ಮಂಗಳವಾರ, ಜುಲೈ 23, 2013

ಅಂಬಲಪಾಡಿ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿಯ ೫೫ನೇ ವಾರ್ಷಿಕ ಮಹಾಸಭೆ

ಉಡುಪಿ : ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅಂಬಲಪಾಡಿಯ ಹಿರಿಯ ಯಕ್ಷಗಾನ ಸಂಸ್ಥೆ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಮಂಡಳಿಯ ೫೫ನೇ ವಾರ್ಷಿಕ ಮಹಾಸಭೆ ಜುಲೈ ೨೧ ರಂದು ಮುರಲಿ  ಕಡೆಕಾರ್‌ರ ಅಧ್ಯಕ್ಷತೆಯಲ್ಲಿ ಜರಗಿತು.
ಗತಸಭೆ ವರದಿ, ವಾರ್ಷಿಕ ವರದಿ, ಪರಿಶೋಧಿತ ಲೆಕ್ಕಪತ್ರಗಳನ್ನು ಕ್ರಮವಾಗಿ ಪ್ರವೀಣ ಉಪಾಧ್ಯ, ಜಯ ಕೆ, ಹಾಗೂ ಮಂಜುನಾಥ ತೆಂಕಿಲ್ಲಾಯರು ಮಂಡಿಸಿದರು. ಸಿ. ಎ ಭಾರತೀಶ ಬಲ್ಲಾಳರನ್ನು  ಲೆಕ್ಕ ಪರಿಶೋಧಕರಾಗಿ ಆಯ್ಕೆ ಮಾಡಲಾಯಿತು. ಬಳಿಕ ಮುಂದಿನ ಸಾಲಿಗೆ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷ : ಮುರಲಿ ಕಡೆಕಾರ್, ಉಪಾಧ್ಯಕ್ಷ : ಕೆ.ಜೆ ಗಣೇಶ್, ಕಾರ್ಯದರ್ಶಿ : ಜಯ. ಕೆ, ಕೋಶಾಧಿಕಾರಿ : ಮಂಜುನಾಥ ತೆಂಕಿಲ್ಲಾಯ, ಜತೆ ಕಾರ್ಯದರ್ಶಿ : ಪ್ರವೀಣ ಉಪಾಧ್ಯ, ಸದಸ್ಯರು : ಎ. ರಾಘವೇಂದ್ರ ಉಪಾಧ್ಯ, ಕೆ. ಅಜಿತ್ ಕುಮಾರ್, ಪ್ರವೀಣಚಂದ್ರ, ಕೆ.ಜೆ ಕೃಷ್ಣ, ಡಾ. ಪಿ.ಗಣಪತಿ ಭಟ್, ರಾಘವೇಂದ್ರ ಸೋಮಯಾಜಿ, ನಟರಾಜ ಉಪಾಧ್ಯ, ವಸಂತ ಪಾಲನ್, ರಮೇಶ ಸಾಲ್ಯಾನ್, ಸುನಿಲ್ ಕುಮಾರ್. ಆಹ್ವಾನಿತರು : ಎಸ್. ವಿ ಭಟ್, ಶ್ರೀರಮಣ ಆಚಾರ್ಯ, ಸತೀಶ್ ಉಪಾಧ್ಯ, ನಾರಾಯಣ ಎಂ. ಹೆಗಡೆ, ಪ್ರಕಾಶ್ ಹೆಬ್ಬಾರ್, ವೇದಿಕೆಯಲ್ಲಿ ಉಪಸ್ಥಿತರಿದ್ದ ಮಂಡಳಿಯ ಹಿರಿಯ ಸದಸ್ಯರಾದ ಶ್ರೀ ಎ. ರಾಘವೇಂದ್ರ ಉಪಾಧ್ಯರು ಮಾರ್ಗಸೂಚೀ ಮಾತುಗಳನ್ನಾಡಿದರು. ಅಧ್ಯಕ್ಷರಾದ ಮುರಲಿ ಕಡೆಕಾರ್ ಗತ ವರ್ಷದಲ್ಲಿ ಮಂಡಳಿಯ ವೈವಿಧ್ಯಮಯ ಕಾರ್ಯಕ್ರಮಗಳ ಯಶಸ್ಸಿಗೆ ಸಹಕರಿಸಿದ ಎಲ್ಲರನ್ನು ಕೃತಜ್ಞತೆಯಿಂದ ಸ್ಮರಿಸಿಕೊಂಡರು. ಕಾರ್ಯದರ್ಶಿ ಜಯ. ಕೆ, ವಂದನಾರ್ಪಣೆಗೈದರು.
P-111_Murali_Kadekar

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ