ಸೋಮವಾರ, ಜುಲೈ 15, 2013

ಮಣಿಪಾಲ ರೇಪಿಸ್ಟ್‌ಗಳ ನ್ಯಾಯಾಂಗ ಬಂಧನ ವಿಸ್ತರಣೆ

ಉಡುಪಿ:ಮಣಿಪಾಲ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬಂಧನದ ಅವಧಿ ಮುಗಿದ ಕಾರಣ  ಪ್ರಮುಖ ಆರೋಪಿಗಳಾದ ಯೋಗೇಶ್, ಆನಂದ, ಹರಿಪ್ರಸಾದ್ ಮತ್ತು ಸಾಕ್ಷ್ಯಾಧಾರ ನಾಶ ಪಡೆಸಿದ ಆರೋಪ ಎದುರಿಸುತ್ತಿರುವ ಬಾಲಚಂದ್ರ ಮತ್ತು ಹರೀಂದ್ರ ಅವರನ್ನು ಹೆಚ್ಚುವರಿ ನ್ಯಾಯಾಲಯದ ನ್ಯಾಯಿಕ ದಂಡಾಧಿಕಾರಿ ಚಂದ್ರಶೇಖರ್ ಅವರ ಮುಂದೆ ಹಾಜರುಪಡಿಸಲಾಗಿದೆ. ಎಲ್ಲಾ ಆರೋಪಿಗಳನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಜುಲೈ. ೨೯ ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಿ ಆದೇಶ ಹೊರಡಿಸಿದೆ. ರೇಪಿಸ್ಟ್ ಯೋಗೇಶ್, ಆನಂದ್, ಹರಿಪ್ರಸಾದ್ ನನ್ನು ಶಿವಮೊಗ್ಗ ಜೈಲಿಗೆ, ಬಾಲಚಂದ್ರ ಮತ್ತು ಹರೀಂದ್ರನನ್ನು ಹಿರಿಯಡ್ಕ ಸಬ್‌ಜೈಲಿಗೆ ರವಾನಿಸಲಾಗಿದೆ.
[youtuber youtube='http://www.youtube.com/watch?v=SGbtOkJPovM&feature=c4-overview&list=UUs0k8vSBwTqzHjMqn8PYrzQ']
7/14/2013 11:46 PM

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ