ಶನಿವಾರ, ಜುಲೈ 13, 2013

ಮುರಿದ ಸೀಟಿಲ್ಲ.., ಡಬ್ಬ ಸೌಂಡ್ ಬಾಕ್ಸಿಲ್ಲ.. ಕಲ್ಪನಾ ಥಿಯೇಟರ್ ಬಂದಿದೆ ಹೊಸ ಲುಕ್

ಒಳಗೆ ಎಂಟ್ರಿ ಕೊಟ್ರೆ ಬೆಂಗಳೂರಿಗೆ ಬಂದಿದ್ದೇವಾ..! ಅನ್ನೋ ಪ್ರಶ್ನೆ ಮನಸ್ಸಲ್ಲಿ ಮೂಡಿಯೇ ಮೂಡುತ್ತೆ. ಉಡುಪಿಯ ಕಲ್ಪನಾ ಥಿಯೇಟರ್ ರಿನೋವೇಶನ್ ಆಗಿದೆ. ಡಬ್ಬ ಸೀಟ್.. ಮಾಯವಾಗಿದೆ. ಆ ಜಾಗದಲ್ಲಿ ಸಾಫ್ಟ್ ಸೀಟುಗಳು ಕುಳಿತಿವೆ. ಬರ.. ಬರ ಸೌಂಡ್ ಮಾಡುತ್ತಿದ್ದ ಸೌಂಡ್ ಬಾಕ್ಸ್ ಬದಲು ಡಿಟಿ‌ಎ‌ಎಸ್ ಎಫೆಕ್ಟ್ ಬಂದಿದೆ. ಸುಣ್ಣ ಬಣ್ಣವಿಲ್ಲದ ಗೋಡೆಗಳು ರಂಗು ಪಡೆದಿದೆ. ಗುಟ್ಕಾ ಮಾರ್ಕ್ಸ್ ಇದ್ದ ಸಿಮೆಂಟ್ ನೆಲಕ್ಕೆ ಕಾಸ್ಟ್ಲಿ ಟೈಲ್ಸ್ ಬಿದ್ದಿದೆ. ಕಲ್ಪನಾ ಥಿಯೇಟರ್ ಬದಲಾಗಿದೆ. ನಾವೇನು ಮಲ್ಟಿಫ್ಲೆಕ್ಸ್‌ಗೆ ಬಂದಿದ್ದೇವಾ ಅನ್ನೋವಷ್ಟು.
kalpana4
ಫಿಲಂ ಎಷ್ಟೇ ಚೆನ್ನಾಗಿದ್ರೂ ಫಿಲಂ ಹಾಕಿರೋ ಥಿಯೇಟರ್ ಕೆಟ್ಟದಾಗಿದ್ರೆ ಮೂಡೆಲ್ಲಾ ಹಾಳಾಗೋಗುತ್ತೆ. ಫಿಲಂ ನೋಡ್ಕೊಂಡು ರಿಲೀಫ್ ಆಗೋದು ಬಿಡಿ ಮನಸ್ಸೆಲ್ಲ ಮತ್ತೆ ಹಾಳಾಗೋಗುತ್ತೆ. ಇಂತದ್ದೇ ಸಮಸ್ಯೆಯಿಂದ ಬಳಲುತ್ತಿದ್ದ ಉಡುಪಿಯ ಕಲ್ಪನಾ ಥಿಯೇಟರ್ ಈಗ ಹೊಸ ಲುಕ್ ಪಡೆದು ಪ್ರೇಕ್ಷಕರನ್ನು ಕೈ ಬೀಸಿ ಕರೆಯುತ್ತಿದೆ. ಕಳೆದ ಮೂರು ತಿಂಗಳುಗಳಿಂದ ಮುಚ್ಚಿದ್ದ ಕಲ್ಪನಾ ಥಿಯೇಟರ್ ಈಗ ರೀ ಓಪನ್ ಆಗಿದೆ. ಅದೂ ಸೂಪರ್ ಲುಕ್‌ನಲ್ಲಿ. ಎಂಟ್ರೆನ್ಸ್‌ನಲ್ಲೇ ಟಿಕೆಟ್ ಕೌಂಟರ್. ಹೆಸರು ಬಾಕ್ಸ್ ಆಫೀಸ್. ಥಿಯೇಟರ್ ಪ್ರವೇಶಿಸಿದ್ರೆ ಕ್ಲೀನ್ ಮತ್ತು ನೀಟ್ ಆಗಿರೋ ಶಾಪ್.  ನೆಲಕ್ಕೆ ಟೈಲ್ಸ್. ಮದುವೆ ಹಾಲ್ ಪ್ರವೇಶಿಸಿದ ಅನುಭವ ಚಲನಚಿತ್ರ ಪ್ರೇಕ್ಷಕರಿಗೆ.
kalpana2
ಇನ್ನು ಚಿತ್ರ ವೀಕ್ಷಿಸೋ ಸಭಾಂಗಣದೊಳಗೆ ಹೊಸದಾದ ಪ್ರಪಂಚ ತೆರೆದುಕೊಳ್ಳುತ್ತದೆ. ಪ್ರತೀ ಮೆಟ್ಟಿಲುಗಳು ಬ್ಲೂ ಲೈಟ್. ಸ್ಟೆಪ್‌ಗಳಿಗೆಲ್ಲಾ ಬ್ಲ್ಯಾಕ್ ಮ್ಯಾಟ್. ಗೋಡೆಗೆ ಎಕೋ ನಿರೋಧಕ ದಪ್ಪ ಬಟ್ಟೆ. ಒಳಗೆ ಡಿಡಿಟಿ ವಾಸನೆಯಿಲ್ಲ. ಮುರಿದ ಸೀಟುಗಳಿಲ್ಲ. ಥಿಯೇಟರ್ ಒಳಗೆ ಎಲ್ಲೂ ಬೀಡಿ- ಸಿಗರೇಟು ವಾಸನೆ ಬರೋದೇ ಇಲ್ಲ. ಕೂತು ಕೂತು ಕಾಲು ನೋಯ್ತಾಯಿದೆ.., ಮುಂದಿನ ಸೀಟಿನ ಮೇಲೆ ಹಾಲು ಚಾಚೋಣ ಅಂತ ಮನಸ್ಸಾದ್ರೂ ಕಾಲು ಚಾಚಲು ಮನಸ್ಸು ಕೇಳೋದಿಲ್ಲ.
kalpana3 4
ಕಲ್ಪನಾ ಥಿಯೇಟರನ್ನು ಸುಂದರವಾಗಿಸಲು ಒಂದೂವರೆ ಕೋಟಿಯಷ್ಟು ಖರ್ಚು ಮಾಡಲಾಗಿದೆ. ಮುಂಬೈಯ ಟೀಂ ಚೊಕ್ಕವಾಗಿ ಇಂಟೀರಿಯರ್ ವರ್ಕ್ಸ್ ಮಾಡಿದೆ. ಬಿಹಾರದ ಬಯ್ಯಾನವರು ಟೈಲ್ಸ್ ವರ್ಕ್ ಮಾಡಿದ್ದಾರೆ. ಟಿಕೆಟ್ ರೇಟ್ ಸ್ವಲ್ಪ ಜಾಸ್ತಿಯಾಗಿದೆ. ಗಾಂಧಿ ಕ್ಲಾಸ್‌ಗೆ ೪೦ ರೂಪಾಯಿ. ಫಸ್ಟ್ ಕ್ಲಾಸಿಗೆ ೫೦. ಬಾಲ್ಕಾನಿ ೬೦ ರೂಪಾಯಿ. ಪ್ರೇಕ್ಷಕರು ಬೇಕು ಬೇಕಾದಲ್ಲಿ ಉಗಿಯದೆ, ಕೊಂಡ ಸೈಡ್ಸ್‌ಗಳನ್ನು ಚೆಲ್ಲದಿದ್ದರೆ ಕಲ್ಪನಾ ಉಡುಪಿಗೊಂದು ಸುಂದರ ಥಿಯೇಟರ್. ಗುಟ್ಕಾ ತಿಂದು ರಂಗೋಲಿ ಬಿಡಿಸಿದ್ರೆ, ಸಿಗರೇಟು ಸೇದಿ ಹೊಗೆ ಬಿಟ್ರೆ ಕಲ್ಪನಾ.., ಮತ್ತೊಂದು ಅಲಂಕಾರ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ