ಮಂಗಳವಾರ, ಜುಲೈ 23, 2013

ಆಟಿದ ಅಟ್ಟಿಲ್ ದ ಬಯಕೆ , ತಿಂದೆರ್ ಬಂಜಿನಿಲಿಕೆ

atid onji dina_11ಆಷಾಢ ಮಾಸಕ್ಕೆ ಕರಾವಳಿಯ ತುಳುವರು ವಿಶೇಷ ಪ್ರಾಮುಖ್ಯತೆ ನೀಡುತ್ತಾರೆ. ತುಳುವಿನಲ್ಲಿ ಆಟಿ ಎಂದು ಕರೆಯಿಸಿಕೊಳ್ಳುವ ಆಷಾಢದಲ್ಲಿ ಹಿಂದೆ ಹಲವು ಆಚರಣೆಗಳು ಕರಾವಳಿಯಲ್ಲಿದ್ದವು. ಈಗ ಅವು ಮರೆಯಾಗುತ್ತಿರುವ ಹಿನ್ನಲೆಯಲ್ಲಿ ಅಲ್ಲಲ್ಲಿ ಆಟಿಡೊಂಜಿ ದಿನ ಎಂದು ಆಚರಿಸುತ್ತಾರೆ. ತುಳುವರ ಪುರಾತನ ಖಾದ್ಯವೈವಿಧ್ಯ ಈ ಆಚರಣೆಯ ವಿಶೇಷ .ಬನ್ನಿ ಹೇಗಿರುತ್ತದೆ ನೋಡೋಣ ಆಟ ವೆರೈಟಿ.
[youtuber youtube='http://www.youtube.com/watch?v=JdUffW_UJ3o&feature=c4-overview&list=UUs0k8vSBwTqzHjMqn8PYrzQ']
ಇದು ಉಡುಪಿಯ ಕೆಮ್ತೂರುನಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದ ದ್ರಶ್ಯ. ಅಪ್ಪಟ ಕರಾವಳಿಯ ಮದುವೆ ಸಂಭ್ರಮವನ್ನು ನೆನಪಿಗೆ ತರುವ ಇಂತಹ ಕಾರ್ಯಕ್ರಮ ಬೇರೆ ಎಲ್ಲಿಯೂ ನಡೆಯದು. ಆಷಾಢ ಮಾಸದಲ್ಲಿ ಕರಾವಳಿಯ ಎಲ್ಲೆಡೆ ಸಂಘ ಸಂಸ್ಥೆಗಳು , ಯುವಕ ಮಂಡಲಗಳು ಸೇರಿ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಆಯೋಜಿಸುವುದು ವಾಡಿಕೆ. ತುಳುನಾಡ ಜನ ಆಷಾಢ ಮಾಸದಲ್ಲಿ ಹೇಗೆ ದಿನ ಕಳೆಯುತ್ತಿದ್ದರು ಮತ್ತು ಯಾವ ರೀತಿಯ ತಿಂಡಿ ತಿನಿಸುಗಳನ್ನು ಮಾಡಿ ಕುಟುಂಬದವರು ಒಂದಾಗಿ ಸಂಭ್ರಮಿಸುತ್ತಿದ್ದರು ಎಂಬುವುದನ್ನು ಈ ತಲೆಮಾರಿನವರಿಗೆ ಪರಿಚಯಿಸುವುದು ಇದರ ಉದ್ದೇಶ. ತುಳು ಸಂಸ್ಕೃತಿಯ ಒಂದೊಂದೇ ಬೇರುಗಳು ನಾಶವಾಗುತ್ತಿರುವ ಈ ಸಮಯದಲ್ಲಿ ವರ್ಷಕ್ಕೊಮ್ಮೆಯಾದರೂ ಇದನ್ನು ಸ್ಮರಿಸಿದರೆ ಈ ತಲೆಮಾರಿಗೆ ಉಪಯೋಗವಾಗುತ್ತದೆ ಎನ್ನುವುದು ಸಂಘಟಕರ ಅಭಿಪ್ರಾಯatid onji dina_07
ಹಿಂದಿನ ದಿನಗಳಲ್ಲಿ ತುಳುನಾಡ ಮಧ್ಯಮವರ್ಗದ ಮನೆಗಳ ಮಂದಿ ಆಷಾಢ ಮಾಸಕ್ಕೆ ತೆರಳದೆ ಮನೆಯಲ್ಲೇ ಉಳಿಯುತ್ತಿದ್ದರು. ಬಡತನದ ದಿನಗಳಲ್ಲಿ ಮನೆಯ ಆಸುಪಾಸಿನಲ್ಲಿ ದೊರೆಯುತ್ತಿದ್ದ ಹಸಿರು ಸೊಪ್ಪು ತರಕಾರಿ ಹಲಸಿನ ಹಣ್ಣು ಮಾವಿನ ಹಣ್ಣುಗಳಿಂದ ವೈವಿಧ್ಯಮಯ ಅಡುಗೆಗಳನ್ನು ತಯಾರಿಸಿ ಮನೆ ಮಂದಿ ತಿನ್ನುತ್ತಿದ್ದರು. ಈ ಅಡುಗೆ ಪದಾರ್ಥಗಳಿಗೆ ಬಳಸುತ್ತಿದ್ದ ಹಣ್ಣು ಸೊಪ್ಪು ತರಕಾರಿಗಳು ಕಾಯಿಲೆ - ಕಸಾಲೆಗಳಿಗೆ ರಾಮಬಾಣವಾಗುತ್ತಿದ್ದವು. ಇವತ್ತಿನ ಆಟಿ ದಿನದ ಆಕರ್ಷಣೆಯೂ ತಿಂಡಿ ತಿನಿಸುಗಳೇ ಆಗಿದ್ದವು. ತಿಮರೆ ಚಟ್ನಿ, ಕುಕ್ಕುದ ಚಟ್ನಿ, ತೆಕ್ಕೆರೆದ ತೆಲ್ಲಿ, ಕಂಚಲದ ಗಸಿ, ಉಪ್ಪಡ್ ಪಚ್ಚಿರ್, ತೇವು ತೇಟ್ಲ, ಪತ್ರಡೆ, ಕನಿಲೆ ಗಸಿ, ಪೆಲಕಾಯದ ಗಟ್ಟಿ ಹೀಗೆ ೨೨ ಬಗೆಯ ಖಾದ್ಯ ವೈಷಿಷ್ಟ್ಯಗಳು ಬಂದವರನ್ನು ಖುಷಿಪಡಿಸಿದವು.:
ಯುವವಾಹಿನಿ ಸಂಘಟನೆ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಆಷಾಢ ಮಾಸದ ಮಹತ್ವ ಮತ್ತು ಅಡುಗೆ ವೈಷಿಷ್ಟ್ಯಗಳ ವಿಚಾರ ವಿನಿಮಯವೂ ಆಯಿತು.ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಒಟ್ಟಾಗಿ ಬೆರೆತರು. ಹಿಂದಿನ ಕಾಲದ ಕೂಡುಕುಟುಂಬ ವ್ಯವಸ್ಥೆಯನ್ನು ನೆನಪಿಸುವಂತೆ ಮಾಡಿದ ಆಟಿಡೊಂಜಿ ದಿನ ತುಳುವರ ಶ್ರೀಮಂತ ಸಂಸ್ಕೃತಿಯನ್ನು ಅನಾವರಣಗೊಳಿಸುವಂತಿತ್ತು.
atid onji dina_22
atid onji dina_21
atid onji dina_20
atid onji dina_19
atid onji dina_18
atid onji dina_17
atid onji dina_16
atid onji dina_15
atid onji dina_14
atid onji dina_09 atid onji dina_10 atid onji dina_11 atid onji dina_12 atid onji dina_13 atid onji dina_04 atid onji dina_05 atid onji dina_06 atid onji dina_07 atid onji dina_08 atid onji dina_03 atid onji dina_02 atid onji dina_01 atid onji dina_07 atid onji dina_11atid onji dina_21 atid onji dina_23 atid onji dina_20 atid onji dina_19 atid onji dina_14 atid onji dina_15 atid onji dina_16 atid onji dina_17 atid onji dina_18 atid onji dina_13 atid onji dina_12 atid onji dina_11 atid onji dina_10 atid onji dina_09 atid onji dina_11 atid onji dina_04 atid onji dina_05 atid onji dina_07 atid onji dina_06 atid onji dina_07 atid onji dina_08 atid onji dina_03 atid onji dina_02 atid onji dina_01

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ