ಮಂಗಳವಾರ, ಜುಲೈ 30, 2013

ಬರುತ್ತಿದೆ ನರೇಂದ್ರ ಮೋದಿ ಮೊಬೈಲ್ ಸ್ಮಾರ್ಟ್ ನಮೋ......! ಫೋನ್ ಮೂಲಕ ಮಿಂಚಲಿರುವ ಮೋದಿ!

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಎಲ್ಲೆಡೆ ವ್ಯಾಪಿಸಿಕೊಳ್ಳುತ್ತಿದ್ದಾರೆ. ಮೋದಿಯ ಹೆಸರಿನಲ್ಲಿ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಬರ್ತಿದೆ. ಇದೇನು ವಿಚಿತ್ರ ಅಂದುಕೊಳ್ಳಬೇಡಿ.
ನರೇಂದ್ರ ಮೋದಿಯ ಫ್ಯಾನ್ ಗಳು ಸ್ಮಾರ್ಟ್ ನಮೋ ಹೆಸರಿನಲ್ಲಿ ಹೊಸ ಬಗೆಯ ಮೊಬೈಲ್ ತಯಾರಿಕೆಗೆ ಮುಂದಾಗಿದ್ದಾರೆ. ನಾಲ್ಕು ವರ್ಷನ್ ಗಳಲ್ಲಿ ಸ್ಮಾರ್ಟ್ ನಮೋ ಬಿಡುಗಡೆಯಾಗಲಿದ್ದು ಮೊದಲ ನರೇಂದ್ರ ಮೋದಿ ಸಿಗ್ನೇಚರ್ ವರ್ಷನ್ ಮೊಬೈಲ್ ಶೀಘ್ರದಲ್ಲಿಯೇ ಗ್ರಾಹಕರ ಕೈ ಸೇರಲಿದೆ. ಇದರಲ್ಲಿ ನರೇಂದ್ರ ಮೋದಿಯ ಸಹಿ ಇರುತ್ತದೆ ಅನ್ನೋದೇ ವಿಶೇಷ.
1077811_10201407341083640_1495192584_o
ನರೇಂದ್ರ ಮೋದಿಯ ನಿಕ್ ನೇಮ್ ನಮೋ ಈ ಸ್ಮಾರ್ಟ್ ಫೋನ್ ನ ಪರದೆಯ ಮೇಲೆ ರಾರಾಜಿಸಲಿದೆ. ಗುಜರಾತ್ ನಲ್ಲಿ ನೆಲೆ ನಿಂತಿರುವ ಚೈನಾ ಕಂಪನಿಯೊಂದು ನಮೋ ಮೊಬೈಲುಗಳ ತಯಾರಿಕೆಗೆ ಮುಂದಾಗಿದೆ.
ನಮೋ ಮೊಬೈಲಿನ ವಿಶೇಷತೆಗಳೆಲ್ಲ ಉಳಿದ ಸ್ಮಾರ್ಟ್ ಫೋನ್ ಗಳಂತಯೇ ಇರಲಿವೆ. ಆಂಡ್ರಾಯ್ಡ್ ಓಸಿ,  ೫ ಇಂಚ್ ಸ್ಕ್ರೀನ್? , ೧೩ ಮೆಗಾ ಪಿಕ್ಸೆಲ್ ಕ್ಯಾಮರಾ, ೧೬-೩೨ ಮೆಮರಿ ಹೊಂದಿರುವ ಸ್ಮಾರ್ಟ್ ನಮೋ ಬೆಲೆ ಸುಮಾರು ೧೬,೦೦೦ ರೂಗಳು.ಈಗಾಗಲೇ ಸ್ಮಾರ್ಟ್ ನಮೋ ವೆಬ್ ಸೈಟ್ ಕೂಡ ಬಿಡುಗಡೆಗೊಂಡಿದ್ದು ಹೊಸ ತಲೆಮಾರಿನ ಮೊಬೈಲ್ ಬಗ್ಗೆ ವಿವರಗಳೂ ಅಲ್ಲಿವೆ.
o
ಇಷ್ಟೇ ಅಲ್ಲ, ಮಧ್ಯಮವರ್ಗದವರ ಕೈಗೆಟುಕುವ ಬೆಲೆಯಲ್ಲೂ ನಮೋ ಮೊಬೈಲ್ಸ್ ತಯಾರಿಸುತ್ತೇವೆ ಅಂದಿದ್ದಾರೆ ಸ್ಮಾರ್ಟ್ ನಮೋ ಯೋಜನೆಯ ವಕ್ತಾರ ಅಮೀತ್ ದೇಸಾಯಿ.
ಏನೇ ಆಗಲಿ, ಮೊದಲು ಮೋದಿ ವಾಲಿಬಾಲ್ ಆಯ್ತು, ನಂತರ ಮೋದಿ ಕ್ರಿಕೆಟ್ ಬ್ಯಾಟ್ ಆಯ್ತು ಇದೀಗ ಮೊಬೈಲ್ ನಲ್ಲೂ ನರೇಂದ್ರ ಮೋದಿ. ಮುಂದಿನ ದಿನಗಳಲ್ಲಿ ಐರನ್ ಮ್ಯಾನ್ ನರೇಂದ್ರ ಮೋದಿ ಮತ್ತವರ ಅಭಿಮಾನಿಗಳ ಸರ್ಕಸ್ ಇನ್ನೂ ಯಾವ್ಯಾವ ರೂಪ ಪಡೆದುಕೊಳ್ಳಲಿದೆಯೋ ದೇವರೇ ಬಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ