ಗುರುವಾರ, ಜುಲೈ 25, 2013

ಕೊರಿಯನ್ ಮಡ್‌ಫೇಸ್ಟ್ ! ಕಾಸು ಕೊಡಿ.. ಕೆಸರಲ್ಲಿ ಬಿದ್ದು ಒದ್ದಾಡಿ

ಕೆಸರು.., ಈ ಹೆಸರೇ ಅದೆಷ್ಟೋ ಮಂದಿಯ ಮೂಗು ಮುರಿಸುತ್ತದೆ. ಕೆಸರಂದ್ರೆ ಸಾಕು ಅದರಿಂದ ದೂರ ಇರೋರೇ ಜಾಸ್ತಿ. ರಸ್ತೆಯಲ್ಲಿ ನಡ್ಕೊಂಡು ಹೋಗ್ಬೇಕಾದ್ರೆ ಒಂಚೂರು ಕೆಸರು ಮೈಮೇಲೆ ಬಿದ್ರೆ ಸಾಕು ಇದ್ದ ಬದ್ದ ಎಲ್ಲಾ ಬೈಗುಳಗಳು ಬಾಯಿಗೆ ಬಂದು ಬಿಡ್ತದೆ. ಆದ್ರೆ ಕೊರಿಯಾದಲ್ಲೊಂದು ವಿನೂತನ ಆಟ ಇದೆ. ಈ ಆಟಗಳನ್ನು ಆಡ್ಬೇಕಾದ್ರೆ ಮೈ ತುಂಬಾ ಕೆಸರು ಮಾಡಿಕೊಳ್ಳಲೇ ಬೇಕು. ಅದೂ ಕೈತುಂಬಾ ದುಡ್ಡು ಕೊಟ್ಟು..!
mud1
AFP/Getty 148321422
ಈ ಫೋಟೋಗಳನ್ನೆಲ್ಲ ನೋಡಿದ್ರೆ ಏನಿದು ಚಾಕಲೇಟ್ ಟಬ್‌ನಲ್ಲಿ ಬಿದ್ದು ಒದ್ದಾಡ್ತಾ ಇದ್ದಾರಾ ಅಂತ ಅಂದ್ಕೋಬೇಡಿ. ಇದು ಕೆಸರು.., ಹೌದು ಮೈತುಂಬಾ ಕೆಸರು ಮಾಡಿಕೊಂಡು ಮಜಾ ಮಾಡೋ ಆಟ ಇದು. ಕೊರಿಯಾದಲ್ಲಿ ನಡೆಯುವ `ಮಡ್‌ಫೆಸ್ಟ್'ನ ಝಲಕ್ ಇದು.
mud11
ಕೊರಿಯಾದ ಬಹಳ ಪಾಪ್ಯುಲರ್ ಉತ್ಸವ ಈ ಮಡ್‌ಫೆಸ್ಟ್. ಬರೀ ಕೊರಿಯಾ ಮಾತ್ರವಲ್ಲ, ವಿಶ್ವದ ಮೂಲೆ ಮೂಲೆಗಳಿಂದ ಬಂದು ದುಡ್ಡುಕೊಟ್ಟು ಜನ ಕೆಸರಲ್ಲಿ ಬಿದ್ದು ಒದ್ದಾಡಿ ಹೋಗ್ತಾರೆ. ೧೯೯೮ರಲ್ಲಿ ಕೊರಿಯಾ ಸರ್ಕಾರ ಪ್ರವಾಸೋದ್ಯಮಕ್ಕೆ ಒತ್ತು ಕೊಡುವ ಉದ್ದೇಶದಿಂದ ಈ ಉತ್ಸವವನ್ನು ಶುರು ಮಾಡಿದೆ. ಡೇಶಿಯಾನ್‌ನಲ್ಲಿ ನಡೆಯೋ ಈ ಮಡ್‌ಫೆಸ್ಟ್ ಈಗ ಭಾರೀ ಫೇಮಸ್ಸು.
MUGLA/DALYAN;DALYAN CAMUR BANYOLARI SEZONU ACTI ILK MUSTERILERINDEN 16 YASINDAKI CAILLARD LEA I FOTO DHA;SULEYMAN ILTER)
೧೦ ದಿನಗಳ ಕಾಲ ಹಗಲು ರಾತ್ರಿ ನಡೆಯೋ ಕಾರ್ಯಕ್ರಮದಲ್ಲಿ ನಮಗೆ ಕಾಣಸಿಗೋದು ಯುವಕ- ಯುವತಿಯರೇ ಹೆಚ್ಚು. ಅದ್ರಲ್ಲೂ ಬ್ಯೂಟೀಸ್ ಸ್ವಲ್ಪ ಜಾಸ್ತಿ. ಕೆಸರಿಗೆ ಬಿದ್ದು ಬಟ್ಟೆ ಕೆಸರಾದ್ಮೇಲೆ ಹಂಗೆ ಕಾಣ್ತಾರೋ ಗೊತ್ತಿಲ್ಲ. ಇಂಟರೆಸ್ಟಿಂಗ್ ವಿಷ್ಯ ಅಂದ್ರೆ, ಈ ಆಟಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಸಿಗುತ್ತೆ. ಮಡ್ ಫೆಸ್ಟ್ ನಡೆಯೋ ಜಾಗವನ್ನು ರೆಡಿ ಮಾಡೋ ಕೆಲಸ ತಿಂಗಳುಗಳ ಕಾಲ ನಡೆಯುತ್ತದೆ. ಕಸಕಡ್ಡಿಗಳನ್ನು ತೆಗೆದು- ಕಲ್ಲುಗಳನ್ನು ಹೆಕ್ಕಿ ಶುಚಿ ಮಾಡ್ತಾರೆ. ಇಂಟರ್‌ನ್ಯಾಶನಲ್ ಲೆವೆಲ್ಲಿನ ಫೋಟೋಗ್ರಾಫರ್‍ಸ್ ಈ ಈವೆಂಟನ್ನ ಕವರ್ ಮಾಡಲು ಕೊರಿಯಾಕ್ಕೆ ಬರ್‍ತಾರೆ. ಭೂಮಿ ಮೇಲೆ ಇರೋ ಮಣ್ಣಿನ ಪೈಕಿ ಕೊರಿಯಾದಲ್ಲಿ ಸಿಗೋ ಕಪ್ಪು ಮಣ್ಣು ತುಂಬಾ ಪೋಷಕಾಂಶ ಉಳ್ಳದ್ದು. ಇದೇ ಕಾರಣಕ್ಕೆ ಕೊರಿಯಾ ಮಡ್‌ಫೆಸ್ಟ್ ಇಷ್ಟು ಫೇಮಸ್ಸಾಗಿದ್ದು.
mud9
ಮಡ್‌ಫೆಸ್ಟ್ ನಡೆಯೋ ಏರಿಯಾ ಪ್ರವೇಶಿಸಲು ಎಂಟ್ರಿ ಫೀ ಇದೆ. ಗೇಟ್‌ನಲ್ಲಿರೋ ಆಯೋಜಕರು ೩೦೦೦ ಔನ್ ಪಡೆಯುತ್ತಾರೆ. ೫೦೦೦ ಔನ್ ಕೊಟ್ರೆ `ಒಳ್ಳೆ' ಕೆಸರಲ್ಲಿ ಆಡೋ ಅವಕಾಶ. ಗೇಟ್ ದಾಟಿ ಒಳಗೆ ಎಂಟ್ರಿ ಕೊಟ್ರೆ ಸಾಕು ಅದೊಂದು ಬೇರೆಯೇ ಪ್ರಪಂಚ. ಅಲ್ಲಿ ಬಿಳಿಯ- ಎಣ್ಣೆಗಪ್ಪಿನವ- ಚೆಲುವ, ಸುಂದರಿ ಅನ್ನೋ ಬೇಧಭಾವವೇ ಇರೋದಿಲ್ಲ. ಯರ್ರಾಬಿರ್ರಿ ಕೆಸರಲ್ಲಿ ಬೀಳೋದೇ.., ಹೊರಳಾಡೋದೆ.
ಮಡ್‌ಫೆಸ್ಟ್‌ನಲ್ಲಿ ೧೫ ಈವೆಂಟ್‌ಗಳು. ಸೆಲ್ಫ್ ಮಸಾಜ್‌ಗೆ ಭಾರೀ ನೂಕು ನುಗ್ಗಲು. ಕೆಸರಿನ ಕಾರಂಜಿ, ಮಡ್ ಬಾತ್‌ಗೆ ನೆಕ್ಸ್ಟ್ ಪ್ರಿಫರೆನ್ಸ್. ನಮ್ಮ ಹಗ್ಗ ಜಗ್ಗಾಟ ಹೋಲುವ ಚೆಂಡು ಎಳೆದಾಟ ನೋಡೋದೇ ಮಜಾ. ದಿನಪೂರ್ತಿ ಬಿದ್ದು ಬಿದ್ದಾಡಿದ್ದು ಸಾಕಾಗಲ್ಲ ಅಂತ ನಡುರಾತ್ರಿವರೆಗೂ ಫೆಸ್ಟಿವಲ್ ಮುಂದುವರೆಯುತ್ತೆ. ಪಕ್ಕದಲ್ಲಿ ಹಿಪ್‌ಹಾಪ್- ಗ್ಲೋಬಲ್ ರೇವ್ ಪಾರ್ಟಿ ಬೇರೆ.
mud8
ಇಷ್ಟಲ್ಲಾ ಆದ್ಮೇಲೆ ಹಾಗೇ ಮನೆಗೆ ಹೋಗಕ್ಕಾಗುತ್ತಾ..? ಪಕ್ಕದಲ್ಲಿರೋ ಬೀಚ್‌ನಲ್ಲಿ ಎಲ್ರೂ ಸ್ನಾನ ಮುಗಿಸ್ಕೋತಾರೆ. ಅದೂ ಕೂಡಾ ಫೇಮಸ್ ಡೇಶಿಯಾನ್ ಬೀಚ್‌ನಲ್ಲಿ. ಶುಭ್ರ ಮತ್ತು ಶುಚಿಯಾದ ನೀಲ ನೀರಿನ ಸಮುದ್ರ ತೀರ ಅದು.
mud7
ಕೃಷಿ ಮಾಡೋದನ್ನು ಪೂರ್ತಿ ಬಿಟ್ಮೇಲೆ, ಗದ್ದೆಗಳಲ್ಲಿ ಕಾಂಪ್ಲೆಕ್ಸ್‌ಗಳೇ ಎದ್ಮೇಲೆ ನಮ್ಮ ಇಂಡಿಯಾದಲ್ಲೂ ಇಂತ ಫೆಸ್ಟ್‌ಗಳು ನಡೆದ್ರೆ ಆಶ್ಚರ್ಯಪಡಬೇಡಿ.
ಓಯ್.., ಈ ಕೊರಿಯನ್ ಮಡ್‌ಫೆಸ್ಟನ್ನು ಟಿವಿಯಲ್ಲಿ ಕಂಡ ಒಬ್ರು `ಮೊಕ್ಲೆಗ್ ಮರ್‍ಲ್‌ಯಾ' ಅಂತ ಬೈಕೊಂಡು ಚಾನೆಲ್ ಚೇಂಜ್ ಮಾಡಿದ್ರಂತೆ. ಏನೇ ಆಗ್ಲಿ ಇದೊಂಥರಾ ಡಿಫರೆಂಟ್ ಗೇಮ್ ಇದು.
mud6
mud5
mud4
mud3
mud2
1058524_1_58

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ