ಸೋಮವಾರ, ಜುಲೈ 15, 2013

ಮೂಡಬಿದ್ರಿ ಜೈನ ಬಸದಿ ಕಳ್ಳತನ ಪ್ರಕರಣ ,ಇಬ್ಬರ ಬಂಧನ ಬಹುಮೌಲ್ಯದ ವಿಗ್ರಹಗಳು ಪತ್ತೆ

ಮೂಡುಬಿದಿರೆ, ಜು.13: ದ.ಕ.ಜಿಲ್ಲೆಯ ಮಂಗಳೂರು ತಾಲೂಕಿನ ಮೂಡುಬಿದಿರೆಯ ಜೈನ ಬಸದಿಗಳಿಂದ ಕಳವಾಗಿದ್ದ ಬಹುಮೌಲ್ಯದ ವಿಗ್ರಹ ಪತ್ತೆಯಾಗಿವೆ. ಈ ಸಂಬಂಧ ಕೋಲಾರದಲ್ಲಿ ಇಬ್ಬರನ್ನು ಬಂಧಿಸಿರುವ ಪೊಲೀಸರು ವಿಗ್ರಹಗಳನ್ನು ವಶಪಡಿಸಿಕೊಂಡಿದ್ದಾರೆ.Photo0061

ಆದರೆ, ಇನ್ನುಳಿದ ವಿಗ್ರಹಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಜು.5ರಂದು ಸಿದ್ಧಾಂತ ಪ್ರತಿಮಾ ದರ್ಶನ ಬಸದಿಯಿಂದ ವಿಗ್ರಹವನ್ನು ಕಳವು ಮಾಡಲಾಗಿತ್ತು. ಇದರ ಜೊತೆಗೆ ಬಸದಿಯಲ್ಲಿದ್ದ ಚಿನ್ನ, ಬೆಳ್ಳಿ ಪಂಚಲೋಹ ವಿಗ್ರಹಗಳು ನಾಪತ್ತೆಯಾಗಿತ್ತು.
ಈ ಸಂಬಂಧ ಪೊಲೀಸ್ ಆಯುಕ್ತ ಮನೀಶ್ ಕರ್ಬೀಕರ್ ಮಾರ್ಗದರ್ಶನದಲ್ಲಿ ಎಸಿಪಿ ರವಿ ಕುಮಾರ್ ನೇತೃತ್ವದ ತನಿಖಾ ತಂಡ ಕಾರ್ಯನಿರ್ವಹಿಸಿದೆ. ಉಡುಪಿ ಹಾಗೂ ಕಾರ್ಕಳದಲ್ಲಿ ನಡೆದ ಸರಣಿ ಜ್ಯುವೆಲ್ಲರಿ ಕಳ್ಳತನ ಪ್ರಕರಣಗಳಲ್ಲಿ ಗ್ಯಾಸ್ ಕಟ್ಟರ್ ಬಳಕೆಯಾಗಿತ್ತು. ಈ ಪ್ರಕರಣದಲ್ಲೂ ಗ್ಯಾಸ್ ಕಟ್ಟರ್ ಬಳಸಲಾಗಿದೆ. ಬಸದಿಯ ಹಿಂಬದಿಯಿಂದ ನುಗ್ಗಿ ವಿಗ್ರಹಗಳನ್ನು ಕಳ್ಳತನ ಮಾಡಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆPhoto0058

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ