ಮಂಗಳವಾರ, ಜುಲೈ 30, 2013

ಗಂಗೊಳ್ಳಿಯಲ್ಲಿ ಸುಂಟರಗಾಳಿ ಅಬ್ಬರ

ಕುಂದಾಪುರ:  ಗಂಗೊಳ್ಳಿ ಮೀನುಗಾರಿಕಾ  ಪ್ರದೇಶದಲ್ಲಿ    ರಾತ್ರಿ ಬೀಸಿದ ಭಾರಿ ಸುಂಟರಗಾಳಿಗೆ ಗಂಗೊಳ್ಳಿ ಮೀನುಗಾರಿಕಾ ಬಂದರು ಪ್ರದೇಶ  ತತ್ತರಿಸಿದ್ದು ಮೀನುಗಾರಿಕಾ ಶೆಡ್ ಹಾಗೂ ಹಲವು ಕಟ್ಟಡಗಳಿಗೆ  ಭಾರಿ ಹಾನಿಯುಂಟಾಗಿದೆ.
DSC_1384
ಬಂದರಿನಲ್ಲಿರುವ ಎರಡು ಶೆಡ್‌ಗಳ ಮೇಲ್ಛಾವಣಿ ಹಾರಿ ಹೋಗಿ ಅಪಾರ ನಷ್ಟ ಸಂಭವಿಸಿದೆ. ಬಂದರಿನ ಉತ್ತರ ದಿಕ್ಕಿನಲ್ಲಿರುವ ಆರಂಭದ  ಶೆಡ್ ಭಾಗಶ: ಹಾನಿಗೊಂಡಿದ್ದು, ಈ ಶೆಡ್‌ನಲ್ಲಿದ್ದ ಮೂರು ಮೀನುಗಾರರ ಕಚೇರಿಗಳಿಗೆ  ಹಾನಿಯುಂಟಾಗಿದೆ. ಕಚೇರಿಯ ಒಳಗಡೆ ಇಡಲಾಗಿದ್ದ ಪೀಠೋಪಕರಣಗಳಿಗೆ ಹಾನಿಯಾಗಿದೆ. ಮೀನುಗಾರರ ಬಾಕ್ಸ್ ಶೆಡ್‌ನ ಮೇಲ್ಛಾವಣಿ ಗಾಳಿಗೆ ಹಾರಿ ಹೋಗಿದೆ. DSC_1386
ಈ ಶೆಡ್‌ನ ಮೇಲ್ಛಾವಣಿಯ ಭಾರಿ ಗಾತ್ರದ ಕಬ್ಬಿಣದ ಪೈಪ್ ಗಾಳಿಗೆ ಹಾರಿಹೋಗಿದೆ.  ಶೆಡ್‌ನ ಸಮೀಪದಲ್ಲಿರುವ ಅಂಗಡಿಯೊಂದು ಸಂಪೂರ್ಣವಾಗಿ ಕುಸಿದು ಬಿದ್ದು,  ಶೀಟ್‌ಗಳು ಗಾಳಿಯ ರಭಸಕ್ಕೆ ಹಾರಿಹೋಗಿದೆ.   ದಕ್ಷಿಣ ದಿಕ್ಕಿನಲ್ಲಿರುವ ಶೆಡ್ ಸುಂಟರಗಾಳಿಗೆ ತುತ್ತಾಗಿ ಹಾನಿಗೊಳಗಾಗಿದ್ದು,  ಮೇಲ್ಛಾವಣಿ ಹಾರಿ ಹೋಗಿದೆ. ಈ ಶೆಡ್‌ನಲ್ಲಿರುವ ಮೀನುಗಾರರ ಕಚೇರಿಗೂ ಕೂಡಾ ಹಾನಿಯುಂಟಾಗಿದ್ದು, ಮೀನುಗಾರರಿಗೆ ಸೇರಿದ ಎರಡು ಬಾಕ್ಸ್ ಶೆಡ್‌ನ ಮೇಲ್ಛಾವಣಿ ಕೂಡ ಭಾರಿ ಬಿರುಗಾಳಿಗೆ ಹಾರಿ ಹೋಗಿ ಅಪಾರ ನಷ್ಟ ಸಂಭವಿಸಿದೆ.  ಬಂದರಿನ ಮೀನು ವಿಕ್ರಯದ ಏಲಂ ಪ್ರಾಂಗಾಣದ  ಛಾವಣಿ ಗಾಳಿಗೆ ಹಾರಿಹೋಗಿದೆ.
DSC_1381
ಕುಸಿತಕ್ಕೊಳಗಾದ ಅಂಗಡಿಯ ಮೇಲ್ಛಾವಣಿಯ ಕೆಳಗೆ ಸಿಲುಕಿ ದನವೊಂದು ಮೃತಪಟ್ಟಿದೆ. ಶನಿವಾರ ಬೆಳಗ್ಗೆ  ಅಂಗಡಿಯ ಮೇಲ್ಛಾವಣಿಯ ಭಾಗಗಳನ್ನು ತೆರವುಗೊಳಿಸುತ್ತಿದ್ದ ಸಂದರ್ಭದಲ್ಲಿ  ಇದು ಪತ್ತೆಯಾಗಿದೆ.  ಸ್ಥಳಕ್ಕೆ  ಸ್ಥಳೀಯ ಶಾಸಕ  ಗೋಪಾಲ ಪೂಜಾರಿ  ಹಾಗೂ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿದ್ದಾರೆ .
DSC_1383
ಮೀನುಗಾರಿಕಾ ಇಲಾಖೆಯ ಯೋಜನಾ ಸಮನ್ವಯಾಽಕಾರಿ ಗಣಪತಿ ಭಟ್, ಇಲಾಖೆಯ ಸಹಾಯಕ ನಿರ್ದೇಶಕಿ ಸವಿತಾ ಖಾದ್ರಿ, ಇಲಾಖೆಯ ಸಿಬ್ಬಂದಿ ಗೋಪಾಲಕೃಷ್ಣ, ದಿವಾಕ ಖಾರ್ವಿ, ಗಂಗೊಳ್ಳಿ ಗ್ರಾಮಕರಣಿಕ ರಾಘವೇಂದ್ರ ದೇವಾಡಿಗ ಮೊದಲಾದವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಹಾನಿ ಪರಿಶೀಲಿಸಿದ್ದಾರೆ.
DSC_1382

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ