ಶನಿವಾರ, ಜುಲೈ 13, 2013

ಬಡಾ ಎರ್ಮಾಳಿನಲ್ಲಿ ಮನೆಯ ಹೆಂಚಿನ ಮಹಡು ಕುಸಿತ ಸಂಕಷ್ಟದಲ್ಲಿ ಬಡ ಮಹಿಳೆ ಕುಟುಂಬ

ವರದಿ-ಸುರೇಶ್ ಎರ್ಮಾಳ್
ಸುರಿದ ಬಾರಿ ಮಳೆಗಾಳಿಗೆ ಉಚ್ಚಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಾ ಎರ್ಮಾಳಿನ ಬಡ ಕುಟುಂಬದ ಮಹಿಳೆಯೋರ್ವರ ಮನೆಯ ಹೆಂಚಿನ ಮಹಡು ಕುಸಿದು ಬಿದ್ದಿದ್ದು, ಸುಮಾರು ೩೫ ಸಾವಿರ ರೂಪಾಯಿ ನಷ್ಟ ಸಂಭವಿಸಿದೆ.ಬಡಾ ಎರ್ಮಾಳಿ ನರ್ಸಿ ನಿಕೇತನ ಮನೆಯ ಗುಲಾಬಿ ಯು. ಮೆಂಡನ್ ಎಂಬವರ ಮನೆಯ ಒಂದು ಪಾಶ್ವದ ಮಹಡು ಶುಕ್ರವಾರ ಸಂಜೆ ಬೀಸಿದ ಮಳೆಗಾಳಿಗೆ ಕುಸಿದು ಬಿದ್ದಿದ್ದು ಆ ಸಂದರ್ಭ ಆ ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಸಾವು ನೋವು ಸಂಭವಿಸಿಲ್ಲ. ಆದರೆ ಗಂಡನನ್ನು ಕಳಕೊಂಡು ಎರಡು ಮಕ್ಕಳನ್ನು ಸಾಕಿ ಸಲಹುತ್ತಿರುವ ಈ ಮಹಿಳೆಗೆ ಈ ಆಘಾತ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
[youtuber youtube='http://www.youtube.com/watch?v=C-dy9q16dN8&feature=c4-overview&list=UUs0k8vSBwTqzHjMqn8PYrzQ']
ಕೂಲಿ ಕೆಲಸ ಮಾಡಿ ಮಕ್ಕಳನ್ನು ಶಾಲೆಗೆ ಕಳುಹಿಸಿ ದಿನ ಕಳೆಯುವುದೇ ಕಷ್ಟ ಎಂಬಂತ್ತಿದ್ದ ಈ ಕುಟುಂಬಕ್ಕೆ ಮನೆ ದುರಸ್ಥಿ ಪಡಿಸುವ ಆರ್ಧಿಕ ಶಕ್ತಿಯೂ ಇಲ್ಲ. ಇದನ್ನು ದುರಸ್ಥಿ ಮಾಡದೆ ಬಿಟ್ಟರೆ ಮನೆ ಸಂಪೂರ್ಣ ಕುಸಿತ ಕಂಡು, ಈ ಕುಟುಂಬ ಇದ್ದ ಸೊರನ್ನು ಕಳಕೊಂಡು ಬೀದಿಗೆ ಬೀಳುವ ಸಂಭವವಿದೆ.ಸಂಬಂಧಿತ ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಮರಳಿದ್ದಾರೆ. ಆದರೆ ಇವರಿಗೆ ಬೇಕಾಗಿರುವುದು ಸರ್ಕಾರದ ಸಹಾಯ ಹಸ್ತ ಆ ಆರ್ಥಿಕ ನೆರವಿಗಾಗಿ ಈ ಕುಟುಂಬ ಕಾತರದಿಂದ ಕಾಯುತ್ತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ