ಮಂಗಳವಾರ, ಜುಲೈ 23, 2013

ಅನಾಥ ವೃದ್ಧೆಗೆ ಸ್ಫೂರ್ತಿಧಾಮದ ಆಶ್ರಯ

ಎಂತೆಂಥಾ ಜನ ಇರ್‍ತಾರೋ ನೋಡಿ. ಇತ್ತೀಚೆಗೆ ಸ್ಫೂರ್ತಿಧಾಮಕ್ಕೆ ದಾಖಲಾದ ೬೦ವರ್ಷ ಪ್ರಾಯದ ಅನಾಥ ವೃದ್ಧೆ ಜಾನಕಿಯಮ್ಮ ಈಗ ಕೈಲಾಗದವರು. ಪ್ರಾಯದ ಕಾಲದಲ್ಲಿ ಗಂಡ ಮನೆ ಮಕ್ಕಳೀಗಾಗಿ ಜೀವ ಸವೆಸಿದ ಜಾನಕಿಯಮ್ಮ ಈಗ ಇಳಿವಯಸ್ಸಿನಲ್ಲಿ ಅನಾಥಳ ಹಣೇಪಟ್ಟಿ ಕಟ್ಟಿಕೊಂಡು ಸ್ಫೂರ್ತಿಧಾಮಕ್ಕೆ ದಾಖಲಾಗುವಂತಾಗಿದೆ.
ಇದ್ದಬದ್ದ ಆಸ್ತಿಯನ್ನೆಲ್ಲಾ ಮಾರಿಕೊಂಡು ಗಂಡ ಮಗ ಊರು ಬಿಟ್ಟು ಹೊರಟುಹೋಗಿದ್ದಾರೆ. ಅಲ್ಲಿ ಇಲ್ಲಿ ತಿರುಗಾಡಿ ಅನಾರೋಗ್ಯದಿಂದ ಉಡುಪಿ ಬಸ್ ನಿಲ್ದಾಣದಲ್ಲಿ ಮಲಗಿದ್ದಾಗ ವಿಶುಶೆಟ್ಟಿ ಎನ್ನುವವರು ಸರಕಾರಿ ಆಸ್ಪತ್ರೆಗೆ ಸೇರಿಸಿದರು. ಅಲ್ಲಿ ಶುಶ್ರೂಷೆ ನಂತರ ಚೇತರಿಸಿಕೊಂಡವರಿಗೆ ವೈದ್ಯರು ಸಾಂತ್ವನ ಕೇಂದ್ರದ ದಾರಿ ತೋರಿಸಿದರು. ಮಹಿಳಾ ಮತ್ತು ಮಕ್ಕಳ ಇಲಾಖೆಯಡಿ ನಡೆಯುವ ಸಾಂತ್ವನ ಕೇಂದ್ರದಲ್ಲಿ ವ್ಯವಸ್ಥೆ ಇಲ್ಲದ ಕಾರಣ ಸ್ಫೂರ್ತಿಧಾಮಕ್ಕೆ ದಾಖಲಿಸಿದ್ದಾರೆ. ಜಾನಕಿಯಮ್ಮ ಗಂಡ ಮಗನ ನಿರೀಕ್ಷೆಯಲ್ಲಿ ಕೊರಗುತ್ತಲೇ ಸ್ಫೂರ್ತಿಧಾಮದ ಮಕ್ಕಳೊಂದಿಗೆ ಸಂತೋಷದಲ್ಲಿದ್ದಾರೆ. ವಾರೀಸುದಾರರ್‍ಯಾರಾದರೂ ಇದ್ದಲ್ಲಿ ಸ್ಫೂರ್ತಿಧಾಮವನ್ನು ಸಂಪರ್ಕಿಸುವಂತೆ ಡಾ|| ಕೇಶವ ಕೋಟೇಶ್ವರ ತಿಳಿಸಿದ್ದಾರೆ.
ಮೋ: ೯೪೪೮೯೮೪೧೧೯
janakiyamma

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ