ಶನಿವಾರ, ಆಗಸ್ಟ್ 31, 2013

ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ೨೦ ಸಾವಿರ ಕುಟುಂಬಗಳಿಗೆ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್ ವಿತರಣೆ

ಉಡುಪಿ: ಜಿ . ಶಂಕರ್ ಫ್ಯಾಮಿಲಿ ಟ್ರಸ್ಟ್ , ಮೊಗವೀರ ಯುವ ಸಂಘಟನೆ ಮತ್ತು ಮಣಿಪಾಲ ವಿಶ್ವವಿದ್ಯಾನಿಲಯದ ವತಿಯಿಂದ ೨೦ ಸಾವಿರ ಕುಟುಂಬಗಳ ಒಂದು ಲಕ್ಷ ಫಲಾನುಭವಿಗಳಿಗೆ ಮಣಿಪಾಲ ಆರೋಗ್ಯ ಸುರ ಕ್ಷಾ ಕಾರ್ಡ್‌ಗಳನ್ನು ವಿತರಿಸಲಾಯಿತು.
[youtuber youtube='http://www.youtube.com/watch?v=ayycCUXDFRg&feature=c4-overview&list=UUs0k8vSBwTqzHjMqn8PYrzQ']

ಆರೋಗ್ಯ ಸಚಿವ ಯು. ಟಿ. ಖಾದರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶೀಘ್ರದಲ್ಲಿ ಎಪಿ ಎಲ್ ಕಾರ್ಡುದಾರರಿಗೂ ವಿಮೆ ಬಗ್ಗೆ ಚರ್ಚೆ ನಡೆದಿದೆ ಎಂದ್ರು. ಪ್ರತೀ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಉಚಿತ ಡಯಾಲಿಸಿಸ್ ಯಂತ್ರವನ್ನು ಮತ್ತು ಹೆರಿಗೆಯಾಗಿ ಮನೆಗೆ ಹೋಗು ಸಂದರ್ಭ ಆಂಬ್ಯುಲೆನ್ಸ್ ವ್ಯವಸ್ಥೆಯ ಬಗ್ಗೆಯೂ ಚಿಂತನೆ ನಡೆದಿದೆ ಎಂದು ತಿಳಿಸಿದ್ರು.
31_udupi_health_card_distribution 012
ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ ಆರೋಗ್ಯ ಕಾರ್ಡ್ ವಿತರಣೆ ಮಾಡಿದ್ರು. ಮಣಪಾಲ ವಿಶ್ವ ವಿದ್ಯಾನಿಲಯದ ಸಹ ಕುಲಾಧಿಪತಿ ಎಚ್. ಎಸ್. ಬಲ್ಲಾಳ್ ಮೊಗವೀರ ಯುವ ಸಂಘಟನೆಯ ವೆಬ್‌ಸೈಟ್ ಉದ್ಘಾಟನೆ ಮಾಡಿದ್ರು.
31_udupi_health_card_distribution 001
ಉಡುಪಿ ಚಿಕ್ಕಮಗಳೂರು ಸಂಸದ ಜಯಪ್ರಕಾಶ್ ಹೆಗ್ಡೆ, ಉದ್ಯಮಿ ಆನಂದ ಸಿ ಕುಂದರ್, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಕೇಶವ ಕುಂದರ್, ಮೊಗವೀರ ಯುವ ಸಂಘಟನೆ ಅಧ್ಯಕ್ಷ  ಜಯ ಸಿ. ಕೋಟ್ಯಾನ್, ಯಶ್‌ಪಾಲ್ ಸುವರ್ಣ ಮೊದಲಾವದರು ಉಪಸ್ಥಿತರಿದ್ದರು. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ. ಜಿ. ಶಂಕರ್ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಕ್ಕಳ ಅಪೌಷ್ಟಿಕತೆ ಕುರಿತು ಸರಕಾರ ಕಾಳಜಿ: ಖಾದರ್

ಉಡುಪಿ:ಮಕ್ಕಳ ಅಪೌಷ್ಟಿಕತೆ ಕುರಿತು ಸರಕಾರಿ ಕಾಳಜಿ ವಹಿಸಲಿದೆ ಅಂತಾ ಆರೋಗ್ಯ ಸಚಿವ ಯುಟಿ ಖಾದರ್ ಹೇಳಿದ್ದಾರೆ. ಉಡುಪಿ ಜಿಲ್ಲಾಸ್ಪತ್ರೆ ದಿಢೀರ್ ಭೇಟಿ ನೀಡಿದ ಖಾದರ್ ಮಾಧ್ಯಮದೊಂದಿಗೆ ಮಾತನಾಡಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿಯಲ್ಲಿ ಮಕ್ಕಳ ಪೌಷ್ಟಿಕತೆ ನಿವಾರಣೆಗೆ  ಮುಂದಿನ ದಿನದಲ್ಲಿ ಆರೋಗ್ಯ  ಇಲಾಖೆ ವತಿಯಿಂದ ಅಪೌಷ್ಟಿಕತೆ ಹೊಂದಿರುವ  ಮಕ್ಕಳ ಬಗ್ಗೆ ಕಾಳಜಿ ವಹಿಸಲಾಗುವುದು.ಅಪೌಷ್ಟಿಕತೆಯಿಂದ ಬಳಲುತ್ತಿರುವವರ ಕಾಳಜಿಗಾಗಿ ಪ್ರತಿ ತಿಂಗಳು ಜಿಲ್ಲಾಧಿಕಾರಿ ನೇತ್ರತ್ವದಲ್ಲಿ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.  ಅಪೌಷ್ಟಿಕತೆ ತೊಂದರೆ ತೀವ್ರವಾಗಿದ್ದಲ್ಲಿ  ಆರೋಗ್ಯ  ಇಲಾಖೆ ವತಿಯಿಂದ ನ್ಯೂಟ್ರಿಷನ್ ರಿ ಹ್ಯಾಬಿಟೇಷನ್ ಸೆಂಟರ್ ನಲ್ಲಿ ಮಕ್ಕಳನ್ನು ಪರೀಕ್ಷೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
[youtuber youtube='http://www.youtube.com/watch?v=ILBeEUe4Lik&feature=c4-overview&list=UUs0k8vSBwTqzHjMqn8PYrzQ']
31_udupi_khadar_visit_new 016

ಅಡಿಕೆ ಬೆಳೆಗಾರರ ಪರ ಮಾತೋಡೋ ನೈತಿಕ ಹಕ್ಕು ಬಿಜೆಪಿ ನಾಯಕರಿಗಿಲ್ಲ: ಸೊರಕೆ ಗುಡುಗು (vi

ಉಡುಪಿ: ಅಡಿಕೆ ಬೆಳೆಗಾರರ ಪರ ಮಾತಾನಾಡೋ ಹಕ್ಕು ನೈತಿಕ ಹಕ್ಕು ಬಿಜೆಪಿ ನಾಯಕರಿಗಿಲ್ಲ ಅಂತಾ ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ ಗುಡುಗಿದ್ದಾರೆ. ಉಡುಪಿಯಲ್ಲಿ  ಮಾಧ್ಯಮದೊಂದಿಗೆ ಮಾತನಾಡಿದ ಅವರು ಬಿಜೆಪಿ ಸರಕಾರದ ಅವಧಿಯಲ್ಲಿ ಅಡಿಕೆ ಕೊಳೆರೋಗ ಪರಿಹಾರಕ್ಕಾಗಿ ೩೬ ಸಾವಿರ ಅರ್ಜಿಗಳು ಬಂದಿತ್ತು. ತಮ್ಮ ಸರಕಾರ ಇರುವ ಅವಧಿಯಲ್ಲಿ ಇದಕ್ಕಾಗಿ ಚಿಕ್ಕಾಸು ಬಿಡುಗಡೆ ಮಾಡಿಲ್ಲ. ಆದರೆ  ಕಾಂಗ್ರೆಸ್ ಸರಕಾರ ಅಡಿಕೆ ಬೆಳೆಗಾರರ ಹಿತಕ್ಕಾಗಿ ೨೫ ಕೋಟಿ ರೂಪಾಯಿ ಮೀಸಲಿಟ್ಟಿದೆ ಅಂತಾ ಹೇಳಿದ್ರು. ಸರಕಾರಕ್ಕೆ ಗಡುವು ನೀಡ್ತಿನಿ ಅಂತಾ ಹೇಳೋ ಬಿಜೆಪಿ ನಾಯಕರು ಅಡಿಕೆ ಬೆಳೆಗಾರರ ವಿಷಯದಲ್ಲಿ ಪರಿಹಾರ ಕೋಡ್ತಿವಿ ಅಂತಾ ಹೊಸ ಡ್ರಾಮಾ ಸೃಷ್ಟಿ ಮಾಡ್ತಿದ್ದಾರೆ ವ್ಯಂಗ್ಯವಾಡಿದರು.
[youtuber youtube='http://www.youtube.com/watch?v=kZtq-trjWNI&feature=c4-overview&list=UUs0k8vSBwTqzHjMqn8PYrzQ']

ಶುಕ್ರವಾರ, ಆಗಸ್ಟ್ 30, 2013

ರೋಗ ಬಾಧಿತ ಅಡಿಕೆ ಕೃಷಿ ವೀಕ್ಷಣೆಗೆ ವಿಪಕ್ಷ ನಾಯಕರ ತಂಡ ಶಿರ್ವಕ್ಕೆ ಸರ್ಕಾರ ರೈತರ ಸಮಸ್ಯೆಗೆ ಸ್ಪಂಧಿಸದಿದ್ದರೆ ಬೀದಿಗಿಳಿಯುವುದು ಅನಿರ್ವಾಯ: ಸದಾನಂದ ಗೌಡ

ವರದಿ-ಸುರೇಶ್ ಎರ್ಮಾಳ್
ಮುಂದಿನ ೫ನೇ ತಾರೀಕಿನೋಳಗೆ ಸರ್ಕಾರ ಅಡಿಕೆ ಕೃಷಿಕರ ಸಾಲಮನ್ನ ಸಹಿತ ವಿಶೇಷ ಪ್ಯಾಕೇಜ್ ಘೋಷಣೆ ಮಾಡದಿದಲ್ಲಿ, ರೈತರ ಆತ್ಮಹತ್ಯೆಯಂಥಹುಗಳನ್ನು ತಡೆಯಲು ಹಾಗೂ ರೈತರಲ್ಲಿ ಆತ್ಮಸ್ಥೈಯವನ್ನು ವೃದ್ಧಿಸಲು ನಾವು ಬೀದಿಗಿಳಿಯುವುದು ಅನಿರ್ವಾಯವಾದೀತು ಎಂಬುದಾಗಿ ವಿಪಕ್ಷ ನಾಯಕ ಡಿ. ಸದಾನಂದ ಗೌಡ ರಾಜ್ಯ ಸರ್ಕಾರನ್ನು ಎಚ್ಚರಿಸಿದ್ದಾರೆ.
PDB_AUG30_2
ರೋಗ ಬಾಧಿತ ಅಡಿಕೆ ಕೃಷಿ ವೀಕ್ಷಣೆಗಾಗಿ ಶಿರ್ವದ ಕುಶ ಶೆಟ್ಟಿ ಎಂಬವರ ತೋಟಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿ, ಕೇವಲ ಅಡಿಕೆ ಬೆಳೆಗೆ ಮಾತ್ರ ರೋಗ ಬಾಧಿಸುತ್ತಿಲ್ಲ ಅಡಿಕೆ ಮರವೇ ನಶಿಸಿ ಹೋಗಿದೆ, ಕಳೆದ ೫೦ ವರ್ಷಗಳ ಅಡಿಕೆ ಬೆಳೆಗಾರರ ಇತಿಹಾಸದಲ್ಲಿ ಇಂಥಹ ಮಹಾ ದುರಂತ ಬಾಧಿಸಿಲ್ಲ, ಕಳೆದ ಮೂರು ತಿಂಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಕೀಟ ನಾಶಕಗಳನ್ನು ಸಿಂಪಡಿಸಲು ಆಗದ ಸ್ಥಿತಿ ಕೃಷಿಕರದ್ದು, ಇಂಥಹ ದಯಾನೀಯ ಪರಿಸ್ಥಿತಿಯಲ್ಲಿ ಸರ್ಕಾರ ಮಧ್ಯ ಪ್ರವೇಶಿಸದಿದ್ದಲ್ಲಿ ರೈತರ ಆತ್ಮಹತ್ಯೆಗಳಂಥಹ ಸಂದರ್ಭಗಳನ್ನು ನಾವು ಕಾಣುವಂತ್ತಾಗ ಬಹುದು. ಐದು ಜಿಲ್ಲೆಗಳ ವಿವಿಧ ಭಾಗಗಳ ಕೆಲವು ಅಡಿಕೆ ತೋಟಕ್ಕೆ ಸ್ವಯಂ ನಾವು ಭೇಟಿ ನೀಡಿದ್ದೇವೆ, ರಾಜ್ಯ ಸರ್ಕಾರ ಕರ್ತವ್ಯ ಮರೆತ ಕಾರಣ ನಾವು ಬರಬೇಕಾಯಿತು.
ಸಿದ್ಧರಾಮಯ್ಯನವರ ಸರ್ಕಾರ ರೋಗ ಬಾಧಿತ ಎಲ್ಲಾ ತೋಟಗಳನ್ನು ವೀಕ್ಷಣೆ ಮಾಡಿ, ಬೆಳೆ ನಾಶಗಳ ಬಗ್ಗೆ ಅಧ್ಯಾಯನ ನಡೆಸಿ ಸಂಬಂಧಪಟ್ಟ ಇಲಾಖೆಗಳಿಗೆ ನಿರ್ಧೇಶನ ನೀಡ ಬೇಕಾಗಿತ್ತು, ನಷ್ಟ ಸಂಭವಿಸಿದ ಕೃಷಿಕರಿಗೆ ಪರಿಹಾರ ಪ್ಯಾಕೇಜುಗಳನ್ನು ಘೋಷಣೆ ಮಾಡಬೇಕಾಗಿದ್ದರೂ ಮಾಡಿಲ್ಲ.
ಈ ಐದು ಜಿಲ್ಲೆಗಳಲ್ಲೂ ಬಾರೀ ಜನಾದೇಶದಂತ್ತೆ ಆಢಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ, ಅಡಿಕೆ ಬೆಳೆಗಾರರ ಮತವನ್ನು ಪಡೆದಿತ್ತು ಆದರೆ ಇದೀಗ ಅವರನ್ನು ಮರೆತಿದೆ. ನಾವು ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ಮಾಡುತ್ತಿದ್ದೇವೆ ನಾವು ಕೇವಲ ಭೇಟಿ ಮಾತ್ರ ನೀಡುತ್ತಿಲ್ಲ ಆಯಾ ಭಾಗದ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸವನ್ನೂ ಮಾಡುತ್ತಿದ್ದೇವೆ. ಹೆಚ್ಚಿನ ಕಡೆಗಳಲ್ಲಿ ೬೦ ರಿಂದ ೯೦%  ಅಡಿಕೆ ಬೆಳೆ ನಾಶ ಹೊಂದಿದ್ದನ್ನು ನಾವು ಗಮನಿಸಿದ್ದೇವೆ. ಮಾದ್ಯಮಗಳ ಮೂಲಕ ಇದಾಗಲೇ ನಾವು ಸರ್ಕಾರಕ್ಕೆ ಮಾಹಿತಿಯನ್ನು ರವಾಸಿದ್ದೇವೆ.

ಕೊಂಕಣಿ ಆರೋಗ್ಯ ಕಾರ್ಡ್ ವಿತರಣೆ, ಶಾಸಕರಿಗೆ ಅಭಿನಂದನೆ (video

ಉಡುಪಿ:ಉಡುಪಿ ಪ್ರದೇಶ್ ಕೆಥೋಲಿಕ್ ಸಭಾ ಮತ್ತು ಮಣಿಪಾಲ ವಿಶ್ವವಿದ್ಯಾನಿಲಯ ಜಂಟಿ ಆಶ್ರಯದಲ್ಲಿ ಕೊಂಕಣಿ ಆರೋಗ್ಯ ಸುರ ಕ್ಷಾ ಕಾರ್ಡ್ ವಿತರಣೆ ಮತ್ತು ಉಡುಪಿ ಜಿಲ್ಲೆಯ ಶಾಸಕರುಗಳಿಗೆ ಅಭಿನಂದನಾ ಕಾರ್ಯಕ್ರಮ ಡಾನ್ ಬಾಸ್ಕೋದಲ್ಲಿ ಜರುಗಿತು.ಉಡುಪಿ ಕೆಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೋ ಆಶೀರ್ವವಚನ ನೀಡಿದರು. ಉಡುಪಿ ಶೋಕಮಾತಾ ಇಗರ್ಜಿಯ ಧರ್ಮಗುರುಗಳಾದ ಫ್ರೆಡ್ ಮಸ್ಕರೇನಸ್, ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್, ಆರೋಗ್ಯ ಕಾರ್ಡ್ ಸಂಚಾಲಕಿ ವೆರೋನಿಕಾ ಕರ್ನೇಲಿಯೋ ಉಪಸ್ಥಿತರಿದ್ದರು..
[youtuber youtube='http://www.youtube.com/watch?v=8uwz5_crmjA&feature=c4-overview&list=UUs0k8vSBwTqzHjMqn8PYrzQ']
30_DONBOSCO 004

ರೂಪಾಯಿ ಮೌಲ್ಯ ಕುಸಿತ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ (vid

ಉಡುಪಿ: ರೂಪಾಯಿ ಮೌಲ್ಯ ಕುಸಿತವನ್ನು ವಿರೋಧಿಸಿ ಕೇಂದ್ರ ಸರಕಾರದ ವಿರುದ್ಧ ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಪ್ರತಿಭಟನೆ ನಡೆಸಿತು. ಉಡುಪಿ ಕ್ಲಾಕ್ ಟವರ್ ಎದುರು ಪ್ರತಿಭಟನೆ ನಡೆಸಿದ ಯುವ ಮೋರ್ಚಾ ಕಾರ್ಯಕರ್ತರು ಆರ್ಥಿಕ ಕುಸಿತವನ್ನು ತಡೆಗಟ್ಟಲು ಕೇಂದ್ರದ ಮನಮೋಹನ್ ಸಿಂಗ್ ನೇತ್ರತ್ವದ ಸರಕಾರ ಸಂಪೂರ್ಣ ವಿಫಲವಾಗಿದೆ. ರೂಪಾಯಿ ಮೌಲ್ಯ ಕುಸಿದಂತೆ ಭಾರತ ದೇಶದ ಜನರ ಜೀವನ ಮಟ್ಟವೂ ಕುಸಿಯುತ್ತಿದೆ. ಸ್ವತಹ ಆರ್ಥಿಕ ತಜ್ನ ರಾದ ಪ್ರಧಾನಿ ಮನಮಹೋನ್ ಸಿಂಗ್ ಅವರೇ ಈ ಕುಸಿತವನ್ನು ತಡೆಗಟ್ಟಲು ವಿಫಲರಾಗಿದ್ದು ದೇಶದ ಭವಿಷ್ಯ ಆತಂಕದತ್ತ ಹೊರಳಿದೆ. ಕೂಡಲೇ ಸರಕಾರ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಆಗ್ರಹಿಸಿದರು.
[youtuber youtube='http://www.youtube.com/watch?v=C6tmtboG4RA&feature=c4-overview&list=UUs0k8vSBwTqzHjMqn8PYrzQ']
30_PRIZE_BJP_PROTEST 001

ಮಣಿಪಾಲ ರೇಪ್ ಪ್ರಕರಣ: ಜಿಲ್ಲಾ ಸತೃ ನ್ಯಾಯಾಲಯಕ್ಕೆ ಶಿಫ್ಟ್

ಉಡುಪಿ:ಮಣಿಪಾಲ ಅತ್ಯಾಚಾರ ಪ್ರಕರಣ ಮುಖ್ಯ ನ್ಯಾಯಿಕ ದಂಡಾಧಿಕಾರಿ ಕೋರ್ಟ್‌ನಿಂದ ಜಿಲ್ಲಾ ಸತೃ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿದೆ. ಚಾರ್ಜ್ ಶೀಟ್ ಸಲ್ಲಿಕೆಯ ಆರೋಪಿಗಳಿಗೆ ೫ ದಿನಗಳ ನ್ಯಾಯಾಂಗ ಬಂಧನ ಮಂದೂಡಲಾಗಿತ್ತು.  ಇಂದು ಮತ್ತೆ ಎಲ್ಲಾ ೫ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ಡಿ‌ಎನ್‌ಎ ವರದಿ, ಚಾರ್ಜ್‌ಶೀಟ್ ಸಹಿತ ಎಲ್ಲಾ ದಾಖಲೆಗಳನ್ನು ಪೋಲಿಸರಿಗೆ ನ್ಯಾಯಿಕ ದಂಡಾಧಿಕಾರಿಗೆ ಸಲ್ಲಿಸಿದ್ದರು. ಇನ್ನೂ ಪ್ರಕರಣದ ವಿಚಾರಣೆಯನ್ನು ಸತೃ ನ್ಯಾಯಲಯ ಮಾಡಲಿಕ್ಕಿದೆ.

ಜೆಡಿ‌ಎಸ್ ದೇವೇಗೌಡರ ಮನೆಯ ಸ್ವತ್ತು: ಡೀವಿ ಲೇವಡಿ.

ಉಡುಪಿ:  ಜೆಡಿ‌ಎಸ್ ದೇವೆಗೌಡರ ಮನೆಯ ಸ್ವತ್ತು. ಕುಟುಂಬದ ಸ್ವತ್ತಾಗಿ ಕೂಡಾ ಉಳಿದಿಲ್ಲ ಅಂತಾ ಮಾಜಿ ಸಿ‌ಎಂ ಡಿವಿ‌ಎಸ್ ಲೇವಡಿ ಮಾಡಿದ್ದಾರೆ. ಉಡುಪಿಯ ಶಿರ್ವದಲ್ಲಿ ಅಡಿಕೆ ಕೊಳೆರೋಗವನ್ನು ವೀಕ್ಷಣೆ ಮಾಡಿ ಸುದ್ಧಿಗಾರರೊಂದಿಗೆ ಅವರು ಮಾತನಾಡಿದರು. ಮನೆಯ ಸ್ವತ್ತಿನಲ್ಲಿ ರಾಜ್ಯದ , ದೇಶದ ರಾಜಕಾರಣ ಸಾಧ್ಯವಿಲ್ಲ. ಜೆಡಿ‌ಎಸ್ ಮುಂದಿನ ಚುನಾವಣೆಯಲ್ಲಿ ಧೂಳಿಪಟವಾಗೋದು ಖಂಡಿತ. ಮಂಡ್ಯ ಚುನಾವಣೆಯಲ್ಲಿ ಬಿಜೆಪಿಯಿಂದ ಜಿ‌ಎಡಿ‌ಎಸ್‌ನ ಮಾನ ಮಾರ್ಯಾದೆ ಎರಡೂ ಉಳಿದಿದೆ. ಜೆಡಿ‌ಎಸ್ ತೆಗೆದುಕೊಂಡ ಅರ್ಧಾಂಶ ಮತ ಬಿಜೆಪಿ ಪಾಲಿನದ್ದು ಅಂತಾ ಸದಾ ಹೇಳಿದರು.30_udupi_harsha_jds_kutumba_sada_helike

ಮತಕ್ಕಾಗಿ ಮತಾಂತರಕ್ಕೂ ಕಾಂಗ್ರೆಸ್ ಸಿದ್ಧ: ಈಶ್ವರಪ್ಪ ಗುಡುಗು

ಉಡುಪಿ: ಮೋಸ್ಟ್ ವಾಂಟೆಡ್ ಲೀಸ್ಟ್‌ನಲ್ಲಿದ್ದ ಉಗ್ರ ಯಾಸೀನ್ ಭಟ್ಕಳ್ ಬಂಧನ ಕುರಿತು ಸಿ‌ಎಂ ಸಿದ್ಧರಾಮಯ್ಯ ಗೌರವ ಸಂಭೋಧನೆ ಕುರಿತ ಹೇಳಿಕೆಗೆ ಮಾಜಿ ಡಿಸಿ‌ಎಂ ಕೆ. ಎಸ್. ಈಶ್ವರಪ್ಪ ಕಿಡಿಕಾರಿದ್ದಾರೆ. ಉಡುಪಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಈಶ್ವರಪ್ಪ ಮತಕ್ಕಾಗಿ ಮತಾತಂತರ ಮಾಡುವುದಕ್ಕಾಗಿ ಕಾಂಗ್ರೆಸಿಗರು ಸಿದ್ಧರಾಗಿದ್ದಾರೆ ಅಂತಾ ಗುಡುಗಿದ್ದಾರೆ. ಬಿಜೆಪಿಯ ಗೊಂದಲಮಯ ರಾಜಕಾರಣದಿಂದ ಕಾಂಗ್ರೆಸ್‌ಗೆ ತಾತ್ಕಾಲಿಕ ಯಶಸ್ಸು ಸಿಕ್ಕಿದೆ. ಅಪರೂಪಕ್ಕೆ ಎಂಬಂತೆ ಲಾಟರಿ ಹೊಡೆದು ಸಿದ್ಧು ಮುಖ್ಯಮಂತ್ರಿಯಾಗಿದ್ದಾರೆ. ಅಲ್ಪಸಂಖ್ಯಾತರಿಂದಲೇ ಬದುಕಿದ್ದೇವೆ ಅಂತಾ ಕಾಂಗ್ರೆಸ್ ತೀರ್ಮಾನಿಸಿದೆ. ಯಾವಪಕ್ಷ ಅಧಿಕಾರದಲ್ಲಿರಬೇಕು ಅಂತಾ ದೇಶಭಕ್ತರೇ ಮುಂದಿನಚುನಾವಣೆಯಲ್ಲಿ  ತೀರ್ಮಾನ ಮಾಡ್ತಾರೆ ಅಂತಾ ಅವರು ತಿಳಿಸಿದ್ದಾರೆ.
30_udupi_harsha_eshwarappa_yasin_mathantra_helike

ಜೀವದ ಜೊತೆ ಚೆಲ್ಲಾಟ ಆಡಬೇಡಿ : ಮಾಜಿ ಸಿ‌ಎಂ ಎಚ್ಚರಿಕೆ

ಉಡುಪಿ: ಅಡಿಕೆ ಬೆಳೆಗಾರರ ಜೀವದ ಜೊತೆ ಚೆಲ್ಲಾಟ ಆಡಬೇಡಿ ಎಂದು ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳಿಗೆ ಮಾಜಿ ಸಿ‌ಎಂ ಡಿವಿ ಸದಾನಂದ ಗೌಡ ಎಚ್ಚರಿಕೆ ನೀಡಿದ್ದಾರೆ. ಉಡುಪಿಯ ಶಿರ್ವ ವ್ಯಾಪ್ತಿಯಲ್ಲಿ ಸದಾನಂದ ಗೌಡ ಮತ್ತು ಮಾಜಿ ಡಿಸಿ‌ಎಂ ಈಶ್ವರಪ್ಪ ಕೊಳೆ ರೋಗಕ್ಕೆ ತುತ್ತಾದ ಅಡಿಕೆ ತೋಟಗಳಿಗೆ ಭೇಟಿಕೊಟ್ಟು ಪರಿಶೀಲನೆ ನಡೆಸಿದರು. ತೋಟಗಾರರು ಮತ್ತು ರೈತರ ಜೊತೆ ಕೆಲಕಾಲ ಸಮಾಲೋಚನೆ ನಡೆಸಿದರು. ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಸದಾನಂದ ಗೌಡ,  ಸಾಲ ಮನ್ನ, ಬದಲಿ ಬೆಳೆಗಳ ಬಗ್ಗೆ ಚಿಂತನೆ ಮತ್ತು ಅಡಿಕೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆಗೆ ಸೆಪ್ಟೆಂಬರ್ ೫ರವರೆಗೆ ಗಡುವು ನೀಡಿದರು. ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಬೀದಿಗಿಳಿದು ಬಿಜೆಪಿ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು
8/30/2013 9:25 AM

ಸಿದ್ಧಿವಿನಾಯಕ ವಸತಿ ಶಾಲೆ ಇಂಟರ‍್ಯಾಕ್ಟ್ ಕ್ಲಬ್ ಉದ್ಘಾಟನೆ

ಹಟ್ಟಿಯಂಗಡಿ : ವಿದ್ಯಾರ್ಥಿಗಳಲ್ಲಿ ವಿವಿಧ ರೀತಿಯ ಹವ್ಯಾಸ, ಅಭಿರುಚಿ ಇರಬೇಕು, ತಾವು ಹಾಗೂ ತಮ್ಮ ಕ್ಲಬ್ಬಿನವರು ಶಾಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕ್ಕೊಳ್ಳಲು ಸಹಕರಿಸುತ್ತೇವೆ ಎಂದು ಕುಂದಾಪುರ ರೋಟರಿ ಕಾರ್ಯದರ್ಶಿಯಾದ ಹೆಚ್. ಎಸ್. ಹತ್ವಾರ್ ಹೇಳಿದರು. ಅವರು ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಇಂಟರ‍್ಯಾಕ್ಟ್ ಕ್ಲಬ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

DSC_0033
ಮುಖ್ಯ ಅತಿಥಿ ಎ. ಸಿ. ತುಂಗ, ನಿವೃತ ಪ್ರಾಂಶುಪಾಲರು ಮಾತನಾಡಿ ಇಂಟರ‍್ಯಾಕ್ಟ್ ಕ್ಲಬ್‌ನ ಉದ್ದೇಶವನ್ನು ತಿಳಿಸಿದರು.
ಇನ್ನೊಬ್ಬ ಮುಖ್ಯ ಅತಿಥಿ ಉರಗ ತಜ್ಞ ಗುರುರಾಜ ಸನಿಲ್ ಮಾತನಾಡಿ ಹಾವುಗಳ ರಕ್ಷಣೆ ಹೇಗೆ ಹಾಗೂ ಹಾವುಗಳಿಂದ ನಮ್ಮ ರಕ್ಷಣೆ ಹೇಗೆ ಮಾಡಬಹುದು ಎಂದು ತಿಳಿಸಿದರು. ಇವರು ವಿವಿಧ ಜಾತಿಯ ಹಾವುಗಳನ್ನು ಪ್ರದರ್ಶಿಸಿ ವಿದ್ಯಾರ್ಥಿಗಳಲ್ಲಿ ಹಾವುಗಳ ಬಗ್ಗೆ ಇರುವ ಭಯವನ್ನು ನಿವಾರಿಸಿದರು.
DSC_0020 hetti
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ ವಹಿಸಿದರು. ಈ ಸಂದರ್ಭದಲ್ಲಿ ಶಾಲಾ ಶ್ಯೆಕ್ಷಣಿಕ ಸಲಹೆಗಾರರಾದ ಶ್ರೀನಿವಾಸ ಮೂರ್ತಿ ಉಪಸ್ಥಿತರಿದ್ದರು.ಶಾಲಾ ಇಂಟರ‍್ಯಾಕ್ಟ್ ಕ್ಲಬ್‌ನ ಅಧ್ಯಕ್ಷೆಯಾಗಿ ರಾಘವಿ ಸಿ. ಎಚ್. ಹಾಗೂ ಕಾರ್ಯದರ್ಶಿಯಾಗಿ ಹರೀಶ್ ಆಯ್ಕೆಗೊಂಡರುದಾಕ್ಷಾಯಿಣಿ ಎಸ್. ಭಟ್ ಅವರು ಸ್ವಾಗತಿಸಿದರು. ಕಾರ್ತಿಕ್ ಅವರು ವಂದಿಸಿದರು. ರಸಜ್ಞ ಎಮ್. ಕಾರ್ಯಕ್ರಮ ನಿರೂಪಿಸಿದರು.

ಸಿ‌ಎಂ ಮೈಯಲ್ಲಿ ಅಲ್ಪಸಂಖ್ಯಾತ ತುಷ್ಠಿಕರಣ ರಕ್ತ: ಶಿರ್ವದಲ್ಲಿ ಡಿವಿ‌ಎಸ್ (

ಉಡುಪಿ: ಸಿ‌ಎಂ ಸಿದ್ಧು ಮೈಯಲ್ಲಿ ಹರಿತಾ ಇರೋದು ಅಲ್ಪಸಂಖ್ಯಾತರ ತುಷ್ಠಿಕರಣ ರಾಜಕಾರಣದ ರಕ್ತ ಅಂತಾ ಮಾಜಿ ಸಿ‌ಎಂ ಸದಾನಂದ ಗೌಡ ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ಅಭಿವೃದ್ಧಿಯ ಎಲ್ಲಾ ನೀಲಿ ನಕಾಶೆಗಳು ಅಲ್ಪಸಂಖ್ಯಾತರನ್ನು ಓಲೈಸುವತ್ತ ಹೆಜ್ಜೆ ಇರಿಸಿದೆ. . ಶಿರ್ವದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಡಿವಿ‌ಎಸ್ ಸಿದ್ಧರಾಮಯ್ಯ ವೋಟ್ ಬ್ಯಾಂಕ್ ರಾಜಕೀಯದ ಹಿನ್ನೆಲೆಯಿಂದ ಬಂದವರು. ಸರ್ವರನ್ನು ಸಮಾನ ಅಂತಾ ನೋಡುವ ಪ್ರಯತ್ನನಾನೇ ಮಾಡ್ತಾ ಇಲ್ಲ ಎಂದು ಗಂಬೀರವಾಗಿ ಆರೋಪಿಸಿದರು.
8/30/2013 9:26 AM

ಗುರುವಾರ, ಆಗಸ್ಟ್ 29, 2013

ಉಡುಪಿ ಶ್ರೀ ಕೃಷ್ಣನಿಗೆ ಸೋದೆ ಶ್ರೀಗಳಿಂದ ಅರ್ಘ್ಯ ಪ್ರಧಾನ.(video news)

udp_arghya pradahana_29_8_13_byte 001
ಉಡುಪಿ: ಕೃಷ್ಣ ನಗರಿ ಉಡುಪಿಯಲ್ಲಿ ಶ್ರೀ ಕೃಷ್ಣನ ಜನ್ಮದಿನದ ಸಂಭ್ರಮ ಎಲ್ಲೆ ಮಿರಿದೆ.ಮಧ್ಯರಾತ್ರಿ ಚಂದ್ರಕಾಲದ 12.10ರ ಸಮಯದಲ್ಲಿ ಪರ್ಯಾಯ ಶ್ರೀ ಸೋದೆ ಶ್ರೀ ವಿಶ್ವವಲ್ಲಭ ಶ್ರೀಪಾದರು ಕೃಷ್ಣ ಮಠದ ಗರ್ಭ ಗುಡಿಯಲ್ಲಿ ನೀರು ಮತ್ತು ತುಳಸಿಯ ಮೂಲಕ ಶ್ರೀ ಕೃಷ್ಣನಿಗೆ ಅರ್ಘ್ಯ ಪ್ರಧಾನ ಮಾಡಿದರು.ಇದಕ್ಕೂ ಮೊದಲು ಶ್ರೀಪಾದರು ಗರ್ಭ ಗುಡಿಯಲ್ಲಿರುವ ಶ್ರೀ ಬಾಲಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿ ಅರ್ಘ್ಯ ಸಮರ್ಪಿಸಿದರು.

[youtuber youtube='http://www.youtube.com/watch?v=IeRfvIr49N8&feature=c4-overview&list=UUs0k8vSBwTqzHjMqn8PYrzQ']

ತದ ನಂತರ ಶ್ರೀಗಳು ಗರ್ಭ ಗುಡಿಯ ಹೊರ ಭಾಗದಲ್ಲಿರುವ ತುಳಸಿ ಕಟ್ಟೆಯಲ್ಲಿ ಅರತಿಯನ್ನು ಬೆಳಗಿ ಬಿಲ್ವ ಪತ್ರ, ತುಳಸಿ ಹಾಗೂ ಹಾಲನ್ನು ಶಂಖದ ಮೂಲಕ ಚಂದ್ರನಿಗೆ ಅರ್ಘ್ಯ ಪ್ರಧಾನವನ್ನು ನೆರವೇರಿಸಿದರು.ಈ ಸಂದರ್ಭದಲ್ಲಿ ಕೃಷ್ಣಪುರ ಶ್ರೀಪಾದರು ಮಠದ ದಿವಾಣ ಮದ್ವೇಶ್ ತಂತ್ರಿ,ಸಿನಮಾ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕೃಷ್ಣನಿಗೆ ಅರ್ಘ್ಯ ಸಮರ್ಪಿಸಿದರು.ಅಷ್ಟಮಿಯ ಪ್ರಯುಕ್ತ ಇಂದು ಬೆಳಗ್ಗಿನಿಂದ ಉಪವಾಸ ಕೈಗೊಂಡಿದ್ದ ನೂರಾರು ಕೃಷ್ಣ ಭಕ್ತರು ಚಂದ್ರ ಶಾಲೆಯಲ್ಲಿರುವ ತುಳಸಿ ಕಟ್ಟೆಯಲ್ಲಿ ಹಾಲಿನ ಅರ್ಘ್ಯ ಅರ್ಪಿಸುವುದರ ಮೂಲಕ ಶ್ರೀ ಕೃಷ್ಣನ ಜನುಮ ದಿನವನ್ನು ಸಂಭ್ರಮಿಸಿದರು.ಇಂದು ಉಡುಪಿಯ ರಥಬೀದಿಯಲ್ಲಿ ಕೃಷ್ಣ ನ ಹುಟ್ಟಿನ ಸಂಭ್ರಮಾಚರಣೆಯ ಪ್ರಯುಕ್ತ ವಿಟ್ಲ ಪಿಂಡಿ ಉತ್ಸವ ನಡಯಲಿದ್ದು,ಸಾವಿರಾರು ಭಕ್ತರು ಶ್ರೀ ಕೃಷ್ಣನ ಲೀಲೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ.
udp_arghya pradahana_29_8_13_byte 001udp_arghya pradahana_29_8_13_byte 004

ಕ್ರಾಸ್‌ಲ್ಯಾಂಡ್ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ವಿದ್ಯಾರ್ಹತೆಯೊಂದಿಗೆ ವಿದ್ಯುನ್ಮಾನ ಕೌಶಲ್ಯ ಅತೀ ಅಗತ್ಯ

ಬ್ರಹ್ಮಾವರ:ಪ್ರಸ್ತುತ ವಿದ್ಯಮಾನದ್ಲಲಿ ಉದ್ಯೋಗ ಪಡೆಯುವ್ಲಲಿ ಕೇವಲ ವಿದ್ಯಾರ್ಹತೆ ಮಾತ್ರ ಮಾನದಂಡವಾಗ್ಲಿಲ. ಇದರೊಂದಿಗೆ ವಿದ್ಯುನ್ಮಾನ ಕೌಶಲ್ಯವೂ ಅಗತ್ಯವಾಗಿರುತ್ತದೆ ಎಂದು ನಿಟ್ಟೆಯ ಜಸ್ಟೀಸ್ ಕೆ.ಎಸ್.ಹೆಗ್ಡೆ ಇನ್ಸಿಟ್ಯೂಟ್ ಮ್ಯಾನೇಜ್‌ಮೆಂಟ್‌ನ ನಿರ್ದೇಶಕ ಡಾ.ಕೆ.ಶಂಕರನ್ ಹೇಳಿದರು.ನಗರದ ಕ್ರಾಸ್‌ಲ್ಯಾಂಡ್ ಕಾಲೇಜಿನ್ಲಲಿ ಲಿಟ್ಲ್‌ರಾಕ್ ಇನ್ಸಿಟ್ಯೂಟ್ ಫಾರ್ ಎಜುಕೇಶನಲ್ ಲೀಡರ್‌ಶಿಪ್‌ನ ಸಹಯೋಗದ್ಲಲಿ ಎರಡು ದಿನಗಳ ಕಾಲ ನಡೆಯುವ ವಿದ್ಯುನ್ಮಾನ ಕೌಶಲ್ಯ, ನೇಮಕಾರ್ಹತೆ ವಿಷಯದ ಬಗ್ಗೆ ರಾಷ್ಟ್ರೀಯ ಸಮ್ಮೇಳನಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
Picture 459

ವಿದ್ಯುನ್ಮಾನ ಕೌಶಲ್ಯ ಅಭಿವೃದ್ಧಿಗೆ ಪೂರಕವಾಗಿ ಮುಕ್ತ ಮನಸ್ಸು, ಮನಸ್ಸುಗಳ ಸಮೀಪಕರಣ ಮತ್ತು ವಿಕಸನಶೀಲವಾದ ಬುದ್ಧಿಮತ್ತೆಯ ಅವಶ್ಯಕತೆಯಿದೆ. ಹೊರಗಿನ ಬದಲಾವಣೆಗಳನ್ನು ಸ್ವೀಕರಿಸುವ ಮನೋಭಾವನೆಯೂ ಇದರೊಂದಿಗೆ ಇರಬೇಕು. ಸ್ಪರ್ಧಾತ್ಮಕ ಮನೋಭಾವನೆಯೊಂದಿಗೆ ಸಂಘಟನಾಶೀಲತೆ ಅಭಿವೃದ್ಧಿಗೆ ಪೂರಕವಾಗಿರುತ್ತದೆ ಎಂದರು.ಕಾಲೇಜಿನ ಪ್ರಾಂಶುಪಾಲ ಪ್ರೊ.ಸ್ಯಾಮುಯೆಲ್ ಕೆ ಸ್ಯಾಮುಯೆಲ್ ಅಧ್ಯಕ್ಷತೆ ವಹಿಸ್ದಿದರು.
ಲಿಟ್ಲ್‌ರಾಕ್ ಇನ್ಸಿಟ್ಯೂಟ್ ಫಾರ್ ಎಜುಕೇಶನಲ್ ಲೀಡರ್‌ಶಿಪ್‌ನ ನಿರ್ದೇಶಕ ಪ್ರೊ.ಮ್ಯಾಥ್ಯೂ ಸಿ ನೈನಾನ್ ಉಪಸ್ಥಿತರ್‍ದಿದರು.ಸಂಯೋಜಕ ಡಾ.ರಾಬರ್ಟ್ ಕ್ಲೈವ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರೊ.ಸ್ಯಾಮುಯೆಲ್ ಕೆ ಸ್ಯಾಮುಯೆಲ್ ಸ್ವಾಗತಿಸಿದರು. ಉಪನ್ಯಾಸಕಿ ರಶ್ಮಿನ್ ತನ್ವೀರ್ ವಂದಿಸಿದರು. ವಿದ್ಯಾರ್ಥಿನಿ ರೀನಾ ಕಾರ್ಯಕ್ರಮ ನಿರೂಪಿಸಿದರು. ನಂತರ ಬೆಂಗಳೂರಿನ ಮ್ಯಾನೇಜ್‌ಮೆಂಟ್ ಕನ್ಸಲ್‌ಟೆಂಟ್ ಶ್ರೀನಿವಾಸ್ ಪಾಟೀಲ್ ತಂಡಕಟ್ಟುವಿಕೆ, ಮಂಗಳೂರಿನ ಎ.ಐ.ಎಂ.ಐ.ಟಿಯ ಫಾ.ಪ್ರದೀಪ್ ಸೀಕ್ವೆರಾ ಸಂವಹನ ಕಲೆಯ ಬಗ್ಗೆ ಮಾಹಿತಿ ನೀಡಿದರು. ರೋಶನಿನಿಲಯದ ಪ್ರೊ.ಜೋಸ್‌ಲಿನ್ ಲೋಬೊ ಮತ್ತು ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನ ಪ್ರೊ.ಕ್ಲೆಮೆಂಟ್ ಡಿಸೋಜಾ ಉಪಸ್ಥಿತರ್‍ದಿದರು.

ಶ್ರೀ ಕೃಷ್ಣ ಬಾಲಲೀಲೋತ್ಸವ ವಿಟ್ಲಪಿಂಡಿ ಸಮಾಪ್ತಿ: ಭಕ್ತಿಯ ಭಾವೋದ್ವೇಗದಲ್ಲಿ ಮುಳುಗಿದ ಜನಸ್ತೋಮ (video news)

ಉಡುಪಿ:ಭಕ್ತಿಯ ಭಾವೋದ್ವೇಗದಲ್ಲಿ ಮುಳುಗಿದ ಅಪಾರ ಜನಸ್ತೋಮ, ಭಾವಪರವಶರಾಗಿ ಕೃಷ್ಣ ಕೃಷ್ಣ ಎಂದು ಮೈಮರೆತು ಶ್ರೀ ಕೃಷ್ಣ ಲೀಲೋತ್ಸವದಲ್ಲಿ ಕುಣಿದು ಕುಪ್ಪಳಿಸಿದ ಭಗವತ್ ಭಕ್ತರ ಭಕ್ತಿಯ ಉದ್ವೇಗ ಇದು ಉಡುಪಿಯಲ್ಲಿ ನಡೆದ ಶ್ರೀ ಕೃಷ್ಣ ಬಾಲ ಲೀಲೋತ್ಸವ ವಿಟ್ಲ ಪಿಂಡಿ ಉತ್ಸವದ ಕ್ಷಣಗಳು. ಸಾಂಪ್ರದಾಯಿಕವಾಗಿ ಗೊಲ್ಲರು ವೇಷದಲ್ಲಿ ಕೃಷ್ಣ ಮಠದ ಮುಂಬಾಗದಲ್ಲಿ ಮೊಸರು ಕುಡಿಕೆಯನ್ನು ಒಡೆಯುವ ಮೂಲಕ ಮೊಸರು ಕುಡಿಕೆ ಉತ್ಸವಕ್ಕೆ ಚಾಲನೆ ನೀಡಿದರು. ಪರ್ಯಾಯ ಶ್ರೀ ವಿಶ್ವವಲ್ಲಭ ಶ್ರೀಪಾದರು  ಚಿನ್ನದ  ರಥದಲ್ಲಿ  ಕೃಷ್ಣನ  ಮೂಲ ಮೃತ್ತಿಕಾ ಮೂರ್ತಿಯನ್ನು  ಕುಳ್ಳಿರಿಸಿ ಪೂಜೆಯನ್ನು ನೆರವೇರಿಸಿ ವಿಟ್ಲಪಿಂಡಿಯ ಉತ್ಸವಕ್ಕೆ ಚಾಲನೆ ನೀಡಿದರು. ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಪರ್ಯಾಯ ಶ್ರೀಗಳೊಂದಿಗೆ ಭಕ್ತರಿಗೆ ಪ್ರಸಾದವನ್ನು ವಿತರಿಸಿದರು.
[youtuber youtube='http://www.youtube.com/watch?v=4z9JNhRBvKk&feature=c4-overview&list=UUs0k8vSBwTqzHjMqn8PYrzQ']
ಸ್ವಾಮೀಜಿಯವರು  ಪಲ್ಲಕ್ಕಿಯಲ್ಲಿ ರಥಬೀದಿಯ ಸುತ್ತಲೂ ಮೆರವಣೆಗೆ ನಡೆಸಿ ಭಕ್ತರಿಗೆ ಹಂಚಲು ತಯಾರಿಸಿದ ೫೦ ಬಗೆಯ ಉಂಡೆ ಚಕ್ಕುಲಿಗಳನ್ನು , ವಿವಿಧ ಬಗೆಯ ಹಣ್ಣುಗಳನ್ನು ಮೆರವಣೆಗೆಯ ಸಂದರ್ಭದಲ್ಲಿ ವಿತರಿಸಿದರು. ಹಣ್ಣು - ಹಂಪಲುಗಳನ್ನು   ಮತ್ತು ನಾಣ್ಯವನ್ನು ಪ್ರಸಾದ ರೂಪವಾಗಿ ವಿತರಿಸುವಾಗ ಭಕ್ತ ಸಮೂಹವು ಕೃಷ್ಣ ಪ್ರಸಾದವನ್ನು ನಾ ಮುಂದು ತಾ ಮುಂದು ಎನ್ನತ್ತ ಪ್ರಸಾದಕ್ಕಾಗಿ ಮುಗಿಬೀಳುತ್ತಿದ್ದ ದೃಶ್ಯ ನೋಡುಗರಿಗೆ ಮುದ ನೀಡಿತು. ಮೆರವಣಿಗೆಯಲ್ಲಿ ಹುಲಿವೇಷ ನೃತ್ಯ, ಮರಕಾಲು ನೃತ್ಯ, ವಿವಿಧ ಕಲಾಕೃತಿಗಳ  ಮೆರವಣಿಗೆ ಉತ್ಸವಕ್ಕೆ ಮೆರಗು ನೀಡಿತು.  ಎರಡು ದಿನಗಳ ಕಾಲ ನಡೆದ  ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು  ವಿಟ್ಲ ಪಿಂಡಿಯ  ಮಹೋತ್ಸವ ರಥ ಬೀದಿಯಲ್ಲಿ ಮೆರವಣಿಗೆ ಮಾಡಿದ ಶ್ರೀ ಕೃಷ್ಣನ ಮೂಲ ವಿಗ್ರಹ ಮೂರ್ತಿಯನ್ನು ಸೋದೆ ಶ್ರೀ ವಿಶ್ವ ವಲ್ಲಭ  ಶ್ರೀಪಾದರು ಮಧ್ವ ಸರೋವರದಲ್ಲಿ ಜಲಸ್ಥಂಭನ ಮಾಡುವ ಮೂಲಕ  ಶ್ರೀ ಕೃಷ್ಣನ ಬಾಲ ಲೀಲೋತ್ಸವ ಸಮಾಪ್ತಿಗೊಂಡಿತು.

ಬುಧವಾರ, ಆಗಸ್ಟ್ 28, 2013

ಕೃಷ್ಣನೂರಲ್ಲಿ ಅಷ್ಟಮಿ ಸಂಭ್ರಮ: ಪುಟ್ಟ ಹೆಜ್ಜೆ ಇಟ್ಟು ಬಂದ ಮುದ್ದು ಕೃಷ್ಣ

ಉಡುಪಿ:  ಪೊಡವಿಗೊಡೆಯನ ನಾಡಿನಲ್ಲಿ ಅಷ್ಟಮಿಯ ಸಂಭ್ರಮ ಜೋರಾಗಿದೆ. ಮಠದೊಳಗಿನ ಗರ್ಭಗುಡಿಯಲ್ಲಿ ಸಾವಿರಾರು ಭಕ್ತರು ಜಮಾಯಿಸಿ ನವಗ್ರಹ ಕಿಂಡಿಯ ಮೂಲಕ ಕೃಷ್ಣನ ದರ್ಶನ ಪಡೆದರು.ಪರ್ಯಾಯ ಶ್ರೀ  ಸೋದೆ ವಿಶ್ವವಲ್ಲಭ ಶ್ರೀಪಾದರು ಕೃಷ್ಣನಿಗೆ ವಿವಿಧ ಅಭಿಶೇಕವನ್ನು ನೆರವೇರಿಸಿ ತೊಟ್ಟಿಲ ಕೃಷ್ಣನ ಅಲಂಕಾರ ಮಾಡಿ ಕಡಗೋಲು ಕೃಷ್ಣನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು.
[youtuber youtube='http://www.youtube.com/watch?v=TBSmzqa-eKk&feature=c4-overview&list=UUs0k8vSBwTqzHjMqn8PYrzQ']

ಸಾವಿರಾರು ಭಕ್ತರು ತೊಟ್ಟಲ ಕೃಷ್ಣನ ದರ್ಶನ ಮಾಡಿ ಪುನೀತರಾದರು. ಇನ್ನೊಂದೆಡೆ ಮಠದ ರಾಜಾಂಗಣದಲ್ಲಿ ನಡೆದ  ಮುದ್ದುಕೃಷ್ಣ ಸ್ಪರ್ಧೆ ಭಕ್ತ ಸಮೂಹವನ್ನು ಪುಳಕಿತಗೊಳಿಸಿತ್ತು. ನೂರಾರು ತಾಯಂದಿರು ತಮ್ಮ ಮಕ್ಕಳಿಗೆ ಮುದ್ದು ಕೃಷ್ಣನ ವೇಷವನ್ನು ಹಾಕಿ ಕೃಷ್ಣ ವೇಷ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಮಕ್ಕಳ ಮುದ್ದು ಕಂಗಳಲ್ಲಿ ಬೆಣ್ಣೆ ಕೃಷ್ಣ, ತುಂಟ ಕೃಷ್ಣ, ದೇವಕಿನಂದನನನ್ನು ಕಂಡು ಅಷ್ಟಮಿ ಸಂಭ್ರಮದಲ್ಲಿ ಪಾಲ್ಗೊಂಡರು.
2_WMV V9 005
krishnalankara 2
28_udupi_muddukrishna_sparde_WMV V9 004
3_WMV V9 005
Ashtami_WMV V9 001
Ashtami_WMV V9 002

ಗಣಪತಿಗೆ ಅವಮಾನ ಮಾಡಿದ ಢುಂಢಿ ಕಾದಂಬರಿ ನಿಷೇಧಿದುವಂತೆ ಪ್ರತಿಭಟನೆ (video news)

ಉಡುಪಿ :ಗಣೇಶನ ಅಪಮಾನ ಮಾಡಿದ ಢುಂಢಿ ಕಾದಂಬರಿಯನ್ನು ನಿಷೇಧಿಸುವಂತೆ ಮತ್ತು ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ ಲೇಖಕರ ಬಂಧನಕ್ಕೆ ಆಗ್ರಹಿಸಿ ಉಡುಪಿ ಜಿಲ್ಲಾ ಹಿಂದೂ ಜನಜಾಗೃತಿ ವತಿಯಿಂದ ಉಡುಪಿಯಲ್ಲಿ ಪ್ರತಿಭಟನೆ ನಡೆಯಿತು.ಢುಂಢಿ ಲೇಖಕ ಯೋಗೀಶೈ ಮಾಸ್ಟರ್ ಅವರನ್ನು ಬಂಧಿಸಿ ಪ್ರಕಾಶಕರ ಮೇಲೆ ಅಪರಾಧವನ್ನು ದಾಖಲಿಸಿ ಪುಸ್ತಕ ನಿಷೇಧಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ.
[youtuber youtube='http://www.youtube.com/watch?v=sJeSD5FwloE&feature=c4-overview&list=UUs0k8vSBwTqzHjMqn8PYrzQ']
28udupi_ganesh_protest_dhnddi

ಗೋಹತ್ಯೆ ನಿಷೇಧ ಮಸೂದೆ ಹಿಂತೆಗೆತ ಖಂಡಿಸಿ ಪ್ರತಿಭಟನೆ (video news)
ಉಡುಪಿ: ಗೋಹತ್ಯೆ ನಿಷೇಧ ಮಸೂದೆ ಹಿಂತೆಗೆತ ಖಂಡಿಸಿ ಮತ್ತು ದೇವಸ್ಥಾನ ಆಡಳಿತ ಮಂಡಳಿ ರದ್ಧತಿ ವಿರೋಧಿಸಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಕ್ಲಾಕ್ ಟವರ್ ಎದುರು ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಮಾಜಿ ಶಾಸಕ ರಘುಪತಿ ಭಟ್, ಉದಯ್ ಕುಮಾರ್ ಶೆಟ್ಟಿ, ಕುಯಿಲಾಡಿ ಸುರೇಶ್ ನಾಯಕ್, ಶೀಲಾ ಶೆಟ್ಟಿ, ಉಪೇಂದ್ರ ನಾಯಕ್, ಕಟಪಾಡಿ ಶಂಕರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
[youtuber youtube='http://www.youtube.com/watch?v=pgqvIDxOa5E&feature=c4-overview&list=UUs0k8vSBwTqzHjMqn8PYrzQ']GOHATYYE_NISHEDA_PROTEST 001

ನಾಡಿಗಿಳಿದ ಹೊರದೇಶದ ವಿಚಿತ್ರ ಪ್ರಾಣಿ.! ಜನರನ್ನು ರಂಜಿಸುವುದಕ್ಕಾಗಿ ಈ ವೇಷ..

ವರದಿ-ಸುರೇಶ್ ಎರ್ಮಾಳ್
ಪಡುಬಿದ್ರಿ: ಜನರು ಹಣ ಸಂಪಾದಿಸುವುದಕ್ಕೆ.. ನಾನಾ ದಾರಿ.. ವಿಧವಿಧ ವೇಷ... ಅದೇ ರೀತಿ ನವರಾತ್ರಿ, ಅಷ್ಟಮಿ, ಚೌತಿ ಹೀಗೆ ಎಲ್ಲಾ ಹಬ್ಬ ಹರಿದಿನಗಳಲ್ಲೂ ವೇಷ ಹಾಕಿ ಹಣಗಳಿಸುವ ದಂಧೆ ನಡೆಸುವವರೇ ಅಧಿಕ. ಆದರೆ ಅದಕ್ಕೆ ಅಪವಾದವೋ ಎಂಬಂತ್ತೆ ಕಟಪಾಡಿಯ ಯುವಕನೋರ್ವ ವರ್ಷ ವರ್ಷವು ಜನರನ್ನು ರಂಜಿಸುವ ನಿಟ್ಟಿನಲ್ಲಿ ವಿಶಿಷ್ಠ ವೇಷಗಳನ್ನು ಹಾಕುವ ಮೂಲಕ, ಮುಂದಿನ ವರ್ಷ ಏನು ವೇಷ ಎಂಬುದನ್ನು ಜನರು ಕಾಯುವಂತ್ತಾಗಿದೆ.
ಕಟಪಾಡಿ ಏಣಗುಡ್ಡೆಯ ಜೆ.ಯನ್. ನಗರ ನಿವಾಸಿ ರವಿ ಕಟಪಾಡಿ ಎಂಬವರು ಕಳೆದ ಮೂರು ವರ್ಷಗಳಿಂದ ವಿಶಿಷ್ಠ ವೇಷ ಭೂಷಣಗಳನ್ನು ನಡೆಸಿ ವಿಟ್ಲಪಿಂಡಿಯ ಸಮಯದಲ್ಲಿ ಎಲ್ಲರ ಕೇಂದ್ರ ಬಿಂದುವಾಗಿ ಮಿಂಚುತ್ತಿದ್ದು. ಈ ವೇಷ ಭೂಷಣ ಸಹಿತ ನಟನೆಗಾಗಿ ಉಡುಪಿ ಮಠಾಧೀಪತಿಗಳಿಂದ ಸನ್ಮಾನವನ್ನು ಗಳಿಸಿದ್ದರು. ಇದರಿಂದ ಮತ್ತಷ್ಟು ಉತ್ತೇಜನ ಪಡೆದ ಇವರು ಆರಂಭಿಕ ವರ್ಷದಲ್ಲಿ ಸ್ಪೈಡರ್‌ಮ್ಯಾನ್, ದ್ವಿತೀಯ ವರ್ಷ ಅವತಾರ್, ತೃತೀಯ ವರ್ಷ ಆಕ್ಟೋಪಾಸ್ ಹಾಗೆ ಇದೀಗ ಆಂಗ್ಲ ಬಾಷೆಯ ಚಲನಚಿತ್ರ ಜಾನ್‌ಕಾರ್‍ಟ್‌ರ್‌ನ ಒಂದು ವಿಚಿತ್ರ ಪ್ರಾಣಿಯ ವೇಷ ಹಾಕುವ ಮೂಲಕ ಮತ್ತೋಮ್ಮೆ ಜನರ ಮನಸ್ಸಿಗೆ ಲಗ್ಗೆ ಇಟ್ಟಿದ್ದಾರೆ.
PDB_AUG28_1
ತನ್ನ ಗೆಳೆಯರ ಸಹಕಾರದಿಂದ ಈ ಸಾಧನೆಯನ್ನು ಮಾಡುತ್ತಾ ಬಂದಿರುವ ಇವರು ಈ ಬಾರಿಯ ವೇಷಕ್ಕೆ ಬರೋಬ್ಬರಿ ೭ ಸಾವಿರ ರೂಪಾಯಿ ವೆಚ್ಚ ತಗುಲಿದೆ ಎನ್ನುತ್ತಾರೆ. ಹಣ ಸಂಪಾದಿಸುವ ದಂಧೆಯಾಗಿ ಈ ವೇಷವನ್ನು ಬಳಸದೆ ಕೇವಲ ಜನರ ಮನ ರಂಜಿಸಿ ಹೆಸರುಗಳಿಸುವುದೇ ನನ್ನ ಗುರಿ ಎನ್ನುವ ಇವರಿಗೆ ಇವರ ಸಾಧನೆ ಹಿಂದೆ ಅನೇಕ ಮಿತ್ರರಿದ್ದರೂ, ಇವರಿಗೆ ವೇಷಭೂಷಣ ಮಾಡಲು ಕಲಾಗಾರರಾದ ದಿನೇಶ್ ಮಟ್ಟು ಎಂಬವರು ಶ್ರಮಿಸುತ್ತಾರೆ. ವೇಷ ಭೂಷಣಕ್ಕೆ ತಗುಲುವ ವೆಚ್ಚವನ್ನು ಭರಿಸಲು ತನ್ನ ಪರಿಚಯಸ್ಥರಲ್ಲಿಗೆ ಮಾತ್ರ ಹೋಗಿ ಹಣಕ್ಕೆ ಕೈ ಒಡ್ಡುವ ಇವರು, ಸಾರ್ವಜನಿಕ ಸ್ಥಳದಲ್ಲಿ ತನ್ನ ಪ್ರತಿಭೆ ಪ್ರದರ್ಶಿಸಿ ಹಣ ಯಾಚಿಸುತ್ತಿಲ್ಲ.

PDB_AUG28_2
ಬಹಳಷ್ಟು ಹುಲಿವೇಷ ಸಹಿತ ವಿವಿಧ ತಂಡಗಳು ಇವರನ್ನು ತಂಡಕ್ಕೆ ಸೇರಿಕೊಳ್ಳಲು ವಿನಂತಿಸಿದೆ, ಆದರೆ ತನ್ನ ಧ್ಯೇಯ ಹಣ ಸಂಪಾದಿಸುವುದಲ್ಲ ಎಂಬ ನೆಲೆಯಲ್ಲಿ ಅವರ ವಿನಂತಿಯನ್ನು ನಯವಾಗಿ ತಿರಸ್ಕರಿಸಿದ್ದೇನೆ ಎನ್ನುತ್ತಾರೆ. ಒಟ್ಟಾರೆಯಾಗಿ ಡುಪಿಯಲ್ಲಿ ನಡೆಯಲಿರುವ ವಿಟ್ಲಪಿಂಡಿಯ ಸಂದರ್ಭ ಸೇರುವ ಲಕ್ಷಾಂತರ ಮಂದಿಯನ್ನು ಈ ವಿಚಿತ್ರ ವೇಷದೊಂದಿಗೆ ತನ್ನ ವಿಭಿನ್ನ ನಟನೆಯ ಮೂಲಕ ರಂಜಿಸಲಿದ್ದಾರೆ ಎಂಬುದು ಸತ್ಯ.

ಮಂಗಳವಾರ, ಆಗಸ್ಟ್ 27, 2013

ಕೃಷ್ಣ ಲೀಲೋತ್ಸವಕ್ಕೆ ರಥಬೀದಿ ಸಿದ್ದ :ಇದು ಅಷ್ಟಮಿಯಲ್ಲ ಕೃಷ್ಣ ಜಯಂತಿ (vid

ಉಡುಪಿ ಕೃಷ್ಣನಿಗೆ ಹುಟ್ಟುಹಬ್ಬದ ಸಂಭ್ರಮ. ಕಡಗೋಲು ಕೃಷ್ಣನ ಆರಾಧನೆಗೆ ಅಷ್ಟಮಠಗಳ ರಥಬೀದಿ ಸಿದ್ದವಾಗಿ ಕುಳಿತಿದೆ. ಬುಧವಾರ ಕೃಷ್ಣಜಯಂತಿ ಉತ್ಸವ ನಡೆದರೆ, ಗುರುವಾರ ಶ್ರೀ ಕೃಷ್ಣ ಲೀಲೋತ್ಸವ ಜರುಗಲಿದೆ.ಅಷ್ಟಮಠಗಳ ರಥಬೀದಿಯಲ್ಲಿ ಕೃಷ್ಣನ ಹುಟ್ಟಿನ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಇನ್ನೆರಡು ದಿನ ಉಡುಪಿ ನಂದಗೋಕುಲವಾಗಿ ಕಂಗೊಳಿಸಲಿದೆ. ಹರಿಭಕ್ತಿಯಲ್ಲಿ ಮಿಂದೇಳಲಿದೆ. ಆಚಾರ್ಯ ಮಧ್ವರಿಂದ ಸ್ಥಾಪಿತ ಕೃಷ್ಣನಿಗೆ ಎಂಟು ಶತಮಾನಗಳ ಇತಿಹಾಸವಿದೆ. ಕೃಷ್ಣದೇವರ ಮಠದಲ್ಲಿ ಪರಂಪರಾಗತವಾಗಿ ಕೃಷ್ಣಜನ್ಮಾಷ್ಟಮಿ ಆಚರಿಸಿಕೊಂಡು ಬರಲಾಗುತ್ತಿದೆ. ಬುಧವಾರ ಕೃಷ್ಣ ಜಯಂತಿ ಆಚರಿಸಲ್ಪಟ್ಟರೆ, ಗುರುವಾರ ಹುಟ್ಟಿನ ಸಂಭ್ರಮಾಚರಣೆಯಾಗಿ ವಿಟ್ಲಪಿಂಡಿ ಉತ್ಸವ ಜರುಗಲಿದೆ. ಮೊದಲದಿನ ಉಪವಾಸ ಇರುವ ಕೃಷ್ಣಭಕ್ತರು ನಡುರಾತ್ರಿ ೧೨.೧೦ ಅರ್ಘ್ಯ ಪ್ರಧಾನ ಮಾಡಲಿದ್ದಾರೆ.

[youtuber youtube='http://www.youtube.com/watch?v=Iop1NHXkSbQ&feature=c4-overview&list=UUs0k8vSBwTqzHjMqn8PYrzQ']
ಶ್ರೀ ಕೃಷ್ಣ ಲೀಲೋತ್ಸವಕ್ಕೆ ಉಡುಪಿಯಲ್ಲಿ ವಿಶೇಷ ಮಹತ್ವ ಇದೆ. ವಿಟ್ಲಪಿಂಡಿ ಎಂದು ಆಚರಿಸಲಾಗುವ ಈ ಹಬ್ಬದಲ್ಲಿ , ಸಾಂಪ್ರದಾಯಿಕ ರೀತಿಯಲ್ಲಿ ಗೊಲ್ಲರಿಂದ ಮೊಸರುಕುಡಿಕೆ ನಡೆಯುತ್ತೆ. ಈ ಆಚರಣೆಗಾಗಿ ರಥಬೀದಿಯ ಸುತ್ತಲೂ ಈಗಾಗಲೇ ಅಟ್ಟಳಿಗೆಗಳನ್ನು ಹಾಕಲಾಗಿದೆ.ಅಂದು ಸಾವಿರಾರು ಜನ ಮಠಕ್ಕೆ ಬೇಟಿ ನೀಡುವುದರಿಂದ ವಿಶೇಷ ಭದ್ರತಾ ವ್ಯವಸ್ಥೆಗಳನ್ನೂ ಮಾಡಲಾಗಿದೆ. ಮುದ್ದುಕೃಷ್ಣರ ಕಲರವ, ಹುಲಿವೇಷ ಸಹಿತ ವಿವಿಧ ಜಾನಪದ ವೇಷಧಾರಿಗಳು ಲೀಲೋತ್ಸವದಲ್ಲಿ ಭಾಗವಹಿಸುತ್ತಾರೆ. ಪರ್ಯಾಯ ಸೋದೆ ಮಠದವರು ಎಲ್ಲಾ ತಯಾರಿಗಳನ್ನೂ ಮಾಡಿಕೊಂಡಿದ್ದಾರೆ.
ಈ ಬಾರಿ ಕೃಷ್ಣನ ಹುಟ್ಟು ಅಷ್ಟಮಿಗೆ ಬದಲಾಗಿ ಕೃಷ್ಣಜಯಂತಿಯಾಗಿ ಆಚರಿಸಲ್ಪಡುತ್ತೆ. ಅಷ್ಟಮಿ ತಿಥಿ ಜೊತೆಗೆ ಚಂದ್ರೋದಯ ಕಾಲದಲ್ಲಿ ರೋಹಿಣಿ ನಕ್ಷತ್ರ ಬರುವುದರಿಂದ ಈ ಆಚರಣೆ ಕೃಷ್ಣ ಜಯಂತಿ ಎಂದು ಕರೆಸಿಕೊಳ್ಳುತ್ತೆ.ಉಡುಪಿ ಅಷ್ಟಮಿಯಲ್ಲಿ ಧಾರ್ಮಿಕ ಆಚರಣೆ ಮಾತ್ರವಲ್ಲ ಕಲಾರಾಧನೆಯ ಮೂಲಕವೂ ಕೃಷ್ಣನನ್ನು ಪೂಜಿಸಲಾಗುತ್ತೆ. ಹಾಗಾಗಿ ನಾಡಿನ ವಿವಿಧ ಭಾಗಗಳಿಂದ ಜನಸಾಗರವೇ ಉಡುಪಿಗೆ ಹರಿದು ಬರಲಿದೆ.

ಅನ್ನಬ್ರಹ್ಮನಿಗೆ ಉಂಡೆ ಚಕ್ಕುಲಿಯ ಸಮಾರಾಧನೆ: ಇದು ಅಷ್ಟಮಿ ವಿಶೇಷ (video news)

ಶ್ರೀಕೃಷ್ಣ ಜನ್ಮಾಷ್ಠಮಿಯ ವಿಶೇಷ ಪೂಜೆಯಲ್ಲಿ ಭಕ್ತರಿಗೆ ಉಂಡೆ ಚಕ್ಕುಲಿಯನ್ನು ಪ್ರಸಾದ ರೂಪದಲ್ಲಿ ಹಂಚಲಾಗುತ್ತದೆ. ಅಷ್ಟಮಿಯ ಪ್ರಸಾದಕ್ಕೆಂದೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ಲಕ್ಷಕ್ಕೂ ಮಿಕ್ಕಿ ಉಂಡೆ ತಯಾರಿಸಿ ಭಕ್ತರಿಗೆ ನೀಡಲಾಗುತ್ತದೆ.

[youtuber youtube='http://www.youtube.com/watch?v=GwALJUN3-rU&feature=c4-overview&list=UUs0k8vSBwTqzHjMqn8PYrzQ']


ಶ್ರೀಕೃಷ್ಣನ ಹುಟ್ಟುಹಬ್ಬದ ಸಂಭ್ರಮದಲ್ಲಿ ಶ್ರೀಕೃಷ್ಣನಿಗೆ ನೈವೇದ್ಯ ಮಾಡಿದ ಉಂಡೆ ಚಕ್ಕುಲಿಯನ್ನು ವಿಟ್ಲಪಿಂಡಿಯ ಮೆರವಣಿಗೆಯಲ್ಲಿ ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತದೆ.  ಕಡೆಗೋಲು ಶ್ರೀಕೃಷ್ಣನ ಜನ್ಮಾಷ್ಠಮಿಯನ್ನು ಕೃಷ್ಣನ ನೆಲೆ ವೀಡಾದ ಉಡುಪಿಯಲ್ಲಿ ಭಕ್ತರು ಶೃದ್ದೆ ಭಕ್ತಿಯಿಂದ ಆಚರಿಸುತ್ತಾರೆ.
DSCN0062
ಶ್ರೀ ಕೃಷ್ಣನು ಬಾಲ್ಯದಲ್ಲಿ ಆಡಿ ನಲಿದ ನೆನಪಿಗೆ ಮಕ್ಕಳಿಗೆ ಪ್ರಿಯವಾದ ಭಕ್ಷಗಳಾದ ಉಂಡೆ, ಚಕ್ಕುಲಿಗಳನ್ನು ತಯಾರಿಸಿ ಪ್ರಸಾದ ರೂಪದಲ್ಲಿ ಹಂಚುವುದು ಮೊದಲಿನಿಂದಲೂ ಬಂದ ವಾಡಿಕೆ.  ಇಲ್ಲಿಗೆ  ಬರುವ ಸಾವಿರಾರು ಭಕ್ತರು ಜನ್ಮಾಷ್ಠಮಿಯ ಸಂಭ್ರಮದಲ್ಲಿ ದರ್ಶನ ಪಡೆದು ಪೂಜೆ ಸಲ್ಲಿಸುತ್ತಾರೆ. ಅಷ್ಟಮಿಯ ಸಂಭ್ರಮದಲ್ಲಿ ದರ್ಶನ ಪಡೆಯುವ ಭಕ್ತರಿಗೆ ಶ್ರೀಕೃಷ್ಣ ಮಠದಲ್ಲಿ ಪ್ರತಿವರ್ಷವು ಉಂಡೆ ಚಕ್ಕುಲಿಗಳನ್ನು ಪ್ರಸಾದ ರೂಪವಾಗಿ ನೀಡಲಾಗುತ್ತಿದೆ. ಐವತ್ತು ಸಾವಿರಕ್ಕು ಮಿಕ್ಕು  ಉಂಡೆ ಚಕ್ಕುಲಿಗಳನ್ನು ಶ್ರೀಕೃಷ್ಣನಿಗೆ ನೈವೇದ್ಯ ಮಾಡಿ ಭಕ್ತರಿಗೆ ಪ್ರಸಾದವಾಗಿ ಹಂಚಲಾಗುತ್ತದೆ.ಭಕ್ತರಿಗೆ ಹಂಚಲಾಗುವ ಉಂಡೆ ಚಕ್ಕುಲಿಯನ್ನು ವಿಶೇಷ ಮುತುವರ್ಜಿ ಕೊಟ್ಟು ಶುದ್ದತೆಗೆ ಆದ್ಯತೆ ಕೊಟ್ಟು ತಯಾರಿಸಲಾಗುತ್ತದೆ.
DSCN0071
ಈ ಭಾರಿ ೫೦ ಬಗೆಯ ೭೫ ಸಾವಿರ ಲಡ್ಡು ಮತ್ತು ಉಂಡೆಯನ್ನು ೧ ಲಕ್ಷ ಚಕ್ಕುಲಿಯನ್ನು  ನೈವೇದ್ಯಕ್ಕೆ ಸಜ್ಜುಗೊಳಿಸಲಾಗುತ್ತಿದೆ.ಕೃಷ್ಣನಿಗೆ ನೈವೇದ್ಯ ಮಾಡಿದ ಚಕ್ಕುಲಿಯನ್ನು ವಿಟ್ಲಪಿಂಡಿಯ ಲಿಲೋತ್ಸವದಲ್ಲಿ  ಭಕ್ತರಿಗೆ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಭಕ್ತರು ಸಮೂಹ ಸಮೂಹವಾಗಿ ಪ್ರಸಾದವನ್ನು ಪಡೆಯಲು ಹಾತೊರೆಯುವುದೇ ಸಂಭ್ರಮವಾಗಿ ಕಂಡು ಬರುತ್ತದೆ.ಉಂಡೆ ಚಕ್ಕುಲಿಯನ್ನು ಪ್ರಸಾದ ರೂಪವಾಗಿ ಭಕ್ತರಿಗೆ ಹಂಚುವುದು ಉಡುಪಿ ಶ್ರೀಕೃಷ್ಣ ಮಠದಲ್ಲಿ ಆಚರಿಸುವ ಅಷ್ಟಮಿಯ ವಿಶೇಷ. ಶ್ರೀಕೃಷ್ಣನಿಗೆ ಪ್ರಿಯವಾದ ಉಂಡೆ ಚಕ್ಕುಲಿಯನ್ನು ನೈವೇದ್ಯ ಮಾಡಿ  ಲಕ್ಷಾಂತರ ಭಕ್ತರಿಗೆ ಹಂಚಲಾಗುತ್ತದೆ. ಈ ನಿಟ್ಟಿನಲ್ಲಿ ಉಂಡೆ ಚಕ್ಕುಲಿಯನ್ನು ವಿಶೇಷ ಮುತುವರ್ಜಿಕೊಟ್ಟು ಶೃದ್ದೆಯಿಂದ ತಯಾರಿಸಲಾಗುತ್ತಿದೆ.

ಕನ್ಯಾನ: ರೈಲಿನಡಿಗೆ ಬಿದ್ದು ವ್ಯಕ್ತಿ ಸಾವು

ಕುಂದಾಪುರ: ಮದ್ಯ ಸೇವನೆ ಮಾಡಿದ ವ್ಯಕ್ತಿಯೋರ್ವ ಚಲಿಸುತ್ತಿದ್ದ ರೈಲಿನಡಿಗೆ ಬಿದ್ದು ಮ್ರತಪಟ್ಟ ಘಟನೆ ತಾಲೂಕಿನ ಹೆಮ್ಮಾಡಿ ಸಮೀಪದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ್ದು ಘಟನೆ ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.ತೆಕ್ಕಟ್ಟೆ ಉಳ್ತೂರು ಮೂಲದ ಪ್ರಸ್ತುತ ಹೊಸನಗರದಲ್ಲಿ ವಾಸವಿರುವ ಶಂಕರ ಶೆಟ್ಟಿ (೫೯) ಮ್ರತಪಟ್ಟವರು.
photo (1)

ಸೋಮವಾರ ರಾತ್ರಿ ರೈಲ್ವೇ ಹಳಿಯ ಸಮೀಪ ಕುಡಿದು ನಡೆದು ಬರುತ್ತಿರುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ರೈಲಿನಡಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಮ್ರತ ವ್ಯಕ್ತಿಯ ಶವದ ಸಮೀಪದಲ್ಲಿಯೇ ಮದ್ಯವಿರಿರುವ ಬಾಟಲಿ ಹಾಗೂ ಬೀಡಿ ಸಿಕ್ಕಿದೆ.ಕುಂದಾಪುರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
photo
photo (2)

ನಾಗಾರ್ಜುನ ಕಾರ್ಮಿಕನ ಭೀಕರ ಕೊಲೆ.॒. ಗುರುತುಚೀಟಿ ನೀಡದೆ ಕಂಪನಿ ನಿರ್ಲಕ್ಷ್ಯ..!

ವರದಿ-ಸುರೇಶ್ ಎರ್ಮಾಳ್
ಜನವಿರೋಧಿ ನಾರ್ಗಾಜುನ ಕಂಪನಿಯ ಕಾರ್ಮಿಕರ ಕಾಲೋನಿಯಲ್ಲಿ ಯುವಕನೋರ್ವನ ತಲೆಯನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಲಾಗಿದ್ದು, ಸೋಮವಾರ ಮುಂಜಾನೆ ಪ್ರಕರಣ ಬೆಳಕಿಗೆ ಬಂದಿದೆ.
ಕೊಲೆಯಾದ ವ್ಯಕ್ತಿ ಸುಮಾರು ೪೦ ವರ್ಷ ವಯಸ್ಸಿನವನಾಗಿದ್ದು, ಮುಖ ಸಂಪೂರ್ಣ ಜಖಂ ಆದ ಸ್ಥಿತಿಯಲ್ಲಿ ಶವ ನಾಗಾರ್ಜುನ(ಯುಪಿಸಿಯಲ್) ಕಾರ್ಮಿಕರ ಕಾಲೋನಿಯಲ್ಲಿ ಪತ್ತೆಯಾಗಿದೆ. ಕಳೆದ ಕೆಲ ದಿನಗಳ ಹಿಂದೆ ಉಡುಪಿಯ ಸಿಟಿ ಬಸ್ಸು ತಂಗುದಾಣದ ಬಳಿ ಮೂರು ಮಂದಿ ಹೊರ ಜಿಲ್ಲೆಯ ಕಾರ್ಮಿಕರನ್ನು ಉಡುಪಿ ಡೇನಿಸ್‌ರವರ ಕೈಕೆಳಗೆ ತೋಟಗಾರಿಕೆ ಗಾರ್ಡನ್ ಕೆಲಸಕ್ಕಾಗಿ ಕರೆ ತಂದಿದ್ದು. ಅವರಿಂದ ಯಾವುದೇ ಗುರುತುಚೀಟಿ ಸಹಿತ ಹೆಸರು ವಿಳಾಸವನ್ನು ಪಡೆಯದೆ ಕೆಲಸ ಮಾಡಿಸಿಕೊಂಡಿದ್ದು. ಆದರೆ ಸೋಮವಾರ ಆ ಮೂವರೂ ಕೆಲಸಕ್ಕೆ ಬಾರದ ಹಿನ್ನಲೆಯಲ್ಲಿ ಸೂಪರ್‌ವೈಸರ್ ಆಗಿ ಕಾರ್ಯ ನಿರ್ವಾಹಿಸುತ್ತಿದ್ದ ಮುಂಡ್ಕೂರಿನ ಡೊಲ್ಪಿ ಡಿಸೋಜ ಎಂಬವರು ಅವರನ್ನು ಹುಡುಕಿಕೊಂಡು ಕಾಲೋನಿಗೆ ಬಂದಿದ್ದು, ಬಾಗಿಲು ಹಾಕಿದ ಸ್ಥಿತಿಯಲ್ಲಿದ್ದ ಕಾರಣ ಕಿಟಕಿಯಿಂದ ಇಣುಕಿ ನೋಡಿದಾಗ ರಕ್ತದ ಮಡುವಿಲ್ಲಿ ಯುವಕನೋರ್ವನ ಶವ ಪತ್ತೆಯಾಗಿದೆ.

26-1 (1)
ಸಹಪಾಠಿಗಳು ನಾಪತ್ತೆ..!
ಒರ್ವ ಶವವಾಗಿ ಪತ್ತೆಯಾದರೆ ಇನ್ನುಳಿದ ಇಬ್ಬರು ಸಹಪಾಠಿಗಳು ನಾಪತ್ತೆಯಾಗಿದ್ದರೆ. ಕುಡಿತದ ಅಮಲಿನಲ್ಲಿ ಇವರೋಳಗೆ ಯಾವುದೋ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಈ ಕೊಲೆ ನಡೆದಿರ ಬಹುದೆಂಬ ಶಂಕೆ ವ್ಯಕ್ತವಾಗಿದೆ. ಶವವಿದ್ದ ಕೊಠಡಿಯೋಳಗೆ ಯುಪಿಸಿಯಲ್ ಕಾರ್ಮಿಕರು ಬಳಕೆ ಮಾಡುತ್ತಿದ್ದ ಮೂರು ಹೆಲ್ಮೆಟ್, ಮಲಗುವುದಕ್ಕೆ ಹಾಸಿದ ಮೂರು ಚಾಪೆ ಇವುಗಳು ಈ ಕೊಠಡಿಲ್ಲಿ ಮೂವರು ವಾಸವಾಗಿದ್ದರು ಎಂಬುದನ್ನು ಸಾಭೀತು ಪಡಿಸುತ್ತಿದೆ.
ಗುರುತು ಚೀಟಿ ಕಡ್ಡಾಯವಿಲ್ಲವೇ..?
ಯುಪಿಸಿಯಲ್(ನಾರ್ಗಾಜುನ)ಸೈಟಿನೋಳಗೆ ಯಾವನೇ ಒರ್ವ ಪ್ರವೇಶಿಸುವುದಕ್ಕೆ ಗುರುತಿನ ಮುಖ್ಯ ಎನ್ನುವ ಕಂಪನಿ, ಯಾವುದೇ ವಿಳಾಸ ಹೆಸರು ಗೊತ್ತಿಲ್ಲದ ಅಪರಿಚಿತರಿಗೆ ಸೈಟಿನೋಳಗೆ ಪ್ರವೇಶ ಹೇಗೆ ನೀಡಿತು..! ಈ ಘಟನೆಯಿಂದ ಬಹಿರಂಗವಾಗಿರುವುದು ಇದೊಂದು ಇಂಥಹ ವಿಳಾಸ ರಹಿತ ಕಾರ್ಮಿರು ಕಂಪನಿಯ ಸೈಟಿನೋಳಗೆ ಅದೇಷ್ಟಿರ ಬಹುದು..? ಶವವಾಗಿ ಮಣ್ಣುಪಾಲದ ಕಾರ್ಮಿಕರ ಸಂಖ್ಯೆ ಲೆಕ್ಕವಿರ ಬಹುದೇ ಎಂಬ ಸಂಶಯ ಸಾರ್ವಜನಿಕರನ್ನು ಕಾಡುತ್ತಿದೆ. ಹೊರ ರಾಜ್ಯ, ಹೊರ ದೇಶಿಗರಿಗೆ ಇಲ್ಲದ ಗುರುತುಚೀಟಿನ ವ್ಯವಸ್ಥೆ ಕಂಪನಿ ಕೇವಲ ಸ್ಥಳೀಯರಿಗಾಗಿ ಮಾತ್ರ ಅನುಷ್ಠಾನಗೊಳಿಸಿದೆಯೇ..? ಎಂಬುದು ಸ್ಥಳೀಯ ನಿವಾಸಿಗರ ಪ್ರಶ್ನೆ.
ಆರೋಪಿಗಳಿಗಾಗಿ ಶೋಧ..
ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಗಳಿಗಾಗಿ ಪೊಲೀಸರು ತಂಡ ತಂಡವಾಗಿ ಹುಡುಕಾಟ ನಡೆಸಿದ್ದು. ಉಡುಪಿ ಸಿಟಿ ಬಸ್ಸು ತಂಗುದಾಣ ಬಳಿ ಕಾರ್ಮಿಕರನ್ನು ವಿಚಾರಣೆಗಾಗಿ ಠಾಣೆಗೆ ಕರೆಯಿಸಿಕೊಳ್ಳುತ್ತಿದ್ದಾರೆ.

ಸುವರ್ಣ ದಾಂಪತ್ಯದ ಸಡಗರದಲ್ಲಿ ಮರು ಮದುವೆ... ವ್ರದ್ದರ ಕಣ್ಣಲ್ಲಿ ಮಿಂಚಿದ ನಾಚಿಕೆ.. (video news)

ಮದುವೆ ಎನ್ನುವುದು ಒಂದು ಪವಿತ್ರ ಬಂಧನ. ಮದುವೆಯಾದವರು ಜೊತೆ ಜೊತೆಯಾಗಿ ನೂರ್ಕಾಲ ಬಾಳಬೇಕು ಅನ್ನೋದು ಎಲ್ಲರ ಹಾರೈಕೆ. ಆದರೆ ಇತ್ತೀಚಿನ ದಿನಗಳಲ್ಲಿ ನವದಂಪತಿಗಳು ಮದುವೆಯಾದ ಮರುದಿನವೇ ಕೋರ್ಟ್ ಮೆಟ್ಟಿಲು ಹತ್ತೋವಾಗ ಮದುವೆಯಾಗಿ ಹತ್ತಾರು ವರ್ಷ ಜೊತೆಯಾಗೋ ಬಾಳುವುದು ವಿಶೇಷದ ವಿಷಯ.

[youtuber youtube='http://www.youtube.com/watch?v=wQmFATvtL5s&feature=c4-overview&list=UUs0k8vSBwTqzHjMqn8PYrzQ']


ಅದರಲ್ಲೂ ಐವತ್ತು ವರ್ಷ ವೈವಾಹಿಕ ಜೀವನ ಮುಗಿಸಿದ ವ್ರದ್ದ ದಂಪತಿಗಳು ಒಂದೇ ಕಡೆ ಸೇರೋದು ಅಂದ್ರೆ ಮತ್ತೂ ಅಚ್ಚರಿಯ ಸಂಗತಿ. ಐವತ್ತು ವರ್ಷ ದಾಂಪತ್ಯ ಮುಗಿಸಿದ ಹದಿನೆಂಟು ವ್ರದ್ದ ಜೋಡಿಗಳಿಗೆ ಉಡುಪಿಯಲ್ಲಿ ವಿಶೇಷ ಸನ್ಮಾನ ನಡೆಯಿತು.

vlcsnap-2013-08-26-20h39m44s94
ಹಿನ್ನೆಲೆಯಲ್ಲಿ ಮೊಳಗುತ್ತಿರುವ ಗಟ್ಟಿಮೇಳ.... ನಾಚಿ ನೀರಾಗಿ ಹೂಹಾರ ಬದಲಾಯಿಸಿಕೊಳ್ಳುತ್ತಿರುವ ವ್ರದ್ದ ದಂಪತಿಗಳು... ಮದುವೆಯ ಹಳೆಯ ನೆನಪಿನಲ್ಲಿ ಕೆಂಪಾದ ಜೋಡಿಗಳು. ಇಂಥ ಅಪರೂಪದ ದ್ರಶ್ಯ ಕಂಡು ಬಂದದ್ದು ಉಡುಪಿಯ ಕರಂಬಳ್ಳಿ ದೇವಸ್ಥಾನದಲ್ಲಿ. ಪನ್ನೀರು, ಅಕ್ಷತೆ, ಮಲ್ಲಿಗೆ ಹಾರ, ಅರಿಸಿನ ಕುಂಕುಮದ ನಡುವೆ ಕುಳಿತಿರುವ ಇವರೆಲ್ಲ ದಾಂಪತ್ಯದ ಸುವರ್ಣ ಸಂಬ್ರಮದಲ್ಲಿರುವ ವ್ರದ್ದ ದಂಪತಿಗಳು. ವೈವಾಹಿಕ ಜೀವನದ ಐವತ್ತು ವರ್ಷಗಳನ್ನು ಜೊತೆಯಾಗಿ ಪೂರೈಸಿರುವ ದಂಪತಿಗಳನ್ನು ಕರಂಬಳ್ಳಿಯಲ್ಲಿ ಸನ್ಮಾನ ಮಾಡಲಾಯಿತು.
ಐವತ್ತು ವರ್ಷ ದಾಂಪತ್ಯ ಪೂರೈಸಿದ ಹದಿನೆಂಟು ವ್ರದ್ದ ಜೋಡಿಗಳಿಗೆ ಪನ್ನಿರು ಚಿಮುಕಿಸಿ ಸ್ವಾಗತ ಕೋರಲಾಯಿತು. ವೇದಿಕೆಯ ಮೇಲೆ ದಂಪತಿಗಳೆಲ್ಲ ಹೂಹಾರ ಬದಲಾಯಿಸಿಕೊಂಡರು. ಸೋಬಾನೆ ಪದಗಳ ಮಧ್ಯೆ ಸುಲಗ್ನ ಸಾವಧಾನ ಅನ್ನುವ ಮಂತ್ರಘೋಷದ ನಡುವೆ ಹಾಫ್ ಸೆಂಚುರಿ ಬಾರಿಸಿದ ಜೋಡಿಗಳು ಹಾಲು ಕುಡಿದು ಸಂಭ್ರಮಿಸಿದರು.
ಇಂದಿನ ಕಾಲದಲ್ಲಿ ನವ ದಂಪತಿಗಳು ಮದುವೆಯಾದ ಮರುದಿನವೇ ಕೋರ್ಟ್ ಮೆಟ್ಟಿಲು ಹತ್ತುವುದು ಸಾಮಾನ್ಯವಾಗಿಬಿಟ್ಟಿದೆ. ಸಂಸಾರ ರಥವನ್ನು ಗಂಡ ಹೆಂಡತಿ ಸರಿದೂಗಿಸಿಕೊಂಡು ಹೋಗುವುದು ಹೇಗೆ ಅಂತ ತಿಳಿಸಿಕೊಡುವುದಕ್ಕೆ ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕರಂಬಳ್ಳಿ ಗ್ರಾಮ ಒಂದರಲ್ಲಿಯೇ ಐವತ್ತು ವರ್ಷಗಳ ದಾಂಪತ್ಯ ಮುಗಿಸಿದ ಹದಿನೆಂಟು ಜೋಡಿಗಳಿದ್ದು ಒಂದೇ ಕಡೆ ಸೇರಿ ಸಂಭ್ರಮಿಸದ್ದು ಅಪರೂಪ.
ಐವತ್ತು ವರ್ಷ ಸಂಸಾರ ನಡೆಸಿದ ಹದಿನೆಂಟೂ ಜೋಡಿಗಳೆಲ್ಲ ಎಪ್ಪತ್ತು ವರ್ಷಕ್ಕಿಂತಲೂ ಹೆಚ್ಚು ವಯಸ್ಸಾದವರು. ಆದರೂ ನೆರೆದಿದ್ದ ಮಂದಿ ಪನ್ನೀರು ಅಕ್ಷತೆ ಸುರಿಸುವಾಗ  ವ್ರದ್ದ ದಂಪತಿಗಳ ಕಣ್ಣಲ್ಲಿ ಮೂಡಿದ ನಾಚಿಕೆ ಅಷ್ಟಿಷ್ಟಲ್ಲ. ಐವತ್ತರ ಸುವರ್ಣ ದಾಂಪತ್ಯದ ಸಡಗರ ಉಳಿದ ಸಂಸಾರಿಗಳಿಗೂ ಮಾದರಿಯಾಗಿದ್ದು ಸತ್ಯ.

ಸಿ‌ಎನ್‌ಎನ್ ಐಬಿ‌ಎನ್ ಸಹಸಂಪಾದಕಿ ಸಾಗರಿಕಾ ವಿರುದ್ಧ ಪ್ರತಿಭಟನೆ

ದಂತ ಚಿಕಿತ್ಸಾಲಯಕ್ಕೆ ಬಂದ ಮೇಲಾದರೂ ಪ್ರಧಾನಿ ಡಾ.ಮನಮೋಹನ ಸಿಂಗ್ ಮತ್ತು ರಾಹುಲ್ ಗಾಂಧಿ ಬಾಯಿ ಬಿಡಬಹುದು' ಎಂದು ವ್ಯಂಗ್ಯದ ದಾಟಿಯಲ್ಲಿ ಹೇಳಿಕೆ ನೀಡಿರುವ ರುವ ಸಿ‌ಎನ್‌ಎನ್ ಐಬಿ‌ಎನ್ ಸಹ ಸಂಪಾದಕಿ ಸಾಗರಿಕಾ ಘೋಷ್ ವಿರುದ್ಧ ಉಡುಪಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಅಸಹನೆ ತೋರಿ, ಪ್ರತಿಭಟನೆ ನಡೆಸಿದರು,
ಮಣಿಪಾಲದ ಹೋಟೇಲ್ ವ್ಯಾಲಿ ವ್ಯೂ ನಲ್ಲಿ ತಂಗಿದ್ದ ಸಾಗರಿಕಾ ಅವರ ಗಮನ ಸೆಳೆಯುವ ನಿಟ್ಟಿನಲ್ಲಿ ಹೋಟೇಲ್ ಮುಂಭಾಗದಲ್ಲೇ ಪ್ರತಿಭಟನೆ ನಡೆಸಲಾಯ್ತು. ಮಣಿಪಾಲ ಬೇಟಿಯಲ್ಲಿರುವ ಸಾಗರಿಕಾ ಇತ್ತೀಚೆಗೆ ಮಣಿಪಾಲ ಇನ್ ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ಕಾಲೇಜಿನಲ್ಲಿ ಯುವ ಪತ್ರಕರ್ತರನ್ನುದ್ದೇಶಿಸಿ ಉಪನ್ಯಾಸ ನೀಡುವ ವೇಳೆ ಈ ರೀತಿ ವ್ಯಂಗ್ಯವಾಡಿದ್ದರು.
ಗಣ್ಯ ಸ್ಥಾನದಲ್ಲಿರುವ ಪ್ರಮುಖರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ ಎಂದು ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದರು, ಕಪ್ಪು ಬಟ್ಟೆ ಪಟ್ಟಿ ಧರಿಸಿ ತಮ್ಮ ಆಕ್ರೋಶ ಹೊರಹಾಕಿದರು. ಹಿರಿಯ ಸಂಪಾದಕಿ ತಮ್ಮ ಹೇಳಿಕೆಗೆ ಕ್ಷಮೆ ಕೋರುವಂತೆ ಆಗ್ರಹಿಸಿದರು.
cnn news

ಅಪಘಾತ ಮೃತ್ಯು

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೆಳಣ್ಣು ಕೆದಿಂಜೆಯಲ್ಲಿ ನಡೆದ ರಸ್ತೆ ಅಪಘಾತಕ್ಕೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಮೃತರನ್ನು ನಾರಾಯಣ ಶೆಟ್ಟಿ ಎಂದು ಗುರುತಿಸಲಾಗಿದೆ. ಬೈಕ್ ನಲ್ಲಿ ಚಲಿಸುತ್ತಿದ್ದಾಗ ಸ್ಕಿಡ್ ಆದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಲ್ಯ ಪರಿಸರದಲ್ಲಿ ಹೊಟೇಲು ನಡೆಸುತ್ತಿದ್ದ ನಾರಾಯಣ ಶೆಟ್ಟಿ ಮೂಲತ: ಶಿರ್ವ ಮಟ್ಟಾರಿನವರು ಎಂದು ತಿಳೀದು ಬಂದಿದೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಹಿಂಪ ನಾಯಕರ ಬಂಧನ ಖಂಡಿಸಿ ಉಡುಪಿಯಲ್ಲಿ ಪ್ರತಿಭಟನೆ (video news)

ಉಡುಪಿ:ರಾಮ ಜನ್ಮಭೂಮಿಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಕೋಸಿಯಾತ್ರೆ ಹಮ್ಮಿಕೊಂಡ ವಿಹಿಂಪ ನಾಯಕರ ಬಂಧನ ಖಂಡಿಸಿ ಉಡುಪಿ ವಿಹಿಂಪ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು. ರಾಮಜನ್ಮಭೂಮಿಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಬೇಕೆಂದು ಆಗ್ರಹಿಸಿ ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ವಿಹಿಂಪ ನಾಯಕರು ೮೪ ಕಿ ಮೀ ಕೋಸಿ ಯಾತ್ರಿಯನ್ನು ಹಮ್ಮಿಕೊಂಡಿದ್ದರು. ಕೋಸಿಯಾತ್ರೆಯಲ್ಲಿ ಪಾಲ್ಗೊಂಡ ವಿಹಿಂಪ ನಾಯಕರಾದ ಪ್ರವೀಣ್ ಬಾಯ್ ತೊಗಾಡಿಯಾ ಮತ್ತು ಅಶೋಕ್ ಸಿಂಘಾಲ್ ಮೊದಲಾದ ನಾಯಕರನ್ನು ಉತ್ತರ ಪ್ರದೇಶ ಸರಕಾರ ಬಂಧಿಸಿದೆ. ವಿಹಿಂಪ ನಾಯಕರ ಬಂಧನವನ್ನು ಖಂಡಿಸಿದ ಉಡುಪಿ ಜಿಲ್ಲಾ ವಿಹಿಂಪ ಘಟಕ ರಾಮ ಮಂದಿರ ನಿರ್ಮಾಣಕ್ಕೆ ಅವಕಾಶ ಕೊಡಬೇಕೆಂದು ಆಗ್ರಹಿಸಿದೆ..

26_udupi_shourasi_protest 001

ಮಣಿಪಾಲ ಅತ್ಯಾಚಾರ ಆರೋಪಿಗಳಿಗೆ ಆಗಸ್ಟ್ ೩೦ರವರೆಗೆ ನ್ಯಾಯಾಂಗ ಬಂಧ ವಿಸ್ತರಣೆ (video news)

ಮಣಿಪಾಲ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ೫ ದಿನಗಳ ಕಾಲ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ. ಆರೋಪಿಗಳಾದ ಯೋಗೇಶ, ಆನಂದ ಮತ್ತು ಹರಿಪ್ರಸಾದ್‌ನನ್ನು ಇಂದು ಮುಖ್ಯ ನ್ಯಾಯಿಕ ದಂಡಾಧಿಕಾರಿ ಮುಂದೆ ಹಾಜರುಪಡಿಸಲಾಯಿತು.

[youtuber youtube='http://www.youtube.com/watch?v=ogBq-6eKODc&feature=c4-overview&list=UUs0k8vSBwTqzHjMqn8PYrzQ']

ನಾಲ್ಕು ದಿನಗಳ ಹಿಂದೆ ಮಣಿಪಾಲ ಪೊಲೀಸರು ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ ಹಿನ್ನೆಲೆಯಲ್ಲಿ ಇಂದು ಮೊದಲ ಬಾರಿಗೆ ಆರೋಪಿಗಳ ಮುಖದ ಮಾಸ್ಕ್ ತೆಗೆದು ಕರೆತರಲಾಗಿತ್ತು.
8/25/2013 11:00 PM

ಮುಖ್ಯ ನ್ಯಾಯಿಕ ದಂಡಾಧಿಕಾರಿ ನಾಗಜ್ಯೋತಿ ಆರೋಪಿಗಳಿಗೆ ಆಗಸ್ಟ್ ೩೦ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶ ನೀಡಿದರು. ಮೂರು ಮಂದಿ ಆರೋಪಿಗಳನ್ನು ಶಿವಮೊಗ್ಗ ಜಿಲ್ಲಾ ನ್ಯಾಯಾಲಯಕ್ಕೆ ರವಾನಿಸಲಾಗಿದೆ. ಸಾಕ್ಷ್ಯ ನಾಶಪಡಿಸಿದ ಬಾಲಚಂದ್ರ ಮತ್ತು ಹರೀಶ್‌ನನ್ನು ಉಡುಪಿ ಜಿಲ್ಲಾ ಕಾರಾಗ್ರಹದಲ್ಲಿ ಇರಿಸಲಾಗುವುದು.
8/25/2013 11:00 PM

ಮಂಡ್ಯದಲ್ಲಿ ಕಾಂಗ್ರೆಸ್ ಜಯಭೇರಿ: ಉಡುಪಿಯಲ್ಲಿ ವಿಜಯೋತ್ಸವ (video new

ಉಡುಪಿ:ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಮಂಡ್ಯದಲ್ಲಿನ ಕಾಂಗ್ರೆಸ್ ಜಯಭೇರಿಯನ್ನು ಉಡುಪಿಯಲ್ಲೂ ವಿಜಯೋತ್ಸವದ ಮೂಲಕ ಆಚರಿಸಲಾಯಿತು. ಉಡುಪಿ ಕ್ಲಾಕ್ ಟವರ್ ಮತ್ತು ಕಾಂಗ್ರೆಸ್ ಭವನದ  ಬಳಿ ಸಿಹಿ ತಿಂಡಿ ಹಂಚಿ ಪಟಾಕಿ ಸಿಡಿಸುವುದರ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದರು. ಕಾಂಗ್ರೆಸ್ ಮುಖಂಡರಾದ ಯತೀಶ್ ಕರ್ಕೇರ, ಜನಾರ್ಧನ ಭಂಡಾರ್‌ಕರ್, ಪ್ರವೀಣ್ ಕೊಡವೂರು ಮೊದಲಾದವರು ಉಪಸ್ಥಿತರಿದ್ದರು.
 M2U04758_WMV V9 003

ಮುಂಬಯಿ ರೇಪ್ ಖಂಡಿಸಿ ಎಸ್‌ಕೆಪಿ ಯಿಂದ ಪ್ರತಿಭಟನೆ (video news)

ಉಡುಪಿ: ಮುಂಬಯಿಯ ಪ್ರತಿಕಾ ಛಾಯಾಗ್ರಾಹಕಿ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯದ ವತಿಯಿಂದ ಉಡುಪಿ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು. ಅತ್ಯಾಚಾರಿಗಳಿಗೆ ಉಗ್ರ ಶಿಕ್ಷೆ ಆಗಬೇಕೆಂದು ಒತ್ತಾಯಿಸಿಲಾಯಿತು.
1/1/2000 12:00 AM

ಭಾನುವಾರ, ಆಗಸ್ಟ್ 18, 2013

ಸಕ್ಕರೆ ಕಾರ್ಖಾನೆ ಹೋಯ್ತು- ತೋಟಗಾರಿಕಾ ವಿವಿ ಬಂತು...? ಅಜ್ಜರಕಾಡಿನಲ್ಲಿ ಉಲ್ಟ ಹೊಡೆದ ಸೊರಕೆ (video news)

ಉಡುಪಿ: ಹೇಳುವುದು ಒಂದು ಮಾಡುವುದು ಇನ್ನೊಂದು ಅಂದ್ರೆ ಇದೇ. ಅಧಿಕಾರಕ್ಕೆ ಬಂದ್ರೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಒಂದು ತಿಂಗಳೊಳಗೆ ಪುನಶ್ಚೇತನ ಮಾಡುವುದಾಗಿ ಹೇಳಿದ್ದ ಕಾಂಗ್ರೆಸ್ ಈಗ ನಾಟಕವಾಡ್ತಾಯಿದೆ. ಸಕ್ಕರೆ ಕಾರ್ಖಾನೆಗೆ ಮರುಜೀವ ಕೊಡುವ ಮಾತು ಮರೆತಿರುವ ಸರ್ಕಾರದ ಪ್ರತಿನಿಧಿಗಳು, ಕಾರ್ಖಾನೆಯ ಜಾಗದಲ್ಲಿ ತೋಟಗಾರಿಕಾ ವಿಶ್ವವಿದ್ಯಾನಿಲಯ ಸ್ಥಾಪಿಸುವ ಯೋಚನೆಯಲ್ಲಿದೆ.
ind_1 (2)
ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ೬೭ನೇ ಸ್ವಾತಂತ್ರ್ಯೋತ್ಸವ ಸಂದರ್ಭ ಸಚಿವ ವಿನಯ ಕುಮಾರ್ ಸೊರಕೆ ಧ್ವಜಾರೋಹಣ ಮಾಡಿ ಮಾತನಾಡುತ್ತಿದ್ದರು. ೧೦ ಪುಟಗಳ ಭಾಷಣ ಓದಿದ ಸೊರಕೆ, ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ವಿಚಾರದಲ್ಲಿ ಉಲ್ಟ ಹೊಡೆದರು. ಉಳ್ಳಾಲದಿಂದ ಮಲ್ಪೆಯವರೆಗಿನ ಪಾದಯಾತ್ರೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಘೋಷಿಸಿದ್ದ ಪ್ರಮುಖ ಯೋಜನೆಯಲ್ಲಿ ಸಕ್ಕರೆ ಕಾರ್ಖಾನೆ ಮೊದಲನೆಯದಾಗಿತ್ತು. ಆದ್ರೆ ಇಂದಿನ ಭಾಷಣದಲ್ಲಿ ಅದು ಮಾಯವಾಗಿತ್ತು. ಪುನಶ್ಚೇತನ ಎಂಬ ವಾಕ್ಯದ ಬದಲು ಕೃಷಿ ವಿವಿ ಎಂಬ ವಾಕ್ಯ ಬಂದಿತ್ತು.

[youtuber youtube='http://www.youtube.com/watch?v=bQeD-5A-guw&feature=c4-overview&list=UUs0k8vSBwTqzHjMqn8PYrzQ']
ಇದಕ್ಕೂ ಮೊದಲು ಸಚಿವರು, ತೆರೆದ ವಾಹನದಲ್ಲಿ ಪಥಸಂಚಲನಾ ತಂಡಗಳಿಗೆ ಸ್ವಾತಂತ್ರ್ಯೋತ್ಸವದ ಗೌರವ ನೀಡಿ- ಗೌರವ ಸ್ವೀಕರಿಸಿದರು. ಉಡುಪಿ ಜಿಲ್ಲಾ ವ್ಯಾಪ್ತಿಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು. ಸ್ಕೌಟ್ಸ್, ಗೈಡ್ಸ್, ಎನ್‌ಸಿಸಿ ತಂಡಗಳು ಆಕರ್ಷಕ ಪಥಸಂಚಲನ ನಡೆಸಿದವು. ಪೊಲೀಸ್ ವಾದ್ಯ ತಂಡದ ಶಿಸ್ತಿನ ಹಿನ್ನೆಲೆ ಸಂಗೀತಕ್ಕೆ ವಿದ್ಯಾರ್ಥಿಗಳು ಸಿಪಾಯಿಗಳಂತೆ ಹೆಜ್ಜೆ ಹಾಕಿದರು. ಧ್ವಜವಂದನೆ ಜೊತೆ ಜನಪ್ರತಿನಿಧಿ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಗೌರವ ಸಲ್ಲಿಸಿದರು.
ಇದೇ ಸಂದರ್ಭ ರಾಷ್ಟ್ರಪತಿ ಪದಕ ವಿಜೇತ ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಇನ್ಸ್‌ಪೆಕ್ಟರ್ ಶೀನ ಬಿಲ್ಲವ ಅವರನ್ನು ಸನ್ಮಾನಿಸಲಾಯಿತು. ಉತ್ತಮ ತನಿಖಾಧಿಕಾರಿಯಾಗಿರುವ ಶೀನ ಬಿಲ್ಲವ, ಬರಹಗಾರರರೂ ಹೌದು. ತನ್ನ ೩೮ ವರ್ಷಗಳ ಉತ್ತಮ ಸೇವೆಯನ್ನು ಗುರುತಿಸಿ ಉಡುಪಿ ಜಿಲ್ಲೆಯ ಏಕೈಕ ಪೊಲೀಸ್ ಅಧಿಕಾರಿಗೆ ರಾಷ್ಟ್ರಪತಿ ಪದಕ ನೀಡಲಾಗಿದೆ.
ಅಜ್ಜರಕಾಡುವಿನಲ್ಲಿ ನಡೆದ ಜಿಲ್ಲಾ ಸ್ವಾತಂತ್ರ್ಯೋತ್ಸವದಲ್ಲಿ ಶಾಸಕ ಪ್ರಮೋದ್ ಮಧ್ವರಾಜ್, ಡೀಸಿ ಎಂ.ಟಿ ರೇಜು. ಎಸ್‌ಪಿ ಡಾ. ಭೋರಲಿಂಗಯ್ಯ. ಜಿಲ್ಲಾ ಪಂಚಾಯತ್, ನಗರಸಭೆಯ ಪ್ರತಿನಿಧಿಗಳು ಅಧಿಕಾರಿಗಳು ಇದ್ದರು.
ಸಚಿವ ಸೊರಕೆ ಭಾಷಣದ ಟಾಪ್ ಟೆನ್ ಪಾಯಿಂಟ್ಸ್ ......
-ಕೇಂದ್ರ ಸರ್ಕಾರದ ಯೋಜನೆಯಡಿಯಲ್ಲಿ ಉಡುಪಿಯನ್ನು ಹೆರಿಟೇಜ್ ಪಟ್ಟಣವನ್ನಾಗಿ ಪರಿವರ್ತಿಸುವ ಚಿಂತನೆ
-ಜಿಲ್ಲೆಯ ೭ ಪ್ರವಾಸಿ ತಾಣಗಳ ರಸ್ತೆ ಅಭಿವೃದ್ಧಿಗಾಗಿ ೭ ಕೋಟಿ ರೂಪಾಯಿ ಪ್ರಸ್ತಾವನೆ.
-ವಾರಾಹಿ ಯೋಜನೆಯನ್ನು ಉಡುಪಿವರೆಗೆ ವಿಸ್ತರಿಸಲು ಚಂತನೆ
-ಬೀಚ್‌ಗಳ ಅಭಿವೃದ್ಧಿಗಾಗಿ ೧೧ ತಾಣಗಳನ್ನು ಗುರುತಿಸಲಾಗಿದೆ.
-ನಕ್ಸಲ್ ಬಾಧಿತ ಅಭಿವೃದ್ಧಿಗಾಗಿ ೭ ಕೋಟಿ ಅನುದಾನ ಬಿಡುಗಡೆ
-ಕೃಷ್ಣಮಠದ ಪರ್ಯಾಯ ಮಹೋತ್ಸವಕ್ಕೆ ಸರ್ಕಾರದ ಸಹಭಾಗಿತ್ವ.
-ಕುಡ್ಸೆಂಪ್ ಯೋಜನೆ ೨ನೇ ಹಂತ ವಿಸ್ತರಣೆಗೆ ನಿರ್ಧಾರ
-ಬೆಳಪುವಿನಲ್ಲಿ ಮಂಗಳೂರು ವಿವಿಯ ಅಧ್ಯಯನಾ ಕೇಂದ್ರ
-ಹೆಜಮಾಡಿ- ಕೋಡಿ ಕನ್ಯಾಣ- ಗಂಗೊಳ್ಳಿ ಬಂದರು ಅಭಿವೃದ್ಧಿ
- ಉಡುಪಿ- ಮಣಿಪಾಲ- ಕಾರ್ಕಳ- ಧರ್ಮಸ್ಥಳ ಮಾರ್ಗವಾಗಿ ಗುಂಡ್ಯದವರೆಗೆ ರಾಷ್ಟ್ರೀಯ ಹೆದ್ದಾರಿ ಜೋಡಣೆ.

ಕಾಳಾವರ: ರೈಲಿಗೆ ತಲೆ ಕೊಟ್ಟು ವ್ಯಕ್ತಿ ಸಾವು

ಕುಂದಾಪುರ: ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಮಧ್ಯಾಹ್ನದ ಸುಮಾರಿಗೆ ಕಾಳಾವರ ರೈಲ್ವೇ ಬ್ರಿಡ್ಜ್ ಸಮೀಪ ನಡೆದಿದೆ. ಕುಂದಾಪುರದ ಹುಣ್ಸೆಮಕ್ಕಿ ಸಮೀಪದ ಹೊಂಬಾಡಿ- ಮಂಡಾಡಿಯ ನಿವಾಸಿ ಮಂಜುನಾಥ ಪೂಜಾರಿ (೩೦) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.ಬೇಳೂರಿನ ಹೆಸ್ಕತ್ತೂರಿನಲ್ಲಿ ಶಿಲೆಗಲ್ಲು ಲೋಡ್ ಮಾಡುವ ಕೆಲಸ ಮಾಡಿಕೊಂಡಿದ್ದ ಈತ ವಿಪರೀತ ಮದ್ಯ ಸೇವನೆಯ ಚಟ ಉಳ್ಳವನಾಗಿದ್ದ ಎನ್ನಲಾಗಿದೆ. ಅಲ್ಲದೇ ಯಾವುದೋ ಕಾರಣಕ್ಕಾಗಿ ಕಳೆದ ೧೫ ದಿನಗಳ ಹಿಂದಷ್ಟೇ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ ಈತನನ್ನು ಮಂಗಳೂರಿನ ವೆನ್ಲಾಕ್ ಗೆ ಚಿಕಿತ್ಸೆಗೆ ದಾಖಲಿಸಿ ಗುಣಪಡಿಸಲಾಗಿತ್ತು. ಬಳಿಕ ಈತನ ಕೆಲಸ ನೀಡಿದ ಮಾಲೀಕರು ಬುದ್ದಿ ಮಾತನ್ನು ಹೇಳಿದ್ದು ಈತನು ಮುಂದೆ ಸರಿಯಾಗಿ ಜೀವನ ನಡೆಸುವುದಾಗಿ ಹೇಳಿದ್ದ ಎನ್ನಲಾಗಿದೆ.
manjunath
ಬುಧವಾರ ೧೦ ಗಂಟೆಯ ಸುಮಾರಿಗೆ ಅಸೋಡು ಬಸ್ ನಿಲ್ದಾಣ್ದ ಸಮೀಪ ತನ್ನ ಬೈಕ್ ನ್ನು ನಿಲ್ಲಿಸಿ ಕಾಳಾವರ ರೈಲು ಬ್ರಿಡ್ಜೆ ಮೂಲಕ ನಡೆದು ಬಂದ ಈತ ರೈಲಿಗೆ ತಲೆ ಕೊಟ್ಟು ಸತ್ತಿರಬಹುದೆಂದು ಶಂಕಿಸಲಾಗಿದೆ. ಈತನ್ಮ ಬೈಕ್ ಬಸ್ ನಿಲ್ದಾಣದ ಸಮೀಪ ದೊರೆತಿದ್ದು ಸುಮಾರು ೧೨.೧೫ ಕ್ಕೆ ಸ್ಥಳಿಯರು ರೈಲ್ವೇ  ಹಳಿಯಲ್ಲಿ ಶವ ಬಿದ್ದಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಪರಿಶೀಲನೆ ನಡೆಸುವಾಗ ಈತನ ಚುನಾವಣಾ ಗುರುತಿನ  ಚೀಟಿ ದೊರೆತಿದ್ದು ಇತನ ವಿಳಾಸ ಹಾಗೂ  ಹೆಸರನ್ನು ಪತ್ತೆ ಹಚ್ಚಲಾಗಿದೆ. ವಿವಾಹಿತನಾಗಿದ್ದ ಮಂಜುನಾಥ ಮೊದಲನೇ ಹೆಂಡತಿಯನ್ನು ತೊರೆದು ಇನ್ನೊಂದು ಮದುವೆಯಾಗಿ ಇಬ್ಬರು ಮಕ್ಕಳೊಂದಿಗೆ ಸಂಸಾರ ನಡೆಸುತ್ತಿದ್ದ. ಕುಂದಾಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣವನ್ನು ದಾಖಲಿಸಿದ್ದಾರೆ.
police

ಉಪ್ಪು ತಿಂದ ಮನೆಗೆ ಎರಡು ಬಗೆದ ಗಣೇಶ: ಇವ ಸಕಲೇಶಪುರದ ಶುಂಠಿ ಕಳ್ಳ

ವರದಿ: ಸ್ಪರ್ಶ,ಉಡುಪಿ
ಉಡುಪಿ:ಮೋಸ ಹೋಗವವರು ಇರುವರೆಗೂ ಮೋಸ ಮಾಡುವವವರು ಇದ್ದೇ ಇರ್ತಾರಂತೆ. ಮೋಸ ಎನ್ನುವುದು ವಿವಿಧ ರೂಪದಲ್ಲಿ ಆಗುತ್ತೆ ಅನ್ನೊದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಕೃಷಿಯನ್ನು ಬೆಳೆಸ್ತಿನಿ, ಒಳ್ಳೆ ಕೆಲಸ ಮಾಡ್ತಿನಿ ಅಂತಾ ನಂಬಿಸಿ ಈ ಭೂಪ ೧೦ ಲಕ್ಷ ರೂಪಾಯಿಗೆ ಹೆಚ್ಚು ಪಂಗನಾಮ ಹಾಕಿದ್ದಾನೆ.  ಕಾರ್ಕಳ ತಾಲೂಕಿನ ಸಾಣೂರಿನಲ್ಲಿರುವ ರೇವಂತ್ ಫಾರ್ಮ್‌ನಲ್ಲಿ ಕಳೆದ ಒಂದು ವರ್ಷದ ಹಿಂದೆ ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರಿಕೊಂಡ ಸಕಲೇಶಪುರದ ಗಣೇಶ್ ಎಂಬಾತನೇ ಮೋಸಗಾರ. ಶುಂಠಿ ಬೆಳಿತೀನಿ ಅಂತಾ ಫಾರ್ಮ ಮಾಲಕರನ್ನು ಬುಟ್ಟಿಗೆ ಹಾಕೊಂಡು  ಲಕ್ಷಾಂತರ ರೂಪಾಯಿ  ಮೌಲ್ಯದ ಶುಂಠಿಯೊಂದಿಗೆ ರಾತ್ರೋ ರಾತ್ರಿ ಪರಾರಿಯಾಗಿದ್ದಾನೆ.
೨೮ ಎಕ್ರೆ  ಕೃಷಿ ಭೂಮಿಯನ್ನು ಹೊಂದಿದ ರೇವಂತ್ ಫಾರ್ಮ್ ಹೌಸ್‌ನಲ್ಲಿ ಮ್ಯಾನೇಜರ್ ಆಗಿ ಸೇರಿಕೊಂಡ ಗಣೇಶ್ ಈ ಭೂಮಿಯಲ್ಲಿ  ಬಂಗಾರ ಬೆಳೆ ತೆಗತೀನಿ ಅಂತಾ ಫಾರ್ಮ್ ಹೌಸ್ ಮಾಲಕರನ್ನು ನಂಬಿಸಿ ಕೆಲಸ ಮಾಡೋಕೆ ಶುರಮಾಡಿದ. ಫಾರ್ಮ್ ಹೌಸ್ ಕೆಲಸಗಾರರ ಮೊಬೈಲ್ ಸಿಮ್ ತೆಗೆದುಕೊಂಡು ಕೆಲಸ  ಮಾಡುತ್ತಿದ್ದ ಗಣೇಶ್ ಶುಂಠಿ ಬೆಳದು ಕೈಗೆ ಬರುತ್ತಿದ್ದಂತೆ ೪.೫ ಲಕ್ಷ ರೂಪಾಯಿ ಮೌಲ್ಯದ ಶುಂಠಿಯನ್ನು ಲಾರಿಯಲ್ಲಿ ಲೋಡ್ ಮಾಡಿಕೊಂಡು ಎಸ್ಕೇಪ್ ಆಗಿದಾನೆ. ಶುಂಠಿ ಜೊತೆಗೆ ಕೃಷಿ ಪಂಪ್‌ಸೆಟ್‌ಗಳು, ಫಾರ್ಮ್ ಹೌಸ್‌ನಲ್ಲಿ ಉಳಿಯೋಕೆ ಕೊಟ್ಟಿದ್ದ ಸಾಮಾನು - ಸರಂಜಾಮು, ಇಲೆಕ್ಟ್ರಾನಿಕ್ ಸಾಮಾಗ್ರಿಗಳು, ಟಿವಿ, ಫ್ರಿಜ್ ನೊಂದಿಗೆ ೧ ತಿಂಗಳ ಹಿಂದೆ ನಾಪತ್ತೆಯಾಗಿದ್ದಾನೆ.

ganesh

ಇಲ್ಲಿಗೆ ಮುಗಿಯದ ಇವನ ಅವತಾರ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಕೆಲಸಗಾರರ ಸಂಬಳಕ್ಕೂ ಕೈ ಹಾಕಿದ್ದಾನೆ. ಕೆಲಸಗಾರರ ಸಂಬಳವನ್ನು ಮಾಲಕರ ಹತ್ರ ತಗೊಂಡು ಅದನ್ನು ಕಬಳಿಸಿದ್ದಾನೆ. ಫಾರ್ಮ್‌ಹೌಸ್‌ನ  ೨೦ ಕ್ಕೂ ಹೆಚ್ಚು ಕೆಲಸಗಾರರಿಗೆ ೫ ಲಕ್ಷ ರೂಪಾಯಿಗೂ ಹೆಚ್ಚು ವಂಚಿಸಿದ ಈತ ಫಾರ್ಮ್ ಹೌಸ್ ಎಲ್ಲಾ ಡಾಕ್ಯುಮೆಂಟ್‌ನೊಂದಿಗೆ ಎಸ್ಕೇಪ್ ಆಗಿದ್ದಾನೆ. ವಿಶೇಷ ಅಂದ್ರೆ ಈ ಎಲ್ಲಾ ದೋ ನಂಬರ್ ದಂಧೆಗೆ  ಕೆಲಸಗಾರರ ಸಿಮ್‌ನ್ನ ಬಳಸಿಕೊಂಡಿದ್ದ. ಶುಂಠಿ ಚೀಲದೊಂದಿಗೆ ಪರಾರಿಯಾದ ೨ ನೇ ದಿನಕ್ಕೆ ಮಾಲಕರು ಕೆಲಸಗಾರರು ಫೋನ್ ಮಾಡುವಾಗ ಈತನ ಮೊಬೈಲ್ ಸ್ವಿಚ್ ಆಫ್ ಆಗಿದೆ. ೧೫ ದಿನಗಳ ಕಾಲ ಕಾದ ಮಾಲಕರು ಕಾರ್ಕಳ ನಗರ ಠಾಣೆಯಲ್ಲಿ  ಚೀಟಿಂಗ್ ಪ್ರಕರಣ ದಾಖಲಿಸಿದ್ದಾರೆ.

8/13/2013 10:19 PM
ಇಷ್ಟು ದಿನ ಚಿನ್ನ , ಬೆಳ್ಳಿ, ನಗನಾಣ್ಯಗಳನ್ನು ದೋಚುವವರನ್ನು ನಾವು ನೋಡಿದ್ದೇವೆ. ಆದರೆ ಈ ಅಸಾಮಿ ತಾನೇ ಖುದ್ದಾಗಿ ಬೆಳೆಸಿದ ಬೆಳೆಯನ್ನು ಹಾರಿಸಿಕೊಂಡಿದ್ದಾನೆ. ಕಳ್ಳತನ ಮಾಡೋದಕ್ಕೆ ಹೊಸ ಹೊಸ ದಾರಿಯನ್ನು ಹುಡ್ಕೋ ಇಂತಹ ದಿನಗಳಲ್ಲಿ ಹುಷಾರಾಗಿರೋದು ಒಳ್ಳೆದು ಅಲ್ವಾ...........
8/13/2013 10:49 PM
8/13/2013 10:27 PM
8/13/2013 10:52 PM
8/13/2013 10:26 PM
8/13/2013 10:47 PM

ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಮಾರಕವಾದ ನಬಾರ್ಡ್: ರಾಜೇಂದ್ರ ಕುಮಾರ್ ಕಿಡಿ( video news)

ಉಡುಪಿ: ವೈದ್ಯನಾಥನ್ ವರದಿ ಜಾರಿಗೆ ಮೂಲಕ ಗ್ರಾಮೀಣ ಭಾಗದಲ್ಲಿ ಪ್ರಜಾಸತ್ತತೆಯ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸಹಕಾರ ಸಂಸ್ಥೆಗಳ ಅಸ್ಥಿತ್ವಕ್ಕೆ ಕೊಡಲಿ ಏಟು ನೀಡುವ ಕೆಲಸ ನಬಾರ್ಡ್‌ನಿಂದ ನಡೆದಿದೆ ಅಂತಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ. ಎನ್. ರಾಜೇಂದ್ರ ಕುಮಾರ್ ಕಿಡಿಕಾರಿದ್ದಾರೆ.

[youtuber youtube='http://www.youtube.com/watch?v=DONCKOlggaY&feature=c4-overview&list=UUs0k8vSBwTqzHjMqn8PYrzQ']
ಉಡುಪಿಯಲ್ಲಿ ಪತ್ರಿಕಾ ಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ನಬಾರ್ಡ್ ನ  ಈ ಸುತ್ತೋಲೆಯಿಂದ ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳು ಕೃಷಿ ಸಾಲವನ್ನು ನೀಡುವಂತಿಲ್ಲ ಮತ್ತು ಠೇವಣಿಯನ್ನು ಸಂಗ್ರಹಿಸುವಂತಿಲ್ಲ. ಕೇವಲ ಕಮಿಷನ್ ಏಜೆಂಟ್‌ಗಳಾಗಿ ಕಾರ್ಯನಿರ್ವಹಿಸಬೇಕಾದ ಕ್ರಮದಿಂದ ಪ್ರಾಥಮಿಕ ಸಂಘಗಳು ತಮ್ಮ ಅಸ್ಥಿತ್ವವನ್ನು ಕಳೆದುಕೊಳ್ಳಲಿದೆ ಅಂತಾ ಹೇಳಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೂರಾರು ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳು ನಬಾರ್ಡನ ಈ ಸುತ್ತೋಲೆಯಿಂದ ಕಂಗಾಲಾಗಿದ್ದು ಸುತ್ತೋಲೆ ಅನುಷ್ಠಾನಕ್ಕೆ ಬಂದರೆ ಗ್ರಾಮಾಂತರ ಪ್ರದೇಶದಲ್ಲಿ ಸದೃಢವಾಗಿರುವ ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳು ಅವಸಾನದ ಅಂಚಿಗೆ ಸರಿಯಲಿವೆ. ರೈತರು ಮತ್ತು ಜನಸಾಮಾನ್ಯರು ಮತ್ತೆ ಲೇವಾದೇವಿದಾರರನ್ನು ಆಶ್ರಯಿಸುವ ಪರಿಸ್ಥಿತಿ ನಿರ್ಮಾಣವಾಗಲಿದ್ದು ರೈತರು ಶೋಷಣೆಗೊಳಗಾಗುವ ಪರಿಸ್ಥಿತಿ ಎದುರಾಗಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಈ ಬಗ್ಗೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದ್ದು ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ನಿರ್ಧೇಶಕರ ಸಭೆ ಕರೆದು ಮುಂದಿನ ಹೋರಾಟದ ಬಗ್ಗೆ ರೂಪುರೇಶೆಯ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಜಿಲ್ಲೆಯ ಎಲ್ಲಾ ಸಹಕಾರಿ ಸಂಘಗಳ ಅಧ್ಯಕ್ಷರು ಪತ್ರಿಕಾ ಗೋಷ್ಟಿಯಲ್ಲಿ ಉಪಸ್ಥಿತರಿದ್ದರು.14_udupi_rajendra_kumar_pressmeet 005