ಸೋಮವಾರ, ಜುಲೈ 15, 2013

ಕಾಣಿಯೂರು ಪರ್ಯಾಯ ಕಟ್ಟಿಗೆ ಮುಹೂರ್ತಕ್ಕೆ ಚಾಲನೆ

ಉಡುಪಿ: ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾಣಿಯೂರು ಮಠದ ಪರ್ಯಾಯೋತ್ಸವಕ್ಕೆ ಮೂರನೇ  ಮುಹೂರ್ತ ಇಂದು ಜರುಗಿತು. ೨೦೧೪ರಲ್ಲಿ ನಡೆಯುವ ಪರ್ಯಯೋತ್ಸವಕ್ಕೆ ಪೂರ್ವತಯಾರಿಯಾಗಿ ರಥಬೀದಿಯಲ್ಲಿ ರುವ ಕಾಣಿಯೂರು ಮಠದಲ್ಲಿ ಕಟ್ಟಿಗೆ ಮುಹೂರ್ತ  ನಡೆಯಿತು.
[youtuber youtube='http://www.youtube.com/watch?v=dzuoYYS9m-c&feature=c4-overview&list=UUs0k8vSBwTqzHjMqn8PYrzQ']
ಉಡುಪಿ ಪರ್ಯಾಯೋತ್ಸವ ಎಂದರೆ ಆಡಳಿತ ವ್ಯವಸ್ಥೆಯ ಅದ್ಭುತ ಪರಿಕಲ್ಪನೆಯೆಂದೇ ಹೇಳಬೇಕು. ಅನ್ನಬ್ರಹ್ಮನೆಂದು ಕರೆಸಿಕೊಳ್ಳುವ ಉಡುಪಿ ಶ್ರೀ ಕೃಷ್ಣನ ಆರಾಧನೆಯಲ್ಲಿ ಅನ್ನದಾಸೋಹಕ್ಕೆ ವಿಶೇಷ ಮಹತ್ವ. ಹಾಗಾಗಿ ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ ಎರಡು ವರ್ಷದ ಅನ್ನಸಂರ್ಪಣೆಗೆ ಬೇಕಾದ ತಯಾರಿಗಳನ್ನು ಮಾಡಿಕೊಳ್ಳುವುದು ಸಂಪ್ರದಾಯ. ೨೦೧೪ರ ಜನವರಿಯಲ್ಲಿ ನಡೆಯುವ ಕಾಣಿಯೂರು ಮಠದ ಪರ್ಯಾಯ ಮಹೋತ್ಸವಕ್ಕೆ ಬಾಳೆ ಮುಹೂರ್ತ, ಅಕ್ಕಿ  ಮುಹೂರ್ತ ಈಗಾಗಲೇ ನೆರೆವೇರಿದ್ದು  ಕಟ್ಟಿಗೆ ಮುಹೂರ್ತ ಇಂದು ನಡೆಯಿತು. ಅಷ್ಠಮಠಗಳ ರಥಬೀದಿಯಲ್ಲಿ ಕಟ್ಟಿಗೆಗಳನ್ನು  ಹೊತ್ತು ಮೆರವಣಿಗೆಯಲ್ಲಿ ಸಾಗಿ ಕೃಷ್ಣ ಮುಖ್ಯ ಪ್ರಾಣನ ಜೊತೆಗೆ ಅನಂತೇಶ್ವರ, ಚಂದ್ರಮೌಳೀಶ್ವರ ಸನ್ನಿಧಾನದಲ್ಲಿ ವಿಶೇಷ ಪೂಜೆ ನಡೆಸುವ ಮೂಲಕ ಕಟ್ಟಿಗೆ  ಮುಹೂರ್ತಕ್ಕೆ ಚಾಲನೆ ದೊರಕಿತು. ಬಳಿಕ ಕಾಣಿಯೂರು  ಮಠದ ಆವರಣದಲ್ಲಿ  ಕಟ್ಟಿಗೆಗೆ ಪೂಜೆ  ನೆರವೇರಿಸುವುದರ ಮೂಲಕ ಮುಂದಿನ ಪರ್ಯಾಯಕ್ಕೆ ಶುಭ ಕೋರಲಾಯ್ತು.
vlcsnap-2013-07-14-13h56m02s252
ಪರ್ಯಾಯದ ಪೂರ್ವ ತಯಾರಿಗೆ ನಾಲ್ಕು ಪ್ರಮುಖ ಮುಹೂರ್ತಗಳಿದ್ದು ಕೊನೆಯದಾಗಿ ಭತ್ತದ ಮೂಹೂರ್ತ ಮುಂದಿನ ಡಿಸೆಂಬರ್‌ನಲ್ಲಿ ನಡೆಯಲಿದೆ. ಈ ಮೂಲಕ ಕೃಷ್ಣ ನ ಪೂಜೆ ಹಾಗೂ ಆಡಳಿತಕ್ಕೆ ತಯಾರಿ ಮಾಡಿಕೊಳ್ಳುವುದು ಬೇರೆಲ್ಲೂ ಕಾಣ ಸಿಗದ ಅಪೂರ್ವ ಸಂಪ್ರದಾಯ. ಮುಂದಿನ ಪರ್ಯಾಯ ಅವಧಿಯಲ್ಲಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ಶ್ರೀಪಾದರುಪರ್ಯಾಯ ಪೀಠಾರೋಹಣಗೈಯಲಿದ್ದು ಅನ್ನಬ್ರಹ್ಮನ ಕ್ಷೇತ್ರದಲ್ಲಿ ಅನ್ನದಾನಕ್ಕೆ ಕಟ್ಟಿಗೆಯ ಕೊರತೆಯನ್ನು ನೀಗಿಸುವದಾಕ್ಕಾಗಿ ಈ ಮೂಲಕ ಕೃಷ್ಣನ ವಿಶೇಷ ಪೂಜೆ ಮೂಲಕ ಕಟ್ಟಿಗೆ ಮುಹೂರ್ತವನ್ನು ನೆರವೇರಿಸಲಾಗುತ್ತದೆ.
ಪರ್ಯಾಯದ ಅವಧಿಯಲ್ಲಿ ಕಟ್ಟಿಗೆಯ ಕೊರತೆಯಾಗಬಾರದೆಂದು ಈ ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ. ಯಾವ ದೇವಸ್ಥಾನದಲ್ಲೂ ಇರದ ಕೃಷ್ಣನಷ್ಣನ ನಾಡಿನ ವಿಶೇಷವಾದ ಚಲಿಸುವ ಕಟ್ಟಿಗೆ ಮುಂದಿನ ಪರ್ಯಾಯಕ್ಕೆ ಸಜ್ಜಾಗಲಿದೆ.
kattige (3)

vlcsnap-2013-07-14-13h55m55s187

kattige (2)

kattige (1)
kattige

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ