ಶುಕ್ರವಾರ, ಜುಲೈ 19, 2013

ಇದು ಸರ್ಕಸೋ.. ಅನಿವಾರ್ಯವೋ..! ಅಪಾಯವಂತ್ತೂ ಕಟ್ಟಿಟ್ಟ ಬುತ್ತಿ..

ವರದಿ-ಸುರೇಶ್ ಎರ್ಮಾಳ್
ಒಂದು ಮಗು ಸೈಕಲ್ ಸರಳಿನ ಮೇಲೆ ನಿಂತು ಪ್ರಯಾಣ.. ಮತ್ತೊಂದು ಪುಟ್ಟ ಬಾಲೆ ತರ್ಕಾರಿ ಸಾಮಾಗ್ರಿಗಳನ್ನು ಸಾಗಿಸಲು ಉಪಯೋಗಿಸುವ ಬುಟ್ಟಿಲ್ಲಿ.. ಮಕ್ಕಳ ಜನಕ ಸೈಕಲ್ ಚಾಲಕ.. ಇದು ಸರ್ಕಸೋ.. ಅನಿವಾಯವೋ..ಅಪಾಯವಂತ್ತೂ ಕಟ್ಟಿಟ್ಟ ಬುತ್ತಿ..
ಹೊರ ಜಿಲ್ಲೆಯ ಕಾರ್ಮಿಕನೋರ್ವ ಸೈಕಲ್‌ನಲ್ಲಿ ತನ್ನ ಮಕ್ಕಳನ್ನು ಕೂರಿಸಿಕೊಂಡು ಕಾಪುವಿನ ಮುಖ್ಯ ಪೇಟೆಯಲ್ಲಿ ಸಂಚರಿಸಿದ ಪರಿ ಇದು. ಈ ಸ್ಥಿತಿ ಈ ಕೂಲಿ ಕಾರ್ಮಿಕನಿಗೆ ಅನಿವಾರ್ಯ ಆಗಿರಬಹುದು, ಆದರೆ ಅಷ್ಟೇ ಅಪಾಯವೂ ಹೌದು. ಸೈಕಲ್ ಚಕ್ರವೇನಾದರೂ ಹೊಂಡಕ್ಕೆ ಬಿದ್ದರೆ ರೋಲ್ ಮೇಲೆ ನಿಂತುಕೊಂಡಿದ್ದ ಮಗು ಕೆಳಗೆ.. ಮಗುವಿನ ಬಾರ ತಾಳಲಾರದೆ ಮಗು ಕುಳಿತ್ತಿರುವ ಬುಟ್ಟಿಯ ಬ್ರಕೇಟ್ ತುಂಡಾದರೆ ಮಗುವಿನ ಸ್ಥಿತಿ..!
ಇಂಥಹ ಅಪಾಯಕಾರಿ ಪ್ರಯಾಣ ಕಾಪು ಪೇಟೆಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರ ಮುಂಭಾಗದಲ್ಲಿ ನಡೆದಿದ್ದರೂ. ಆಶ್ಚರ್ಯದಿಂದ ಈ ದೃಶ್ಯವನ್ನು ಸಾಮಾನ್ಯ ಜನರಂತ್ತೆ ವಿಕ್ಷೀಸಿದ್ದು ಬಿಟ್ಟರೆ ಕ್ರಮ ಶೂನ್ಯ. ಆದರೆ ಸ್ಥಳದಲ್ಲಿದ್ದ ಪಾದಚಾರಿ ಮಹಿಳೆಯೋರ್ವರು ಈ ದೃಶ್ಯ ಕಂಡು ತನ್ನ ಭಾಷೆ ತುಳುವಿನಲ್ಲಿ ಸೈಕಲ್ ಚಾಲಕನಿಗೆ ಬುದ್ಧಿ ಮಾತು ಹೇಳಿದಾಯಿತು. ಆದರೆ ಬಾಷೆ ತಿಳಿಯದ ಆತ ತಲೆಯಾಡಿಸಿ ತನ್ನ ಪಾಡಿಗೆ ತಾನು ಅದೇ ಅಪಾಯಕಾರಿ ಸ್ಥಿತಿಯಲ್ಲಿ ಸೈಕಲಿನೊಂದಿಗೆ ಮರೆಯಾದ.
18PADU

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ