ಮಂಗಳವಾರ, ಜುಲೈ 23, 2013

ಕಡಲಿಗಿಲ್ಲ ನಿಯಂತ್ರಣ.. ಕಡಲತಡಿ ನಿವಾಸಿಗಳು ನಿತ್ರಣ.. ಮನೆ ಬಿಡಲು ಜಿಲ್ಲಾಢಳಿತ ಸೂಚನೆ..

ವರದಿ-ಸುರೇಶ್ ಎರ್ಮಾಳ್
ತೆಂಕ ಎರ್ಮಾಳು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಳೆದ ತಿಂಗಳಿಂದ ದಿನಗಳಿಂದ ಕಾಡುತ್ತಿದ್ದ ಕಡಲು ಕೊರೆತ ರುದ್ರರೂಪತಾಳಿ ಸ್ಥಳೀಯ ಮೀನುಗಾರ ಕುಟುಂಬಗಳ ಮನೆಗಳಿಗೂ ದಾಳಿ ನಡೆಸಿದ್ದು, ಜಿಲ್ಲಾಢಳಿತ ಸ್ಥಳೀಯರನ್ನು ಮನೆ ಖಾಲಿ ಮಾಡಲು ಸೂಚಿಸಿದೆ.
ಎರ್ಮಾಳಿನ ತೊಟ್ಟಂ ಬಳಿ ಆರಂಭಗೊಂಡ ಕಡಲು ಕೊರೆತ ಉಚ್ಚಿಲ-ಎರ್ಮಾಳಿನ ಸಂಪರ್ಕ ಕಡಿತಗೊಳಿಸುವ ಮೂಲಕ ಚುರುಕುಗೊಂಡ ಕಡಲು ಕೊರೆತ ಸ್ಥಳೀಯವಾಗಿ ೩೦ಕ್ಕೂ ಹೆಚ್ಚು ತೆಂಗಿನ ಮರಗಳನ್ನು ತನ್ನೋಡಲಿಗೆ ಸೇರಿಸಿಕೊಂಡು, ಇದೀಗ ಹತ್ತು ದಿನಗಳಿಂದ ಎರ್ಮಾಳಿನ ಮಧ್ಯೆಭಾಗದ ಮೂರು ರಸ್ತೆ ಸೇರುವ ಪ್ರದೇಶದಲ್ಲಿ ತನ್ನ ಪ್ರತಾಪ ತೋರಿಸ ತೊಡಗಿ ಮೀನುಗಾರಿಕಾ ರಸ್ತೆಯನ್ನು ಕಡಿತಗೊಳಿಸಿ ಪಡುಬಿದ್ರಿ-ಎರ್ಮಾಳಿನ ಸಂಪರ್ಕವನ್ನೇ ನಿರಾಕರಿಸುವಂತ್ತಾಗಿದೆ. ಮತ್ತೂ ಮುಂದುವರಿದ ಕಡಲು ಕೊರೆತ ಸ್ಥಳೀಯ ಮನೆಗಳ ಗೋಡೆಗಳಿಗೆ ದಾಳಿ ನಡೆಸತೊಡಗಿದ್ದು, ಮನೆ ಬಿಡುವ ಅನಿರ್ವಾಯ ಸ್ಥಿತಿ ಆ ಭಾಗದ ಸುಮಾರು ೧೦ ನಿವಾಸಿಗಳಾದ್ದಾಗಿದೆ.
[youtuber youtube='http://www.youtube.com/watch?v=aZ0roui4P24&feature=c4-overview&list=UUs0k8vSBwTqzHjMqn8PYrzQ']
ಟಿಪ್ಪರ್ ಬರಲೂ ದಾರಿ ಇಲ್ಲ..
ಕಡಲಿನ ಅಬ್ಬರಕ್ಕೆ ಮೀನುಗಾರಿಕಾ ರಸ್ತೆ ಕೊಚ್ಚಿ ಹೋಗಿದ್ದರಿಂದ ಕಲ್ಲು ಹೇರಿಕೊಂಡು ಬರುವ ಟಿಪ್ಪರಿಗೂ ದಾರಿ ಇಲ್ಲದೆ, ಕೊರೆತ ಪ್ರದೇಶಕ್ಕೆ ಕಲ್ಲು ಹಾಕುವಂತ್ತೆಯೂ ಇಲ್ಲ. ಮುಂದೆ ಏನಿದ್ದರೂ ಸಮುದ್ರ ಬಂದದ್ದೇ ದಾರಿ.. ಎಂಬಂತ್ತಾಗಿದೆ.
ಜಿಲ್ಲಾಢಳಿತ ಸೂಚನೆ..
ಕಡಲು ಕೊರೆತ ತೀವೃಗೊಂಡ ಹಿನ್ನಲೆಯಲ್ಲಿ, ಕಡಲನ್ನು ತಡೆಯಲು ಅಸಾಧ್ಯವೆಂದರಿತ ಜಿಲ್ಲಾಢಳಿತ ಸ್ಥಳೀಯ ನಿವಾಸಿಗಳಿಗೆ ಮನೆ ಬಿಡಲು ಸೂಚನೆ ನೀಡಿದೆ.
ನಾವು ಹೋಗುವುದು ಎಲ್ಲಿಗೆ..?
ಜಿಲ್ಲಾಢಳಿತ ಕಡಲಿಗೆ ಸಮೀಪವಿರುವ ನಮ್ಮನ್ನು ಮನೆ ಬಿಡಲು ಸೂಚಿಸಿದೆ. ನಾವು ಮನೆ ಬಿಡುವ ಅನಿರ್ವಾಯತೆಯೂ ಇದೆ. ಆದರೆ ಮನೆಬಿಟ್ಟು ಹೋಗುವುದು ಎಲ್ಲಿಗೆ ಎಂಬ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ ಎನ್ನುವ ಸ್ಥಳೀಯ ನಿವಾಸಿ ಭಾರತೀ ಎಂಬವರು ಈ ಕಡಲು ಕೊರೆತಕ್ಕೆ ಮೂಲ ಕಾರಣವಾಗಿರುವ ಯುಪಿಸಿ‌ಎಲ್ ನಿರ್ಮಾಣ ನಡೆಸಿದ ಬ್ರೇಕ್ ವಾಟರ್ ತೆರವುಗೊಳಿಸುವ ಸಾಮಥ್ಯ ರಾಜಕಾರಣಿಗಳಿಗೂ ಇಲ್ಲ ಜಿಲ್ಲಾಢಳಿತಕ್ಕೂ ಇಲ್ಲ ಯಾವ ಕಾರಣಕ್ಕೆ ಆ ಜನವಿರೋಧಿ ಕಂಪನಿಗೆ ಹೆದರುತ್ತಾರೋ ದೇವರೇ ಬಲ್ಲ ಎಂಬುದಾಗಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
 22PDB-1 k

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ