ಸೋಮವಾರ, ಜುಲೈ 15, 2013

ಕುಂಜಾರುಗಿರಿಯಲ್ಲಿ "ಲಚ್ಚಿ" ತುಳು ಚಿತ್ರಕ್ಕೆ ಚಾಲನೆ ಗಣ್ಯರ ಉಪಸ್ಥಿತಿ

ವರದಿ-ಸುರೇಶ್ ಎರ್ಮಾಳ್
ಯುನೆಸೆಫ್ ಪ್ರಸಾರಭಾರತಿ ರಾಷ್ಠ್ರೀಯ ಪ್ರಶಸ್ತಿ ವಿಜೇತ ತಂಡದ ಆರನೆ ಡಿಜಿಟಲ್ ಚಿತ್ರ "ಲಚ್ಚಿ" ತುಳು ಚಿತ್ರೀಕರಣಕ್ಕೆ ಭಾನುವಾರ ಕುಂಜಾರುಗಿರಿ ಶ್ರೀದುರ್ಗೆದೇವಿ ಸನ್ನಿಧಿಯಲ್ಲಿ ಶ್ರೀದೇವಳದ ಆಡಳಿತ ವ್ಯವಸ್ಥಾಪಕ ರಾಜೇಂದ್ರ ರಾವ್ ಕ್ಯಾಮರಾ ಗುಂಡಿ ಒತ್ತುವ ಮೂಲಕ ಚಾಲನೆ ನೀಡಿದ್ದಾರೆ.ಸಮಾಜಿಕ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವಲ್ಲಿ ಯುವ ನಿರ್ದೇಶಕ ಪ್ರಕಾಶ್ ಸುವರ್ಣ ಕಟಪಾಡಿ ಅವರ ನಿರ್ದೇಶನದಲ್ಲಿ  ಇತ್ತೀಚಿನ ದಿನಗಳಲ್ಲಿ ಮಾರಕವಾದ  ಎಚ್‌ಐವಿ ಏಡ್ಸ್ ಮತ್ತು ಡ್ರಗ್ಸ್‌ನ ಬಗ್ಗೆ ಯುವ ಸಮುದಾಯದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನೈಜಕಥೆಯನ್ನು ಆಧರಿಸಿ ನಿರ್ಮಾಣ ಗೊಳ್ಳುತ್ತಿರುವ "ಲಚ್ಚಿ" ತುಳು ಚಿತ್ರದ ಪ್ರಧಾನ ಭೂಮಿಕೆಯಲ್ಲಿ ಉದಯೋನ್ಮುಖ  ಅನುಭವಿ ನಟಿ ಮಡಿಕೇರಿ ಮೂಲದ ಭವ್ಯ ಎಂ ಪಾತ್ರ ಮಾಡುತ್ತಿದ್ದಾರೆ.
[youtuber youtube='http://www.youtube.com/watch?v=Gk9pEd8A3W8&feature=c4-overview&list=UUs0k8vSBwTqzHjMqn8PYrzQ']
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕಟಪಾಡಿ ವಿಜಯಾ ಸೊಲಾರ್‍ಸ್ ವ್ಯವಸ್ಥಾಪಕ ಕೆ.ಸತ್ಯೇಂದ್ರ ಪೈ,   ಪ್ರಕಾಶ್ ಸುವರ್ಣರ ನಿರ್ದೇಶನದಲ್ಲಿ ಅವರ ಹಿಂದಿನ ಚಿತ್ರಗಳು ನಕ್ಸಲ್ ಸಮಸ್ಯೆ, ಬಾಲಕಾರ್ಮಿಕ ಸಮಸ್ಯೆ, ಮೀನುಗಾರ ಮಹಿಳೆಯರ ಸಮಸ್ಯೆ,ಹಾಗೂ ಹಳ್ಳಿಯ ಜನಸಾಮಾನ್ಯರ ಸಮಸ್ಯೆಗಳತ್ತ ಗಮನ ಹರಿಸುವಲ್ಲಿ ಯಶಸ್ವಿಯಾಗಿವೆ. "ಲಚ್ಚಿ" ತುಳು ಚಿತ್ರದ ಕಥೆ ಯುವ ಜನಾಂಗದಲ್ಲಿ ಏಡ್ಸ್ ಮತ್ತು ಡ್ರಗ್ಸ್‌ಬಗ್ಗೆ ಎಚ್ಚರ ಮೂಡಿಸುವ ನಿಟ್ಟಿನಲ್ಲಿ  ಸಕಾಲಿಕವಾಗಿದ್ದು  ಯಶಸ್ವಿಯಾಗುತ್ತದೆ ಎಂದರು.  ಕಟಪಾಡಿ ರೋಟರಿ ಮಾಜಿ ಕಾರ್ಯದರ್ಶಿ ಅಪ್ಪು ಮಾಸ್ಟರ್ ಶುಭ ಹಾರೈಸಿದರು. ಚೆನ್ನಿ, ಹಳ್ಳಿಮನೆ,ಅಕ್ಕು, ಗುಡ್ಡದ ಮನೆ, ಭಾಗ್ಯ ಚಿತ್ರಗಳನ್ನು ನಿರ್ಮಿಸಿದ ಉಡುಪಿ ಚಾನಲ್‌ನ ಮಾಲಕ  ಶಂಕರಪುರ ಪ್ರಾನ್ಸಿಸ್ ಡೇಸಾ ಈ ಚಿತ್ರದ ನಿರ್ಮಾಪಕರಾಗಿದ್ದು ಚಿತ್ರದ ಯಶಸ್ವಿಗೆ ಕಲಾವಿದರೂ, ಕಲಾಭಿಮಾನಿಗಳ ಸಹಕಾರ ಅಗತ್ಯ ಎಂದರು.
ಕ್ಷೇತ್ರದ ಪ್ರಧಾನ ಅರ್ಚಕ ವೇದಮೂರ್ತಿ ಗೋಪಾಲಕೃಷ್ಣ ಭಟ್ ಪ್ರಾರ್ಥನೆ ನೆರವೇರಿಸಿದರು. ಛಾಯಾಗ್ರಾಹಕ ಸಂದೀಪ್, ಕಲಾವಿದರಾದ  ರವಿ ಕೊರಂಗ್ರಪಾಡಿ,ರಾಜ್‌ಗೋಪಾಲ್ ಶೇಟ್,ದಿವ್ಯಾ ಅಮೀನ್, ಅಧಿತಿ ಅಂಬಲಪಾಡಿ, ರಾಜೇಶ್ ಆಚಾರ್,ಸಂಜೀವ ಸುವರ್ಣ, ನಿರಂಜನ್ ಬೇಕಲ್, ಗೀತಾ,ಸುದೇಶ್ ಬಂಗೇರಾ, ಹರೀಶ್ ಹೇರೂರು, ಸುರೇಶ್ ಎರ್ಮಾಳ್, ಸತೀಶ್ ಗೊಲ್ಲ, ಪ್ರಭಾಕರ ಕಲ್ಯಾಣಿ,ಕ್ಯಾಮರಾ ಸಹಾಯಕ ಅನಿಲ್, ಗೀತಾ, ರೋಹನ್ ಡಿಸೋಜ,ಮಾಧ್ಯಮ ಸಂಚಾಲಕ ಬಿ.ಪುಂಡಲೀಕ ಮರಾಠೆ ಶಿರ್ವ, ಬಾಲಕೃಷ್ಣ ಪೂಜಾರಿ, ನಿರ್ದೇಶನ ಸಹಾಯಕಿ ಸೌಮ್ಯಾ,  ಉಪಸ್ಥಿತರಿದ್ದರು. ನಟ ಮನೋಜ್ ಕಡಬ ನಿರೂಪಿಸಿದರು. ಪ್ರಕಾಶ್ ಸುವರ್ಣ ಧನ್ಯವಾದವಿತ್ತರು.

 14PADU-1

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ