ಗುರುವಾರ, ಜುಲೈ 25, 2013

ಮಾರಿ ಮಟನ್‌ನಲ್ಲಿ ಪುರಿ: ಸ್ಟಾಲ್‌ನಲ್ಲಿ ಕಿರಿಕಿರಿ

ಉಡುಪಿ: ಮಾರಿ ಹಬ್ಬದ ಮಟನ್‌ನಲ್ಲಿ ಹಳೆಯ ಮಾಂಸವನ್ನು ಮಿಕ್ಸ್ ಮಾಡಿದ ಮಟನ್ ಸ್ಟಾಲ್ ವಿರುದ್ಧ ಮೀನುಗಾರರು ಅಕ್ರೋಶ ವ್ಯಕ್ತಪಡಿಸಿ ಕೇಸು ದಾಖಲಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಆದಿ ಉಡುಪಿ ಮಾರ್ಕೇಟ್‌ನಲ್ಲಿ  ಕಾರ್ಯಾಚರಿಸುತ್ತಿರುವ ಮಟನ್ ಸ್ಟಾಲ್ ಮಾಲಕನ ವಿರುದ್ಧ ಹರಿಹಾಯ್ದ ಮೀನುಗಾರರು ಅಂಗಡಿ ಮಾಲಕನ ವಿರುದ್ಧ ಕೇಸು ದಾಖಲಿಸಿದ್ದಾರೆ.
IMG_0310
ಕಾಪು ಮಾರಿಹಬ್ಬದಲ್ಲಿ ಮುಂಬರುವ ಮೀನುಗಾರಿಕಾ ಸೀಸನ್ ಉತ್ತಮವಾಗಿರಲಿ ಎಂದು ಪ್ರಾರ್ಥಿಸಿ ಮಾರಿಹಬ್ಬಕ್ಕೆ ಕುರಿಯನ್ನು ನೀಡುವುದು ನಡೆದಕೊಂಡ ಬಂದ ಪದ್ಧತಿ.
[youtuber youtube='http://www.youtube.com/watch?v=SoOYXCMvO7Y&feature=c4-overview&list=UUs0k8vSBwTqzHjMqn8PYrzQ']
ಎಂದಿನಂತೆ ಒಂದಿಷ್ಟು ಮೀನುಗಾರರ ತಂಡ ಕಾಪು ಮಾರಿಗುಡಿಯಲ್ಲಿ ಕುರಿಯನ್ನು ಅರ್ಪಿಸಿ ಕುರಿಯನ್ನು ಆದಿ ಉಡುಪಿ ಮಟನ್‌ಸ್ಟಾಲ್ ತಂದು ಕೊಡುವುದು ಪದ್ಧತಿ. ಮಟನ್ ಸ್ಟಾಲ್ ಮಾಲಕ ಇದಕ್ಕೊಂದಿಷ್ಟು ಮಟನ್ ಮಾಂಸವನ್ನು ಮಿಕ್ಸ್ ಮಾಡಿ ಕೆಜಿ ಲೆಕ್ಕದಲ್ಲಿ ಪ್ಯಾಕ್ ಮಾಡಿ ಮೀನುಗಾರರ ತಂಡಕ್ಕೆ ಕೊಡುವುದು ಪದ್ಧತಿ.
IMG_0315
ಆದರೆ ಮಾಂಸ ಮಿಕ್ಸ್ ಮಾಡುವ ಸಂದರ್ಭದಲ್ಲಿ ಎಡವಟ್ಟು ನಡೆದುಹೋಗಿದೆ. ಲಾಭದ ಆಸೆಗಾಗಿ ಮಟನ್ ಸ್ಟಾಲ್ ಮಾಲಕ  ಹಳೆಯ ಮಾಂಸವನ್ನು ಮಿಕ್ಸ್ ಮಾಡಿ ಪ್ಯಾಕ್ ಮಾಡಿದ್ದು ಮೀನುಗಾರರ ಅಕ್ರೋಶಕ್ಕೆ ಕಾರಣವಾಗಿದೆ.
IMG_0318
ಆದಿ ಉಡುಪಿ ಮಟನ್ ಸ್ಟಾಲ್ ಎದುರುಗಡೆ ಜಮಾಯಿಸಿದ ಮೀನಗಾರರು ಮಾಂಸವನ್ನು ಮಟನ್ ಸ್ಟಾಲ್‌ಗೆ ತಂದು ಸ್ಟಾಲ್ ಮಾಲಕನಿಗೆ ಚೆನ್ನಾಗಿ ತದುಕಿದ್ದಾರೆ. ಮಟನ್ ಸ್ಟಾಲ್ ಮಾಲಕ ಮಾಂಸದ ಬಾಬ್ತು ಹಣವನ್ನು ವಸೂಲಿ ಮಾಡಿ ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಿಸುವಷ್ಟರಲ್ಲಿ ಸ್ಟಾಲ್ ಮಾಲಕ ಪರಾರಿಯಾಗಿದ್ದಾನೆ.
IMG_0317
IMG_0308

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ