ಗುರುವಾರ, ಜುಲೈ 25, 2013

ಕೋಳಿ ಕ್ಲೀನ್ ಮಾಡುವ ಹೆಸರಲ್ಲಿ ಜನರಿಂದ ಲೂಟಿ ; ಜನರ ದೌರ್ಬಲ್ಯದ ದುರುಪಯೋಗ..

ವರದಿ-ಸುರೇಶ್ ಎರ್ಮಾಳ್
ಕಾಪು : ಆಟಿ ಮಾರಿಪೂಜೆಯ ಸಂದರ್ಭ ಹರಕೆಯ ಕೋಳಿ ಕುರಿಗಳನ್ನು ಬಲಿಕೊಟ್ಟ ಬಳಿಕ ಅದನ್ನು ಕ್ಲೀನ್ ಮಾಡಿಕೊಡುವ ತಂಡವೊಂದು ಜನರ ದೌರ್ಬಲ್ಯ ಅರಿತು ಮನ ಬಂದಂತ್ತೆ ಹಣ ಲೂಟಿ ಮಾಡುತ್ತಿದ್ದ ಘಟನೆ ಪೊಲೀಸರ ಮುಂಭಾಗದಲ್ಲೇ ನಡೆಯುತ್ತಿತ್ತು.
25PADU-1
ಕೆಲವರು ಒಂದು ಕೋಳಿ ಕ್ಲೀನ್ ಮಾಡಿ ಕೊಟ್ಟದಂಕ್ಕೆ ೨೦ ವಸೂಲಿ ಮಾಡಿದರೆ, ಮತ್ತೊಂದು ಕಡೆ ೨೫ ಹೀಗೆ ಮನ ಬಂದಂತ್ತೆ ಒಂದೇ ದಿನದ ಕೆಲಸ ಎಂಬುದಾಗಿ ಜನರಿಂದ ವಸೂಲಿ ಕಾರ್ಯ ನಡೆಸುತ್ತಿದ್ದರು.(ಮುಂದೆ ಪದಾರ್ಥ ಮಾಡಿಕೊಟ್ಟರೂ ಬೇಡ ಎನ್ನದವರಿದ್ದಾರೆ) ರಾಜರೋಷವಾಗಿ ಈ ಕಾರ್ಯ ನಡೆಸುತ್ತಿದ್ದರೂ.. ಕೆಲಸವೂ ಉತ್ತಮವಾಗಿಲ್ಲ, ಕೋಳಿ ಮಾಂಸದೊಂದಿಗೆ ಅದರ ರೆಕ್ಕೆ ಮುಂತಾದವುಗಳಿದ್ದು ಈ ಬಗ್ಗೆ ಪ್ರಶ್ನಿಸಿದರೆ ಉಢಾಪೆ ಉತ್ತರ ರೆಡಿ ಎಲ್ಲಾ ಮಾಡಿಕೊಡುವೆ ೫೦ ನೀಡುತ್ತೀರಾ..?
25PADU-1 (2)
ಅರೆಬರೆ ಕ್ಲೀನ್ ಮಾಡಿಕೊಂಡ ಮಂದಿ ತಾವು ಮಾಡಿದ ತಪ್ಪಿಗೆ ಮರುಗಿ ಅಲ್ಲಿಂದ ಮರಳುವುದೊಂದೇ ದಾರಿ. ಕಾರಣ ಎದುರು ವಾದಿಸಿದರೆ ಕುಡಿದ ಮತ್ತಿನಲ್ಲಿದ್ದ ಕೆಲವು ಕೋಳಿ ಕ್ಲೀನ್ ಮಾಡುತ್ತಿದ್ದ ಮಂದಿ ಮೈ ಮೇಲೆ ಏರಿ ಬಂದರೂ ಆಶ್ಚರ್ಯವಿಲ್ಲ. ಮದ್ಯದ ಬಾಟಲನ್ನು ಕಿಸೆಯಲ್ಲೇ ಇಟ್ಟಕೊಂಡು ಈ ಕಾಯಕ ನಡೆಸುತ್ತಿದ್ದ ಇವರನ್ನು ನಿಯಂತ್ರಿಸಲು ಗ್ರಾ.ಪಂ. ದೇವಸ್ಥಾನದ ಆಡಳಿತ ಮಂಡಳಿ ಸಹಿತ ಪೊಲೀಸ್ ಇಲಾಖೆ  ಮುಂದಾಗದಿರುವುದು ಆಶ್ಚರ್ಯಕ್ಕೆಡೆ ಮಾಡಿದೆ.
25PADU-1 (3)
ಕಾಪು ಗ್ರಾ.ಪಂ.ನಿಂದ ಇದ್ದ ತ್ಯಾಜ್ಯಗಳನ್ನೇ ತೆರವುಗೊಳಿಸಲು ಅಸಾಧ್ಯವಾಗಿದ್ದು. ಇದೀಗ ಹೊಸ ಮಾರಿಯಮ್ಮ ದೇವಸ್ಥಾನದ ಆಸುಪಾಸು ಈ ಕೋಳಿ ಕ್ಲೀನ್ ಮಾಡಿಕೊಡುವ ಮಂದಿ ಬಿಟ್ಟು ಹೋದ ಕೋಳಿ ತ್ಯಾಜ್ಯ ಕ್ಲೀನ್ ಮಾಡಲು ಮುಂದಾದೀತೇ.. ಇಲ್ಲ ಈ ಭಾಗದಲ್ಲಿ ಈ ಕೋಳಿ ತ್ಯಾಜ್ಯಗಳು ಕೊಳೆತು ನಾರುವ ಸ್ಥಿತಿ ಒದಗೀತೇ ಎಂಬುದು ಕಾಪುವಿನ ಪ್ರಜ್ಞಾವಂತ ನಾಗರಿಕರ ಪ್ರಶ್ನೆ..!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ