ಶನಿವಾರ, ಜುಲೈ 13, 2013

ತಾಲಿಬಾನ್ ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಉಡುಪಿ ಮೂಲದ ಯುವಕನ ಅಂತ್ಯ ಸಂಸ್ಕಾರ

ತಾಲಿಬಾನ್ ಉಗ್ರರ ಪಾಶವಿ ಕೃತ್ಯಕ್ಕೆ ಬಲಿಯಾದ ಉಡುಪಿಯ ಯುವಕನ ಶವ ತವರಿಗೆ ಬಂದಿದೆ. ಜುಲೈ ೨ ರಂದು ಅಫಘಾನಿಸ್ಥಾನದ ಕಾಬೂಲಿನಲ್ಲಿ ನಡೆದ ಉಗ್ರರ ಬಾಂಬ್ ಸ್ಪೋಟಕ್ಕೆ ಉಡುಪಿ ಜಿಲ್ಲೆಯ ಮಲ್ಪೆ ಮೂಲದ ವಿಕ್ರಂ ಮಾರ್ಟಿಸ್ ಎಂಬ ಅಕೌಂಟೆಂಟ್ ಬಲಿಯಾಗಿದ್ದ. ಕುಟುಂಬಿಕರ ಶೋಕ ಸಾಗರದ ನಡುವೆ ವಿಕ್ರಮ್ ಅಂತಿಮ ಸಂಸ್ಕಾರ್ ಆತನ ಮನೆ ಮಲ್ಪೆಯ ಬೈಲಕೆರೆಯಲ್ಲಿ ನಡೆಯಿತು.
afgan (12)
ಭವಿಷ್ಯದ ಕನಸುಗಳನ್ನು ಹೊತ್ತು ವಿದೇಶಕ್ಕೆ ಹೋಗಿದ್ದ ಯುವಕ ಇಂದು ಶವವಾಗಿ ತವರಿಗೆ ವಾಪಾಸಾಗಿದ್ದಾನೆ. ಕುಟುಂಬಿಕರ ಮೌನದ ನಡುವೆ ಮಲಗಿರುವ ಯುವಕನ ಹೆಸರು ವಿಕ್ರಮ್ ಮಾರ್ಟಿಸ್. ೩೬ ರ ಹರೆಯದ ಈತ ಉಡುಪಿ ಮಲ್ಪೆ ಸಮೀಪದ ಬೈಲಕೆರೆ ನಿವಾಸಿ. ವೃತ್ತಿಯಲ್ಲಿ ಅಕೌಂಟೆಂಟ್ ಆಗಿದ್ದ ಈತ ಮುಂಬಯಿ, ಅಬುದಾಬಿಯಲ್ಲಿ ಸೇವೆ ಸಲ್ಲಿಸದ ನಂತರ ೧೮ ತಿಂಗಳ ಗುತ್ತಿಗೆ ಆಧಾರದ ಮೇಲೆ ಅಫಘಾನಿಸ್ತಾನದ ಕಾಬೂಲ್‌ನಲ್ಲಿ ಅಮೇರಿಕನ್ ಸೆಕ್ಯುರಿಟಿ ಕಂಪೆನಿಯೊಂದರಲ್ಲಿ  ಸೇವೆ ಸಲ್ಲಿಸುತ್ತಿದ್ದ. ನಿರಂತರ ಉಗ್ರರ ಅಟ್ಟಹಾಸದ ನಡುವೆಯೂ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಿದ್ದ. ಜುಲೈ ೨ ರಂದು  ಕಚೇರಿ  ಕ್ಯಾಂಪಸ್‌ನಲ್ಲಿ ಭಾರೀ ಬಾಂಬ್ ಸ್ಪೋಟ ಸಂಭವಿಸಿತ್ತು. ಬೆಳಗ್ಗಿನ ಜಾವ ೪ . ೩೦ ರ ಹೊತ್ತಿಗೆ ಗಾಢ ನಿದ್ರೆಯಲ್ಲಿದ್ದ ವಿಕ್ರಂ ಕ್ಷಣಾರ್ಧದಲ್ಲಿ ಚಿರನಿದ್ರಗೆ ಜಾರಿದ್ದ. ಮಲ್ಪೆಯ ಮನೆಯಲ್ಲಿರುವ ವೃದ್ಧಿ ತಾಯಿಗೆ ಈ ದುರ್ಘಟನೆಯಲ್ಲಿ ಅರಗಿಸಿಕೊಳ್ಳಲಾಗಿಲ್ಲ.
[youtuber youtube='http://www.youtube.com/watch?v=82nKcpOgQZU&feature=c4-overview&list=UUs0k8vSBwTqzHjMqn8PYrzQ']
ವಿಕ್ರಂ ಸೇರಿದಂತೆ ಏಳು ಮಂದಿ ಈ ಸ್ಪೋಟದಲ್ಲಿ ಹಸುನೀಗಿದ್ದರು. ಅವರಲ್ಲಿ ನಾಲ್ಕು ಮಂದಿ ಭಾರತೀಯರಾಗಿದ್ದಾರೆ. ಈ ಸ್ಪೋಟದ ನಂತರ ತಾಲಿಬಾನ್ ಉಗ್ರರು ತಮ್ಮ ದುಷ್ಕೃತ್ಯವನ್ನು ಸಮರ್ಥಿಸಿಕೊಂಡು ಹೇಳಿಕೆಯನ್ನೂ ಕೂಡಾ ನೀಡಿದ್ದರು. ನಾಲ್ವರು ಭಾರತೀಯರ ಪೈಕಿ ವಿಕ್ರಂ ಶವ ಮೊದಲನೆಯದಾಗಿ ಭಾರತಕ್ಕೆ ವಾಪಾಸಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಕಾರದಿಂದ ಮೃತ ದೇಹ ಭಾರತಕ್ಕೆ ಬರಲು ಸಾಧ್ಯವಾಗಿದೆ.ಬಂಧುಗಳ ಮತ್ತು ಕುಟುಂಬಿಕರ ಉಪಸ್ಥಿತಿಯ ನಡುವೆ ವಿಕ್ರಂ ಅಂತಿಮ ಸಂಸ್ಕಾರ ತೊಟ್ಟಂ ಚರ್ಚ್‌ನಲ್ಲಿ ನಡೆಯಿತು. ಯುವ ಅಕೌಂಟೆಂಟ್ ಒಬ್ಬಾತನ ಜೀವನವೇ ಬುಡಮೇಲಾದ ಘಟನೆಯಿಂದ ಮಲ್ಪೆ ಪರಿಸರ ದುಖತಪ್ತವಾಗಿದೆafgan (9)
afgan (8)

afgan (7)

afgan (6)

afgan (5)

afgan (4)

afgan (3)

afgan (2).
afgan (10)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ