ಶನಿವಾರ, ಜುಲೈ 27, 2013

ಶಾಲೆ ಬಿಟ್ಟ ರೋಶನ್ ಮರಳಿ ಶಾಲೆಗೆ ಬಂದ

ಕುಂದಾಪುರ: ಆತ ೮ನೇ ತರಗತಿ ವಿದ್ಯಾರ್ಥಿ. ಬೈಂದೂರು ವಲಯ ಕೊಡೇರಿಯ ಸರಕಾರಿ ಮಾದರಿ ಶಾಲೆಯಲ್ಲಿ ೭ನೇ ತರಗತಿ ಮುಗಿಸಿದ. ೮ನೇ ತರಗತಿ ಅಲ್ಲೇ ಮುಂದುವರಿಯಬಹುದಿದ್ದರೂ ಯಾರ್‍ಯಾರದ್ದೋ ಮಾತು ಕೇಳಿ ನಾಲ್ಕಾರು ಕೀ.ಮೀ ದೂರದ ಕಂಬದ ಕೋಣೆ ಪ್ರೌಢಶಾಲೆಗೆ ಸೇರಿಕೊಂಡ. ನಾಲ್ಕಾರು ದಿನ ಶಾಲೆಗೆ ಹೋದ ಬಾಲಕ ಮತ್ತೆ ಶಾಲೆಯ ಕಡೆಗೆ ಮುಖ ಮಾಡಲಿಲ್ಲ. ಶಿಕ್ಷಣ ಇಲಾಖಾಧಿಕಾರಿಗಳು ಪ್ರಯತ್ನಿಸಿದರು.
Roshan
ತಂದೆ ತಾಯಿ ಬಂಧುಗಳು ಯಾರೇ ತಿಳಿ ಹೇಳಿದರೂ ಬಾಲಕ ಮತ್ತೆ ಶಾಲೆಗೆ ಹೋಗಲು ಸುತಾರಾಂ ಒಪ್ಪಲಿಲ್ಲ. ಈ ಬಗ್ಗೆ ಬೈಂದೂರು ಬಿ.ಆರ್.ಪಿ. ಸತ್ಯನಾರಾಯಣ ಕೊಡೇರಿಯವರು ಸ್ಫೂರ್ತಿಧಾಮದ ಮುಖ್ಯಕಾರ್ಯನಿರ್ವಾಹಕರಾದ ಡಾ|| ಕೇಶವ ಕೋಟೇಶ್ವರ ಅವರ ಗಮನಕ್ಕೆ ತಂದರು. ಕೊಡೇರಿಯ ರೋಶನ್ ಮನೆಗೆ ತೆರಳಿದ ಡಾ|| ಕೋಟೇಶ್ವರರು ಬಾಲಕನಿಗೆ ಶಿಕ್ಷಣದ ಮಹತ್ವದ ಅರಿವು ಮೂಡಿಸಿ ಮನೆಯ ಹತ್ತಿರವಿದ್ದ ಕೊಡೇರಿ ಸರಕಾರಿ ಶಾಲೆಗೆ ಬಾಲಕ ಸೇರಿಕೊಳ್ಳುವಂತೆ ಮನ ಒಲಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ