ಶನಿವಾರ, ಜುಲೈ 13, 2013

`ಪ್ರಾಣ' ಪಕ್ಷಿ ಹಾರಿ ಹೋಯ್ತು....

ಬಾಲಿವುಡ್ ನ ಖ್ಯಾತ ನಟ ಪ್ರಾಣ್ ಇನ್ನಿಲ್ಲ. ಹೌದು ತನ್ನ ಕಂಚಿನ ಕಂಠ ಮತ್ತು ಮನೋಜ್ಞ ಅಭಿನಯದಿಂದ ಮನೆಮಾತಾಗಿದ್ದ ಪ್ರಾಣ್ ಅವರ ಪ್ರಾಣಪಕ್ಷಿ ಹಾರಿಹೋಗಿದೆ. ೯೩ ವರ್ಷ ವಯಸ್ಸಿನ ಪ್ರಾಣ್, ೧೯೨೦, ಫೆಬ್ರವರಿ ೧೨ ರಲ್ಲಿ ದೆಹಲಿಯಲ್ಲಿ ಜನಿಸಿದ್ದರು.
೨೦೧೦೨ ನೇ ಸಾಲಿನ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ವಿಜೇತರಾಗಿದ್ದ ಪ್ರಾಣ್ ೩೫೦ ಕ್ಕೂ ಅಧಿಕ ಹಿಂದಿ ಚಲನಚಿತ್ರಗಳಲ್ಲಿ ಅಭಿನಯಿಸಿದ್ದರು. ಕೆಲ ಕಾಲಕಾಲಗಳಿಂದ ಅವರ ಆರೋಗ್ಯ ಹದಗೆಟ್ಟಿತ್ತು. ಬಳಿಕ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ ೮.೩೦ ಸುಮಾರಿಗೆ ಪ್ರಾಣ್ ಕೊನೆಯುಸಿರೆಳೆದಿದ್ದಾರೆ. ನಾಳೆ ಸಂಜೆ ಶಿವಾಜಿ ಪಾರ್ಕ್ ನಲ್ಲಿ ಪ್ರಾಣ್ ಅಂತಿಮ ಸಂಸ್ಕಾರ ನಡೆಯಲಿದೆ.
prana (4)
ಸಿನಿಮಾ ರಂಗದಲ್ಲಿ ಆರು ದಶಕಗಳಿಗೂ ಹೆಚ್ಚುಕಾಲ ಪ್ರಾಣ್ ಸೇವೆ ಸಲ್ಲಿಸಿದ್ದರು. ಖಾನ್ ದಾನ್, ಮದುಮತಿ, ಜಿಸ್ ದೇಶ್ ಮೇ ಗಂಗಾ ಬೆಹತಾ ಹೇ, ಉಪಕಾರ್, ಶಹೀದ್, ಜಾನಿ ಮೇರಾ ನಾಮ್, ಜಂಜೀರ್, ಡಾನ್, ದುನಿಯಾ ಸೇರಿದಂತೆ ನೂರಾರು ಚಿತ್ರಗಳಲ್ಲಿ ಪೋಷಕ ಪಾತ್ರಗಳ ಮೂಲಕ ಗಮನಸೆಳೆದಿದ್ದರು. ಕನ್ನಡದ ಹೊಸರಾಗ ಚಿತ್ರದಲ್ಲೂ ಪ್ರಾಣ್ ನಟಿಸಿದ್ದರು.
prana (3)
prana (2)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ