ಮಂಗಳವಾರ, ಜುಲೈ 30, 2013

ಸಮುದ್ರ ತೀರದಲ್ಲಿ ಮೃತ ದೇಹ ಪತ್ತೆ

ಕುಂದಾಪುರ: ಗಂಗೊಳ್ಳಿ ಬಂದರು ಪ್ರದೇಶದ ಸಮುದ್ರ ತೀರದಲ್ಲಿ ಸೋಮವಾರ ಬೆಳಿಗ್ಗೆ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದೆ.
DSCN7357 dead
ಮೃತ ವ್ಯಕ್ತಿಯನ್ನು ಗಂಗೊಳ್ಳಿ ನಿವಾಸದ ರಾಘವ ಮೊಗವೀರ (೬೦) ವರ್ಷ  ಎಂದು  ಗುರುತಿಸಲಾಗಿದೆ. ಕಳೆದ ೩ ದಿನಗಳ ಹಿಂದೆ ಹೆಂಡತಿ ಮನೆಯಾದ ಉಪ್ಪುಂದ ತಾರಪತಿಗೆ ಹೋಗುವುದಾಗಿ ಮನೆಯಿಂದ ತೆರೆಳಿದ್ದರು ಎಂದು ತಿಳಿದು ಬಂದಿದೆ. ಬಳಿಕ ೩ ದಿನದಿಂದ ನಾಪತ್ತೆಯಾಗಿದ್ದ ಅವರು ಶವವಾಗಿ ಗಂಗೊಳ್ಳಿ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.ಗಂಗೊಳ್ಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
DSCN7373 d
DSCN7362 d
DSCN7367 d
DSCN7378 d
DSCN7375 d
DSCN7377 d

ತ್ರಾಸಿ ಬೀಚಿನಲ್ಲಿ ಸಮುದ್ರ ಪಾಲಾಗುತ್ತಿದ್ದವನನ್ನು ರಕ್ಷಿಸಿದ ಕಂಚಿಗೋಡಿನ ಯುವಕ

ಗಂಗೊಳ್ಳಿ:- ಇಲ್ಲಿನ ಪ್ರಸಿದ್ದ ತ್ರಾಸಿ ಬೀಚಿಗೆ ವಿಹಾರಕ್ಕೆಂದು ಆಗಮಿಸಿದ್ದ ಸಿರಸಿ ಮೂಲದ ಹತ್ತು ಕಾರ್ಮಿಕರ ಪೈಕಿ ತಿಮ್ಮ ಎಂಬವರೋರ್ವರು ಸಮುದ್ರದ ನೀರಿನೊಂದಿಗೆ ಆಟವಾಡುತ್ತಿದ್ದಾಗ ಅಲೆಗಳ ರಭಸಕ್ಕೆ ಸಮುದ್ರ ಪಾಲಾಗುತ್ತಿದ್ದುದನ್ನು ಗಮನಿಸಿದ ಸ್ಥಳೀಯ ಕಂಚಿಗೋಡಿನ ಯುವಕ ದಾಮು ಜಗನ್ನಾಥ್ ಖಾರ್ವಿ, ಇವರು ಸಮುದ್ರದ ನೀರಿಗೆ ಧುಮುಕಿ ಸಮುದ್ರ ಪಾಲಾಗುತ್ತಿದ್ದ ತಿಮ್ಮ ಎಂಬವನನ್ನು ರಕ್ಷಿಸಿ, ಸ್ಥಳೀಯರ ಹಾಗೂ ಪೊಲೀಸ್ ಇಲಾಖೆಯ ಪ್ರಶಂಸೆಗೆ ಪಾತ್ರರಾದರು... ಸಮುದ್ರದಲ್ಲಿ ಈಜಾಡದಂತೆ ಅನೇಕ ಬ್ಯಾನರ್‌ಗಳು ಬೀಚಿನಲ್ಲಿ ಅಳವಡಿಸಿದರೂ, ಸ್ಥಳೀಯರ ಹಾಗೂ ಪೊಲೀಸರ ಕಣ್ಣು ತಪ್ಪಿಸಿ ಹಾಗೂ ಕೆಲವೊಮ್ಮೆ ಮಾತನ್ನು ಧಿಕ್ಕರಿಸಿ ಸಮುದ್ರಕ್ಕೆ ಇಳಿಯುವ ಪ್ರವಾಸಿಗಳು ಅಪಾಯವನ್ನು ಆಹ್ವಾನಿಸಿರುವ ಹಲವು ಉದಾಹರಣೆಗಳಿವೆ...
dead22

ಬಂಟಕಲ್ಲಿನಲ್ಲಿ ಸಾರ್ವಜನಿಕರಿಗೆ ಮನರಂಜನೆ ನೀಡಿದ ಕೆಸರು ಗದ್ದೆ ಸ್ಪರ್ಧೆ ನೂರಾರು ಸ್ಪರ್ಧಾಳುಗಳ ಸಮಾಗಮ..

ವರದಿ-ಸುರೇಶ್ ಎರ್ಮಾಳ್
ಬಂಟಕಲ್ಲು ಮಾಣಿಪಾಡಿ ಕೃಷ್ಣಮೂರ್ತಿ ನಾಯಕ್ ರವರ ಕೆಸರು ಗದ್ದೆಯಲ್ಲಿ ಸ್ಥಳೀಯ ಖಾಸಗಿ ಸಂಸ್ಥೆಗಳು ಏರ್ಪಡಿಸಿದ ಕೆಸರು ಗದ್ದೆ  ಸ್ಪರ್ಧಾ ಕೂಟ ಬಹಳ ಅದ್ಧೂರಿಯಾಗಿ ತೆರೆ ಕಂಡಿದೆ.
30 padu
ರಾಜಾಪುರ ಸಾರಸ್ವತ ಯುವ ವೃಂದ, ಶ್ರೀದುರ್ಗಾ ಮಹಿಳಾ ಮಂಡಳಿ, ಸಂಯುಕ್ತವಾಗಿ ಸಂಘಟಿಸಿದ ಈ ಕಾರ್ಯಕ್ರಮವನ್ನು ಕಾರ್ಕಳ ರಾಜಾಪುರ ಸಾರಸ್ವತ ಯುವ ಸಂಘಟನೆಯ ಸಂಚಾಲಕ ಅಶೋಕ್ ನಾಯಕ್ ಕಾರ್ಯಕ್ರಮ ಉದ್ಘಾಟಿಸಿದರು. ಉಡುಪಿ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಸದಾನಂದ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ನಮ್ಮ ಸಮಾಜ ಕೃಷಿಪ್ರದಾನವಾಗಿದ್ದು, ಇತ್ತೀಚಿನ ದಿನಗಳಲ್ಲಿ ಕೃಷಿಕರ ಮಕ್ಕಳು ಉನ್ನತ ಶಿಕ್ಷಣ ಪಡೆದು ಇತರ ಉದ್ಯೋಗದಲ್ಲಿ ಆಸಕ್ತಿ ತಳೆದುದರಿಂದ  ಹಳ್ಳಿಯ ಕೃಷಿಪದ್ದತಿ ಮೂಲೆಗುಂಪಾಗುತ್ತಿದೆ.  ಇತರ ಉದ್ಯೋಗದ ಜೊತೆಯಲ್ಲಿ ಕೃಷಿಯಲ್ಲಿಯೂ ಆಸಕ್ತಿ ಮೂಡಿಸಲು ಇಂತಹ ಕಾರ್ಯಕ್ರಮಗಳು ಪ್ರೇರಣೆ ನೀಡಲಿ ಹಾಗೂ ಹಿರಿಯರ ಸಾಂಪ್ರದಾಯಿಕ ಬದುಕನ್ನು ನೆನಪು ಮಾಡುವ ಪರಿಪಾಠ ಬೆಳೆಯಲಿ ಎಂದು ಹಾರೈಸಿದರು.
30 (1)
ಕಲ್ಲು ಮಾಣಿಪಾಡಿ ಕೃಷ್ಣಮೂರ್ತಿ ನಾಯಕ್‌ರವರ ನೀರಿನ ಝರಿ ಇರುವ ವಿಶಾಲವಾದ ಗದ್ದೆಯ ಕೆಸರಿನಲ್ಲಿ ದಿನಪೂರ್ತಿ ಮಕ್ಕಳ...ಯುವಕರ..ಮಹಿಳೆಯರ  ಮೇಲಾಟ, ವಿವಿಧ ಸ್ಫರ್ಧೆಗಳು, ವಿವಿಧ ಶ್ರೇಣಿಗಳಲ್ಲಿ  ಆಟಗಳು, ಹಗ್ಗ ಜಗ್ಗಾಟ, ಸಂಗೀತಕುರ್ಚಿ, ಕಣ್ಣಿಗೆ ಬಟ್ಟೆ ಕಟ್ಟಿ ಮಡಕೆ ಒಡೆಯುವುದು, ಬಲೂನು ಓಟ, ಅಲ್ಲದೆ ಕೆಸರಿನ ಎರೆಚಾಟದಲ್ಲಿ  ಲಿಂಗಭೇದವಿಲ್ಲದೆ  ಸ್ಫರ್ಧಾಳುಗಳು  ಭಾಗವಹಿಸಿ ಸಂಭ್ರಮಿಸಿದರು. ಆರಂಭದಲ್ಲಿ ಆಟ... ನಂತರ ಓಟ...ಕೊನೆಗೆ ಹಲಸಿನಸೋಳೆ,ತಿಮರೆ ಚಟ್ನಿಯೊಂದಿಗೆ ಗಂಜಿ ಊಟ.
30 (2)
ಸಮಾರೋಪ ಸಮಾರಂಭದಲ್ಲಿ ಅನಿವಾಸಿ ಭಾರತೀಯ ಹೇರೂರು ಗಂಪ ದತ್ತಾತ್ರೇಯ ಪಾಟ್ಕರ್ ಸ್ಫರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಅಭಿನಂದಿಸಿದರು. ಶ್ರೀಕ್ಷೇತ್ರ  ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ಆಡಳಿತ ಮೊಕ್ತೇಸರ ವಿಶ್ವನಾಥ ನಾಯಕ್, ಅಧ್ಯಕ್ಷ ಶಶಿಧರ ವಾಗ್ಲೆ ಶುಭ ಹಾರೈಸಿದರು.
ಯುವವೃಂದದ ಅಧ್ಯಕ್ಷ ಅನಂತರಾಮ ವಾಗ್ಲೆ ಸ್ವಾಗತಿಸಿದರು,ದೇವದಾಸ ಪಾಟ್ಕರ್, ಕೆ.ಆರ್.ಪಾಟ್ಕರ್ ನಿರೂಪಿಸಿದರು. ಕಾರ್ಯದರ್ಶಿ ಅಮೃತ್ ನಾಯಕ್ ವಂದಿಸಿದರು. ಸ್ಪರ್ಧೆಯಲ್ಲಿ ನೂರೈವತ್ತಕ್ಕೂ ಅಧಿಕ ಸ್ಫರ್ಧಾಳುಗಳು ಭಾಗವಹಿಸಿದ್ದರು.

ಮದುವೆಯಾಗುವುದಾಗಿ ನಂಬಿಸಿ ಸಹೋದರಿಯರ ಅತ್ಯಾಚಾರ- ಇಬ್ಬರು ಆರೋಪಿಗಳ ಬಂಧನ

ಕುಂದಾಪುರ: ಮದುವೆಯಾಗುವುದಾಗಿ ನಂಬಿಸಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಸಹೋದರಿಯರಿಬ್ಬರನ್ನೂ ರಿಕ್ಷಾ ಮೂಲಕ ಮನೆ ಸಮೀಪದ ಹಾಡಿಗೆ ಕರೆದೊಯ್ದು ಅತ್ಯಾಚಾರವೆಸಗಿದ ಪ್ರಕರಣ ವಂಡ್ಸೆ ಗ್ರಾಮದ ನೂಜಾಡಿ ಸಮೀಪ ನಡೆದಿದ್ದು ತಡವಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಪ್ರಕರಣಕ್ಕೆ ಸಂಬಂದಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಆರೋಪಿಗಳನ್ನು ವಂಡ್ಸೆ ಗ್ರಾಮದ ಶಾರ್ಕೆ ಸಮೀಪದ ನಿವಾಸಿಗಳಾದ ವಿನೋದ್ (೨೧), ಪ್ರಜೀತ್ (೧೯) ಎಂದು ಗುರುತಿಸಲಾಗಿದೆ.
ನೂಜಾಡಿ ಸಮೀಪದ ಕೊರಾಡಿ ಮನೆಯ ನಿವಾಸಿಗಳಾದ ೨೦ ವರ್ಷ ಹಾಗೂ ೧೬ ವರ್ಷ ಪ್ರಾಯದ ಸಹೋದರಿಯರಿಬ್ಬರು ಗೇರುಬೀಜ ಪ್ಯಾಕ್ಟರಿಗೆ ಕೆಲಸಕ್ಕಾಗಿ ಇದೇ ರಿಕ್ಷಾದಲ್ಲಿ ತೆರಳುತ್ತಿದ್ದರು ಎನ್ನಲಾಗಿದ್ದು ಈ ಇಬ್ಬರು ಯುವಕರು ಯುವತಿಯರನ್ನು ಪ್ರೀತಿಯ ಹೆಸರಿನಲ್ಲಿ ಪುಸಲಾಯಿಸಿದ್ದಾರೆ ಎನ್ನಲಾಗಿದೆ. ಜುಲೈ ೨ ರಂದು ರಾತ್ರಿ ಮನೆಯ ಸಮೀಪದ ಹಾಡಿಗೆ ಇಬ್ಬರನ್ನು ಕರೆದೊಯ್ದ ಯುವಕರು ದೈಹಿಕ ಸಂಪರ್ಕ ಬೆಳೆಸಿದ್ದಾರೆ ಎಂದು ಯುವತಿಯರ ತಾಯಿ ಕೊಲ್ಲೂರು ಠಾಣೆಯಲ್ಲಿ ದೂರು ನೀಡಿದ್ದಾರೆ.
ಯುವತಿಯರಲ್ಲಿ ಓರ್ವಳ ಆರೋಗ್ಯದಲ್ಲಿ ಆದ ವೈಪರಿತ್ಯದಿಂದಾಗಿ ಮನೆಯವರಿಗೆ ಅತ್ಯಾಚಾರದ ವಿಷಯ ತಿಳಿದಿದ್ದು,ಯುವತಿಯರ ತಾಯಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ, ಸುದ್ದಿ ತಿಳಿಯುತ್ತಿದ್ದಂತೆಯೇ ಆರೋಪಿಗಳು ತಲೆಮರೆಸಿಕೊಂಡಿದ್ದು ಸೋಮವಾರ ಮದ್ಯಾಹ್ನದ ವೇಳೆಗೆ ಆರೋಪಿಗಳನ್ನು ಕುಂದಾಪುರ ಡಿವೈ‌ಎಸ್ ಪಿ ಯಶೋಧಾ ಎಸ್. ಒಂಟಗೋಡಿ ಅವರ ಮಾರ್ಗದರ್ಶನದಲ್ಲಿ ಕೊಲ್ಲೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ನೀರಿನ ಬೆಲೆ ಏರಿಕೆ ವಿರುದ್ಧ ಡಿ.ವೈ‌ಎಫ್.ಐ. ನಿಂದ ಕುಂದಾಪುರದಲ್ಲಿ ಪ್ರತಿಭಟನೆ

ಕುಂದಾಪುರ: ಕುಂದಾಪುರ ಪುರಸಭಾ ಅಧಿಕಾರಿಗಳ ಜನವಿರೋಧಿ  ನೀತಿ ಖಂಡಿಸಿ ನೀರಿನ ಬೆಲೆ ಏರಿಕೆ ವಿರುದ್ಧ ಭಾರತ ಪ್ರಜಾಸತಾತ್ಮಕ ಯುವಜನ ಫೆಡರೇಶನ್ ಕುಂದಾಪುರ ತಾಲೂಕು ಸಮಿತಿ ವತಿಯಿಂದ  ಪ್ರತಿಭಟನಾ ಮೆರವಣಿಗೆ ಮತ್ತು ಸಭೆ ಸೋಮವಾರ ಕುಂದಾಪುರದಲ್ಲಿ ಜರುಗಿತು.
D.Y.F.I. PROTEST-29 (1)
ಪ್ರಾಸ್ತಾವಿಕ ಮಾತುಗಳನ್ನಾಡಿದ ಡಿ.ವೈ.ಎಫ್.ಐ. ಮುಖಂಡ ಸುಧಾಕರ ಕಾಂಚನ್, ಜೀವಜಲವಾದ ನೀರಿನ ವಿಷಯದಲ್ಲಿ ಲಾಭ-ನಷ್ಟದ ವಿಚಾರ ಮಾಡುವುದು ಸಲ್ಲದು, ಆದರೆ ಕುಂದಾಪುರ ಪುರಸಭೆಯಲ್ಲಿ ಇದೇ ರೀತಿಯ ವರ್ತನೆಗಳು ಆಗುತ್ತಿದೆ, ದಿನಬಳಕೆ ವಸ್ತುಗಳ ಬೆಲೆಯೇ ಗಗನಕ್ಕೇರಿರುವ ಈ ಸಂದರ್ಭದಲ್ಲಿ ಜನರಿಂದ ಅಧಿಕ ಬೆಲೆ ಪಡೆಯುವ ಅಧಿಕಾರಿಗಳು ಜನಪರವಾಗಿ ಕಾರ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಎಚ್. ನರಸಿಂಹ, ಸುರೇಶ ಕಲ್ಲಾಗರ ಮೊದಲಾದವರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಶಾಸ್ತ್ರೀ ವ್ರತ್ತದಿಂದ ಪುರಸಭಾ ಕಛೇರಿವರೆಗೂ ಮೆರವಣಿಗೆ ನಡೆಯಿತು.

ರೋಟರಿ ಇಂಟರ್‍ಯಾಕ್ಟ್ ಪದಗ್ರಹಣ

ತೆಕ್ಕಟ್ಟೆ ರೋಟರಿ ಕ್ಲಬ್ಬಿನ ಅಂಗ ಸಂಸ್ಥೆ ಇಂಟರ್‍ಯಾಕ್ಟ್   ಕ್ಲಬ್ ಬೇಳೂರಿನ ಸರಕಾರಿ ಪ್ರೌಢಶಾಲೆಯಲ್ಲಿ ದಿನಾಂಕ ೨೬:೦೭:೨೦೧೩ರಂದು ಪದಗ್ರಹಣ ಸಮಾರಂಭ ನಡೆಯಿತು. ತೆಕ್ಕಟ್ಟೆ ರೋಟರಿ ಕ್ಲಬ್ಬಿನ ಅಧ್ಯಕ್ಷ ಟಿ ಮಂಜುನಾಥ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಭಂಡಾರ್‌ಕಾರ್‍ಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎ.ಸಿ. ತುಂಗ, ರೋಟರಿ ಉಪರಾಜ್ಯಪಾಲ ಟಿ.ಕೆ.ಎಂ ಭಟ್, ರೋಟರಿ ವಲಯ ಸೇನಾನಿ ಕೆ.ಆರ್ ನಾಯಕ್, ಬೇಳೂರು ಪಂಚಾಯತ್ ಮಾಜಿ ಅಧ್ಯಕ್ಷ ಕರುಣಾಕರ ಶೆಟ್ಟಿ, ಸ್ಫೂರ್ತಿಧಾಮದ ನಿರ್ದೇಶಕ ಡಾ|| ಕೇಶವ ಕೋಟೇಶ್ವರ ಮುಂತಾದವರು ಉಪಸ್ಥಿತರಿದ್ದರು.
Rotary-1
ಶಾಲಾ ಮುಖ್ಯೋಪಾಧ್ಯಾಯ ಕುಶಲ ಗೌಡ ಸ್ವಾಗತಿಸಿದರು. ರೋಟರಿ ಕಾರ್ಯದರ್ಶಿ ಶ್ರೀಧರ ಅಚಾರ್ಯ ವಂದಿಸಿದರು. ದೈಹಿಕ ಶಿಕ್ಷಕ ಸುಧಾಕರ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿದರು.ಇಂಟರ್‍ಯಾಕ್ಟ್ಅಧ್ಯಕ್ಷರಾಗಿ ೧೦ನೇ ತರಗತಿಯ ಶ್ರೀಶ ಕಾರ್ಯದರ್ಶಿಯಾಗಿ ಸೌಮ್ಯಶ್ರೀರವರು ಆಯ್ಕೆಯಾದರು.
Rotary-2

ಮೂಳೂರು ಮರ್ಕಝ್ ತಲೀಮಿಲ್ ಇಹ್ಸಾನಲ್ಲಿ ಸಾಮೂಹಿಕ ಇಪ್ತಾರ್ ಕೂಟ ಸಾವಿರಾರು ಅನಾಥ ಹಾಗೂ ನಿರ್ಗತಿಕ ಮಕ್ಕಳ ಸಂಗಮ..

ವರದಿ-ಸುರೇಶ್ ಎರ್ಮಾಳ್
ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಆಧೀನ ಸಂಸ್ಥೆಯಾದ ಮೂಳೂರು ಮರ್ಕಝ್ ತಲೀಮಿಲ್ ಇಹ್ಸಾನ್ ಸಭಾಂಗಣದಲ್ಲಿ ಸಾಮೂಹಿಕ ಇಪ್ತಾರ್ ಕೂಟ ಜರಗಿತು.
29
ಜೊಹ್‌ರ್ ನಮಾಜಿನೊಂದಿಗೆ ಆರಂಭವಾದ ಕಾರ್ಯಕ್ರಮ ಬಳಿಕ ರಂಝಾನ್ ಜನರಿಗೆ ನೀಡುವ ಸಂದೇಶದ ಬಗ್ಗೆ ಖ್ಯಾತ ಭಾಷಣಗಾರ ಯುವ ವಿದ್ವಾನ್ ಎಂ.ಎಸ್.ಎಂ.ಝೈನಿ ಸಂದೇಶ  ಭಾಷಣ  ಮಾಡಿದರು. ತದ ನಂತರ ಸಾಮೂಹಿ ಪ್ರಾರ್ಥನೆ ನಡೆಯಿತು.
29 (1)
ಕೊನೆಯದಾಗಿ ಸಂಸ್ಥೆಯ ಅನಾಥ ಹಾಗೂ ನಿರ್ಗತಿಕ ಮಕ್ಕಳು ಹಾಗೂ ಸಾದಾತ್‌ಗಳ ಸಾನಿಥ್ಯದಲ್ಲಿ ನಡೆದ ಸಾಮೂಹಿಕ ಇಪ್ತಾರ್ ಕೂಟದಲ್ಲಿ ಸಾವಿರಾರು ಮಂದಿ ಭಾಗವಹಿಸಿದರು. ಪ್ರಮುಖವಾಗಿ ಬಹು ಅಸ್ಸೆಯ್ಯದ್ ಅಬೂಬಕ್ಕರ್ ಸಿದ್ಧಿಕ್ , ಅಬ್ದುಲ್ ಖಾದಿರ್ ಜಬ್ಬಾರ್ ಮಸ್ತಾನ್ ಉಪ್ಪಾನ್, ಡಿ.ಕೆ.ಎಸ್.ಸಿ.ಯ ಕೋಶಾಧಿಕಾರಿ ಮಹಮ್ಮದ್ ಮೇದರಬೆಟ್ಟು, ಡಿ.ಕೆ.ಎಸ್ ಡೆವಲಪರ‍್ಸ್ ಕಮಿಟಿಯ ಅಧ್ಯಕ್ಷ ಇಸಾನ್ ಬೊಳ್ಳಾಯಿ, ಡಿ.ಕೆ.ಎಸ್.ಸಿ. ಪ್ರತಿನಿಧಿಗಳು ಹಾಗೂ ಉಲಮಾ ಉಮರಾಗಳು ಭಾಗವಹಿಸಿದ್ದರು. ಸಂಸ್ಥೆಯ ಮುಖ್ಯಸ್ಥರಾದ ಯು.ಕೆ.ಮುಸ್ತಫ ಸ ಅದಿ ಸ್ವಾಗತಿಸಿದ್ದು, ಕಾರ್ಯದರ್ಶಿ ವ್ವೆ.ಬಿ.ಸಿ. ಬಸೀರ್ ಆಲೀ ವಂದಿಸಿದರು.
29 (3)
29 (5)
29 (4)
29 (6)

ಮಣಿಪಾಲ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಆಗಸ್ಟ್ 12 ರವರೆಗೆ ನ್ಯಾಯಂಗ ಬಂಧನ ವಿಸ್ತರಣೆ

ಉಡುಪಿ: ಮಣಿಪಾಲ ಅತ್ಯಾಚಾರ ಪ್ರಕರಣ ದ ಐವರು ಆರೋಪಿಗಳಿಗೆ ಆಗಸ್ಟ್  12 ರವರೆಗೆ ನ್ಯಾಯಂಗ ಬಂಧನವನ್ನು ವಿಸ್ತರಿಸಲಾಗಿದೆ.
court-8
ಜೂನ್ 20 ರಂದು ಮಣಿಪಾಲದ ವೈದ್ಯಕೀಯ ವಿದ್ಯಾರ್ಥಿನಿಯನ್ನು ರಿಕ್ಷಾದಲ್ಲಿ ಮದ್ಯ ಸೇವಿಸಿ ಬಂದ ಮೂವರು ಅಪಹರಿಸಿ ಸಾಮೂಹಿಕ ಅತ್ಯಾಚಾರಗೈದಿದ್ದರು. ಜೂನ್ 27 ರಂದು ಮೂವರು ಆರೋಪಿಗಳಾದ ಯೋಗೇಶ್, ಹರೀಪ್ರಸಾದ್ ಮತ್ತು ಆನಂದ್ ಸೆರೆಸಿಕ್ಕಿದ್ದು ಇವರು ಇದೀಗ ನ್ಯಾಯಂಗ ಬಂಧನದಲ್ಲಿದ್ದರು. . ಉಡುಪಿಯ ಮುಖ್ಯ ನ್ಯಾಯಿಕ ದಂಢಾದಿಕಾರಿಯವರ ಮುಂದೆ ಈ ಮೂವರು ಆರೋಪಿಗಳನ್ನು ಇಂದು ಹಾಜರು ಪಡಿಸಲಾಗಿದ್ದು ಮೂವರಿಗೆ ಆಗಷ್ಟ್ 12 ರವರೆಗೆ ನ್ಯಾಯಂಗ ಬಂಧನ ವಿಸ್ತರಿಸಿ ನ್ಯಾಯಲಯ ಆದೇಶ ಹೊರಡಿಸಿದ್ದು ಸಿವಮೊಗ್ಗ ಜೈಲಿಗೆ ಮತ್ತೆ ಇವರನ್ನು ಕಳುಹಿಸಲಾಗಿದೆ.
[youtuber youtube='http://www.youtube.com/watch?v=xikyh-cLAM8&feature=c4-overview&list=UUs0k8vSBwTqzHjMqn8PYrzQ']
ಅದೇ ರೀತಿ ಸಾಕ್ಷ್ಯ ನಾಶದ ಆರೋಪದ ಮೇಲೆ ಬಂಧಿತರಾಗಿದ್ದ ಯೋಗೇಶ್ ಸಹೋದರ ಬಾಲಚಂದ್ರ ಮತ್ತು ಹರಿಪ್ರಸಾದ್ ಸಹೋದ ಹರೀಂದ್ರ ಅವರಿಗೂ ಆಗಷ್ಟ್ 12 ರವರೆಗೆ ನ್ಯಾಯಂಗ ಬಂಧನ ವಿಸ್ತರಿಸಲಾಗಿದ್ದು ಇವರನ್ನು ಹಿರಿಯಡ್ಕ ಜೈಲಿಗೆ ರವಾನಿಸಲಾಗಿದೆ.court-7
court-5
court-4
court-3
court-1

ಇಸ್ಪೀಟ್ ಗಮ್ಮತ್ತು ತಂದಿತು ಆಪತ್ತು: ನಗರ ಪೊಲೀಸರಿಂದ ಎರಡು ಕಡೆ ದಾಳಿ

ಭಾನುವಾರ ಸಂಜೆ ಗಮ್ಮತ್ತಿನಲ್ಲಿ ಇಸ್ಪೀಟ್ ಆಡುತಿದ್ದ ಎರಡು ಕಡೆ ಉಡುಪಿ ನಗರ ಪೊಲೀಸರು ದಾಳಿ ನಡೆಸಿದ್ದಾರೆ. ನಗರದ ಖಾಸಗಿ ಹೊಟೇಲೊಂದರಲ್ಲಿ ಬಾಜಿ ಕಟ್ಟಿ ಆಡುತ್ತಿದ್ದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರಿಂದ ೬೦ ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಇವರಲ್ಲಿ ಕೆಲ ಚಿರಪರಿಚಿತ ಗಣ್ಯರಿದ್ದರು(?) ಅನ್ನೋದು ತಿಳಿದುಬಂದಿದೆ. ಇದೇ ವೇಳೆ ಬೀಡಿನಗುಡ್ಡೆಯಲ್ಲೂ ಕಾರ್ಯಾಚರಣೆಗಿಳಿದ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ. ಅವರಿಂದ ಏಳು ಸಾವಿರ ವಶಪಡಿಸಿಕೊಳ್ಳಲಾಗಿದೆ.

ವಿದ್ಯಾಪೋಷಕ್ ಯಕ್ಷಗಾನ ಕಲಾರಂಗದ ವಿದ್ಯಾರ್ಥಿಗಳಿಗೆ ವಿನೋದ ಮತ್ತು ಚಂದ್ರಶೇಖರ್ ಶೆಟ್ಟಿ ಕಾಪು ಫೌಂಡೇಶನ್,

ಉಡುಪಿ: ವಿದ್ಯಾಪೋಷಕ್‌ನ ಹತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳು,  ಓರ್ವ ನರ್ಸಿಂಗ್ ಹಾಗೂ ಓರ್ವ ದ್ವಿತೀಯ ಪಿ.ಯು ವಿದ್ಯಾರ್ಥಿಗೆ ವಿನೋದ ಮತ್ತು ಚಂದ್ರಶೇಖರ್ ಶೆಟ್ಟಿ ಕಾಪು ಫೌಂಡೇಶನ್ ಇವರ ವತಿಯಿಂದ ರೂ. ೨,೨೬,೫೦೦/-ಮೊತ್ತದ ವಿದ್ಯಾರ್ಥಿವೇತನವನ್ನು ಯಕ್ಷಗಾನ ಕಲಾರಂಗದ ಕಚೇರಿಯಲ್ಲಿ ವಿತರಿಸಲಾಯಿತು. ಸಮಾರಂಭದ್ಲ ಆರಂಭದಲ್ಲಿ ಕಲಾರಂಗದ ಉಪಾಧ್ಯಕ್ಷ ಎಸ್.ವಿ ಭಟ್ ಸ್ವಾಗತಿಸಿದರು. ಕಾಪು ಟ್ರಸ್ಟ್‌ನ ವಿಶ್ವಸ್ಥರಾದ ಶ್ರೀ ದಯಾನಂದ ಶೆಟ್ಟಿ ಅವರು ವಿದ್ಯಾರ್ಥಿವೇತನವನ್ನು ವಿತರಿಸಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿ ಉದ್ಯೋಗ ದೊರೆತ ಬಳಿಕ ಬಡ ವಿದ್ಯಾರ್ಥಿಗಳಿಗೆ ಇದೇ ರೀತಿ ನೆರವು ನೀಡಬೇಕೆಂದು ನುಡಿದರು. ಕೆನರಾ ಬಸ್ ಮಲಕರ ಸಂಘದ ಕಾರ್ಯದರ್ಶಿ ಸುರೇಶ್ ನಾಯಕ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕಲಾರಂಗದ ಉಪಾಧ್ಯಕ್ಷರಾದ ಕೆ. ಗಣೇಶ್ ರಾವ್, ಎಂ. ಗಂಗಾಧರ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುರಲಿ ಕಡೆಕಾರ್ ಕಾರ್ಯಕ್ರಮ ನಿರ್ವಹಿಸಿದರು. ಜತೆ ಕಾರ್ಯದರ್ಶಿ ಪ್ರೊ. ನಾರಾಯಣ ಎಂ. ಹೆಗಡೆ ಧನ್ಯವಾದ ಸಮರ್ಪಿಸಿದರು.
DSC_9635 yak

ಕಲ್ಪನಾದಲ್ಲಿ ಬಿಗ್‌ಬಾಸ್ ವಿಜಯ್ ಚೆಲ್ಲಾಪಿಲ್ಲಿ

ಉಡುಪಿ:ಬಿಗ್‌ಬಾಸ್ ಖ್ಯಾತಿಯ ಚಲನಚಿತ್ರ ನಟ ವಿಜಯ್‌ರಾಘವೇಂದ್ರ ಅವರು ಉಡುಪಿಯ ಕಲ್ಪನಾ ಥಿಯೇಟರ್‌ಗೆ ಭೇಟಿ ನೀಡಿ ಪತ್ನಿ ಸ್ಪಂದನ ಮತ್ತು ಪುತ್ರನ ಜೊತೆ ಚೆಲ್ಲಾಪಿಲ್ಲಿ ಸಿನೆಮಾ ವೀಕ್ಷಿಸಿದರು. ಉಡುಪಿಯಲ್ಲಿ ಪ್ರೇಕ್ಷಕರನ್ನು ಗಲಿಬಿಲಿ ಮಾಡಿಸುತ್ತಿರುವ ಚೆಲ್ಲಾಪಿಲ್ಲಿ ಕಾಮಿಡಿ ಎಂಟರ್‌ಟೈನ್‌ಮೆಂಟ್ ೪ ನೇ ವಾರಕ್ಕೆ ಕಾಲಿಟ್ಟಿದೆ.
[youtuber youtube='http://www.youtube.com/watch?v=6Yut0uDsUC4&feature=c4-overview&list=UUs0k8vSBwTqzHjMqn8PYrzQ']
ರಾಜ್ಯದ ಎಲ್ಲಾ ಥಿಯೇಟರ್‌ಗೆ ಭೇಟಿ ನೀಡುತ್ತಿರುವ ವಿಜಯ್ ಮಂಗಳೂರಿನಲ್ಲಿ ಚಲನಚಿತ್ರ ವೀಕ್ಷಿಸಿ ಉಡುಪಿಗೆ ಆಗಮಿಸಿದ ಕುಟುಂಬ ಸಹಿತ ಚನಚಿತ್ರವನ್ನು ವೀಕ್ಷಿಸಿದರು.
DSC03045
ಉಡುಪಿ ಮತ್ತು ದಕ್ಷಿಣಕನ್ನಡದ ಜನತೆ ನನ್ನ ಚಿತ್ರವನ್ನು ಪಾಸಿಟಿವ್ ಆಗಿ ಸ್ವೀಕರಿಸುತ್ತಾರೆಂಬ ನಿರೀಕ್ಷೆ ಇಟ್ಟುಕೊಂಡಿದ್ದೆ. ಆದರೆ ನನ್ನ ನಿರೀಕ್ಷೆಗಿಂತಲೂ ಪ್ರೇಕ್ಷಕರನ್ನು ಚೆಲ್ಲಾಪಿಲ್ಲಿಯನ್ನು ಕಂಡು ಎಂಜಾಯ್ ಮಾಡಿದ್ದಾರೆ.
SAM_0541 1
ಸಿನೆಮಾದಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಸಾಕಷ್ಟು ಅವಕಾಶ ನೀಡಲಾಗಿದೆ.  ಈಟಿವಿ ಯ ಬಿಗ್‌ಬಾಸ್ ನಂತರ ವಿಜಯ್‌ನನ್ನು ಜನ  ನಟನಾಗಿ ಮಾತ್ರವಲ್ಲದೆ ಓರ್ವ ವ್ಯಕ್ತಿಯನ್ನಾಗಿ ಗುರುತಿಸುತ್ತಿರುವುದು ವಿಶೇಷ ಎಂದು ಬಿಗ್‌ಬಾಸ್‌ನ ಕ್ಷಣಗಳನ್ನು ನೆನಪು ಮಾಡಿಕೊಂಡರು.
DSC03055
ಚಿತ್ರದ ನಟಿ ಐಶ್ಚರ್ಯನಾಗ್ ಮಾತನಾಡಿ ಚೆಲ್ಲಾಪಿಲ್ಲಿಯಲ್ಲಿ ನನಗೆ ಉತ್ತಮ ರೋಲ್ ಸಿಕ್ಕಿದೆ. ಪ್ರೇಕ್ಷಕರು ಕೂಡಾ ಅದನ್ನು ಉತ್ತಮವಾಗಿ ಸ್ವೀಕರಿಸಿದ್ದಾರೆ ಎಂದು ಅವರು ಹೇಳಿದರು.
ಚಿತ್ರದ ನಿರ್ಮಾಪಕ ಸುದೇಶ್ ಭಂಡಾರಿ, ನಿರ್ದೇಶಕ ಸಾಯಿಕೃಷ್ಣ ಕುಡ್ಲ, ಸ್ಥಳೀಯ ಪ್ರತಿಭೆ ಭೋಜರಾಜ್ ವಾಮಂಜೂರು ಉಪಸ್ಥಿತರಿದ್ದರು.
DSC03037
DSC03030
DSC03054
SAM_0570           SAM_0556 2

ಬರುತ್ತಿದೆ ನರೇಂದ್ರ ಮೋದಿ ಮೊಬೈಲ್ ಸ್ಮಾರ್ಟ್ ನಮೋ......! ಫೋನ್ ಮೂಲಕ ಮಿಂಚಲಿರುವ ಮೋದಿ!

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಎಲ್ಲೆಡೆ ವ್ಯಾಪಿಸಿಕೊಳ್ಳುತ್ತಿದ್ದಾರೆ. ಮೋದಿಯ ಹೆಸರಿನಲ್ಲಿ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಬರ್ತಿದೆ. ಇದೇನು ವಿಚಿತ್ರ ಅಂದುಕೊಳ್ಳಬೇಡಿ.
ನರೇಂದ್ರ ಮೋದಿಯ ಫ್ಯಾನ್ ಗಳು ಸ್ಮಾರ್ಟ್ ನಮೋ ಹೆಸರಿನಲ್ಲಿ ಹೊಸ ಬಗೆಯ ಮೊಬೈಲ್ ತಯಾರಿಕೆಗೆ ಮುಂದಾಗಿದ್ದಾರೆ. ನಾಲ್ಕು ವರ್ಷನ್ ಗಳಲ್ಲಿ ಸ್ಮಾರ್ಟ್ ನಮೋ ಬಿಡುಗಡೆಯಾಗಲಿದ್ದು ಮೊದಲ ನರೇಂದ್ರ ಮೋದಿ ಸಿಗ್ನೇಚರ್ ವರ್ಷನ್ ಮೊಬೈಲ್ ಶೀಘ್ರದಲ್ಲಿಯೇ ಗ್ರಾಹಕರ ಕೈ ಸೇರಲಿದೆ. ಇದರಲ್ಲಿ ನರೇಂದ್ರ ಮೋದಿಯ ಸಹಿ ಇರುತ್ತದೆ ಅನ್ನೋದೇ ವಿಶೇಷ.
1077811_10201407341083640_1495192584_o
ನರೇಂದ್ರ ಮೋದಿಯ ನಿಕ್ ನೇಮ್ ನಮೋ ಈ ಸ್ಮಾರ್ಟ್ ಫೋನ್ ನ ಪರದೆಯ ಮೇಲೆ ರಾರಾಜಿಸಲಿದೆ. ಗುಜರಾತ್ ನಲ್ಲಿ ನೆಲೆ ನಿಂತಿರುವ ಚೈನಾ ಕಂಪನಿಯೊಂದು ನಮೋ ಮೊಬೈಲುಗಳ ತಯಾರಿಕೆಗೆ ಮುಂದಾಗಿದೆ.
ನಮೋ ಮೊಬೈಲಿನ ವಿಶೇಷತೆಗಳೆಲ್ಲ ಉಳಿದ ಸ್ಮಾರ್ಟ್ ಫೋನ್ ಗಳಂತಯೇ ಇರಲಿವೆ. ಆಂಡ್ರಾಯ್ಡ್ ಓಸಿ,  ೫ ಇಂಚ್ ಸ್ಕ್ರೀನ್? , ೧೩ ಮೆಗಾ ಪಿಕ್ಸೆಲ್ ಕ್ಯಾಮರಾ, ೧೬-೩೨ ಮೆಮರಿ ಹೊಂದಿರುವ ಸ್ಮಾರ್ಟ್ ನಮೋ ಬೆಲೆ ಸುಮಾರು ೧೬,೦೦೦ ರೂಗಳು.ಈಗಾಗಲೇ ಸ್ಮಾರ್ಟ್ ನಮೋ ವೆಬ್ ಸೈಟ್ ಕೂಡ ಬಿಡುಗಡೆಗೊಂಡಿದ್ದು ಹೊಸ ತಲೆಮಾರಿನ ಮೊಬೈಲ್ ಬಗ್ಗೆ ವಿವರಗಳೂ ಅಲ್ಲಿವೆ.
o
ಇಷ್ಟೇ ಅಲ್ಲ, ಮಧ್ಯಮವರ್ಗದವರ ಕೈಗೆಟುಕುವ ಬೆಲೆಯಲ್ಲೂ ನಮೋ ಮೊಬೈಲ್ಸ್ ತಯಾರಿಸುತ್ತೇವೆ ಅಂದಿದ್ದಾರೆ ಸ್ಮಾರ್ಟ್ ನಮೋ ಯೋಜನೆಯ ವಕ್ತಾರ ಅಮೀತ್ ದೇಸಾಯಿ.
ಏನೇ ಆಗಲಿ, ಮೊದಲು ಮೋದಿ ವಾಲಿಬಾಲ್ ಆಯ್ತು, ನಂತರ ಮೋದಿ ಕ್ರಿಕೆಟ್ ಬ್ಯಾಟ್ ಆಯ್ತು ಇದೀಗ ಮೊಬೈಲ್ ನಲ್ಲೂ ನರೇಂದ್ರ ಮೋದಿ. ಮುಂದಿನ ದಿನಗಳಲ್ಲಿ ಐರನ್ ಮ್ಯಾನ್ ನರೇಂದ್ರ ಮೋದಿ ಮತ್ತವರ ಅಭಿಮಾನಿಗಳ ಸರ್ಕಸ್ ಇನ್ನೂ ಯಾವ್ಯಾವ ರೂಪ ಪಡೆದುಕೊಳ್ಳಲಿದೆಯೋ ದೇವರೇ ಬಲ್ಲ.

ಹೆರಿಗೆ ಆಸ್ಪತ್ರೆ ಅನುದಾನ ಸ್ಥಳಾಂತರ ಮಾಡೋಕೆ ಬಿಡಲ್ಲ: ಪ್ರಮೋದ್ ಮಧ್ವರಾಜ್ ವಾಗ್ದಾನ

ಉಡುಪಿ:ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಇನ್ನಷ್ಟು ಸೌಕರ್ಯವನ್ನು ಒದಗಿಸುವ ಸಲುವಾಗಿ ಬೆಂಗಳೂರಿನ ಜಯದೇವ್ ಮತ್ತು ನಿಮಾನ್ಸ್ ಆಸ್ಪತ್ರೆಯ ಶಾಖೆಯನ್ನು ಆರಂಭಿಸುವ ಚಿಂತನೆ ನಡೆದಿದೆ. ಈ ಮೂಲಕ ಜಿಲ್ಲಾಸ್ಪತ್ರೆಯ ೧೦ ಎಕರೆ ಜಾಗವನ್ನು ದಾನಿಗಳ ಇಚ್ಛೆಯಂತೆ ಬಳಸಿಕೊಳ್ಳಲಾಗುವುದು   ಎಂದು ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಉಡುಪಿ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಜಿ . ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ನಿರ್ಮಾಣಗೊಂಡ ಎ‌ಆರ್‌ಟಿ ಪ್ಲಸ್ ಸೆಂಟರ್‌ನ ನೂತನ ಕಟ್ಟಡವನ್ನು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
[youtuber youtube='http://www.youtube.com/watch?v=1MMJbmQW9-o&feature=c4-overview&list=UUs0k8vSBwTqzHjMqn8PYrzQ']
೧೩. ೬ ಕೋಟಿ ರೂಪಾಯಿ ವೆಚ್ಚದಲ್ಲಿ ಜಿಲ್ಲೆಯ ಹೆರಿಗೆ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ೧೦೦ ಬೆಡ್‌ಗಳ ಸೌಕರ್ಯವನ್ನು ಒದಗಿಸುವ ಸಲುವಾಗಿ ಅನುದಾನ ಬಿಡುಗಡೆಗೊಂಡಿದೆ. ಆದರೆ ಈ ಅನುದಾನವನ್ನು ಬೇರೆ ಜಿಲ್ಲೆಗೆ ಸ್ಥಳಾಂvರಿಸುವ ಕುರಿತು ಆಗ್ರಹ ಕೇಳಿ ಬಂದಿದ್ದು ಯಾವ ಕಾರಣಕ್ಕೂ ಈ ಅನುದಾನವನ್ನು ಸ್ಥಳಾಂvರಿಗೊಳಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅವರು ತಿಳಿಸಿದರು. ರಾಜ್ಯದಲ್ಲಿ ಸರಕಾರಿ ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು  ಈ ಬಗ್ಗೆ ಆರೋಗ್ಯ ಸಚಿವರ ಬಳಿ ಮಾತನಾಡಿದ್ದು ನೇಮಕಾತಿ ಪ್ರಕ್ರಿಯೆ ಶೀಘ್ರವೇ ಆರಂಭವಾಗಲಿದೆ ಎಂದು ಅವರು ತಿಳಿಸಿದರು.ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಉಪೇಂದ್ರ ನಾಯಕ್ ಆಸ್ಪತ್ರೆಯನ್ನು ಉದ್ಘಾಟಿಸಿದರು.
28_udupi_rti_center_ing 007
ಆಸ್ಪತ್ರೆ ಕಟ್ಟಡದ ಕುರಿತು ಮಾತನಾಡಿದ ಉಡುಪಿ ಜಿಲ್ಲಾಸ್ಪ್ರಯನ್ನು ಮೇಲ್ದರ್ಜೆಗೇರಿಸುವ ಕೆಲಸ ಅತೀ ಶೀಘ್ರವಾಗಿ ಆಗಬೇಕು. ಅಲ್ಲದೇ ಜಿಲ್ಲೆಯಲ್ಲಿ ಕ್ಯಾನ್ಸರ್ ಚಿಕಿತ್ಸೆ ಆಸ್ಪತ್ರೆಯ ತೆರೆಯುವ ಕುರಿತು ಶಾಸಕರು ಪ್ರಯತ್ನಿಸಬೇಕು ಎಂದು ಮನವಿ ಮಾಡಿಕೊಂಡರು. ಕಾಯಿಲೆ ಎಂಬುವುದು ಎಲ್ಲರಿಗೂ ಬರುತ್ತದೆ ಆದರೆ ಇದಕ್ಕೆ ಮನಸ್ಥೈರ್ಯ ತುಂಬುವ ಕೆಲಸ ಆಗಬೇಕು . ಎಲ್ಲಾ ರೋಗಿಗಳಂತೆ ಏಡ್ಸ್ ರೋಗಿಗಳಿಗೆ ಚಿಕಿತ್ಸೆ ಮತ್ತು ಸೌಕರ್ಯ ಸಿಗುವಂತಾಗಬೇಕು ಎಂದು ಅವರು ಒತ್ತಾಯಿಸಿದರು.ಉಡುಪಿ ಜಿಲ್ಲಾಧಿಕಾರಿ ಎಂ.ಟಿ. ರೇಜು ಕಟ್ಟಡದ ದಾನಿಗಳಾದ ಜಿ. ಶಂಕರ್ ಅವರನ್ನು ಸಮ್ಮಾನಿಸಿದರು.
28_udupi_rti_center_ing 008
ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಶರ್ಮ, ಜಿಲ್ಲಾ ಸರ್ಜನ್ ಆನಂದ ನಾಯ್ಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಾಮಚಂದ್ರ ಬಾಯರಿ , ರಬೀಂದ್ರ ನಾಯಕ್ ಉಪಸ್ಥಿತರಿದ್ದರು.

ಗಂಗೊಳ್ಳಿಯಲ್ಲಿ ಸುಂಟರಗಾಳಿ ಅಬ್ಬರ

ಕುಂದಾಪುರ:  ಗಂಗೊಳ್ಳಿ ಮೀನುಗಾರಿಕಾ  ಪ್ರದೇಶದಲ್ಲಿ    ರಾತ್ರಿ ಬೀಸಿದ ಭಾರಿ ಸುಂಟರಗಾಳಿಗೆ ಗಂಗೊಳ್ಳಿ ಮೀನುಗಾರಿಕಾ ಬಂದರು ಪ್ರದೇಶ  ತತ್ತರಿಸಿದ್ದು ಮೀನುಗಾರಿಕಾ ಶೆಡ್ ಹಾಗೂ ಹಲವು ಕಟ್ಟಡಗಳಿಗೆ  ಭಾರಿ ಹಾನಿಯುಂಟಾಗಿದೆ.
DSC_1384
ಬಂದರಿನಲ್ಲಿರುವ ಎರಡು ಶೆಡ್‌ಗಳ ಮೇಲ್ಛಾವಣಿ ಹಾರಿ ಹೋಗಿ ಅಪಾರ ನಷ್ಟ ಸಂಭವಿಸಿದೆ. ಬಂದರಿನ ಉತ್ತರ ದಿಕ್ಕಿನಲ್ಲಿರುವ ಆರಂಭದ  ಶೆಡ್ ಭಾಗಶ: ಹಾನಿಗೊಂಡಿದ್ದು, ಈ ಶೆಡ್‌ನಲ್ಲಿದ್ದ ಮೂರು ಮೀನುಗಾರರ ಕಚೇರಿಗಳಿಗೆ  ಹಾನಿಯುಂಟಾಗಿದೆ. ಕಚೇರಿಯ ಒಳಗಡೆ ಇಡಲಾಗಿದ್ದ ಪೀಠೋಪಕರಣಗಳಿಗೆ ಹಾನಿಯಾಗಿದೆ. ಮೀನುಗಾರರ ಬಾಕ್ಸ್ ಶೆಡ್‌ನ ಮೇಲ್ಛಾವಣಿ ಗಾಳಿಗೆ ಹಾರಿ ಹೋಗಿದೆ. DSC_1386
ಈ ಶೆಡ್‌ನ ಮೇಲ್ಛಾವಣಿಯ ಭಾರಿ ಗಾತ್ರದ ಕಬ್ಬಿಣದ ಪೈಪ್ ಗಾಳಿಗೆ ಹಾರಿಹೋಗಿದೆ.  ಶೆಡ್‌ನ ಸಮೀಪದಲ್ಲಿರುವ ಅಂಗಡಿಯೊಂದು ಸಂಪೂರ್ಣವಾಗಿ ಕುಸಿದು ಬಿದ್ದು,  ಶೀಟ್‌ಗಳು ಗಾಳಿಯ ರಭಸಕ್ಕೆ ಹಾರಿಹೋಗಿದೆ.   ದಕ್ಷಿಣ ದಿಕ್ಕಿನಲ್ಲಿರುವ ಶೆಡ್ ಸುಂಟರಗಾಳಿಗೆ ತುತ್ತಾಗಿ ಹಾನಿಗೊಳಗಾಗಿದ್ದು,  ಮೇಲ್ಛಾವಣಿ ಹಾರಿ ಹೋಗಿದೆ. ಈ ಶೆಡ್‌ನಲ್ಲಿರುವ ಮೀನುಗಾರರ ಕಚೇರಿಗೂ ಕೂಡಾ ಹಾನಿಯುಂಟಾಗಿದ್ದು, ಮೀನುಗಾರರಿಗೆ ಸೇರಿದ ಎರಡು ಬಾಕ್ಸ್ ಶೆಡ್‌ನ ಮೇಲ್ಛಾವಣಿ ಕೂಡ ಭಾರಿ ಬಿರುಗಾಳಿಗೆ ಹಾರಿ ಹೋಗಿ ಅಪಾರ ನಷ್ಟ ಸಂಭವಿಸಿದೆ.  ಬಂದರಿನ ಮೀನು ವಿಕ್ರಯದ ಏಲಂ ಪ್ರಾಂಗಾಣದ  ಛಾವಣಿ ಗಾಳಿಗೆ ಹಾರಿಹೋಗಿದೆ.
DSC_1381
ಕುಸಿತಕ್ಕೊಳಗಾದ ಅಂಗಡಿಯ ಮೇಲ್ಛಾವಣಿಯ ಕೆಳಗೆ ಸಿಲುಕಿ ದನವೊಂದು ಮೃತಪಟ್ಟಿದೆ. ಶನಿವಾರ ಬೆಳಗ್ಗೆ  ಅಂಗಡಿಯ ಮೇಲ್ಛಾವಣಿಯ ಭಾಗಗಳನ್ನು ತೆರವುಗೊಳಿಸುತ್ತಿದ್ದ ಸಂದರ್ಭದಲ್ಲಿ  ಇದು ಪತ್ತೆಯಾಗಿದೆ.  ಸ್ಥಳಕ್ಕೆ  ಸ್ಥಳೀಯ ಶಾಸಕ  ಗೋಪಾಲ ಪೂಜಾರಿ  ಹಾಗೂ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿದ್ದಾರೆ .
DSC_1383
ಮೀನುಗಾರಿಕಾ ಇಲಾಖೆಯ ಯೋಜನಾ ಸಮನ್ವಯಾಽಕಾರಿ ಗಣಪತಿ ಭಟ್, ಇಲಾಖೆಯ ಸಹಾಯಕ ನಿರ್ದೇಶಕಿ ಸವಿತಾ ಖಾದ್ರಿ, ಇಲಾಖೆಯ ಸಿಬ್ಬಂದಿ ಗೋಪಾಲಕೃಷ್ಣ, ದಿವಾಕ ಖಾರ್ವಿ, ಗಂಗೊಳ್ಳಿ ಗ್ರಾಮಕರಣಿಕ ರಾಘವೇಂದ್ರ ದೇವಾಡಿಗ ಮೊದಲಾದವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಹಾನಿ ಪರಿಶೀಲಿಸಿದ್ದಾರೆ.
DSC_1382

ನಗರಸಭ ಸದಸ್ಯ ನವೀನ್ ಭಂಡಾರಿಗೆ ಭೂಗತ ಪಾತಕಿಯಿಂದ ಬೆದರಿಕೆ

ಉಡುಪಿ:ಉಡುಪಿ ನಗರಸಭ ಸದಸ್ಯ ನವೀನ್ ಭಂಡಾರಿಯವರಿಗೆ ಭೂಗತ ಪಾತಕಿ ಕಲಿ ಯೋಗೀಸ ಎಂಬವನಿಂದ ಬೆದರಿಕೆ ಬಂದ ಘಟನೆ ನಡೆದಿದೆ.
ಶುಕ್ರವಾರದಂದು ನವೀನ್ ಭಂಡಾರಿಗೆ ಕಲಿ ಯೋಗೀಶ ಎಂಬವನಿಂದ ಕರೆ ಬಂದಿದ್ದು 20 ಲಕ್ಷ ಹಣ ನೀಡದಿದ್ದರೆ ಜೀವಸಹಿತ ಬಿಡುವುದಿಲ್ಲವೆಂದು ಬೆದರಿಕೆಯೊಡ್ಡಿದ್ದಾನೆ ಎಂದು ನಗರಸಭ ಸದಸ್ಯ ನವೀನ್ ಭಂಡಾರಿ ಉಡುಪಿ ನಗರ ಠಾಣೆಗೆ ದೂರು ನೀಡಿದ್ದಾರೆ
 naveen

ಬಿಪಿ‌ಎಲ್ ಖಾರ್ಡ್‌ಗೆ ಒತ್ತು ನೀಡಿ: ಪ್ರಮೋದ್ ಮಧ್ವರಾಜ್

ಉಡುಪಿ : ಬಿಪಿ‌ಎಲ್ ರೇಶನ್ ಖಾರ್ಡ್‌ಹೊಂದಲು ಫಲಾನುಭವಿಗಳಿಗೆ ಆದಾಯ ಪ್ರಮಾಣ ಪತ್ರದ ಅಗತ್ಯತೆ ಇನ್ನೂ ಮುಂದಿಲ್ಲ, ಹೀಗಂತ ಶಾಸಕ ಪ್ರಮೋದ್ ಮಧ್ವರಾಜ್ ಉಡುಪಿ ತಾಲೂಕು ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ತಿಳಿಸಿದ್ದು, ಜಿಲ್ಲೆಯಲ್ಲಿ ಬಿಪಿ‌ಎಲ್ ಖಾರ್ಡ್‌ದಾರರ ಹೆಚ್ಚಳಕ್ಕೆ ಒತ್ತು ನೀಡಿ ಅಂತ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
[youtuber youtube='http://www.youtube.com/watch?v=Q_-zS94zPGU&feature=c4-overview&list=UUs0k8vSBwTqzHjMqn8PYrzQ']
ಉಡುಪಿ ತಾಲೂಕು ಪಂಚಾಯತ್‌ನ ೧೬ನೇ ಸಾಮಾನ್ಯ ಸಭೆಯು ತಾಲೂಕು ಪಂಚಾಯತ್‌ನ ಸಬಾಂಗಣದಲ್ಲಿ ನೆಡೆದಿದ್ದು, ಜಿಲ್ಲೆಯಲ್ಲಿ ಶೇಕಡಾ ೬೦ರಷ್ಟು ಎಪಿ‌ಎಲ್ ಖಾರ್ಡುದಾರರಿದ್ದರೆ ಕೇವಲ ೪೦%ರಷ್ಟು ಮಾತ್ರ ಬಿಪಿ‌ಎಲ್ ಖಾರ್ಡನ್ನು ಹೊಂದಿದ್ದಾರೆ, ಬಿಪಿ‌ಎಲ್ ಖಾರ್ಡುದಾರರನ್ನು ಹೆಚ್ಚುಸುವ ಸಲುವಾಗಿ ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ವಿಶೇಷವಾಗಿ ಗಮನ ಹರಿಸಬೇಕೆಂದು ಅವರು ಸಭೆಯಲ್ಲಿ ಮನವಿ ಮಾಡಿದರು.
ತಾ.ಪಂ ಸಭೆವಿರುವಾಗ ಗ್ರಾಪಂನಲ್ಲಿ ಸಭೆ ಮಾಡಬಾರದು ಎಂದು ಸ್ವಷ್ಟ ನಿರ್ದೇಶನವಿದ್ದರೂ ಬೆಳಪು, ಕುತ್ಯಾರು, ಅತ್ರಾಡಿ ಗ್ರಾಮಪಂಚಾಯತ್‌ಗಳು ಸಭೆ ನೆಡೆಸುತ್ತಿವೆ ಈ ಬಗ್ಗೆ ಆಯಾ ಗ್ರಾಪಂಗೆ ಕ್ರಮತೆಗೆದುಕೊಳ್ಳಬೇಕು ಎಂದು ಸದಸ್ಯರೋರ್ವರು ಸಭೆಗೆ ತಿಳಿಸಿದ್ದರು, ಕಾರ್‍ಯನಿರ್ವಹಣಾಧಿಕಾರಿ ಮಂಜುನಾಥಯ್ಯ ಪ್ರತಿಕ್ರಿಯಿಸಿ ಶಿಸ್ತು ಕ್ರಮತೆಗೆದುಕೊಳ್ಳುದ್ದಾಗಿ ತಿಳಿಸಿದ ಅವರು, ಉಡುಪಿ ಜಿಲ್ಲೆಗೆ ನಿರ್ಮಲ ಭಾರತ ಅಭಿಯಾನದಲ್ಲಿ ೭,೭೭೯ ಮನೆಗಳಿಗೆ ಶೌಚಾಲಯ ನಿರ್ಮಾಣಕ್ಕೆ ಅನುದಾನ ಮುಂಜೂರಾಗಿದೆ ಎಂದರು.
ತಾ.ಪಂ ಅಧ್ಯಕ್ಷೆ ಗೌರಿ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನೆಡೆದ ಸಭೆಯಲ್ಲಿ ಉಪಾಧ್ಯಕ್ಷ ರಾಮಕುಲಾಲ್, ಸ್ಥಾಯಿಸಮಿತಿ ಅಧ್ಯಕ್ಷ ದಿವಾಕರ್ ಕುಂದರ್ ಉಪಸ್ಥಿತರಿದ್ದರು.
 27_tp_meeting 001

ಕ್ಯಾರಿ ಓವರ್ ಪದ್ಧತಿ ತಿದ್ದುಪಡಿ ವಿರೋಧಿಸಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಉಡುಪಿ :ಕ್ಯಾರಿ ಓವರ್ ಪದ್ಧತಿ ತಿದ್ದುಪಡಿ ವಿರೋಧಿಸಿ ಉಡುಪಿ ಜಿಲ್ಲಾ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಂದ ಮಣಿಪಾಲದಲ್ಲಿ ಪ್ರತಿಭಟನೆ ನಡೆಯಿತು. ಮಣಿಪಾಲ ಕಾಲೇಜಿನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಡಿಗ್ರಿ ಕಾಲೇಜಿನಲ್ಲಿರುವಂತೆಯೇ ಕ್ಯಾರಿ ಓವರ್ ಪದ್ಧತಿಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
DSC02921 p
[youtuber youtube='http://www.youtube.com/watch?v=redydsa3Geo&feature=c4-overview&list=UUs0k8vSBwTqzHjMqn8PYrzQ']

ಶನಿವಾರ, ಜುಲೈ 27, 2013

ಇಸ್ಲಾಂಮಿನ ಮೂಲಭೂತ ನಂಬಿಕೆಗಳು ಮತ್ತು ತತ್ವಗಳು.. ಇದ್ರೀಸ್ ಹೂಡೆಯವರ ವೀಡಿಯೋ ಸಂದರ್ಶನ ಭಾಗ ೯

ಕೆಟ್ಟ ಕೆಲಸವನ್ನು ಮಾಡಿದರೆ ಅಲ್ಲಾಹ ಕೆಟ್ಟ ಪ್ರತಿಫಲವನ್ನು ನೀಡುತ್ತಾನೆ...
[youtuber youtube='http://www.youtube.com/watch?v=RhYPKo_opJI&feature=c4-overview&list=UUs0k8vSBwTqzHjMqn8PYrzQ']
ನಾಳೆಗೆ ಮುಂದುವರೆಯುವುತ್ತದೆ............
vlcsnap-2013-07-18-13h43m06s14

ಉಡುಪಿಯಲ್ಲಿ ಮಳೆ ಜೋರು: ಶಾಲಾ ಕಾಲೇಜಿಗೆ ಇಂದು ರಜೆ

ಉಡುಪಿ:ಉಡುಪಿ ಜಿಲ್ಲೆಯಲ್ಲಿ ವರುಣ ಆರ್ಭಟಿಸಿದ್ದು ತಗ್ಗು ಪ್ರದೇಶಗಳು ಜಲಾವೃತವಾಗಿದೆ. ಪಶ್ಚಿಮ ಘಟ್ಟದಲ್ಲಿ ಕೂಡಾ ಉತ್ತಮ ಮಳೆಯಾಗುತ್ತಿದ್ದು ಎಲ್ಲಾ ನದಿಗಳು ಉಕ್ಕಿ ಹರಿಯುತ್ತಿದೆ. ಎಲ್ಲಾ ಕಡೆ ನೀರಿನ ಹೊಳೆಯೇ ಹರಿಯುತ್ತಿದ್ದು ಅಪಾಯ ಎದುರಾಗುವ ಸಾಧ್ಯತೆಯಿದ್ದು ಮುಂಜಾಗೃತಾ ಕ್ರಮವಾಗಿ ಶಾಲಾ ಕಾಲೇಜಿಗೆ ನಾಳೆ  ಜಿಲ್ಲಾಡಳಿತ ರಜೆ ಸಾರಿದೆ. ಜಿಲ್ಲಾಧಿಕಾರಿಯವರು ಈ ಆದೇಶ ಹೊರಡಿಸಿದ್ದು ಶಾಲಾ ಮಕ್ಕಳು ಯಾರೂ ಕೂಡಾ ನಾಳೆ ಶಾಲೆಗೆ ತೆರಳದಂತೆ ಸೂಚಿಸಿದ್ದಾರೆ. ಕರಾವಳಿಯಲ್ಲಿ  ಕಡಲ ಉಬ್ಬರ ಹೆಚ್ಚುತ್ತಿದ್ದು ಮುಂದಿನ ೨೪ ಗಂಟೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು ಮೀನುಗಾರರು ಕಡಲಿಗಿಳಿಯದಂತೆ ಹವಾಮಾನ ಇಲಾಖೆಯ ಪ್ರಕಟಣೆ ತಿಳಿಸಿದೆ.

ಗಿನ್ನಿಸ್ ಮರುಪ್ರಯತ್ನದಲ್ಲಿ ಕಡಲ ಮೀನು ಗೋಪಾಲ ಖಾರ್ವಿ ಡಿಸೆಂಬರ್‌ನಲ್ಲಿ ಮತ್ತೆ ಸಮುದ್ರಕ್ಕೆ

ಉಡುಪಿ:ಕೈ ಕಾಲುಗಳಿಗೆ ಬೇಡಿ ಹಾಕಿ ಸಮುದ್ರದ ಅಲೆಗಳ ಅಬ್ಬರದ ನಡುವೆ ಈಜಿ ಲಿಮ್ಕಾ ದಾಖಲೆಯ ಪುಟ ಸೇರಿದ್ದ ಕೋಡಿಕನ್ಯಾಣದ ಕಡಲ ಮೀನು ಗೋಪಾಲ ಖಾರ್ವಿ ಮತ್ತೆ ಗಿನ್ನಿಸ್ ದಾಖಲೆಯ ಪ್ರಯತ್ನಕ್ಕೆ ಕೈ ಹಾಕಲಿದ್ದಾರೆ. ಎರಡು ವರ್ಷಗಳ ಹಿಂದೆ ಗಿನ್ನಿಸ್ ದಾಖಲೆಗಾಗಿ ಸೈಂಟ್ ಮೇರಿಸ್ ದ್ವೀಪದಿಂದ ಮಲ್ಪೆ ಬೀಚ್‌ಗೆ ಈಜಿ ಸಾಧನೆ ಮೆರೆದು ಎಲ್ಲಾ ದಾಖಲೆಗಳನ್ನು ಲಂಡನ್‌ಗೆ ಕಳುಹಿಸಿದ್ದರು. ಆದರೆ ಈ ದಾಖಲೆಗಳನ್ನು ತಾಂತ್ರಿಕ ಕಾರಣಗಳಿಗಾಗಿ ಗಿನ್ನಿಸ್ ರೆಕಾರ್ಡ್  ಸಂಸ್ಥೆ ರಿಜೆಕ್ಟ್ ಮಾಡಿತ್ತು.  ಛಲ ಬಿಡದ ತ್ರಿವಿಕ್ರಮನಂತೆ ಮತ್ತೊಮ್ಮೆ ಗಿನ್ನಿಸ್ ದಾಖಲೆಗಾಗಿ ಖಾರ್ವಿ ತಾಂತ್ರಿಕ ದಾಖಲೆ ಸಹಿತ  ಮರು ಪ್ರಯತ್ನ ನಡೆಸಲಿದ್ದಾರೆ.
016
ಕಡಲ ಈಜಿನಲ್ಲಿ ಹಲವಾರು ಬಾರಿ ಸಾಹಸ ಮಾಡಿದ ಬಡ ಮೀನುಗಾರ ಗೋಪಾಲಖಾರ್ವಿಗೆ  ಈಜುವುದೇ ಒಂದು ಹವ್ಯಾಸ. ಹಲವಾರು ಬಾರಿ ನಿರಂತರವಾಗಿ ಕಡಲಿನಲ್ಲಿ ಈಜಿ ವಿಶೇಷ ಸಾಧನೆ ಮಾಡಿದ್ದ ಗೋಪಾಲ ಖಾರ್ವಿ ಲಿಮ್ಕಾ ದಾಖಲೆಯ ಪುಟಕ್ಕೆ ಸೇರ್ಪಡೆಗೊಂಡಿದ್ದರು. ಲಿಮ್ಕಾವೊಂದರಲ್ಲೇ ವಿರಮಿಸದ ಖಾರ್ವಿ ೨೦೧೨ ರ ಜನವರಿಯಲ್ಲಿ  ಗಿನ್ನಿಸ್ ದಾಖಲೆ ಬರೆಯುವ ನಿಟ್ಟಿನಲ್ಲಿ ಕೈ ಕಾಲಿಗೆ ಕಬ್ಬಿಣದ ಸಂಕೋಲೆಯಿಂದ ಬಿಗಿದು ಸೈಂಟ್‌ಮೇರಿಸ್ ದ್ವೀಪದಿಂದ ಮಲ್ಪೆ ಬೀಚ್ ತನಕ ಈಜಿ ಸಾಧನೆಗೈದಿದ್ದರು. ತನ್ನ ದಾಖಲೆಯನ್ನು ಗಿನ್ನಿಸ್ ದಾಖಲೆಗೆ ಸೇರಿಸಲು ಎಲ್ಲಾ ದಾಖಲೆಗಳನ್ನು ಲಂಡನ್‌ಗೆ ರವಾನಿಸಿದ್ದರು. ಸಮುದ್ರದ ರಕ್ಕಸ ಗಾತ್ರದ ಅಲೆಗಳಿಗೆ ಸೆಡ್ಡು ಹೊಡೆದು ೯ ಕಿಲೋ ಮೀಟರ್ ದೂರವನ್ನು ೨ ಗಂಟೆ ೪೫ ನಿಮಿಷದಲ್ಲಿ ಈಜಿ ದಡ ಸೇರಿದ್ದರು. ಸರಕಾರಿ ಅಧಿಕಾರಿಗಳ ಸಾಕ್ಷಿಯೊಂದಿಗೆ ಹೈಡೆಫಿನೇಶನ್ ಕ್ಯಾಮರಾದಲ್ಲಿ ಇವರ ಈಜಿನ ಸಾಧನೆ ರೆಕಾರ್ಡ್ ಆಗಿತ್ತು. ಈಜಿನ ಸಂದರ್ಭ ಜಿಪಿ‌ಎಸ್ ಅಳವಡಿಸದ ಕಾರಣ ತಾಂತ್ರಿಕ ಕಾರಣದಿಂದಾಗಿ ಗಿನ್ನಿಸ್ ಸಂಸ್ಥೆ ಇವರ ಸಾಹಸ ಯಾತ್ರೆಯನ್ನು ರಿಜೆಕ್ಟ್ ಮಾಡಿತ್ತು. ಗಿನ್ನಿಸ್ ಸಂಸ್ಥೆಯ ಆದೇಶ ಮೇರೆಗೆ ಗೋಪಾಲ ಖಾರ್ವಯವರು ಡಿಸೆಂಬರ್ ತಿಂಗಳಲ್ಲಿ ಮತ್ತೆ ಸಮುದ್ರದ ಅಲೆಗಳ ನಡುವೆ ಗುದ್ದಾಡಲಿದ್ದಾರೆ.
011
ಸಮುದ್ರದಲ್ಲಿ ಕೈ ಕಾಲು ಕಟ್ಟಿ ಈಜುವುದೆಂದರೆ ಸುಲಭದ ಮಾತಲ್ಲ. ಗಿನ್ನಿಸ್ ದಾಖಲೆಯ ಮರುಪ್ರಯತ್ನಕ್ಕೆ ಖಾರ್ವಿಯವರಿಗೆ ೧೦ ಲಕ್ಷಕ್ಕೂ ಹೆಚ್ಚು ವೆಚ್ಚವಾಗಲಿದೆ. ಮೀನುಗಾರಿಕೆ ವೃತ್ತಿಯನ್ನು ನಡೆಸುತ್ತಿರುವ ಈವರಿಗೆ ಇದನ್ನು ಭರಿಸುವ ಶಕ್ತಿಯಿಲ್ಲ. ಇವರ ಸಾಹಸದ ಯಾತ್ರೆಗೆ ಕೋಡಿಕನ್ಯಾಣದ ಜನತೆ ಸಾಥ್ ನೀಡಿದೆ. ಇವರ ಉತ್ಸಾಹ ಕಂಡು ವಿವಿಧ ಸಂಘ ಸಂಸ್ಥೆಗಳು ಕೂಡಾ ಸಹಾಯ ಹಸ್ತ ಚಾಚಿದೆ. ಆದರೆ ಇಷ್ಟೊಂದು ಹಣ ಭರಿಸುವುದು ಸುಲಭದ ಕೆಲಸವಲ್ಲ. ಕೋಡಿಕನ್ಯಾಣದ ಗೆಳೆಯರು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಕ್ರಿಯಾ ಸಮಿತಿಯನ್ನು ರಚಿಸಿ ಖಾರ್ವಿಗೆ ನೆರವಾಗುವ ಭರವಸೆ ನೀಡಿದ್ದಾರೆ.
015
ಗಿನ್ನಿಸ್ ಸಂಸ್ಥೆಯ ಪ್ರತಿನಿಧಿಗಳನ್ನು ಕರೆಸಿ ಅವರ ಸಮ್ಮುಖದಲ್ಲಿ ಗೋಪಾಲ್ ದಾಖಲೆ ಬರೆಯಲಿದ್ದಾರೆ. ಡಿಸೆಂಬರ್‌ನಲ್ಲಿ ನಡೆಯುವ ಗೋಪಾಲ ಖಾರ್ವಿಯವರ ಈ ಸಾಹಸ ಯಾತ್ರೆಗೆ ಸಂಘ ಸಂಸ್ಥೆಗಳು  ದಾನಿಗಳು ಇನ್ನಷ್ಟು ಸಹಕಾರ ನೀಡಬೇಕಾಗಿದೆ.
014
012