ಬುಧವಾರ, ಜುಲೈ 24, 2013

ಸಮುದ್ರದಲೆ ಮನೆಗೆ ಅಪ್ಪಳಿಸುತ್ತಿದ್ದರೂ ಮನೆ ಬಿಡದ ನಿವಾಸಿಗಳು ಎರ್ಮಾಳಿನ ಕಡಲು ಕೊರೆತ ಪ್ರದೇಶಕ್ಕೆ ಮಾಜಿ ಶಾಸಕರ ಭೇಟಿ

ವರದಿ-ಸುರೇಶ್ ಎರ್ಮಾಳ್
ಎರ್ಮಾಳು ತೆಂಕ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಮುದ್ರ ರೌದ್ರಾವತಾರ ತಾಳಿ, ಅದರ ಅಲೆಗಳು ಸ್ಥಳೀಯ ನಿವಾಸಗಳ ಮಹಡಿಗೆ ಅಪ್ಪಳಿಸುತ್ತಿದ್ದರೂ ಕ್ಯಾರೇ ಅನ್ನದ ಸ್ಥಳೀಯರು ಜಿಲ್ಲಾಢಳಿತದ ಸೂಚನೆಯನ್ನು ಲೆಕ್ಕಿಸದೆ ಅದೇ ಮನೆಯಲ್ಲಿ ಜೀವದ ಹಂಗು ತೊರೆದು ಜೀವಿಸುತ್ತಿದ್ದ ಪ್ರದೇಶಕ್ಕೆ ಕಾಪು ಕ್ಷೇತ್ರದ ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್ ಭೇಟಿ ನೀಡಿದ್ದಾರೆ.
23pdb-1 22
ಈ ಸಂದರ್ಭ ಮಾತನಾಡಿದ ಮೆಂಡನ್ ಇಲ್ಲಿನ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳಲ್ಲಿ ಮಾತನಾಡಿದ್ದೇನೆ, ಮನೆ ಅಪಾಯದಂಚಿನಲ್ಲಿರುವ ಪ್ರದೇಶಕ್ಕೆ ಪ್ರಥಮ ಆಧ್ಯತೆ ನೀಡಿ ಕಲ್ಲು ಹಾಕಲು ಸೂಚಿಸಲಾಗಿದೆ.
[youtuber youtube='http://www.youtube.com/watch?v=XwoNF5mRyNE&feature=c4-overview&list=UUs0k8vSBwTqzHjMqn8PYrzQ']
ಬಳಿಕ ರಸ್ತೆ ಕಡಿತ ಕೊಳ್ಳುವ ಪ್ರದೇಶವನ್ನು ಪರಿಗಣಿಸಿ ಕಲ್ಲು ಹಾಕುವ ಪ್ರಕೃಯೆ ನಡೆಸಲಾಗುವುದು. ಈ ಸಮುದ್ರ ಕೊರೆತಕ್ಕೆ ಕಾರಣವಾಗಿರುವ ಯುಪಿಸಿ‌ಎಲ್ ನಿರ್ಮಿತ ಬ್ರೇಕ್‌ವಾಟರ್ ತೆರವು ಕಾರ್ಯ ಇದೀಗ ಅಸಾಧ್ಯವಾಗಿದ್ದರಿಂದ ಮಳೆಗಾಲದ ಬಳಿಕ ಅದನ್ನು ತೆರವುಗೊಳಿಸುವ ಭರವಸೆ ನೀಡಿದ್ದಾರೆ ಎಂಬುದಾಗಿ ಅವರು ತಿಳಿಸಿದ್ದಾರೆ.
23pdb-2
ಸ್ಥಳೀಯ ಮೀನುಗಾರ ಮುಖಂಡರೋರ್ವರು ಹೇಳುವಂತ್ತೆ ಈ ಜನವಿರೋಧಿ ಕಂಪನಿಯಾದ ಯುಪಿಸಿ‌ಎಲ್ ಕಳೆದ ನಾಲ್ಕು ವರ್ಷಗಳ ಹಿಂದೆ ಸಮುದ್ರದಲ್ಲಿ ನಿರ್ಮಾಣ ಮಾಡಿದ ಈ ಬ್ರೇಕ್‌ವಾಟರ್ ಕಾಮಗಾರಿಯಿಂದಾಗಿ ಸಮುದ್ರ ತೀರದ ಹತ್ತಾರು ಕುಟುಂಬಗಳು ಬಹಳಷ್ಟು ಸ್ಥಳ ಹಾಗೂ ಮೂನ್ನೂರಕ್ಕೂ ಅಧಿಕ ತೆಂಗಿನ ಮರಗಳು, ಮೀನುಗಾರಿಕಾ ರಸ್ತೆಯನ್ನೂ ಕಳಕೊಳ್ಳುವಂತ್ತಾಗಿದ್ದು ಇದೀಗ ಹತ್ತಕ್ಕೂ ಅಧಿಕ ಮನೆಗಳು ಸಮುದ್ರ ಪಾಲಾಗುವ ಸಾಧ್ಯತೆ ಇದೆ.ಅಲ್ಲದೆ ಈ ಕಡಲು ಕೊರೆತ ಬಾಧಿತ ಪ್ರದೇಶದಲ್ಲಿ ತೀರ ಸಮುದ್ರ ಮೀನುಗಾರಿಕೆ ಮಾಡಿ ಸುಮಾರು ೧೫೦ ಕುಟುಂಬಗಳು ಜೀವಿಸುತ್ತಿದ್ದು ಇದೀಗ ಅದಕ್ಕೂ ಈ ಸಮುದ್ರಕ್ಕೆ ಹಾಕಿದ ಕಲ್ಲುಗಳು ತಡೆಯುಂಟು ಮಾಡಿದೆ.
ಈ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ ಯುಪಿಸಿ‌ಎಲ್ ಬ್ರೇಕ್‌ವಾಟರ್ ಕಾಮಗಾರಿ ಎಂಬುದು ಎಲ್ಲರ ಗಮನಕ್ಕೂ ಬಂದಿದೆ ಆದರೆ ಅದನ್ನು ತೆರವುಗೊಳಿಸಲು ದಿನಕ್ಕೂಂದು ಕಾರಣ ಹೇಳಿ ನಮ್ಮನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ. ವಿವಿಧ ರಾಜಕೀಯ ಪಕ್ಷಗಳ ದಂಡು ಈ ಪ್ರದೇಶಕ್ಕೆ ಬಂದು ನಮಗೆ ಭರವಸೆ ನೀಡುತ್ತಿದ್ದಾರೆಯೇ ವಿನಃ ಯಾವುದೇ ಪ್ರಗತಿ ಕಾಣುತ್ತಿಲ್ಲ. ಒಂದು ಪಕ್ಷವನ್ನು ಮತ್ತೊಂದು ಪಕ್ಷ ಮತ್ತೊಂದು ಪಕ್ಷವನ್ನು ಇನ್ನೊಂದು ಪಕ್ಷ ದೂರುವುದು ನಡೆಸುತ್ತಿದ್ದು ಮಾಡುತ್ತಿರುವುದರಿಂದ ಇಲ್ಲಿ ಕಡಲು ಕೊರೆತ ಪ್ರದೇಶಕ್ಕೆ ಬರುತ್ತಿದ್ದ ಕಲ್ಲಿನ ಪ್ರಮಾಣವು ಕಡಿಮೆಯಾಗುತ್ತಿದೆ. ದಯಮಾಡಿ ಯಾವುದೇ ಪ್ರಚಾರದ ದೃಷ್ಠಿಯಿಂದಲಾಗಲೀ ರಾಜಕೀಯ ಲಾಭಕ್ಕಾಗಲೀ ನಮ್ಮನ್ನು ಬಲಿ ಪಶುಗಳನ್ನಾಗಿ ಮಾಡಬೀಡಿ ಎಂಬುದಾಗಿ ಅವರು ವಿನಂತಿಸಿದ್ದಾರೆ.
ಮೂರು ಕಡೆಗಳಲ್ಲಿ ಮೀನುಗಾರಿಕ ರಸ್ತೆ ಕಡಿತ..
ಪಡುಬಿದ್ರಿಯ ಬೇಂಗ್ರೆ ಬಾಲಪ್ಪ ಗುರಿಕಾರ ಮನೆಯ ಸಮೀಪ ಮೀನುಗಾರಿಕಾ ರಸ್ತೆಗೆ ಹಾನಿ ಸಂಭವಿಸಿದೆ. ಎರ್ಮಾಳು ತೆಂಕ ಗ್ರಾ.ಪಂ. ವ್ಯಾಪ್ತಿಯ ತೊಟ್ಟಂ ಬಬಬ್ಬರ್ಯ ಕೊಂಬು ಹಾಗೂ ಮೀನುಗಾರಿಕಾ ಮುಖ್ಯ ರಸ್ತೆ ಸಂದಿಸುವ ಸ್ಥಳದಲ್ಲೋ ಸಂಪರ್ಕ ಕಡಿತ ಗೊಂಡಿದೆ.
ಜಿಲ್ಲಾಧಿಕಾರಿ ವಿರುದ್ಧ ಆಕ್ರೋಶ..
ಮನೆಗಳು ಸಮುದ್ರ ಪಾಲಾಗುವ ಸಾದ್ಯತೆ ಇದ್ದು, ಕೇವಲ ಎಸಿ ಕೋಣೆಯಲ್ಲಿದ್ದುಕೊಂಡು ನಮ್ಮನ್ನು ಮನೆ ಖಾಲಿ ಮಾಡಲು ಸೂಚಿಸಿರುವ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುವ ಸೌಜನ್ಯವನ್ನೂ ತೋರಿಸದಿರುವುದು ನಮಗೆ ಬಾರೀ ನೋವು ತಂದಿದೆ. ಮತ್ತೊಂದು ಕಡೆಯಿಂದ ಕಲ್ಲುಗಳು ಬಾರದೆ ಸಮುದ್ರ ಕೊರೆತ ಬಹಳಷ್ಟು ವೇಗ ಪಡೆದುಕೊಂಡಿದ್ದು. ಸಚಿವರು ಸೋಮವಾರ ಬೇಟಿ ನೀಡದ ವೇಳೆ ಸ್ಥಳದಲ್ಲಿದ್ದ ಗುತ್ತಿಗೆದಾರರೋರ್ವರು ೫೦ ಲೋಡು ಕಲ್ಲು ಈ ದಿನ ಹಾಕುವುದಾಗಿ ಸಚಿವರಿಗೆ ಭರವಸೆ ನೀಡಿದ್ದರಾದರೂ, ಕೇವಲ ೧೨ ಲೋಡು ಮಾತ್ರ ಹಾಕಿದ್ದಾರೆ. ಕೇಳಿದರೆ ಅವರ ವೈಯಕ್ತಿಕ ಸಮಸ್ಯೆಗಳ ಪಟ್ಟಿಯನ್ನು ನಮ್ಮ ಮುಂದಿಡುತ್ತಿದ್ದಾರೆ ಎಂಬುದಾಗಿ ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಮಾಜಿ ಶಾಸಕರೊಂದಿಗೆ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಶ್ರೀಧರ ಬಂಗೇರ, ಸತೀಶ್ ಸಾಲ್ಯಾನ್, ಧರ್ಮರಾಜ್, ಸುರೇಶ್ ಕಾಂಚನ್, ದಾಮೋಧರ ಸುವರ್ಣ ಇದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ