ಬುಧವಾರ, ಜುಲೈ 24, 2013

ಉದ್ಯಾವರ ಮುಖ್ಯಪೇಟೆಯಲ್ಲಿ ನಿತ್ಯ ಟ್ರಾಪಿಕ್ ಜಾಮ್ ಮುಖ್ಯ ರಸ್ತೆ ಖಾಸಗಿ ಸಂಸ್ಥೆಯ ಪಾರ್ಕಿಂಗ್ ಸ್ಥಳ..!

ವರದಿ-ಸುರೇಶ್ ಎರ್ಮಾಳ್
ಉದ್ಯಾವರದ ಮಠದಂಗಡಿ ಪೇಟೆಯ ಭಾಗದಲ್ಲಿ ಕಾರ್ಯಚರಿಸುತ್ತಿರುವ ಬಟ್ಟೆಯಂಗಡಿಯೊಂದಕ್ಕೆ ವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಗ್ರಾಹಕರು ತಮ್ಮ ವಾಹನಗಳನ್ನು ರಸ್ತೆಯಲ್ಲೇ ಪಾರ್ಕ್ ಮಾಡುತ್ತಿರುವುದರಿಂದ ಈ ಭಾಗದಲ್ಲಿ ನಿತ್ಯ-ನಿರಂತರವಾಗಿ ಟ್ರಾಪಿಕ್ ಜಾಮ್ ನಡೆದು ಸಾರ್ವಜನಿಕರು ಸಮಸ್ಯೆಗೆ ಸಿಲುಕುವಂತ್ತಾಗಿದೆ.
ಲೋಕಲ್ ಪರ್ಮಿಟ್ ಹೊಂದಿರುವ ಸಿಟಿ ಹಾಗೂ ಸರ್ವಿಸ್ ಬಸ್ಸುಗಳು ಉದ್ಯಾವರ ಮುಖ್ಯ ಪೇಟೆಯ ಮುಖಾಂತರವೇ ಹಾದು ಹೋಗ ಬೇಕಾಗಿದ್ದು ಸಾರಿಗೆ ನಿಯಮವಾದರೂ ಈ ಟ್ರಾಪಿಕ್ ಸಮಸ್ಯೆಯಿಂದಾಗಿ ಹೆದ್ದಾರಿ ಮೂಲಕವೇ ಸಾಗುತ್ತಿರುವುದರಿಂದ ಸ್ಥಳೀಯ ಆಸ್ಪತ್ರೆಗೆ ಸಾಗುವ ರೋಗಿಗಳು ಸಹಿತ ಸಾರ್ವಜನಿಕರು ಹೆದ್ದಾರಿಯಲ್ಲೇ ಬಸ್ಸಿಳಿದು ನಡೆದುಕೊಂಡೋ ಇಲ್ಲ ರಿಕ್ಷಾ ಹತ್ತಿಯೋ ಸಾಗ ಬೇಕಾದ ಅನಿರ್ವಾಯತೆ ಬಂದೋಗಿದ್ದು. ಈ ಬಗ್ಗೆ ಬಸ್ಸು ನಿರ್ವಾಹಕರಲ್ಲಿ ಸಾರ್ವಜನಿಕರು ಮಾತಿಗಿಳಿದರೆ ಟ್ರಾಪಿಕ್ ಸಮಸ್ಯೆಯನ್ನೇ ಮುಂದಿಡುತ್ತಾರೆ ಎಂಬುದಾಗಿ ಸಾರ್ವಜನಿಕರು ದೂರಿದ್ದಾರೆ.
ಈ ಸಮಸ್ಯೆಗೆ ಮೂಲ ಕಾರಣ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸದೆ ವ್ಯವಹರಿಸುತ್ತಿರುವ ನಾಲ್ಕು ಮಹಡಿಗಳ ವಸ್ತ್ರೋದ್ಯಮ ಮಳಿಗೆ "ಜಯಲಕ್ಷ್ಮೀ ಸಿಲ್ಕ್ಸ್". ಉದ್ಯಾವರದ ಜುಮ್ಮಾ ಮಸೀದಿಯಿಂದ ಆರಂಭಗೊಂಡು ಅಂಚೆ ಕಛೇರಿಯವರೆಗೂ ರಸ್ತೆಯಲ್ಲೇ ಅಡ್ಡಾದಿಡ್ಡ ವಾಹನಗಳನ್ನು ನಿಲ್ಲಿಸುವುದರಿಂದ ಇತರೇ ವಾಹನಗಳ ಸಂಚಾರಕ್ಕೆ ತೊಡಕ್ಕಾಗುವ ವಿಚಾರ ಸ್ಥಳೀಯ ಗ್ರಾಮ ಪಂಚಾಯತ್ ಗಮನಕ್ಕೆ ಬಂದಿದ್ದರೂ ಅವರು ಈ ಬಗ್ಗೆ ವಸ್ತ್ರದಂಗಡಿ ಮಾಲಿಕರಿಗೆ ಎಚ್ಚರಿಕೆಯ ನೋಟಿಸು ಜಾರಿ ಮಾಡದೆ ಕರ್ತವ್ಯ ಮರೆತಿದ್ದು. ಅಂಗಡಿ ಮಾಲಿಕ ನಾಮ್ಕವಸ್ಥೆಗೋ ಎಂಬಂತ್ತೆ ಉತ್ತರ ಕರ್ನಾಟಕದ ವ್ಯಕ್ಯಿಯೋರ್ವನನ್ನು ಕೈಯಲ್ಲೊಂದು ಪೀಪಿ ಕೊಟ್ಟು ರಸ್ತೆಯಲ್ಲಿ ನಿಲ್ಲಿಲಾಗಿದ್ದು, ಆತನ ಪೀಪಿಗೆ ಯಾವುದೇ ಟ್ರಾಪಿಕ್ ಅವ್ಯವಸ್ಥೆ ತಡೆಯಲು ಸಾಧ್ಯವಾಗುತ್ತಿಲ್ಲ ಬದಲಾಗಿ ಅಧಿಕವಾಗುತ್ತಿದ್ದು. ಸಹನೆ ಕಳಕೊಂಡ ಸಾರ್ವಜನಿಕರು ಆತನ ವಿರುದ್ಧವೇ ಮಾತಿನ ಚಕಮಕ್ಕಿಳಿದ ಪ್ರಸಂಗಗಳು ಒಂದೆರಡಲ್ಲ. ಈ ಬಗ್ಗೆ ಸಂಬಂಧಿತ ಕಾಪು ಪೊಲೀಸರಿಗೂ ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರೂ ಪರಿಸ್ಥಿತಿ ಅದೇ ಮಾದರಿಯಲ್ಲಿ ಮುಂದುವರಿದಿದೆ.
ಈ ಬ್ರಹತ್ ಸಮಸ್ಯೆ ಸೃಷ್ಠಿಗೆ ಕಾರಣ ಬಟ್ಟೆಂಗಡಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಅನದಿಕೃತವಾಗಿ ಸಾರ್ವಜನಿಕ ರಸ್ತೆಯನ್ನೇ ಪಾರ್ಕಿಂಗ್ ವ್ಯವಸ್ಥೆಗೆ ಬಳಸುತ್ತಿರುವುದಾಗಿದೆ. ತಕ್ಷಣ ಸಂಬಂಧಿತ ಉದ್ಯಾವರ ಗ್ರಾಮ ಪಂಚಾಯತ್, ಸಾರಿಗೆ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಕಾನೂನಿನ ಮುಂದೆ ಬಡವ-ಶ್ರೀಮಂತ ಇಬ್ಬರೂ ಒಂದೇ ಎಂಬುದನ್ನು ಸಾಭೀತು ಪಡಿಸ ಬೇಕಾಗಿದ್ದು, ತಪ್ಪಿದ್ದಲ್ಲಿ ಸಾರ್ವಜನಿಕರೇ ಬೀದಿಗಿಳಿದು ಹೋರಾಟ ನಡೆಸ ಬೇಕಾದೀತು ಎಂಬುದಾಗಿ ಎಚ್ಚರಿಸಿದ್ದಾರೆ.23PDB-1 222

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ