ಬುಧವಾರ, ಜುಲೈ 17, 2013

ವಿದ್ಯಾಪೋಷಕ್ ಇಂಜೀನಿಯರಿಂಗ್ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಾಗಾರ

ಉಡುಪಿ : ಯಕ್ಷಗಾನ ಕಲಾರಂಗದ ಅಂಗ ಸಂಸ್ಥೆ ವಿದ್ಯಾಪೋಷಕ್‌ನ ಇಂಜೀನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ ಅಂಬಲಪಾಡಿ ದೇವಳದ ಭವಾನಿ ಮಂಟಪದಲ್ಲಿ ಜರಗಿತು. ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರಿನ ಇನ್ಫೋಸಿಸ್ ಅಧಿಕಾರಿಗಳಾದ ರವಿರಾಜ ಬೆಳ್ಮಣ್, ನಿತಿನ್ ಕುಮಾರ್, ರಾಮ್ ಪ್ರಸಾದ್, ರೋಬೋಸೋಫ್ಟ್ ಅಧಿಕಾರಿಗಳಾದ ಕೆ. ಶ್ರೀನಿವಾಸ ರಾವ್ ಹಾಗೂ ಶ್ರೀಮತಿ ಜ್ಯೋತಿ ಮಹಾದೇವ ಅವರು ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಗಳನ್ನು ನೀಡಿದರು.
ಸಮಾರೋಪ ಭಾಷಣದಲ್ಲಿ ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ.ಬೀ ವಿಜಯ ಬಲ್ಲಾಳ್ ಮಾತನಾಡಿ ಮಹಾನ್ ಸಾಧಕರ ಸಾಧನೆಯ ಹಿಂದೆ ತೀವ್ರತರವಾದ ಪರಿಶ್ರಮ ಅಡಗಿರುತ್ತದೆ. ಬಾಲ್ಯದಲ್ಲಿ ಎಲ್ಲ ಸವಾಲುಗಳನ್ನು ಎದುರಿಸಿ ಔನ್ನತ್ಯವನ್ನು ಸಾಧಿಸುವ ಛಲವನ್ನು ವಿದ್ಯಾರ್ಥಿಗಳು ಮೈಗೂಡಿಸಬೇಕು ಎಂದರು. ವೇದಿಕೆಯಲ್ಲಿ ಮಣಿಪಾಲ ಡಾಟ್‌ನೆಟ್‌ನ ಡಾ. ಯು.ಸಿ ನಿರಂಜನ್ ಮತ್ತು ಶ್ರೀ ಮಹಾದೇವ್ ಉಪಸ್ಥಿತರಿದ್ದರು. ಆರಂಭದಲ್ಲಿ ಉಪಾಧ್ಯಕ್ಷ ಶ್ರೀ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರ್ವಹಿಸಿದ ಕಾರ್ಯಕ್ರಮದ ಕೊನೆಗೆ ನಾರಾಯಣ ಎಂ. ಹೆಗಡೆ ಧನ್ಯವಾದ ಸಮರ್ಪಿಸಿದರು.IMG_0186

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ