ಬುಧವಾರ, ಜುಲೈ 3, 2013

ಬಂತಿದೋ ಆಷಾಢ ಮಾಸ .....

ಮಲ್ಲಿಕಾ ಹರೀಶ್ ,ಚೇರ್ಕಾಡಿ.
ಆಟಿದ  ಅಮಾಸೆ, ಸೋಣದ ಸಂಕ್ರಾಂತಿ ,ಬೊಂತೆಲದ ಕೊಡಿಪರ್ಬ'
ಎನ್ನುತ್ತಲೇ ತುಳುನಾಡಿನ ಜನ ಪ್ರತಿಯೊಂದು ಮಾಸವನ್ನು ಸಾಂಪ್ರದಾಯಿಕ ಆಚರಣೆಯೊಂದಿಗೆ ಸ್ವಾಗತಿಸುತ್ತಾರೆ. ಇಲ್ಲಿ ಪ್ರತಿಯೊಂದು ಮಾಸಕ್ಕೂ ಜಾನಪದ ಹಿನ್ನೆಲೆಗೆ, ಮಹತ್ವವಿದೆ.
ShelledPinenuts
ತುಳುವರು ಆಚರಿಸುವ ಪ್ರತಿಯೊಂದು ಪರ್ವ  ದಿನಗಳು ಋತುಮಾಸದ ಬದಲಾವಣೆಗೆ ಹೊಂದಿಕೊಂಡಂತಿದೆ. ಮಳೆ ,ಬೆಳೆ, ಪಶುಪಾಲನೆ, ಪ್ರಕತಿಯ ಆರಾಧನೆ ಇವುಗಳೇ  ವಿಶೇಶವಾಗಿ ಪರ್ವ ದಿನಗಳಲ್ಲಿ ಸಮ್ಮಿಲನಗೊಂಡು ಬರುವ ಆಚರಣೆಗಳು. ಶ್ರದ್ಧೆ ಭಕ್ತಿಯನ್ನು ಅನುಸರಿಸಿ ಭಾವನಾತ್ಮಕವಾಗಿ ಇಂತಹ ಆಚರಣೆಗಳನ್ನು ಬೆಳಸಿ ಘೋಘಿಸುತ್ತಿರುವುದು ದ್ರಾವಿಡ ಮೂಲದ ತುಳುವರ ಸಂಸ್ಕೃತಿಯ  ಪ್ರತೀಕ .
images1
ಕಾರ್ತೆಲ್ ಮಿಥುನ ತಿಂಗಳಲ್ಲಿ ಮಳೆಗಾಲದ ದಿನವನ್ನು ಎದುರಿಸುವ ರೈತನಿಗೆ ಬೇಸಾಯದ ಬಿಡುವಿಲ್ಲದ ಕೆಲಸದ ವತ್ತಡ ,ತದನಂತರ ಬರುವುದೇ ಆಟಿ ಕರ್ಕಾಟಾಕ ಅಂದರೆ ಆಷಾಢ ಮಾಸ .ಈ ತಿಂಗಳಲ್ಲಿ ಯಾವುದೇ ಮಂಗಳ ಕಾರ್ಯಗಳಿಲ್ಲ. ಅಂಗಳದಲ್ಲಿ ಕಣಜವಿಲ್ಲ.
ಮಾನವ ಬದುಕಿನೊಂದಿಗೆ ನೇರ ಸಂಬಂಧ ಹೊಂದಿ ನಿರಾಳ ಜೀವನಕ್ಕೆ ಸಂಭ್ರಮದ ಸಂದರ್ಭಗಳಿಗೆ ಪೂರಕವಾದಂತೆ ಹಬ್ಬ ಆಚರಣೆಗಳಿವೆ ಎನ್ನುವುದು ತುಳುವರ ಸಂಪ್ರದಾಯಗಳನ್ನು ಅಧ್ಯಯನ ಮಾಡಿದಾಗ ವೇದ್ಯವಾಗುತ್ತದೆ. ಆಟಿದ ಅಮಾವಸೆ ಆಚರಣೆ ಇಂತಹ ಸಂಪ್ರದಾಯಗಳಲ್ಲಿ ಒಂದು.
images3
ಸದೃಢ ಆರೋಗ್ಯ  ಬಯಸಿ ಔಷಧ ಸೇವಿಸುವ ದಿನವಾಗಿ ಗಮನ ಸೆಳೆಯುತ್ತದೆ 'ಆಟಿದ ಅಮಾಸೆ' ಆಷಾಢ ತಿಂಗಳು ಕರ್ಕಾಟಕ ರಾಶಿಯಲ್ಲಿ ಸೂರ್ಯನಿರುವ ಮಾಸ . ಆದ್ದರಿಂದ ಕರ್ಕಾಟಕ ಅಮಾವಾಸ್ಯೆಯಾಗಿ ಇದು ಪ್ರಚಲಿತ .
images8
ಭರಣಿ ಉಪ್ಪಡ್ ,ಪೀಸದ ನೀರುಪ್ಪಡ್ ,ಕೋರಾಯಿಡ್ ಪಾಡ್ಡಿನ ಉಪ್ಪಡ್ ಪಚ್ಹಿರ್, ಪ್ಲಾಸ್ಟೀಕ್ ಸುತ್ತುದ್ ಮಣ್ಣದ ಕರತ ಉಲಾಯಿ ಪಾಡ್ಡ ಪುಗೆ ಪಲಾಯಿಡ್ ದೀತಿನ ನುಂಗೆಲ್ ಮೀನ್, ಸಾಂತಣಿ (ಭರಣಿ ಉಪ್ಪಿನ ಕಾಯಿ, ಉಪ್ಪು ನೀರಲ್ಲಿ ಹಾಕಿಟ್ಟ ಪೆಬ್ಬಲಸು, ಮಾವಿನಕಾಯಿ, ಬಲಿತ ಹಲಸಿನ ಸೊಳೆ, ಒಣಮೀನು, ಬೇಯಿಸಿ  ಒಣಗಿಸಿದ ಹಲಸಿನ ಬೀಜ) ಹಲಸು ಗೆಣಸಿನ ಹಪ್ಪಳ ,ಸಂಡಿಗೆ, ಗದ್ದೆಯ ಬದುವಿನಲ್ಲಿ ಈಗಪ್ಟೇ ಚಿಗುರುವ ತಿಮರೆ,(ಬ್ರಾಹ್ಮಿಎಲೆ) ಇವೆಲ್ಲ ಆಟಿ ತಿಂಗಳಲ್ಲಿ ತುಳವರ  ವಿಶೇಷ ಖಾದ್ಯಗಳು.
images7
ತೊಜಂಕ್ (ಚಟ್ಟೆ) ಸೊಪ್ಪಿನ ಪದಾರ್ಥ (ತೇವು ಕೆಸ )ದಿರೆತ ಗಟ್ಟಿ ಆಟಿ ತಿಂಗಳಲ್ಲಿ ಒಂದು ಬಾರಿಯಾದರೂ ಮಾಡಲೇ ಬೇಕು ಎನ್ನುವ ತುಳುವರ ವಿಶೇಷ ಅಡುಗೆ.
'ಆಷಾಢ ಮಾಸ ಬಂದಿತ್ತವ್ವ ........ ಅಣ್ಣ ಬರಲಿಲ್ಲ ಯಾಕಾ ಕರಿಯಾಕಾ ' ಎಂಬ ಜಾನಪದ ಗೀತೆಯ ಸಾಲುಗಳು ಗಂಡನ ಮನೆಯಲ್ಲಿರುವ ಹೆಣ್ಣು ಮಗಳು ಆಷಾಢ ಮಾಸಕ್ಕೆ ತವರಿಗೆ ಹೋಗುವ ತುಡಿತವನ್ನು ಅಭಿವ್ಯಕ್ತ ಗೊಳಿಸುತ್ತದೆ. ವರುಷವಿಡೀ ಗಂಡನ ಮನೆಯಲ್ಲಿ ದುಡಿಯುವ ಆಕೆ, ಆಟಿ ತಿಂಗಳಲ್ಲಿ ಅಷ್ಟಾಗಿ ಕೆಲಸದ ಒತ್ತಡ ಇಲ್ಲದಿರುವುದರಿಂದಾಗಿ ತವರು ಮನೆಗೆ ಹೋಗುವ ಕ್ರಮವನ್ನು ತುಳುವರು ಸೊಗಸಾಗಿ 'ಆಟಿ ಕುಲ್ಲೆರೆ ಪೋಪಿನಿ 'ಎಂದರು.
images5
ಮಾನವ ಬದುಕಿನ ನೇರ ಸಂಬಂಧ ಹೊಂದಿ ನಿರಾಳ ಜೀವನಕ್ಕೆ ಸಂಭ್ರಮದ ಸಂದರ್ಭಗಳಿಗೆ ಪೂರಕವಾದಂತೆ ಹಬ್ಬ ಆಚರಣೆಗಳಿವೆ ಎನ್ನುವುದು ತುಳುವರ ಸಂಪ್ರದಾಯಗಳನ್ನು ಅಧ್ಯಯನ ಮಾಡಿದಾಗ ವೇದ್ಯವಾಗುತ್ತದೆ. ಆಟಿದ ಅಮಾವಾಸೆ ಆಚರಣೆ ಇಂತಹ ಸಂಪ್ರದಾಯಗಳಲ್ಲಿ ಒಂದು.
ಸದೃಢ ಆರೋಗ್ಯ ಬಯಸಿ ಔಷಧ ಸೇವಿಸುವ ದಿನವಾಗಿ ಗಮನ ಸೆಳೆಯುತ್ತದೆ ಆಟಿದ ಅಮಾಸೆ ಆಷಾಢ ತಿಂಗಳು ಕರ್ಕಾಟಕ ರಾಶಿಯಲ್ಲಿ ಸೂರ್‍ಯನಿರುವ ಮಾಸ .ಆದ್ದರಿಂದ ಕರ್ಕಾಟಕ ಅಮಾವಾಸ್ಯೆಯಾಗಿ ಇದು ಪ್ರಚಲಿತ .ಧಾರಾಕಾರವಾಗಿ ಸುರಿಯುವ ಮಳೆಯ ಮೂಲಕ ರೋಗ ರುಜಿನೆಗಳು ಮನುಷ್ಯನನ್ನು ಕಾಡುವ ತಿಂಗಳು ಆಟಿ. (ಆಷಾಢ) ಆ ಕಾರಣಕ್ಕಾಗಿ ರೋಗ ಮುಕ್ತಗೊಳ್ಳುವುದಕ್ಕೆ ಔಷಧ ಸೇವನೆಯ ವಿಶಿಷ್ಟ ವಿಧಿ ಆಚರಣೆ ಬಂದಿರಬಹುದು. ಆಟಿದ  ಅಮಾವಾಸ್ಯೆಯ ಹಿಂದಿನ ದಿನ ರಾತ್ರಿ 'ಸ್ತೆತಿನಕ್ಲೆಗ್ ' ಬಲಸ್ದ್ ದೀಪಿನಿ ' (ಸತ್ತ ಪಿತ್ರಗಳಿಗೆ ಎಡೆ ಇಡುವಕ್ರಮ ) ಈ ವಿಶಿಷ್ಟ ಕ್ರಮ ಹಿರಿಯರ ಮನೆಯಲ್ಲಿ ನಡೆಸುವ ಈ ಕಾರ್ಯವೇ 'ಆಟಿದ ಅಗೆಲ್' ಎನ್ನುವ ವಿಶೇಷ ಪದ್ಧತಿ.
images4
ಮಣೆಯ ಮೇಲೆ ಹೊಸ ಬಟ್ಟೆ ಇಟ್ಟು ಬಾಳೆ ಎಲೆಯಲ್ಲಿ ಕೋಳಿ ಮತ್ತು  ಮೀನಿನ ಪದಾರ್ಥ (ಕೆಸ ) (ತೇವು) ತೊಜಂಕ (ಚಟ್ಟೆ) ಸೊಪ್ಪಿನ ಪಲ್ಯ ಅನ್ನ ಬಡಿಸಿ ಒಂದು ಬದಿಯಲ್ಲಿ ಮುಟ್ಟಿ (ಸಣ್ಣ ಮಣ್ಣಿನ ಗಡಿಗೆ )ಯಲ್ಲಿ ಕಲ್ಲು ಇಟ್ಟು ಎಲ್ಲರು ಅದಕ್ಕೆ ಕೆ ಮುಗಿಯುತ್ತಾರೆ. ಕುಟುಂಬದ ಸದಸ್ಯರೆಲ್ಲರೂ ಈ ನಿಮಿತ್ತ ವರ್ಷಕ್ಕೊಮ್ಮೆ ಒಂದೆಡೆ ಸೇರಿ ತಮ್ಮ ಹಿರಿಯರನ್ನು  ನೆನಪಿಸಿಕೊಳ್ಳುವ ಈ ಪದ್ದತಿಯೇ ಅರ್ಧಪೂರ್ಣವಲ್ಲವೇ?
ಹಾಗೆಯೇ ರಾತ್ರಿ ಕಳೆದು ಹಕ್ಕಿಗಳ 'ಚಿಲಿಪಿಲಿ' ಆರಂಭಕ್ಕೆ ಮೊದಲು 'ಹಾಳೆ' (ಪಾಲೆಮರ) ಮರದ ಬುಡಕ್ಕೆ ಬಂದು (ಮ್ಯೆ ಮೇಲೆ ಬಟ್ಟೆಯಿರಬಾರದು ಎಂಬ ನಂಬಿಕೆಯಿದೆ) ತೂಗಟೆಯನ್ನು ಕಲ್ಲಿನಲ್ಲಿ ಜಜ್ಜಿ ತೆಗೆದು ತಂದು ಕ ಯ ತಯಾರಿಸಿ ಅದಕ್ಕೆ ಬೆಣಚು ಕಲ್ಲನ್ನು ಕಾಯಿಸಿ ಕಲ್ಲೊಗ್ಗರಣೆ ಹಾಕಿ ಸೂರ್ಯೋದಯಕ್ಕೆ ಮುನ್ನ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಒಳ್ಳೆಯದು ಎಂಬ ನಂಬಿಕೆ  ಅನಾದಿ ಕಾಲದಿಂದ ತುಳುವರಲ್ಲಿ ಬೇರೂರಿದೆ. ಕಷಾಯ ಸೇವನೆಯ ಬಳಿಕ ಹೊಟ್ಟೆಯ ಉರಿ ಶಮನಕ್ಕೆ ತೆಂಗಿನ ಕಾಯಿಯ ಹಾಲಿನಿಂದ ತಯಾರಿಸಿದ ಮೆಂತ್ತೆ ಯ ಗಂಜಿ ಊಟ ಇಂದಿಗೂ ಸಾರ್ವತ್ರಿಕವಾಗಿ ನಡೆಯುತಿದೆ.
ಆಟಿ ಅಮಾವಾಸ್ಯೆ ದಿನದಂದು ಎಲ್ಲಾ ಔಷಧೀಯ ಗುಣಗಳು ಹಾಳೆ ಮರದಲ್ಲಿರುತ್ತದೆ. ಎಂಬುವುದು ಪ್ರತೀತ . ಕಷಾಯದ ಹಹಿ ಗುಣ ಸಕಲ ವ್ಯಾಧೀ ನಿರೋಧಕ ಎಂಬುದು ತುಳುವರ ನಂಬಿಕೆ ಹಾಗೂ ವಿಶ್ವಾಸ.
ಆಷಾಢದ ಅಮಾವಾಸ್ಯೆಯ ಬಳಿಕ ನಾಡಿಗೆ ಬರುವ ಮೊದಲ ಹಬ್ಬವೇ  ನಾಗರಪಂಚಮಿ . ಇದಕ್ಕೆ ಪೂರ್ವಭಾವಿಯಾಗಿ ಆಟಿದ ಅಮಾವಾಸ್ಯೆ ದಿನ ಬನ ಕಡಿದು ಸ್ವಚ್ಹಗೊಳಿಸುವ ಕಾರ್ಯ ನಡೆಯುವುದಿದೆ.
'ಆಟಿ ಅನೆಡ್ ಪೋಪಿನಿ, ಸೋಣ ಕುದುರೆಡ್ ಪೋಪಿನಿ ' ಎಂಬುದು ತುಳು ಗಾದೆ ದೋ ಎಂದು ಸುರಿಯುವ ಮಳೆ, ಯಾವುದೇ ಅಂಕ ಆಯನವಿಲ್ಲ. ಹಬ್ಬ ಹರಿದಿನವಿಲ್ಲ. ಗದ್ದೆಯ ಕೆಲಸಗಳೆಲ್ಲ ಒಂದು ಹಂತಕ್ಕೆ ಮುಗಿದಿರುತ್ತದೆ. ಹೊತ್ತು ಕಳೆಯಲು ಅಟ್ಟದ ಮೇಲಿಟ್ಟ ಚೆನ್ನಮಣೆ ಮೆಲ್ಲನೆ ಕೆಳಗಿಳಿಯುತ್ತದೆ. ಹಿರಿಯರು ಕಿರಿಯರು ಎಂಬ ಭೇದವಿಲ್ಲದೆ ಚೆನ್ನಮಣೆ ಆಟ ಮನೋರಂಜನೀಯವಾಗಿರುತ್ತದೆ.
ಆಟಿ ತಿಂಗಳ ವಿಶೇಷ ಜನಪದ ವೇಷ ; ಆಟಿ ಕಳೆಂಜ; ತೆಂಬರೆ ಬಡಿಯುವಾತನ ಜತೆಗೆ ಬರುವ ಕಳೆಂಜ, ಸೊಂಟಕ್ಕ್ ತೆಂಗಿನ ಚಿಗುರು ಸೋಗೆಯಿಂದ ಅಲಂಕಾರಸುತ್ತಿ ಮುಖಕ್ಕೆ ಹಾಗು ಮ್ಯೆಗೆ ಪೂರ್ತಿಯಾಗಿ ಅರದಾಳದ ಲೇಪನ , ಮೂಗಿನ ಕೆಳಗೆ ದಪ್ಪ ಮೀಸೆ , ಕುತ್ತಿಗೆಗೆ ಕೆಲವು ಹೂವಿನ ಮಾಲೆ ,ಕೇಪುಳ ಹೂವಿನ ಹಾರ ,ಕಾಲಿಗೆ ಕಿರುಗೆಜ್ಜೆ , ಕ್ಯೆಯಲ್ಲಿ ಪನೋಲಿಯ ಪನೆ ಪತ್ರ ಹಿಡಿದು ಕೊಂಡು ' ಕಳೆಂಜ ಕಳೆಂಜವೋ...... ಕಳೆಂಜವೋ.... ಎನ್ನುತ್ತ ವರ್ತಲಾಕಾರದಲ್ಲಿ ಕುಣಿಯುತ್ತಾನೆ. ಊರಿನವರು ನೀಡುವ ,ಅಕ್ಕಿ, ದವಸಧಾನ್ಯ. ಹಾಗು ಹಣ ಪಡೆಯುತ್ತಾನೆ ಕಳೆಂಜ. ಆಷಾಢ ತಿಂಗಳಲ್ಲಿ ಹವಾಮಾನ ವ್ಯೆಪರೀತ್ಯದಿಂದ ರೋಗರುಜಿನ , ಆಹಾರಕೊರತೆ, ಪ್ರಕೃತಿ ವಿಕೋಪ ಬರುವ ಹಿನ್ನಲೆಯಲ್ಲಿ ಕಳೆಂಜ ಬಂದು ಅವನ್ನೆಲ್ಲಾ ಪರಿಹರಿಸುತ್ತಾನೆ, ಎಂಬುದು ತುಳುವರ ನಂಬಿಕೆ.
ಆಧುನಿಕತೆಯೊಂದಿಗೆ ಪ್ರಕೃತಿ ವ್ಯೆಪರೀತ್ಯಗಳು ಸಮ್ಮಿಲನಗೊಂಡು ಬದಲಾವಣೆಗಳಾದರೂ ಪ್ರಕೃತಿಯ ಮಡಿಲಲ್ಲಿ ಬದುಕು ಆರಂಭಿಸಿದ ಮಾನವ ಪ್ರಕೃತಿಯ ಕೂಸು. ನಿಸರ್ಗವನ್ನು ಆರಾಧಿಸಿದ. ಕೃಷಿ ಪ್ರಧಾನ ಸಮಾಜ ವ್ಯವಸ್ತೆಯಲ್ಲಿ ಬೆಳೆ ಗದ್ದೆಯಲ್ಲಿದ್ದರೆ , ಮನೆಯಲ್ಲಿರುವ ದಾಸ್ತಾನು ಕಡಿಮೆಯಾಗುವ ವೇಳೆ ಸಹಜವಾಗಿ ಮಾನಸಿಕ ಆತಂಕ , ದ್ಯೆಹಿಕ ರೋಗ ಬಾಧೆಗಳು ಕಾಡುವ ಕಾಲ. ಆಟಿ ತಿಂಗಳು ಶೂನ್ಯ ಮಾಸವಾಗಿ ಶುಭ ಶೋಭಾನಾದಿಗಳಿಗೆ ನಿಷಿದ್ಧವೆನಿಸಿದ ತಿಂಗಳಾದರೂ ಜನಪರ ಬದುಕಿನನೊಂದಿಗೆ ನೇರ ಸಂಬಂಧ ಹೊಂದಿರುವ ಸಾಂಪ್ರದಾಯಿಕ ಆಚರಣೆಗಳು ಅಲ್ಲಿ ಅಡಗಿರುವ ಮೌಢ್ಯಕಿಂತಲೂ ನಂಬಿಕೆ ಹಾಗು ಮಾನವ ಸಂಬಂಧಗಳ ಪರಿಕಲ್ಪನೆ ಹಿರಿದು ಎಂದು ತೋರಿಸುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ