ಶನಿವಾರ, ಜುಲೈ 27, 2013

ಇಂದಿನ ಕಾಲಘಟ್ಟದಲ್ಲಿ ಯುವತಿಯರಿಗೆ ಕರಾಟೆ ಕಲಿಕೆ ಅತ್ಯಗತ್ಯ: ಗೀತಾಂಜಲಿ

ವರದಿ-ಸುರೇಶ್ ಎರ್ಮಾಳ್
ಮಣಿಪಾಲದಲ್ಲಿ ಇತ್ತೀಚಿಗೆ ನಡೆದ ಪ್ರಕರಣ ಸಹಿತ ದೇಶದೆಲ್ಲೆಡೆ ಕೇಳಿ ಬರುತ್ತಿರುವ ಅಪರಾಧ ತಡೆಗೆ ಯುವತಿಯರೇ ಮುಂದಾಗ ಬೇಕಾಗಿದ್ದು. ಆ ನಿಟ್ಟಿನಲ್ಲಿ ಕರಾಟೆ ಕಲೆಯನ್ನು ಕಲಿಯುವ ಮೂಲಕ ಆತ್ಮಸ್ಥೆರ್ಯವನ್ನು ಮೈಗೂಡಿಸಿಕೊಳ್ಳುವಂತ್ತೆ ಉಡುಪಿ ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ ವಿದ್ಯಾರ್ಥಿನಿಯರಿಗೆ ಕರೆ ನೀಡಿದ್ದಾರೆ.ಬಡಾ ಎರ್ಮಾಳು ಸರ್ಕಾರಿ ಪದವಿಪೂರ್ವ ಕಾಲೇಜಿನ ಸಯೋಜನೆಯೊಂದಿಗೆ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾರ್ವಜನಿಕ ಶಿಕ್ಷಣ ಇಲಾಖಾ ವಲಯ ಮಟ್ಟದ ಕರಾಟೆ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ ವಿವಿಧ ಕ್ರೀಡೆಗಳಿಗಾಗಿ ಸರ್ಕಾರ ಸರ್ಕಾರಿ ಶಾಲೆಗಳಿಗೆ ಅನುದಾನ ಬಿಡುಗಡೆಗೊಳಿಸಿ ವಿದ್ಯಾರ್ಥಿ ಮಟ್ಟದಲ್ಲೇ ಕ್ರೀಡೆಯನ್ನು ಬೆಳೆಸುವ ಯೋಜನೆಗೆ ಮುಂದಾಗಿದೆ. ಆದರೆ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಕೇವಲ ಶಿಕ್ಷಣಕ್ಕೆ ಮಾತ್ರ ಹೆಚ್ಚಿನ ಒತ್ತು ಕೊಡುವ ಮೂಲಕ ಮಕ್ಕಳ ಕ್ರೀಡಾಸ್ಫೋತಿಗೆ ದಕ್ಕೆಯುಂಟು ಮಾಡುತ್ತಿದೆ ಎಂದರು.
26PDB-1 (1)
ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ ಎರ್ಮಾಳು ಜನಾರ್ದನ ಜನಕಲ್ಯಾಣ ಸಮಿತಿಯ ಅಧ್ಯಕ್ಷರಾದ ವೈ.ಉದಯಕುಮಾರ್ ಶೆಟ್ಟಿ ಮಾತನಾಡಿ ಕ್ರೀಡೆಗೆ ತನ್ನದೇ ಆದ ದೊಡ್ಡತನವಿದೆ. ಅದರಲ್ಲೂ ಕರಾಟೆ ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ನಮ್ಮನ್ನು ಬೆಳೆಸಲು ಸಹಕಾರಿ ಆ ನಿಟ್ಟಿನಲ್ಲಿ ಎಲ್ಲಾ ವಿದ್ಯಾರ್ಥಿಗಳು ಕರಾಟೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತ್ತೆ ಕರೆ ಇತ್ತರು.
26PDB-1 (3)
ಈ ಸಂದರ್ಭ ಮಾತೃ ಸಂಸ್ಥೆಯ ವಿದ್ಯಾರ್ಥಿನಿಯರಿಂದ ವಿವಿಧ ದೈಹಿಕ ಕಾರ್ಯಕ್ರಮಗಳು ನಡೆದವು. ಸಮಾರಂಭದ ಅಧ್ಯಕ್ಷತೆಯನ್ನು ಉಚ್ಚಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ವಸಂತ ಶೆಟ್ಟಿ ವಹಿಸಿದ್ದರು, ಮುಖ್ಯ ಅಥಿತಿಗಳಾಗಿ ತಾ.ಪಂ. ಸದಸ್ಯೆ ಕೇಸರಿ ಯುವರಾಜ್, ಗ್ರಾ.ಪಂ. ಸದಸ್ಯರಾದ ಲಕ್ಷ್ಮಣ್ ಸುವರ್ಣ, ಶೋಭ. ಮೀನುಗಾರ ಪೇಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ದೈಹಿಕ ಶಿಕ್ಷಾಧಿಕಾರಿ ಬಸವರಾಜ್, ಕರಾಟೆಯ ಹಿರಿಯ ಶಿಕ್ಷಕ ಆನಂದ ದೇವಾಡಿಗ, ಪದವಿಪೂರ್ವ ಕಾಲೇನ ಪ್ರಭಾರ ಪ್ರಾಂಶುಪಾಲೆ ಅನಿತಾ, ಶಾಲಾಭಿವೃದ್ಧಿ ಸಮಿತಿಯ ಗುಲಾಬಿ ಯು. ಮೆಂಡನ್ ಉಪಸ್ಥಿತರಿದ್ದರು.
26PDB-1 (2)
ಉಪನ್ಯಾಸಕರಾದ ವೈ. ರಾಮಕೃಷ್ಣ ರಾವ್ ಸ್ವಾಗತಿಸಿದ್ದು, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ರವೀಂದ್ರ ರಾವ್ ವಂದಿಸಿದರು, ಉಪನ್ಯಾಸಕರಾದ ಸಂಪತ್ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ