ಶನಿವಾರ, ಜುಲೈ 27, 2013

ಅಮಾರ್ತ್ಯಸೇನ್ ಹೇಳಿಕೆಯಲ್ಲಿ ತಪ್ಪಿಲ್ಲ: ಬಿಜೆಪಿ ಕ್ಷಮೆ ಕೇಳ್‌ಬೇಕು: ಪೂಜಾರಿ ಆಗ್ರಹ

ಉಡುಪಿ:ಮೋದಿ ದೇಶದ ಪ್ರಧಾನಿಯಾಗಬಾರದು ಎಂಬ ಅರ್ಥಶಾಸ್ತ್ರಜ್ನ ಅಮಾರ್ತ್ಯಸೇನ್ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಭಾರತರ ತ್ನ ಪ್ರಶಸ್ತಿಯ್ನನ್ನು ಹಿಂಪಡೆಯಬೇಕೆಂಬ ಬಿಜೆಪಿ ಸಚಿವ ಹೇಳಿಕೆ ಖಂಡನೀಯ. ಇಂತ ಹೇಳಿಕೆಯನ್ನು ನೀಡಿ ಭಾರತೀಯರನ್ನು ಅವಮಾನಿಸಿದ ಬಿಜೆಪಿ ನಾಯಕರು ದೇಶದ ಕ್ಷಮೆ ಯಾಚಿಸಬೇಕು ಎಂದು ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಹೇಳಿದ್ದಾರೆ.
[youtuber youtube='http://www.youtube.com/watch?v=tUKCACxiVOw&feature=c4-overview&list=UUs0k8vSBwTqzHjMqn8PYrzQ']
ಉಡುಪಿಯಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು ಅಮಾರ್ಥ್ಯಸೇನ್ ದೇಶದ ಖ್ಯಾತ ಅರ್ಥಶಾಸ್ತ್ರಜ್ನ. ಅವರ ಹೇಳಿಕೆಗೆ ದೇಶದಲ್ಲಿ ಮನ್ನಣೆ ಇದೆ. ಜಾತ್ಯಾತೀತ ನೆಲೆಯಲ್ಲಿ ಮೋದಿಯನ್ನು ಹೋಲಿಸಿದರೆ ಅವರು ದೇಶದ ಪ್ರಧಾನಿಯಾಗಲು ಅರ್ಹ ನಾಯಕ ಅಲ್ಲ ಅಂತಾ ಸೇನ್ ಹೇಳಿದ್ದಾರೆ. ಅವರ ಈ ಹೇಳಿಕೆಯನ್ನು ಟೀಕಿಸುವುದು ಸರಿಯಲ್ಲ. ಸೇನ್ ಅವರ ಹೇಳಿಕೆ ಕುರಿತು ಬಿಜೆಪಿ ನಾಯಕ ಚಂದನ್ ಮಿಶ್ರ ಅವರ ಭಾರತರತ್ನ ಪ್ರಶಸ್ತಿಯನ್ನು ಹಿಂಪಡೆದುಕೊಳ್ಳಬೇಕೆಂದು ಟ್ವೀಟ್ ಮಾಡಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸೇನ್ ವಾಜಪೇಯಿ ಯವರು ಹೇಳಿದ್ರೆ ನಾನು ಭಾರತರ ತ್ನ ಪ್ರಶಸ್ತಿಯನ್ನು ಹಿಂಪಡೆಯಲು ಸಿದ್ಧ ಅಂತಾ ಪ್ರತಿಕ್ರಿಯಿಸಿದ್ದರು. ಈ ಹೇಳಿಕೆ  ಬಾರತೀಯರಿಗೆ ಮಾಡಿದ ಅವಮಾನವಾಗಿದ್ದು ಖುದ್ದು ಬಿಜೆಪಿಯೇ ದೇಶದ ಕ್ಷಮೆಯಾಚಿಸಬೇಕೆಂದು ಪೂಜಾರಿ ಗುಡುಗಿದ್ದಾರೆ.ಆಹಾರ ಭದ್ರತೆ ಬಗ್ಗೆ ಆಗಸ್ಟ್ ೫ ರೊಳಗೆ ವಿಪಕ್ಷಗಳು ನಿಲುವು ತಿಳಿಸಬೇಕೆಂದು ಅವರು ಈ ಸಂದರ್ಭ ಆಗ್ರಹಿಸಿದ್ದಾರೆ.
7/26/2013 2:09 AM

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ