ಬುಧವಾರ, ಜುಲೈ 24, 2013

ನವ ಕಲಾಸಾಧ್ಯತೆ ತೆರೆದಿಟ್ಟ `ಸುಧನ್ವಾರ್ಜುನ’

ಬೆಂಗಳೂರಿನ `ಧೀಂಗಿಣ ಯಕ್ಷಗಾನ ಅಧ್ಯಯನ ಕೂಟ’ ಇತ್ತೀಚೆಗೆ ಸುಧನ್ವಾರ್ಜುನ ಯಕ್ಷಗಾನ ಪ್ರಸಂಗವನ್ನು ಪ್ರಸ್ತುತ ಪಡಿಸಿತು. ಭಕ್ತಿ-ಪಾರಮ್ಯವನ್ನು ಪ್ರತಿಪಾದಿಸುವ ಈ ಪ್ರಸಂಗವನ್ನು ತೆಂಕುತಿಟ್ಟಿನ ಅಪಾರ ಕಲಾಸಾಧ್ಯತೆ ಬಳಸಿಕೊಂಡು ಪ್ರದರ್ಶಿಸಿದ್ದು ವಿಶೇಷ. ಇದು `ಧೀಂಗಿಣ’ ತಂಡದ ಚೊಚ್ಚಲ ಪ್ರದರ್ಶನವೂ ಹೌದು.
a20BSJ07
ತಂಡದ ಪ್ರಮುಖ ರೂವಾರಿ ಛಾಯಾಚಿತ್ರ ಪತ್ರಕರ್ತ ಸುಧಾಕರ ಜೈನ್ ಮತ್ತು ಯಕ್ಷಗಾನದ ನಿರ್ದೇಶಕ ಪ್ರಸಾದ್ ಚೇರ್ಕಾಡಿ ನೇತೃತ್ವದಲ್ಲಿ `ಸುಧನ್ವಾರ್ಜುನ’ ಪ್ರಸಂಗ ಅದ್ಭುತವಾಗಿ ಮೂಡಿಬಂದು ಜನಮೆಚ್ಚುಗೆಗೆ ಪಾತ್ರವಾಯಿತು.a20BSJ06
ರಾಜವೇಷದ ಒಡ್ಡೋಲಗ, ಬಣ್ಣದ ವೇಷದ ತೆರೆ ಪೊರಪ್ಪಾಟು ಮತ್ತು ಸಮಕಾಲೀನ ಯಕ್ಷಗಾನ ಪ್ರದರ್ಶನಗಳಲ್ಲೆಲ್ಲೂ ಕಾಣಸಿಗದ ಸ್ತ್ರೀ ವೇಷ ಪ್ರವೇಶವನ್ನು ಇಲ್ಲಿ ತೋರಿಸಿದ್ದು ಸಂಪೂರ್ಣ ಪ್ರಸಂಗದ ವೈಶಿಷ್ಟ್ಯ. ಅತ್ಯಂತ ಶಿಸ್ತುಬದ್ಧವಾಗಿ ಕಥೆಯನ್ನು ವೀಕ್ಷಕರ ಮುಂದೆ ತೆರೆದಿಟ್ಟದ್ದು ಮತ್ತೊಂದು ಗಮನಾರ್ಹ ಅಂಶ. ಜೈಮಿನಿ ಭಾರತದಿಂದ ಆಯ್ದುಕೊಂಡ ಕಥೆಯಾದ ಸುಧನ್ವ ಕಾಳಗ ಭಕ್ತಿ-ಪಾರಮ್ಯವನ್ನು ಪ್ರತಿಪಾದಿಸುತ್ತದೆ. ಈ ಭಾವಗಳು ಅಪೂರ್ವವಾಗಿ ಮೂಡಿಬಂದದ್ದು ಕಲಾವಿದರ ಶ್ರಮದ ಕುರುಹು.
a20BSJ05
ಕೇವಲ ಒಂದು ವರ್ಷದಿಂದ ಹಿಂದಷ್ಟೇ ಆರಂಭಗೊಂಡ ಯಕ್ಷ ಕೂಟ ಇದು ಎಂಬುದು ತಿಳಿಯದ ಮಟ್ಟಿಗೆ ಕಲಾವಿದರು ತಮ್ಮ ಕಲಾ ಪ್ರೌಢಿಮೆ ತೋರಿದರು. ಹೆಜ್ಜೆಗಾರಿಕೆ, ಅರ್ಥ, ಹಿಮ್ಮೇಳ ಎಲ್ಲವೂ ಸಮಪಾಕದಂತೆ ಮಿಶ್ರಣವಾಗಿ ಯಕ್ಷಗಾನದ ಸವಿಯನ್ನು ಉಣಬಡಿಸಿತು. ಒಟ್ಟಾರೆ `ಸುಧನ್ವಾರ್ಜುನ’ ಪ್ರದರ್ಶನ ವೀಕ್ಷಕರನ್ನು ದ್ವಾಪರದ ಪುಣ್ಯಯುಗಕ್ಕೆ ಕರೆದೊಯ್ದ ಅನುಭವ ನೀಡಿತು.
-ಶ್ರೀಕಲಾ ಡಿ.ಎಸ್, ಬೆಂಗಳೂರು
a20BSJ04
a20BSJ03
a20BSJ02
a20BSJ01
a20BSJ08

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ