ಶನಿವಾರ, ಜುಲೈ 27, 2013

ಹೆದರಿಸಿ ಗೆದ್ದ ಮೋದಿ: ಗುಜರಾತ್ ಅಭಿವೃದ್ಧಿ ಮಾಡಿದ್ದು ಕಾಂಗ್ರೆಸ್: ಜನಾರ್ಧನ ಪೂಜಾರಿ

ಉಡುಪಿ:ಗುಜರಾತ್ ಅಭಿವೃದ್ಧಿಯಾಗಿದ್ದು ಕಾಂಗ್ರೆಸ್ ಸರಕಾರದ ಸಾಧನೆ. ಪುಕ್ಕಟೆ ಪ್ರಚಾರಗಿಟ್ಟಿಸಿಕೊಳ್ಳುತ್ತಿರುವ ಮೋದಿಯದ್ದು ಬೆದರಿಕೆಯ ರಾಜಕಾರಣ ಅಂತಾ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಲೇವಡಿ ಮಾಡಿದ್ದಾರೆ. ಉಡುಪಿಯಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು ಮೋದಿ ಭಾರತದ ಪ್ರದಾನಿಯಾಗುವುದನ್ನು ದೇಶದ ಇತರ ರಾಜ್ಯಗಳು ಒಪ್ಪುದಿಲ್ಲ. ಬಿಜೆಪಿ ನಾಯಕ ಅಡ್ವಾಣಿಯವರು ಕೂಡಾ ಮೋದಿ ದೇಶದ ಪ್ರಧಾನಿಯಾಗುವುದನ್ನು ಒಪ್ಪುವುದಿಲ್ಲ. ಭಯ ಹುಟ್ಟಿಸುವವರು ದೇಶದ ಪ್ರಧಾನಿಯಾಗಲೇಬಾರದು ಅಂತಾ ಅವರು ಹೇಳಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ