ಮಂಗಳವಾರ, ಜುಲೈ 23, 2013

ಯಕ್ಷಗಾನ ಪ್ರದರ್ಶನಗಳ ಅವಲೋಕನ

ಯಕ್ಷಗಾನ ಕಲಾರಂಗ (ರಿ.) ಉಡುಪಿ ತನ್ನ ಸದಸ್ಯರಿಗಾಗಿ ಪ್ರತಿವರ್ಷ ಮಳೆಗಾಲದಲ್ಲಿ ಆಯೋಜಿಸುತ್ತಾ ಬಂದ ಯಕ್ಷಗಾನ ಜುಲೈ ೭ ಮತ್ತು ೧೪ ರಂದು ಪೂರ್ಣಪ್ರಜ್ಞ ಸಭಾಂಗಣದಲ್ಲಿ ಜರಗಿತು. ಜುಲೈ ೭ ರಂದು ಜರಗಿದ ಬಡಗುತಿಟ್ಟಿನ ಯಕ್ಷಗಾನ ಅಭಿಜ್ಞಾನ ಶಾಕುಂತಲ ಮತ್ತು ವೀರವರ್ಮ ಕಾಳಗ ಹಾಗೂ ಜುಲೈ ೧೪ ರಂದು ನಡೆದ ತೆಂಕುತಿಟ್ಟಿನ ಯಕ್ಷಗಾನ ಉಷಾ ಪರಿಣಯ ಮತ್ತು ಭಾನುಮತಿ ಕಲ್ಯಾಣ ಒಟ್ಟು ನಾಲ್ಕು ಪ್ರದರ್ಶನಗಳ ಅವಲೋಕನವು ಜುಲೈ ೧೫ ರಂದು ಸಂಸ್ಥೆಯ ಕಛೇರಿಯಲ್ಲಿ ಜರಗಿತು. ಬಡಗುತಿಟ್ಟಿನ ಪ್ರದರ್ಶನಗಳ ಅವಲೋಕನವನ್ನು ಕುಂದಾಪುರದ ಕುಮಾರ ಎಸ್.ಎನ್ ಮತ್ತು ತೆಂಕುತಿಟ್ಟಿನ ಪ್ರದರ್ಶನಗಳ ಅವಲೋಕನವನ್ನು ಡಾ. ಹರೀಶ್ ಜೋಶಿ ನಡೆಸಿಕೊಟ್ಟರು. ಹಿರಿಯ ಕಲಾವಿದ ಯಕ್ಷಗಾನ ಗುರು ತೋನ್ಸೆ ಜಯಂತ್ ಕುಮಾರ್ ನಾಲ್ಕೂ ಪ್ರದರ್ಶನಗಳ ಕುರಿತು ತಮ್ಮ ಅಭಿಪ್ರಾಯ ಮಂಡಿಸಿದರು. ಸಂಸ್ಥೆಯ ಉಪಾಧ್ಯಕ್ಷ ಎಸ್.ವಿ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾವಂತ ಆಚಾರ್ಯ, ನಾರಾಯಣ ಸಫಲಿಗ, ಮುರಲಿ ಕಡೆಕಾರ್, ಪ್ರಥ್ವಿರಾಜ ಕವತ್ತಾರ್ ಪ್ರದರ್ಶನದಲ್ಲಿ ತಾವು ಕಂಡ ಗುಣ ದೋಷಗಳ ಟಿಪ್ಪಣಿ ಮಾಡಿದರು. ಎಚ್.ಎನ್ ವೆಂಕಟೇಶ್ ವಂದಿಸಿದರು. ನಾರಾಯನ ಎಂ. ಹೆಗಡೆ ಕಾರ್ಯಕ್ರಮ ನಿರೂಪಿಸಿದರು
IMG_0226

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ