ಶನಿವಾರ, ಜುಲೈ 27, 2013

ಉಚ್ಚಿಲ ಗ್ರಾ.ಪಂ. ವ್ಯಾಪ್ತಿಗೂ ಹರಡಿದ ಕಡಲು ಕೊರೆತ ತೆಂಗಿನ ಮರನಾಶ-ಮೀನುಗಾರಿಕಾ ರಸ್ತೆ ಮನೆಗಳಿಗೂ ದಾಳಿ ಸಂಭವ

ವರದಿ-ಸುರೇಶ್ ಎರ್ಮಾಳ್
ತೆಂಕ ಎರ್ಮಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೀನುಗಾರಿಕಾ ರಸ್ತೆಯನ್ನು ಛಿದ್ರಗೊಳಿಸಿದ ಕಡಲು ಕೊರೆತ ಉಚ್ಚಿಲ ಗ್ರಾ.ಪಂ. ವ್ಯಾಪ್ತಿಗೂ ಪಸರಿಸಿ ತೆಂಗಿನ ಮರಗಳನ್ನು ನಾಶಗೊಳಿಸಿದಲ್ಲದೆ ಮೀನುಗಾರಿಕಾ ರಸ್ತೆ ಸಹಿತ ಮನೆಗಳಿಗೂ ದಾಳಿ ನಡೆಸುವ ಸಂಭವವಿದೆ.ಬಡಾ ಎರ್ಮಾಳು ವ್ಯಾಯಾಮ ಶಾಲೆಯ ಬಳಿಯ ನಿವಾಸಿಗಳಾದ ನರ್ಸಿ, ರೋಹಿದಾಸ್ ಸುವರ್ಣ, ಸೇಸಮ್ಮ, ಭೋಜ ಸಾಲ್ಯಾನ್, ಜಯಕರ್, ಸಂಜೀವ ಸಾಲ್ಯಾನ್ ಮನೆಗಳಿಗೆ ಅಪಾಯ ಸಂಭವಿಸುವ ಸಾಧ್ಯತೆ ಇದೆ.
ಜಿಲ್ಲಾಢಳಿತ ಮನೆಗಳಿಗೆ ಸಮಸ್ಯೆ ಬಂದಾಗ ಸ್ಪಂಧಿಸು ಭರವಸೆ ನೀಡುತ್ತಾ ಬಂದಿದೆಯಾದರೂ. ವಿಳಂಬ ಕಾರ್ಯಾಚರಣೆಯಿಂದಾಗಿ ತೆಂಕ ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆದ ಅವಘಢಗಳು ಈ ಪ್ರದೇಶದಲ್ಲಿ ನಡೆಯದಂತ್ತಾಗಲಿ... ಒಂದು ವೇಳೆ ಕಾರ್ಯಾಚರಣೆ ವಿಳಂಬ ನಡೆಸಿದರೆ ಅಲ್ಲಿ ಮೀನುಗಾರಿಕಾ ರಸ್ತೆ ಕಡಿತಗೊಂಡಿದೆ, ಅದೇ ಇಲ್ಲಿ ಮೀನುಗಾರಿಕಾ ರಸ್ತೆಯ ಅಂಚಿನಲ್ಲೇ ಇರುವ ಬಹಳಷ್ಟು ನಿವಾಸಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವ ಸ್ಥಳೀಯ ಗ್ರಾ.ಪಂ. ಸದಸ್ಯ ಲಕ್ಷ್ಮಣ್ ಸುವರ್ಣ ಅತೀ ಶೀಘ್ರವಾಗಿ ಈ ಪ್ರದೇಶದಲ್ಲಿ ಕಡಲು ಕೊರೆತ ತಡೆಗೆ ವ್ಯವಸ್ಥಿತ ಕಾರ್ಯವರಣೆ ಆರಂಭವಾಗಲೆಂದು ಜಿಲ್ಲಾಢಳಿತವನ್ನು ಒತ್ತಾಯಿಸಿದ್ದಾರೆ.ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ, ಉಚ್ಚಿಲ ಗ್ರಾ.ಪಂ. ಅಧ್ಯಕ್ಷ ವಸಂತ ಶೆಟ್ಟಿ, ಮೀನುಗಾರ ಫೆಡರೇಶನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ ಮುಂತಾದವರು ಭೇಟಿ ನೀಡಿದ್ದಾರೆ.

 26-padu-1

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ