ಸೋಮವಾರ, ಜುಲೈ 15, 2013

ಜು.೧೪ಕ್ಕೆ ತುಳು ಚಿತ್ರ “ಲಚ್ಚಿ”ಗೆ ಮೂಹೂರ್ತ

ವರದಿ-ಸುರೇಶ್ ಎರ್ಮಾಳ್
ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರ ತಂಡ ಯುನಿಸೆಫ್ ಪ್ರಸಾರಭಾರತಿ ಇದರ ನೂತನ “ಲಚ್ಚಿ” ತುಳು ಡಿಜಿಟಲ್ ಚಿತ್ರದ ಮುಹೂರ್ತ ಸಮಾರಂಭವು ಜು.೧೪ರಂದು ಬೆಳಗ್ಗೆ ೧೦ಕ್ಕೆ ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ನಡೆಯಲಿದೆ. ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನದ ಆಡಳಿತ ವ್ಯವಸ್ಥಾಪಕ ರಾಜೇಂದ್ರ ರಾವ್ ಅವರು ಕೆಮರಾ ಚಾಲನೆ ಮಾಡಲಿರುವರು. ಕಟಪಾಡಿ ವಿಜಯಾ ಸೋಲಾರ್ ಸಂಸ್ಥೆಯ ಮುಖ್ಯಸ್ಥ ಕೆ.ಸತ್ಯೇಂದ್ರ ಪೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಬಾಲಕಾರ್ಮಿಕ ಸಮಸ್ಯೆ, ನಕ್ಸಲೈಟ್ ಸಮಸ್ಯೆ, ಮೀನುಗಾರರ ಸಮಸ್ಯೆ ಬಗ್ಗೆ ಚಿತ್ರ ನಿರ್ದೇಶನ ಮಾಡಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಯುವ ನಿರ್ದೇಶಕ ಪ್ರಕಾಶ್ ಸುವರ್ಣ ಕಟಪಾಡಿ ಅವರು ಕಥೆ,ಚಿತ್ರಕತೆ ಬರೆದು ನಿರ್ದೇಶಿಸುತ್ತಿರುವ ಲಚ್ಚಿ  ತುಳು ಚಿತ್ರದಲ್ಲಿ ಡ್ರಗ್ಸ್ ಮತ್ತು ಹೆಚ್.ಐ.ವಿ ಏಡ್ಸ್ ಬಗ್ಗೆ ಯುವಜನಾಂಗಕ್ಕೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗಿದೆ.
ಹಳ್ಳಿಮನೆ, ಅಕ್ಕು, ಗುಡ್ಡದಮನೆ, ಭಾಗ್ಯ ಚಿತ್ರವನ್ನು ನಿರ್ಮಿಸಿರುವ ಫ್ರಾನ್ಸಿಸ್ ಡೇಸಾ ಶಂಕರಪುರ ಅವರು ಲಚ್ಚಿ ಚಿತ್ರದ ನಿರ್ಮಾಪಕರಾಗಿದ್ದು, ಸಂದೀಪ್ ಛಾಯಾಗ್ರಾಹಕರಾಗಿದ್ದಾರೆ. ರೋಹಿತ್ ಮಲ್ಪೆ ಸಂಗೀತ ನಿರ್ದೇಶನವಿದೆ. ಸೌಮ್ಯ ನಿರ್ದೇಶನ ಸಹಾಯಕರಾಗಿದ್ದಾರೆ. ರಮೇಶ್ ಕಿದಿಯೂರು ಕಲಾನಿರ್ದೇಶಕರಾಗಿದ್ದಾರೆ. ಮಡಿಕೇರಿ ಮೂಲದ ನಟಿ ಭವ್ಯ ಎಂ. ಲಚ್ಚಿ ತುಳು ಚಿತ್ರದಲ್ಲಿ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಉಳಿದಂತೆ ರಂಗಭೂಮಿ ಕಲಾವಿದ ರಾಜ್ ಗೋಪಾಲ್ ಶೇಟ್ ಉಡುಪಿ, ಪೂರ್ಣಿಮ ಸುರೇಶ್, ಸತೀಶ್ ಮುತ್ತತ್ತಿ, ಸುರೇಶ್ ಎರ್ಮಾಳ್, ರವಿ ಕೊರಂಗ್ರಪಾಡಿ, ಹರೀಶ್ ಹೇರೂರು, ನಿರಂಜನ್ ಬೇಕಲ್, ಸಾನ್ವಿ ಸಾಲ್ಯಾನ್, ದಿವ್ಯ, ಲೀಲಾವತಿ, ಮಲ್ಲಿಕಾ, ನಾಗೇಶ್ ಕಾಮತ್, ಸಂಜೀವ ಸುವರ್ಣ, ರಾಕೇಶ್ ಕುಂಜೂರು, ಬಾಲಕೃಷ್ಣ ಪೂಜಾರಿ, ಭಾಸ್ಕರ್ ಮಣಿಪಾಲ್ ಮತ್ತಿತರರು ಅಭಿನಯಿಸುತ್ತಿದ್ದಾರೆ.
 13PADU' 1

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ