ಗುರುವಾರ, ಜುಲೈ 25, 2013

ವರುಣನ ಆವಾಂತರ: ಅಪಾಯದಲ್ಲಿ ಬಜೆ ಅಣೆಕಟ್ಟು

ಉಡುಪಿ: ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಧಾರಕಾರ ಮಳೆಯಿಂದಾಗಿ ಉಡುಪಿ ಜಿಲ್ಲೆಗೆ ನೀರುಣಿಸುತ್ತಿರುವ ಬಜೆ ಅಣೆಕಟ್ಟು ಅಪಾಯದಂಚಿನಲ್ಲಿದೆ. ಪಶ್ಚಿಮ ಘಟ್ಟ ಪ್ರದೇಶದಿಂದ ಹರಿದುಬರುತ್ತಿರುವ ರಭಸದ ಮಳೆ ನೀರಿನಿಂದಾಗಿ ಸ್ವರ್ಣ ನದಿ ತುಂಬಿ ಹರಿಯುತ್ತಿದೆ.
7/24/2013 11:59 PM
ಪಶ್ಚಿಮದತ್ತ ಮುನ್ನುಗ್ಗಿ ಹರಿಯುತ್ತಿರುವ ಸ್ವರ್ಣೆಗೆ ಅಣೆಕಟ್ಟು ಪ್ರದೇಶದಲ್ಲಿ ಒತ್ತಡ ಹೆಚ್ಚುತ್ತಿದೆ. ಈ ಕಾರಣದಿಂದಾಗಿ ಅಣೆಕಟ್ಟು ಪ್ರದೇಶದ ಒಂದಿಷ್ಟು ಭೂಮಿ ಕೊಚ್ಚಿಕೊಂಡು ಹೋಗಿದೆ.ಅಣೆಕಟ್ಟು ಪ್ರದೇಶದ ಕೆಳಭಾಗ ವಿದ್ಯುತ್ ಉತ್ಪಾದನಾ ಕಾಮಗಾರಿ ಬಳಿ ಹಲಗೆ ಹಾಕಿ ನೀರು ಹರಿಯಲು ಅವಕಾಶ ನೀಡಲಾಗಿತ್ತು. ಈ ಪ್ರದೇಶದಲ್ಲಿ ನೀರಿನ ರಭಸ ಹೆಚ್ಚಿ ಈ ಘಟನೆ ಸಂಭವಿಸಿದೆ.
[youtuber youtube='http://www.youtube.com/watch?v=QWMj8ZjdD6E&feature=c4-overview&list=UUs0k8vSBwTqzHjMqn8PYrzQ']
ಆದರೆ ಬಜೆಯ ಒಡಲಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಭೂಮಿ ಕೊಚ್ಚಿ ಹೋಗಿರುವ ಪ್ರದೇಶದಲ್ಲಿ  ತುರ್ತು ಕಾಮಗಾರಿಯನ್ನು ಆರಂಭಿಸಲಾಗಿದ್ದು ಕಲ್ಲನ್ನು ಹಾಕಿ ಸಮತಟ್ಟುಗೊಳಿಸಲಾಗುತ್ತಿದೆ. ಕೊಚ್ಚಿ ಹೋದ ಪ್ರದೇಶವನ್ನು  ಕೂಡಲೇ ಸರಿಪಡಿಸಿ ಬಜೆ ಡ್ಯಾಂಗೆ ಹಾನಿಯಾಗದಂತೆ ನೋಡಿಕೊಳ್ಳಲಾಗುವುದೆಂದು ಗುತ್ತಿಗೆದಾರರು ತಿಳಿಸಿದ್ದಾರೆ.
7/24/2013 11:45 PM
7/24/2013 11:51 PM

7/24/2013 11:43 PM
7/24/2013 11:55 PM
7/24/2013 11:39 PM

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ