ಶುಕ್ರವಾರ, ಜುಲೈ 19, 2013

‘ಬಸವಣ್ಣ ಈಗ ಬ್ರಾಹ್ಮಣ’

ವಿವಾದ ಆಗ್ಬೇಕು ಅಂತಾನೇ ಹೀಗೆ ಮಾಡ್ತಾರೋ ಅಥವಾ ವಿವಾದವಿಲ್ಲದೆ ಚಿತ್ರ ಗೆಲ್ಲೋಲ್ಲ ಅನ್ನೋದು ಸ್ಯಾಂಡಲ್‌ವುಡ್ ಡೈರೆಕ್ಟರ್ ಗಳಿಗೆ ಖಾತ್ರಿಯಾಗಿದೆಯೋ ಗೊತ್ತಿಲ್ಲ; ಯಾಕಂದ್ರೆ ಸದ್ಯಕ್ಕಂತೂ ಕನ್ನಡದಲ್ಲಿ ವಿವಾದವಿಲ್ಲದೆ ಯಾವ ಚಿತ್ರವೂ ಬಿಡುಗಡೆಯಾಗ್ತಿಲ್ಲ. ಕಳೆದ ಕೆಲ ದಿನಗಳಿಂದ ಭಾರೀ ವಿವಾದ ಹುಟ್ಟು ಹಾಕಿದ್ದ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ವೀರ ಬಸವಣ’ ಚಿತ್ರದ ಟೈಟಲ್ ಕೊನೆಗೂ ಬದಲಾಗಿದೆ. ಆದರೆ ಈ ಬದಲಾವಣೆ ಇನ್ಯಾವ ವಿವಾದ ಹುಟ್ಟುಹಾಕುತ್ತೋ ಕಾದು ನೋಡಬೇಕು.Srinivas1
‘ವೀರ ಬಸವಣ’ ಎಂಬ ಟೈಟಲ್ ವೀರಶೈವ ಸಮುದಾಯವೂ ಸೇರಿದಂತೆ ಸಾಕಷ್ಟು ಜನರ ಕೆಂಗಣ್ಣಿಗೆ ಗುರಿಯಾಗಿತ್ತು. ಸದನದಲ್ಲೂ ಈ ವಿವಾದ ಪ್ರತಿಧ್ವನಿಸಿ ಟೈಟಲ್ ಬದಲಾವಣೆಗೆ ಸೂಚಿಸಲಾಗಿತ್ತು. ಸಿನಿಮಾ ಪೋಸ್ಟರ್ ನಲ್ಲಿ  ಒಮ್ಮೆ ಗನ್ ಇಟ್ಟು ಸದ್ದು ಮಾಡಿದ ನಿರ್ದೇಶಕ ಶ್ರೀನಿವಾಸ ರಾಜು ನಂತರ ವಿಪ್ರನೊಬ್ಬನ ಕೈಯ್ಯಲ್ಲಿ ತಲವಾರು ಕೊಟ್ಟು ಕೆಲದಿನ ಬಿಟ್ಟಿ ಪ್ರಚಾರ ಪಡೆದುಕೊಂಡ್ರು. ಈಗ ವಿವಾದ ಜೋರಾಗುತ್ತಿದ್ದಂತೆ; ಟೈಟಲ್ ಬದಲಿಸಿ ಇನ್ನೊಂದು ವಿವಾದದ ಮೂಲಕ ಬೇಳೆ ಬೇಯಿಸಿಕೊಳ್ಳಲು ಆರಂಭಿಸಿದ್ದಾರೆ. ಸದ್ಯ ನಿರ್ದೇಶಕ ಶ್ರೀನಿವಾಸ ರಾಜು ಘೋಷಿಸಿರೋ ನೂತನ ಟೈಟಲ್ ‘ಬ್ರಾಹ್ಮಣ’
basavann1
ಸಿನಿಮಾ ಟೈಟಲ್ ಬಸವಣ್ಣ ಆದ್ರೂ ಸರಿ, ಬ್ರಾಹ್ಮಣ ಆದ್ರೂ ಸರಿ ವಿವಾದ ಮಾಡೋದೊಂದೇ ನಿರ್ದೇಶಕರ ಉದ್ದೇಶ ಇದ್ದಾಂಗಿದೆ. ಇಲ್ಲಾಂದ್ರೆ ಬಸವಣ್ಣ ಅನ್ನೋ ಕಾನ್ಸೆಫ್ಟ್ ಗೂ ಬ್ರಾಹ್ಮಣ ಅನ್ನೋ ಕಾನ್ಸೆಪ್ಟ್ ಗೂ ಎಲ್ಲಿಯ ಸಂಬಂದ ಹೇಳಿ? ರಿಯಲ್‌ಸ್ಟಾರ್ ಉಪೇಂದ್ರ ಅಭಿನಯದ ಚಿತ್ರಕ್ಕೆ ಇಷ್ಟೆಲ್ಲಾ ಕಾಂಟ್ರವರ್ಸಿ ಅಗತ್ಯ ಇದೆಯಾ? ‘ಬ್ರಾಹ್ಮಣ’ ಟೈಟಲ್ ಇನ್ಯಾವ ವಿವಾದ ಹುಟ್ಟುಹಾಕುತ್ತೆ ಕಾದುನೋಡಬೇಕು.upendra
ಬ್ರಾಹ್ಮಣ ಟೈಟಲ್ ಕೊಡೊಲ್ಲ- ಆದರೆ ಚಲನಚಿತ್ರ ವಾಣಿಜ್ಯ ಮಂಡಳಿ ಚಿತ್ರಕ್ಕೆ ಬ್ರಾಹ್ಮಣ ಟೈಟಲ್ ಕೊಡುವುದಿಲ್ಲ ಎಂದು ಹೇಳಿದೆ. ಈ ಬಗ್ಗೆ ಸ್ಪಷ್ಗಟಪಡಿಸಿರುವ ಮಂಡಳಿ ಅಧ್ಯಕ್ಷ ಉಮೇಶ್ ಬಣಕಾರ್ ವಿವಾದವಾಗಬಹುದಾದ ಹಿನ್ನೆಲೆಯಲ್ಲಿ ಟೈಟಲ್ ನೀಡಲು ನಿರಾಕರಿಸಿದ್ದಾರೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ