ಶುಕ್ರವಾರ, ಜುಲೈ 19, 2013

ಉಪವಾಸ: ಪವಿತ್ರ ಆಚರಣೆಗೊಂದು ರಂಝಾನ್ ಮಾದರಿ...

ಮುಹಮ್ಮದ್ ರೀಯಾಜ್ ಹಮೀದ್, ಕಟಪಾಡಿ
ರಂಝಾನ್: ರಂಝಾನ್ ತಿಂಗಳು ಆಗಮಿಸಿದರೆ ಸ್ವರ್ಗದ ಬಾಗಿಲುಗಳು ತೆರೆಯಲ್ಪಡುತ್ತದೆ. ನರಕದ ಕವಾಟಗಳು ಮುಚ್ಚಲ್ಪಡುತ್ತದೆ. ಹಾಗೂ ಪಿಶಾಚಿಗಳನ್ನು ಸಂಕೋಲೆಗಳಿಂದ ಬಂಧಿಸಲ್ಪಡುತ್ತದೆ. ಭೂಮಿಯಲ್ಲಿರುವ ಎಲ್ಲಾ ಪಾಪಕರ್ಮಗಳನ್ನು ದೂರ ಮಾಡಿದ ಅನುಭವವು ಈ ಸಂದರ್ಭದಲ್ಲಿ  ನಮಗಾಗುತ್ತದೆ. ಹಿಂದಿನ ಜನ್ಮದಲ್ಲಿ ಮಾನವ ಮಾಡಿದ  ಪಾಪಕರ್ಮಗಳು ರಂಝಾನ್ ಹಬ್ಬದ ಪವಿತ್ರ ಆಚರಣೆಯಿಂದ ದೂರವಾಗುತ್ತದೆ.
111 copy

ಹಬ್ಬದ ಆಚರಣೆಯಲ್ಲಿಯೂ ಅಲ್ಲಾಹನಲ್ಲಿರುವ ನಂಬಿಕೆ ಮತ್ತು ನಿಷ್ಠೆ  ಇಲ್ಲಿ ಪ್ರಮುಖವಾಗುತ್ತದೆ. ರಂಝಾನ್ ತಿಂಗಳಲ್ಲಿ ಭಕ್ತಿಯಿಂದ ಅಲ್ಲಾಹನನ್ನು ಪ್ರಾರ್ಥಿಸಿದರೆ ಹಿಂದಿನ ಜನ್ಮದಲ್ಲಿ ಮಾಡಿದ ಪಾಪಕರ್ಮಗಳನ್ನು ಅಲ್ಲಾಹ ಮನ್ನಿಸುತ್ತಾನೆ ಅಂತ ನಂಬಿಕೆ ಇದೆ. ರಂಝಾನ್ ತಿಂಗಳ ಉಪವಾಸ ಎನ್ನುವುದು ಇಂದ್ರಿಯ ನಿಗ್ರಹದ ಕೇಂದ್ರ ಬಿಂದು.ಹಸಿವು ಮತ್ತು ಬಾಯಾರಿಕೆ ಇಲ್ಲದೇ ಕೂಡಾ ಜೀವಿಸ ಬಲ್ಲ ಎಂಬುವುದನ್ನು ಕೂಡಾ ಇದು ಸೂಚಿಸುವುತ್ತದೆ .
nn
ಮನುಷ್ಯನ ಸತ್ಕರ್ಮಗಳಿಗೆಲ್ಲಾ ಹತ್ತರಿಂದ ಎಪ್ಪತ್ತು ಪಟ್ಟು ಪ್ರತಿಫಲ ದೊರೆಯುತ್ತದೆಂದೂ ಉಪವಾಸಕ್ಕೆ ಅಲ್ಲಾಹನು ನೀಡುವ ಪ್ರತಿಫಲಕ್ಕೆ ಯಾವುದೇ ಲೆಕ್ಕವಿಲ್ಲವೆಂದೂ ತಿಳಿಸುವ ಹಲವಾರು ಪ್ರವಾದಿ ವಚನಗಳಿವೆ. ಉಪವಾಸದ ಈ ಮಹತ್ವವು ಉಪವಾಸಿಗನು ಮಾಡುವ ಕರ್ಮಗಳಲ್ಲೂ ದೃಶ್ಯವಾಗಬಹುದು. ರಂಝಾನಲ್ಲಿ ರಾತ್ರಿ ನಮಾಝ್ ನಿರ್ವಹಿಸುವವರ ಕಳೆದು ಹೋದ ಪಾಪಗಳನ್ನು ಮನ್ನಿಸಲ್ಪಡುತ್ತದೆ . ಇತರ ಕಾಲಗಳ ರಾತ್ರಿ ನಮಾಝಿಗಿಂತ ರಂಝಾನ್ ತಿಂಗಳ ರಾತ್ರಿ ನಮಾಝಿಗೆ ಹೆಚ್ಚು ಪ್ರತಿಫಲ ಇದೆ. ಆದ್ದರಿಂದ ರಂಝಾನಿನಲ್ಲಿ ಮಾಡುವ ಕರ್ಮಗಳಿಗೆ ಹೆಚ್ಚು ಪ್ರತಿಫಲವಿದೆ.
images555
ಪವಿತ್ರ ಕುರಾನ್ ಹೇಳುತ್ತದೆ : ರಂಝಾನಿನ ವಿಷೇಶತೆಯೆಂದರೆ ಅದು ದೈವೀಕ ಗ್ರಂಥ ಪವಿತ್ರ ಕುರಾನ್ ಅವತ್ತಿರ್ಣವಾದ ತಿಂಗಳಾಗಿದೆ. ಜಗತ್ತಿನಾದ್ಯಂತ ಓದಲ್ಪಡುವ ಗ್ರಂಥ ಮನುಷ್ಯನ ಮನಸ್ಸಿನಲ್ಲಿ ಹೇಳುವ ನಾನು ಯಾರು? ಎಲ್ಲಿಂದ ಬಂದಿದ್ದೇನೆ?  ನನಗೆಲ್ಲಿಗೆ ಹೋಗ ಬೇಕಾಗಿದೆ? ನನ್ನ ಜೀವನದ ಉದ್ದೇಶವೇನು? ನನ್ನ ಜೀವನದ ಸನ್ಮಾರ್ಗ ಯಾವುದು? ಎಂಬ ಪ್ರಶ್ನೆಗಳಿಗೆ ಈ ದಿವ್ಯ ಗ್ರಂಥ ಸಮರ್ಥ ಉತ್ತರವನ್ನು ನೀಡುತ್ತದೆ. ಜೀವನಕ್ಕೆ ಮಾರ್ಗದಶರ್ಕ ಕ್ಯೆ ಪಿಡಿಯಾಗಿ ಮುನ್ನಡೆಸುತ್ತದೆ. ಈ ಗ್ರಂಥದಂತೆ ಜೀವನವನ್ನು ಸಾಗಿಸಿದ ಜನರು ಇಹಲೋಕದಲ್ಲೂ ಯಶಸ್ವೀ ಜೀವನ ನಡೆಸಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ.
ramadanl
ಝಕಾತ್
ಇಸ್ಲಾಮ್ ಹೇಳುತ್ತದೆ, "ಖರ್ಚು ಮಾಡುವ ವ್ಯಕ್ತಿ ಬಡವನಾಗಲಾರ  ಬದಲಾಗಿ ಅವನ ಸಂಪತ್ತು ಹೆಚ್ಚುತ್ತದೆ ಮತ್ತು ಸಮೃದ್ಧಿ ಉಂಟಾಗುತ್ತದೆ. ಶ್ಯೆತಾನ್ ನಿಮ್ಮನ್ನು ದಾರಿದ್ರ್ಯದಿಂದ ಭಯಭೀತಗೊಳಿಸುತ್ತಾನೆ. ಆದರೆ ಅಲ್ಲಾಹನು ನಿಮಗೆ ತನ್ನ ಕ್ಷಮೆ ಹಾಗೂ ಅನುಗ್ರಹದ ವಚನವನ್ನೀಯುತ್ತಾನೆ. ಅಲ್ಲಾಹನು ಮಹಾವಿಶಾಲನೂ ಸರ್ವಜ್ಞನೂ ಆಗಿರುತ್ತಾನೆ." ಒಬ್ಬ ಸತ್ಯ ವಿಶ್ವಾಸಿಯು ಹಸಿದಿರುವ ಇನ್ನೊಬ್ಬ ಸತ್ಯ ವಿಶ್ವಾಸಿಗೆ ಉಣ ಬಡಿಸಿದರೆ ಅಲ್ಲಾಹನು ಪುನರುತ್ಧಾನ ದಿನ ಆತನಿಗೆ ಸ್ವರ್ಗದ ಆಹಾರವನ್ನು ಉಣಿಸುವನು ಒಬ್ಬ ಸತ್ಯ ವಿಶ್ವಾಸಿಗೆ ನೀರು ಕುಡಿಸಿದರೆ ಅಲ್ಲಾಹನು ಪುನರುತ್ಧಾನ ದಿನ ,ಆತನಿಗೆ ಮುದ್ರೆ ಹಾಕಿರುವ ಅತ್ಯುನ್ನತ ಮಟ್ಟದ ಪಾನೀಯವನ್ನು ಕುಡಿಸುವನು . ಓರ್ವ ಸತ್ಯ ವಿಶ್ವಾಸಿಗೆ  ಉಡಲು ಬಟ್ಟೆಯಿಲ್ಲದ ಒಬ್ಬ ಸತ್ಯ ವಿಶ್ವಾಸಿಗೆ ಬಟ್ಟೆ ಉಡಿಸಿದರೆ, ಅಲ್ಲಾಹನು ಪುನರುತ್ಧಾನ ದಿನ ಆತನಿಗೆ ಸ್ವರ್ಗದ ಪೋಷಕನ್ನು ಉಡಿಸುವನು.
Zakat-ul-Fitr
ಪ್ರವಾದಿ (ಸ) ಹೇಳಿದ್ದಾರೆ " ಲಾಇಲಾಹ ಇಲ್ಲಲ್ಲಾಹು ವಹ್ದಹು ಲಾ ಶರೀಕಲಹು ಲಹುಲ್ ಮುಲ್ಕು ವಲಹುಲ್ ಹಮ್ದು ವಹುವ ಅಲಾ ಕುಲ್ಲಿ ಶ್ಯೆಯ್ಯಿನ್ ಖದೀರ್ ".. 'ಅಲ್ಲಾಹನ ಹೊರತು ಅನ್ಯ ಆರಾಧ್ಯರಿಲ್ಲ .ಆತನು ಏಕನು ,ಆತನಿಗೆ ಸಹಭಾಗಿಗಳಿಲ್ಲ ,ಆತನೇ ಅಧಿಪತಿ ,ಸರ್ವ ಸುತ್ತಿ ಆತನಿಗೆ ,ಅವನ ಜೀವತಂಗೊಳಿಸುತ್ತಾನೆ. ಮತ್ತು ಮರಣಗೊಳಿಸುತ್ತಾನೆ. ಆತನು ಸರ್ವಶಕ್ತನು ಎಂಬ ದಿಕ್ರ್ ಯಾರಾದರೂ ದಿನದಲ್ಲಿ ನೂರು ಬಾರಿ ಜಪಿಸಿದರೆ, ಹತ್ತು ಗುಲಾಮರ ವಿಮೋಚನೆಗೆ ಸಮಾನವಾಗಿದೆ. ಹತ್ತು ಸತ್ಕರ್ಮಗಳನ್ನು ಆತನ ಹೆಸರಲ್ಲಿ ಬರೆಯಲಾಗುತ್ತದೆ. ಆತನ ನೂರ ಕೆಡುಕುಗಳನ್ನು ಅಳಿಸಲಾಗುತ್ತದೆ.
Bangladeshi orphan girls drink water at a Ramadan Iftar, or evening meal to break fast, organized for less privileged children by the Sonargaon hotel in Dhaka, Bangladesh, Wednesday, Sept. 17, 2008. During Ramadan, Muslims abstain from consuming food and drinks from dawn to dusk. (AP Photo/Pavel Rahman)
ವಝೂ
ವಝೂ ನಮಾಝಿನ ಚಾವಿ ಎಂದು ನಮ್ಮ ಪ್ರವಾದಿ ಸ.ಅ.ವ ರವರು ಹೇಳಿದ್ದಾರೆ. ವಝೂ ಎಂದರೆ ಪ್ರಕಾಶ (ಹೊಳಪು) ಎಂದರ್ಥ. ಪಾಪವೆಂಬ ಕತ್ತಲನ್ನು ವಝೂ ನಿವಾರಿಸುತ್ತದೆ. ವಝೂವಿನ ಕಾರಣದಿಂದ ಪಾಪ ನಿವಾರಣೆಯಾಗುವುದೆಂದು ,ಪ್ರತಿಯೊಂದು ಅಂಗಾಗಳನ್ನು ತೊಳೆಯುವಾಗ ಅವುಗಳಿಂದುಂಟಾಗುವ ಪಾಪಗಳು ನೀರಿನೊಂದಿಗೆ ಹರಿದು ಹೋಗುವುದೆಂದೂ ವಝೂ ಮಾಡಿದವನು ಪಾಪಗಳಿಂದ ಶುದ್ಧಿಯಾದವನೆಂದು ನಮ್ಮ ನಬೀ ಮುಹಮ್ಮದ್ ಮುಸ್ತಫ಼ಾ ಸ.ಅ.ಸಲ್ಲಮರು ಹೇಳಿದ್ದಾರೆ. ನಿಯ್ಯತ್ತಿನೊಂದಿಗೆ ಕೆಲವು ಅಂಗಾಗಳಿಗೆ ನೀರು ಉಪಯೋಗಿಸುವುದನ್ನು ವಝೂ ಎನ್ನುತ್ತೇವೆ. ವಝೂ ಮಾಡುವುದು ಪುಣ್ಯಕರವಾದ ಇಬಾದತ್ .ನಮಾಝ್ ಕಡ್ಡಾಯವಾದಾಗಲೇ ವಝೂ ಕಡ್ಡಾಯವಾಯಿತು.
images v BB
ನಮಾಝ್
ಶಾರೀರಿಕ ಆರಾಧನೆಗಳಲ್ಲಿ ಅತ್ಯಂತ ಶ್ರ್‍ಏಷ್ಟವಾದ ಆರಾಧನೆ ನಮಾಝ್ ಆಗಿದೆ. ಸಮಯಕ್ಕೆ ಸರಿಯಾಗಿ ನಮಾಝ್ ನಿರ್ವಹಿಸುವುದು ಸತ್ಕಾರ್ಯಗಳ ಪೈಕಿ ಅತ್ಯತ್ತಮವಾದದ್ದು. ಮುಸ್ಲಿಮನ ಹೊಳಪಾಗಿದೆ ನಮಾಝ್ .ನಮಾಝಿನ ಮಹತ್ವವು ಶರೀರ್‍ಅದಲ್ಲಿ ತಲೆಗೆ ಇರುವ ಸ್ಥಾನ ದಂತಿದೆ. ಅಲ್ಲಾಹನ ತೃಪ್ತಿಗೋಸ್ಕರ ನಮಾಝ್ ನಿರ್ವಹಿಸಿದ ಶರೀರವನ್ನು ಅಲ್ಲಾಹನು ನರಕಕ್ಕೆ ಹರಾಂ ಗೊಳಿಸುತ್ತಾನೆ. ಪರಲೋಕ ಕೆಲಸವನ್ನು ಸಾಧ್ಯವಾದಷ್ಟು ಬೇಗ ಮಾಡಿ ಮುಗಿಸುವುದು ಸಜ್ಜನರ ಲಕ್ಶಣ ವಾಗಿದೆ. ನಮಾಝ್ ನಿರ್ವಹಿಸದವರಿಗೆ ಇಸ್ಲಾಮಿನಲ್ಲಿ ಮಾನ್ಯತೆ (ಗೇಡ್ ಇಲ್ಲ) ಮುಸ್ಲಿಂ ಅಮುಸ್ಲಿಮರನ್ನು ಬೇರೆ ಬೇರೆ ಪ್ರತ್ಯೇಕಿಸುವ ಮಾನದಂಡ ವಾಗಿದೆ ನಮಾಝ್ ಎಂಬ ಹದೀಸ್ ನ ಆಧಾರದಲ್ಲಿ ನಮಾಝ್  ನಿರ್ವಹಿಸದವರು ಕಾಫಿರ್ (ಅಮುಸ್ಲಿಮ್ )ಎಂದು ಹೇಳಿದ ಅನೇಕ ಮಹಾತ್ಮರಿದ್ದಾರೆ.
PATNA-GANDHE MADHAN ME  NAWZAJ ADA KE DWARAN
ನಿಯ್ಯತ್ತ್ ನೊಂದಿಗೆ ಅಲ್ಲಾಹು ಅಕ್ಬರ್ ಎಂಬ ತರ್‍ಭೀರ್‍ಆತುಲ್ ಇಹ್ ರಾಂ ನಿಂದ ಆರಂಭಗೊಂಡು 'ಅಸ್ಸಲಾಂ ಅಲ್ಯೆಕುಂ' ಎಂಬ  ಸಲಾಮಿನಿಂದ ಕೊನೆಗೊಳ್ಳವುದರ ಒಳಗೆ ಕೆಲವು ಮಾತುಗಳು  ಪ್ರವರ್ತನಗಳು ಒಳಗೊಂಡ ಒಂದು ಆರಾಧನೆಯೇ ನಮಾಝ್ .ಮುಸ್ಲಿಮ್ ಎನಿಸಿಕೊಳ್ಳಬೇಕಾದರೆ ನಮಾಝಿನ ನಿಯಮ ನಿಬಂಧನೆಗಳನ್ನು ಕಲಿತು ಕ್ರಮಬದ್ಧವಾಗಿ ನಿರ್ವಹಿಸಿದರೆ ಮಾತ್ರ ಅಲ್ಲಾಹನ ಬಳಿ ಅದು ಸ್ವೀಕರಿಸಲ್ಪಡುವುದು...
ಸೀಮಾ ಖಾನ್, ಕಾಪು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ