ಬುಧವಾರ, ಜುಲೈ 3, 2013

ಮಲ್ಪೆ-ಕೊಡವೂರು ರೋಟರಿ ಪದಗ್ರಹಣ ಸಮಾರಂಭ

ಉಡುಪಿ:ಮಲ್ಪೆ-ಕೊಡವೂರು ರೋಟರಿಯ ೨೦೧೩- ೧೪ರ  ಪದಗ್ರಹಣ ಸಮಾರಂಭವು ಜೂ. ೩೦ ರಂದು  ಕೊಡವೂರು ಶ್ರೀ ಶಂಕರನಾರಾಯಣ ದೇವಳದ ವಸಂತ ಮಂಟಪದಲ್ಲಿ  ಜರಗಿತು.ಪದಗ್ರಹಣ ಅಧಿಕಾರಿಯಾಗಿ ರೋಟರಿ ಮಹಾ ಪೋಷಕಿ ಮಿತ್ರಾ ಭಂಡಾರ್ಕರ್ ನೂತನ ಅಧ್ಯಕ್ಷೆ ಪೂರ್ಣಿಮಾ ಜನಾರ್ದನ್ ಮತ್ತು ಕಾರ್ಯದರ್ಶಿ ಜನಾರ್ದನ್ ಕೊಡವೂರು ಅವರಿಗೆ ಪದಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ರೋಟರಿ ಸದಸ್ಯರಾದವರು ರೋಟರಿಯ ಎಲ್ಲಾ  ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಬದ್ದತೆಯ ಸೇವೆ ಮಾಡುವುದರೊಂದಿಗೆ  ಬಡಜನರಿಗೆ ಆರ್ಥಿಕ ಸಹಾಯವನ್ನು ನೀಡಿದರೆ ನಿಜವಾದ ರೋಟೇರಿಯನ್ ಬೆಳೆಯಲು ಸಾಧ್ಯ ಎಂದರು.
DSC_9606 (Copy)
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ  ವಲಯ ೨ರ ನೂತನ ಸಹಾಯಕ ಗವರ್ನರ್ ಎಂ. ಮಹೇಶ್ ಕುಮಾರ್ ಮಾತನಾಡಿ ರೋಟರಿ ಚಟುವಟಿಕೆಯಲ್ಲಿ ತೊಡಗಿ ಬದುಕಿನಲ್ಲಿ ಬದಲಾವಣೆಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು.   ಮುಖ್ಯ ಅತಿಥಿಗಳಾಗಿ ೨೦೧೨-೧೩ರ ಸಹಾಯಕ ಗವರ್ನರ್ ಅಶೋಕ್ ಕುಮಾರ್ ಶೆಟ್ಟಿ ,ವಲಯ ಸೇನಾನಿ ಪ್ರಕಾಶ್ ಶೆಟ್ಟಿ  ಉಪಸ್ಥಿತರಿದ್ದರುಇದೇ ಸಂದರ್ಭದಲ್ಲಿ ಸ್ಥಳೀಯ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವೈದ್ಯಕೀಯ ನೆರವು, ಮೂಡುಬೆಟ್ಟು ಶಾಲೆಗೆ ಕಲಿಕೋಪಕರಣಕ್ಕೆ ಪ್ರೋತ್ಸಾಹ ಧನವನ್ನು ನೀಡಲಾಯಿತು. ವೃತ್ತಿಯಲ್ಲಿ ಸಾಧನೆಗೈದ ಸಮಾಜದ ಪ್ರಮುಖ ಗಣ್ಯರಾದ ರೋಟರಿಯ ನೂತನ ಸಹಾಯಕ ಗವರ್ನರ್ ಎಂ. ಮಹೇಶ್ ಕುಮಾರ್, ಯಕ್ಷಛಾಯಗಾನ ಕಲಾಸಿಂಧು ಪ್ರಶಸ್ತಿ ಪುರಸ್ಕೃತ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ , ಮತ್ತು ರೋಟರಿಯಲ್ಲಿ ‘ಸರ್ವೀಸ್ ಎಬಾವ್ ಸೆಲ್ಫ್’ ಗೆ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಮಾಜಿ ಗವರ್ನರ್ ಜ್ಞಾನವಸಂತ ಶೆಟ್ಟಿ ಅವರನ್ನು ರೋಟರಿ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ