಲೆಯನ್ನು ಸೆಡ್ದು ಹೊಡೆದು ನಿಲ್ಲಲು ಬೇಕಾಗಿರುವ ಸಕಲ ಸೌಲಭ್ಯಗಳನ್ನು ಮಕ್ಕಳಿಗೆ ನಾವಿಲ್ಲಿ ನೀಡುತ್ತಿದ್ದೇವೆ. (ಹೆಸ್ಕುತ್ತೂರು ಶಾಲೆಯ ಮುಖ್ಯ ಶಿಕ್ಷಕ ಹೆಸಕುತ್ತೂರು ಶಾಲೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ ವಿಭಿನ್ನ ಕ್ರಮಗಳ ಮೂಲಕ ಮಕ್ಕಳ ಜ್ನಾನ ವಿಕಸನಕ್ಕೆ ಒತ್ತು ನೀಡುತ್ತಿದೆ. ಈ ಶಾಲೆಯಲ್ಲಿ ಇನ್ನಷ್ಟು ಅಭಿವ್ರದ್ಧಿ ಕಾರ್ಯಗಳು ಆಗಬೇಕಾಗಿದ್ದು ಈ ಬಗ್ಗೆ ಸಂಭಂದಪಟ್ಟ ಇಲಾಖೆಯ ಗಮನಕ್ಕೆ ತರಲಾಗಿದೆ.

ಅತ್ಯಾಚಾರದ ವಿರುದ್ಧ ಬಿಜೆಪಿ ಅಪಪ್ರಚಾರ : ಪ್ರಮೋದ್ ಕಿಡಿಕಿಡಿ

ಉಡುಪಿ:ಮಣಿಪಾಲ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಬಿಜೆಪಿ ಮತ್ತು ಸಂಘಪರಿವಾರಗಳು ತಮ್ಮ ರಾಜಕೀಯ ದುರುದ್ದೇಶಕ್ಕೆ ಬಳಸಿಕೊಂಡು ನಿರಂತರ ಅಪಪ್ರಚಾರವನ್ನು ನಡೆಸಿದೆ ಅಂತಾ ಶಾಸಕ ಪ್ರಮೋದ್ ಮಧ್ವರಾಜ್ ಗುಡುಗಿದ್ದಾರೆ. ಉಡುಪಿ ಜಿಲ್ಲೆಗೆ ಕಪ್ಪು ಚುಕ್ಕೆಯನ್ನು ಉಂಟುಮಾಡಿದ ಪ್ರಕರಣವನ್ನು ದುರ್ಲಾಭ ಪಡೆಯಲು ಪಯತ್ನ ಮಾಡಬೇಡಿ ಅಂತಾ ಬಿಜೆಪಿ ಮತ್ತು ಸಂಘಪರಿವಾರಕ್ಕೆ ಪ್ರಮೋದ್ ಕಿವಿಮಾತು ಹೇಳಿದ್ದಾರೆ.
[youtuber youtube='http://www.youtube.com/watch?v=e5vvXs1B24U']
ಅತ್ಯಾಚಾರ ಪ್ರಕರಣವನ್ನು ಶೀಘ್ರ ಬೇಧಿಸುವಲ್ಲಿ ಪ್ರಯತ್ನಿಸಿದ ಪೋಲಿಸ್ ಇಲಾಖೆಗೆ ಅಭಿನಂದನೆ ಸಲ್ಲಿಸಿದ ಪ್ರಮೋದ್ ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕಲು ಸಪೋರ್ಟ್ ಮಾಡಿದ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಿಗೆ ಶಹಬ್ಬಾಸ್ ಹೇಳಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ  ಜಿಲ್ಲಾ ಪಂಚಾಯತ್ ಸದಸ್ಯ ದಿವಾಕರ ಕುಂದರ್, ಕಾಂಗ್ರೆಸ್ ಮುಖಂಡರಾದ ದಿನೇಶ್ ಅಮೀನ್, ಸುಕೇಶ್ ಕುಂದರ್, ನರಸಿಂಹ ಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.
28_udupi_pramod_police_abinandane 005

ಅತ್ಯಾಚಾರ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಲು ಹುನ್ನಾರ: ಶ್ರೀರಾಮ್ ರೆಡ್ಡಿ.

ಉಡುಪಿ:ಮಣಿಪಾಲ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಮಣಿಪಾಲ ವಿಶ್ವವಿದ್ಯಾನಿಲಯ ಮತ್ತು ಪೋಲಿಸ್ ಇಲಾಖೆ ವ್ಯವಸ್ಥಿತವಾಗಿ ಮುಚ್ಚಿ ಹಾಕಲು ಹುನ್ನಾರ ನಡೆಸಿದೆ ಅಂತಾ ಸಿಪಿ‌ಐ‌ಎಂ ರಾಜ್ಯ ಕಾರ್ಯದರ್ಶಿ ಶ್ರೀರಾಮ್ ರೆಡ್ಡಿ ಆರೋಪಿಸಿದ್ದಾರೆ.
28_udupi_cpim_pressmeet 005
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ಅತ್ಯಾಚಾರಕ್ಕೊಳಗಾದ ಯುವತಿ ಮತ್ತು ಕುಟುಂಬಿಕರು ಆಸ್ಪತ್ರೆಗೆ ಭೇಟಿ ನೀಡಲು ನಿರಾಕರಿಸುತ್ತಿದ್ದಾರೆ ಅಂತಾ ಮಣಿಪಾಲ ಆಡಳಿತ ಮಂಡಳಿ ಮತ್ತು ಪೋಲಿಸರು ಹೇಳುತ್ತಿದ್ದಾರೆ.
[youtuber youtube='http://www.youtube.com/watch?v=tHU-EzRvtxc']
ಕೇರಳ ಮತ್ತು ಕರ್ನಾಟಕ ಸರ್ಕಾರ ಹಾಗೂ ಪೋಲಿಸ್ ಇಲಾಖೆ ಪ್ರಕರಣದ ದಿಕ್ಕು ತಪ್ಪಿಸುವಲ್ಲಿ  ಮಣಿಪಾಲ ಆಡಳಿತ ಮಂಡಳಿ ಸಹಕಾರ ನೀಡುತ್ತಿದೆ ಅಂತಾ ಶ್ರೀರಾಮ್ ರೆಡ್ಡಿ ಆರೋಪಿಸಿದ್ದಾರೆ.
28_udupi_cpim_pressmeet 009

ಶುಕ್ರವಾರ, ಜೂನ್ 28, 2013

ಮಣಿಪಾಲ ರೇಪ್ ಆರೋಪಿ ಹರಿಪ್ರಸಾದ್ ೫ ದಿನ ಪೋಲಿಸ್ ಕಸ್ಟಡಿಗೆ:ಆರೋಪಿ ಯೋಗೀಶ್ ಗಂಭೀರ

ಉಡುಪಿ: ಮಣಿಪಾಲ ವಿದ್ಯಾರ್ಥಿನಿ ಮೇಲೆ ಆತ್ಯಾಚಾರ ನಡೆಸಿದ ಆರೋಪಿ ಹರಿಪ್ರಸಾದ್ ನನ್ನು ಪೋಲಿಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.  ಮಣಿಪಾಲ ಮೆಡಿಕಲ್ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣದ ಎರಡನೇ ಆರೋಪಿ ಹರಿಪ್ರಸಾದ್‌ನನ್ನು ಪರ್ಕಳದಲ್ಲಿ ನಿನ್ನೆ ಬಂಧಿಸಲಾಗಿತ್ತು. ಬೆಳಗ್ಗೆ ಆರೋಪಿಯನ್ನು ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಲಾಗಿತ್ತು.
Udp_rape Court_28_06_13_Avb(3)_WMV V9 001
ಆಸ್ಪತ್ರೆಯಿಂದ ಆರೋಪಿಯನ್ನು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ಚಂದ್ರಶೇಖರ್ ಮುಂದೆ ಆರೋಪಿಯನ್ನು ಹಾಜರುಪಡಿಸಲಾಗಿದೆ. ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಯೋಗೇಶ್ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರೆ, ಆನಂದ್ ನಿನ್ನೆ ಸಂಜೆ ವೇಳೆ ನೇಣು ಬಿಗಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಇಬ್ಬರು ಆರೋಪಿಗಳು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಯೋಗೇಶ್ ಗಂಭೀರ ಸ್ಥಿತಿಯಲ್ಲಿದ್ದು, ಆನಂದ್  ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
Udp_rape Court_28_06_13_Avb(3)_WMV V9 001  28_RAPE_ACCUSED 003

ವಿದ್ಯುತ್ ಸೋರಿಕೆಯಿಂದ ಸಜೆ ನಿವಾಸಿಗಳಿಗೆ ಯುಪಿಸಿ‌ಎಲ್ ಸಜೆ..! ಸ್ಥಳಕ್ಕೆ ಬೇಟಿ ನೀಡಿದ ಅಧಿಕಾರಿಗಳಿಂದ ಪರಿಶೀಲನೆ,ಭರವಸೆ

ವರದಿ-ಸುರೇಶ್ ಎರ್ಮಾಳ್
ಜನವಿರೋಧಿ ಕಂಪನಿ ಯುಪಿಸಿ‌ಎಲ್‌ನಿಂದ ಹಾಸನದ ಶಾಂತಿ ಗ್ರಾಮಕ್ಕೆ ವಿದ್ಯುತ್ ಸರಬರಾಜು ಆಗುತ್ತಿದ್ದ ಮುಖ್ಯ ತಂತಿಯಿಂದ ವಿದ್ಯುತ್ ಸೋರಿಕೆಗೊಂಡು ಮಳೆಯ ಸಂದರ್ಭ ಅದರ ಹತ್ತಿರ ಸುಳಿಯುತ್ತಿದ್ದಂತ್ತೆ ವಿದ್ಯುತ್ ಶಾಕ್ ಸಂಭವಿಸಿ ಆತಂಕದ ಸ್ಥಿತಿ ನಿರ್ಮಾಣಗೊಂಡ ಪ್ರದೇಶಕ್ಕೆ ಮಂಗಳೂರಿನ ಸೂಪರಿಂಟೆಂಡೆಂಟ್ ಎಂಜೀನಿಯರ್ ಗೋವಿಂದ ರಾವ್ ಅವರ ಡಬ್ಲ್ಯು ಆಂಡ್ ಎಂಬ ತಂಡವು ಭೇಟಿನೀಡಿ ಪರಿಶೀಲನೆ ನಡೆಸಿ ಪ್ರಾಮಾದವನ್ನು ಒಪ್ಪಿ ಕೊಂಡಿದೆ.
[youtuber youtube='http://www.youtube.com/watch?v=yWcbQzeVgzg']
ಈ ದಾರಿಯಿಂದ ಸಾಗುವ ಶಾಲಾ ಮಕ್ಕಳು ಸಹಿತ ದೃಢಕಾಯ ಯುವಕರಿಗೂ ವಿದ್ಯುತ್ ಶಾಕ್ ತಗುಲಿದ್ದು ನಾವು ಪ್ರಾಣ ಭೀತಿ ಎದುರಿಸುವಂತ್ತಾಗಿದೆ ಎಂಬುದಾಗಿ ಸ್ಥಳೀಯ ನಿವಾಸಿಗಳು ಅಧಿಕಾರಿಗಳಲ್ಲಿ ತಿಳಿಸಿದಾಗ. ಆತಂಕ ಪಡುವ ಪ್ರಮೇಯವಿಲ್ಲ ಇಂದು ಇಂಡೆಕ್ಷನ್ ವಿದ್ಯುತ್ ಆಗಿದ್ದು ಸಿಡಿಲ ಬಡಿತಕ್ಕಿಂತ ಕಡಿಮೆ ವಿದ್ಯುತ್ ಸೋರಿಕೆ ಯಾಗುವುದರಿಂದ ಅಪಾಯವಿಲ್ಲ ಎಂದರು. ಈ ವಿದ್ಯುತ್ ತಂತಿಯ ದಾರಿಯನ್ನು ಬದಲಾಯಿಸುವಂತ್ತೆ ಅಧಿಕಾರಿಗಳಿ ಸ್ಥಳೀಯರು ಒತ್ತಡ ಹೇರಿದಕ್ಕೆ ಉತ್ತರಿಸಿದ ಅವರು ೪೦೦ ಕೆವಿ‌ಎ ಲೈನ್‌ನ ಹಾದಿ ಬದಲಾವಣೆ ಅಸಾಧ್ಯ, ಆದರೆ ಸ್ಥಳೀಯರಿಗೆ ಅಪಾಯವಾಗದ ರೀತಿಯಲ್ಲಿ ಈ ಮುಖ್ಯ ತಂತಿಯ ಕೆಳಭಾಗಕ್ಕೆ ತಂತಿ ಬಲೆಯನ್ನು ನಿರ್ಮಿಸಿ ಭೂಮಿಗೆ ಬಲವಾದ "ಅರ್ತ್" ಅಳವಡಿಸುವುದರಿಂದ ಸೋರಿಗೆ ಇಳಿಮುಖವಾಗಿ ಸಮಸ್ಯೆ ಪರಿಹಾರ ಕಾಣಲಿದೆ ಎಂಬುದಾಗಿ ತಿಳಿಸಿದ್ದಾರೆ.

ರಸ್ತೆಯನ್ನೂ ನುಂಗಿ ಹಾಕಿದೆ ಯುಪಿಸಿ‌ಎಲ್..
ಈ ಸಜೆ ಪ್ರದೇಶದಲ್ಲಿ ಸುಮಾರು ೧೫ ನಿವಾಸಗಳಿದ್ದು, ಈ ಪ್ರದೇಶಕ್ಕೆ ಎಲ್ಲೂರು ಗ್ರಾ.ಪಂ.ಗೆ ಸೇರಿದ ರಸ್ತೆಯೊಂದಿತ್ತು. ಆದರೆ ಈ ಜನವಿರೋಧಿ ಕಾಮಗಾರಿಯ ಸಂದರ್ಭ ಇದ್ದ ರಸ್ತೆಯನ್ನು ನುಂಗಿ ಹಾಕಿತ್ತು ಈ ಬಸ್ಮಸುರ ಕಂಪನಿ. ರಸ್ತೆಯನ್ನು ನುಗ್ಗುವ ಮುನ್ನ ಸ್ಥಳಕ್ಕೆ ಬಂದಿದ್ದ ಯುಪಿಸಿ‌ಎಲ್ ಅಧಿಕಾರಿ ಸುದರ್ಶನ್ ಪ್ರಸಾದ್ ಎಂಬಾತ ಪರ್ಯಾಯ ರಸ್ತೆ ನಿರ್ಮಿಸಿ ಕೊಡುವ ಭರವಸೆ ನೀಡಿದ್ದರು ಆದರೆ ಇದೀಗ ನಾವು ರಸ್ತೆಗಾಗಿ ಸ್ಥಳವನ್ನು ಕಾನೂನು ರೀತ್ಯಾ ಬಿಟ್ಟು ಕೊಟ್ಟಿದ್ದರೂ ಕಂಪನಿ ನಮ್ಮಲ್ಲಿ ಹಣವಿಲ್ಲ ಎಂಬುದಾಗಿ ಜಾರಿಕೊಳ್ಳುತ್ತಿದ್ದು, ಇತ್ತ ಗ್ರಾ.ಪಂ. ರಸ್ತೆಯೂ ಇಲ್ಲ ಇತ್ತ ಕೃಷಿ ಭೂಮಿಯ ಮಧ್ಯೆಭಾಗದಲ್ಲಿ ಇದ್ದ ಕಾಲು ದಾರಿಯೂ ವಿದ್ಯುತ್ ಶಾಕ್‌ನಿಂದಾಗಿ ಮಳೆಯ ಸಂದರ್ಭ ಬಳಸದಂತ್ತಾಗಿದೆ, ಮಳೆ ಬಂದಾಗ ನಮ್ಮ ಮನೆಯ ಶಾಲಾ ಮಕ್ಕಳನ್ನು ನಾವು ಶಾಲೆಗೆ ಕಳುಹಿಸದೆ ರಜೆ ಹಾಕಿ ಕುಳ್ಳಿರಿಸುವ ಸ್ಥಿತಿ ಬಂದೋದಗಿದೆ. ಈ ನಿಟ್ಟಿನಲ್ಲಿ ಕಂಪನಿಯಿಂದ ರಸ್ತೆ ನಿರ್ಮಿಸಿಕೊಡುವಂತ್ತೆ ಜಿಲ್ಲಾಢಳಿತಕ್ಕೆ ಮನವಿ ಸಲ್ಲಿಸಲಾಗಿದೆ ಎಂಬುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಕೃಷಿ ಮಾಡಿ ಜೀವನ ನಡೆಸುತ್ತಿದ್ದ ನಮಗೀಗ ಕೃಷಿ ಚಟುವಟಿಯೂ ನಡೆಸದಂತ್ತಾಗಿದೆ. ಕಾರಣ ಈ ಪ್ರದೇಶದಲ್ಲಿ ಬೃಹತ್ ನೀರು ಹರಿದು ಹೋಗುವ ತೋಡಿನಲ್ಲಿ ಯುಪಿಸಿ‌ಎಲ್ ಹೂಳು ತುಂಬಿದ್ದು ಅದನ್ನು ಕಂಪನಿ ತೆರವುಗೊಳಿಸದ ಕಾರಣ ಮಳೆನೀರು  ರಭಸವಾಗಿ ಕೃಷಿಭೂಮಿಗೆ ನುಗ್ಗಿ ಮಾಡಿದ ಕೃಷಿಯೂ ಕೊಚ್ಚಿ ಹೋಗುತ್ತಿದೆ, ತಂತಿಯ ಅಡಿಭಾಗದಲ್ಲಿ ತೆಂಗಿನ ಸಸಿಯನ್ನೂ ನೆಡದಂತ್ತೆ ಕಂಪನಿ ಸೂಚಿಸಿದ್ದರಿಂದ ಅದನ್ನು ನಾವು ಕೈ ಬಿಟ್ಟಿದ್ದು ಒಟ್ಟಾರೆಯಾಗಿ ಕೃಷಿಕರಾದ ನಮ್ಮನ್ನು ಈ ಜನವಿರೋಧಿ ಕಂಪನಿ ಬದಕಲು ಬಿಡುತ್ತಿಲ್ಲ ಎಂಬುದಾಗಿ ತಮ್ಮ ನೋವನ್ನು ಮಾದ್ಯದೊಂದಿಗೆ ತೋಡಿಕೊಂಡಿದ್ದಾರೆ.ಅಧಿಕಾರಿಗಳಾದ ಗೋಪಾಲ್ ಸಾಲ್ಯಾನ್, ಜಿ.ಎಸ್. ಮಟ್ಟು, ರಮೇಶ್ ಕುಮಾರ್, ಬಿ.ಎಸ್. ಹೆಬ್ಬಾಳ್, ಗೋವಿಂದರಾವ್, ಕಾಮತ್  ತಂಡದಲ್ಲಿದ್ದರು.28PADU

ಅತ್ಯಾಚಾರಗೈದ ಮೂರನೆ ಆರೋಪಿ ಆನಂದ್ ಆತ್ಮಹತ್ಯೆಗೆ ಯತ್ನ- ಆಸ್ಪತ್ರೆಗೆ ದಾಖಲು

ಉಡುಪಿ:ಮಣಿಪಾಲ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣದ ಮೂರನೆ ಆರೋಪಿ ಆನಂದ  ಆತ್ಮಹತ್ಯೆಗೆ ಯತ್ನಿಸಿ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾನೆ. ಇಂದು ಮುಂಜಾನೆಯೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ ಮೂರನೆ ಆರೋಪಿ ಆನಂದ ತಪ್ಪಿಸಿಕೊಂಡಿದ್ದನು.
ಆದರೆ ಸಂಜೆಯ ವೇಳೆಗೆ ಪೋಲಿಸರು ಆರೋಪಿಯ ಇರುವಿಕೆಯನ್ನು ಪತ್ತೆ ಹಚ್ಚಿದ್ದು ಪೋಲಿಸರು ಆತನನ್ನು ಬಂಧಿಸುವ ವೇಳೆಗೆ ಆನಂದ ಮನೆಯ ಹಿಂದಿನ ಹಾಡಿಗೆ ಓಡಿದ್ದ. ಕಾಡಿಗೆ ಓಡಿದ್ದ ಈತ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು ಈ ಸಂಧರ್ಭದಲ್ಲಿ ಪೋಲಿಸರು ಮಧ್ಯಪ್ರವೇಶಿಸಿ ಈತನನ್ನು ಪಾರು ಮಾಡಿದ್ದು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.  ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ ಮಣಿಪಾಲ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಈತನ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.
anand

ಮಣಿಪಾಲ್ ಅತ್ಯಾಚಾರ :ಇಬ್ಬರು ಆರೋಪಿಗಳು ಅರೆಸ್ಟ್:ಯೋಗೀಶ ಆತ್ಮಹತ್ಯೆಗೆ ಯತ್ನ:ಆತ್ಮಹತ್ಯೆಗೆ ಮುಂದೆ ಐಜಿಪಿಗೆ ಫೋನ್ ಕರೆ

ಪಶ್ಚಿಮ ವಲಯದ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ. ಮಣಿಪಾಲ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣದ ಇಬ್ಬರು ಆರೋಪಿಗಳು ಅರೆಸ್ಟ್ ಆಗಿದ್ದಾರೆ. ಕಳೆದ ಒಂದು ವಾರದಿಂದ ಪೊಲೀಸರ ನಿದ್ದೆಗೆಡಿಸಿಕೊಂಡಿದ್ದ ಕೇಸ್‌ನ ಆರೋಪಿಗಳು ಟ್ರೇಸ್ ಆಗಿದ್ದಾರೆ. ಈ ಪೈಕಿ ಒಬ್ಬ ಆರೋಪಿ ವಿಷ ಸೇವಿಸಿ ಆತ್ಮಹತ್ಯೆಮಾಡಲು ಯತ್ನಿಸಿದ್ದು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
rapist_3_WMV V9 002
ಮಣಿಪಾಲ ಮೆಡಿಕಲ್ ಕಾಲೇಜು ಅತ್ಯಾಚಾರ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಒಂದು ವಾರದಿಂದ ಊಟ ನಿದ್ದೆ ಬಿಟ್ಟು ಹುಡುಕಾಟ ನಡೆಸಿದ್ದ ಖಾಕೀಧಾರಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಮಣಿಪಾಲ ಆಸುಪಾಸಿನ ಯೋಗೀಶ ಅಲಿಯಾಸ್ ಆಮ್ಲೆಟ್ ಯೋಗೀಶ, ಹರೀಶ ಮತ್ತು ಆನಂದ ಅಂತ ಗುರುತಿಸಲಾಗಿದೆ. ಅತ್ಯಾಚಾರ ನಡೆಸಿ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯ್ತು ಅಂತ ಗೊತ್ತಾದ ಮೂವರೂ ದಿಕ್ಕಾಪಾಲಾಗಿದ್ದರು. ಈ ಪೈಕಿ ಯೋಗೀಶ ಊರೂರು ಸುತ್ತಿ ಮುಂಜಾನೆ ಮನೆಗೆ ಬಂದಿದ್ದು ಇನ್ನು ನನಗೆ ಉಳಿಗಾಲವಿಲ್ಲ ಅಂತ ಅಂದುಕೊಂಡಿದ್ದಾನೆ. ಕಾನೂನು ಮತ್ತು ಪೊಲಸರಿಗೆ ಅಂಜಿ ಮನೆಯ ಹಿಂಭಾಗದ ಕಾಡಿನಲ್ಲಿ ವಿಷ ಸೇವಿನಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದನ್ನೆಲ್ಲ ಸ್ವತಃ ಐಜಿಪಿ ಪ್ರತಾಪ್ ರೆಡ್ಡಿಗೆ ಫೋನ್ ಮೂಲಕ ವಿವರಿಸಿದ್ದಾನೆ. ಸೂಕ್ತ ಸಂದರ್ಭದಲ್ಲಿ ಆರೋಪಿಯನ್ನು ಪೊಲೀಸರು ಆಸ್ಪತ್ರೆಗೆ ಸೇರಿಸಿದ್ದಾರೆ.[youtuber youtube='http://www.youtube.com/watch?v=RyRrugPKaE4&feature=c4-overview&list=UUs0k8vSBwTqzHjMqn8PYrzQ']
ಜೂನ್ ೨೦ಕ್ಕೆ ಮಣಿಪಾಲ ವಿವಿ ಕ್ಯಾಂಪಸ್‌ನಿಂದ ಮೆಡಿಕಲ್ ವಿದ್ಯಾರ್ಥಿನಿಯನ್ನು ಹರಿಪ್ರಸಾದ್‌ನ ಆಟೋರಿಕ್ಷಾ ಮೂಲಕ ಅಪಹರಿಸಲಾಗಿತ್ತು. ಮಣಿಪಾಲದಿಂದ ೭ ಕಿಲೋಮೀಟರ್ ದೂರದ ಓಂತಿಬೆಟ್ಟು ವ್ಯಾಪ್ತಿಯ ನಿರ್ಜನ ಪ್ರದೇಶಕ್ಕೆ ಕೊಂಡೊಯ್ಯಲಾಗಿತ್ತು. ಅಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆದಿದೆ. ನಂತರ ಆಕೆಯನ್ನು ಮತ್ತೆ ಅದೇ ಆಟೋದಲ್ಲಿ ಕ್ಯಾಂಪಸ್‌ಗೆ ವಾಪಾಸ್‌ಗೆ ಯೋಗೀಶನೇ ಬಿಟ್ಟಿದ್ದಾನೆ. ಪ್ರಕರಣ ಯಾವಾಗ ರಾಷ್ಟ್ರಮಟ್ಟಕ್ಕೆ ಹೋಯ್ತೋ ಮೂರೂ ಮಂದಿ ತಲೆಮರೆಸಿಕೊಂಡಿದ್ದಾರೆ. ಸ್ಥಳೀಯ ಸುಖೇಶ್ ಕುಂದರ್ ಹೆರ್ಗ ನೀಡಿದ ಪಕ್ಕಾ ಮಾಹಿತಿ ಆರೋಪಿಗಳ ಪತ್ತೆಗೆ ಸಹಾಯವಾಯ್ತು  .ಆರೋಪಿ ಯೋಗೀಶ್ ಹೆಸರು ೨೦೦೫ರಲ್ಲಿ ರೌಡಿ ಶೀಟರ್ ಪಟ್ಟಿಗೆ ಸೇರಿತ್ತು. ಈ ಪ್ರಕರಣದ ಮತ್ತೊಬ್ಬ ಆರೋಪಿ ಹರಿಪ್ರಸಾದ್ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಮತ್ತೊಬ್ಬ ಆರೋಪಿ ಆನಂದ ಗೋವಾದಲ್ಲಿ ತಲೆಮರೆಸಿಕೊಂಡಿದ್ದಾನೆ. ಈ ಮೂಲಕ ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ದೊಡ್ಡ ತಲೆನೋವಾಗಿದ್ದ ಪ್ರಕರಣ ಟ್ರೇಸ್ ಆಗಿದೆ.

ಗುರುವಾರ, ಜೂನ್ 27, 2013

ಮಣಿಪಾಲ ಅತ್ಯಾಚಾರ : ಇಬ್ಬರು ರೇಪಿಸ್ಟ್ ಬಂಧನ, ಒಬ್ಬ ಪರಾರಿ

ಮಣಿಪಾಲ: ಮಣಿಪಾಲ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ. ಹಿರಿಯಡ್ಕದ ಓಂತಿಬೆಟ್ಟು ನಿವಾಸಿ ರೌಡಿ ಲೀಸ್ಟರ್ ಯೋಗೀಶ್ ಪೂಜಾರಿ ಯಾನೆ ಆಮ್ಲೆಟ್ ಯೋಗೀಶ್(೨೮ ವ) , ಪರ್ಕಳದ ಹೆರ್ಗ ಗ್ರಾಮದ ಗೋಳಿಕಟ್ಟೆ ನಿವಾಸಿ ಹರೀಶ್ ಬಂಧಿತರು. ಪರ್ಕಳದ ನಿವಾಸಿ ಆನಂದ್ ಎಂಬಾತ ಗೋವಾದಲ್ಲಿ ತಲೆಮರೆಸಿಕೊಂಡಿದ್ದಾನೆ ಪೋಲಿಸ್ ಮೂಲಗಳು ತಿಳಿಸಿವೆ. ಯೋಗೀಶ್ ಈ ಹಿಂದೆ ಜೂಜು, ಹೊಡೆದಾಟ ಪ್ರಕರಣದಲ್ಲಿ ಬಾಗಿಯಾಗಿದ್ದು ಮಣಿಪಾಲ ಪೋಲಿಸ್ ಸ್ಟೇಶನ್ ರೌಡಿ ಲೀಸ್ಟ್‌ಗೆ ಸೇರ್ಪಡೆಗೊಂಡಿದ್ದ. ಮೂವರು ಕಾಮುಕರು ಕೂಡಾ ಆಟೋ ಡ್ರೈವರ್ ಆಗಿದ್ದು ಜೂನ್. ೨೦ ರಾತ್ರಿ ಮಣಿಪಾಲ ಮೆಡಿಕಲ್ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದರು.
ಮಾಹಿತಿ ನೀಡಿದ ಕಾಂಗ್ರೆಸ್ ಕಾರ್ಯಕರ್ತ ಸುಕೇಶ್:ಕಾಂಗ್ರೆಸ್ ಕಾರ್ಯಕರ್ತ ಹೆರ್ಗ ನಿವಾಸಿ ಸುಕೇಶ್ ಎಂಬವರು ಆರೋಪಿ ಯೋಗೀಶ್ ಬಗ್ಗೆ ಮಾಹಿತಿ ನೀಡಿದ್ದು ಸುಳಿವು ದೊರೆತ ಪೋಲಿಸರು ಯೋಗೀಶ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ವೇಳೆಯಲ್ಲಿ ಆರೋಪಿ ಯೋಗೀಶ್ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ವಿಷ ಸೇವಿಸಿ ದ ತ ಕ್ಷಣವೇ ಆರೋಪಿ ಯೋಗೀಶ್‌ನನ್ನು ಪೋಲಿಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೂರನೇ ಆರೋಪಿ ಆನಂದ್ ಎಂಬಾತ ಗೋವಾಕ್ಕೆ ಪರಾರಿಯಾಗಿದ್ದು ಈತನ ಬಂಧನಕ್ಕೆ ಪೋಲಿಸರು ಬಲೆ ಬೀಸಿದ್ದಾರೆ.
rapist yogish

ಗೂಡ್ಸ್ ರಿಕ್ಷಾಗೆ ಖಾಸಗಿ ಬಸ್ ಡಿಕ್ಕಿ- ಓರ್ವ ಗಂಭೀರ

ಕುಂದಾಪುರ: ಖಾಸಗಿ ಬಸ್‌ವೊಂದು ಗೂಡ್ಸ್ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗೂಡ್ಸ್ ರಿಕ್ಷಾದಲ್ಲಿ ತೆರಳುತ್ತಿದ್ದ ರಿಕ್ಷಾ ಮಾಲಕ ಗಂಭೀರ ಗಾಯಗೊಂಡ ಘಟನೆ ಕುಂದಾಪುರ ಹಂಗಳೂರಿನಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.ಅಪಘಾತದ ಪರಿಣಾಮ ಮಿನಿ ಟೆಂಪೋ ಪಲ್ಟಿಯಾಗಿದ್ದು ವಂಡ್ಸೆ ನೂಜಾಡಿ ನಿವಾಸಿ ಆನಂದ್ (೪೨.) ಗಂಭೀರ ಗಾಯಗೊಂಡಿದ್ದಾರೆ.
Picture 002
ಘಟನೆ ವಿವರ: ಕೋಟೇಶ್ವರದ ಶೋ ರೂಂನಿಂದ ತಪಾಸಣೆಗೆಂದು ತರಲಾಗುತ್ತಿದ್ದ ಗೂಡ್ಸ್ ರಿಕ್ಷಾ ಹಂಗಳೂರು ಡಿವೈಡರ್‌ನಲ್ಲಿ ಬಲ ಬದಿಗೆ ತಿರುಗಿಸುವಾಗ ಮಂಗಳೂರಿನಿಂದ ಕುಂದಾಪುರದೆಡೆ ಸಾಗುತ್ತಿದ್ದ ಖಾಸಗಿ ಬಸ್ ಹಿಂಬದಿಯಿಂದ ಡಿಕ್ಕಿಹೊಡೆದಿದ್ದು ಗೂಡ್ಸ್ ರಿಕ್ಷಾ ಪಲ್ಟಿಯಾಗಿ ಬಿದ್ದಿದೆ. ರಿಕ್ಷಾವನ್ನು ಶೋರೂಂನ ಚಾಲಕನೋರ್ವ ಚಲಾಯಿಸುತ್ತಿದ್ದು ಮಾಲಕ ಆನಂದ ಮುಂಬದಿಯಲ್ಲಿ ಕುಳಿತಿದ್ದರು. ಹಿಂಬದಿಯಿಂದ ಬಸ್ ಡಿಕ್ಕಿಯಾದ ಪರಿಣಾಮ ಗೂಡ್ಸ್ ರಿಕ್ಷಾ ಆನಂದ ಅವರ ಮೈಮೇಲೆ ಪಲ್ಟಿಯಾಗಿ ಬಿದ್ದಿದೆ. ಕೂಡಲೇ ಸಾರ್ವಜನಿಕರ ಸಹಾಯದಿಂದ ರಿಕ್ಷಾ ಮೆಲಕ್ಕೆತ್ತಿ ಅವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
Picture 056
ಅಪಘಾತದ ಪರಿಣಾಮ ಬಸ್ ಮುಂಭಾಗ ಹಾಗೂ ರಿಕ್ಷಾದ ಒಂದು ಪಾರ್ಶ್ವ ಭಾಗ ಸಂಪೂರ್ಣ ಜಖಂಗೊಂಡಿದೆ. ಅಪಘಾತ ನಡೆದಾಗ ಹಂಗಳೂರು ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿ ವಾಹನ ಸಂಚಾರ ಅಸ್ಥವ್ಯಸ್ಥಗೊಂಡಿದ್ದು ಕುಂದಾಪುರ ಸಂಚಾರಿ ಪೊಲೀಸರು ಸ್ಥಳಕ್ಕಾಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
Picture 011
ಡಿವೈಡರ್ ಸಮಸ್ಯೆ: ಈ ಹಿಂದೆ ಕೋಟೇಶ್ವರ ಹಾಗೂ ಕುಂದಾಪುರ ವಿನಾಯಕದ ನಡುವೆಯಿದ್ದ ಮೂರು ಡಿವೈಡರ್ ಪೈಕಿ ಎರಡು ಡಿವೈಡರ್ ಮುಚ್ಚಿ ಹಂಗಳೂರು ಡಿವೈಡರ್ ಮಾತ್ರ ತೆರವಿಡಲಾಗಿತ್ತು. ಇದರಿಂದ ವಾಹನ ಸವಾರರು ಬೇಕಾಬಿಟ್ಟಿ ಸಂಚರಿಸುತ್ತಿದ್ದು ಈ ಡಿವೈಡರನ್ನು ಮುಚ್ಚಬೇಕೆಂದು ಸಾರ್ವಜನಿಕರು ಹಲವು ಬಾರಿ ಮನವಿ ಮಾಡಿದ್ದರು. ಮೂರು ಡಿವೈಡರ್‌ನ್ನು ತೆರವುಗೊಳಿಸಿದಲ್ಲಿ ವಾಹನ ದಟ್ಟಣೆ ಇರುವುದಿಲ್ಲ ಎನ್ನುವುದು  ಸವಾರರ ಅಭಿಪ್ರಾಯ. ಈ ಸ್ಥಳದಲ್ಲಿ ಆಗುತ್ತಿದ್ದ ಅಪಘಾತ ಹಾಗೂ ಡಿವೈಡರ್ ಸಮಸ್ಯೆ ಕುರಿತು `ಹೊಸದಿಗಂತ' ಮೇ.೩೦ ರಂದು `ಹಂಗಳೂರು ಹೆದ್ದಾರಿ- ಭಾಳಾ ತೊಂದ್ರೆ ರೀ' ಶೀರ್ಷಿಕೆಯಡಿಯಲ್ಲಿ ಸಚಿತ್ರ ವರದಿ ಪ್ರಕಟಿಸಿತ್ತು.
ಇನ್ನಾದರೂ ಸಂಬಂದಪಟ್ಟವರು ಇತ್ತ ಗಮನಹರಿಸಿ ವಾಹನ ಸವಾರರ ಸುಗಮ ಸಂಚಾರಕ್ಕೆ ದಾರಿಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಗಂಗೊಳ್ಳಿಯ ಯು. ಸಂಧ್ಯಾ ಶೆಣೈಗೆ ಪಿ‌ಎಚ್‌ಡಿ ಪುರಸ್ಕಾರ

ಕುಂದಾಪುರ: ಎನ್‌ಐಟಿಕೆ  ಸುರತ್ಕಲ್‌ನಲ್ಲಿ ಎಂಎಸ್‌ಸಿ ವಿದ್ಯಾಭ್ಯಾಸ ಪೂರೈಸಿ ಸಿಂಥೆಸಿಸ್ ಎಂಡ್ ಕ್ಯಾರೆಕ್ಟರೈಸೇಷನ್ ಆಫ್ ಕಾಪರ್ ಎಂಡ್ ಕ್ಯೂಪ್ರಸ್ ಆಕ್ಸೈಡ್ ನಾನೋ ಫ್ಲುಯಿಡ್ಸ್(ಕೆಮೆಸ್ಟ್ರ್ರಿ ವಿಭಾಗ) ವಿಷಯದ ಮೇಲೆ ಸಂಶೋಧನೆ ನಡೆಸುತ್ತಿದ್ದ ಯು. ಸಂಧ್ಯಾ ಶೆಣೈಗೆ ಪಿ‌ಎಚ್‌ಡಿ ಪುರಸ್ಕಾರ ದೊರೆತಿದೆ.
ಬೆಂಗಳೂರಿನಲ್ಲಿ ನೆಲೆಸಿರುವ ಇ‌ಎಸ್‌ಐ ಇಲಾಖೆಯ ನಿವೃತ್ತ ಹಿರಿಯ ಅಧಿಕಾರಿ ಯು. ವಸಂತ ಕುಮಾರ್ ಶೆಣೈ ಗಂಗೊಳ್ಳಿಯವರ ಪುತ್ರಿಯಾದ ಡಾ| ಸಂಧ್ಯಾ ಶೆಣೈಯವರು ಎಂಎಸ್‌ಸಿ (ಕೆಮೆಸ್ಟ್ರಿ)ಯಲ್ಲಿ ಅದೇ ಶಿಕ್ಷಣ ಸಂಸ್ಥೆಯಲ್ಲಿ ಪ್ರಪಥಮವಾಗಿ ೧೦ಕ್ಕೆ ೧೦ ಗ್ರೇಡ್ ಪಾಂಟ್  ಪಡೆಯುವ ಮೂಲಕ ರ್‍ಯಾಂಕ್ ಗಳಿಸಿ ರಾಜ್ಯಪಾಲರಿಂದ ಚಿನ್ನದ ಪದಕ ಪಡೆದಿದ್ದರು. ಬಿ.ಎಸ್ಸಿಯಲ್ಲಿಯೂ ಈಕೆ ಚಿನ್ನದ ಪದಕ ಪಡೆದ ಪ್ರತಿಭಾವಂತೆ.
1

ಕೋಕ್ ಲಾರಿ ಪಲ್ಟಿ: ಮೂವರು ಪವಾಡ ಸದೃಶ ಪಾರು

ಕುಂದಾಪುರ : ಕೋಕ್ ತುಂಬಿದ ಲಾರಿಯೊಂದು ಸಂಗಂ ಸೇತುವೆ ಬಳಿಯ ಹೇರಿಕುದ್ರು ಪ್ರದೇಶದ ಹೆದ್ದಾರಿಯ ಪಕ್ಕದ ಹೊಂಡಕ್ಕೆ ಪಲ್ಟಿಯಾಗಿ ಬಿದ್ದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಬೃಹತ್ ಹೊಂಡವನ್ನು ತಪ್ಪಿಸಲು ಹೋಗಿ ಚಾಲಕ ಲಾರಿ ನಿಯಂತ್ರಣ ಕಳೆದುಕೊಂಡ ಪರಿಣಾಮ ಲಾರಿ ಪಲ್ಟಿಯಾಗಿದೆ ಎನ್ನಲಾಗಿದೆ.ಲಾರಿ ಚಾಲಕ ಇಬ್ರಾಹಿಂ ಸೇರಿದಂತೆ ಮೂವರು ಲಾರಿಯಲ್ಲಿದ್ದಿದ್ದೂ ಪವಾಡ ಸದೃಶ ಪಾರಾಗಿದ್ದಾರೆ.
26- lari palti_(7)-2

ಮಣಿಪಾಲ ಅತ್ಯಾಚಾರ ಖಂಡಿಸಿ ಭಜರಂಗಿ ಪ್ರತಿಭಟನೆ

ಮಣಿಪಾಲ ವಿವಿ ಯ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರಕ್ಕೆ  ಅತ್ಯಾಚಾರವನ್ನು ಖಂಡಿಸಿ ಪ್ರತಿಭಟನಾ ಸರಣಿ ಮುಂದುವರಿದಿದ್ದು ಮಣಿಪಾಲ ಟೈಗರ್ ಸರ್ಕಲ್‌ನಲ್ಲಿ  ಪ್ರತಿಭಟನಾ ಮೆರವಣಿಗೆ ನಡೆಸಿದ ಸಂಘ ಪರಿವಾರ ಮತ್ತು ಭಜರಂಗಿ ಕಾರ್ಯಕರ್ತರು ಮುಂದಿನ ಒಂದು ದಿನದೊಳಗೆ ರೇಪಿಸ್ಟ್‌ಗಳನ್ನು ಬಂಧಿಸದಿದ್ದಲ್ಲಿ ಉಡುಪಿ ಜಿಲ್ಲೆಯನ್ನು ಬಂದ್ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.ಮಣಿಪಾಲ ಸಿಂಡಿಕೇಟ್ ಸರ್ಕಲ್‌ನಿಂದ ಟೈಗರ್ ಸರ್ಕಲ್‌ನವರೆಗೆ ಪ್ರತಿಭಟನಾ ಮರವಣಿಗೆ ನಡೆಸಿದ ಕಾರ್ಯಕರ್ತರು ಟೈಗರ್ ಸರ್ಕಲ್ ಬಳಿ ಪ್ರತಿಭಟನಾ ಸಭೆ ನಡೆಸಿದರು. ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸಿದರು
2_WMV V9 001

ಮಣಿಪಾಲ ಅತ್ಯಾಚಾರ : ಇಬ್ಬರು ಆರೋಪಿಗಳ ಬಂಧನ ಒಬ್ಬನ ಪರಾರಿ ?

ಉಡುಪಿ:ಮಣಿಪಾಲ ಮೆಡಿಕಲ್ ವಿದ್ಯಾರ್ಥಿನಿ ಆತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಯೋಗೀಶ್ ಮತ್ತು ಹರೀಶ್  ಉಡುಪಿ ಮೂಲದವರಾಗಿದ್ದಾರೆ.  ಓರ್ವ ಆರೋಪಿ ಆನಂದ್ ತಪ್ಪಿಸಿಕೊಂಡಿದ್ದು ಗೋವಾಕ್ಕೆ ಪರಾರಿಯಾಗಿರಬಹುದೆಂದು ತಿಳಿದು ಬಂದಿದೆ.  ಯೋಗೀಶ್ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಮೂವರು ಆರೋಪಿಗಳು ರಿಕ್ಷಾ ಡ್ರೆವರ್ ಆಗಿದ್ದಾರೆ. ಅತ್ಯಾಚಾರವನ್ನು ದ್ರಶ್ಯವನ್ನು ಯೋಗೀಶ್ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾನೆ ಎಂಬುವುದು ಮೂಲಗಳಿಂದ ತಿಳಿದುಬಂದಿದೆ.  ಯೋಗಿಶ್ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಖಾಸಗಿ ಆಸ್ಪತ್ರಗೆ ದಾಖಲಿಸಲಾಗಿದೆ.

ವೈದ್ಯಕೀಯ ವರದಿಯಿಂದ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ: ಐಜಿಪಿ ಪ್ರತಾಪ್ ರೆಡ್ಡಿ.

ಉಡುಪಿ:ಮಣಿಪಾಲ ವಿವಿ ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರದ ವೈದ್ಯಕೀಯ ವರದಿಗಳು ಪೋಲಿಸರ ಕೈ ಸೇರಿದ್ದು ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ ಎಂದು ಐಜಿಪಿ ಪ್ರತಾಪ್ ರೆಡ್ಡಿ ಹೇಳಿದ್ದಾರೆ. ಎಸ್‌ಪಿ ಕಚೇರಿಯಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ  ಐಜಿಪಿ ಪ್ರತಾಪ್ ರೆಡ್ಡಿ ವೈದ್ಯಕೀಯ ವರದಿ ಆಧಾರ ಮೇಲೆ ತನಿಖೆಗೆ ಮುಂದಾಗಿರುವ ಪೋಲಿಸರು ಕಳೆದ ೨೪ ಗಂಟೆ ಅವಧಿಯಲ್ಲಿ ೨೨ ಮಂದಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಸಿಸಿಟಿವಿ ದ್ರಶ್ಯಾವಳಿಯ ಗುಣಮಟ್ಟವನ್ನು ಉತ್ತಮಗೊಳಿಸಿ ತನಿಖೆ ನಡೆಸುವುದಾಗಿ ಅವರು ತಿಳಿಸಿದ್ದಾರೆ.
26_3lack_prize_WMV V9

ಮಣಿಪಾಲ ರೇಪಿಸ್ಟ್ ಮಾಹಿತಿ ನೀಡಿದವರಿಗೆ ೫ ಲಕ್ಷ ರೂಪಾಯಿ ಬಹುಮಾನ

ಉಡುಪಿ:ಮಣಿಪಾಲ ವಿವಿ ಯ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರಕ್ಕೆ ಸಂಬಂಧಪಟ್ಟಂತೆ ಆರೋಪಿಗಳ ಬಗ್ಗೆ ಮಾಹಿತಿ ನೀಡಿದವರಿಗೆ ಮಣಿಪಾಲ ಯುನಿವರ್ಸಿಟಿ ಮೂರು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದೆ. ಉಡುಪಿ ಎಸ್ಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ ಪೋಲಿಸ್ ಇಲಾಖೆ ವತಿಯಿಂದ ಈಗಾಗಲೇ ಎರಡು ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದು ಆರೋಪಿಗಳ ಖಚಿತ ಮಾಹಿತಿ ನೀಡಿದವರಿಗೆ ಒಟ್ಟಾರೆಯಾಗಿ ೫ ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದರು.

ಕೋಟ: ಮೂರು ಕಾಲಿನ ಕಡಲಾಮೆ ಪತ್ತೆ

ಕುಂದಾಪುರ: ಇಲ್ಲಿನ ಕೋಟತಟ್ಟು ಪಡುಕೆರೆ ಎಂಬಲ್ಲಿ ಮೂರು ಕಾಲಿನ ಅಂಗವೈಕಲ್ಯವುಳ್ಳ ಕಡಲಾಮೆಯೊಂದು ಬುಧವಾರ ಬೆಳಿಗ್ಗೆ ಪತ್ತೆಯಾಗಿದೆ. ಇಲ್ಲಿನ ಮೀನುಗಾರರಾದ ರತ್ನಾಕರ ಶ್ರೀಯಾನ್ ಬೆಳಿಗ್ಗೆ ಸಮುದ್ರ ತೀರಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ಆಮೆಯನ್ನು ನೋಡಿದ್ದು ತಲೆಭಾಗದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಈ ಕಡಲಾಮೆ ಈಜಾಡಲಾಗದೆ ಒದ್ದಾಡುತ್ತಿದ್ದು ಸ್ನೇಹಿತರಾದ ಕ್ರಷ್ಣ ಪೂಜಾರಿಯವರನ್ನು ಕರೆದು ಆಮೆಗೆ ಶುಷ್ರೂಶೆ ಮಾಡಿ ಪುನಃ ಕಡಲಿಗೆ ಬಿಟ್ಟಿದ್ದಾರೆ.
photo (1)

ಬುಧವಾರ, ಜೂನ್ 26, 2013

ಮಾರಣಕಟ್ಟೆ: ವ್ಯಕ್ತಿ ನೀರುಪಾಲು-ಮೃತದೇಹಕ್ಕಾಗಿ ಶೋಧ

ಕುಂದಾಪುರ: ಮನೆಗೆ ಹೋಗುತ್ತಿದ್ದಾಗ ನದಿ ದಾಟುವ ಸಂದರ್ಭ ತುಂಬಿದ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಚಿತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರಣಕಟ್ಟೆ ದೇವಸ್ಥಾನದ ಸಮೀಪ ನಡೆದಿದೆ. ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿಯನ್ನು ಮಾರಣಕಟ್ಟೆಯ ರಮೇಶ ಪೂಜಾರಿ(೩೮) ಎಂದು ಗುರುತಿಸಲಾಗಿದೆ.
25-maranakatte-(7)-1
ರಮೇಶ್ ಪೂಜಾರಿ ಸೋಮವಾರ ಮಧ್ಯಾಹ್ನ ೧.೩೦ ರ ಸುಮಾರಿಗೆ ಮಾರಣಕಟ್ಟೆ ಸೇತುವೆ ಸಮೀಪದ ಹೊಳೆಯನ್ನು ದಾಟಿ ದೇವಸ್ಥಾನದ ಕಡೆಗೆ ಹೋಗಲೆಂದು ಹೊರಟಿದ್ದರು. ನೀರಿನ ಆಳದ ಅರಿವಿಲ್ಲದ ರಮೇಶ್ ಪೂಜಾರಿ, ಹೊಳೆ ಮಧ್ಯಕ್ಕೆ ಬರುತ್ತಿದ್ದಂತೆ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸ್ಥಳೀಯರಿಂದ ಶೋಧ : ಸುದ್ಧಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸ್ಥಳೀಯ ಈಜುಗಾರರು ಹೊಳೆಯಲ್ಲಿ ನಾಪತ್ತೆಯಾಗಿರುವ ರಮೇಶ ದೇಹಕ್ಕಾಗಿ ಶೋಧ ನಡೆಸಿದರು. ಆದರೆ ಯಾವುದೆ ಪ್ರಯೋಜನವಾಗಲಿಲ್ಲ. ಮಂಗಳವಾರ ಹೆಚ್ಚಿನ ಶೋಧಕ್ಕಾಗಿ ಕುಂದಾಪುರದ ಅಗ್ನಿಶಾಮಕದಳದ ಠಾಣಾಧಿಕಾರಿ ಭರತ್ ನೇತೃತ್ವದ ತಂಡ ಸ್ಥಳಕ್ಕಾಗಮಿಸಿ ಶೋಧ ನಡೆಸಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ.
ಹುಡುಕಾಟದಲ್ಲಿ ಸ್ಥಳೀಯ ಮುಳುಗುಗಾರರಾದ ಶೇಖರ ನೈಕಂಬ್ಳಿ, ನಾಗರಾಜ ಪೂಜಾರಿ, ಮಂಜುನಾಥ ಪೂಜಾರಿ. ಸಹೋದರ ಬೆಳಿಯ ಪೂಜಾರಿ ಸಹಕರಿಸಿದರು.  ಘಟನಾಸ್ಥಳಕ್ಕೆ ಗ್ರಾ.ಪಂ.ಅಧ್ಯಕ್ಷ ಸುರೇಂದ್ರ ಶೆಟ್ಟಿ, ಡಾ. ಅತುಲ್ ಕುಮಾರ್ ಶೆಟ್ಟಿ, ವಂಡಬಳ್ಳಿ ಜಯರಾಮ ಶೆಟ್ಟಿ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವಾನ ನೀಡಿದರು. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾನು ನನ್ನ ಸಂಗ್ರಹ ಪುಸ್ತಕ ಬಿಡುಗಡೆ ವೆಂಕಟೇಶ ಪೈಯವರದ್ದು ಅಪೂರ್ವ ವ್ಯಕ್ತಿತ್ವ : ಡಾ|ಎಚ್. ರಾಮಮೋಹನ್

ಕುಂದಾಪುರ  :ವೆಂಕಟೇಶ ಪೈ ಓರ್ವ ಅಪೂರ್ವ ವ್ಯಕ್ತಿತ್ವದ  ಸಾಧಕರು. ಸಂಗೀತ, ಚಿತ್ರಕಲೆ, ಅಂಚೆಚೀಟಿ, ನಾಣ್ಯ ಸಂಗ್ರಹ ಮುಂತಾದ ಹವ್ಯಾಸ ಬೆಳೆಸಿಕೊಳ್ಳುವುದರೊಂದಿಗೆ ಹಳೆಯ ಛಾಯಾಚಿತ್ರ ಹಾಗೂ ವಿಷಯಗಳನ್ನೂ ಸಂಗ್ರಹಿಸುವ  ಹವ್ಯಾಸ  ಬೆಳೆಸಿಕೊಂಡ  ವ್ಯಕ್ತಿ.  ಅವರ  ಸಂಗ್ರಹದ  ಕೆಲವು ವಿಷಯಗಳನ್ನು  ಸೇರಿಸಿ ಪುಸ್ತಕ ರೂಪದಲ್ಲಿ  ಪ್ರಕಟಿಸಿರುವುದು ಬಹಳ ಸ್ತುತ್ಯಾರ್ಹ ಕೆಲಸ. ಅವರ ಈ ಕನಸಿನಿಂದ ಕುಂದಾಪುರದ ಕೆಲವು ದಾಖಲೆಗಳ ವಿವರ ಹಲವು ಮನೆಯಲ್ಲಿರುವಂತಾಗಿದೆ ಎಂದು ಕರ್ಣಾಟಕ ಬ್ಯಾಂಕ್ ನಿದೇರ್ಶಕ ಡಾ|ಎಚ್. ರಾಮಮೋಹನ್  ಹೇಳಿದರು.
nanu nanna pustaka
ಕುಂದಾಪುರದ ಜಾಂಬವಲಿ ಸ್ಟೋರ್‍ಸ್ ಪರಿಸರದಲ್ಲಿ  ನಡೆದ  ಪುಸ್ತಕ  ಬಿಡುಗಡೆ  ಸಂದರ್ಭದಲ್ಲಿ  ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.  ಶ್ರೀ ಗಣೇಶ  ನೋವೆಲ್ಟಿ  ಮಾಲಕರಾದ  ಜನಾರ್ಧನ  ಶೆಣೈ, ಪಂಚ್ಕಾದಾಯಿ ಉಪಸಂಪಾದಕ  ಜ್ಞಾನದೇವ ಮಲ್ಯ, ಶ್ರೀ ವಿಠಲ  ದೇವಸ್ಥಾನದ   ಬಾಲಕೃಷ್ಣ ಭಟ್ ಅಭಿನಂದನೆ  ಸಲ್ಲಿಸಿದರು.
ಉದ್ಯಮಿಗಳಾದ ಯು.ದಾಮೋದರ ಶೆಣೈ, ಯು. ಸುರೇಂದ್ರ ಶೆಣೈ, ಕೆ.ರಾಮಚಂದ್ರ ಕಾಮತ್, ಗಣೇಶ ಕಿಣಿ, ಕೆ.ರಮೇಶ್ ಪೈ ಶುಭ ಹಾರೈಸಿದರು.
ಶ್ರೀಮತಿ ವಿಜಯಾ ವೆಂಕಟೇಶ ಪೈ "ನಾನು  ನನ್ನ ಸಂಗ್ರಹ" ಕೃತಿ  ಬಿಡುಗಡೆ ಮಾಡಿ  ಡಾ| ಎಚ್ ರಾಮಮೋಹನ್‌ರಿಗೆ  ಮೊದಲ ಪ್ರತಿ ನೀಡಿದರು. ಶ್ರೀ ವೆಂಕಟೇಶ ಪೈಯವರು  ಪುಸ್ತಕ  ಪ್ರಕಟಣೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಅರ್ಪಿಸಿ ಮುದ್ರಕ ತ್ರಿವಿಕ್ರಮ ಪೈಯವರನ್ನು  ಅಭಿನಂದಿಸಿದರು.  ಯು.ಎಸ್.ಶೆಣೈ  ಕಾರ್ಯಕ್ರಮ ನಿರೂಪಿಸಿದರು. ವಿವೇಕ ಪೈ ವಂದಿಸಿದರು.

ಕಳ್ಳನನ್ನು ನಾಳೆ ಹಿಡಿಯೋಣವೆಂದ ಇನ್ಸ್‌ಪೆಕ್ಟರ್ ಮಲ್ಲಾರು ಗ್ರಾಮಸ್ಥರಿಂದ ಕಾಪು ಠಾಣೆಗೆ ಮುತ್ತಿಗೆ

ವರದಿ-ಸುರೇಶ್ ಎರ್ಮಾಳ್
ಕಾಪುವಿನ ಮಲ್ಲಾರು ಗ್ರಾಮದಲ್ಲಿ ಶಂಕಿತ ಆರೋಪಿ ಇರುವ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೂ ಆತನನ್ನು ನಾಳೆ ಹಿಡಿಯೋಣ ಎಂಬುದಾಗಿ ಕರ್ತವ್ಯಕ್ಕೆ ದ್ರೋಹ ಎಸಗಿದ್ದಾರೆ ಎಂಬುದಾಗಿ ಆರೋಪಿಸಿದ ಮಲ್ಲಾರು ಗ್ರಾಮಸ್ಥರು ಕಾಪು ಠಾಣೆಗೆ ಮುತ್ತಿಗೆ ಹಾಕಿದ ಘಟನೆ ಮಂಗಳವಾರ ಸಂಜೆ ಘಟಿಸಿದೆ.ಘಟನೆ ಬಗ್ಗೆ ಮಾದ್ಯಮಗಳಿಗೆ ಮಾಹಿತಿ ನೀಡಿದ ಮಲ್ಲಾರು ಗ್ರಾಮಸ್ಥರಾದ ಜ್ಹಾಹೀರ್ ಅಹಮ್ಮದ್ ಕಳೆದ ಎರಡುವರೆ ತಿಂಗಳ ಹಿಂದೆ ಮಲ್ಲಾರು ಗ್ರಾಮದ ನಮ್ಮ ಮನೆಯಲ್ಲಿ ಹಾಗೂ ಮಲ್ಲಾರು ಬ್ರಹ್ಮ ಬೈದರ್ಕಳ ಗರೋಡಿಯ ಸಮೀಪದ ನಿವಾಸಿ ಲೀಲಾ ಸಾಲ್ಯಾನ್ ಎಂಬವರ ಮನೆಗೂ ಕಳ್ಳರು ನುಗ್ಗಿ ನಗನಗದು ಕಳವು ಮಾಡಿದ್ದರು.
[youtuber youtube='http://www.youtube.com/watch?v=Rsh2qPu7Nn8']
ಈ ಬಗ್ಗೆ ಅದೇ ಗ್ರಾಮದ ಸುಲೈಮಾನ್ ಎಂಬಾತನ ಬಗ್ಗೆ ಸಂಶಯವೂ ಇತ್ತು. ಕಾರಣ ಆತ ಹಲವಾರು ಕಳವು ಪ್ರಕರಣಗಳಲ್ಲಿ ಬಾಗಿಯಾದ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಅಲ್ಲದೆ ಆ ಕಳವು ಪ್ರಕರಣ ನಡೆಯುವ ಕೆಲವು ದಿನಗಳ ಹಿಂದೆ ನನ್ನಲ್ಲಿ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂಬುದಾಗಿ ಬೆದರಿಸಿದ್ದ. ಕಳವು ಪ್ರಕರಣ ನಡೆದ ಮಾರನೇ ದಿನದಿಂದಲೇ ಆತ ನಾಪತ್ತೆಯಾಗಿದ್ದರಿಂದ ಆತನೇ ಕಳವು  ಪ್ರಕರಣದಲ್ಲಿ ಬಾಗಿಯಾಗಿದ್ದ ಎಂಬುದಕ್ಕೆ ಪುಷ್ಠಿ ನೀಡಿದೆ. ಇದೀಗ ಎರಡುವರೆ ತಿಂಗಳ ಬಳಿಕ ಆತ ಇತರೇ ಅಪರಿಚಿತ ಮೂವರೊಂದಿಗೆ ಆತನ ಮನೆಯಲ್ಲಿ ಪ್ರತ್ಯಕ್ಷವಾಗಿದ್ದು ಈ ಬಗ್ಗೆ ಸ್ಥಳೀಯರಾದ ನಾವು ಕಾಪು ಪೊಲೀಸ್ ಠಾಣೆಗೆ ಸೋಮವಾರ ರಾತ್ರಿ ೮ರ ಸುಮಾರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರೂ ಅವರು ಬರಲು ವಿಳಂಬಿಸಿದ್ದರಿಂದ ಕಾಪು ವೃತ್ತ ನಿರೀಕ್ಷಕರಿಗೆ ಕರೆ ಮಾಡಲಾಯಿತು.
ಆದರೆ ವೃತ್ತ ನಿರೀಕ್ಷಕರಾದ ಶಿವಾನಂದ ವಾಲೀಕರ್ ಬೇಜವ್ದಾರಿಯಿಂದ ವರ್ತಿಸಿ ನೋಡೋಣ ಆತ ಎಲ್ಲಿ ಹೋಗುತ್ತಾನೆ ಎರಡು ದಿನದ ಬಳಿಕ ಹಿಡಿದರಾಯಿತು ಎಂದಿದ್ದು. ಆ ಬಳಿಕ ನಮ್ಮ ಒತ್ತಾಯದ ಮೇರೆಗೆ ರಾತ್ರಿ ೧೧ರ ಸುಮಾರಿಗೆ ಸ್ಥಳಕ್ಕೆ ಪೊಲೀಸರು ಬಂದಾಗ ಆತ ತನ್ನ ಇತರೇ ಮೂವರು ಅಪರಿಚಿತರೊಂದಿಗೆ ಪರಾರಿಯಾಗಿದ್ದಾನೆ. ಆತ ತಪ್ಪಿಸಿಕೊಳ್ಳುವುದಕ್ಕೆ ಪೊಲೀಸರ ನಿರ್ಲಕ್ಷ್ಯತನವೇ ಕಾರಣ ಎಂಬುದಾಗಿ ಅವರು ಆರೋಪಿಸಿದ್ದಾರೆ. ಈ ಸಂದರ್ಭ ಮಲ್ಲಾರು ಗ್ರಾ.ಪಂ. ಮಾಜಿ ಅಧ್ಯಕ್ಷ ಸತೀಶ್ ಶೆಟ್ಟಿ, ಶಾಬು ಸಹೇಬ್, ಮಹಮ್ಮದ್ ಹನೀಪ್, ಎಚ್. ಅಬ್ದುಲ್ಲ, ಇಬ್ರಾಹಿಂ ಮನಹರ್, ಎಂ. ಇಸ್ಮಾಯಿಲ್, ಜಾಕೀರ್ ಅಹಮ್ಮದ್ ಇದ್ದರು.
ಈ ಘಟನೆಯ ಬಗ್ಗೆ ಮಾತನಾಡಿದ ಕಾಪು ವೃತ್ತ ನಿರೀಕ್ಷಕ ಶಿವಾನಂದ ವಾಲೀಕರ್ ಗ್ರಾಮಸ್ಥರು ನಿನ್ನೆ ರಾತ್ರಿ ದೂರವಾಣಿ ಕರೆ ಮಾಡಿದ್ದು ನಿಜ, ಆದರೆ ಪೋನ್ ಮಾಡದ ತಕ್ಷಣ ಹೋಗಿಲ್ಲ ಎಂಬ ಅವರ ಆರೋಪದಲ್ಲಿ ಹುರುಳಿಲ್ಲ. ಕರೆ ಬಂದ ತಕ್ಷಣ ಸಿಬ್ಬಂದಿಗಳನ್ನು ಸೇರಿಸಿ ಕೊಂಡು ಹೋಗುವಾಗ ಕೊಂಚ ವಿಳಂಬವಾಗಿರ ಬಹುದೇ ವಿನಃ ಉದ್ದೇಶ ಪೂರ್ವಕವಾಗಿ ತಪ್ಪು ಆಗಿಲ್ಲ ಎಂದಿದ್ದಾರೆ.26PADU-3

ಪಲಿಮಾರು ಸಮೂದಾಯ ಭವನ ವಿವಾದ.॒. ರದ್ದುಗೊಂಡ ಗ್ರಾಮ ಸಭೆ: ಗ್ರಾಮಸ್ಥರ ಆಕ್ರೋಶ

ವರದಿ-ಸುರೇಶ್ ಎರ್ಮಾಳ್
ವಿವಾದಿತ ಫಲಿಮಾರು ಸಮುದಾಯ ಭವನದಲ್ಲಿ ಕರೆಯಲಾದ ಫಲಿಮಾರು ಗ್ರಾ.ಪಂ. ಸಭೆಯು ದಿಢೀರನೆ ರದ್ದುಗೊಳಿಸಿರುವ ಕ್ರಮವನ್ನು ವಿರೋಧಿಸಿ ಗ್ರಾಮಸ್ಥರು ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.ಈ ವೇಳೆ ಗ್ರಾಮ ಸಭೆಗೆಂದು ಬಂದ ಗ್ರಾಮಸ್ಥರು ಸಭೆ ರದ್ದಾದ ಬಗ್ಗೆ ಗ್ರಾಪಂ ಪಿಡಿ‌ಓ ಅವರನ್ನು ತರಾಟೆಗೆ ತೆಗೆದುಕೊಂಡರು. ಆದರೆ ಪಿಡಿ‌ಓ ವಿಲಾಸಿನಿ ಅವರು, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಹೇಳಿದ್ದರಿಂದ ಸಭೆ ರದ್ದುಗೊಳಿಸಲಾಗಿದೆ ಎಂದು ಹೇಳುತ್ತಿದ್ದಂತ್ತೆ ಆಕ್ರೋಶಿತರಾದ ಗ್ರಾಮಸ್ಥರು ನಿಗದಿ ಪಡಿಸಿದ ದಿನವನ್ನು ಮುಂದೂಡಬೇಕಾದರೆ ಮುಂಚಿತವಾಗಿಯೇ ಗ್ರಾಮಸ್ಥರಿಗೆ ಮಾಹಿತಿ ನೀಡಬೇಕು. ಆದರೆ ಯಾವುದೇ ಮಾಹಿತಿಯನ್ನು ನೀಡದೆ ಏಕಾ‌ಏಕಿ ಗ್ರಾಮಸಭೆ ರದ್ದು ಗೊಳಿಸಿರುವುದು ಸರಿಯಲ್ಲ. ಕೂಡಲೇ ಗ್ರಾಮಸಭೆಯನ್ನು ನಡೆಸಬೇಕು ಎಂದು ಪಟ್ಟು ಹಿಡಿದರು.
26PADU-2
ಫಲಿಮಾರು ಗ್ರಾಮಸಭೆಯನ್ನು ಮಂಗಳವಾರ ೧೦.೩೦ಕ್ಕೆ ಫಲಿಮಾರಿನ ವಿವಾದಿತ ಸಮುದಾಯ ಭವನದಲ್ಲಿ ಕರೆಯಲಾಗಿತ್ತು. ಆದರೆ ಗ್ರಾಮಸ್ಥರು ಗ್ರಾಮಸಭೆಗೆ ಆಗಮಿಸಿದಾಗ ಸಭಾಭವನದ ಎದುರು ಗ್ರಾಮಸಭೆ ರದ್ದುಗೊಳಿಸಲಾಗಿದೆ ಎಂದು ನೋಟೀಸು ಹಾಕಲಾಗಿತ್ತು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಗ್ರಾಪಂ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಗ್ರಾಪಂ ಅಧ್ಯಕ್ಷೆ ಮಾಲತಿ ದಿವಾಕರ್ ಅಲ್ಲಿಯೇ ಕುಸಿದುಬಿದ್ದು, ಪ್ರಜ್ಞೆ ಕಳೆದುಕೊಂಡರು. ಬಳಿಕ  ಸ್ಥಳೀಯ ವೈಧ್ಯರು ಪ್ರಥಮ ಚಿಕಿತ್ಸೆ ನೀಡಿ ಪಡುಬಿದ್ರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಗ್ರಾ.ಪಂ. ವರ್ತನೆಯ ವಿರುದ್ಧ ಗ್ರಾಮಸ್ಥರಾದ ಗಿರೀಶ್ ಫಲಿಮಾರು ಅವರು ಗ್ರಾಪಂ ಕಚೇರಿಯ ಎದುರೇ ಧರಣಿ ಕುಳಿತಾಗ ಅವರೊಂದಿಗೆ ಎಪಿ‌ಎಂಸಿ ಸದಸ್ಯರಾದ ಲಕ್ಷ್ಮಣ್ ಶೆಟ್ಟಿ ಮತ್ತಿತರರು ಬಾಗಿಯಾದರು.
ಇಂದಿನ ಗ್ರಾಮಸಭೆಯನ್ನು ಅದೇ ವಿವಾದಿತ ಸಮುದಾಯ ಭವನದಲ್ಲಿ ನಡೆಸಲಾಗುವುದು ಎಂಬುದಾಗಿ ಮಾಸಿಕ ಸಭೆಯಲ್ಲಿ ತೀರ್ಮಾಣಿಸಲಾಗಿತ್ತು. ಈ ಬಗ್ಗೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿಯವರಿಗೆ ಮುಂಚಿತವಾಗಿ ತಿಳಿಸಿ ಸಮುದಾಯ ಭವನದ ಕೀಳಿ ಕೈಯನ್ನು ಖಾಸಗಿ ಸಮಿತಿಯೊಂದರಿಂದ ತೆಗೆಸಿಕೊಡುವಂತೆ ಮನವಿ ಮಾಡಲಾಗಿತ್ತು. ಆದರೆ ಅವರಿಂದ ಯಾವುದೇ ಉತ್ತರ ಬರದಿರುವುದರಿಂದ ಗ್ರಾ.ಪಂ. ಸದಸ್ಯರು ಯಾರೋಬ್ಬರೂ ಗ್ರಾಮಸಭೆಗೆ ಬಾರದಿರಲು ತೀರ್ಮಾಣಿಸಿದ್ದರು. ಇದನ್ನು ಅರಿತ ಪಿಡಿ‌ಓ ಗ್ರಾಮಸಭೆಯನ್ನು ರದ್ದುಗೊಳಿಸಿದರು ಎಂದು ಗ್ರಾಪಂ ಸದಸ್ಯ ನವೀನ್‌ಚಂದ್ರ ಸುವರ್ಣ ರದ್ದುಗೊಂಡಿರುವುದನ್ನು ಸಮರ್ಥಿಸಿದ್ದಾರೆ. ಕೊನೆಗೂ ಇಂದು ನಡೆಯ ಬೇಕಾಗಿದ್ದ ಗ್ರಾಮ ಸಭೆ ರದ್ದುಗೊಂಡಿದೆ.

ಮಣಿಪಾಲ್ ವಿವಿ ಅತ್ಯಾಚಾರ ಖಂಡಿಸಿ ಎಬಿವಿಪಿಯಿಂದ ಮೊಂಬತ್ತಿ ಹಚ್ಚಿ ಪ್ರತಿಭಟನೆ

ಉಡುಪಿ:ಮಣಿಪಾಲ ವಿವಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸಿ ಪ್ರತಿಭಟನೆಗಳು ಮುಂದುವರೆದಿವೆ. ಎಬಿವಿಪಿ ಕಾರ್ಯಕರ್ತರು ಉಡುಪಿಯ ಕ್ಲಾಕ್ ಟವರ್ ಬಳಿ ಮೇಣದ ಬತ್ತಿ ಹಚ್ಚಿ ಪ್ರತಿಭಟನೆ ನಡೆಸಿದರು. ಅತ್ಯಾಚಾರಿಗಳನ್ನು ಪೋಲೀಸರು ಶೀಘ್ರದಲ್ಲಿಯೇ ಬಂಧಿಸಬೇಕು  ಅಂತ ಆಗ್ರಹಿಸಿದ ಎಬಿವಿಪಿ ಕಾರ್ಯಕರ್ತರು ಕ್ಯಾಂಡಲ್ ಲೈಟ್ ಮಾರ್ಚ್ ನಡೆಸಿದರು.
[youtuber youtube='http://www.youtube.com/watch?v=QN3q7LRT_SA']
ಪೋಲೀಸರು ಆರೋಪಿಗಳನ್ನು ಬಂಧಿಸದೇ ಇದ್ದರೆ ಇಂದು ಶಾಂತಿಯುತವಾಗಿರುವ ಪ್ರತಿಭಟನೆ ಮುಂದಿನ ದಿನಗಳಲ್ಲಿ ಕಿಚ್ಚಾಗಿ ಪರಿಣಮಿಸಲಿದೆ ಅಂತ ಎಬಿವಿಪಿ ಕಾರ್ಕರ್ತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
6/25/2013 7:48 PM  6/25/2013 7:45 PM  6/25/2013 7:48 PM  6/25/2013 7:43 PM  6/25/2013 7:43 PM

ವಿಚಾರಣೆ ನೆಪದಲ್ಲಿ ಆಟೋ ಚಾಲಕರಿಗೆ ಕಿರುಕುಳ ಕೊಡಬೇಡಿ, ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಆಟೋ ಮುಷ್ಕರ

ಉಡುಪಿ:ಮಣಿಪಾಲ ಯುನಿರ್ವಸಿಟಿಯ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸಿ ಪ್ರತಿಭಟನೆಯ ಸರಣಿ ಮುಂದುವರಿದಿದೆ. ಆಟೋ ರಿಕ್ಷಾದಲ್ಲಿ ಬಂದಿದ್ದ ಮೂವರು ಅಪರಚಿತರು ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದ ಮಾಹಿತಿಯನ್ನು ಆಧರಿಸಿ ಪೋಲಿಸರು ಉಡುಪಿ ಹಾಗೂ ಮಣಿಪಾಲದ ಎಲ್ಲಾ ಆಟೋರಿಕ್ಷಾ ಚಾಲಕರು ಮತ್ತು ಮಾಲಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಪ್ರತಿಭಟನೆ ನಡೆಸಿದ ಮಣಿಪಾಲ ಆಟೋರಿಕ್ಷಾ ಚಾಲಕರು ಟೈಗರ್ ಸರ್ಕಲ್‌ನಿಂದ ಮಣಿಪಾಲ ಪೋಲಿಸ್ ಸ್ಟೇಶನ್‌ವರೆಗೆ ಪ್ರತಿಭಟನೆ ನಡೆಸಿದರು. ಅತ್ಯಾಚಾರ ಆರೋಪಿಗಳನ್ನು ಪೋಲಿಸ್ ಇಲಾಖೆ ಶೀಘ್ರವೇ ಬಂಧಿಸಬೇಕು. ಆದರೆ ವಿಚಾರಣೆಯ ನೆಪದಲ್ಲಿ ಅಮಾಯಕ ಆಟೋ ಚಾಲಕರಿಗೆ ಅನಗತ್ಯ ಕಿರುಕುಳ ಕೊಡಬಾರದು. ಅಂತಾ ಆಟೋ ಚಾಲಕರು ಪೋಲಿಸರಿಗೆ ಮನವಿ ಸಲ್ಲಿಸಿದರು. ಅಪರಾಧಿಗಳ ಹುಡುಕಾಟಕ್ಕೆ ಆಟೋಚಾಲಕರು ಸಂಪೂರ್ಣ ಸಹಕಾರ ನೀಡುವುದಾಗಿ ಪೋಲಿಸರಿಗೆ ಭರವಸೆ ನೀಡಿದರು.
25_udupi_manipal_rape_auto_muskara (3)_WMV V9 001

ರೇಪಿಸ್ಟ್ ಮಾಹಿತಿ ನೀಡಿದವರಿಗೆ ೨ ಲಕ್ಷ ರೂಪಾಯಿ ಬಹುಮಾನ ಘೋಷಣೆ

ಉಡುಪಿ:ಮಣಿಪಾಲ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್ ನಡೆಸಿದ ಆರೋಪಿಗಳ ಪತ್ತೆ ಇನ್ನೂ ಕಗ್ಗಂಟಾಗಿ ಉಳಿದಿದೆ. ಆರೋಪಿಗಳ ಪತ್ತೆ ಹಚ್ಚುವಲ್ಲಿ ಪೋಲಿಸ್ ಇಲಾಖೆ ತನಿಖೆ ಚರುಕು ಗೊಳಿಸಿದ್ದು ರೇಪಿಸ್ಟ್‌ಗಳ ಬಗ್ಗೆ ಮಾಹಿತಿ ನೀಡಿದವರಿಗೆ ಪೋಲಿಸ್ ಇಲಾಖೆ ವತಿಯಿಂದ ೨ ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಇಂದು ಪತ್ರಿಕಾ ಗೋಷ್ಟಿಯಲ್ಲಿ ಮಾಹಿತಿ ಐಜಿಪಿ ಪ್ರತಾಪ್ ರೆಡ್ಡಿ ಪೋಲಿಸ್ ಇಲಾಖೆ ತನಿಖೆ ತೀವ್ರಗೊಳಿಸಿದ್ದು ಆರೋಪಿಗಳ ಬಗ್ಗೆ ಸುಳಿವು ನೀಡಿದವರಿಗೆ ಅಧಿಕೃತ ಬಹುಮಾನ ಘೋಷಿಸಿದ್ದಾರೆ.
6/25/2013 4:31 AM

ಆರೋಪಿ ರೇಖಾಚಿತ್ರ ಬಿಡುಗಡೆಯ ನಂತರ ಸಾಕಷ್ಟು ಸುಳಿವು ಲಭ್ಯ: ಐಜಿಪಿ ಪ್ರತಾಪ್ ರೆಡ್ಡಿ

ಉಡುಪಿ: ಮಣಿಪಾಲ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಗ್ಯಾಂಗ್‌ರೇಪ್ ಪ್ರಕರಣದ ತನಿಖೆ ನಡೆಸುತ್ತಿರುವ ಪೋಲಿಸರಿಗ್ ಮಹತ್ವದ ದಾಖಲೆಗಳು ಲಭ್ಯವಾಗಿದೆ. ಪ್ರಮುಖ ಆರೋಪಿಯ ರೇಖಾಚಿತ್ರ ಬಿಡುಗಡೆಗೊಳಿಸಿದ ನಂತರ ಕೇರಳ ಮತ್ತು ಸ್ಥಳೀಯವಾಗಿ ಅನೇಕ ಮಹತ್ವದ ಸುಳಿವು ಲಭ್ಯವಾಗಿದೆ ಅಂತ ಐಜಿಪಿ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ. ಈಗಾಗಲೇ ೪೭ ಜನರನ್ನು ಈ ಸಂಬಂಧ ವಿಚಾರಣೆಗೊಳಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
 6/25/2013 4:27 AM

ಮಣಿಪಾಲ ಅತ್ಯಾಚಾರ ಸಿಸಿ ಟಿವಿ ಆಟೋ ಫೋಟೇಜ್ ರಿಲೀಸ್

ಉಡುಪಿ:  ಮಣಿಪಾಲ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಸಿಸಿ ಟಿವಿಯಲ್ಲಿ ಚಿತ್ರೀಕರಿಸಿದ ಆಟೋ ಫೂಟೇಜ್‌ನ್ನು ಐಜಿಪಿ  ಪ್ರತಾಪ್ ರೆಡ್ಡಿ ಬಿಡುಗಡೆಗೊಳಿಸಿದ್ದಾರೆ. ಇಂದು ಎಸ್‌ಪಿ ಕಚೇರಿಯಲ್ಲಿ ಸುದ್ಧಿಗೋಷ್ಟಿ ನಡೆಸಿದ ಅವರು ಮಣಿಪಾಲದಲ್ಲಿ ನಡೆದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಮತ್ತು ಅಪಹರಣ ಸಂದರ್ಭ ಖಾಸಗಿ ಸಿಸಿ ಟಿವಿಯಲ್ಲಿ ೧೧. ೩೫ ರ ಹೊತ್ತಿಗೆ ರಿಕ್ಷಾ ತೆರಳಿದ್ದು ೨. ೩೭ ರಹೊತ್ತಿಗೆ ರಿಕ್ಷಾ ಮರಳಿದ ದಾಖಲೆಗಳು ಚಿತ್ರೀಕರಣಗೊಂಡ ಆಟೋ ಫೂಟೇಜ್‌ನ್ನು ಅವರು ಬಿಡುಗಡೆಗೊಳಿಸಿದ್ದಾರೆ.
6/25/2013 4:17 AM

ಬೆಳಪುವಿನಲ್ಲಿ ವಿವಿ ಪಿಜಿ ಕೇಂದ್ರ ಸ್ಥಾಪನೆಗೆ ಗ್ರೀನ್ ಸಿಗ್ನಲ್ ಮಾಜಿ ಶಾಸಕ ಭಟ್ ಹೇಳಿಕೆ ಸರಿಯಲ್ಲ: ದೇವಿ ಪ್ರಸಾದ್ ಶೆಟ್ಟಿ

ವರದಿ-ಸುರೇಶ್ ಎರ್ಮಾಳ್
ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೊತ್ತರ ಅಧ್ಯಯನ ಕೇಂದ್ರ ಸ್ಥಾಪನೆ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯ ಬೆಳಪುವಿನಲ್ಲಿ ಸ್ಥಾಪಿಸಲು ಮಂಗಳೂರು ವಿವಿಯ ಸಿಂಡಿಕೇಟ್ ಸಭೆಯಲ್ಲಿ ಅಂತಿಮಗೊಳಿಸಿ ಸರಕಾರಕ್ಕೆ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪ್ರಸ್ತಾವನೆಯನ್ನು ತುರ್ತಾಗಿ ಫ್ಯಾಕ್ಸ್ ಮೂಲಕ ಕಳುಹಿಸಿರುವುರಾಗಿ ಬೆಳಪು ಗ್ರಾಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ಈ ಪ್ರಕೃಯೆಯಿಂದ ನೊಂದಿರುವ ಉಡುಪಿ ಶಾಸಕ ರಘುಪತಿ ಭಟ್ ಹೇಳಿಗೆಳು ತರವಲ್ಲ ಎಂಬುದಾಗಿ ಶೆಟ್ಟಿ ಭಟ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಂಗಳೂರು ವಿವಿಯ ಉನ್ನತ ಸಮಿತಿಯು ಸದಸ್ಯರು ಈ ಹಿಂದೆ ಉಡುಪಿ ಜಿಲ್ಲೆಯ ಬೆಳಪು ಮತ್ತು ಕೊಳಲಗಿರಿ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಸಾಧಕ ಬಾಧಕಗಳ ಬಗ್ಗೆ ವರದಿ ತಯಾರಿಸಿ ಪಿಜಿ ಕೇಂದ್ರ ಸ್ಥಾಪನೆಗೆ ಬೆಳಪು ಸೂಕ್ತವಾಗಿದೆ. ಅಲ್ಲದೆ ಅಗತ್ಯ ಎಲ್ಲಾ ಮೂಲ ಸೌಕರ್ಯಗಳನು ಹೊಂದಿರುವ ಸಮತಟ್ಟಾದ ಯೋಗ್ಯ ಭೂಮಿ ಲಭ್ಯತೆ ಬಗ್ಗೆ ಮಹಿತಿ ನೀಡಿ ಸೆನೆಟ್ ಸಮಿತಿ ಸಭೆಯಲ್ಲಿ ಮಂಜೂರಾತಿ ಮಾಡಿ ಅನುಮೋದನೆಗಾಗಿ ಶನಿವಾರ ನಡೆದ ಸಭೆಯಲ್ಲಿ ಮಂಡಿಸಿ ಬೆಳಪುವನ್ನು  ಅಂತಿಮಗೊಳಿಸಲಾಗಿದೆ.
ಸಿಂಡಿಕೇಟ್ ಸದಸ್ಯರಾದ ಪ್ರೊ.ಶ್ರೀಪತಿ ತಂತ್ರಿ, ಪ್ರಾಧ್ಯಾಪಕರಾದ ಪ್ರೊ.ಕೆ.ಕೆ.ಆಚಾರ್ಯ, ಪ್ರೊ.ಜೋಗನ್ ಶಂಕರ್, ವಿವಿ ರಿಜಿಸ್ಟ್ರಾರ್ ಯಡಪಡಿತ್ತಾಯ, ಹಣಕಾಸು ಅಧಿಕಾರಿ ಪ್ರೊ. ಪಿ. ಫಕೀರಪ್ಪ ಮುಂತಾದವರ ತಜ್ಞರ ಸಮಿತಿ ರಚಿಸಿದ ವರದಿ ಆಧರಿಸಿ ಪಿಜಿ ಕೇಂದ್ರ ಸ್ಥಾಪನೆಗೆ ಬೆಳಪು ಅತ್ಯಂತ ಸೂಕ್ತ ಪ್ರದೇಶವೆಂದು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಮುಂದಿನ ಶೈಕ್ಷಣಿಕ ಭವಿಷ್ಯವನ್ನು ಪರಿಗಣಿಸಿ ಸರಕಾರಕ್ಕೆ ಶಿಫಾರಸು ಮಾಡಿರುವುದನ್ನು ಶೆಟ್ಟಿ ಅಭಿನಂದಿಸಿದ್ದಾರೆ. ಸರಕಾರದ ಮಟ್ಟದಲ್ಲಿ ಶೀಘ್ರ ಬಜೆಟ್‌ನಲ್ಲಿ ಅನುದಾನ ಮಂಜೂರಾತಿ ಮಾಡಿ ಜಿಲ್ಲೆಯಲ್ಲಿ ಮಾದರಿಯಾದ ಸ್ನಾತಕೋತ್ತರ ಕೇಂದ್ರ ಸ್ಥಾಪಿಸಿ ಯುವಜನಾಂಗಗಳಿಗೆ ಉತ್ತಮ ಅವಕಾಶವನ್ನು ಆಗಿಸುವ ಜಿಲ್ಲಾ ಉಸ್ತುವಾರಿ ಸಚಿವ ಸೊರಕೆಯರ ಕಲ್ಪನೆಗೆ ಬೆಳಪು ಗ್ರಾಪಂ ಸಂಪೂರ್ಣ ಸಹಕಾರ ನೀಡಲಿದೆ ಎಂದಿದ್ದಾರೆ.d

ಅರೆಬರೆ ಹೆದ್ದಾರಿ ಚತುಪ್ಪಥ ಕಾಮಗಾರಿ ಬಸ್ಸುಗಳೆಡರ ಮಧ್ಯೆ ಅಪಘಾತ ಹಲವರಿಗೆ ಗಾಯ

ವರದಿ-ಸುರೇಶ್ ಎರ್ಮಾಳ್
ರಾಷ್ಟ್ರೀಯ ಹೆದ್ದಾರಿಯಿಂದ ಕಾಪು ಪೇಟೆಯ ಒಳಭಾಗಕ್ಕೆ ಹೋಗಲು ಮುಂದಾದ ಮಂಗಳೂರು ಕಡೆಯಿಂದ ಬಂದ ಖಾಸಗಿ ಸರ್ವಿಸ್ ಬಸ್ಸಿಗೆ, ಉಡುಪಿ ಕಡೆಯಿಂದ ಬಂದ ಖಾಸಗಿ ತಡೆ ರಹಿತ ಬಸ್ಸು ಡಿಕ್ಕಿಯಾದ ಪರಿಣಾಮ ೧೫ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಕಾಪುವಿನ ವಿದ್ಯಾನಿಕೇತನ ವಿದ್ಯಾ ಸಂಸ್ಥೆಯ ಸಮೀಪ ಸಂಭವಿಸಿದೆ.
ಗಾಯಾಳುಗಳನ್ನು ತಕ್ಷಣ ಕಾಪು ಸಮೀಪದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು ಎಲ್ಲರೂ ಚೇತರಿಸಿಕೊಂಡಿದ್ದಾರೆ.
ಪೂರ್ಣಗೊಳ್ಳದ ರಾಷ್ಟ್ರೀಯ ಹೆದ್ದಾರಿ ಚತುಪ್ಪಥ ಕಾಮಗಾರಿ, ಹಠತ್ತಾಗಿ ಮುಂದಾಗುವ ಹೆದ್ದಾರಿ ಪಥ ಬದಲಾವಣೆ ಮುಂತಾದ ಸಮಸ್ಯೆಗಳಿಗೆ ಸಿಲುಕಿ ಕಕ್ಕಾಬಿಕ್ಕಿಯಾಗುವ ವಾಹನ ಚಾಲಕರಿಂದಾಗಿ ಹೆದ್ದಾರಿಯಲ್ಲಿ ಪ್ರಾಣ ಕಳಕೊಂಡವರು ಬಹಳಷ್ಟು ಮಂದಿ, ಇತ್ತೀಚಿನ ದಿನಗಳಲ್ಲಿ ಈ ಪರಿಸರದಲ್ಲಿ ತಿಂಗಳಿಗೆ ನಾಲ್ಕು ಅಪಘಾತಕ್ಕಿಂತ ಕಡಿಮೆ ಆದ ದಾಖಲೆಗಳಿಲ್ಲ. ಆದರೂ ಪೊಲೀಸರು ಈ ಪರಿಸರದಲ್ಲಿ ಕರ್ತವ್ಯ ನಿರ್ವಾಹಿಸದಿರುವುದು ಪೊಲೀಸರ ಕರ್ತವ್ಯ ಲೋಪವನ್ನು ಬಿಂಬಿಸುತ್ತಿದೆ. ಈ ಬಗ್ಗೆ ಕಾಪುವಿನ ಪೊಲಿಪು ಮಸೀದಿ ಬಳಿ ನಡೆದ ಅಪಘಾತ ಸ್ಥಳಕ್ಕೆ ಆಗಮಿಸಿದ ಸಚಿವ ವಿನಯ ಕುಮಾರ್ ಸೊರಕೆ ಪೊಲೀಸರನ್ನು ತರಾಟೆಗೆ ತೆಗೆದುಕೊಂಡು ಅಪಾಯ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಿ ಅಪಘಾತ ನಿಯಂತ್ರಿಸುವಂತ್ತೆ ಸ್ಥಳದಲ್ಲಿದ್ದ ಕಾಪು ಕ್ರೈಂ ಎಸ್ಸೈ ರಾಜೇಂದ್ರ ನಾಯಕ್‌ರವರಿಗೆ ಸೂಚನೆ ನೀಡಿದ್ದರು. ಆದರೆ ಇಲ್ಲಿ ಸಚಿವರ ಸೂಚನೆಯನ್ನೂ ಗಾಳಿಗೆ ತೂರಲಾಗಿದ್ದು ಅಪಘಾತಗಳು ನಿತ್ಯ ನಿರಂತವಾಗಿ ನಡೆಯುತ್ತಿದ್ದು ಪ್ರಾಯಾಣಿಕರು ಪ್ರಾಣ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುವಂತ್ತಾಗಿದೆ.