ಶನಿವಾರ, ಜುಲೈ 13, 2013

ಪಡುಬಿದ್ರಿ ಮೆಸ್ಕಾಂ ಇಲಾಖಾ ನಿರ್ಲಕ್ಷ್ಯ.. ಗ್ರಾ.ಪಂ. ಮುಂಭಾಗದಲ್ಲೇ ತುಂಡಾದ ಅಪಾಯಕಾರಿ ವಿದ್ಯುತ್ ಕಂಬ

ವರದಿ-ಸುರೇಶ್ ಎರ್ಮಾಳ್ಮೆಸ್ಕಾಂ ಇಲಾಖಾ ಬೇಜವ್ದಾರಿಗೆ ಅನಾಹುತಗಳು ನಡೆದಿರುವುದು ಒಂದೆರಡಲ್ಲ.. ಇದೀಗ ಪಡುಬಿದ್ರಿ ಗ್ರಾ.ಪಂ. ಮುಂಭಾಗದಲ್ಲೇ ತುಂಡಾದ ಕಂಬವೊಂದನ್ನು ಬದಲಿಸುವುದಕ್ಕಾಗಿ ಬುಡ ಅಗೆದು ಹೋದ ಮೆಸ್ಕಾಂ ಹತ್ತು ದಿನ ಕಳೆದರೂ ಇತ್ತ ಕಡೆ ಬಾರದೆ ನಿರ್ಲಕ್ಷ್ಯವಹಿದ್ದು, ಇದೀಗ ಕಂಬವೇನಾದರೂ ತುಂಡಾಗಿ ಬಿದ್ದರೆ ಬಹಳಷ್ಟು ಅಪಾಯ ಸಂಭವಿಸುವ ಸಾಧ್ಯತೆ ನಿಶ್ಚಲವಾಗಿದೆ.
[youtuber youtube='http://www.youtube.com/watch?v=TBq9KOyNvdw&feature=c4-overview&list=UUs0k8vSBwTqzHjMqn8PYrzQ']
ರಾಷ್ಟ್ರೀಯ ಹೆದ್ದಾರಿಯ ಬುಡದಲ್ಲೇ ಇರುವ ಈ ಕಂಬ ಪಡುಬಿದ್ರಿ ಗ್ರಾಮ ಪಂಚಾಯತಿಯ ಮುಂಭಾಗದಲ್ಲೇ ಇದೆ. ಮೆಸ್ಕಾಂ ನಿರ್ಲಕ್ಷ್ಯ ಸರಿ..  ಆದರೆ ದಿನನಿತ್ಯ ಗ್ರಾಮ ಪಂಚಾಯತಿಗೆ ಆ ಕಂಬದ ಬುಡದಿಂದಲೇ ಸಾಗುವ ಗ್ರಾ.ಪಂ. ಸದಸ್ಯರ ಗಮನಕ್ಕೂ ಬಾರದಿರುವುದು ಅಶ್ಚರ್ಯವೇ ಸರಿ. ಈ ಕಂಬ ಉರುಳಿ ಬಿದ್ದರೆ ಇದರಿಂದ ಸಂಭವಿಸುವ ಅನಾಹುತ ಊಹಿಸಲೂ ಅಸಾಧ್ಯ, ಕಾರಣ ಹೆದ್ದಾರಿಗೆ ಅತೀ ಸಮೀಪ ವಿರುವ ಕಂಬ ಇದಾಗಿದೆ. ವಾಹನ ದಟ್ಟನೆ ಒಂದು ಕಡೆಯಾದರೆ ದಿನವೊಂದಕ್ಕೆ ಈ ಕಂಬದ ಬಳಿಯಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಹಿತ ಸಾರ್ವಜನಿಕರು ಸಾವಿರಕ್ಕೂ ಮಿಕ್ಕಿ ಸಂಚರಿಸುತ್ತಾರೆ.
ಕಂಬದ ಬುಡ ಅಗೆದು ಹೋದ ಇಲಾಖೆಗೆ ಇದನ್ನು ಸಂಪೂರ್ಣ ಗೊಳಿಸ ಬೇಕೆಂಬ ಸಣ್ಣ ವಿಚಾರವು ತಿಳಿಯದೇ..!   ಇಲ್ಲ ತಿಳಿದೂ ಆಗುದಾಗಲಿ ಎಂಬ ನಿರ್ಧಾರಕ್ಕೆ ಬಂದಿದೆಯೇ ಇಲಾಖೆ.. ಎಂಬುದು ಸಾರ್ವಜನಿಕರ ಪ್ರಶ್ನೆ. ವಾಹನವೂಂದರ ಅಪಘಾತದಿಂದ ಈ ಕಂಬ ಜಖಂಗೊಂಡಿದ್ದು. ಆ ಸಂದರ್ಭ ವಾಹನ ಮಾಲಿಕರಿಂದ ಇಲಾಖೆ ಸಂಪೂರ್ಣ ಖರ್ಚು ವೆಚ್ಚವನ್ನು ಪಡೆದು ಕೊಂಡು ತಿಂಗಳು ಕೆಲವು ಉರುಳಿದ್ದರೂ ಆ ಕಂಬವನ್ನು ಬದಲಿಸುವ ಗೌಜಿಗೆ ಹೋಗದೆ ನಿರ್ಲಕ್ಷ್ಯ ವಹಿಸಿದ್ದು, ಇದೀಗ ಕೆಲಸ ಆರಂಭಿಸುವ ಸೂಚನೆ ನೀಡಿತ್ತಾದರೂ ಅರ್ಧದಲ್ಲೇ ಬಿಟ್ಟು ಹೋಗಿದೆ ಮೆಸ್ಕಾಂ ಇಲಾಖೆ. ಇಂದೋ ನಾಳೆಯೋ ತುಂಡಾಗಿ ಬೀಳಲಿರುವ ಕಂಬದ ಬುಡಭಾಗ ಅಗೆದು ಬಿಟ್ಟು ಹೋದ ಇಲಾಖಾ ನಿರ್ಲಕ್ಷ್ಯ  ಕ್ಷಮೆಗೆ ಅರ್ಹವಾಗಿರುವುದಲ್ಲ, ಇದರಿಂದ ಅನಾಹುತ ಸಂಭವಿಸಿದರೆ ಇದರ ಪೂರ್ಣ ಜವಾಬ್ದಾರಿ ಇಲಾಖೆ ವಹಿಸ ಬೇಕಾದೀತು ಎಂಬುದಾಗಿ ಸಾರ್ವಜನಿಕರು ಎಚ್ಚರಿಸಿದ್ದಾರೆ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ