ಮಂಗಳವಾರ, ಜುಲೈ 23, 2013

ಎರ್ಮಾಳಿನಲ್ಲಿ ಮೀನುಗಾರಿಕ ರಸ್ತೆಗೆ ಹಾನಿ ಮನೆಗಳು ಅಪಾಯದಂಚಿನಲಿ..

ವರದಿ-ಸುರೇಶ್ ಎರ್ಮಾಳ್
ತೆಂಕ ಎರ್ಮಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಡಲು ಕೊರೆತ ಮತ್ತಷ್ಟು ತೀವೃಗೊಂಡಿದ್ದು, ಹತ್ತಾರು ತೆಂಗಿನ ಮರಗಳು ಕಡಲು ಪಾಲಾಗಿ, ಮೀನುಗಾರಿಕ ರಸ್ತೆಗೂ ಹಾನಿ ಸಂಭವಿಸಿ, ಸ್ಥಳೀಯ ನಾಲ್ಕು ಮನೆಗಳು ತೀವೃ ಅಪಾಯ ಎದುರಿಸುವಂತ್ತಾಗಿದೆ.ಸ್ಥಳೀಯ ಮೀನುಗಾರ ಮುಖಂಡರಾದ ದಾಮೋಧರ ಸುವರ್ಣರವರು ಹೇಳುವಂತ್ತೆ ಕಳೆದ ನಾಲ್ಕು ವರ್ಷಗಳಿಂದ ಈ ಭಾಗದಲ್ಲಿ ಕಡಲು ಕೊರೆತ ಆರಂಭಗೊಂಡಿದ್ದು. ಇದಕ್ಕೆ ಯುಪಿಸಿ‌ಎಲ್ ಬ್ರೇಕ್‌ವಾಟರ್ ಕಾಮಗಾರಿಯೇ ಮೂಲ ಕಾರಣವಾಗಿದೆ. ಆ ಕಾಮಗಾರಿಯನ್ನು ತಕ್ಷಣ ತೆರವುಗೊಳಿಸುವಂತ್ತೆ ಜಿಲ್ಲಾಧಿಕಾರಿಗಳು ಸಹಿತ ಕಡಲು ಕೊರೆತ ವೀಕ್ಷಣೆಗೆ ಸ್ಥಳಕ್ಕಾಗಮಿಸಿದ ಸಚಿವ ವಿನಯ ಕುಮಾರ್ ಸೊರಕೆ ಹಾಗೂ ಸಂಸದ ಜಯಪ್ರಕಾಶ್ ಹೆಗ್ಡೆಯವರಲ್ಲಿ ಮನವಿ ಮಾಡಲಾಗಿದೆ. ಆದರೆ ಈ ವರೆಗೆ ಯಾವುದೇ ರೀತಿಯಲ್ಲಿ ನಮ್ಮ ಮನವಿಗೆ ಮಾನ್ಯತೆ ದೊರಕಿಲ್ಲ. ಹತ್ತು ದಿನಗಳ ಗಡುವು ನೀಡಲಾಗಿದೆ ತಪ್ಪಿದ್ದಲ್ಲಿ, ರಾಜಕೀಯ ರಹಿತವಾದ ಹೋರಾಟ ನಮಗೆ ಅನಿರ್ವಾಯವಾದೀತು ಎಂದಿದ್ದಾರೆ.
ಈ ಕಡಲು ಕೊರೆತ ತೀವೃತೆಯ ಬಗ್ಗೆ ಮಾತನಾಡಿದ ಸ್ಥಳೀಯರಾದ ಸಂಜೀವ ಎಂಬವರು, ದಿನದಿಂದ ದಿನಕ್ಕೆ ಕಡಲು ಕೊರೆತ ತೀವೃತೆ ಪಡೆಯುತ್ತಿದೆ. ಈ ಭಾಗದ ನಿವಾಸಿಗಳು ಮನೆ ಬಿಡುವ ಮಟ್ಟಕ್ಕೆ ತಲುಪಿದ್ದಾರೆ. ಸರ್ಕಾರಿ ಅಧಿಕಾರಿಗಳಾಗಲಿ.. ರಾಜಕೀಯ ಮುಖಂಡರಾಗಲೀ ತಕ್ಷಣ ಸ್ಪಂಧಿಸಿ ಒಂದೋ ಕಡಲು ಕೊರೆತ ತಡೆಗೆ ಶಿಸ್ತು ಬದ್ಧ ಕಾಮಗಾರಿ ನಡೆಸಲಿ, ಇಲ್ಲ ಅಪಾಯದಂಚಿನಲ್ಲಿರುವ ನಿವಾಸಿಗಳಿಗೆ ಬದಲಿ ಸೊರಿನ ವ್ಯವಸ್ಥೆ ಕಲ್ಪಿಸಲಿ ಎಂಬುದಾಗಿ ಆಗ್ರಹಿಸಿದ್ದಾರೆ.
ಈ ಭಾಗದ ತಾ.ಪಂ. ಸದಸ್ಯೆ ಸುಮನಾ ಕಿಶೋರ್ ಮಾತನಾಡಿ ಸಚಿವರು, ಜಿಲ್ಲಾಧಿಕಾರಿಗಳು ಸಹಿತ ಮೀನುಗಾರಿಕ ಇಂಜಿಯರ್‌ರನ್ನು ಸಂಪರ್ಕಿಸಿ ಈ ಭಾಗದ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದ್ದೇನೆ. ಆದರೆ ನನ್ನ ಮಾತಿಗೆ ಉತ್ತರವಾಗಿ ಕಡಲು ಕೊರೆತ ಪ್ರದೇಶಕ್ಕೆ ತಾತ್ಕಾಲಿಕ ಪರಿಹಾರವೆಂಬಂತ್ತೆ ಕಲ್ಲು ಹಾಕುವ ಪ್ರಕೃಯೆ ನಡೆಸಲು ಸೂಚಿಸಲಾಗಿದೆ ಎನ್ನುತ್ತಾರೆ. ಆದರೆ ಸಮುದ್ರಕ್ಕೆ ಹಾಕಲಾಗುತ್ತಿರುವ ಕಲ್ಲುಗಳಿಂದ ಯಾವುದೇ ಉಪಯೋಗ ಕಾಣುತ್ತಿಲ್ಲ, ಅತ್ತ ಕಲ್ಲು ಹಾಕುತ್ತಿರುವಂತ್ತೆ ಅದೇ ಪ್ರದೇಶದ ಹತ್ತಾರು ತೆಂಗಿನ ಮರಗಳು ಕಡಲ ಒಡಲು ಸೇರಿದೆ ಅಲ್ಲದೆ ಮೀನುಗಾರಿಕ ರಸ್ತೆಗೂ ಹಾನಿ ಸಂಭವಿಸಿದ್ದು, ಸ್ಥಳೀಯವಾಗಿರುವ ಸುಂದರ ಸುವರ್ಣ, ಚಂದ್ರಶೇಖರ ಸುವರ್ಣ, ಮಲ್ಲಮ್ಮ ಕರ್ಕೇರ ಹಾಗೂ ಲಿಂಗಪ್ಪ ಪುತ್ರನ್ ಎಂಬವರ ನಿವಾಸಗಳು ಅಪಾಯದಂಚಿನಲ್ಲಿದ್ದು ಯಾವ ಹೊತ್ತಲ್ಲೂ ಸಮುದ್ರದ ತೆರೆಗಳು ಮನೆಯ ಗೋಡೆಯನ್ನು ತಟ್ಟ ಬಹುದು ಎಂದಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ