ಬುಧವಾರ, ಜುಲೈ 24, 2013

ಹಾಸ್ಟೆಲ್ ಹೆಸರಿನಲ್ಲಿ ಪ್ರಾಂಶುಪಾಲರಿಂದ ಹಣ ವಸೂಲಿ, ಕಾರ್ಕಳದಲ್ಲಿ ವಿದ್ಯಾರ್ಥಿನಿಯರಿಂದ ಪ್ರತಿಭಟನೆ

ಉಡುಪಿ: ಉಡುಪಿ ಜಿಲ್ಲೆಯ ಕಾರ್ಕಳ ತಾಲುಕಿನ ಮಹಿಳಾ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಕಳೆದೆರಡು ದಿನಗಳಿಂದ ಪ್ರಾಂಶುಪಾಲರ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದಾರೆ.
[youtuber youtube='http://www.youtube.com/watch?v=SvxEvezPx-E&feature=c4-overview&list=UUs0k8vSBwTqzHjMqn8PYrzQ']
student protest (6)
ಕಾರ್ಕಳದ ಪೋಲಿಸ್ ಠಾಣೆಯ ಸಮೀಪದಲ್ಲಿರುವ ಮಹಿಳಾ ಪಾಲಿಟೆಕ್ನಿಕ್ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿದ್ದು ಇದರಲ್ಲಿ ಇದೀಗ 85 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಅವ್ಯವಸ್ಥೆಯ ಆಗರವೆ ಆಗಿರುವ ಮಹಿಳಾ ಪಾಲಿಟೆಕ್ನಿಕ್  ಕಾಲೇಜಿನಲ್ಲಿ ಕಳೆದ ಎಂಟು ತಿಂಗಳ ಹಿಂದೆ ವಾಸುದೇವ್ ಅವರು ಪ್ರಾಂಶುಪಾಲರಾಗಿ ಬಂದ ನಂತರ ಸಮಸ್ಯೆ ಮಿತಿ ಮೀರಿದೆ.
student protest (4)
ವಾಸುದೇವ್ ಅವರು ಪ್ರಾಂಶುಪಾಲರಾಗಿ ಬಂದ ನಂತರ ಇಲ್ಲಿನ ವಿದ್ಯಾರ್ಥಿಗಳು ಪ್ರಾಂಶುಪಾಲರ ಮಾನಸಿಕ ಕಿರುಕುಳದಿಂದ ಸಮಸ್ಯೆಗೊಳಗಾಗಿದ್ದಾರೆ. ಪ್ರಾಂಶುಪಾಲರ ಕಿರಿಕಿರಿಗೆ ಮೌನವಾಗಿದ್ದ ವಿದ್ಯಾರ್ಥಿನಿಯರು ನಿನ್ನೆಯಿಂದ ಪ್ರಾಂಶುಪಾರನ್ನು ವರ್ಗಾಯಿಸಬೇಕೆಂದು ಆಗ್ರಹಿಸಿ ಪ್ರತಿಭಟನೆಗಿಳಿದಿದ್ದಾರೆ.student protest (3)

ವಿದ್ಯಾರ್ಥಿನಿಯರಿಗೆ ಸರಕಾರದಿಂದಲೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಬೇಕಿದ್ದರೂ ಇಲ್ಲಿನ ವಿದ್ಯಾರ್ಥಿನಿಯರಿಗೆ ಇದೀಗ ಹಾಸ್ಟೆಲ್  ವ್ಯವಸ್ಥೆಯಿಲ್ಲ. ವಿದ್ಯಾರ್ಥಿನಿಯರು ಹಾಸ್ಟೆಲ್ ವ್ಯವಸ್ಥೆಯಿಲ್ಲದೆ ಖಾಸಗಿಯಾಗಿ ರೂಮ್ ಪಡೆದುಕೊಂಡು ವಸತಿ ವ್ಯವಸ್ಥೆ ಮಾಡುತ್ತಿದ್ದಾರೆ. ಕಳೆದ ವರ್ಷದವರೆಗೂ ಇದ್ದ ಹಾಸ್ಟೆಲ್ ವ್ಯವಸ್ಥೆಯನ್ನು ಅಲ್ಲಿ ಯಾವುದೆ ಸೌಕರ್ಯವಿಲ್ಲದೆ ಇರುವುದರಿಂದ ಮುಚ್ಚಲಾಗಿತ್ತು. ಇದೀಗ  ಹಾಸ್ಟೆಲ್ ಬಳಸಿರುವ ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲರು ಹಣ ವಸೂಲಿಗೆ ಇಳಿದಿದ್ದಾರೆ.student protest (2)
ವಿದ್ಯಾರ್ಥಿನಿಯರು ವರ್ಷಕ್ಕೆ ನಾಲ್ಕು ಸಾವಿರದಂತೆ ಪಾವತಿಸಬೇಕೆಂದು ಪ್ರಾಂಶುಪಾಲರು ಸೂಚಿಸಿದ್ದು ಇದಕ್ಕೆ ಪ್ರಾಂಶುಪಾಲರು ರಶೀದಿ ನೀಡುತ್ತಿಲ್ಲವೆನ್ನುವುದು ವಿದ್ಯಾರ್ಥಿಗಳ ಆರೋಪವಾಗಿದೆ. ವಿದ್ಯಾರ್ಥಿನಿಯರು ಹನ್ನೊಂದು ಆರೋಪಗಳ ಪಟ್ಟಿಯನ್ನೆ ಮಾಡಿದ್ದು ಈ ಆರೋಪ ವಿರುವ ಹಿನ್ನೆಲೆಯಲ್ಲಿ ಪ್ರಾಂಶುಪಾಲರನ್ನು ವರ್ಗಾಯಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಒಂದು ವೇಳೆ ಪ್ರಾಂಶುಪಾಲರ ವರ್ಗಾವಣೆ ಮಾಡಲಾಗದಿದ್ದರೆ ತಮ್ಮನ್ನೆ ಬೇರೆ ಕಾಲೇಜಿಗೆ ವರ್ಗಾಯಿಸುಂತೆ ಪಟ್ಟು ಹಿಡಿದಿದ್ದಾರೆstudent protest (1)ಇನ್ನು ಪ್ರಾಂಶುಪಾಲರು ಬಂದ ನಂತರ ಇಲ್ಲಿದ್ದ ಡಿಗ್ರೂಪ್ ನೌಕರರು ಬೇರೆಡೆ ತೆರಳಿದ್ದು ಇದರಿಂದ ಕಾಲೇಜಿನ ಪರಿಸ್ಥಿತಿ ಶೋಚನೀಯವಾಗಿದೆ. ಕಾಲೇಜಿನಲ್ಲಿ ಕಂಪ್ಯೂಟರ್ ಗಳನ್ನು ಕಸದ ರಾಶಿಯಂತೆ ಹಾಕಲಾಗಿದ್ದು ಲ್ಯಾಬ್  ಕಸದ ತೊಟ್ಟಿಯಂತಿದೆ. ಈ ಸ್ಥಿತಿಯಲ್ಲಿ ವಿದ್ಯಾರ್ಥಿನಿಯರು ಕಲಿಯುವತಹ ಪರಿಸ್ಥಿತಿ ನಿರ್ಮಾಣವಾಗಿದೆ.
student protest (18)
student protest (17)
student protest (16)
student protest (15)
student protest (14)
student protest (13)
student protest (9)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ