ಸೋಮವಾರ, ಜುಲೈ 15, 2013

ಜಾತಿಯ ಟೌನ್‌ಶಿಪ್‌ಗಳಿಗೆ ಬಾಂಬ್ ಹಾಕಿ : ದೇವನೂರು

ಉಡುಪಿ:ಜಾತಿಯ ಆಧಾರದ ಮೇಲೆ ಟೌನ್‌ಶಿಪ್ ನಿರ್ಮಾಣ ಮಾಡ ಹೊರಟವರ ಮೇಲೆ ಜೀವಹಾನಿಯಾಗದಂತ್ ಬಾಂಬ್ ಹಾಕಬೇಕು ಎಂದು ಇನಾಮ್‌ದಾರ್ ಪ್ರಶಸ್ತಿ ವಿಜೇತ ಖ್ಯಾತ ದಲಿತ ಮತ್ತು ಬಂಡಾಯ ಸಾಹಿತಿ ದೇವನೂರು ಮಹಾದೇವ  ಗುಡುಗಿದ್ದಾರೆ.ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಮತ್ತು ಎಂಜಿ‌ಎಂ ಕಾಲೇಜು ವತಿಯಿಂದ ಉಡುಪಿಯಲ್ಲಿ ನಡೆದ ದೇವನೂರು ಅವರೊಂದಿಗೆ ಒಂದು ಸಂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
[youtuber youtube='http://www.youtube.com/watch?v=gVVmZFdM-iQ&feature=c4-overview&list=UUs0k8vSBwTqzHjMqn8PYrzQ']
ರಾಜ್ಯದ ಎರಡು ಜಿಲ್ಲೆಗಳಲ್ಲಿ ಜಾತೀಯ ಆಧಾರದ ಮೇಲೆ ಟೌನ್‌ಶಿಪ್ ನಿರ್ಮಾಣವಾಗುತ್ತಿದೆ. ಲಿಂಗಾಯತ ಮತ್ತು ಬ್ರಾಹ್ಮಣ ಸಮಾಜದವರಿಗೆ ಮನೆ ನಿರ್ಮಾನಕ್ಕೆ ಟೌನ್‌ಶಿಪ್ ಮೂಲಕ ಜಾಗವನ್ನು ನೀಡಲಾಗುತ್ತಿದೆ. ಜಾತಿಯ ಹೆಸರಲ್ಲಿ ಕೆಲಸ ಮಾಡುತ್ತಿರುವ ಇವರು ತಮ್ಮ ಕೆಲಸವನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವುದು ಖೇದಕರ. ಜಾತಿಯ  ಆಧಾರದ ಮೇಲೆ ಮಾಡುತ್ತಿರುವ ಅನಾಹುತಕ್ಕೆ ಕಡಿವಾಣ ತೊಡಿಸಿ ನವ ಭಾರತದ ನಿರ್ಮಾಣದ ಕಾರ್ಯ ಆಗಬೇಕಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಸರಕಾರದ ಅನ್ನಭಾಗ್ಯ ಯೋಜನೆಯಿಂದ ಬಡವರು ಸೋಮಾರಿಗಳಾಗುತ್ತಾರೆ ಎಂದು ಟೀಕಿಸುವ ಶ್ರೀಮಂತ ವರ್ಗ ಯಾವುದೇ ಹಿಂಜರಿಕೆಯಿಲ್ಲದೆ ಸರಕಾರ ವಿವಿಧ ಸಬ್ಸಿಡಿಯನ್ನು ನಿರಾತಂಕವಾಗಿ ಅನುಭವಿಸಿ ಕೊಂಕು ಮಾತನಾಡತ್ತಿರುವುದು ವಿಷಾಧನೀಯ ಎಂದು ಅವರು ತಿಳಿಸಿದರು.ಇನಾಮ್‌ದಾರ್ ಪ್ರಶಸ್ತಿಗೆ ಭಾಜನವಾದ ಎದೆಗೆ ಬಿದ್ದ ಅಕ್ಷರ ಕೃತಿಯನ್ನು ಈ ಸಂದರ್ಭ ಬಿಡುಗಡೆಗೊಳಿಸಲಾಯಿತು.ಎಂಜಿ‌ಎಂ ಕಾಲೇಜಿನ ಪ್ರಾಂಶುಪಾಲ ಹಾಲಾ ನಾಯ್ಕ, ಅಭಿನವ ಪ್ರಕಾಶನದ ರವಿ ಕುಮಾರ್, ಭಾಸ್udupi_devanoor_samvada 004ಕರರಾವ್ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ