ಮಂಗಳವಾರ, ಜುಲೈ 23, 2013

ಹಲಸಿನ ಮರ ಹತ್ತಿದವ ಮಸಣ ಸೇರಿದ

ಉಡುಪಿ: ಹಲಸಿನ ಹಣ್ಣು ಕೊಯ್ಯಲು ಹೋದ ಯುವಕ ವಿದ್ಯುತ್ ಸಂಪರ್ಕದಿಂದ ಸಾವಿಗೀಡಾದ ದುರಂತ ಘಟನೆ ಉಡುಪಿ ನಗರದ ಅಲೆವೂರು ಸಮೀಪ ವರದಿಯಾಗಿದೆ. ಇಲ್ಲಿನ ಗುಡ್ಡೆ ಅಂಗಡಿ ನಿವಾಸಿ ಅಜೇಯ್(೨೪) ಎಂಬಾತನೇ ಮೃತ ದುರ್ದೈವಿ.
curent shock alevuru  (1)
ಈತ ಮರ ಹತ್ತಿದ್ದ ವೇಳೆ ಹೈಟೆನ್ಶನ್ ವಯರ್ ನ ಸಂಪರ್ಕಕ್ಕೆ ಬಂದು ಈ ದುರ್ಘಟನೆ ನಡೆದಿದೆ. ಮೃತ ದೇಹ ಮರದಲ್ಲೇ ನೇತಾಡುತ್ತಿದ್ದುದರಿಂದ ನೂರಾರು ಕುತೂಹಲಿಗಳು ಪರಿಸರದಲ್ಲಿ ಸೇರಿದರು. ಬಳಿಕ ನಗರ ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬಂದಿಗಳು ಸ್ಥಳಕ್ಕಾಗಮಿಸಿದ ಶವವನ್ನು ಕೆಳಗಿಳಿಸಿದರು.
DSC07144_resize

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ