ಶುಕ್ರವಾರ, ಜುಲೈ 19, 2013

ತಪ್ತ ಮುದ್ರೆ ಹಾಕೋಣ ಬನ್ನೀ.....

ಜುಲೈ ೧೯ ರ ಶುಕ್ರವಾರ ಪ್ರಥಮ ಏಕಾದಶಿ. ಈ ದಿನ ವಿವಿದೆಡೆ ತಪ್ತ ಮುದ್ರಾಧಾರಣೆ ನಡೆಯಲಿದೆ. ಈ ದಿನ ಯತಿಗಳಿಂದ ಮುದ್ರಾಧಾರಣೆ ಮಾಡಿಸಿಕೊಂಡರೆ ಮಳೆಗಾಲದಲ್ಲಿ ಬಾಧಿಸುವ ಎಲ್ಲಾ ಬಗೆಯ ರೋಗಗಳಿಂದ ಮುಕ್ತಿ ಹೊಂದಬಹುದಂತೆ. ಅದು ಜನರ ನಂಬಿಕೆಗೆ ಬಿಟ್ಟ ವಿಚಾರ. ಸುದರ್ಶನ ಹೋಮದ ಶಾಖದಲ್ಲಿ ಶಂಕ ಚಕ್ರ ಮುದ್ರೆಯನ್ನು ಮೈ ಮೇಲೆ ಹಾಕಿಸಿಕೊಳ್ಳೋದು ಸಂಪ್ರದಾಯ. ಹಾಗಾದರೆ ಯವ್ಯಾವ ಸ್ವಾಮೀಜಿಗಳು ಎಲ್ಲೆಲ್ಲಿ ಮುದ್ರಾಧಾರಣೆ ಮಾಡ್ತಾರೆ ಬನ್ನಿ ನೋಡೋಣ.....
mudre2
*ಪರ್ಯಾಯ ಸೋದೆ ಮಠಾಧೀಶ ವಿಶ್ವವಲ್ಲಭ ತೀರ್ಥರು-ಉಡುಪಿ ಶ್ರೀ ಕೃಷ್ಣಮಠದಲ್ಲಿ ಬೆಳಿಗ್ಗೆ ೮.೩೦ ಕ್ಕೆ
*ಕೃಷ್ಣಾಪುರ ಮಠಾಧೀಶ ವಿದ್ಯಾಸಾಗರ ತೀರ್ಥರು-ಉಡುಪಿ ಕೃಷ್ಣಾಪುರ ಮಠದಲ್ಲಿ ಬೆಳಿಗ್ಗೆ ೮.೩೦ ಕ್ಕೆ
*ಶಿರೂರು ಮಠಾಧೀಶ ಶ್ರೀ ಲಕ್ಷ್ಮೀವರ ತೀರ್ಥರು-ಉಡುಪಿ ಶಿರೂರು ಮಠದಲ್ಲಿ ಬೆಳಿಗ್ಗೆ೭.೦೦ ಕ್ಕೆ
*ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥರು-ಬೆಂಗಳೂರು ಬಸವನ ಗುಡಿ ಪುತ್ತಿಗೆ ಮಠದಲ್ಲಿ
*ಪೇಜಾವರ ಮಠಾಧೀಶ ವಿಶ್ವೇಶ ತೀರ್ಥರು- ಬೆಂಗಳೂರು ಪೂರ್ಣ ಪ್ರಜ್ಞ ವಿದ್ಯಾಪೀಠದಲ್ಲಿ
*ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥರು- ತುಮಕೂರು ಕೃಷ್ಣ ಮಠಮಂದಿರಲ್ಲಿ ಮತ್ತು ಚೆನ್ನೈನ ಟಿ.ನಗರ ರಾಘವೇಂದ್ರ ಮಠದಲ್ಲಿ
*ಕಾಣಿಯೂರು ಮಠಾಧೀಶ ವಿದ್ಯಾವಲ್ಲಭ ತೀರ್ಥರು ಹೈದರಾಬಾದ್ ಲಿಂಗಪಲ್ಲಿ ರಾಘವೇಂದ್ರ ಮಠ ಮತ್ತು ಮಹೇಂದ್ರ ಹಿಲ್ಸ್ ಕೃಷ್ಣಮಂದಿರದಲ್ಲಿ
*ಅದಮಾರು ಮಠಾಧೀಶ ವಿಶ್ವಪ್ರಿಯ ತೀರ್ಥರು-ಬಳ್ಳಾರಿ ಶ್ರೀ ರಾಘವೇಂದ್ರ ಮಠದಲ್ಲಿ
*ಪಲಿಮಾರು ಮಠಾಧೀಶ ವಿದ್ಯಾದೀಶ ತೀರ್ಥರು- ಮೈಸೂರಿನ ಕೃಷ್ಣಧಾಮದಲ್ಲಿ
ಕಾಶೀ ಮಠದ ಸುದೀಂದ್ರ ತೀರ್ಥರು ಮಂಗಳೂರು ಕೊಂಚಾಡಿ ಕಾಶೀ ಮಠದಲ್ಲಿ
ಸುಯಮೀಂದ್ರ ತೀರ್ಥರು- ಬೆಂಗಳೂರು ಮಲ್ಲೇಶ್ವರದ ಕಾಶೀ ಮಠದಲ್ಲಿ
ಸುಬ್ರಹ್ಮಣ್ಯ ಮಠಾಧೀಶರು ೬.೩೦ ಕ್ಕೆ ಉಜಿರೆ ಜನಾರ್ದನ ದೇವಸ್ಥಾನ, ೯.೩೦ ಕೆಮ್ಮಾಯಿ ಮಹಾವಿಷ್ಣು ದೇವಸ್ಥಾನ, ೧೦.೩೦ ಪುತ್ತೂರು ಕೆಮ್ಮಿಂಜೆ ಷಣ್ಮುಖ ದೇವಸ್ಥಾನ, ೧ ಗಂಟೆಗೆ ಸುಬ್ರಹ್ಮಣ್ಯ ಮಠದಲ್ಲಿ...
ಬಾಳೆಗಾರು ಮಠಾಧೀಶರು ಪಾವಂಜೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ೭.೩೦ ಕ್ಕೆ, ಮಂಗಳೂರು ನೆಲ್ಲಿಕಾಯಿ ರಾಘವೇಂದ್ರ ಮಠದಲ್ಲಿ ೯.೩೦ ಕ್ಕೆ, ಕಾರ್ಕಳ ಅನಂತ ಶಯನದಲ್ಲಿ ಮದ್ಯಾಹ್ನ ೧ ಕ್ಕೆ,  ಅಜೆಕಾರು ನಾಗರಾಜ ಭಟ್ ನಿವಾಸಲ್ಲಿ ೨.೩೦ ಕ್ಕೆ ಪಲಿಮಾರು ಮೂಲ ಮಠದಲ್ಲಿ ಸಂಜೆ ೪ಕ್ಕೆ ಮುದ್ರಾಧಾರಣೆ ಮಾಡುವರು..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ