ಗುರುವಾರ, ಜುಲೈ 25, 2013

ಭಂಡಾರ್ಕಾರ್‍ಸ್ ಕಾಲೇಜಿನಲ್ಲಿ ‘ಹಾವು ಮತ್ತು ನಾವು’

ಕುಂದಾಪುರ: ಈ ಹಿಂದೆ ಕರಾವಳಿ ಕರ್ನಾಟಕ ಭಾಗದ ಜನರು ನಾಗಾರಾಧನೆಗೆ ತಮ್ಮದೇ ಆದ ವಿಶಿಷ್ಠ ಪ್ರಾಮುಖ್ಯತೆಯನ್ನು  ನೀಡಿದ್ದಾರೆ.  ನಾಗರಹಾವಿನ ಕುರಿತ ಭಕ್ತಿ ಮತ್ತು ಭಯಕ್ಕೆ ಪೂರಕವಾಗಿ ಅವುಗಳ ಸಂರಕ್ಷಣೆಗೆ ನಾಗಬನಗಳನ್ನು ನಿರ್ಮಿಸಿದ್ದರು. ಎಂದು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಆಡಳಿತಾಧಿಕಾರಿಗಳಾದ ಡಾ.ಹೆಚ್.ಶಾಂತಾರಾಮ್ ಅವರು ಅವರು ಅಭಿಪ್ರಾಯಪಟ್ಟರು.
july 24- havu-navu_(4)-2
ಅವರು ಇಲ್ಲಿನ ಭಂಡಾರ್ಕಾರ್‍ಸ್ ಕಾಲೇಜಿನಲ್ಲಿ ಭಂಡಾರ್ಕಾರ್‍ಸ್ ಪದವಿಪೂರ್ವ ಕಾಲೇಜು , ರೋಟರಿ ಕ್ಲಬ್ ಮತ್ತು ಅಕಾಡೆಮಿ ಆಫ್ ಪರ್ಸನಾಲಿಟಿ ಎಕ್ಸಲೆನ್ಷ್ ಟ್ರೈನಿಂಗ್ (ರಿ) ಇವರ ಸಹಯೋಗದಲ್ಲಿ ನಡೆದ ‘ಹಾವು ಮತ್ತು ನಾವು’ ಹಾವುಗಳ ಪ್ರಭೇದಗಳ ಕುರಿತ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
july 24- havu-navu_(4)-1
ನಿಸರ್ಗದಲ್ಲಿ ಹಾವುಗಳ ಉಪಯೋಗವನ್ನು ಅರಿತುಕೊಂಡ ಕರಾವಳಿ ಕರ್ನಾಟಕದವರು ನಾಗಬನಗಳನ್ನು ಉಳಿಸಿದ್ದರು. ಪರೋಕ್ಷಬಾಗಿ ನಾಗ ಸಂತತಿಗಳು ಬೆಳೆಯಲು ಅವಕಾಶ ಮಾಡಿಕೊಟ್ಟಿದ್ದರು. ಆದರೆ ನಾಗಬನಗಳು ಮರೆಯಾಗಿ ಅವು ಕಲ್ಲಿನ ಕಟ್ಟಡಕ್ಕೆ ಮಾತ್ರ ಸೀಮಿತವಾಗಿದೆ. ನಾವು ಅದರ ನಿಜವಾದ ಉದ್ದೇಶಗಳನ್ನು ಮರೆತಿದ್ದೇವೆ ಎಂದರು.
ನಿಸರ್ಗದ ಸಮತೋಲನವನ್ನು ಕಾಯ್ದುಕೊಳ್ಳಬೇಕಾದರೆ ಪ್ರತಿಯೊಂದು ಪ್ರಾಣಿಪಕ್ಷಿ ಮತ್ತು ಸಸ್ಯಗಳಿಗೆ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಅದರಂತೆ ಹಾವುಗಳು ನಿಸರ್ಗದ ಸಮತೋಲನದಲ್ಲಿ ಬರುವ  ಅತ್ಯಂತ ಪ್ರಮುಖವಾದ ಪ್ರಾಣಿ. ಆದರೆ ನಾವು ಯಾವಿದೇ ನಿಸರ್ಗದ ಅಂಶಗಳಾಗಲಿ ಮನುಷ್ಯನ ಸ್ವಾರ್ಥಕ್ಕೆ ಬಳಕೆಯಾಗುತ್ತಿವೆ. ಅವುಗಳ ಕುರಿತ ಜಾಗೃತಿ ಯುವಸಮುದಾಯದಿಂದ ಆಗಬೇಕು. ಅದು ಕೇವಲ ನಮ್ಮ ಇಂದಿನ ಶಿಕ್ಷಣ ಪದ್ಧತಿಯಾದ ತರಗತಿಯ ನಾಲ್ಕು ಗೋಡೆಗಳ ಮಧ್ಯದಲ್ಲಿ ಕುಳಿತು ಕಲಿಯಲು ಸಾಧ್ಯವಿಲ್ಲ.
july 24- havu-navu_(4)-3
ಇಂತಹ ಕಾರ್ಯಕ್ರಮಗಳು ನಿಸರ್ಗದ ಕುರಿತು ತಿಳಿಯಲು ಸಾಧ್ಯವಾಗುತ್ತದೆ. ಸಂಸ್ಥೆಗಳಲ್ಲಿರುವ  ಪರಿಸರ ಪೂರಕ ಇಕೋಕ್ಲಬ್‌ಗಳು ಕೇವಲ ಉಧ್ಘಾಟನೆಗೆ ಸೀಮಿತವಾಗದೇ ಪರಿಸರ ಕುರಿತ ಕಾಳಜಿ ಬೀರುವ ಕಾರ್ಯಕ್ರಮಗಳನ್ನು ರೂಪಿಸಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಬೇಕು ಎಂದು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಕುಂದಾಪುರದ ಅರಣ್ಯಸಂರಕ್ಷಣಾಧಿಕಾರಿ ಲೋಹಿತ್  ಮಾತನಾಡಿ, ಪರಿಸರದ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಆಹಾರ ಚಕ್ರ ಪ್ರಮುಖ ಪಾತ್ರ ವಹಿಸುತ್ತದೆ. ಈ ಚಕ್ರದಲ್ಲಿ ಹಾವು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ.
Picture 036
ಇಲ್ಲಿ ಯಾವಿದೇ ಜೀವಿಯು ಅಳಿವಿನಂಚಿಗೆ ಹೋದರೂ ಪರಿಸರದ ಅಸಮತೋಲನವಾಗುತ್ತದೆರೀ ಮಾಂಸಹಾರಿ ಜೀವಿಗಳಾದ ಹಾವುಗಳು ಅದಕ್ಕಿಂತ ಸಣ್ಣ ಪ್ರಾಣಿಗಳನ್ನು ಹಿಡಿದು ತಿನ್ನುತ್ತದೆ. ಇದರಿಂದ ಬೆಳೆಗಳ ಸಂರಕ್ಷಣೆಯಾಗುತ್ತದೆ. ಹೀಗೆ ಇವೆಲ್ಲವು ಒಂದಕ್ಕೊಂದು ಅನಿವಾವಭಾವ ಸಮತೋಲವನ್ನು ಹೊಂದಿ ಪರಿಸರದ ಉಳಿವಿಗೆ ಕಾರಣವಾಗಿವೆ. ಅವುಗಳ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.
Picture 063
ಉರಗ ತಜ್ಞ ಶ್ರೀ ಗುರುರಾಜ್ ಸನಿಲ್ ಅವರಿಂದ ನಡೆದ  ಹಾವುಗಳ ಪ್ರಭೇದಗಳ ಕುರಿತ ಮಾಹಿತಿ ಮತ್ತು ಪ್ರಾತ್ಯಕ್ಷಿಕೆಯಲ್ಲಿ ಅವರು ಹಾವುಗಳ ಕುರಿತು ವಿಶೇಷ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಶ್ರೀ ಸದಾನಂದ ಛಾತ್ರ , ಪದವಿ ಕಾಲೇಜಿನ  ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ, ರೋಟರಿ ಕ್ಲಬ್‌ನ ಕಾರ್ಯದಶಗಳಾದ ಶ್ರೀ ಹೆಚ್.ಎಸ್. ಹತ್ವಾರ್ ಉಪಸ್ಥಿತರಿದ್ದರು.
Picture 011
ಪದವಿಪೂರ್ವ ಕಾಲೇಜಿನ ಪಾಂಶುಪಾಲ ಶ್ರೀ.ಜಿ.ಎಂ.ಗೊಂಡ ಸ್ವಾಗತಿಸಿದರು. ರೋಟರಿ ಕ್ಲಬ್‌ನ ಅಧ್ಯಕ್ಷರಾದ ಶ್ರೀ ಸಿರಿಯಾರ ಗೋಪಾಲಕೃಷ್ಣ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಸರೋಜ ಎಂ. ಕಾರ್ಯಕ್ರಮ ನಿರ್ವಹಿಸಿದರು. ಅಕಾಡೆಮಿ ಆಫ್ ಪರ್ಸನಾಲಿಟಿ ಎಕ್ಸಲೆನ್ಷ್ ಟ್ರೈನಿಂಗ್ (ರಿ) ಇದರ ನಿರ್ದೇಶಕರಾದ ಶ್ರೀ ಹುಸೇನ್ ಹೈಕಾಡಿ ವಂದಿಸಿದರು.
Picture 010
Picture 027 1
Picture 033 2
Picture 035 3
Picture 036
Picture 044 4
Picture 049 5
Picture 059 6
Picture 063

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ