ಮಂಗಳವಾರ, ಜುಲೈ 23, 2013

ಉಡುಪಿ ನಗರಸಭೆಯಲ್ಲಿ ಭಾರೀ ಅವ್ಯವಹಾರ : ರೋನಾಲ್ಡ್ ಪ್ರವೀಣ್ ಕುಮಾರ್ ಆರೋಪ

ಉಡುಪಿ:ಉಡುಪಿ ಜಿಲ್ಲೆಯ ನಗರಸಭೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಗದ್ದುಗೆ ಏರಿದ್ದು ರಾಜ್ಯದಲ್ಲೂ ಕೂಡಾ ಕಾಂಗ್ರೆಸ್ ಅಧಿಕಾgಕ್ಕೆ ಬಂದಿದೆ. ಈ ನಡುವೆ ಕಾಂಗ್ರೆಸ್ ಪಕ್ಷದ ಓರ್ವ ಹಿರಿಯ ಮುಖಂಡರಾದ ರೋನಾಲ್ಡ್ ಪ್ರವೀಣ್ ನಗರಸಭೆಯಲ್ಲಿ ನಡೆದ ಹಗರಣಗಳ ಸರಮಾಲೆಯನ್ನು ಬಯಲಿಗೆಳೆಯುವದರ ಮೂಲಕ ಗಮನಸೆಳೆದಿದ್ದಾರೆ.
[youtuber youtube='http://www.youtube.com/watch?v=tqy5IMBCmlc&feature=c4-overview&list=UUs0k8vSBwTqzHjMqn8PYrzQ']
ಈ ಹಿಂದಿನ ಬಿಜೆಪಿ ಅಧಿಕಾರಾವಧಿಯಲ್ಲಿ ನಡೆದ ಹಗರಣಗಳನ್ನು ಬಯಲಿಗೆಳೆಯುವುದು ಇವರ ಉದ್ದೇಶವೋ. ಅಥವಾ ಇದರ ಹಿಂದೆ ಹಿಡನ್ ಅಜೆಂಡಾ ಏನಾದ್ರೂ ಇದೆಯೋ ಗೊತ್ತಿಲ್ಲ.
IMG_0169 Y
ರಾಜ್ಯಕ್ಕೆ ನಂಬರ್‌ವನ್ ಹಣೆಪಟ್ಟಿ ಹೊಂದಿರೋ ಉಡುಪಿ ನಗರಸಭೆಯಲ್ಲಿ  ಭಾರೀ ಅವ್ಯವಹಾರ ನಡೆದ ಆರೋಪ ಕೇಳಿಬಂದಿದೆ. ಉಡುಪಿ ನಗರಸಭೆಯಲ್ಲಿ ಹೊರಗುತ್ತಿಗೆಯ ಟೆಂಬರ್‌ನಲ್ಲಿ ಭಾರೀ ಅಕ್ರಮ ನಡೆದಿದೆ ಅಂತಾ ನಗರಸಭೆ ಮಾಜಿ ಉಪಾಧ್ಯಕ್ಷ  ರೋನಾಲ್ಡ್ ಪ್ರವೀಣ್ ಕುಮಾರ್  ಆರೋಪಿಸಿದ್ದಾರೆ. ೨೦೦೮ ರಿಂದ ಈ ವರೆಗಿನ ಅವಧಿಯಲ್ಲಿ ಉಡುಪಿ ನಗರಸಭೆಯ ಎಲ್ಲಾ ಹೊರಗುತ್ತಿಗೆ ಪೀಠೋಪಕರಣ, ಕಂಪ್ಯೂಟರ್, ಲ್ಯಾಪ್‌ಟಾಪ್ ಖರೀದಿ ಪ್ರಕರಣದಲ್ಲಿ ಅಕ್ರಮ ನಡೆದಿದೆ ಅಂತಾ ರೋನಾಲ್ಡ್ ಆರೋಪಿಸಿದ್ದಾರೆ.ಅವರ ಆರೋಪಗಳ ಪಟ್ಟಿ ಈ ಕೆಳಗಿನಂತಿದೆ.
ಉಡುಪಿ ನಗರಸಭೆಯ ಉಪಯೋಗಕ್ಕಾಗಿ ಬಾಡಿಗೆ ವಾಹನ ಒದಗಿಸುವಿಕೆ, ಪಾದಚಾರಿ ರಸ್ತೆಗಳನ್ನು ಗುಡಿಸಿ ಕಸ ಸಾಗಿಸುವಿಕೆ, ಒಳಚರಂಡಿ ನಿರ್ವಹಣೆ/ದುರಸ್ಥಿ, ನೀರು ಸರಬರಾಜು ದುರಸ್ಥಿ, ಮಳೆ ನೀರು ಹರಿಯುವ ತೋಡುಗಳ ನಿರ್ವಹಣೆ, ಮಾನವ ಸಂಪನ್ಮೂಲ/ಸಿಬ್ಬಂದಿ ಒದಗಣೆ, ನಗರಸಭಾ ಕಾರ್ಯಾಲಯ ಶುಚಿಗೊಳಿಸುವಿಕೆ, ಸ್ಪಾಟ್ ಬಿಲ್ಲಿಂಗ್, ಅಪಾಯಕಾರಿ ಮರ/ಗೆಲ್ಲುಗಳ ಕಡಿಯುವಿಕೆ, ದಾರಿದೀಪ ನಿರ್ವಹಣೆ ಮತ್ತು ವಿಸ್ತರಣೆ ಇತ್ಯಾದಿ ಸೇವೆಗಳನ್ನು ಹೊರಗುತ್ತಿಗೆ ನೀಡುವಲ್ಲಿ, ನಗರಸಭೆಯ ವಾಹನಗಳ ಮಾರಾಟ, ಬೀಡಿನಗುಡ್ಡೆ ತಾತ್ಕಾಲಿಕ ಮೀನು ಮಾರುಕಟ್ಟೆ ನಿರ್ಮಾಣ, ನವೀಕೃತ ಪುರಭವನ ಉದ್ಘಾಟನಾ ವೆಚ್ಚ ಭರಿಸುವಿಕೆ, ಪೀಠೋಪಕರಣಗಳ ಮತ್ತು ಕಂಪ್ಯೂಟರ್/ಲ್ಯಾಪ್‌ಟಾಪ್ ಖರೀದಿ ಇತ್ಯಾದಿಗಳನ್ನು ವ್ಯವಸ್ಥಿತವಾಗಿ ನಿಯಮಾನುಸಾರ ನಡೆಸಲಾಗಿದೆ ಎಂಬ ಭ್ರಮೆ ಹುಟ್ಟಿಸಿ, ಅಕ್ರಮ ಹಾಗೂ ಅವ್ಯವಹಾರದ ಮೂಲಕ ಅಪಾರ ಪ್ರಮಾಣದಲ್ಲಿ ನಗರಸಭಾ ನಿಧಿಯ ದುರುಪಯೋಗ ಪಡಿಸಿ ನಗರಸಭೆಯನ್ನು ಲೂಟಿ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಆದ್ದರಿಂದ, ಉಡುಪಿ ನಗರಸಭೆಯ ಆರ್ಥಿಕ ಹಿತದೃಷ್ಟಿಯಿಂದ ಮತ್ತು ನಗರಾಡಳಿತೆಯಲ್ಲಿ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ೨೦೦೮ ರಿಂದ ಈವರೆಗಿನ ಅವಧಿಯಲ್ಲಿ ಉಡುಪಿ ನಗರಸಭೆಯ ಎಲ್ಲಾ ಹೊರಗುತ್ತಿಗೆ, ಪೀಠೋಪಕರಣ, ಕಂಪ್ಯೂಟರ್/ಲ್ಯಾಪ್‌ಟಾಪ್ ಖರೀದಿ ಪ್ರಕರಣಗಳನ್ನು ಮತ್ತು ಎಲ್ಲಾ ಕಾನೂನುಬಾಹಿರ ಪಾವತಿಗಳನ್ನು ಲೋಕಾಯುಕ್ತ ತನಿಕೆಗೆ ಒಳಪಡಿಸಿ, ನಗರಸಭೆಗೆ ವಂಚನೆ ಮಾಡಿರುವ ಸಂಬಂಧಿತ ತಪ್ಪಿತಸ್ಥರನ್ನು ಹಾಗೂ ರಾಜಕೀಯ ಆಶ್ರಯದಾತರನ್ನು ಗುರುತಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮತ್ತು ವಸ್ತನಿಷ್ಠ ತನಿಖಾ ವರದಿಯನ್ನು ನಾಗರಿಕರ ಮುಂದೆ ಮಂಡಿಸುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸುತ್ತಾ, ತತ್ಸಂಬಂಧಿ ವಿವರವನ್ನು ಈ ಕೆಳಗೆ ನೀಡಿರುತ್ತೇನೆ :-
೧.    ಹೊರಗುತ್ತಿಗೆಯ ಹೆಸರಿನಲ್ಲಿ ಮಾಸಿಕ ರೂ. ಒಂದು ಕೋಟಿಗೂ ಮಿಕ್ಕಿ ನಗರಸಭೆಯಿಂದ ಪಾವತಿಯಾಗುತ್ತಿದ್ದು, ಇದರಲ್ಲಿ ಯಾರ ಜೇಬಿಗೆ ಎಷ್ಟು ಹೋಗುತ್ತಿದೆ ಎಂಬುದು ಬಯಲಾಗಬೇಕಾಗಿದೆ.
೨.    ೨೦೧೨ರ ಅಕ್ಟೋಬರ್ ೧ರಂದು ಉದ್ಘಾಟನೆಗೊಂಡ ನವೀಕೃತ ಪುರಭವನ ಉದ್ಘಾಟನಾ ಕಾರ್ಯಕ್ರಮಕ್ಕೆ ನಗರಸಭಾ ನಿಧಿಯಿಂದ ರೂ. ೧,೪೩,೫೫೦/- ಖರ್ಚು ಮಾಡಲಾಗಿದೆ. ಆದರೆ ಇಂತಹ ಅನುತ್ಪಾದಕ ಖರ್ಚುಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಿಯಮಾವಳಿಗಳ ಪ್ರಕಾರ  ರೂ. ೨,೦೦೦/- ಖರ್ಚು ಮಾಡಲು ನಗರಸಭೆಗಳಿಗೆ ಅಧಿಕಾರ ನೀಡಲಾಗಿದೆ. ಇಲ್ಲಿ ನಿಯಮಾವಳಿಯನ್ನು ಗಾಳಿಗೆ ತೂರಲಾಗಿದೆ.
೩.    ನಗರಸಭೆಯ ಸಮಗ್ರ ಸಾಕ್ಷ್ಯಚಿತ್ರ ಹಿನ್ನೆಲೆ ಧ್ವನಿಗಾಗಿ, ಕನ್ನಡದಲ್ಲಿ ಸಾಹಿತ್ಯ ನಿರ್ಮಾಣ, ವಿನ್ಯಾಸ ಕಾರ್ಯಕ್ರಮ ಕೈಗೊಂಡ ಬಗ್ಗೆ ರೂ. ೧,೨೫,೦೦೦/- ಖರ್ಚು ಮಾಡಲಾಗಿದೆ. ಆದರೆ ವಾಸ್ತವವಾಗಿ ಯಾವುದೇ ಸಾಹಿತ್ಯ ನಿರ್ಮಾಣ ಅಥವಾ ವಿನ್ಯಾಸ ಕಾರ್ಯಕ್ರಮ ಕೈಗೊಂಡಿರುವುದಿಲ್ಲ.
೪.    ಒಂದು ಜೆಸಿಬಿ, ಎರಡು ಟೆಂಪೊ ಟ್ರಾಕ್ಸ್ ಮತ್ತು ಒಂದು ಟಾಟಾ ಸುಮೊ ವಾಹನವನ್ನು ನಿರುಪಯೋಗಿ ಎಂಬ ಹಣೆಪಟ್ಟಿ ಕಟ್ಟಿ ಅತ್ಯಂತ ಕಡಿಮೆ ಬೆಲೆಗೆ ನಗರಸಭೆಯಿಂದಲೇ ಹರಾಜು ಮಾಡಲಾಗಿದ್ದು,  ಅದನ್ನು ಕೆಲ ಸ್ಥಳೀಯ ಗುತ್ತಿಗೆದಾರರು ಹಂಚಿಕೊಂಡಿರುತ್ತಾರೆ.  ಆದರೆ ಸರಕಾರದ ಆದೇಶದಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮೂರು ಮಂದಿ ಸದಸ್ಯರನ್ನೊಳಗೊಂಡ  ಸಮಿತಿಯನ್ನು ರಚಿಸಲಾಗಿದ್ದು, ಸದ್ರಿ ಸಮಿತಿಯು ನಿಯಮಾವಳಿಯನ್ವಯ ಹಳೆಯ ವಾಹನಗಳನ್ನು ಪರಿಶೀಲಿಸಿ, ಅನುಪಯುಕ್ತವೆಂದು ತೀರ್ಮಾನಿಸಿ, ಟೆಂಡರ್-ಹರಾಜು ಮೂಲಕ ವಿಲೇವಾರಿ ಮಾಡಿ, ಸ್ವೀಕೃತವಾಗುವ ಮೊಬಲಗನ್ನು ಆಯಾಯ ಇಲಾಖೆಗಳ ಲೆಕ್ಕ ಶೀರ್ಷಿಕೆಗೆ ಜಮಾ ಮಾಡಬೇಕಾಗಿದೆ. ಇಲ್ಲಿ ಸರಕಾರಿ ಆದೇಶವನ್ನು ಗಾಳಿಗೆ ತೂರಲಾಗಿದೆ.
೨॒
೫.    ನಗರಸಭೆಯ ಅಧ್ಯಕ್ಷರು, ಪೌರಾಯುಕ್ತರು ಮತ್ತು ಇತರ ಅಧಿಕಾರಿಗಳ ಉಪಯೋಗಕ್ಕಾಗಿ ಐದು ವಾಹನಗಳನ್ನು ಬಾಡಿಗೆಗೆ ಪಡೆಯಲಾಗಿದೆ. ಒಂದು ವಾಹನವನ್ನು ರಾತ್ರಿ ಗಸ್ತು ತಿರುಗುವ ನೆಪದಲ್ಲಿ ಬಾಡಿಗೆಗೆ ಪಡೆಯಲಾಗಿದೆ. ಕೆಲ ಸಂದರ್ಭಗಳಲ್ಲಿ, ಟೆಂಡರ್ ಅವಧಿ ಮುಗಿದಿದ್ದರೂ ಕಾನೂನು ಬಾಹಿರವಾಗಿ ಹಳೆಯ ಟೆಂಡರುದಾರರನ್ನೇ ಮುಂದುವರಿಸಲಾಗಿದೆ. ಆದರೆ ವಾಸ್ತವಿಕವಾಗಿ ವಾಹನಗಳನ್ನು ಬಾಡಿಗೆಗೆ ಪಡೆಯಲು ನಿಯಮಾವಳಿಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದ್ದು, ನಗರಸಭೆಯು ತನಗಿಲ್ಲದ ಅಧಿಕಾರವನ್ನು ಚಲಾಯಿಸಿದೆ.
೬.    ಘನತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಕಸ ಸಾಗಾಟ ಮಾಡಲು ೫ ಟಿಪ್ಪರ್ ಮತ್ತು ೪ ಟ್ರಾಕ್ಟರ್‌ಗಳನ್ನು ದಿನ ಬಾಡಿಗೆಗೆ ಹಾಗೂ ಒಂದು ಚೈನ್ ಮೌಂಟೆಡ್ ಹೈಡ್ರೋಲಿಕ್ ಅರ್ಥ್ ಎಕ್ಸಾವೇಟರ್ ಮತ್ತು ಒಂದು ಫ್ರಂಟ್ ಎಂಡ್ ಲೋಡರ್ ವಿದ್ ಬಾಕ್ ಹೋ ವಾಹನವನ್ನು ಗಂಟೆ ಬಾಡಿಗೆ ಆಧಾರದಲ್ಲಿ ದುಬಾರಿ ಬಾಡಿಗೆಗೆ ಪಡೆಯಲಾಗಿದೆ ಮತ್ತು ವಾಹನ ಒದಗಿಸಿದೆಯೇ ಸುಳ್ಳು ಲೆಕ್ಕಾಚಾರದಿಂದ ಬೃಹತ್ ಮೊತ್ತ ಲಪಟಾಯಿಸಲಾಗುತ್ತಿದೆ. ಅಲ್ಲದೆ ಬಾಡಿಗೆಗೆ ಪಡೆಯುವ ಬಗ್ಗೆ ಜಿಲ್ಲಾಧಿಕಾರಿಗಳಿಂದ ಪೂರ್ವಾನುಮತಿ ಪಡೆದಿರುವುದಿಲ್ಲ.
೭.   ನಗರಸಭಾ ವ್ಯಾಪ್ತಿಯ ೩೫ ವಾರ್ಡುಗಳ ತ್ಯಾಜ್ಯ ಸಂಗ್ರಹಿಸಿ ಸಂಸ್ಕರಣಾ ಘಟಕಕ್ಕೆ ಸಾಗಿಸುವುದು, ಬೀದಿಗಳನ್ನು, ಪಾದಚಾರಿ ರಸ್ತೆಗಳನ್ನು ಗುಡಿಸುವುದು, ರಸ್ತೆ ಬದಿಯ ಮೋರಿಗಳನ್ನು ಸ್ವಚ್ಛಗೊಳಿಸುವುದು, ರಸ್ತೆ ಬದಿಯ ಗಿಡಗಂಟಿಗಳನ್ನು ಬುಡ ಸಮೇತ ತೆಗೆಯುವುದು, ಕಟ್ಟಡ ನಿರ್ಮಾಣದ ಭಗ್ನಾವಶೇಷಗಳನ್ನು ಮೂಲದಿಂದ ಸಂಗ್ರಹಿಸಿ ನಿಗದಿತ ಸ್ಥಳಕ್ಕೆ ಸಾಗಿಸುವ ಬಗ್ಗೆ ಪೂರ್ವ, ಪಶ್ಚಿಮ ಮತ್ತು ಕೇಂದ್ರ ವಿಭಾಗ ಎಂದು ಮೂರು ವಿಭಾಗಗಳಾಗಿ ವಿಂಗಡಿಸಿ ಟೆಂಡರ್‌ಗಳನ್ನು ಆಹ್ವಾನಿಸಲಾಗಿದ್ದು, ಮಾಸಿಕ ತಲಾ ರೂ. ೩,೭೫,೭೪೯/-, ರೂ. ೩,೪೮,೭೪೯/- ಮತ್ತು ರೂ. ೩,೪೪,೨೫೦/-ಕ್ಕೆ ಗುತ್ತಿಗೆದಾರರಿಗೆ ವಹಿಸಿಕೊಡಲಾಗಿದ್ದು, ಈ ಬಾಬ್ತು ಮಾಸಿಕ ಒಟ್ಟು ರೂ. ೧೦,೬೮,೭೪೮/- ಪಾವತಿಸಲಾಗುತ್ತಿದೆ. ಆದರೆ ಸದ್ರಿ ಟೆಂಡರ್ ಅವಧಿಯು ೨೦೧೦-೧೧ನೇ  ಸಾಲಿಗೆ ಸಂಬಂಧಿಸಿದ್ದು, ಮರು ಟೆಂಡರ್ ಕರೆಯದೆ ಹಳೆಯ ಗುತ್ತಿಗೆದಾರರನ್ನೇ ಕಾನೂನುಬಾಹಿರವಾಗಿ ಮುಂದುವರಿಸಲಾಗಿದೆ. ವಾಸ್ತವಿಕವಾಗಿ ನಗರಸಭೆಯಲ್ಲಿ ೩೫ ಮಂದಿ ಖಾಯಂ ಮತ್ತು ೧೦ ಮಂದಿ  ಕನಿಷ್ಠ ವೇತನದ ಪೌರ ಕಾರ್ಮಿಕರು ಸೇವೆಯಲ್ಲಿದ್ದು, ಈ ಮೇಲಿನ ಕೆಲಸಗಳನ್ನು ನಗರಸಭೆಯ ಪೌರ ಕಾರ್ಮಿಕರಿಂದಲೇ ನಿರ್ವಹಿಸಿ ಗುತ್ತಿಗೆದಾರರ ಹೆಸರಿನಲ್ಲಿ ನಗರಸಭೆಯ ಹಣವನ್ನು ವ್ಯವಸ್ಥಿತವಾಗಿ ಕೊಳ್ಳೆ ಹೊಡೆಯಲಾಗುತ್ತಿದೆ.
೮.    ನಗರಸಭಾ ವ್ಯಾಪ್ತಿಯ ೩೫ ವಾರ್ಡುಗಳಲ್ಲಿ ಮಳೆ ನೀರು ಹರಿಯುವ ಪ್ರಮುಖ ತೋಡುಗಳ ಹೂಳನ್ನು ಎತ್ತಿ ಸಾಗಿಸುವ ಬಗ್ಗೆ ಸೆಂಟ್ರಲ್, ಪಶ್ಚಿಮ ಮತ್ತು ಪೂರ್ವ ಎಂದು ಮೂರು ವಿಭಾಗಗಳಾಗಿ ವಿಂಗಡಿಸಿ ಕೊಟೇಷನ್ ಆಹ್ವಾನಿಸಲಾಗಿದ್ದು, ವಿವರ ಈ ಕೆಳಗಿನಂತಿದೆ :
i)    ಸೆಂಟ್ರಲ್ ವಿಭಾಗ : ಜೆಸಿಬಿ ಗಂಟೆಗೆ ರೂ. ೮೦೦/-, ಹಿಟಾಚಿ ಗಂಟೆಗೆ ರೂ. ೧೦೫೦/- ಮತ್ತು ಟಿಪ್ಪರ್ ದಿನಕ್ಕೆ ರೂ. ೩,೦೦೦/-
ii)    ಪಶ್ಚಿಮ ವಿಭಾಗ : ಜೆಸಿಬಿ ಗಂಟೆಗೆ ರೂ. ೭೮೫/-, ಹಿಟಾಚಿ ಗಂಟೆಗೆ ರೂ. ೯೫೦/-  ಮತ್ತು ಟಿಪ್ಪರ್ ದಿನಕ್ಕೆ ರೂ. ೩,೦೦೦/-
iii)    ಪೂರ್ವ ವಿಭಾಗ : ಜೆಸಿಬಿ ಗಂಟೆಗೆ ರೂ. ೭೯೫/-, ಹಿಟಾಚಿ ಗಂಟೆಗೆ ರೂ. ೯೫೦/- ಮತ್ತು ಟಿಪ್ಪರ್ ದಿನಕ್ಕೆ ರೂ. ೩,೦೦೦/-
೩॒                : ೩ :
೯.    ನಗರಸಭಾ ಕಾರ್ಯಾಲಯ ಮತ್ತು ನೀರು ಸರಬರಾಜು ವಿಭಾಗಗಕ್ಕೆ ಒಟ್ಟು ೪೫ ಸಿಬ್ಬಂದಿಗಳ ಮತ್ತು ಅಲೆವೂರು ಘನತ್ಯಾಜ್ಯ ಘಟಕಕ್ಕೆ ೩ ಮಂದಿ ಕಾವಲುಗಾರರ ಸೇವೆಯನ್ನು ಹೊರಗುತ್ತಿಗೆ ಮೂಲಕ ಪಡೆಯಲಾಗಿದ್ದು, ಗುತ್ತಿಗೆದಾರರಿಗೆ ಮಾಸಿಕ ಒಟ್ಟು ರೂ. ೩,೨೬,೮೦೬/- ಪಾವತಿಸಲಾಗುತ್ತಿದೆ.
೧೦.    ನಗರಸಭೆಯಲ್ಲಿ ನಿರಂತರ ಕಾರ್ಯ ನಿರ್ವಹಿಸುವ ಕಂಪ್ಯೂಟರೀಕೃತ ಸಹಾಯವಾಣಿ ಮೂಲಕ ಸಾರ್ವಜನಿಕ ಕುಂದು ಕೊರತೆಗಳ ದೂರುಗಳನ್ನು ಸ್ವೀಕರಿಸುವ ಕೆಲಸವನ್ನು ಹೊರಗುತ್ತಿಗೆಗೆ ನೀಡಲಾಗಿದ್ದು, ಟೆಂಡರ್ ಅವಧಿ ಮುಗಿದಿದ್ದರೂ ಹಿಂದಿನ ಗುತ್ತಿಗೆದಾರರನ್ನೇ ಮುಂದುವರಿಸಲಾಗಿದೆ.
೧೧.    ನೀರು ಸರಬರಾಜು ವಿಭಾಗದ ಬಿಲ್ಲಿಂಗ್ ವ್ಯವಸ್ಥೆಯನ್ನು ಗಣಕೀಕೃತ ಸ್ಪಾಟ್ ಬಿಲ್ಲಿಂಗ್ ಮಾಡುವ ಕೆಲಸವನ್ನು ಹೊರಗುತ್ತಿಗೆಗೆ ನೀಡಲಾಗಿದ್ದು, ಟೆಂಡರ್ ಅವಧಿಯು ೩೧.೦೧.೨೦೧೨ಕ್ಕೆ ಮುಗಿದಿದ್ದರೂ ಹಿಂದಿನ ಟೆಂಡರ್‌ದಾರರನ್ನೇ ಮುಂದುವರಿಸಲಾಗಿದೆ.
೧೨.    ನಗರಸಭೆಯಲ್ಲಿ ಒಟ್ಟು ೪೫ ಮಂದಿ ಪೌರ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದರೂ ನಗರಸಭಾ ಕಾರ್ಯಾಲಯವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಶುಚಿಗೊಳಿಸುವ ಕೆಲಸವನ್ನು ರೂ. ೨೯,೦೦೦/-ಕ್ಕೆ ಹೊರಗುತ್ತಿಗೆ ನೀಡಲಾಗಿದೆ.
೧೩.    ನಗರಸಭಾ ವ್ಯಾಪ್ತಿಯೊಳಗೆ ಅಪಾಯಕಾರಿ ಎಂದು ಕಂಡು ಬರುವ ಮರಗಳನ್ನು ಹಾಗೂ ಗೆಲ್ಲುಗಳನ್ನು ಆಯಾಯ ಮರಗಳ ಮಾಲಕರು ಕಡಿದು ತೆಗೆಯಬೇಕಿದ್ದು, ತಪ್ಪಿದ್ದಲ್ಲಿ ಅಂತಹ ಮರ/ಗೆಲ್ಲುಗಳನ್ನು ನಗರಸಭೆಯ ವತಿಯಿಂದಲೆ ಕಡಿಸಿ ತೆಗೆದು, ತಗಲುವ ವೆಚ್ಚವನ್ನು ಕಂದಾಯ ಬಾಕಿ ಎಂದು ವಸೂಲು ಮಾಡಲು ಕಾನೂನು ರೀತ್ಯಾ ಅವಕಾಶ ಇದ್ದರೂ ಈ ಕೆಲಸವನ್ನು ಹೊರಗುತ್ತಿಗೆ ನೀಡಲಾಗಿದೆ.
೧೪.    ನಗರಸಭಾ ವ್ಯಾಪ್ತಿಯ ಎಲ್ಲಾ ೩೫ ವಾರ್ಡುಗಳಲ್ಲಿ ದಾರಿದೀಪಗಳ ನಿಯಂತ್ರಣ, ನಿರ್ವಹಣೆ, ದುರಸ್ಥಿ ಮತ್ತು ತಂತಿ ಮಾರ್ಗಗಳ ವಿಸ್ತರಣೆ ಇತ್ಯಾದಿ ಕಾಮಗಾರಿಗಳನ್ನು ದುಬಾರಿ ಮೊತ್ತಕ್ಕೆ ಹೊರಗುತ್ತಿಗೆ ನೀಡಲಾಗಿದೆ.
೧೫.    ನಗರಸಭಾ ನೀರು ಸರಬರಾಜು ಯೋಜನೆಯಡಿ ವಿವಿಧ ಪ್ರದೇಶಗಳಲ್ಲಿರುವ ನೀರಿನ ಕೊಳವೆಗಳ ದುರಸ್ಥಿ ಕಾಮಗಾರಿಯನ್ನು ದುಬಾರಿ ಮೊತ್ತಕ್ಕೆ ಹೊರಗುತ್ತಿಗೆ ನೀಡಲಾಗಿದೆ.
೧೬.    ಒಳಚರಂಡಿ ಯೋಜನೆಯ ಆಳ ಗುಂಡಿಗಳಲ್ಲಿ ಉಕ್ಕಿ ಹರಿವಿಕೆಯನ್ನು ಮತ್ತು ಕೊಳವೆ ಮಾರ್ಗದ ಅಡೆತಡೆಗಳನ್ನು ತೆಗೆದು ಸೂಕ್ತ ರೀತಿಯಲ್ಲಿ ಗ್ರಾಮಸಾರ ಹರಿಯುವಿಕೆ ಮಾಡುವ, ೪ ವೆಟ್‌ವೆಲ್ ಪಂಪುಗಳನ್ನು  ನಿಗದಿತ ವೇಳೆಯಲ್ಲಿ ಚಾಲುಗೊಳಿಸುವ ಮತ್ತು ವೆಟ್‌ವೆಲ್‌ಗಳಿಂದ ಬರುವ ಕೊಳವೆ ಮಾರ್ಗ ದುರಸ್ಥಿ ಕಾಮಗಾರಿಯನ್ನು ಮಾಸಿಕ ರೂ. ೨,೦೦,೦೦೦/-ಕ್ಕೆ ಹೊರಗುತ್ತಿಗೆ ನೀಡಲಾಗಿದೆ. (ಹಿಂದಿನ ಟೆಂಡರ್ ಮೊತ್ತ ಮಾಸಿಕ ರೂ. ೮೬,೦೦೦/- ಆಗಿದ್ದು, ಸದ್ರಿ ಅವಧಿಯು ೨೦೧೧ರ ಎಪ್ರೀಲ್‌ನಲ್ಲಿ  ಅಂತ್ಯಗೊಂಡಿದ್ದರೂ ೨೦೧೩ ಜನವರಿ  ತನಕ ಹಳೆಯ ಗುತ್ತಿಗೆದಾರರನ್ನೇ ಕಾನೂನುಬಾಹಿರವಾಗಿ ಮುಂದುವರಿಸಲಾಗಿದೆ).
೧೭.    ಬೀಡಿನಗುಡ್ಡೆಯಲ್ಲಿ ನಿರ್ಮಿಸಿರುವ ತಾತ್ಕಾಲಿಕ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ರೂ. ೫,೦೦,೦೦೦/- ವಿನಿಯೋಗಿಸಲಾಗಿದೆ. ಸದ್ರಿ ಕಾಮಗಾರಿಯು ಕಳಪೆ ಕಾಮಗಾರಿಯಾಗಿದ್ದು, ರೂ. ೩,೦೦,೦೦೦/- ಮೀರುವಂತಿಲ್ಲ.
೧೮.    ನಗರಸಭೆಯ ಜೆಟ್‌ಸಕ್ಕರ್ ವಾಹನವೊಂದನ್ನು ಅತ್ಯಂತ ಕಡಿಮೆ ಮಾಸಿಕ ಬಾಡಿಗೆ ರೂ. ೧೨,೦೦೦/-ಕ್ಕೆ ಗುತ್ತಿಗೆದಾರರೊಬ್ಬರಿಗೆ ಬಾಡಿಗೆಗೆ ನೀಡಲಾಗಿದ್ದರೆ, ನಗರಸಭೆಯ ಅಧೀನದ ೩ ಡಂಪರ್ ಪ್ಲೇಸರ್ ಡಬ್ಬಲ್ ಕಂಟೈನರ್  ವಾಹನಗಳು, ಒಂದು ಟಿಪ್ಪರ್ ಮತ್ತು ಒಂದು ಹೊಸ ಜೆ.ಸಿ.ಬಿ.ಯನ್ನು ಅನಧಿಕೃತವಾಗಿ ಗುತ್ತಿಗೆದಾರರ ಉಪಯೋಗಕ್ಕೆ ನೀಡಲಾಗಿದೆ.
೧೯.    ಹೊರಗುತ್ತಿಗೆಯ ಹೆಚ್ಚಿನ ಪ್ರಕರಣಗಳಲ್ಲಿ ಕೆಲವೇ ಗುತ್ತಿಗೆದಾರರು ಏಕಸ್ವಾಮ್ಯ ಸಾಧಿಸಿರುವುದು ವಿಷ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ