ಸೋಮವಾರ, ಜುಲೈ 15, 2013

ಕುಂದಾಪುರ ಮನೆ ಕುಸಿತ

ಕುಂದಾಪುರ: ಕಳೆದ ಭಾನುವಾರ ಮುಂಜಾನೆ ಸುರಿದ ಭಾರೀ ಗಾಳಿ-ಮಳೆಗೆ ಕುಂದಾಪುರ ತಾಲೂಕಿನ ಆನಗಳ್ಳಿ ಗ್ರಾಮಪಂಚಾಯತ್ ವ್ಯಾಪ್ತಿಯ ತೊಪ್ಲು ಪ್ರದೇಶದಲ್ಲಿ ಮನೆಯೊಂದು ಕುಸಿದು ಬಿದ್ದಿದೆ.ಮೀನುಗಾರರಾದ ರಾಜು ನಾಯ್ಕ(೬೩) ಹಾಗೂ ಅವರ ಸಹೋದರಿ ಸುಶೀಲಾ ತನಿಬ್ಬರು ಮಕ್ಕಳು ಪುನೀತ್ ಹಾಗೂ ಪ್ರಶಾಂತರೊಂದಿಗೆ ವಾಸವಾಗಿದ್ದ ಮನೆ ಭಾನುವಾರ ಮುಂಜಾನೆ ವೇಳೆ ಬಿಸಿದ ಭಾರಿ ಗಾಳಿಗೆ ಕುಸಿದು ಬಿದ್ದಿದ್ದು ಬಡತನದಲ್ಲಿ ದಿನದೂಡುತ್ತಿದ್ದ ಕುಟುಂಬ ಈಗ ವಾಸಕ್ಕೆ ಸೂರು ಇಲ್ಲದೇ ಚಿಂತಾಕ್ರಾಂತವಾಗಿದೆ.
photo2
ಮನೆಯಲ್ಲಿ ನಾಲ್ಕು ಜನರು ಮುಂಭಾಗದ ಹಜಾರದಲ್ಲಿ ಮಲಗಿದ್ದರು. ಹಿಂಭಾಗದಲ್ಲಿದ್ದ ಮಾಳಿಗೆ ಕುಸಿದು ಬಿದ್ದ ಪರಿಣಾಮ ನಾಲ್ವರು ಹೊರ ಓಡಿದ್ದು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಮುಚ್ಚಿಗೆ ಕೋಣೆಯಲ್ಲಿಯೇ ಅಡುಗೆ ಮನೆಯಿದ್ದು ಅಡುಗೆ ಸಾಮಾಗ್ರಿಗಳು, ಬಟ್ಟೆ ಬರೆಗಳು, ಪಾತ್ರೆಗಳು ಸಂಪೂರ್ಣ ನಾಶಗೊಂಡಿದ್ದು ಅಪಾರ ನಷ್ಟವಾಗಿದೆ. ಅಲ್ಲದೇ ಗಾಳಿಯ ಗೋಡೆಗಳು ಒಡೆದು ಹೋದ ಸ್ಥಿತಿ ತಲುಪಿದೆ.
photo3
ಸ್ಥಳಕ್ಕೆ ಆನಗಳ್ಳಿ ಗ್ರಾಮಪಂಚಾಯತ್ ಗ್ರಾಮಕರಣಿಕ ದಿನೇಶ ಡಿ., ಹಾಗೂ ಗ್ರಾ.ಪಂ. ಅಧ್ಯಕ್ಷ ಸುರೇಶ ಆರ್. ನಾಯ್ಕ್ ಆಗಮಿಸಿ ಪರಿಶೀಲನೆ ನಡೆಸಿದರು.
photo1

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ