ಶುಕ್ರವಾರ, ಜುಲೈ 19, 2013

ಎರ್ಮಾಳು ಅಪಘಾತ ವಲಯ ಸೇತುವೆ ಭಾಗಕ್ಕೆ ಮುಕ್ತಿ ಎಂದು..?

ವರದಿ-ಸುರೇಶ್ ಎರ್ಮಾಳ್
ಹೆದ್ದಾರಿ ಇಲಾಖಾ ನಿರ್ಲಕ್ಷ್ಯಕ್ಕೆ ಒಳಗಾದ ರಾಷ್ಟ್ರೀಯ ಹೆದ್ದಾರಿ ೬೬ರ ಎರ್ಮಾಳು ಸೇತುವೆಯ ಪ್ರದೇಶದ ರಸ್ತೆ ಸಂಪೂರ್ಣ ಛಿದ್ರಗೊಂಡು ದಿನನಿತ್ಯ ಅಪಘಾತಗಳು ಸರಣೆ ರೀತಿಯಲ್ಲಿ ನಡೆಯುತ್ತಿದ್ದರೂ ಸ್ಪಂಧಿಸ ಬೇಕಾದ ಇಲಾಖೆ ಈ ಬಗ್ಗೆ ಯಾವುದೇ ಕ್ರಮ ಜರುಗಿಸದಿರುವುದರಿಂದ ಮತ್ತಷ್ಟು ಅಪಾಯ ಸ್ಥಿತಿಗೆ ಜಾರಿದೆ.
ಮಳೆಗಾಲ ಆರಂಭವಾಗುತ್ತಿದಂತ್ತೆ ಜಿಲ್ಲಾಧ್ಯಂತ ರಾಷ್ಟ್ರೀಯ ಹೆದ್ದಾರಿ ವಾಹನ ಸಂಚಾರಕ್ಕೆ ನಾಲಾಯ್ಕ್ ಎಂಬಂತಾಗಿದ್ದು, ಆರಂಭದಲ್ಲಿ ಹೆದ್ದಾರಿಯಲ್ಲಿ ಹೊಂಡ ಬಿದ್ದ ತಕ್ಷಣ ರಾಸಾಯನಿಕ ಮಿಶ್ರಣದ ಡಾಮಾರುಗಳನ್ನು ಬಳಸಿ ನವಯುಗ್ ಕಂಪನಿ ಹೊಂಡ ಮುಚ್ಚುವ ಪ್ರಕೃಯೆ ನಡೆಸುತ್ತಿತ್ತಾದರೂ, ದಿನ ಕಳೆದಂತ್ತೆ ಆ ಸಂಸ್ಥೆಯೂ ಸುಸ್ತಾಯಿತೋ ಎಂಬಂತ್ತೆ ಅತ್ತ ಕಡೆ ಬರುವುದನ್ನೇ ನಿಲ್ಲಿಸಿದಂತ್ತಿದೆ.
18PADU-1 (2)
ಪಡುಬಿದ್ರಿ-ಎರ್ಮಾಳು ಗ್ರಾ.ಪಂ. ವ್ಯಾಪ್ತಿಯ ಈ ಸೇತುವೆಯ ಮೇಲ್ಮಭಾಗದ ಜೋಡನೆ ಭಾಗ ನಿರ್ವಾಹಣೆಯ ಕೊರತೆಯಿಂದ ಅಪಾಯ ಸ್ಥಿತಿಗೆ ತಲುಪಿದ್ದಲ್ಲದೆ, ಈ ಪ್ರದೇಶ ಹೊಂಡಮಯವಾಗಿದ್ದರಿಂದ ವಾಹನ ಸವಾರರು ತಕ್ಷಣ ಬ್ರೇಕ್ ಹಾಕಿದಾಗ ಹಿಂದಿನ ವಾಹನಗಳು ಹೊಂಡ ಕಂಡು ನಿಂತ ವಾಹನಕ್ಕೆ ಮುತ್ತಿಕ್ಕುವ ಪ್ರಕೃಯೆ ನಿತ್ಯ ನಿರಂತವಾಗಿ ನಡೆದು ಬಹಳಷ್ಟು ಮಂದಿ ಗಾಯಗೊಂಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಹೊಂಡ ಕಂಡು ನಿಂತ ಅಟೋ ರಿಕ್ಷಾವೊಂದಕ್ಕೆ ಲಾರಿಯೊಂದು ಹಿಂದಿನಿಂದ ಡಿಕ್ಕಿಯಾದ ಪರಿಣಾಮ ರಿಕ್ಷಾ ಪಲ್ಟಿಯಾಗಿ ಆಗತಾನೆ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ತೆರಳುತ್ತಿದ್ದ ಮಹಿಳೆ ಗಾಯಗೊಂಡು ಮರಳಿ ಆಸ್ಪತ್ರೆಗೆ ಸೇರಿದ್ದಾರೆ. ಈ ಘಟನೆಯಿಂದ ಆಕ್ರೋಶಗೊಂಡ ಸಾರ್ವಜನಿಕರು ಲಾರಿ ಚಾಲಕನಿಗೆ ಹಿಗ್ಗಾಮುಗ್ಗ ಥಳಿಸಿದ್ದು. ಗಂಭೀರ ಗಾಯಗೊಂಡ ಲಾರಿ ಚಾಲಕನನ್ನು ಬಹಳಷ್ಟು ಹೊತ್ತಿನ ಬಳಿಕ ಸ್ಥಳೀಯರು ಆಸ್ಪತ್ರೆಗೆ ಸೇರಿದ್ದರು. ಬಹಳ ಇಕ್ಕಾಟ್ಟಾದ ಈ ಸೇತುವೆಯಲ್ಲಿ ಅಪಘಾತ ಸಂಭವಿಸಿದಾಗ ಗಂಟೆಗಟ್ಟಲೆ ವಾಹನ ಸಂಚಾರ ಅಸ್ತವ್ಯಸ್ತಗೊಂಡ ಪ್ರಯಾಣಿಕರು ಪರದಾಡ ಬೇಕಾದ ದುಸ್ಥಿತಿ ಇಲ್ಲಿ ನಿತ್ಯ ಉಚಿತ.
18PADU-1 (1)
ಹೆದ್ದಾರಿಯೋ.. ಬೈಪಾಸೋ...
ಪಡುಬಿದ್ರಿಯಲ್ಲಿ ಗೊಂದಲದ ಗೂಡಾದ ವಿಚಾರವೆಂದರೆ ಇಲ್ಲಿ ನಿರ್ಮಾಣವಾಗುವುದು ಹೆದ್ದಾರಿಯೋ.. ಇಲ್ಲ ಬೈಪಾಸೋ..! ಈ ವಿಚಾರವಾಗಿ ಹೆದ್ದಾರಿ ಇಲಾಖೆ ಯಾವುದೇ ತಿರ್ಮಾಣವನ್ನು ಬಹಿರಂಗ ಪಡಿಸುತ್ತಿಲ್ಲ. ಕಾರಣ ಯಾವುದು ನಡೆದರೂ ಇಲಾಖೆ ಮತ್ತೊಂದರ ವಿರುದ್ಧ ನಡೆಯುವ ಪ್ರತಿಭಟನೆಗೆ ಮೈಯೋಡ್ಡ ಬೇಕಾಗಿದ ಅನಿರ್ವಾಯತೆ ಇದ್ದ ಕಾರಣದಿಂದ. ಆದರೆ ಈ ಪ್ರಕೃಯೆಯಿಂದ ಈ ಸೇತುವೆಯ ದುಸ್ಥಿತಿಯ ಬಗ್ಗೆಯೂ ಇಲಾಖೆ ಚಿಂತಿಸುವುದು ಮರೆತು ಬಿಟ್ಟಿದೆ. ಬಹಳಷ್ಟು ವರ್ಷಗಳ ಹಿಂದೆ ನಡೆದ ಅಪಘಾತಕ್ಕೆ ಸೇತುವೆಯ ಕಂಬಿಗಳು ಕಳಚಿ ಹೋದ ಜಾಗದಲ್ಲಿ ಇದೀಗ ಹಾಲೋ ಬ್ಲಾಕ್ ಇಟ್ಟಿಗೆಗಳ ಗೋಡೆ ಕಾಣಿಸಿಕೊಂಡಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಯಾಣಿಕರ ಸುಖಕರ ಪ್ರಯಾಣಕ್ಕೆ ಇದು ಹೇತು ಆಗಬಲ್ಲುದೇ..!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ