ಮಂಗಳವಾರ, ಜುಲೈ 30, 2013

ಬಂಟಕಲ್ಲಿನಲ್ಲಿ ಸಾರ್ವಜನಿಕರಿಗೆ ಮನರಂಜನೆ ನೀಡಿದ ಕೆಸರು ಗದ್ದೆ ಸ್ಪರ್ಧೆ ನೂರಾರು ಸ್ಪರ್ಧಾಳುಗಳ ಸಮಾಗಮ..

ವರದಿ-ಸುರೇಶ್ ಎರ್ಮಾಳ್
ಬಂಟಕಲ್ಲು ಮಾಣಿಪಾಡಿ ಕೃಷ್ಣಮೂರ್ತಿ ನಾಯಕ್ ರವರ ಕೆಸರು ಗದ್ದೆಯಲ್ಲಿ ಸ್ಥಳೀಯ ಖಾಸಗಿ ಸಂಸ್ಥೆಗಳು ಏರ್ಪಡಿಸಿದ ಕೆಸರು ಗದ್ದೆ  ಸ್ಪರ್ಧಾ ಕೂಟ ಬಹಳ ಅದ್ಧೂರಿಯಾಗಿ ತೆರೆ ಕಂಡಿದೆ.
30 padu
ರಾಜಾಪುರ ಸಾರಸ್ವತ ಯುವ ವೃಂದ, ಶ್ರೀದುರ್ಗಾ ಮಹಿಳಾ ಮಂಡಳಿ, ಸಂಯುಕ್ತವಾಗಿ ಸಂಘಟಿಸಿದ ಈ ಕಾರ್ಯಕ್ರಮವನ್ನು ಕಾರ್ಕಳ ರಾಜಾಪುರ ಸಾರಸ್ವತ ಯುವ ಸಂಘಟನೆಯ ಸಂಚಾಲಕ ಅಶೋಕ್ ನಾಯಕ್ ಕಾರ್ಯಕ್ರಮ ಉದ್ಘಾಟಿಸಿದರು. ಉಡುಪಿ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಸದಾನಂದ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ನಮ್ಮ ಸಮಾಜ ಕೃಷಿಪ್ರದಾನವಾಗಿದ್ದು, ಇತ್ತೀಚಿನ ದಿನಗಳಲ್ಲಿ ಕೃಷಿಕರ ಮಕ್ಕಳು ಉನ್ನತ ಶಿಕ್ಷಣ ಪಡೆದು ಇತರ ಉದ್ಯೋಗದಲ್ಲಿ ಆಸಕ್ತಿ ತಳೆದುದರಿಂದ  ಹಳ್ಳಿಯ ಕೃಷಿಪದ್ದತಿ ಮೂಲೆಗುಂಪಾಗುತ್ತಿದೆ.  ಇತರ ಉದ್ಯೋಗದ ಜೊತೆಯಲ್ಲಿ ಕೃಷಿಯಲ್ಲಿಯೂ ಆಸಕ್ತಿ ಮೂಡಿಸಲು ಇಂತಹ ಕಾರ್ಯಕ್ರಮಗಳು ಪ್ರೇರಣೆ ನೀಡಲಿ ಹಾಗೂ ಹಿರಿಯರ ಸಾಂಪ್ರದಾಯಿಕ ಬದುಕನ್ನು ನೆನಪು ಮಾಡುವ ಪರಿಪಾಠ ಬೆಳೆಯಲಿ ಎಂದು ಹಾರೈಸಿದರು.
30 (1)
ಕಲ್ಲು ಮಾಣಿಪಾಡಿ ಕೃಷ್ಣಮೂರ್ತಿ ನಾಯಕ್‌ರವರ ನೀರಿನ ಝರಿ ಇರುವ ವಿಶಾಲವಾದ ಗದ್ದೆಯ ಕೆಸರಿನಲ್ಲಿ ದಿನಪೂರ್ತಿ ಮಕ್ಕಳ...ಯುವಕರ..ಮಹಿಳೆಯರ  ಮೇಲಾಟ, ವಿವಿಧ ಸ್ಫರ್ಧೆಗಳು, ವಿವಿಧ ಶ್ರೇಣಿಗಳಲ್ಲಿ  ಆಟಗಳು, ಹಗ್ಗ ಜಗ್ಗಾಟ, ಸಂಗೀತಕುರ್ಚಿ, ಕಣ್ಣಿಗೆ ಬಟ್ಟೆ ಕಟ್ಟಿ ಮಡಕೆ ಒಡೆಯುವುದು, ಬಲೂನು ಓಟ, ಅಲ್ಲದೆ ಕೆಸರಿನ ಎರೆಚಾಟದಲ್ಲಿ  ಲಿಂಗಭೇದವಿಲ್ಲದೆ  ಸ್ಫರ್ಧಾಳುಗಳು  ಭಾಗವಹಿಸಿ ಸಂಭ್ರಮಿಸಿದರು. ಆರಂಭದಲ್ಲಿ ಆಟ... ನಂತರ ಓಟ...ಕೊನೆಗೆ ಹಲಸಿನಸೋಳೆ,ತಿಮರೆ ಚಟ್ನಿಯೊಂದಿಗೆ ಗಂಜಿ ಊಟ.
30 (2)
ಸಮಾರೋಪ ಸಮಾರಂಭದಲ್ಲಿ ಅನಿವಾಸಿ ಭಾರತೀಯ ಹೇರೂರು ಗಂಪ ದತ್ತಾತ್ರೇಯ ಪಾಟ್ಕರ್ ಸ್ಫರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಅಭಿನಂದಿಸಿದರು. ಶ್ರೀಕ್ಷೇತ್ರ  ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ಆಡಳಿತ ಮೊಕ್ತೇಸರ ವಿಶ್ವನಾಥ ನಾಯಕ್, ಅಧ್ಯಕ್ಷ ಶಶಿಧರ ವಾಗ್ಲೆ ಶುಭ ಹಾರೈಸಿದರು.
ಯುವವೃಂದದ ಅಧ್ಯಕ್ಷ ಅನಂತರಾಮ ವಾಗ್ಲೆ ಸ್ವಾಗತಿಸಿದರು,ದೇವದಾಸ ಪಾಟ್ಕರ್, ಕೆ.ಆರ್.ಪಾಟ್ಕರ್ ನಿರೂಪಿಸಿದರು. ಕಾರ್ಯದರ್ಶಿ ಅಮೃತ್ ನಾಯಕ್ ವಂದಿಸಿದರು. ಸ್ಪರ್ಧೆಯಲ್ಲಿ ನೂರೈವತ್ತಕ್ಕೂ ಅಧಿಕ ಸ್ಫರ್ಧಾಳುಗಳು ಭಾಗವಹಿಸಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ